ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
05 JUN 2020 2:11PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಲು ಸಾರ್ವಜನಿಕ ಮತ್ತು ಅರೆ-ಸಾರ್ವಜನಿಕ ಪರಿಸರಗಳ ಕಾರ್ಯಾಚರಣೆಗಾಗಿ ನಿರ್ದಿಷ್ಟ ಕಾರ್ಯ ಸೂಚಿಗಳನ್ನು (ಎಸ್ಒಪಿ) ಬಿಡುಗಡೆ ಮಾಡಲಾಗಿದೆ
ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ವಿಧಾನದ ಮೂಲಕ ಭಾರತವು ತನ್ನ ಲಾಕ್ಡೌನ್ ಅವಶ್ಯಕತೆಗಳನ್ನು ಸರಾಗಗೊಳಿಸುತ್ತಿರುವುದರಿಂದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ಹರಡಲು ಹೆಚ್ಚಿನ ಸಾಧ್ಯತೆಯಿರುವ ಸಾರ್ವಜನಿಕ ಮತ್ತು ಅರೆ-ಸಾರ್ವಜನಿಕ ಪರಿಸರಗಳ ಕಾರ್ಯಾಚರಣೆಗೆ ನಿರ್ದಿಷ್ಟ ಕಾರ್ಯ ಸೂಚಿಗಳನ್ನು (ಎಸ್ಒಪಿ) ಅಪ್ಲೋಡ್ ಮಾಡಿದೆ, ಹೊಸ ಮಾರ್ಗಸೂಚಿಗಳು ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಲು ಅನುವು ಮಾಡಿಕೊಡುವಾಗ ಪ್ರಸರಣ ಸರಪಳಿಯನ್ನು ಹತೋಟಿಯಲ್ಲಿಡಲು ಕೋವಿಡ್ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ನಡವಳಿಕೆಯನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿವೆ.
ಕಚೇರಿಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತ ಎಸ್ ಒ ಪಿಯನ್ನು https://www.mohfw.gov.in/pdf/1SoPstobefollowedinOffices.pdf ನಲ್ಲಿ ನೋಡಬಹುದು.
ಪೂಜಾ ಸ್ಥಳಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತ ಎಸ್ ಒ ಪಿಯನ್ನು https://www.mohfw.gov.in/pdf/2SoPstobefollowedinReligiousPlaces.pdf ನಲ್ಲಿ ನೋಡಬಹುದು.
ಹೋಟೆಲುಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತ ಎಸ್ ಒ ಪಿಯನ್ನು https://www.mohfw.gov.in/pdf/3SoPstobefollowedinRestaurants.pdf ನಲ್ಲಿ ನೋಡಬಹುದು.
ಶಾಪಿಂಗ್ ಮಾಲ್ಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತ ಎಸ್ ಒ ಪಿಯನ್ನು https://www.mohfw.gov.in/pdf/4SoPstobefollowedinShoppingMalls.pdf ನಲ್ಲಿ ನೋಡಬಹುದು.
ಹೋಟೆಲ್ಗಳು ಮತ್ತು ಇತರ ಆತಿಥ್ಯ ಘಟಕಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತ ಎಸ್ಒಪಿಯನ್ನು https://www.mohfw.gov.in/pdf/5SoPstobefollowedinHotelsandotherunits.pdf ನಲ್ಲಿ ನೋಡಬಹುದು.
ಕೋವಿಡ್19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಸಿಎಸ್ (ಎಂಎ) ಫಲಾನುಭವಿಗಳಿಗೆ ಒಪಿಡಿ ಔಷಧಿಗಳನ್ನು ಮರುಪಾವತಿ ಮಾಡುವ ಬಗ್ಗೆ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದನ್ನು https://www.mohfw.gov.in/pdf/OPDmedicinesspecialsanctionCOVID.pdf ನಲ್ಲಿ ನೋಡಬಹುದು.
ಕಳೆದ 24 ಗಂಟೆಗಳಲ್ಲಿ ಒಟ್ಟು 5,355 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ. ಹೀಗಾಗಿ, ಈವರೆಗೆ ಒಟ್ಟು 1,09,462 ರೋಗಿಗಳನ್ನು ಕೋವಿಡ್-19ನಿಂದ ಗುಣಪಡಿಸಲಾಗಿದೆ. ಕೋವಿಡ್-19 ರೋಗಿಗಳಲ್ಲಿ ಚೇತರಿಕೆಯ ಪ್ರಮಾಣ 48.27% ಆಗಿದೆ. ಪ್ರಸ್ತುತ, 1,10,960 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ.
ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆ ಈಗ 507 ಕ್ಕೆ ಏರಿದೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆ 217 ಕ್ಕೆ ಏರಿದೆ (ಒಟ್ಟು 727 ಲ್ಯಾಬ್ಗಳು). ಕಳೆದ 24 ಗಂಟೆಗಳಲ್ಲಿ 1,43,661 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಸಂಚಿತ ಮಾದರಿಗಳ ಸಂಖ್ಯೆ 43,86,379 ಆಗಿದೆ.
5 ಜೂನ್ 2020 ರ ಹೊತ್ತಿಗೆ, 1,66,460 ಪ್ರತ್ಯೇಕ ಹಾಸಿಗೆಗಳು, 21,473 ಐಸಿಯು ಹಾಸಿಗೆಗಳು ಮತ್ತು 72,497 ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳೊಂದಿಗೆ 957 ಮೀಸಲಾದ ಕೋವಿಡ್ ಆಸ್ಪತ್ರೆಗಳ ಲಭ್ಯತೆಯೊಂದಿಗೆ ಕೋವಿಡ್ ಸಂಬಂಧಿತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. 1,32,593 ಪ್ರತ್ಯೇಕ ಹಾಸಿಗೆಗಳೊಂದಿಗೆ 2,362 ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು; 10,903 ಐಸಿಯು ಹಾಸಿಗೆಗಳು ಮತ್ತು 45,562 ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆಗಳನ್ನು ಸಹ ಕಾರ್ಯಗತಗೊಳಿಸಲಾಗಿದೆ. ದೇಶದಲ್ಲಿ ಕೋವಿಡ್ -19 ಅನ್ನು ಎದುರಿಸಲು 11,210 ಸಂಪರ್ಕತಡೆ ಕೇಂದ್ರಗಳು ಮತ್ತು 7,029 ಕೋವಿಡ್ ಆರೈಕೆ ಕೇಂದ್ರಗಳು 7,03,786 ಹಾಸಿಗೆಗಳನ್ನು ಹೊಂದಿವೆ. ಇಲ್ಲಿಯವರೆಗೆ, ಕೇಂದ್ರವು 128.48 ಲಕ್ಷ ಎನ್ 95 ಮುಖಗವಸುಗಳು ಮತ್ತು 104.74 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಒದಗಿಸಿದೆ.
ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಈ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in
ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in, ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1630167)
Visitor Counter : 214
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam