ರಕ್ಷಣಾ ಸಚಿವಾಲಯ

ಸಮುದ್ರ ಸೇತು ಕಾರ್ಯಾಚರಣೆ: 700 ಭಾರತೀಯರನ್ನು ಹೊತ್ತು - ಐ.ಎನ್‌.ಎಸ್. ಜಲಶ್ವಾ ಹಡಗು ಮಾಲೆಯಿಂದ ಟ್ಯುಟಿಕೋರಿನ್‌ ನತ್ತ ಪಯಣ

Posted On: 06 JUN 2020 11:05AM by PIB Bengaluru

ಸಮುದ್ರ ಸೇತು ಕಾರ್ಯಾಚರಣೆ:

700 ಭಾರತೀಯರನ್ನು ಹೊತ್ತು - .ಎನ್.ಎಸ್. ಜಲಶ್ವಾ ಹಡಗು ಮಾಲೆಯಿಂದ ಟ್ಯುಟಿಕೋರಿನ್ ನತ್ತ ಪಯಣ

 

ಸಮುದ್ರ ಸೆತು ಕಾರ್ಯಾಚರಣೆಯ ಅಂಗವಾಗಿ, ಮೂರನೇ ಪ್ರವಾಸಕ್ಕಾಗಿ ಕಳುಹಿಸಿದ ಭಾರತೀಯ ನೌಕಾ ಹಡಗುಜಲಶ್ವಾಮಾಲ್ಡೀವ್ಸ್ ಮಾಲೆಯನ್ನು ಜೂನ್ 04, 2020 ರಂದು ತಲುಪಿತು. ನಮ್ಮ ನಾಗರಿಕರನ್ನು ಸಮುದ್ರದ ಮೂಲಕ ವಿದೇಶಿ ತೀರದಿಂದ ತಾಯಿನಾಡಿಗೆ ಕರೆತರುವ ಭಾರತದ ರಾಷ್ಟ್ರೀಯ ಹಿತಾಸಕ್ತಿಯ ಪ್ರಯತ್ನಕ್ಕೆ ಭಾರತೀಯ ನೌಕಾಪಡೆಯ ಕೊಡುಗೆಯಾಗಿ, ಜೂನ್ 05,2020 ರಂದು 700 ಭಾರತೀಯ ಪ್ರಜೆಗಳನ್ನು ಹೊತ್ತು, ಸಂಜೆ ತಡವಾಗಿ ಭಾರತದ ಕಡೆಗೆ ತನ್ನ ಪಯಣವನ್ನು ಪುನಃ ಪ್ರಾರಂಭಿಸಿತು. ಪ್ರಯಾಣ ಪ್ರಾರಂಭದ ಮುನ್ನ, ಹಡಗವನ್ನು ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ಕಮಾಂಡೆಂಟ್ ಕರ್ನಲ್ ಮೊಹಮ್ಮದ್ ಸಲೀಮ್ ಭೇಟಿ ಮಾಡಿ ಪರಿಶೀಲಿಸಿದರು.

ಪ್ರವಾಸದೊಂದಿಗೆ, “ಜಲಶ್ವಾಮಾಲ್ಡೀವ್ಸ್ ಮತ್ತು ಶ್ರೀಲಂಕಾದಿಂದ ಸುಮಾರು 2700 ಭಾರತೀಯ ನಾಗರಿಕರನ್ನು ಭಾರತ ಕಡಲ ತೀರಕ್ಕೆ ಯಶಸ್ವಿಯಾಗಿ ಮರಳಿ ಕರೆತರುತ್ತಿದೆ.

ಹಡಗಿನಲ್ಲಿ ಕಟ್ಟುನಿಟ್ಟಾದ ಕೋವಿಡ್ ಶಿಷ್ಠಾಚಾರಗಳನ್ನು ಅನುಸರಿಸಲಾಗುವುದು ಮತ್ತು ಜೂನ್ 07, 20 ರಂದು ಟ್ಯುಟಿಕೋರಿನ್ ಬಂದರನ್ನು ಹಡಗು ತಲುಪುವ ನಿರೀಕ್ಷೆಯಿದೆ.

ಹಡಗು ಮೂಲಕ ಸ್ವದೇಶಕ್ಕೆ ಕರೆತಂದ ಸಿಬ್ಬಂದಿಗಳನ್ನು ತಮಿಳುನಾಡಿನ ಟುಟಿಕೋರಿನ್ ನಲ್ಲಿ ಇಳಿಸಿ, ರಾಜ್ಯ ಅಧಿಕಾರಿಗಳ ಕೋವಿಡ್ ನಿಯಂತ್ರಣಾ ಆರೈಕೆ ವ್ಯವಸ್ಥೆಗೆ ಒಪ್ಪಿಸಲಾಗುವುದು.

***(Release ID: 1630169) Visitor Counter : 22