PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 03 JUN 2020 6:57PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು

ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಇತ್ತೀಚಿನ ವರದಿ- ಚೇತರಿಕೆ ದರ ಶೇ.48.31ಕ್ಕೆ ಸುಧಾರಣೆ; ಮರಣ ಪ್ರಮಾಣ ಶೇ.2.80ಗೆ ಇಳಿಕೆ

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 4776 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು 1,00,303 ರೋಗಿಗಳು ಕೋವಿಡ್ 19ರಿಂದ ಗುಣವಾದಂತಾಗಿದೆ. ಚೇತರಿಕೆ ಪ್ರಮಾಣ ಶೇ.48.31ಕ್ಕೆ ಏರಿದೆ. ಪ್ರಸ್ತುತ 1,01,497 ಸಕ್ರಿಯ ಪ್ರಕರಣಗಳು ಇದ್ದು, ಇವರೆಲ್ಲರೂ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಮರಣ ದರ ಶೇ.2..80 ಆಗಿದೆ. ಪರೀಕ್ಷಾ ಸಾಮರ್ಥ್ಯ ದೇಶದಲ್ಲಿ ಹೆಚ್ಚಳವಾಗಿದ್ದು, ಸರ್ಕಾರದ 480 ಮತ್ತು ಖಾಸಗಿಯ 208 (ಒಟ್ಟು 688 ಪ್ರಯೋಗಾಲಯಗಳು). ಒಟ್ಟಾರೆ ಕೋವಿಡ್ -19ರ 41,03,233 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ. ನಿನ್ನೆ ಒಂದೇ ದಿನ 1,37,158 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಈವರೆಗೆ 1,66,332 ಪ್ರತ್ಯೇಕೀಕರಣ ಹಾಸಿಗೆಗಳು, 21,393 ಐಸಿಯು ಹಾಸಿಗೆಗಳು ಮತ್ತು 72,762 ಆಮ್ಲಜನಕ ಬೆಂಬಲಿತ ಹಾಸಿಗೆಗಳು ಲಭ್ಯವಿರುವ 952 ಸಮರ್ಪಿತ ಕೋವಿಡ್ ಆಸ್ಪತ್ರೆಗಳು ಕಾರ್ಯಾಚರಣೆಯಲ್ಲಿವೆ. ಕೇಂದ್ರ ಸರ್ಕಾರ 125.28 ಲಕ್ಷ ಎನ್.95 ಮಾಸ್ಕ್ ಮತ್ತು 101.5 ಲಕ್ಷ ವೈಯಕ್ತಿಕ ಸಾಧನ (ಪಿಪಿಇಗಳು)ಗಳನ್ನು ರಾಜ್ಯಗಳು/ಯುಟಿಗಳು/ಕೇಂದ್ರೀಯ ಸಂಸ್ಥೆಗಳಿಗೆ ಒದಗಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628970

ಗ್ರಾಮೀಣ ಭಾರತಕ್ಕೆ ಐತಿಹಾಸಿಕ ಚೈತನ್ಯ ನೀಡಲು ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ

ಅವಶ್ಯಕ ವಸ್ತುಗಳ ಕಾಯಿಗೆ ಐತಿಹಾಸಿಕ ತಿದ್ದುಪಡಿ ಮಾಡಲು ಸಂಪುಟ ಇಂದು ತನ್ನ ಸಮ್ಮತಿ ಸೂಚಿಸಿದೆ. ಇದು ಕೃಷಿಯ ಪರಿವರ್ತನೆ ಮತ್ತು ರೈತರ ಆದಾಯ ಹೆಚ್ಚಳದ ನಿಟ್ಟಿನಲ್ಲಿ ದೂರದರ್ಶಿತ್ವದ ಕ್ರಮವಾಗಿದೆ. ಅವಶ್ಯಕ ವಸ್ತುಗಳ ಕಾಯಿದೆಗೆ ತಿದ್ದುಪಡಿ ತರುವುದರೊಂದಿಗೆ ಕೃಷಿ ಉತ್ಪನ್ನಗಳಾದ ಧಾನ್ಯಗಳು, ಬೇಳೆಕಾಳುಗಳು ಎಣ್ಣೆ ಕಾಳುಗಳು, ಖಾದ್ಯ ತೈಲ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಅವಶ್ಯಕ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಖಾಸಗಿ ಹೂಡಿಕೆದಾರರಿಗಿದ್ದ ಹೆಚ್ಚಿನ ನಿಯಂತ್ರಣದ ಹಸ್ತಕ್ಷೇಪದ ಭಯವನ್ನು ತೊಡೆದುಹಾಕುತ್ತದೆ. ಬೇಸಾಯ, ದಾಸ್ತಾನು, ಸಾಗಾಟ, ವಿತರಣೆ ಮಾಡಲು ಇದು ಸ್ವಾತಂತ್ರ್ಯದ ಆರ್ಥಿಕತೆಯ ಪ್ರಮಾಣವನ್ನು ಸದುಪಯೋಗಪಡಿಸಿಕೊಳ್ಳಲು ಕಾರಣವಾಗುತ್ತದೆ ಮತ್ತು ಖಾಸಗಿ ವಲಯ / ವಿದೇಶಿ ನೇರ ಹೂಡಿಕೆಯನ್ನು ಕೃಷಿ ಕ್ಷೇತ್ರಕ್ಕೆ ಆಕರ್ಷಿಸುತ್ತದೆ. ಇದು ಶೀಥಲೀಕರಣ ಘಟಕ ಮತ್ತು ಆಹಾರ ಪೂರೈಕೆ ಸರಪಣಿ ಆಧುನೀಕರಣದಲ್ಲಿ ಹೂಡಿಕೆಯ ಚಾಲನೆಗೆ ನೆರವಾಗುತ್ತದೆ. ಈ ಹೆಗ್ಗುರುತಿನ ನಿರ್ಧಾರ ರೈತರಿಗೆ, ಕೃಷಿ ವಲಯದ ಪರಿವರ್ತನೆಗೆ ಪ್ರಯೋಜನಕಾರಿಯಾಗಲಿದೆ. ಕೃಷಿ ಉತ್ಪನ್ನದ ನಿರ್ಬಂಧ ರಹಿತ ಅಂತರ ರಾಜ್ಯ ಮತ್ತು ಅಂತರ ರಾಜ್ಯ ವಾಣಿಜ್ಯಕ್ಕೆ ಅನುಮೋದನೆ ನೀಡಲಾಗಿದೆ. ಸಂಸ್ಕಾರಕಗಳು, ಸಂಗ್ರಾಹಕರು, ಸಗಟು ವ್ಯಾಪಾರಿಗಳು, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರೊಂದಿಗೆ ತೊಡಗಿಸಿಕೊಳ್ಳಲು ರೈತರಿಗೆ ಅಧಿಕಾರವಿರುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1629032

ಹೂಡಿಕೆ ಆಕರ್ಷಿಸಲು ಸಚಿವಾಲಯಗಳು/ ಇಲಾಖೆಗಳಲ್ಲಿ ಕಾರ್ಯದರ್ಶಿಗಳ ಅಧಿಕಾರಯುತ ಗುಂಪು ಮತ್ತು ಯೋಜನಾ ಅಭಿವೃದ್ಧಿ ಕೋಶ ಸ್ಥಾಪಿಸಲು ಸರ್ಕಾರದ ಅನುಮೋದನೆ

ಭಾರತಕ್ಕೆ ಹೂಡಿಕೆಯನ್ನು ಆಕರ್ಷಿಸಲು ಸಚಿವ ಸಂಪುಟವು “ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳಲ್ಲಿ ಕಾರ್ಯದರ್ಶಿಗಳ ಅಧಿಕಾರಯುತ ಗುಂಪು ಮತ್ತು ಯೋಜನಾ ಅಭಿವೃದ್ಧಿ ಕೋಶ’ ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ. ಹೊಸ ವ್ಯವಸ್ಥೆ 2024-25ರ ಹೊತ್ತಿಗೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗುವ ಭಾರತದ ಮುನ್ನೋಟಕ್ಕೆ ಪುನಶ್ಚೇತನ ನೀಡುತ್ತದೆ. ಪ್ರಸಕ್ತ ಕೋವಿಡ್ ಸಾಂಕ್ರಾಮಿಕದ ನಡುವೆಯೂ ಭಾರತವು ದೇಶಕ್ಕೆ ಅದರಲ್ಲೂ ದೊಡ್ಡ ಕಂಪನಿಗಳಿಂದ ಹೂಡಿಕೆಯನ್ನು ಆಕರ್ಷಿಸಲು ಅವಕಾಶವನ್ನು ಒದಗಿಸಲಾಗಿದೆ, ಭೌಗೋಳಿಕತೆ ವೈವಿಧ್ಯಗೊಳಿಸಲು ಮತ್ತು ಅಪಾಯಗಳನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತದೆ. ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಬೆಂಬಲ ಮತ್ತು ಅನುಕೂಲತೆ ಒದಗಿಸಲು, ಆರ್ಥಿಕ ಕ್ಷೇತ್ರದಲ್ಲಿ ವೃದ್ಧಿಗೆ ಚೈತನ್ಯ ನೀಡಲು ಕಾರ್ಯದರ್ಶಿಗಳ ಅಧಿಕಾರಯುತ ಗುಂಪು (ಇಜಿಓಎಸ್)ಗೆ ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದಲ್ಲಿ ಹೂಡಿಕೆ ಮಾಡಲಾಗದ ಯೋಜನೆಗಳ ಅಭಿವೃದ್ಧಿಗೆ ‘ಯೋಜನಾ ಅಭಿವೃದ್ಧಿ ಕೋಶ’ (ಪಿಡಿಸಿ) ಯನ್ನು ಅನುಮೋದಿಸಲಾಗಿದೆ ಮತ್ತು ಮೂಲಕ ಭಾರತದಲ್ಲಿ ಹೂಡಿಕೆ ಮಾಡಲಾಗದ ಯೋಜನೆಗಳ ಪೈಪ್‌ ಲೈನ್ ಬೆಳೆಯುತ್ತದೆ ಮತ್ತು ಪ್ರತಿಯಾಗಿ ಎಫ್‌.ಡಿಐ ಒಳಹರಿವು ಹೆಚ್ಚಾಗುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1629036

ಈವರೆಗಿನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ - ಪ್ರಗತಿ

1.70 ಲಕ್ಷ ಕೋಟಿ ರೂ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಭಾಗವಾಗಿ, ಸರ್ಕಾರ ಉಚಿತ ಆಹಾರ ಧಾನ್ಯ ಮತ್ತು ಮಹಿಳೆಯರು, ಬಡ ಹಿರಿಯ ನಾಗರಿಕರು, ರೈತರಿಗೆ ನಗದು ನೆರವು ಪ್ರಕಟಿಸಿದೆ. ಪ್ಯಾಕೇಜ್ ತ್ವರಿತ ಅನುಷ್ಠಾನದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರಂತರವಾಗಿ ನಿಗಾ ವಹಿಸಿದೆ. ಸುಮಾರು 42 ಕೋಟಿ ಬಡ ಜನರು 53,248 ರೂ. ಆರ್ಥಿಕ ನೆರವನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ ಪಡೆದಿದ್ದಾರೆ. ಪಿಎಂ ಕಿಸಾನ್ ಅಡಿ 8.19 ಕೋಟಿ ಫಲಾನುಭವಿಗಳಿಗೆ ಪ್ರಥಮ ಕಂತಿನ ಪಾವತಿಗಾಗಿ 16,394 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. 20.05 ಕೋಟಿ (98.33) ಮಹಿಳಾ ಜನ್ ಧನ್ ಖಾತೆದಾರರಿಗೆ ಪ್ರಥಮ ಕಂತಿನ ಪಾವತಿಗಾಗಿ 10029 ಕೋಟಿ ಜಮಾ ಮಾಡಲಾಗಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1628877

ಭಾರತಕ್ಕೆ ಬರುವ ವಿದೇಶೀಯರ ಕೆಲವು ಪ್ರವರ್ಗಗಳಿಗೆ ವೀಸಾ ಮತ್ತು ಪ್ರಯಾಣದ ನಿರ್ಬಂಧಗಳಲ್ಲಿ ಸಡಿಲಿಕೆಗೆ ಅನುಮತಿ

ಭಾರತಕ್ಕೆ ಬರುವ ಕೆಲವು ನಿರ್ದಿಷ್ಟ ಪ್ರವರ್ಗದ ವಿದೇಶೀ ಪ್ರಜೆಗಳಿಗೆ ವೀಸಾ ಮತ್ತು ಪ್ರಯಾಣದ ನಿರ್ಬಂಧಗಳಲ್ಲಿ ಸಡಿಲಿಕೆ ನೀಡುವ ವಿಚಾರವನ್ನು ಭಾರತ ಸರ್ಕಾರ ಪರಿಗಣಿಸಿದೆ. ನಿರ್ದಿಷ್ಟ ಪ್ರವರ್ಗದ ವಿದೇಶೀ ಪ್ರಜೆಗಳಿಗೆ ಭಾರತಕ್ಕೆ ಬರಲು ಅನುಮತಿಸಲು ನಿರ್ಧರಿಸಲಾಗಿದೆವಿದೇಶೀ ವಾಣಿಜ್ಯೋದ್ಯಮಿಗಳು; ವಿದೇಶೀ ಆರೋಗ್ಯ ವೃತ್ತಿಪರರು, ಆರೋಗ್ಯ ಸಂಶೋಧಕರು, ಇಂಜಿನಿಯರ್ ಗಳು ಮತ್ತು ತಂತ್ರಜ್ಞರು; ವಿದೇಶೀ ಎಂಜಿನಿಯರಿಂಗ್, ವ್ಯವಸ್ಥಾಪನೆಯ, ವಿನ್ಯಾಸ ಅಥವಾ ಇತರ ತಜ್ಞರು; ವಿದೇಶೀ ತಾಂತ್ರಿಕ ಪರಿಣತರು ಮತ್ತು ಎಂಜಿನಿಯರುಗಳು. ಮೇಲಿನ ಪ್ರವರ್ಗದ ವಿದೇಶೀ ಪ್ರಜೆಗಳು ಹೊಸದಾಗಿ ವಾಣಿಜ್ಯ ವೀಸಾ ಅಥವಾ ಔದ್ಯೋಗಿಕ ವೀಸಾ ಭಾರತೀಯ ಅಭಿಯಾನ/ವಿದೇಶದ ಹುದ್ದೆಯಲ್ಲಿ ತಮಗೆ ಅನ್ವಯಿಸುವುದನ್ನು ಪಡೆದುಕೊಳ್ಳಬೇಕು.

ವಿವರಗಳಿಗೆ: https://pib.gov.in/PressReleseDetail.aspx?PRID=1628988

ಪ್ರಧಾನಮಂತ್ರಿ ಮತ್ತು ಅಮೆರಿಕದ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಯುಕ್ತ ಅಮೆರಿಕ ಸಂಸ್ಥಾನದ ಅಧ್ಯಕ್ಷ ಘನತೆವೆತ್ತ ಡೋನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಅಧ್ಯಕ್ಷ ಟ್ರಂಪ್ ಅವರು ಗುಂಪು 7ರ ಅಮೆರಿಕ ಅಧ್ಯಕ್ಷತೆ ಕುರಿತಂತೆ ಮಾತನಾಡಿ, ಭಾರತವೂ ಸೇರಿದಂತೆ ಇತರ ದೇಶಗಳನ್ನು ಸೇರ್ಪಡೆ ಮಾಡಿಕೊಂಡು ಹಾಲಿ ಇರುವ ಸದಸ್ಯರ ಬಲವನ್ನು ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಅಮೆರಿಕದಲ್ಲಿ ನಡೆಯಲಿರುವ ಮುಂದಿನ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದರು. ಪ್ರಧಾನಿ ಮೋದಿ ಅವರು ಕೋವಿಡೋತ್ತರ ವಿಶ್ವದ ಹೊರಹೊಮ್ಮುತ್ತಿರುವ ವಾಸ್ತವಿಕತೆಯ ಹಿನ್ನೆಲೆಯಲ್ಲಿ ಅಧ್ಯಕ್ಷ ಟ್ರಂಪ್ ಅವರ ರಚನಾತ್ಮಕ ಮತ್ತು ದೂರದರ್ಶಿತ್ವದ ದೃಷ್ಟಿಕೋನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ದೇಶಿತ ಶೃಂಗಸಭೆಯ ಯಶಸ್ಸಿನ ಖಾತ್ರಿಗೆ ಅಮೆರಿಕ ಮತ್ತು ಇತರ ರಾಷ್ಟ್ರಗಳೊಂದಿಗೆ ಒಗ್ಗೂಡಿ ಶ್ರಮಿಸಲು ಭಾರತ ಹರ್ಷಿಸುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1628807

ಸಾಗರದಾಚೆಯಿಂದ ಹಿಂತಿರುಗಿರುವ ನಾಗರಿಕರಲ್ಲಿ ಕೌಶಲ್ಯದ ಶೋಧನೆ ನಡೆಸುತ್ತಿರುವ ಸರ್ಕಾರ

ಪ್ರಸಕ್ತ ಸಾಂಕ್ರಾಮಿಕ ಮಹಾ ಮಾರಿ ಹಿನ್ನೆಲೆಯಲ್ಲಿ ದೇಶಕ್ಕೆ ಮರಳಿರುವ ನುರಿತ ಕಾರ್ಯಪಡೆಯ ಸದ್ಬಳಕೆಗಾಗಿ ವಂದೇ ಭಾರತ ಅಡಿಯಲ್ಲಿ ದೇಶಕ್ಕೆ ಮರಳಿರುವ ಕೌಶಲ್ಯವಿರುವ ನಾಗರಿಕರ ಒಗ್ಗೂಡಿಸುವಿಕೆಯ ಪ್ರಯತ್ನವಾಗಿ ಭಾರತ ಸರ್ಕಾರ ಸ್ವದೇಶ್ (ಸ್ಕಿಲ್ಡ್ ವರ್ಕರ್ಸ್ ಅರೈವಲ್ ಡೇಟಾಬೇಸ್ ಫಾರ್ ಎಂಪ್ಲಾಯ್ಮೆಂಟ್ ಸಪೋರ್ಟ್) ಎಂಬ ಹೊಸ ಉಪಕ್ರಮ ಆರಂಭಿಸಿದೆ. ಇದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಉಪಕ್ರಮವಾಗಿದ್ದು, ಅವರ ಕೌಶಲ್ಯ ಮತ್ತು ಅನುಭವಕ್ಕೆ ಅನುಗುಣವಾಗಿ ಅರ್ಹ ನಾಗರಿಕರ ದತ್ತಾಂಶ ರೂಪಿಸುವ ಮತ್ತು ಭಾರತ ಮತ್ತು ವಿದೇಶೀ ಕಂಪನಿಗಳ ಅಗತ್ಯ ಪೂರೈಸುವ ಗುರಿ ಹೊಂದಿದೆ. ಮರಳಿರುವ ನಾಗರಿಕರಿಗೆ ಸೂಕ್ತವಾದ ಉದ್ಯೋಗಾವಕಾಶ ಕಲ್ಪಿಸಿ ಅವರನ್ನು ಸಬಲೀಕರಿಸುವುದು ಉಪಕ್ರಮದ ಗುರಿಯಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ರಾಜ್ಯ ಸರ್ಕಾರಗಳು, ಕೈಗಾರಿಕಾ ಸಂಘಟನೆಗಳು ಮತ್ತು ಉದ್ಯೋಗದಾತರು ಸೇರಿದಂತೆ ಪ್ರಮುಖ ಪಾಲುದಾರರೊಂದಿಗೆ ಹಂಚಿಕೊಳ್ಳಲು ಮತ್ತು ಚರ್ಚೆಯನ್ನು ಸಕ್ರಿಯಗೊಳಿಸಲು ಉದ್ದೇಶಿಸಲಾಗಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1628976

ಪ್ರೌಢ ಶಿಕ್ಷಣ ಹಂತ (XI ಮತ್ತು XIIನೇ ತರಗತಿ)ಗೆ ಪರ್ಯಾಯ ಶೈಕ್ಷಣಿಕ ದಿನದರ್ಶಿ ಬಿಡುಗಡೆ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವರು

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ದೆಹಲಿಯಲ್ಲಿಂದು ಪ್ರೌಢ ಶಿಕ್ಷಣ ಹಂತ (ಹನ್ನೊಂದು ಮತ್ತು ಹನ್ನೆರಡನೇ ತರಗತಿಗೆ) ಪರ್ಯಾಯ ಶೈಕ್ಷಣಿಕ ದಿನಚರಿಯನ್ನು ಬಿಡುಗಡೆ ಮಾಡಿದರು. ಕೋವಿಡ್ -19ರ ಹಿನ್ನೆಲೆಯಲ್ಲಿ ಮನೆಯಲ್ಲಿ ಉಳಿದಿರುವ ವಿದ್ಯಾರ್ಥಿಗಳನ್ನು ಅವರ ಪಾಲಕರು ಮತ್ತು ಶಿಕ್ಷಕರ ಮೂಲಕ ಅರ್ಥಪೂರ್ಣವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸುವ ಸಲುವಾಗಿ ಎಂಎಚ್.ಆರ್.ಡಿ. ಮಾರ್ಗಸೂಚಿಯಡಿಯಲ್ಲಿ ಎನ್.ಸಿ.ಇ.ಆರ್.ಟಿ ಶೈಕ್ಷಣಿಕ ದಿನದರ್ಶಿ ಅಭಿವೃದ್ಧಿಪಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಆರ್.ಡಿ. ಸಚಿವರು, ವಿನೋದದಿಂದ ತುಂಬಿದ, ಆಸಕ್ತಿದಾಯಕ ರೀತಿಯಲ್ಲಿ ಶಿಕ್ಷಣವನ್ನು ನೀಡಲು ಲಭ್ಯವಿರುವ ವಿವಿಧ ತಾಂತ್ರಿಕ ಪರಿಕರಗಳು ಮತ್ತು ಸಾಮಾಜಿಕ ಮಾಧ್ಯಮ ಪರಿಕರಗಳ ಬಳಕೆಯ ಕುರಿತು ದಿನದರ್ಶಿ ಶಿಕ್ಷಕರಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ, ಇದನ್ನು ಮನೆಯಲ್ಲಿದ್ದಾಗಲೂ ಕಲಿಯುವವರು, ಪೋಷಕರು ಮತ್ತು ಶಿಕ್ಷಕರು ಬಳಸಬಹುದು ಎಂದು ಹೇಳಿದರು. ಆದಾಗ್ಯೂ, ಮೊಬೈಲ್, ರೇಡಿಯೋ, ಟೆಲಿವಿಷನ್, ಎಸ್‌.ಎಂಎಸ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮಗಳಿಗೆ ವಿವಿಧ ಪರಿಕರಗಳು ಮತ್ತು ವೇದಿಕೆಗಳಿಗೆ ವಿದ್ಯಾರ್ಥಿಗಳ ಪ್ರವೇಶದ ವಿವಿಧ ಹಂತಗಳನ್ನು ಇದು ಗಣನೆಗೆ ತೆಗೆದುಕೊಂಡಿದೆ.

Image

ವಿವರಗಳಿಗೆ: https://pib.gov.in/PressReleseDetail.aspx?PRID=1628948

ಸಮುದ್ರಸೇತು ಕಾರ್ಯಾಚರಣೆಶ್ರೀಲಂಕಾದಿಂದ ಭಾರತೀಯ ನಾಗರಿಕರನ್ನು ಹೊತ್ತು ತೂತುಕುಡಿಗೆ ಆಗಮಿಸಿದ .ಎನ್.ಎಸ್. ಜಲಾಶ್ವ

ಭಾರತೀಯ ನೌಕಾಪಡೆ ಸಮುದ್ರ ಸೇತು ಕಾರ್ಯಾಚರಣೆಗೆ ನಿಯುಕ್ತಿಗೊಳಿಸಿರುವ ಐಎನ್ಎಸ್ ಜಲಾಶ್ವ, ಶ್ರೀಲಂಕಾದ ಕೊಲಂಬೋದಿಂದ 685 ಭಾರತೀಯರನ್ನು ಹೊತ್ತು ತೂತುಕುಡಿಯ ಬಂದರನ್ನು 2020ರ ಜೂನ್ 2ರಂದು ತಲುಪಿತು. ಶ್ರೀಲಂಕಾದಲ್ಲಿ ಭಾರತೀಯ ಅಭಿಯಾನದಲ್ಲ ಭಾರತೀಯ ನಾಗರಿಕರಿಗೆ ಹಡಗು ಹತ್ತಲು ಅವಕಾಶ ನೀಡಲಾಗಿತ್ತು. ನೌಕೆಯಲ್ಲಿದ್ದ ಸಿಬ್ಬಂದಿ ಅಗತ್ಯ ವೈದ್ಯಕೀಯ ತಪಾಸಣೆಯ ಬಳಿಕ ಹಡಗು ಏರಲು ಅವಕಾಶ ನೀಡಿದರು. ಸಮುದ್ರ ಯಾನದ ವೇಳೆ ಕೋವಿಡ್ ಸಂಬಂಧಿತ ಸುರಕ್ಷತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ತೂತುಕುಡಿಯಲ್ಲಿ ಸ್ಥಳೀಯ ಪ್ರಾಧಿಕಾರಗಳು ತೆರವು ಕಾರ್ಯಾಚರಣೆಯಲ್ಲಿ ಬಂದವರನ್ನು ಬರಮಾಡಿಕೊಂಡಿತು ಮತ್ತು ತ್ವರಿತವಾಗಿ ಹಡಗಿನಿಂದ ಇಳಿಯಲು ಮತ್ತು ಆರೋಗ್ಯ ತಪಾಸಣೆ ಮಾಡಲು, ವಲಸೆ ಮತ್ತು ಅವರ ಪ್ರಯಾಣದ ವ್ಯವಸ್ತೆ ಮಾಡಲಾಯಿತು. ಈ ತೆರವು ಕಾರ್ಯಾಚರಣೆಯೊಂದಿಗೆ ಭಾರತೀಯ ನೌಕಾಪಡೆ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ 2173 ಭಾರತೀಯ ಪ್ರಜೆಗಳನ್ನು ಮಾಲ್ಡೀವ್ಸ್ (1488) ಮತ್ತು ಶ್ರೀಲಂಕಾ (685) ತೆರವು ಮಾಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628714

ಎಂ.ಎಸ್.ಎಂ..ಗಳ ಹೊಸ ವರ್ಗೀಕರಣದ ನಿಯಮಗಳನ್ನು ಜಾರಿ ಮಾಡಲು ಅಣಿಯಾಗುತ್ತಿರುವ ಎಂ.ಎಸ್.ಎಂ.. ಸಚಿವಾಲಯ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವಾಲಯ ದೇಶದಲ್ಲಿ ಎಂ.ಎಸ್.ಎಂ..ಗಳ ಮಾನದಂಡ ಮತ್ತು ಪರಿಭಾಷೆಯನ್ನು ಪರಿಷ್ಕರಿಸುವ ಮತ್ತು ಜಾರಿ ಮಾಡುವ ನಿಟ್ಟಿನಲ್ಲಿ ದಾರಿ ಮಾಡಿಕೊಡಲು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಹೊಸ ಪರಿಭಾಷೆ ಮತ್ತು ರಚನೆ 2020 ಜುಲೈ 1ರಿಂದ ಜಾರಿಗೆ ಬರಲಿದೆ. 2020 ಮೇ 13ರಂದು ಆತ್ಮ ನಿರ್ಭರ ಭಾರತದಲ್ಲಿ ಎಂ.ಎಸ್.ಎಂ..ಗಳ ವ್ಯಾಖ್ಯೆಯನ್ನು ಪ್ರಕಟಿಸಲಾಗಿತ್ತು. ಪ್ರಕಟಣೆಯ ರೀತ್ಯ ಸೂಕ್ಷ್ಮ ಉತ್ಪಾದನೆ ಮತ್ತು ಸೇವಾ ಘಟಕದ ಹೂಡಿಕೆಯನ್ನು1 ಕೋಟಿ ರೂ.ಗೆ, ವಹಿವಾಟನ್ನು 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಸಣ್ಣ ಘಟಕದ ಹೂಡಿಕೆ ಮಿತಿಯನ್ನು 10 ಕೋಟಿ ರೂ.ಗಳಿಗೆ ಮತ್ತು ವಹಿವಾಟನ್ನು 50 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಮಧ್ಯಮ ಘಟಕಗಳ ಮಿತಿಗಳಲ್ಲಿ ಹೂಡಿಕೆಯನ್ನು 20 ಕೋಟಿಗೂ ವಹಿವಾಟನ್ನು 100 ಕೋಟಿಗೆ ಹೆಚ್ಚಿಸಲಾಗಿದೆ. ಭಾರತ ಸರ್ಕಾರ 2020 ಜೂನ್ 1ರಂದು ಎಂ.ಎಸ್.ಎಂ.ಇಗಳ ಮೇಲ್ಮುಖ ಪರಿಷ್ಕರಣೆಗೆ ಸಮ್ಮತಿಸಿದೆ. ಮಧ್ಯಮ ಉದ್ದಿಮೆಗಳು ಈಗ 50 ಕೂಡಿ ಹೂಡಿಕೆ ಮತ್ತು 250 ಕೋಟಿ ವಹಿವಾಟು ಮಾಡಬಹುದು.

ವಿವರಗಳಿಗೆ: https://pib.gov.in/PressReleseDetail.aspx?PRID=1628925

2020 ಏಪ್ರಿಲ್ 1ರಿಂದ ಇಪಿಎಫ್. 52.62 ಲಕ್ಷ ವಂತಿಗೆದಾರರ ಕೆವೈಸಿ ನವೀಕರಿಸಿದೆ

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಿರ್ಣಾಯಕವಾಗಿರುವ ಆನ್‌ ಲೈನ್ ಸೇವೆಗಳ ಲಭ್ಯತೆ ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು, 2020 ಮತ್ತು ಏಪ್ರಿಲ್ ತಿಂಗಳಲ್ಲಿ ತನ್ನ 52.62 ಲಕ್ಷ ಚಂದಾದಾರರಿಗೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ದತ್ತಾಂಶವನ್ನು ಇಪಿಎಫ್‌ಒ ನವೀಕರಿಸಿದೆ. ಇದರಲ್ಲಿ 39.97 ಲಕ್ಷ ವಂತಿಕೆದಾರರ ಆಧಾರ್ ಜೋಡಣೆ, 9.87 ಲಕ್ಷ ವಂತಿಕೆದಾರರ ಮೊಬೈಲ್ ಜೋಡಣೆ (ಯುಓಎನ್ ಆಕ್ಟಿವೇಷನ್) ಮತ್ತು 11.11 ಲಕ್ಷ ವಂತಿಕೆದಾರರ ಬ್ಯಾಂಕ್ ಖಾತೆ ಜೋಡಣೆಯೂ ಸೇರಿದೆ. ಕೆವೈಸಿ ಒಂದು ಬಾರಿಯ ಪ್ರಕ್ರಿಯೆಯಾಗಿದ್ದು ಇದು ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್)ಯನ್ನು ಕೆವೈಸಿ ವಿವರಗಳೊಂದಿಗೆ ಚಂದಾದಾರರ ಗುರುತು ಪರಿಶೀಲನೆಗೆ ನೆರವಾಗಲಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1628922

ಚಲನಚಿತ್ರ ನಿರ್ಮಾಪಕರ ಸಂಘ, ಸಿನಿಮಾ ಪ್ರದರ್ಶಕರು ಮತ್ತು ಚಲನಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವರು

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಚಲನಚಿತ್ರ ನಿರ್ಮಾಪಕರ ಸಂಘ, ಚಿತ್ರ ಪ್ರದರ್ಶಕರು ಮತ್ತು ಚಲನಚಿತ್ರೋದ್ಯಮ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಕೋವಿಡ್ 19 ಹಿನ್ನೆಲೆಯಲ್ಲಿ ಉದ್ಯಮ ಎದುರಿಸುತ್ತಿರುವ ಸಮಸ್ಯೆ ಕುರಿತಂತೆ ಚರ್ಚಿಸಲು ಸಚಿವರು ಸಭೆ ಕರೆದಿದ್ದರು, ಈ ಪಕ್ಷಕಾರರು ತಮ್ಮ ಮನವಿಯನ್ನು ಸಚಿವರಿಗೆ ರವಾನಿಸಿದ್ದರು. ಚಿತ್ರ ನಿರ್ಮಾಣ ಸಂಬಂಧಿತ ಚಟುವಟಿಕೆ ಪುರಾನಂಭಿಸುವ ವಿಷಯ ಕುರಿತಂತೆ ಎಸ್.ಓ.ಪಿಯನ್ನು ಸರ್ಕಾರ ಹೊರಡಿಸಲಿದೆ ಎಂದರು. ಚಲನಚಿತ್ರ ಮಂದಿರಗಳನ್ನು ತೆರೆಯುವ ಬೇಡಿಕೆಗೆ ಸಂಬಂಧಿಸಿದಂತೆ ಜೂನ್ ತಿಂಗಳಿನಲ್ಲಿ ಕೋವಿಡ್ 19 ಸಾಂಕ್ರಾಮಿಕದ ಪರಿಸ್ಥಿತಿಯನ್ನು ಅವಲೋಕಿಸಿದ ತರುವಾಯ ಪರಿಗಣಿಸುವುದಾಗಿ ಪ್ರತಿನಿಧಿಗಳಿಗೆ ಸಚಿವರು ತಿಳಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1628754

ಮೇಕ್ ಇನ್ ಇಂಡಿಯಾಕ್ಕೆ ದೊಡ್ಡ ಪ್ರೋತ್ಸಾಹ; ಓಎಫ್.ಬಿ.ಗೆ 156 ಮೇಲ್ದರ್ಜೆಗೇರಿಸಲಾದ ಬಿಎಂಪಿ ಕಾಲಾಳು ಪಡೆ ಯುದ್ಧ ವಾಹನಗಳ ಪೂರೈಕೆಗಾಗಿ 1,094 ಕೋಟಿ ರೂ. ಬೇಡಿಕೆ ಸಲ್ಲಿಸಿದ ಎಂಓಡಿ

ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ದೊಡ್ಡ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ರಕ್ಷಣಾ ಸಚಿವಾಲಯ (ಎಂ.ಓ.ಡಿ.)ದ ಸ್ವಾಧೀನ ಘಟಕ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರ ಅನುಮೋದನೆಯೊಂದಿಗೆ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಓಎಫ್.ಬಿ)ಗೆ 156 ಬಿಎಂಪಿ 2/2ಕೆ ಕಾಲಾಳುಪಡೆಯ ಮೇಲ್ದರ್ಜೆಗೇರಿಸಲಾದ ಸ್ವರೂಪದ ಯುದ್ಧ ವಾಹನ (ಐವಿಸಿ)ಗಳನ್ನು ಭಾರತೀಯ ಸೇನೆಯ ಯಾಂತ್ರಿಕ ಪಡೆಯ ಬಳಕೆಗೆ ಒದಗಿಸಲು ಬೇಡಿಕೆ ಸಲ್ಲಿಸಿದೆ. ಈ ಬೇಡಿಕೆ ಅಡಿಯಲ್ಲಿ ಐಸಿವಿಗಳನ್ನು ತೆಲಂಗಾಣದ ಮೇಡಕ್ ಆರ್ಡಿನೆನ್ಸ್ ಫ್ಯಾಕ್ಟರಿ ಅಂದಾಜು 1094 ಕೋಟಿ ರೂ. ವೆಚ್ಚದಲ್ಲಿ ಉತ್ಪಾದಿಸಲಿದೆ,

ವಿವರಗಳಿಗೆ: https://pib.gov.in/PressReleseDetail.aspx?PRID=1628743

ಭಾರತೀಯ ರೈಲ್ವೆ 2020 ಜೂನ್ 3 (0900ಗಂಟೆ)ವರೆಗೆ 4197 ಶ್ರಮಿಕ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡಿದ್ದು, 58 ಲಕ್ಷಕ್ಕೂಹೆಚ್ಚು ಪ್ರಯಾಣಿಕರನ್ನು ತಮ್ಮ ತವರು ರಾಜ್ಯಕ್ಕೆ ತಲುಪಿಸಿದೆ

2020ರ ಜೂನ್ 3ರವರೆಗೆ ವಿವಿಧ ರಾಜ್ಯಗಳಿಂದ ದೇಶದಾದ್ಯಂತ ಒಟ್ಟು 4197 ಶ್ರಮಿಕ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡಲಾಗಿದೆ. 81 ರೈಲುಗಳು ಇಂದು ಬೆಳಗ್ಗೆ 9ಗಂಟೆಯವರೆಗೆ ಸಂಚರಿಸಿವೆ. ಈವರೆಗೆ 58 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು 34 ದಿನಗಳ ಕಾಲ ಶ್ರಮಿಕ ವಿಶೇಷ ರೈಲುಗಳ ಮೂಲಕ ಸಾಗಿಸಲಾಗಿದೆ. ಈ 4197 ರೈಲುಗಳು ವಿವಿಧ ರೈಲುಗಳಿಂದ ಸಂಚರಿಸಿವೆ. ಪ್ರಥಮ ಐದು ರಾಜ್ಯ /ಕೇಂದ್ರಾಡಳಿತ ಪ್ರದೇಶಗಳಲ್ಲಿ ಗರಿಷ್ಠ ರೈಲುಗಳು ಸಂಚರಿಸಿದ್ದು ಗುಜರಾತ್ (1026 ರೈಲುಗಳು), ಮಹಾರಾಷ್ಟ್ರ (802 ರೈಲುಗಳು), ಪಂಜಾಬ್ (416 ರೈಲುಗಳು), ಉತ್ತರ ಪ್ರದೇಶ (294 ರೈಲುಗಳು) ಮತ್ತು ಬಿಹಾರ (294 ರೈಲುಗಳು). ಶ್ರಮಿಕ ವಿಶೇಷ ರೈಲುಗಳ ಜೊತೆಗೆ ರೈಲ್ವೆ 15 ಜೋಡಿ ವಿಶೇಷ ರಾಜಧಾನಿ ರೀತಿಯ ರೈಲುಗಳನ್ನು ದೆಹಲಿ ಸಂಪರ್ಕಿಸುವ ರೀತಿ ಜೂನ್ 1ರಿಂದ 200ಕ್ಕೂ ಹೆಚ್ಚು ಬಾರಿ ಓಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1629043

ಆಯುಷ್ ಸಚಿವಾಲಯದ ಅಡಿಯಲ್ಲಿ ಅಧೀನ ಕಚೇರಿಯಾಗಿ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿಗಾಗಿ ಫಾರ್ಮಾಕೊಪೋಯಿಯಾ ಆಯೋಗ ಸ್ಥಾಪಿಸಲು ಸಂಪುಟದ ಅನುಮೋದನೆ

ಕೇಂದ್ರ ಸಚಿವ ಸಂಪುಟವು ಎರಡು ಕೇಂದ್ರೀಯ ಪ್ರಯೋಗಾಲಯಗಳಾದ ಭಾರತೀಯ ವೈದ್ಯಕೀಯ ಪದ್ಧತಿಯ ಫಾರ್ಮಾಕೊಪೋಯಿಯಾ ಪ್ರಯೋಗಾಲಯ ಮತ್ತು ಹೋಮಿಯೋಪತಿ ಫಾರ್ಮಾಕೊಪೋಯಿಯಾ ಪ್ರಯೋಗಾಲಯಗಳನ್ನು ವಿಲೀನ ಮಾಡಿ ಭಾರತೀಯ ವೈದ್ಯಕೀಯ ಪದ್ಧತಿ ಮತ್ತು ಹೋಮಿಯೋಪತಿ (ಪಿಸಿಐಎಂ ಮತ್ತು ಎಚ್) ಗಾಗಿ ಆಯುಷ್ ಸಚಿವಾಲಯದ ಅಡಿಯಲ್ಲಿ ಅಧೀನ ಕಚೇರಿಯಾಗಿ ಫಾರ್ಮಾಕೊಪೋಯಿಯಾ ಆಯೋಗವನ್ನು ಪುನರ್ ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ. ಪ್ರಸ್ತುತ ಪಿಸಿಐಎಂಮತ್ತ ಎಚ್ ಒಂದು ಸ್ವಾಯತ್ತ ಕಾಯವಾಗಿದೆ. ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧಿಗಳ ಪ್ರಮಾಣೀಕರಣ ಫಲಿತಾಂಶಗಳನ್ನು ಅವುಗಳ ಪರಿಣಾಮಕಾರಿ ನಿಯಂತ್ರಣ ಮತ್ತು ಗುಣಮಟ್ಟದ ನಿಯಂತ್ರಣದ ನಿಟ್ಟಿನಲ್ಲಿ ಹೆಚ್ಚಿಸಲು ಮೂರು ಸಂಸ್ಥೆಗಳ ಮೂಲಸೌಕರ್ಯ ಸೌಲಭ್ಯಗಳು, ತಾಂತ್ರಿಕ ಮಾನವಶಕ್ತಿ ಮತ್ತು ಆರ್ಥಿಕ ಸಂಪನ್ಮೂಲಗಳ ಪೂರ್ಣ ಬಳಕೆಯನ್ನು ಉತ್ತಮಗೊಳಿಸುವ ಉದ್ದೇಶವನ್ನು ವಿಲೀನ ಹೊಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1629039

ಕೇಂದ್ರೀಯ ಉದ್ಯೋಗ ಖಾತ್ರಿ ಮಂಡಳಿಯ 21ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ನರೇಂದ್ರ ಸಿಂಗ್ ಥೋಮರ್

ಕೇಂದ್ರ ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರ ಅಧ್ಯಕ್ಷತೆಯಲ್ಲಿ 02.06.2020 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರೀಯ ಉದ್ಯೋಗ ಖಾತ್ರಿ ಮಂಡಳಿಯ 21ನೇ ಸಭೆ ನಡೆಯಿತು. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸಾಧಿಸುವ ಉದ್ದೇಶದಿಂದ, ಮಹಾತ್ಮ ಗಾಂಧಿ ನರೇಗಾ ಕಾರ್ಮಿಕರ ಬ್ಯಾಂಕ್ ಖಾತೆಯಲ್ಲಿ ಶೇ.100 ವೇತನವನ್ನು ಪಾವತಿಸಲು ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ಕೃತಿಗಳ ಸಾಮಾಜಿಕ ಲೆಕ್ಕಪರಿಶೋಧನೆಗೆ ಒತ್ತು ನೀಡುತ್ತಿದೆ. 2020-21ನೇ ಹಣಕಾಸು ಸಾಲಿಗೆ ರೂ.61,500 ಕೋಟಿಯನ್ನು ಹಂಚಿಕೆ ಮಾಡಲಾಗಿದ್ದು ಇದು ಸಾರ್ವಕಾಲಿಕ ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ ರೂ.40,000 ಕೋಟಿಯನ್ನು ಆತ್ಮ ನಿರ್ಭರ ಭಾರತ ಅಭಿಯಾನದಡಿ ಕೋವಿಡ್ 19ರ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ಇರುವ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ನೀಡಲಾಗಿದೆ. ಈ ಕಾರ್ಯಕ್ರಮದಡಿ 28,000 ಕೋಟಿ ರೂ.ಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628782

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ಅಂತಾ ರಾಜ್ಯ ಗಡಿಗಳಲ್ಲಿ ಯಾದೃಚ್ಛಿಕ ತಪಾಸಣೆ ಮುಂದುವರೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಎಲ್ಲಾ ಸಂದರ್ಶಕರಿಗೆ ಆರೋಗ್ಯ ಸೇತು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಮತ್ತು ಸ್ವಯಂ-ಮೇಲ್ವಿಚಾರಣೆ ಮಾಡಲು ಸೂಚಿಸಬೇಕು. ಒಪಿಡಿ ಸೌಲಭ್ಯಗಳನ್ನು ಹೆಚ್ಚಿಸಲು ಮೂರು ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ವಾಹಕರು ಸಲಹೆ ನೀಡಿದರು, ಇದರಿಂದಾಗಿ ಕಳೆದ ಹಲವಾರು ವಾರಗಳಿಂದ ಕಾಯುತ್ತಿರುವ ರೋಗಿಗಳು ತಮ್ಮ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆಯುತ್ತಿದ್ದಾರೆ.
  • ಪಂಜಾಬ್: ಕೋವಿಡ್ ಲಾಕ್ಡೌನ್ನಿಂದ ಉಂಟಾಗಿರುವ ಆದಾಯದ ಅಂತರದ ನಡುವೆಯೂ ಮನೆಗಳ ವಿದ್ಯುತ್ ದರವನ್ನು ಕಡಿಮೆ ಮಾಡುವ ಪಂಜಾಬ್ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ಧಾರವನ್ನು ಮುಖ್ಯಮಂತ್ರಿ ಸ್ವಾಗತಿಸಿದ್ದಾರೆ ಮತ್ತು ದರಗಳು ಮತ್ತಷ್ಟು ತರ್ಕಬದ್ಧವಾಗಲಿದ್ದು, ಜನರ ಹಿತದೃಷ್ಟಿಯಿಂದ, ಮುಂದುವರಿಯುತ್ತವೆ ಎಂದು ಆಶಿಸಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕ ಮತ್ತು ರಾಜ್ಯದಲ್ಲಿ ದೀರ್ಘಕಾಲದ ಲಾಕ್ಡೌನ್ನಿಂದಾಗಿ ಭಾರಿ ಆದಾಯ ನಷ್ಟವಾಗಿದ್ದು, ಜೂನ್ 1 ರಿಂದ ಜಾರಿಗೆ ಬರುವಂತೆ ಮದ್ಯದ ಮೇಲೆ ಕೋವಿಡ್ ಸೆಸ್ ಹೇರಲು ಪಂಜಾಬ್ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಕ್ರಮವು ರಾಜ್ಯಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ 145 ಕೋಟಿ ರೂ ಹೆಚ್ಚುವರಿ ಆದಾಯವನ್ನು ತರಲು ಸಹಾಯ ಮಾಡುತ್ತದೆ.
  • ಹರಿಯಾಣ: ಸಾರ್ವಜನಿಕ ಸಾರಿಗೆಯ ಅನುಕೂಲಕ್ಕಾಗಿ ಹರಿಯಾಣ ಸರ್ಕಾರ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇಟರ್ಸ್, ಮ್ಯಾಕ್ಸಿ ಕ್ಯಾಬ್ ಮತ್ತು ಆಟೋ ರಿಕ್ಷಾ ಚಾಲಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಚಾಲಕನ ಹೊರತಾಗಿ ಟ್ಯಾಕ್ಸಿ ಮತ್ತು ಕ್ಯಾಬ್ ಅಗ್ರಿಗೇಟರ್ ನಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಕರೊಂದಿಗೆ ಓಡಿಸಲು ಅನುಮತಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಅಂದರೆ ವಾಹನದಲ್ಲಿ ಗರಿಷ್ಠ ಮೂರು ವ್ಯಕ್ತಿಗಳು ಇರುತ್ತಾರೆ. ಮ್ಯಾಕ್ಸಿ ಕ್ಯಾಬ್ಗಳು ತಮ್ಮ ಆಸನ ಸಾಮರ್ಥ್ಯದ ಗರಿಷ್ಠ ಅರ್ಧದಷ್ಟು ಪ್ರಯಾಣಿಕರೊಂದಿಗೆ ಚಲಿಸಬಹುದು. ಆಟೋ ರಿಕ್ಷಾಗಳು ಮತ್ತು -ರಿಕ್ಷಾಗಳಿಗೆ ಚಾಲಕನ ಜೊತೆಗೆ ಇಬ್ಬರು ವ್ಯಕ್ತಿಗಳೊಂದಿಗೆ ಓಡಾಡಲು ಅವಕಾಶವಿದೆ. ಅಂತೆಯೇ, ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಹಿಂಬದಿ ಸವಾರರಿಗೆ ಅನುಮತಿಸಲಾಗುವುದು ಮತ್ತು ಇಬ್ಬರೂ ಹೆಲ್ಮೆಟ್, ಮುಖವಾಡಗಳು ಮತ್ತು ಕೈಗವಸುಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಕೈಯಿಂದ ಎಳೆಯುವ ರಿಕ್ಷಾಗಳು ಎರಡು ಪ್ರಯಾಣಿಕರಿಗಿಂತ ಹೆಚ್ಚಿನವರನ್ನು ಕರೆದೊಯ್ಯುವಂತಿಲ್ಲ. ಎಲ್ಲಾ ಚಾಲಕರು ಮತ್ತು ಪ್ರಯಾಣಿಕರು ಎಲ್ಲಾ ಸಮಯದಲ್ಲೂ ಮುಖವಾಡ ಅಥವಾ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಳ್ಳಬೇಕು. ಮೋಟಾರು ವಾಹನಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ಚಾಲಕರು ಮತ್ತು ಪ್ರಯಾಣಿಕರು ನಿಯಮಿತವಾಗಿ ಸ್ಯಾನಿಟೈಜರ್ಗಳನ್ನು ಬಳಸಬೇಕು. ಸಾಮಾಜಿಕ ಅಂತರವನ್ನು ಎಲ್ಲಾ ವ್ಯಕ್ತಿಗಳು ಎಲ್ಲಾ ಸಮಯದಲ್ಲೂ ಕಾಯ್ದೊಕೊಳ್ಳಬೇಕು.
  • ಅರುಣಾಚಲ ಪ್ರದೇಶ: ಪಿಎಂಕೆಎಸ್ವೈ ಅಡಿಯಲ್ಲಿ ನೀಡಲಾಗುವ 2000 ರೂ ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 1000 ರೂ.ಗಳನ್ನು 67,998 ರೈತರು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಒಟ್ಟು ಸಕ್ರಿಯ ಪ್ರಕರಣಗಳು 28.
  • ಅಸ್ಸಾಂ: ಅಸ್ಸಾಂನಲ್ಲಿ 51 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿವೆ. ಧುಬ್ರಿಯಿಂದ 28, ದಾರಂಗ್ನಿಂದ 13, ಕರೀಮ್ಗಂಜ್ನಿಂದ 5, ಸೋನಿತ್ಪುರದಿಂದ 3 ಮತ್ತು ಲಖಿಂಪುರದಿಂದ 2 ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1672 ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.
  • ಮಣಿಪುರ: 13 ರೋಗಿಗಳ ಬಿಡುಗಡೆಯೊಂದಿಗೆ ಮಣಿಪುರದಲ್ಲಿ ಚೇತರಿಕೆ ಪ್ರಮಾಣ ಶೇ.25 ಕ್ಕೆ ಸುಧಾರಿಸಿದೆ. 76 ಸಕ್ರಿಯ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು 102 ಸೋಂಕಿತ ಪ್ರಕರಣ ವರದಿಯಾಗಿವೆ.
  • ಮೇಘಾಲಯ: ಮೇ 19 ರಂದು ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ತಮಿಳುನಾಡಿನ ಹಿಂದಿರುಗಿದ ಒಬ್ಬರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿತ್ತು, ಈಗ ಅವರು ಚೇತರಿಸಿಕೊಂಡಿದ್ದಾರೆ ಮತ್ತು ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ವರದಿ ಬಂದಿದೆ. ಕ್ವಾರಂಟೈನಲ್ಲಿ ಇಡಲಾಗಿದೆ. ಸಕ್ರಿಯ ಪ್ರಕರಣಗಳು 16 ಮತ್ತು 13 ಮಂದಿ ಚೇತರಿಸಿಕೊಂಡಿದ್ದಾರೆ.
  • ಮಿಜೋರಾಂ: 2020 ಮೇ 31 ರಂದು ಹೊರಡಿಸಲಾದ ಲಾಕ್ಡೌನ್ 5.0 ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ಕೋವಿಡ್-19 13 ಹೊಸ ಪ್ರಕರಣಗಳು ಇತ್ತೀಚೆಗೆ ರಾಜ್ಯದಲ್ಲಿ ಪತ್ತೆಯಾಗಿವೆ.
  • ನಾಗಾಲ್ಯಾಂಡ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಆರೋಗ್ಯ ವೃತ್ತಿಪರರ ಕೊರತೆಯನ್ನು ನೀಗಿಸಲು 27 ವೈದ್ಯರನ್ನು ನೇಮಿಸಲಾಗಿದೆ. ಸಾಮಾನ್ಯ ವ್ಯವಹಾರ ಚಟುವಟಿಕೆಗಳ ಮೇಲೆ ನಿರ್ಬಂಧ ತೆಗೆದು ಹಾಕುವಂತೆ ದಿಮಾಪುರ ವ್ಯಾಪಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
  • ಸಿಕ್ಕಿಂ: ಕೋವಿಡ್-19 ಲಾಕ್ಡೌನ್ನಿಂದಾಗಿ ರಾಜ್ಯಕ್ಕೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 500 ಕೋಟಿ ರೂ. ನಷ್ಟವಾಗಿದೆ ಎಂದು ಸಿಕ್ಕಿಂ ಆರ್ಥಿಕ ಪುನರುಜ್ಜೀವನ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.
  • ತ್ರಿಪುರ: ಇಂದು ಪರೀಕ್ಷಿಸಿದ 821 ಮಾದರಿಗಳಲ್ಲಿ 49 ಜನರಲ್ಲಿ ಕೋವಿಡ್-19 ಸೋಂಕು ಕಂಡುಬಂದಿದೆ. ಅವುಗಳಲ್ಲಿ ಹೆಚ್ಚಿನವು ಪ್ರಯಾಣದ ಇತಿಹಾಸ ಮತ್ತು ಸಂಪರ್ಕಗಳನ್ನು ಹೊಂದಿವೆ.
  • ಕೇರಳ: ಕ್ರಿಶ್ಚಿಯನ್ ಪಾದ್ರಿಯ ಸಾವಿನ ನಂತರ ರಾಜಧಾನಿಯಲ್ಲಿ ಸುಮಾರು 15 ಆರೋಗ್ಯ ಸಿಬ್ಬಂದಿಯನ್ನು ನಿಗಾಕ್ಕೆ ಒಳಪಡಿಸಲಾಗಿದೆ. ಕ್ವಾರೆಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದುಬೈನಿಂದ ನೆಡುಂಬಸ್ಸೆರಿ ವಿಮಾನ ನಿಲ್ದಾಣವನ್ನು ತಲುಪಿದ ಏರ್ ಇಂಡಿಯಾದ ಮಹಿಳಾ ಪೈಲಟ್ ವಿರುದ್ಧ ಕೊಚ್ಚಿಯಲ್ಲಿ ದೂರು ದಾಖಲಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳ ಟ್ರಯಲ್ ರನ್ ಅನ್ನು ಒಂದು ವಾರ ವಿಸ್ತರಿಸಲು ರಾಜ್ಯ ಸಂಪುಟ ನಿರ್ಧರಿಸಿದೆ. ನೆರೆಯ ಜಿಲ್ಲೆಗಳಿಗೆ ಬಸ್ ಸೇವೆ ಇಂದು ಪ್ರಾರಂಭವಾಯಿತು. ನಾಳೆಯಿಂದ ಗುರುವಾಯೂರ್ ದೇವಸ್ಥಾನದಲ್ಲಿ ಮದುವೆಗೆ ಅನುಮತಿ ನೀಡಲಾಗುವುದು. ಕೊವಿಡ್ನಿಂದ ಕೊಲ್ಲಿಯಲ್ಲಿ ಏಳು ಕೇರಳಿಗರು ಸಾವಿಗೀಡಾಗಿದ್ದು, ಒಟ್ಟು 210ಕ್ಕೆ ಏರಿದೆ. ನವದೆಹಲಿಯಲ್ಲಿ ಒಬ್ಬ ಮಲಯಾಳಿ ದಾದಿ ಇಂದು ನಿಧನರಾದರು. ನಿನ್ನೆ ರಾಜ್ಯದಲ್ಲಿ 86 ಜನರಲ್ಲಿ ಸೋಂಕು ದೃಢಪಟ್ಟಿತ್ತು. 774 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ.
  • ತಮಿಳುನಾಡು: ಪುದುಚೇರಿಯ ಜಿಪ್ಮರ್ನಲ್ಲಿ ಆರು ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.; ಒಟ್ಟು ಪ್ರಕರಣಗಳು ಯುಟಿಯಲ್ಲಿ 90 ಮುಟ್ಟಿವೆ. ಐಎನ್‌.ಎಸ್ ಜಲಶ್ವಾ ಶ್ರೀಲಂಕಾದಲ್ಲಿ ಸಿಕ್ಕಿಬಿದ್ದ 686 ಜನರನ್ನು 'ಆಪರೇಷನ್ ಸಮುದ್ರ ಸೇತು' ಅಡಿಯಲ್ಲಿ ವಾಪಸ್ ಕರೆತಂದಿದೆ; ಹಡಗು ಇಂದು ಬೆಳಿಗ್ಗೆ ತೂತುಕುಡಿಯ ವಿ ಚಿದಂಬರನಾರ್ ಬಂದರಿಗೆ ಬಂದಿತು. ಉತ್ತಮ ಬೆಲೆ ನೀಡುವವರಿಗೆ ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯದಾದ್ಯಂತ ಮಾರಾಟ ಮಾಡಲು ಅವಕಾಶ ನೀಡುವ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ನಿನ್ನೆ 1,091 ಹೊಸ ಪ್ರಕರಣಗಳೊಂದಿಗೆ ಕೋವಿಡ್ ಸಂಖ್ಯೆ ತಮಿಳುನಾಡಿನಲ್ಲಿ ಹೆಚ್ಚಾಗಿದೆ. ಚೆನ್ನೈನಿಂದ 806 ಪ್ರಕರಣಗಳು. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು: 24586, ಸಕ್ರಿಯ ಪ್ರಕರಣಗಳು: 10680, ಸಾವುಗಳು: 197, ಬಿಡುಗಡೆ: 13,706. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 7880.
  • ಕರ್ನಾಟಕ: ಉತ್ತರ ಕನ್ನಡ ಕರಾವಳಿಯಲ್ಲಿ ನಿಸರ್ಗಾ ಚಂಡಮಾರುತ ಭೂಮಿಕಪ್ಪಳಿಸಿದೆ.; ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಹೆಚ್ಚಿನ ಕಾಗದದ ಕಡತಗಳಿಲ್ಲ; ಎಲ್ಲಾ ಕಡತಗಳನ್ನು -ಆಫೀಸ್ ಸಾಫ್ಟ್ವೇರ್ನಲ್ಲಿಡಲು ಅನುಮತಿ ನೀಡಲಾಗಿದೆ. ಜುಲೈ 1 ರಿಂದ ರಾಜ್ಯ ಸರ್ಕಾರ ಶಾಲೆಗಳನ್ನು ಪುನಃ ತೆರೆಯಲಿದೆ; ಪ್ರವೇಶ ಪ್ರಕ್ರಿಯೆ ಜೂನ್ 8 ರೊಳಗೆ ಪ್ರಾರಂಭವಾಗಬಹುದು. ರಾಜ್ಯ ಪಿಯುಸಿ ಪರೀಕ್ಷೆ: ಪರಿಷ್ಕೃತ ಪರೀಕ್ಷಾ ಕೇಂದ್ರಗಳ ತಾತ್ಕಾಲಿಕ ಪಟ್ಟಿ ಮತ್ತು ವಿದ್ಯಾರ್ಥಿಗಳ ವಿವರಗಳನ್ನು ಬಹಿರಂಗ ಮಾಡಲಾಗಿದೆ. ಮನೆ ಕ್ಯಾರೆಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಎಫ್‌.ಐಆರ್ ದಾಖಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ. 388 ಹೊಸ ಪ್ರಕರಣಗಳು ವರದಿಯಾಗಿದ್ದು, 367 ಪ್ರಕರಣಗಳು ಅಂತಾರಾಜ್ಯ ಪ್ರಕರಣಗಳಾಗಿವೆ. ಒಟ್ಟು ಸೋಂಕಿನ ಪ್ರಕರಣಗಳು: 3796, ಸಕ್ರಿಯ ಪ್ರಕರಣಗಳು: 2339, ಸಾವುಗಳು: 52, ಗುಣವಾದವರು: 1403.
  • ಆಂಧ್ರಪ್ರದೇಶ: ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್ ನಿಗದಿತ ಸಮಯ ನಾಲ್ಕು ವಾರಗಳಲ್ಲಿ ಸರ್ಕಾರಿ ಕಟ್ಟಡಗಳ ಮೇಲಿನ ಪಕ್ಷದ ಬಣ್ಣಗಳನ್ನು ತೆಗೆಯುವಂತೆ ಆದೇಶಿಸಿದೆ ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ. ಭೂಧಾರ್ ಸಂಖ್ಯೆಯನ್ನು ನೀಡಲು ಭೂಮಿಯನ್ನು ಮರುಸರ್ವೇ ಮಾಡಲು ರಾಜ್ಯವು ಅನುಮತಿ ನೀಡುತ್ತದೆ;. ಕಳೆದ 24 ಗಂಟೆಗಳಲ್ಲಿ 8,066 ಮಾದರಿಗಳನ್ನು ಪರೀಕ್ಷಿಸಿದ ನಂತರ 79 ಹೊಸ ಪ್ರಕರಣಗಳು ವರದಿಯಾಗಿದ್ದು, 35 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ನಾಲ್ಕು ಸಾವುಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು: 3279. ಸಕ್ರಿಯ: 967, ಚೇತರಿಸಿಕೊಂಡವರು: 2244, ಸಾವುಗಳು: 68. ಸೋಂಕು ದೃಢಪಟ್ಟ ವಲಸಿಗರ ಸಂಖ್ಯೆ 573 ಆಗಿದ್ದು, ಅವರಲ್ಲಿ 362 ಮಂದಿಯಲ್ಲಿ ಸೋಂಕು ಸಕ್ರಿಯರಾಗಿದೆ. ವಿದೇಶದಿಂದ ಬಂದ 119 ಪ್ರಕರಣಗಳಲ್ಲಿ 118 ಪ್ರಕರಣಗಳು ಸಕ್ರಿಯವಾಗಿವೆ.
  • ತೆಲಂಗಾಣ: ಅಲ್ಪ ತೀವ್ರತೆಯ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡಬಹುದು ಎಂದು ಐಸಿಎಂಆರ್ ರಾಜ್ಯಗಳಿಗೆ ಸೂಚನೆ ನೀಡಿದ ನಂತರ, ಆರೋಗ್ಯ ಇಲಾಖೆ ಒಂದೇ ಕುಟುಂಬದ ಸದಸ್ಯರು ಸೋಂಕಿಗೆ ಒಳಗಾದರೆ ಅವರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದೆ. ವಲಸೆ ಕಾರ್ಮಿಕರ ಸಮಸ್ಯೆಯನ್ನು ಎದುರಿಸಲು ನೀತಿಯನ್ನು ರೂಪಿಸುವಂತೆ ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಉಸ್ಮಾನಿಯಾ ವೈದ್ಯಕೀಯ ಕಾಲೇಜಿನ ಇನ್ನೂ ಐದು ಪಿಜಿ ವೈದ್ಯರು ಕೋವಿಡ್- 19 ಸೋಂಕಿತರಾಗಿದ್ದಾರೆ; ವೈದ್ಯಕೀಯ ಕಾಲೇಜಿನಲ್ಲಿ ಈಗ ಒಟ್ಟು 12 ಪ್ರಕರಣವಾಗಿದೆ. ನಿನ್ನೆ ರಾಜ್ಯದಲ್ಲಿ 99 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಅವುಗಳಲ್ಲಿ 87 ಪ್ರಕರಣಗಳು ಸ್ಥಳೀಯ ಪ್ರಸರಣವಾಗಿದ್ದರೆ ಇತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಲ್ಲಿ 12 ಪ್ರಕರಣಗಳು ಇವೆ. ಜೂನ್ 2 ಹೊತ್ತಿಗೆ ತೆಲಂಗಾಣದಲ್ಲಿ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 2,891 ಆಗಿದ್ದು, ಅದರಲ್ಲಿ 446 ವಲಸಿಗರು ಮತ್ತು ವಿದೇಶದಿಂದ ಮರಳಿದವರು.
  • ಮಹಾರಾಷ್ಟ್ರ: 2287 ಹೊಸ ಕೋವಿಡ್-19 ಸೋಂಕುಗಳು ವರದಿಯಾಗಿವೆ, ಇದು ರಾಜ್ಯದ ಒಟ್ಟು ಸೋಂಕಿತ ಪ್ರಕರಣಗಳನ್ನು 72,300 ಕ್ಕೆ ಹೆಚ್ಚಿಸಿದೆ, ಅದರಲ್ಲಿ 38,493 ಸಕ್ರಿಯ ಪ್ರಕರಣಗಳಾಗಿವೆ. ಹಾಟ್ಸ್ಪಾಟ್ ಮುಂಬೈನಲ್ಲಿ 1109 ಹೊಸ ಕೋವಿಡ್ -19 ಸೋಂಕು ಮಂಗಳವಾರ ವರದಿಯಾಗಿದೆ.
  • ಗುಜರಾತ್: ಮಂಗಳವಾರ 415 ಹೊಸ ಕೋವಿಡ್-19 ಸೋಂಕು ವರದಿಯಾಗಿದ್ದು, ಕೊರೊನಾವೈರಸ್ ಒಟ್ಟು ರೋಗಿಗಳ ಸಂಖ್ಯೆ 17,632 ಆಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 1092 ಕ್ಕೆ ಏರಿದ್ದು, ಮಂಗಳವಾರ 29 ರೋಗಿಗಳು ವೈರಸ್ಗೆ ಬಲಿಯಾಗಿದ್ದಾರೆ. ಪೂರ್ಣ ಚೇತರಿಸಿಕೊಂಡ ನಂತರ 1,014 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
  • ರಾಜಸ್ಥಾನ: ಇಂದು ಬೆಳಿಗ್ಗೆ ತನಕ 102 ಹೊಸ ಕೋವಿಡ್ -19 ಸೋಂಕುಗಳು ವರದಿಯಾಗಿದ್ದು, ರಾಜ್ಯದ ಕೊರೊನಾವೈರಸ್ ದೃಢಪಟ್ಟ ಪ್ರಕರಣಗಳು ಈಗ 9475 ಆಗಿದೆ, ಪೈಕಿ 6506 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 5977 ರೋಗಿಗಳನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಜೈಪುರದಲ್ಲಿ ಇಂದು ಹೆಚ್ಚಿನ ಹೊಸ ಸೋಂಕುಗಳು ವರದಿಯಾಗಿವೆ.
  • ಮಧ್ಯಪ್ರದೇಶ: ಕೋವಿಡ್-19 ಸೋಂಕಿನ 137 ಹೊಸ ಪ್ರಕರಣಗಳು ವರದಿಯಾಗಿವೆ, ಇದು ರಾಜ್ಯದ ಕೊರೊನಾವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆಯನ್ನು 8420 ಕ್ಕೆ ಹೆಚ್ಚಿಸಿದೆ, ಅದರಲ್ಲಿ 2835 ಸಕ್ರಿಯ ಪ್ರಕರಣಗಳಾಗಿವೆ. ಹೆಚ್ಚಿನ ಹೊಸ ಸೋಂಕುಗಳು ಇಂದೋರ್ನಿಂದ ವರದಿಯಾಗಿವೆ, ನಂತರದ ಸ್ಥಾನ ನೀಮುಚ್ ಜಿಲ್ಲೆಯದಾಗಿದೆ. ಇಂದು ನೀಮಚ್ನಿಂದ 23, ಭೋಪಾಲ್ನಿಂದ 35 ಮತ್ತು ಜಬಲ್ಪುರದಿಂದ 6 ರೋಗಿಗಳು ಚೇತರಿಸಿಕೊಂಡಿರುವ ವರದಿಯಾಗಿದೆ.
  • ಛತ್ತೀಸಗಢ: ಇತ್ತೀಚಿನ ವರದಿ ಪ್ರಕಾರ 9 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದು ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆಯನ್ನು 564 ಕ್ಕೆ ಏರಿಸಿದೆ, ಅದರಲ್ಲಿ 433 ಸಕ್ರಿಯ ಪ್ರಕರಣಗಳಾಗಿವೆ. ಬಲೋದಾಬಜಾರ್, ಕೊರ್ಬಾ ಮತ್ತು ಬಲೋಡ್ನಿಂದ ಹೊಸ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ, ರಾಜ್ಯದಲ್ಲಿ 51,588 ಜನರನ್ನು ಮನೆ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ.
  • ಗೋವಾ: ಕೋವಿಡ್-19 ಸೋಂಕಿನ 6 ಹೊಸ ಪ್ರಕರಣಗಳು ವರದಿಯಾಗಿವೆ, ಇದು ಕೊರೊನಾವೈರಸ್ ದೃಢಪಟ್ಟ ರೋಗಿಗಳ ಸಂಖ್ಯೆಯನ್ನು 79 ಕ್ಕೆ ಹೆಚ್ಚಿಸಿದೆ, ಅದರಲ್ಲಿ 22 ಸಕ್ರಿಯ ಪ್ರಕರಣಗಳು. 13 ರೋಗಿಗಳು ಮಂಗಳವಾರ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪಿ ಐ ಬಿ ವಾಸ್ತವ ಪರಿಶೀಲನೆ

***



(Release ID: 1629292) Visitor Counter : 337