ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 13 JUN 2020 4:26PM by PIB Bengaluru

ಕೋವಿಡ್-19 ಹೊಸ ಮಾಹಿತಿ

ಚೇತರಿಕೆಯ ಪ್ರಮಾಣ 49.95% ಕ್ಕೆ ಹೆಚ್ಚ

 

ಕಳೆದ 24 ಗಂಟೆಗಳಲ್ಲಿ ಒಟ್ಟು 7,135 ಕೋವಿಡ್ -19 ರೋಗಿಗಳನ್ನು ಗುಣಪಡಿಸಲಾಗಿದೆ. ಹೀಗಾಗಿ, ಈವರೆಗೆ ಒಟ್ಟು 1,54,329 ರೋಗಿಗಳನ್ನು COVID-19 ಗುಣಪಡಿಸಲಾಗಿದೆ. ಕೋವಿಡ್-19 ರೋಗಿಗಳಲ್ಲಿ ಚೇತರಿಕೆಯ ಪ್ರಮಾಣ 49.95% ಆಗಿದೆ. ಪ್ರಸ್ತುತ, 1,45,779 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ.

ಸೋಂಕಿತ ವ್ಯಕ್ತಿಗಳಲ್ಲಿ ನಾವೆಲ್ ಕೊರೊನಾವೈರಸ್ಸನ್ನು ಪತ್ತೆಹಚ್ಚಲು ಐಸಿಎಂಆರ್ ಸಂಸ್ಥೆಯ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಪ್ರಯೋಗಾಲಯಗಳನ್ನು 642 ಕ್ಕೆ ಮತ್ತು ಖಾಸಗಿ ಪ್ರಯೋಗಾಲಯಗಳನ್ನು 243ಕ್ಕೆ ಹೆಚ್ಚಿಸಲಾಗಿದೆ (ಒಟ್ಟು 885). ಕಳೆದ 24 ಗಂಟೆಗಳಲ್ಲಿ 1,43,737 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 55,07,182 ಆಗಿದೆ.

ಕೋವಿಡ್-19 ಗಾಗಿ ಸಚಿವಾಲಯವು ನವೀಕರಿಸಿದ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ ಅನ್ನು ಬಿಡುಗಡೆ ಮಾಡಿದೆ, ಇದನ್ನು https://www.mohfw.gov.in/pdf/ClinicalManagementProtocolforCOVID19.pdf ನಲ್ಲಿ ನೋಡಬಹುದು.

ಸೌಮ್ಯ, ಮಧ್ಯಮ ಅಥವಾ ತೀವ್ರವಾದ ವೈದ್ಯಕೀಯ ತೀವ್ರತೆಯ ಆಧಾರದ ಮೇಲೆ ಕೋವಿಡ್-19 ಪ್ರಕರಣಗಳ ನಿರ್ವಹಣೆಗೆ ಹೊಸ ಪ್ರೋಟೋಕಾಲ್ (ಶಿಷ್ಟಾಚಾರ) ಒದಗಿಸುತ್ತದೆ. ತೀವ್ರತೆಯ ಮೂರು ಹಂತಗಳಿಗೆ ಅನುಗುಣವಾಗಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಅಭ್ಯಾಸಗಳನ್ನು ಸಹ ನಿರ್ದಿಷ್ಟಪಡಿಸಲಾಗಿದೆ. ಮಾರ್ಗಸೂಚಿಗಳು ರೋಗಿಗಳ ವ್ಯಾಖ್ಯಾನಿಸಲಾದ ಉಪಗುಂಪಿಗೆ ತನಿಖಾ ಚಿಕಿತ್ಸೆಯನ್ನು ಸಹ ಸೂಚಿಸುತ್ತವೆ. ಆದಾಗ್ಯೂ, ಯಾವುದೇ ಚಿಕಿತ್ಸೆಯನ್ನು ಸೂಚಿಸುವ ಮೊದಲು ತಿಳುವಳಿಕೆಯುಳ್ಳ ಮತ್ತು ಹಂಚಿಕೆಯ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ.

ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in

ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1631633) Visitor Counter : 288