ರೈಲ್ವೇ ಸಚಿವಾಲಯ

ರಾಜ್ಯಗಳ ಬೇಡಿಕೆಯಂತೆ ಭಾರತೀಯ ರೈಲ್ವೆಯಿಂದ ಶ್ರಮಿಕ್ ವಿಶೇಷ ರೈಲುಗಳು ಮುಂದುವರಿಕೆ

Posted On: 09 JUN 2020 5:07PM by PIB Bengaluru

ರಾಜ್ಯಗಳ ಬೇಡಿಕೆಯಂತೆ ಭಾರತೀಯ ರೈಲ್ವೆಯಿಂದ ಶ್ರಮಿಕ್ ವಿಶೇಷ ರೈಲುಗಳು ಮುಂದುವರಿಕೆ

ಅಗತ್ಯವಿರುವಷ್ಟು ರೈಲುಗಳನ್ನು ಬೇಡಿಕೆ ಸಲ್ಲಿಸಿದ 24 ಗಂಟೆಗಳ ಒಳಗೆ ಒದಗಿಸಲಾಗುವುದು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ

ಇಲ್ಲಿಯವರೆಗೆ 4347 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗಿದ್ದು, ಸುಮಾರು 60 ಲಕ್ಷ ಜನರನ್ನು ವಿಶೇಷ ರೈಲುಗಳ ಮೂಲಕ ಸಾಗಿಸಲಾಗಿದೆ

ರಾಜ್ಯಗಳಿಗೆ ಅಗತ್ಯವಿರುವಂತೆ ಶ್ರಮಿಕ್ ವಿಶೇಷ ರೈಲುಗಳನ್ನು ಪೂರೈಸುವ ಮೂಲಕ
ವಲಸಿಗರಿಗೆ ಆರಾಮದಾಯಕ ಮತ್ತು ಸುರಕ್ಷಿತ ಸಂಚಾರವನ್ನು ಒದಗಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ

ವಿವಿಧ ರಾಜ್ಯಗಳಿಗೆ ಸರಿಸುಮಾರು 60 ಲಕ್ಷ ಜನರನ್ನು ಸಾಗಿಸಲು ಭಾರತೀಯ ರೈಲ್ವೆ ಇಲ್ಲಿಯವರೆಗೆ ಸುಮಾರು 4347 ಕ್ಕೂ ಹೆಚ್ಚು ಶ್ರಮಿಕ್ ವಿಶೇಷ ಸೇವೆಗಳನ್ನು ಏರ್ಪಡಿಸಿದೆ. ಶ್ರಮಿಕ್ ರೈಲುಗಳನ್ನು ಮೇ 01, 2020 ರಿಂದ ಓಡಿಸಲಾಗುತ್ತಿದೆ

 

ರಾಜ್ಯಗಳಿಂದ ಬೇಡಿಕೆ ಬಂದ ನಂತರ 24 ಗಂಟೆಗಳ ಒಳಗಾಗಿ ಭಾರತೀಯ ರೈಲ್ವೆ ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸುತ್ತದೆ. ಮತ್ತು ಕಾರ್ಯವನ್ನು ಇನ್ನು ಮುಂದಿನ ದಿನಗಳಲ್ಲೂ ಮುಂದುವರಿಸುವುದಾಗಿ ಭಾರತೀಯ ರೈಲ್ವೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಿದೆ. ರೈಲ್ವೆ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಶ್ರಮಿಕ್ ವಿಶೇಷ ರೈಲುಗಳ ಬಗ್ಗೆ ತಮ್ಮ ಅವಶ್ಯಕತೆಗಳನ್ನು ಸೂಚಿಸುವಂತೆ ವಿನಂತಿಸಿದೆ ಮತ್ತು ರೈಲ್ವೆ ಮೂಲಕ ಉಳಿದ ವಲಸಿಗರ ಸಂಚಾರದ ಬೇಡಿಕೆಯನ್ನು ಪೂರೈಸಲು ಉತ್ತಮ ವ್ಯವಸ್ಥಿತ ಸೌಲಭ್ಯಗಳನ್ನು ಮಾಡಿಕೊಡಲು ನಿರ್ಧರಿಸಲಾಗುತ್ತದೆ.

ವಿಷಯದ ಕುರಿತು ಮೇ 29 ಮತ್ತು ಜೂನ್ 3 , 2020 ರಂದು ವಿವಿಧ ರಾಜ್ಯಗಳಿಗೆ ರೈಲ್ವೆ ಮಂಡಳಿಯ ಅಧ್ಯಕ್ಷರು ಪತ್ರಗಳನ್ನು ಬರೆದು ಮಾಹಿತಿ ತಿಳಿಸಿದರು ಮತ್ತುರಾಜ್ಯ ಅಪೇಕ್ಷಿತ ಸಂಖ್ಯೆಯ ಶ್ರಮಿಕ್ ವಿಶೇಷ ರೈಲುಗಳನ್ನು ವಿನಂತಿ ಮಾಡಿದ 24 ಗಂಟೆಗಳ ಒಳಗೆ ಭಾರತೀಯ ರೈಲ್ವೆ ಒದಗಿಸುತ್ತದೆಎಂದು ಅಧ್ಯಕ್ಷರು ಹೇಳಿದರು. ಹಾಗೂ ಇಂದು ಸಹ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ.

ಭವಿಷ್ಯದಲ್ಲಿ ಯಾವುದೇ ಅವಶ್ಯಕತೆಗಳಿಗಾಗಿ ಹೆಚ್ಚುವರಿ ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸುವುದಾಗಿ ಭಾರತೀಯ ರೈಲ್ವೆ ಭರವಸೆ ನೀಡಿದೆ. ಅತಿ ಕಡಿಮೆ ಅವಧಿಯಲ್ಲಿ ನೀಡುವ ಬೇಡಿಕೆ ಮತ್ತು ಯಾವುದೇ ಹೆಚ್ಚುವರಿ ಬೇಡಿಕೆಯನ್ನು ಸಹ ಭಾರತೀಯ ರೈಲ್ವೆ ಪೂರೈಸುತ್ತದೆ.

ಗೌರವಾನ್ವಿತ ಸುಪ್ರೀಂ ಕೋರ್ಟ್, ಮೇ 28,2020 ಆದೇಶದಲ್ಲಿ, ವಲಸೆ ಕಾರ್ಮಿಕರನ್ನು ತಮ್ಮ ಸ್ಥಳೀಯ ಸ್ಥಳಗಳಿಗೆ ಹಿಂದಿರುಗಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಿದೆ. ಆದೇಶವನ್ನು ಮತ್ತಷ್ಟು ಅನುಸರಿಸಲು ಭಾರತೀಯ ರೈಲ್ವೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಸಹಾಯ ಮಾಡುತ್ತದೆ..

***



(Release ID: 1630595) Visitor Counter : 41