PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 13 JUN 2020 6:28PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಅಪ್ಡೇಟ್; ಗುಣಮುಖ ದರ 49.95 % ಗೇರಿಕೆ

ಕಳೆದ 24 ಗಂಟೆಗಳಲ್ಲಿ ಒಟ್ಟು 7,135 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 1,54,329 ರೋಗಿಗಳು ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ. ಕೋವಿಡ್ -19 ರೋಗಿಗಳಲ್ಲಿ ಚೇತರಿಕೆ ದರ 49.95 % ಆಗಿದೆ. ಪ್ರಸ್ತುತ 1,45,779 ಸಕ್ರಿಯ (ಆಕ್ಟಿವ್ ) ಪ್ರಕರಣಗಳಿವೆ ಮತ್ತು ಅವೆಲ್ಲವೂ ವೈದ್ಯಕೀಯ ನಿಗಾದಲ್ಲಿವೆ. ಸೋಂಕಿತರಲ್ಲಿ ನೊವೆಲ್ ಕೊರೊನಾವೈರಸ್ ಪತ್ತೆ ಮಾಡುವ ಸಾಮರ್ಥ್ಯವನ್ನು .ಸಿ.ಎಂ.ಆರ್. ನಿರಂತರ ಹೆಚ್ಚಿಸುತ್ತಾ ಬಂದಿದೆ. ಸರಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 642 ಕ್ಕೇರಿಸಲಾಗಿದೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆಯನ್ನು 243 ಕ್ಕೆ ಹೆಚ್ಚಿಸಲಾಗಿದೆ (ಒಟ್ಟು 885) . ಕಳೆದ 24 ಗಂಟೆಗಳಲ್ಲಿ ,1,43,737 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ ಪರೀಕ್ಷೆಗೆ ಒಳಪಡಿಸಲಾದ ಒಟ್ಟು ಸ್ಯಾಂಪಲ್ ಗಳ ಸಂಖ್ಯೆ  55,07,182 ಕ್ಕೇರಿದೆ.

ಸಚಿವಾಲಯವು ಕೋವಿಡ್ -19 ಕ್ಕಾಗಿ ಸಕಾಲಿಕಗೊಳಿಸಿದ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರವನ್ನು ಹೊರಡಿಸಿದೆ. ಹೊಸ ಶಿಷ್ಟಾಚಾರವು ಕೋವಿಡ್ -19 ಪ್ರಕರಣಗಳನ್ನು  ಲಘು, ಮಧ್ಯಮ ಮತ್ತು ಗಂಭೀರ/ ತೀವ್ರ  ಎಂದು ಕ್ಲಿನಿಕಲ್ ಗಂಭೀರ ಸ್ಥಿತಿಯನ್ನು ವರ್ಗೀಕರಣ ಮಾಡಿ ಅದರ ಆಧಾರದ ಮೇಲೆ ಕೋವಿಡ್ -19 ಪ್ರಕರಣಗಳ ನಿರ್ವಹಣೆಯನ್ನು ಮಾಡಲು ಉದ್ದೇಶಿಸುತ್ತದೆ. ಮತ್ತು ಮೂರು ತೀವ್ರತೆಯ ಹಂತಗಳಿಗೆ ಅನುಗುಣವಾಗಿ ಸೋಂಕು ತಡೆ ಮತ್ತು ನಿಯಂತ್ರಣ ಪದ್ದತಿಗಳನ್ನು ಅದು ನಿರ್ದಿಷ್ಟಪಡಿಸುತ್ತದೆ. ಮಾರ್ಗದರ್ಶಿಗಳು ರೋಗಿಗಳ ನಿರ್ದಿಷ್ಟಪಡಿಸಿದ / ವ್ಯಾಖ್ಯಾನಿಸಿದ ಉಪಗುಂಪುಗಳಿಗೆ ನಿರ್ದಿಷ್ಟ ಪರೀಕ್ಷಾ/ ಶೋಧ ಪದ್ದತಿಗಳನ್ನು ನಿರ್ದಿಷ್ಟವಾಗಿ ಸೂಚಿಸುತ್ತವೆ.

ವಿವರಗಳಿಗೆ: https://pib.gov.in/PressReleasePage.aspx?PRID=1631367

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಲಾವೋ ಜನತಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನ ಮಂತ್ರಿ  ಗೌರವಾನ್ವಿತ ಡಾ. ಥೋಂಗ್ಲೌನ್ ಸಿಸೌಲಿತ್ ನಡುವೆ ದೂರವಾಣಿ ಮಾತುಕತೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಲಾವೋ ಜನತಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನ ಮಂತ್ರಿ  ಗೌರವಾನ್ವಿತ ಡಾ. ಥೋಂಗ್ಲೌನ್ ಸಿಸೌಲಿತ್ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಇಬ್ಬರು ನಾಯಕರೂ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ತಂದಿಟ್ಟಿರುವ ಆರೋಗ್ಯ ಮತ್ತು ಆರ್ಥಿಕ ಸವಾಲುಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು. ಲಾವೋಸ್ ನಲ್ಲಿ ಜಾಗತಿಕ ಸಾಂಕ್ರಾಮಿಕ ಹರಡದಂತೆ ಲಾವೋ ಸರಕಾರ ಕೈಗೊಂಡ ಪರಿಣಾಮಕಾರಿ ಕ್ರಮಗಳನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿದರು. ಉಭಯ ನಾಯಕರೂ ಕೋವಿಡೋತ್ತರ ಜಗತ್ತಿಗೆ ಸಿದ್ದರಾಗಿರಲು ಉತ್ತಮ ಪದ್ದತಿಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡದ್ದಲ್ಲದೆ, ಅಂತಾರಾಷ್ಟ್ರೀಯ ಸಹಕಾರದ ಆವಶ್ಯಕತೆಯ ಬಗ್ಗೆಯೂ ಸಹಮತ ವ್ಯಕ್ತಪಡಿಸಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1631229

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಡಾ. ಜಾನ್ ಪೊಂಬೇ ಜೋಸೆಫ್ ಮಗುಫುಲಿ ನಡುವೆ ದೂರವಾಣಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಡಾ. ಜಾನ್ ಪೊಂಬೇ ಜೋಸೆಫ್ ಮಗುಫುಲಿ ಅವರ ಜೊತೆ  ದೂರವಾಣಿ ಮಾತುಕತೆ ನಡೆಸಿದರು. ಪ್ರಧಾನ ಮಂತ್ರಿ ಅವರು 2016 ಜುಲೈ ತಿಂಗಳಲ್ಲಿ ದಾರ್-ಎಸ್-ಸಲಾಂಗೆ ತಮ್ಮ ಭೇಟಿಯನ್ನು ಸ್ಮರಿಸಿಕೊಂಡರಲ್ಲದೆ ತಾಂಜಾನಿಯಾದೊಂದಿಗೆ ತನ್ನ ಸಾಂಪ್ರದಾಯಿಕ  ಬಾಂಧವ್ಯಕ್ಕೆ ಭಾರತ ಅತಿ ಹೆಚ್ಚಿನ ಮಹತ್ವ ನೀಡುತ್ತದೆ ಎಂಬುದನ್ನು  ಒತ್ತಿ ಹೇಳಿದರು. ಅವರು ಕೋವಿಡ್ -19 ಹಿನ್ನೆಲೆಯಲ್ಲಿ ತಾಂಜಾನಿಯಾದಿಂದ ಭಾರತೀಯ ನಾಗರಿಕರ ಸ್ಥಳಾಂತರಕ್ಕೆ ತಾಂಜಾನಿಯಾ ಅಧಿಕಾರಿಗಳು ನೀಡಿದ ಸಹಾಯಕ್ಕಾಗಿ ಅಧ್ಯಕ್ಷ ಮುಗುಫುಲಿ ಅವರಿಗೆ ಧನ್ಯವಾದ ಹೇಳಿದರು.

ವಿವರಗಳಿಗೆ: https://pib.gov.in/PressReleasePage.aspx?PRID=1631226

ಆರೋಗ್ಯ ರಕ್ಷಣಾ ಪೂರೈಕೆ ಸರಪಳಿಗಾಗಿ ಜಾಲತಾಣ ಆಧಾರಿತ ಪರಿಹಾರ -ಆರೋಗ್ಯಪಥ ಆರಂಭ, ಸಂಕೀರ್ಣ ಪೂರೈಕೆಗಳ ಸಕಾಲಿಕ ಲಭ್ಯತೆಯ ಬಗ್ಗೆ ಮಾಹಿತಿ ಲಭ್ಯ

ಸಂಕೀರ್ಣ ಆರೋಗ್ಯ ರಕ್ಷಣಾ ಪೂರೈಕೆಗಳಿಗೆ ಸಂಬಂಧಿಸಿದ ಸಕಾಲಿಕ ಲಭ್ಯತೆಯ ಮಾಹಿತಿ ನೀಡುವ ಸಿ.ಎಸ್..ಆರ್. ರಾಷ್ಟ್ರೀಯ ಆರೋಗ್ಯ ರಕ್ಷಣಾ ಪೂರೈಕೆ ಸರಪಳಿ ಪೋರ್ಟಲ್ https://www.aarogyapath.in ಕಾರ್ಯಾರಂಭ ಮಾಡಿದೆ. ಆರೋಗ್ಯಪಥವು ಉತ್ಪಾದಕರಿಗೆ, ಪೂರೈಕೆದಾರರಿಗೆ, ಮತ್ತು ಗ್ರಾಹಕರಿಗೆ ಸಹಾಯ ಮಾಡಲಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿಯಿಂದಾಗಿ ಪೂರೈಕೆ ಸರಪಳಿಯಲ್ಲಿ ವ್ಯತ್ಯಯಗಳುಂಟಾಗಿವೆ, ಸಂಕೀರ್ಣ ಸಾಮಗ್ರಿಗಳನ್ನು ತಯಾರಿಸಿ ಪೂರೈಕೆ ಮಾಡುವ ಸಾಮರ್ಥ್ಯ ಕೂಡಾ ಬೇರೆ ಬೇರೆ ಕಾರಣಗಳಿಂದಾಗಿ ಕುಸಿದಿರಬಹುದು. ಸವಾಲುಗಳನ್ನು ಎದುರಿಸಲು ಆರೋಗ್ಯಪಥ ಎಂಬ ಮಾಹಿತಿ ವೇದಿಕೆಯನ್ನುಆರೋಗ್ಯದತ್ತ ಪಯಣ ಕೈಗೊಳ್ಳುವ ಪಥವನ್ನು ತೋರುವಮುಂಗಾಣ್ಕೆಯೊಂದಿಗೆ ಅಭಿವೃದ್ದಿಪಡಿಸಲಾಗಿದೆ. ಸಮಗ್ರಗೊಳಿಸಲಾದ ಸಾರ್ವಜನಿಕ ವೇದಿಕೆಯು ಪ್ರಮುಖ ಆರೋಗ್ಯ ರಕ್ಷಣಾ ಸಾಮಗ್ರಿಗಳ ಲಭ್ಯತೆಯನ್ನು ಏಕ ಬಿಂದುವಿನಲ್ಲಿ ತಿಳಿಸುವುದಲ್ಲದೆ ಗ್ರಾಹಕರಿಗೆ ದೈನಂದಿನ ಅನುಭವದ ಸಂಗತಿಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ವಿವರಗಳಿಗೆ : https://pib.gov.in/PressReleasePage.aspx?PRID=1631339

ನನ್ನ ಜೀವನ, ನನ್ನ ಯೋಗವೀಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಪ್ರವೇಶ ಸಲ್ಲಿಕೆಗೆ  2020 ಜೂನ್ 21 ರವರೆಗೆ ಗಡುವು ವಿಸ್ತರಣೆ

ವೀಡಿಯೋ ಬ್ಲಾಗಿಂಗ್ ಸ್ಪರ್ಧೆನನ್ನ ಜೀವನ, ನನ್ನ ಯೋಗಕ್ಕಾಗಿ  ಪ್ರವೇಶ ಪತ್ರ ಸಲ್ಲಿಕೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಪರ್ಧೆಯನ್ನು ಇತ್ತೀಚೆಗೆ ಘೋಷಣೆ ಮಾಡಿದ್ದರು. ಅದರ  ದಿನಾಂಕವನ್ನೀಗ 2020 ಜೂನ್ 21 ರವರೆಗೆ ವಿಸ್ತರಿಸಲಾಗಿದೆ. ಡಿಜಿಟಲ್ ವೇದಿಕೆಯಲ್ಲಿ ಜಾಗತಿಕ ಸ್ಪರ್ಧೆಯನ್ನು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು ( .ಸಿ.ಸಿ.ಆರ್.) 6 ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯೋಜಿಸಿದೆ. ಇದಕ್ಕೆ ಮೊದಲು ಪ್ರವೇಶ ಪತ್ರಗಳ ಸಲ್ಲಿಕೆಗೆ 2020 ಜೂನ್ 15ಕೊನೆಯ ದಿನವಾಗಿತ್ತು. ದಿನವನ್ನು ವಿಸ್ತರಿಸುವುದಕ್ಕೆ ಭಾರತ ಮತ್ತು ವಿದೇಶಗಳಿಂದ ಭಾರೀ ಬೇಡಿಕೆ ಇತ್ತು. ಇದರಿಂದ ಯೋಗ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ವೀಡಿಯೋ ತಯಾರಿಸಲು ಹೆಚ್ಚು ಸಮಯ ದೊರೆಯಬಹುದೆಂಬ ಆಶಯ ವ್ಯಕ್ತವಾಗಿತ್ತು. ಆದುದರಿಂದ ಸಲ್ಲಿಕೆಯ ಕೊನೆಯ ದಿನಾಂಕವನ್ನು .ಡಿ.ವೈ . ದಿನಾಂಕವಾದ ಜೂನ್ 21 ಕ್ಕೆ ತಾಳೆಯಾಗುವಂತೆ ವಿಸ್ತರಿಸಲಾಗಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1631307

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

    • ಚಂಡೀಗಢ: ಹಿರಿಯ ಅಧಿಕಾರಿಗಳು ಮತ್ತು ವೈದ್ಯಕೀಯ ತಜ್ಞರ ಜೊತೆ ವಿವರವಾದ ಮಾತುಕತೆಯ ಬಳಿಕ 30/06/2020ರವರೆಗೆ ಅಂದರೆ ಲಾಕ್ ಡೌನ್ ಅಂತ್ಯದವರೆಗೆ ಚಂಡೀಗಢ ಆಡಳಿತವು ಕೆಳಗಿನ ನಿರ್ಧಾರಗಳನ್ನು ಕೈಗೊಂಡಿದೆ. : () ಸಿ.ಟಿ.ಯು. ತನ್ನ ಅಂತಾರಾಜ್ಯ ಬಸ್ಸುಗಳ ಕಾರ್ಯಾಚರಣೆಯನ್ನು ನಡೆಸುವುದಿಲ್ಲ. (ಬಿ) ಇತರ ರಾಜ್ಯಗಳ ಅಂತರ ರಾಜ್ಯ ಸಾರಿಗೆ ಬಸ್ಸುಗಳಿಗೆ ಚಂಡೀಗಢಕ್ಕೆ ಪ್ರಯಾಣಿಕರನ್ನು ಕರೆತರಲು ನೀಡಲಾದ ಅನುಮತಿಯನ್ನು ಹಿಂತೆಗೆಯಲಾಗುವುದು. (ಸಿ) ಚಂಡೀಗಢ, ಪಂಜಾಬ್, ಮತ್ತು ಹರ್ಯಾಣಾ ಗಳ ನಡುವೆ ಓಡಾಟ ನಡೆಸುವ ಮೂರು ನಗರಗಳ ಬಸ್ಸುಗಳ ಓಡಾಟ ಎಂದಿನಂತೆ ಮುಂದುವರೆಯುತ್ತದೆ. (ಡಿ.) ರೈಲುಗಳ ಮೂಲಕ ಬರುವ ಪ್ರಯಾಣಿಕರನ್ನು ಬಂದ ಕೂಡಲೇ ತಪಾಸಣೆ ನಡೆಸಿ 14 ದಿನಗಳ ಸ್ವಯಂ ಕ್ವಾರಂಟೈನ್ ಗೆ ಸಲಹೆ ಮಾಡಲಾಗುವುದು. ಅವರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡುವುದು ಕಡ್ದಾಯ ಮತ್ತು ಅವರು ಸ್ವಯಂ ನಿಗಾಕ್ಕೆ ಒಳಪಡುವರು. ಕೇಂದ್ರಾಡಳಿತ ಪ್ರದೇಶದ ಆಡಳಿತವು ಯಾದೃಚ್ಚಿಕ  ತಪಾಸಣೆಯನ್ನು ಸಾಧ್ಯವಿದ್ದಷ್ಟು ನಡೆಸುತ್ತದೆ. () ಇದೇ ವ್ಯವಸ್ಥೆಗಳು ದೇಶೀಯ ವಿಮಾನದಲ್ಲಿ ಬರುವವರಿಗೆ ಮತ್ತು ರಸ್ತೆ ಮೂಲಕ ಬರುವವರಿಗೆ ಅನ್ವಯವಾಗುತ್ತವೆ. (ಎಫ್.) ರಸ್ತೆ ಮೂಲಕ ಚಂಡೀಗಢಕ್ಕೆ ಬರುವವರು  ಆಡಳಿತದ ಜಾಲತಾಣದಿಂದ ಮೊಬೈಲ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇದು ಆಡಳಿತಕ್ಕೆ ಅವರ ಪ್ರಯಾಣ ಮತ್ತು ನಿವಾಸದ ಮೇಲೆ ನಿಗಾ ಇಡಲು ಸಾಧ್ಯವಾಗುತದೆ. ಇದು ಪರ್ಮಿಟ್ ಆಗಲಿ ಅಥವಾ ಪಾಸ್ ಆಗಲಿ ಅಲ್ಲ. ಇದು ಬರೇ ಪ್ರಯಾಣದ ಮಾಹಿತಿಯನ್ನು ಒಳಗೊಂಡ ದಾಖಲೆ ಮತ್ತು ಅದು ಅಧಿಕೃತ ದಾಖಲೆಗಾಗಿ ಎಂದೂ  ಸ್ಪಷ್ಟೀಕರಿಸಲಾಗಿದೆ. (ಜಿ) ಸರಕಾರ/ಪಿ.ಎಸ್.ಯು./ ಖಾಸಗಿ ಸಿಬ್ಬಂದಿಗಳು ಗುರುತಿನ ಕಾರ್ಡ್ ತೋರಿಸಿದರೆ ಕಚೇರಿಗಳಿಗೆ ಬರಲು ಅವಕಾಶ ಒದಗಿಸಲಾಗುವುದು.
    • ಪಂಜಾಬ್: ಕೋವಿಡ್ ಸಮುದಾಯಕ್ಕೆ ಹರಡುವುದನ್ನು ತಡೆಯುವ ಮೊಟ್ಟಮೊದಲ ಉಪಕ್ರಮವಾಗಿ ,ಪಂಜಾಬ್ ಮುಖ್ಯಮಂತ್ರಿ ಅವರು ಮೊಬೈಲ್ ಆಧಾರಿತ ಆಪ್ –“ಘರ್ ಘರ್ ನಿಗ್ರಾನಿಯನ್ನು ರಾಜ್ಯದಲ್ಲಿಯ ಮನೆ ಮನೆ ಕಣ್ಗಾವಲಿಗಾಗಿ ಆರಂಭಿಸಿದ್ದಾರೆ. ಇದು ಜಾಗತಿಕ ಸಾಂಕ್ರಾಮಿಕ ತೊಲಗುವವರೆಗೆ ಕಾರ್ಯಾಚರಿಸುತ್ತಿರುತ್ತದೆ. ಇದರಂಗವಾಗಿ ಪಂಜಾಬಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ 30 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಜನತೆ ಸಮೀಕ್ಷೆಗೆ ಒಳಪಡಲಿದ್ದಾರೆ. ಇನ್ಫ್ಲ್ಯುಯೆಂಜಾ ರೀತಿಯ ಖಾಯಿಲೆಗಳು/ ಗಂಭೀರ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಮತ್ತು ಇತರ ಯಾವುದೇ ರೋಗಗಳು ಇರುವ 30 ವರ್ಷಕ್ಕಿಂತ ಕೆಳಗಿನ ವಯೋಮಾನದವರೂ ಸಮೀಕ್ಷೆಗೆ ಒಳಪಡುವರು. ಸಮೀಕ್ಷೆಯು ಆಯಾ ವ್ಯಕ್ತಿಯ ಹಿಂದಿನ ಒಂದು ವಾರದ ವೈದ್ಯಕೀಯ ಸ್ಥಿತಿ ಗತಿಯ ಸಂಪೂರ್ಣ ವಿವರಗಳನ್ನು ಮತ್ತು ವ್ಯಕ್ತಿಯ ಖಾಯಿಲೆಗಳ ಬಗ್ಗೆ ಪೂರ್ಣ ವಿವರಗಳನ್ನು ಒಳಗೊಂಡಿರುತ್ತದೆ. ಇದರಿಂದ ರಾಜ್ಯಕ್ಕೆ  ಅದರ ಮುಂದಿನ ಕೋವಿಡ್ ನಿಯಂತ್ರಣ ವ್ಯೂಹವನ್ನು ರೂಪಿಸಲು ಬಹಳ ಪ್ರಮುಖವಾದ ದತ್ತಾಂಶ ನೆಲೆ ಲಭ್ಯವಾದಂತಾಗುತ್ತದೆ. ಮತ್ತು ಸಮುದಾಯಕ್ಕಾಗಿ ಗುರಿ ಕೇಂದ್ರಿತ ಮಧ್ಯಪ್ರವೇಶಗಳನ್ನು ಮಾಡಲು ಸಾಧ್ಯವಾಗುತ್ತದೆ.
    • ಹರರಿಯಾ: ಕೊರೊನಾವೈರಸ್ ಬಿಕ್ಕಟ್ಟಿನಿಂದಾಗಿ ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಜ್ಯವು ಸಂಪೂರ್ಣ ಸಿದ್ದವಾಗಿದೆ ಎಂದು ಹರ್ಯಾಣ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ಜಾಗತಿಕ ಸಾಂಕ್ರಾಮಿಕ ಹರಡುವಿಕೆಯನ್ನು ಸಮರ್ಪಕವಾಗಿ ನಿಭಾಯಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದವರು ಹೇಳಿದ್ದಾರೆ. ಕಣ್ಗಾವಲು ತೀವ್ರಗೊಳಿಸುವಿಕೆ, ಕಠಿಣ ಕಂಟೈನ್ ಮೆಂಟ್ ಕ್ರಮಗಳುಮತ್ತು ತ್ವರಿತವಾಗಿ ಸಂಪರ್ಕ ಪತ್ತೆ ಕ್ರಮಗಳು, ಕ್ಲಿನಿಕಲ್ ನಿರ್ವಹಣೆ, ಮುಂಜಾಗರೂಕತಾ ..ಸಿ. ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಕೋವಿಡ್ -19 ನೋಡಲ್ ಅಧಿಕಾರಿಗಳಿಗೆ ನಿರ್ದೆಶನ ನೀಡಿದ್ದಾರೆ. ಮುಖಗವಸು ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಪಾಡುವಿಕೆ ಮಾನದಂಡವನ್ನು ಕಡ್ದಾಯ ಮಾಡುವಂತೆ ಮತ್ತು ಅದನ್ನು ಚಾಚೂ ತಪ್ಪದೆ ಪಾಲಿಸುವಂತೆ ಮಾಡಲೂ ಅವರು ಸೂಚಿಸಿದ್ದಾರೆ. ಗಂಭೀರ ಶ್ವಾಸಕೋಶ ಸಂಬಂಧಿ ಖಾಯಿಲೆ ಇರುವವರನ್ನು ಅಥವಾ ಇನ್ಫ್ಯುಯೆಂಜಾ ರೀತಿಯ ಖಾಯಿಲೆ ಇರುವವರನ್ನು ಗುರುತಿಸಿ ಅವರಲ್ಲಿ ಸೋಂಕು ಅಡಗಿಕೊಂಡಿದ್ದರೆ ಅದನ್ನು ಸಾಕಷ್ಟು ಮುಂಚೆಯೇ ಪತ್ತೆ ಹಚ್ಚಿ ಸಕಾಲದಲ್ಲಿ ಕಂಟೈನ್ಮೆಂಟ್ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಸೂಚಿಸಿದ್ದಾರೆ.
    • ಮಹಾರಾಷ್ಟ್ರ: ಶುಕ್ರವಾರದಂದು 3,493 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಮೂಲಕ 1 ಲಕ್ಷ ಕೊರೊನಾವೈರಸ್ ಸೋಂಕಿನ ಗಡಿಯನ್ನು ದಾಟಲಾಗಿದೆ. ಇಂದಿನವರೆಗೆ ಪ್ರಕರಣಗಳ ಒಟ್ಟು ಸಂಖ್ಯೆ 1,01,141 ಆಗಿದೆ. ಇದರಲ್ಲಿ 49,616 ಪಾಸಿಟಿವ್ ಪ್ರಕರಣಗಳು. ಒಟ್ಟು ಸಾವಿನ ಸಂಖ್ಯೆ 3,717. ಮುಂಬಯಿ ನಗರವೊಂದರಲ್ಲಿಯೇ 55,451 ಕೊರೊನಾವೈರಸ್ ಪ್ರಕರಣಗಳು ಮತ್ತು 2,044 ಸಾವುಗಳು ವರದಿಯಾಗಿವೆ. ನಡುವೆ ಮಹಾರಾಷ್ಟ್ರ ಸರಕಾರ ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್ -19 ಪರೀಕ್ಷೆಗಳಿಗೆ (ಆರ್.ಟಿ. –ಪಿ.ಸಿ.ಆರ್.) ಗರಿಷ್ಟ ದರವನ್ನು 2,200 ರೂಪಾಯಿಗಳಿಗೆ ನಿಗದಿ ಮಾಡಿದೆ. ಮೊದಲು ಅದು 4,400 ರೂಪಾಯಿಗಳಾಗಿತ್ತು.
    • ಗುಜರಾತ್: ಕಳೆದ 24 ಗಂಟೆಗಳಲ್ಲಿ 495 ಹೊಸ ಸೋಂಕಿನ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 22,562 ಕ್ಕೇರಿತು. ಕೇಂದ್ರದ ಮಾಜಿ  ಹಣಕಾಸು ಕಾರ್ಯದರ್ಶಿ ಡಾ. ಹಸ್ಮುಖ್ ಅದಿಯಾ ನೇತೃತ್ವದ ಆರು ಸದಸ್ಯರ ಆರ್ಥಿಕ ಪುನಶ್ಚೇತನ ಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ, ಅದರಲ್ಲಿ 231 ಸಲಹೆಗಳನ್ನು ಮಾಡಲಾಗಿದೆ. ಜಾಗತಿಕ ಸಾಂಕ್ರಾಮಿಕ ಕೋವಿಡೋತ್ತರ ಕಾಲದಲ್ಲಿ ರಾಜ್ಯದಲ್ಲಿ ಆರ್ಥಿಕತೆ ಪುನರುಜ್ಜೀವನಕ್ಕೆ ಧೀರ್ಘಾವಧಿ ಮತ್ತು ಅಲ್ಪಕಾಲಾವಧಿ ವ್ಯೂಹಗಳಿಗೆ ಆದ್ಯತೆ ನೀಡಿ ಸಲಹೆಗಳನ್ನು ಮಾಡಲಾಗಿದೆ.
    • ರಾಜಸ್ಥಾನ: ಇಂದು ಬೆಳಿಗ್ಗೆವರೆಗೆ 118 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ, ರಾಜಸ್ಥಾನದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 12,186 ಕ್ಕೇರಿದೆ. ಇದರಲ್ಲಿ 275 ಸಾವುಗಳು ಸಂಭವಿಸಿವೆ, 9175 ಮಂದಿ ಗುಣಮುಖರಾಗಿದ್ದಾರೆ ಮತ್ತು 8784 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಹುತೇಕ ಹೊಸ ಪ್ರಕರಣಗಳು ಭರತ್ಪುರ ಮತ್ತು ಪಾಲಿ ಜಿಲ್ಲೆಗಳಿಂದ ವರದಿಯಾಗಿವೆ. ಬಳಿಕದ ಸ್ಥಾನ ಜೈಪುರದ್ದು.
    • ಮಧ್ಯ ಪ್ರದೇಶ: ಕಳೆದ 24 ಗಂಟೆಗಳಲ್ಲಿ 202 ಹೊಸ ರೋಗಿಗಳು ಪತ್ತೆಯಾಗುವುದರೊಂದಿಗೆ ಪ್ರಕರಣಗಳ ಒಟ್ಟು ಸಂಖ್ಯೆ 10,443 ಕ್ಕೇರಿದೆ. ಅವಧಿಯಲ್ಲಿ 9 ಮಂದಿ ಕೋವಿಡ್ -19 ರೋಗಿಗಳು ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 440 ಕ್ಕೇರಿದೆ. ಮೇ 31 ರಂದು ಲಾಕ್ ಡೌನ್ ನಿರ್ಬಂಧಗಳು ಸಡಿಲಿಕೆಯಾದ ಬಳಿಕ ರೋಗಿಗಳ ಸಂಖ್ಯೆಯಲ್ಲಿ 2,354 ರಷ್ಟು ಹೆಚ್ಚಳವಾಗಿದೆ ಮತ್ತು 90 ಮಂದಿ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ.
    • ಛತ್ತೀಸ್ಗಢ: ರಾಜ್ಯದಲ್ಲಿ ಮತ್ತೆ 47 ಹೊಸ ಪ್ರಕರಣಗಳು ವರದಿಯಾಗಿವೆ, ಇದರಿಂದ ಒಟ್ಟು ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 1445 ಕ್ಕೇರಿದೆ.    
    • ಅರುಣಾಚಲ ಪ್ರದೇಶ: ತವಾಂಗ್ ಜಿಲ್ಲಾ ದೇಶೀಯ ಉತ್ಪನ್ನ (ಡಿ.ಡಿ.ಪಿ.) ಸಾಧನೆ ಬಗ್ಗೆ ಚರ್ಚಿಸಲು ಅರುಣಾಚಲ ಪ್ರದೇಶದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. “ಸ್ಥಳೀಯರಿಗಾಗಿ ಧ್ವನಿ” (ವೋಕಲ್ ಫಾರ್ ಲೋಕಲ್ ) ಗೆ ವೇಗ ಒಗದಿಸಲು ಇದನ್ನು ಆಯೋಜಿಸಲಾಗಿತ್ತು. ಆತ್ಮನಿರ್ಭರ ಭಾರತ್ ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳಿಗೆ 35 ಎಂ.ಟಿಕಡಲೆ (ಚೆನ್ನಾ) ವನ್ನು ಅರುಣಾಚಲ ಪ್ರದೇಶದ ವಲಸೆಗಾರರಿಗಾಗಿ ಒದಗಿಸಲಾಗಿದೆ.
    • ಅಸ್ಸಾಂ: ಅಸ್ಸಾಂನಲ್ಲಿ 25 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3718, ಸಕ್ರಿಯ ಪ್ರಕರಣಗಳು 2123, ಗುಣಮುಖರಾದವರು 1584 ಮತ್ತು ಸಾವಿನ ಸಂಖ್ಯೆ 8.
    • ಮಣಿಪುರ: ಮೈತ್ರಾಂನಲ್ಲಿಯ ಯು.ಎನ್..ಸಿ.ಸಿ..ಶಾಲೆಯಲ್ಲಿಯ ಹೊಸ ಕೋವಿಡ್ 19  ಶುಶ್ರೂಷಾ ಕೇಂದ್ರವನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಅವರು ರಾಜ್ಯದಲ್ಲಿ ಶಿಸ್ತಿನ ಕೊರತೆಯಿಂದಾಗಿ ಕೋವಿಡ್ -19  ಪ್ರಕರಣಗಳು ಹೆಚ್ಚುವಂತಾಯಿತು ಎಂದಿದ್ದಾರೆ
    • ಮಿಜೋರಾಂ: ಚೆಕ್ವಾನ್ ಗ್ರಾಮದ ಮಿಜೋರಾಂ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿರುವ ಗ್ರಾಮ ಸಂಸ್ಥೆ ಸೆರ್ಚ್ಚಿಪ್ ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಿಗೆ ವಿವಿಧ ತರಕಾರಿಗಳನ್ನು ದೇಣಿಗೆಯಾಗಿ ಅಲ್ಲಿಯ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದೆ.
    • ನಾಗಾಲ್ಯಾಂಡ್: ಕೋವಿಡ್ -19 ಬಳಿಕದ ಅವಧಿಯಲ್ಲಿ ಕೃಷಿ ಉತ್ಪನ್ನವನ್ನು ಉತ್ತೇಜಿಸಲು ರಾಜ್ಯದ ಪ್ರತೀ ಜಿಲ್ಲೆಗಳ ಒಂದು ಗ್ರಾಮವನ್ನು ಮಾದರಿ ಕೃಷಿ ಗ್ರಾಮವನ್ನಾಗಿ ದತ್ತು ಪಡೆದು ರೂಪಿಸಲು ನಾಗಾಲ್ಯಾಂಡ್ ಕೃಷಿ ಇಲಾಖೆ ಯೋಜನೆ ರೂಪಿಸಿದೆ. ನಾಗಾಲ್ಯಾಂಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಾಗತಿಕ ಸಾಂಕ್ರಾಮಿಕದಲ್ಲಿ ರಾಜ್ಯದ ಜನತೆಯ ಒಟ್ಟು ಮಾನಸಿಕ ಆರೋಗ್ಯವನ್ನು ಮೌಲ್ಯಮಾಪನ ಮಾಡಲು ಆನ್ ಲೈನ್ ಸಮೀಕ್ಷೆ ನಡೆಸುತ್ತಿದೆ.
    • ಸಿಕ್ಕಿಂ: ಎಸ್.ಟಿ.ಎನ್.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರಾಜ್ಯದ ಮೊದಲ ಇಬ್ಬರು ಕೋವಿಡ್ -19 ರೋಗಿಗಳು ಪೂರ್ಣವಾಗಿ ಗುಣಮುಖರಾಗಿ, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
    • ಕೇರಳ: ಕೇರಳದಲ್ಲಿ  ಭಾನುವಾರದ ಲಾಕ್ ಡೌನ್ ಗೆ ಸಡಿಲಿಕೆಗಳನ್ನು ಘೋಷಿಸಲಾಗಿದೆ. ಜೂನ್ 20 ರಿಂದ ವಿದೇಶಗಳಿಂದ ವಿಮಾನಗಳ ಮೂಲಕ ಮರಳುವವರಿಗೆ ಕೋವಿಡ್ -19 ಪ್ರಮಾಣಪತ್ರಗಳನ್ನು ಕಡ್ದಾಯ ಮಾಡಲು ರಾಜ್ಯವು ಮುಂದಡಿ ಇಟ್ಟಿದೆ. ಪರೀಕ್ಷಾ ವರದಿಯನ್ನು ಪ್ರಯಾಣದ 48 ಗಂಟೆಗಳ ಒಳಗೆ  ಪಡೆದಿರತಕ್ಕದ್ದು. ವಿದೇಶೀ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಲೀಧರನ್ ಅವರು ರಾಜ್ಯದ ಕ್ರಮವನ್ನು ಅಪ್ರಾಯೋಗಿಕ ಎಂದು ಹೇಳಿದ್ದಾರೆ. ರಾಜ್ಯದಿಂದ ಹೊರಗೆ 8 ಮಂದಿ ಕೇರಳೀಯರು ಕೋವಿಡ್ -19 ರಿಂದಾಗಿ ಮೃತಪಟ್ಟಿದ್ದಾರೆ. ಇವರಲ್ಲಿ 5 ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ , ಇಬ್ಬರು ಹೊಸದಿಲ್ಲಿಯಲ್ಲಿ ಮತ್ತು ಇನ್ನೋರ್ವರು ಮುಂಬಯಿಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಮೃತಪಟ್ಟ ಕೇರಳೀಯರ ಸಂಖ್ಯೆ 220 ಕ್ಕೇರಿದೆ. ರಾಜ್ಯದಲ್ಲಿ ನಿನ್ನೆ 78 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1,303 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು 2,27,402 ಮಂದಿ ರಾಜ್ಯದ  ವಿವಿಧ ಜಿಲ್ಲೆಗಳಲ್ಲಿ ನಿಗಾದಲ್ಲಿದ್ದಾರೆ.
    • ತಮಿಳುನಾಡು: ಪುದುಚೇರಿಯಲ್ಲಿ 13 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಅವರಲ್ಲಿ ಒಂದೇ ಕಂಪೆನಿಯ ಐದು ಮಂದಿ ಕಾರ್ಮಿಕರೂ ಸೇರಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 176 ಕ್ಕೇರಿದೆ, ಅದರಲ್ಲಿ 91 ಸಕ್ರಿಯ ಪ್ರಕರಣಗಳು, 82 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ  ಬಿಡುಗಡೆಯಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ. ತಮಿಳುನಾಡಿನ ಇನ್ನೋರ್ವ ಶಾಸಕರು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಬಾರಿ ಪಾಸಿಟಿವ್ ಆಗಿರುವವರು ...ಡಿ.ಎಂ.ಕೆ. ಯವರು. ಡಿ.ಎಂ.ಕೆ. ಕೆ. ಅಂಬಜಗನ್ ವಾರದ ಆದಿಯಲ್ಲಿ ಕೋವಿಡ್ -19 ರಿಂದಾಗಿ ಮೃತಪಟ್ಟಿದ್ದರು. 1982 ಹೊಸ ಪ್ರಕರಣಗಳು ನಿನ್ನೆ ವರದಿಯಾಗಿವೆ. ನಿನ್ನೆ 1342 ಮಂದಿ ಗುಣಮುಖರಾಗಿದ್ದಾರೆ. ಮತ್ತು 18 ಮಂದಿ ಮೃತಪಟ್ಟಿದ್ದಾರೆ. ಚೆನ್ನೈಯಿಂದ 1477 ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 40698, ಸಕ್ರಿಯ ಪ್ರಕರಣಗಳು 18281. ಸಾವುಗಳು: 367. ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು : 13,906
    • ಕರ್ನಾಟಕ: ರಾಜ್ಯದಲ್ಲಿ ಪರೀಕ್ಷಾ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದೆ. ಪರೀಕ್ಷೆಯನ್ನು ವಿಳಂಬ ಮಾಡುತಿಲ್ಲ ಮತ್ತು ಸಂಶಯಿತ ಪ್ರಕರಣಗಳನ್ನು .ಸಿ.ಎಂ.ಆರ್. ಶಿಷ್ಟಾಚಾರದ ಪ್ರಕಾರ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಣಾಮವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ಕನಿಷ್ಟ ಮೂರು ಲಕ್ಷ ಜನ ತಮ್ಮ ಜೀವನೋಪಾಯ ಕಳೆದುಕೊಳ್ಳಲಿದ್ದಾರೆ. ನಿನ್ನೆ 271 ಹೊಸ ಪ್ರಕರಣಗಳು ವರದಿಯಾಗಿವೆ, 464 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಏಳು ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ : 6516, ಸಕ್ರಿಯ ಪ್ರಕರಣಗಳು: 2995, ಸಾವುಗಳು: 79, ಗುಣಮುಖರಾಗಿ ಚೇತರಿಸಿಕೊಂಡವರು ; 3440
    • ಆಂಧ್ರ ಪ್ರದೇಶ: ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 186 ಹೊಸ ಪ್ರಕರಣಗಳು ವರದಿಯಾಗಿವೆ, 42 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇಬ್ಬರು ಸಾವಿಗೀಡಾಗಿದ್ದಾರೆ. 14,447 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು ಪ್ರಕರಣಗಳು 4588, ಸಕ್ರಿಯ ಪ್ರಕರಣಗಳು 1865. ಗುಣಮುಖರಾದವರು 2641. ಸಾವುಗಳು: 82.
    • ತೆಲಂಗಾಣ: ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿ ಅನಿಶ್ಚಿತತೆ ಇರುವಂತೆಯೇ ಹಲವಾರು ಖಾಸಗಿ ಶಾಲೆಗಳು ಈಗಾಗಲೇ ವರ್ಚುವಲ್ ತರಗತಿಗಳನ್ನು ಆರಂಭಿಸಿವೆ. ಇನ್ನು ಕೆಲವು ಸೋಮವಾರದಿಂದ ಆರಂಭಿಸಲು ಸಿದ್ದತೆಗಳನ್ನು ಮಾಡಿಕೊಂಡಿವೆ. ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದೆಂಬ ವದಂತಿಗಳು ಹರಡಿದ್ದು, ಜನತೆ ಚಿಂತಿತರಾಗಿದ್ದಾರೆ. ತೆಲಂಗಾಣ ಸರಕಾರ ವದಂತಿಗಳನ್ನು ತಳ್ಳಿ ಹಾಕಿದೆ. ತೆಲಂಗಾಣದ ಒಟ್ಟು ಪ್ರಕರಣಗಳ ಸಂಖ್ಯೆ 4,484 ಕ್ಕೇರಿದೆ. ವಾರಂಗಲ್ ಜಿಲ್ಲೆಯ ಆಡಳಿತ ಪಕ್ಷದ ಶಾಸಕರು ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದು, ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಆಗಿರುವ ಮೊದಲ ಶಾಸಕರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2032. ಸಾವುಗಳು -174

ವಾಸ್ತವ ಪರಿಶೀಲನೆ

Image

***



(Release ID: 1631622) Visitor Counter : 215