ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಹೊಸ ಮಾಹಿತಿ
Posted On:
02 JUN 2020 6:23PM by PIB Bengaluru
ಕೋವಿಡ್ -19 ಹೊಸ ಮಾಹಿತಿ
ಕೋವಿಡ್-19ರಿಂದ ಒಟ್ಟು 95,526 ರೋಗಿಗಳನ್ನು ಗುಣಪಡಿಸಲಾಗಿದೆ
ಪ್ರಸ್ತುತ, 97,581 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 3708 ಕೋವಿಡ್ -19 ರೋಗಿಗಳನ್ನು ಗುಣಪಡಿಸಲಾಗಿದೆ. ಈವರೆಗೆ ಒಟ್ಟು 95,526 ರೋಗಿಗಳನ್ನು ಕೋವಿಡ್-19ರಿಂದ ಗುಣಪಡಿಸಲಾಗಿದೆ. ಕೋವಿಡ್ -19 ರೋಗಿಗಳಲ್ಲಿ ಚೇತರಿಕೆಯ ಪ್ರಮಾಣ 48.07% ಆಗಿದೆ. ಭಾರತದ ಚೇತರಿಕೆ ಪ್ರಮಾಣವು ಹೆಚ್ಚುತ್ತಲೇ ಇದೆ ಮತ್ತು ಸಾವಿನ ಪ್ರಮಾಣವು ವಿಶ್ವದ ಅತ್ಯಂತ ಕಡಿಮೆ ಪ್ರಮಾಣಗಳಲ್ಲಿ ಒಂದಾಗಿದೆ. ಇಂದಿನ ಸಾವಿನ ಪ್ರಮಾಣ 2.82% ಇದೆ.
ಭಾರತದ ಜನಸಂಖ್ಯೆ ಮತ್ತು 14 ಹೆಚ್ಚು ಪೀಡಿತ ದೇಶಗಳ ಒಟ್ಟು ಜನಸಂಖ್ಯೆಯು ಬಹುತೇಕ ಒಂದೇ ಆಗಿರುತ್ತದೆ. ಇದೇ ಸಂಖ್ಯೆಯ ಜನಸಂಖ್ಯೆಯ ಹೊರತಾಗಿಯೂ, 2020 ರ ಜೂನ್ 1 ರಂತೆ, ಆ 14 ಹೆಚ್ಚು ಪೀಡಿತ ದೇಶಗಳಲ್ಲಿನ ಒಟ್ಟು ಪ್ರಕರಣಗಳು ಭಾರತದಲ್ಲಿನ 22.5 ಪಟ್ಟು ಹೆಚ್ಚಾಗಿದೆ. ಕೋವಿಡ್-19 ಕಾರಣದಿಂದಾಗಿ ಸಂಭವಿಸಿದ ಒಟ್ಟು ಸಾವುಗಳು 14 ಹೆಚ್ಚು ಪೀಡಿತ ದೇಶಗಳಲ್ಲಿ ಭಾರತದ ಮರಣಕ್ಕಿಂತ 55.2 ಪಟ್ಟು ಹೆಚ್ಚಾಗಿದೆ.
ಈ ಸಂದರ್ಭಗಳಲ್ಲಿ, ಪ್ರಕರಣಗಳ ಸಮಯೋಚಿತ ಗುರುತಿಸುವಿಕೆ ಮತ್ತು ಕ್ಲಿನಿಕಲ್ ನಿರ್ವಹಣೆಯ ಮೂಲಕ ಸಾಧ್ಯವಾದಷ್ಟು ಸಾವುನೋವುಗಳನ್ನು ಕಡಿಮೆ ಮಾಡುವುದಕ್ಕಾಗಿ ಗಮನ ಹರಿಸಲಾಗಿದೆ. ತುಲನಾತ್ಮಕವಾಗಿ ಕಡಿಮೆ ಸಾವಿನ ಅಂಕಿಅಂಶಗಳಿಗೆ ಎರಡು ಹಂತದ ತಂತ್ರಗಳು ಕಾರಣವೆಂದು ಹೇಳಬಹುದು - ಸಮಯೋಚಿತ ಪ್ರಕರಣಗಳ ಗುರುತಿಸುವಿಕೆ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ.
ಕೋವಿಡ್-19 ರ ಕಾರಣದಿಂದಾಗಿ ಸಾವಿನ ಬಗ್ಗೆ ಲಭ್ಯವಿರುವ ದತ್ತಾಂಶವನ್ನು ವಿಶ್ಲೇಷಿಸಿದರೆ, ಭಾರತದ ಜನಸಂಖ್ಯೆಯ ಕೇವಲ 10% (60 ವರ್ಷಕ್ಕಿಂತ ಮೇಲ್ಪಟ್ಟ ಜನರು) ಭಾರತದ 50% ಕೋವಿಡ್-19 ಸಾವುಗಳಿಗೆ ಸೇರಿವೆ ಎನ್ನುವುದು ಕಂಡುಬರುತ್ತದೆ. ಭಾರತದಲ್ಲಿ ಕೋವಿಡ್-19 ಸಾವುಗಳಲ್ಲಿ 73% ಇತರ ರೋಗಗಳನ್ನು ಹೊಂದಿರುವ ಜನರು ಸೇರಿದ್ದಾರೆ (ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ಉಸಿರಾಟದ ಕಾಯಿಲೆಗಳು ಸೇರಿದಂತೆ). ಆದ್ದರಿಂದ, ಈ ಹೆಚ್ಚಿನ ಅಪಾಯಕ್ಕೊಳಗಾಗುವ ಗುಂಪುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಅಗತ್ಯವಿದೆ.
ಹೆಚ್ಚಿನ ಅಪಾಯಕ್ಕೆ ಒಳಗಾಗುವ ರೋಗಿಗಳಲ್ಲಿ ಕೋವಿಡ್-19 ಅನ್ನು ತಡೆಗಟ್ಟಲು, ಈ ಕೆಳಗಿನವುಗಳನ್ನು ಒಳಗೊಂಡಂತೆ ಅವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಪುನರುಚ್ಚರಿಸಲಾಗಿದೆ: ಮೊದಲೇ ಇರುವ ವೈದ್ಯಕೀಯ ಪರಿಸ್ಥಿತಿಗಳ ಸಂದರ್ಭದಲ್ಲಿ (ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಂತಹ) ವೈದ್ಯರ ಸಲಹೆಯಂತೆ ದಿನನಿತ್ಯದ ಔಷಧಿಗಳನ್ನು ಮುಂದುವರಿಸಬೇಕು. ಆಯುಷ್ ಸಚಿವಾಲಯ ಸೂಚಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಉದಾ. ಗಿಡಮೂಲಿಕೆಯ ಚಹಾ ಕುಡಿಯುವುದು, 'ಕಧಾ' ತೆಗೆದುಕೊಳ್ಳುವುದು; ವೈದ್ಯಕೀಯ ಸಲಹೆ ಅಗತ್ಯವಿದ್ದರೆ ಟೆಲಿಮೆಡಿಸಿನ್ (ಉದಾ. ಇ ಸಂಜೀವನಿ) ಬಳಸುವುದು; ನೀವು ಕೋವಿಡ್-19 ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದೀರಾ ಎಂದು ಪರೀಕ್ಷಿಸಲು, ಅಪ್ಲಿಕೇಶನ್ನಲ್ಲಿ ನಿಮ್ಮನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು, ಮತ್ತು ಆರೋಗ್ಯದ ನಿಯಮಿತ ಸ್ವಯಂ-ಮೇಲ್ವಿಚಾರಣೆಯನ್ನು ಕೈಗೊಳ್ಳಲು ಆರೋಗ್ಯ ಸೇತು ಆ್ಯಪ್ ಬಳಸುವ ಮೂಲಕ ಕೋವಿಡ್-19 ಅನ್ನು ಮೊದಲೇ ಪತ್ತೆಹಚ್ಚುವುದನ್ನು ಖಚಿತಪಡಿಸಿಕೊಳ್ಳುವುದು. ಹೆಚ್ಚಿನ ಅಪಾಯಕ್ಕೆ ಒಳಗಾಗುವ ವ್ಯಕ್ತಿಗಳು ಕೋವಿಡ್-19 ರೋಗಲಕ್ಷಣಗಳನ್ನು ಕಂಡರೆ, ಅವರು ಸಹಾಯವಾಣಿ ಸಂಖ್ಯೆಗಳ ಮೂಲಕ ದೂರವಾಣಿ ಮೂಲಕ ವೈದ್ಯಕೀಯ ಮಾರ್ಗದರ್ಶನ ಪಡೆಯಬೇಕು ಅಥವಾ ವೈದ್ಯರನ್ನು ಖುದ್ದಾಗಿ ಭೇಟಿ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಉತ್ತಮ ಕೈ ಮತ್ತು ಉಸಿರಾಟದ ನೈರ್ಮಲ್ಯವನ್ನು ಅಭ್ಯಾಸ ಮಾಡುವಂತಹ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಅಪಾಯದ ಗುಂಪಿಗೆ ನೆರವಾಗುವಲ್ಲಿ ನಾಗರಿಕರು ಸಹಕರಿಸಬಹುದು; ಒಬ್ಬರು ರೋಗಲಕ್ಷಣಗಳನ್ನು ಹೊಂದಿದ್ದರೆ ಇತರರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು; ಅಂತರವನ್ನು ಕಾಯ್ದುಕೊಂಡು ದೈನಂದಿನ ಕೆಲಸಗಳಲ್ಲಿ ಹೆಚ್ಚಿನ ಅಪಾಯಕ್ಕೆ ಒಳಗಾಗುವವರಿಗೆ ಸಹಾಯ ಮಾಡುವುದು; ಜನರ ದೊಡ್ಡ ಗುಂಪು ಸೇರುವುದನ್ನು ಮತ್ತು ಧಾರ್ಮಿಕ ಸಭೆಗಳನ್ನು ತಪ್ಪಿಸುವುದು.
ಅಗತ್ಯವಿಲ್ಲದಿದ್ದರೆ ಮನೆಯಲ್ಲೇ ಇರಬೇಕೆಂದು ಬಲವಾಗಿ ಸಲಹೆ ನೀಡಲಾಗಿದೆ.
ನಮ್ಮ ಕೋವಿಡ್-19ರ ನಂತರದ ಕಾಲವು ಯಶಸ್ವಿಯಾಗಲು, ಅದನ್ನು ಒಂದು ಜನಾಂದೋಲನ, ‘ಜನ ಅಭಿಯಾನ’ವನ್ನಾಗಿ ಮಾಡೋಣ. ನಾಗರಿಕರು #IndiaWillWin ಅನ್ನು ಬಳಸಲು ಕೋರಲಾಗಿದೆ ಮತ್ತು ಈ ಮೂರು ಚಟುವಟಿಕೆಗಳಲ್ಲಿ ಪರಸ್ಪರ ಬೆಂಬಲಿಸಲು ಕೋವಿಡ್-19ರ ವಿರುದ್ಧ ಹೋರಾಡಲು ಪ್ರತಿಜ್ಞೆ ತೆಗೆದುಕೊಳ್ಳೋಣ: ಅರಿವು, ತಡೆಗಟ್ಟುವ ಪ್ರಯತ್ನಗಳು ಮತ್ತು ಸಮಯೋಚಿತ ಚಿಕಿತ್ಸೆ.
ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಈ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in
ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1628968)
Visitor Counter : 331
Read this release in:
English
,
Urdu
,
Hindi
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam