PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 02 JUN 2020 6:41PM by PIB Bengaluru

 

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್-19  ಕುರಿತ ತಾಜಾ ಮಾಹಿತಿ ಕೋವಿಡ್-19 ನಿಂದ ಒಟ್ಟು 95,526 ರೋಗಿಗಳು ಗುಣಮುಖ

ಪ್ರಸ್ತುತ 97,581 ಸಕ್ರಿಯ ಪ್ರಕರಣಗಳಿದ್ದು, ಅವುಗಳನ್ನು ತೀವ್ರ ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ. ಕಳೆದ 24 ಗಂಟೆಗಳಿಂದೀಚೆಗೆ ಒಟ್ಟು 3708 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 95,526 ರೋಗಿಗಳು ಕೋವಿಡ್-19ನಿಂದ ಗುಣಮುಖರಾಗಿದ್ದಾರೆ. ಕೋವಿಡ್-19 ರೋಗಿಗಳ ಚೇತರಿಕೆ ಪ್ರಮಾಣ ಶೇ.48.07. ಭಾರತದಲ್ಲಿ ಚೇತರಿಕೆ ಪ್ರಮಾಣ ದಿನದಿಂದ ಹೆಚ್ಚಾಗುತ್ತಿದೆ ಮತ್ತು ಸಾವಿನ ಪ್ರಮಾಣ ವಿಶ್ವದಲ್ಲೇ ಅತಿ ಕಡಿಮೆ. ಇಂದಿಗೆ ಸಾವಿನ ಪ್ರಮಾಣ ಶೇ.2.82ರಷ್ಟಿದೆ.

https://static.pib.gov.in/WriteReadData/userfiles/image/image004O2SS.jpg

ಭಾರತದ ಜನಸಂಖ್ಯೆ ಮತ್ತು ಕೋವಿಡ್-19ನಿಂದ ತೀವ್ರ ಬಾಧಿತವಾಗಿರುವ 14 ರಾಷ್ಟ್ರಗಳ ಜನಸಂಖ್ಯೆ ಒಂದೇ ಆಗಿದೆ. ಒಂದೇ ಪ್ರಮಾಣದ ಜನಸಂಖ್ಯೆ ಇದ್ದರೂ 2020ರ ಜೂನ್ 1ರ ವೇಳೆಗೆ ಸೋಂಕಿನಿಂದ ತೀವ್ರ ಬಾಧಿತವಾಗಿರುವ 14 ದೇಶಗಳಲ್ಲಿ ಭಾರತಕ್ಕಿಂತ 22.5 ಪಟ್ಟು ಹೆಚ್ಚಿನ ಪ್ರಕರಣಗಳಿವೆ. ಕೋವಿಡ್-19ನಿಂದ ಒಟ್ಟು ಸಂಭವಿಸಿರುವ ಸಾವಿನ ಸಂಖ್ಯೆ 14 ದೇಶಗಳಲ್ಲಿ ಭಾರತಕ್ಕಿಂತ 55.2 ಪಟ್ಟು ಅಧಿಕ. ಇಂತಹ ಸಂದರ್ಭದಲ್ಲಿ ಸಕಾಲದಲ್ಲಿ ಪ್ರಕರಣಗಳನ್ನು ಗುರುತಿಸುವುದು ಮತ್ತು ಅಂತಹ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆಯಿಂದ ಸಾಧ್ಯವಾದಷ್ಟು ಸಾವಿನ ಪ್ರಮಾಣ ತಗ್ಗಿಸಲು ಗಮನಹರಿಸಲಾಗುತ್ತಿದೆ. ಸಾವಿನ ಪ್ರಮಾಣ ಕಡಿಮೆ ಇರುವುದಕ್ಕೆ ಎರಡು ಹಂತದ ಕಾರ್ಯತಂತ್ರ – ಸಕಾಲದಲ್ಲಿ ಪ್ರಕರಣಗಳನ್ನು ಗುರುತಿಸುವುದು ಮತ್ತು ಅಂತಹ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಇವು ಕಾರಣವಾಗಿವೆ.

No photo description available.

ವಿವರಗಳಿಗೆ: https://pib.gov.in/PressReleseDetail.aspx?PRID=1628696

ಸಿಐಐ ವಾರ್ಷಿಕ ಸಮಾವೇಶದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ; ಆಶಯ, ಒಳಗೊಳ್ಳುವಿಕೆ, ಬಂಡವಾಳ ಹೂಡಿಕೆ, ಮೂಲಸೌಕರ್ಯ ಮತ್ತು ಆವಿಷ್ಕಾರ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಅತ್ಯಂತ ಪ್ರಮುಖವಾದವು: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು, ಕೊರೊನಾ ಹರಡುವುದರ ವೇಗ ಸ್ವಲ್ಪಮಟ್ಟಿಗೆ ತಗ್ಗಿರಬಹುದು ಆದರೆ ಇಂದು ಅತಿಮುಖ್ಯ ಅಂಶವೆಂದರೆ ಭಾರತ ಲಾಕ್ ಡೌನ್ ಹಂತವನ್ನು ಮೀರಿದೆ ಮತ್ತು ಇದೀಗ ಅನ್ ಲಾಕ್ ಒಂದನೇ ಹಂತ ಪ್ರವೇಶಿಸಿದೆ ಎಂದರು. ಅನ್ ಲಾಕ್ ಒಂದನೇ ಹಂತದಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲಾಗಿದೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ 5 ಪ್ರಮುಖ ಅಂಶಗಳನ್ನು ಪಟ್ಟಿಮಾಡಿದ ಪ್ರಧಾನಮಂತ್ರಿ ಅವರು, ಭಾರತವನ್ನು ಮತ್ತೆ ಕ್ಷಿಪ್ರ ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ಯಲು ಆಶಯ, ಒಳಗೊಳ್ಳುವಿಕೆ, ಬಂಡವಾಳ ಹೂಡಿಕೆ, ಮೂಲಸೌಕರ್ಯ ಮತ್ತು ಆವಿಷ್ಕಾರ ಅಗತ್ಯವಿದೆ ಎಂದರು. ಇವುಗಳು ಸರ್ಕಾರ ಇತ್ತೀಚೆಗೆ ಕೈಗೊಂಡ ದಿಟ್ಟ ನಿರ್ಧಾರದಲ್ಲಿ ಪ್ರತಿಫಲನಗೊಂಡಿವೆ ಎಂದರು. ಹಲವು ವಲಯಗಳನ್ನು ಭವಿಷ್ಯಕ್ಕಾಗಿ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು. ಗ್ರಾಮೀಣ ಆರ್ಥಿಕತೆಯಲ್ಲಿ ರೈತರೊಂದಿಗೆ ಪಾಲುದಾರಿಕೆ ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಕೈಗಾರಿಕೆ ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಕರೆ ನೀಡಿದರು. ಗ್ರಾಮಗಳ ಸನಿಹದಲ್ಲೇ ಸ್ಥಳೀಯ ಕೃಷಿ ಉತ್ಪನ್ನಗಳ ಕ್ಲಸ್ಟರ್ ಗಳನ್ನು ನಿರ್ಮಿಸಲು ಅಗತ್ಯ ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುವುದು ಎಂದರು. ಇದೀಗ ಸರ್ಕಾರ, ಖಾಸಗಿ ವಲಯವನ್ನು ದೇಶದ ಅಭಿವೃದ್ಧಿ ಪಯಣದಲ್ಲಿ ಪಾಲುದಾರ ಎಂದು ಪರಿಗಣಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1628613

ಭಾರತೀಯ ಕೈಗಾರಿಕಾ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

ವಿವರಗಳಿಗೆ: https://pib.gov.in/PressReleseDetail.aspx?PRID=1628587

ಸ್ಪಿಕ್ ಮೆಕೆ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಇಂತಹ ಸಂಕಷ್ಟದ ಸಮಯದಲ್ಲೂ ಸಂಗೀತಗಾರರ ಸ್ಫೂರ್ತಿ  ಧೈರ್ಯಗುಂದದೆ ಮುಂದುವರಿದಿದೆ ಎಂದು ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಯುವಕರಲ್ಲಿನ ಒತ್ತಡವನ್ನು ನಿವಾರಿಸುವುದು ಹೇಗೆ ಎಂಬುದರ ಕುರಿತು ಗಮನಹರಿಸುವುದು ಸಮಾವೇಶದ ಧ್ಯೇಯವಾಗಿದೆ ಎಂದರು. ಅವರು ಯುದ್ಧ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಸಂಗೀತ ಹೇಗೆ ಐತಿಹಾಸಿಕವಾಗಿ ಸ್ಫೂರ್ತಿದಾಯಕ ಮತ್ತು ಸಂಯಮದ ಪಾತ್ರ ವಹಿಸುತ್ತದೆ ಎಂದು ಅವರು ನೆನಪು ಮಾಡಿಕೊಂಡರು. ಕವಿಗಳು, ಸಂಗೀತಗಾರರು ಮತ್ತು ಕಲಾವಿದರು ಸದಾ ಹಾಡುಗಳನ್ನು ರಚಿಸುತ್ತಿರುತ್ತಾರೆ ಮತ್ತು ಸಂಗೀತವನ್ನು ತುಂಬುತ್ತಾರೆ, ಇದು ಇಂತಹ ಸಂಕಷ್ಟ ಕಾಲದಲ್ಲಿ ಮುಂದುವರಿದಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು, ವಿಶ್ವ ಅಗೋಚರ ಶತೃವಿನ ವಿರುದ್ಧ ಹೋರಾಡುತ್ತಿರುವ ಸಂಕಷ್ಟದ ಸಮಯ ಇದಾಗಿದೆ ಎಂದ ಅವರು, ಹಾಡುಗಾರರು, ಗೀತರಚನಕಾರರು ಮತ್ತು ಕಲಾವಿದರು ಹಾಡುಗಳನ್ನು ಬರೆದು, ಅವುಗಳಿಗೆ ಸಂಗೀತ ಅಳವಡಿಸಿ, ಜನರ ವಿಶ್ವಾಸವನ್ನು ವೃದ್ಧಿಗೊಳಿಸುತ್ತಿದ್ದಾರೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1628387

ಒಪಿ ಸಮುದ್ರ ಸೇತು ಟುಟಿಕಾರಿನ್ ನಿಂದ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲು ಕೊಲಂಬೋಗೆ ನಿರ್ಗಮಿಸಿದ ಐಎನ್ಎಸ್  ಜಲಶ್ವಾ

ತಮಿಳುನಾಡಿನ ಟುಟಿಕಾರಿನ್ ಗೆ ಸಂಕಷ್ಟದಲ್ಲಿ ಸಿಲುಕಿರುವ 685 ಭಾರತೀಯರನ್ನು ಕರೆತರುವ ಸಲುವಾಗಿ ಭಾರತೀಯ ನೌಕಾಪಡೆಗೆ ಸೇರಿದ ಐಎನ್ಎಸ್ ಜಲಶ್ವಾ ಹಡಗು ಇಂದು ಶ್ರೀಲಂಕಾದ ಕೊಲೊಂಬೋಗೆ(01 ಜೂನ್ 2020)ರಂದು ನಿರ್ಗಮಿಸಿತು. ಹಡಗು ಭಾರತ ಸರ್ಕಾರ ಆರಂಭಿಸಿರುವ ವಂದೇ ಭಾರತ್ ಮಿಷನ್ ಅಡಿಯಲ್ಲಿನ ಸಮುದ್ರ ಸೇತು ಕಾರ್ಯಾಚರಣೆ ಭಾಗವಾಗಿ ಭಾರತೀಯ ನೌಕಾಪಡೆಯ ಹಡಗು ಮೂರನೇ ಸುತ್ತಿನ ಪ್ರಯಾಣ ಕೈಗೊಂಡಿದೆ. ಸಮುದ್ರ ಮಾರ್ಗದ ಮೂಲಕ ವಿದೇಶಿ ಬಂದರುಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲಾಗುತ್ತಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1628471

ಫ್ರೆಂಚ್ ಶಸ್ತ್ರಾಸ್ತ್ರ ಪಡೆಗಳ ಸಚಿವರೊಂದಿಗೆ ರಕ್ಷಣಾ ಮಂತ್ರಿ ಮಾತುಕತೆ

ಶ್ರೀ ರಾಜನಾಥ್ ಸಿಂಗ್ ಅವರು ಇಂದು ಫ್ರೆಂಚ್ ಶಸ್ತ್ರಾಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲೆ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿದರು. ಉಭಯ ನಾಯಕರು ಪರಸ್ಪರ ಕಾಳಜಿ ಇರುವಂತಹ ಕೋವಿಡ್-19 ಸ್ಥಿತಿಗತಿ, ಪ್ರಾದೇಶಿಕ ಭದ್ರತೆ ಮತ್ತು ಭಾರತ ಮತ್ತು ಫ್ರಾನ್ಸ್ ನಡುವೆ ದ್ವಿಪಕ್ಷೀಯ ರಕ್ಷಣಾ ಸಹಕಾರ ಬಲವರ್ಧನೆ ಕುರಿತಂತೆ ಚರ್ಚಿಸಿ ಒಪ್ಪಿಗೆ ನೀಡಿದರು. ಉಭಯ ಸಚಿವರು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಭಾರತ ಮತ್ತು ಫ್ರಾನ್ಸ್ ಶಸ್ತ್ರಾಸ್ತ್ರ ಪಡೆಗಳ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್-19 ಸಾಂಕ್ರಾಮಿಕದ ಸವಾಲಿನ ಮಧ್ಯೆಯೂ ನಿಗದಿಯಂತೆ ಸಕಾಲದಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವ ಬದ್ಧತೆಯ ಖಾತ್ರಿಯನ್ನು ಫ್ರಾನ್ಸ್ ಪುನರುಚ್ಚರಿಸಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1628615

ಕೋವಿಡ್-19ನಿಂದ ಉದ್ಭವಿಸಿರುವ ಸನ್ನಿವೇಶದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬುಡಕಟ್ಟು ಕಲಾವಿದರಿಗೆ ಎಲ್ಲ ರೀತಿಯ ಬೆಂಬಲ ವಿಸ್ತರಿಸಿದ ಟ್ರೈಫೆಡ್  

ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ಬರುವ ಟ್ರೈಫೆಡ್, ಕೋವಿಡ್-19ನಿಂದ ಉದ್ಭವಿಸಿರುವ ಸನ್ನಿವೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಬುಡಕಟ್ಟು ಕರಕುಶಲಕರ್ಮಿಗಳಿಗೆ ಎಲ್ಲ ಬಗೆಯ ಬೆಂಬಲವನ್ನು ನೀಡಲು ಪ್ರಯತ್ನಗಳನ್ನು ಆರಂಭಿಸಿದೆ. ಅದು ತನ್ನ ಟ್ರೈಬ್ಸ್ ಇಂಡಿಯಾ ರಿಟೇಲ್ ಮತ್ತು ಇ-ಕಾಮ್ ವೇದಿಕೆ(www.tribesindia.com) ಮೂಲಕ ಪ್ರಗತಿಪರ ಯೋಜನೆಯನ್ನು ಪ್ರಕಟಿಸಿದೆ. ಅದರ ಮೂಲಕ ಕರಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ನೀಡಲಾಗುವುದು. ಅದರಂತೆ ಟ್ರೈಫೆಡ್, ಬುಡಕಟ್ಟು ಆದಿವಾಸಿಗಳ ವಾಣಿಜ್ಯ ಚಟುವಟಿಕೆಗಳನ್ನು ಬೆಂಬಲಿಸಲು ತನ್ನೆಲ್ಲಾ ಮಳಿಗೆಗಳು ಮತ್ತು ಇ-ವಾಣಿಜ್ಯ ವೇದಿಕೆಗಳನ್ನು ಪುನರಾರಂಭಿಸಿದೆ. ಅಲ್ಲದೆ ಟ್ರೈಫೆಡ್ ತನ್ನ ಸಗಟು ಜಾಲದ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಲು ಉತ್ಪನ್ನಗಳಿಗೆ ಮಾರುಕಟ್ಟೆಗಳನ್ನು ಒದಗಿಸಿಕೊಡಲು ನಿರ್ಧರಿಸಿದೆ. ಮತ್ತು ಇ-ಕಾಮ್ ಪೋರ್ಟಲ್ ಗಳ ಮೂಲಕ ಆಕರ್ಷಕ ವಿನಾಯಿತಿಗಳನ್ನು ನೀಡಲಾಗುತ್ತಿದೆ. ಬುಡಕಟ್ಟು ಮುಖ್ಯ ಕರಕುಶಲಕರ್ಮಿಗಳು ಮತ್ತು ಮಹಿಳೆಯರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು ಮಾರಾಟದಿಂದ ಬರುವ ಶೇ.100ರಷ್ಟು ಹಣವನ್ನು ಬುಡಕಟ್ಟು ಕರಕುಶಲಕರ್ಮಿಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628652

ನೋವಲ್ ಕೊರೊನಾ ಸೋಂಕಿನೊಂದಿಗೆ ಹೇಗೆ ಬದುಕಬೇಕೆಂಬ ಬಗ್ಗೆ ಐದು ಟಿಪ್ಸ್

70 ದಿನಗಳ ಲಾಕ್ ಡೌನ್ ನಂತರ ಅನ್ ಲಾಕ್ 1.0 ಇದೀಗ ಕಾರ್ಯಾಚರಣೆ ಆರಂಭಿಸಿದೆ. ಅಧಿಕೃತವಾಗಿ ನಿಯೋಜಿತ ಲಾಕ್ ಡೌನ್ 5.0, 2020 ಜೂನ್ 1 ರಿಂದ ಆರಂಭವಾಗಿದ್ದು, ಆರ್ಥಿಕ ಚಟುವಟಿಕೆ ಮತ್ತು ಸಾಮಾನ್ಯ ಜನಜೀವನ ನಿಯಂತ್ರಿತವಾಗಿ, ಹಂತಹಂತವಾಗಿ ಸಹಜಸ್ಥಿತಿಗೆ ಮರಳುತ್ತಿದೆ. ಇದು ಹೊಸ ಸಾಮಾನ್ಯ ಸ್ಥಿತಿಯ ಆರಂಭವಾಗಿದೆ. ಇದು ದೀರ್ಘಕಾಲ ಇರಲಿದೆ. ತಜ್ಞರು ಮತ್ತು ಅಧಿಕಾರಿಗಳು ನಾವು ಸೋಂಕಿನೊಂದಿಗೆ ಬದುಕುವುದನ್ನು ಕಲಿಯಬೇಕುಎಂದು ಸಲಹೆ ನೀಡುತ್ತಿದ್ದಾರೆ. ಸೋಂಕಿಗೆ ಲಸಿಕೆ ದೊರಕುವುದು ಇನ್ನೂ ಹಲವು ತಿಂಗಳುಗಳು ದೂರವಿರುವ ಹಿನ್ನೆಲೆಯಲ್ಲಿ ನಾವು ಹೊಸ ಬಗೆಯ ಸಾಮಾನ್ಯ ಸ್ಥಿತಿಯಲ್ಲಿ ಬದುಕಬೇಕಿದೆ. ಇಂಡಿಯಾ ಸೈನ್ಸ್ ವೈರ್ ನೊಂದಿಗೆ ಮಾತನಾಡಿದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊಕೆ. ವಿಜಯ್ ರಾಘವನ್ ಅವರು, ‘ಸೋಂಕಿನೊಂದಿಗೆ ಜೀವನ ನಡೆಸಲುಐದು ಟಿಪ್ಸ್ ಗಳನ್ನು ನೀಡಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628559

ಜೊರಾಹಟ್ ಸಿಎಸ್ಐಆರ್-ಎನ್ಇಐಎಸ್ ಟಿಯಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ

ಜೊರಾಹಟ್ ಈಶಾನ್ಯ ರಾಜ್ಯಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಎನ್ಇಐಎಸ್ ಟಿ) ಆವರಣದಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628560

ಪಿಐಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಪಂಜಾಬ್: ಕೋವಿಡ್-19 ವಿರುದ್ಧದ ಹೋರಾಟವನ್ನು ರಾಜ್ಯದಲ್ಲಿ ತಳಮಟ್ಟಕ್ಕೆ ಕೊಂಡೊಯ್ಯಲು ಪಂಜಾಬ್ ಮುಖ್ಯಮಂತ್ರಿ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಲು ಮಿಷನ್ ಫತೇಭಾಗವಾಗಿ ತಿಂಗಳಿಡೀ ಜಾಗೃತಿ ಅಭಿಯಾನದ ಆಂದೋಲನಕ್ಕೆ ಚಾಲನೆ ನೀಡಿದರು. ಅಭಿಯಾನದಲ್ಲಿ ಮಿಷನ್ ಫತೇಯನ್ನು ಇನಷ್ಟು ವಿಸ್ತರಿಸಿ, ಮುಂಚೂಣಿ ಕಾರ್ಯಕರ್ತರಲ್ಲದೆ, ಪಂಜಾಬ್ ಇತರೆ ಜನರನ್ನು ಅದಕ್ಕೆ ಸೇರಿಸಿಕೊಂಡು ಕೋವಿಡ್-19 ವಿರುದ್ಧದ ಹೋರಾಟವನ್ನು ಜನರ ಹೋರಾಟ, ಜನರಿಗಾಗಿ ಹೋರಾಟ ಮತ್ತು ಜನರಿಂದಲೇ ಹೋರಾಟವನ್ನಾಗಿ ಮಾಡುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸೋಂಕು ಅಪಾಯವನ್ನು ಗುರುತಿಸಲು ಒತ್ತು ನೀಡಲಾಗಿದ್ದು, ಇದು ಜನರಿಗೆ ಅತ್ಯಂತ ಗಂಭೀರ ಅಪಾಯವನ್ನು ತಂದೊಡ್ಡುತ್ತಿದೆ. ಜನರು ಮಾದರಿಯಾಗಿ ಇರುವಂತೆ ಉತ್ತೇಜಿಸಲಾಗುತ್ತಿದೆ ಮತ್ತು ಇತರೆಯವರಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗುತ್ತಿದೆ ಮತ್ತು ತಮ್ಮ ಗಮನಕ್ಕೆ ಬಂದ ಉಲ್ಲಂಘನೆಗಳನ್ನು ತಿಳಿಸುವಂತೆ ಕೋರಲಾಗಿದೆ.
  • ಹರಿಯಾಣ: ರಾಜ್ಯ ಗೃಹ ಸಚಿವರು, ಸಾಮಾಜಿಕ ಅಂತರ ನಿಮಯಗಳನ್ನು ಕಾಯ್ದುಕೊಂಡು ಬೆಳಗ್ಗೆ 9 ರಿಂದ ರಾತ್ರಿ 7ಗಂಟೆಯವರೆಗೆ ಎಲ್ಲಾ ಬಗೆಯ ಅಂಗಡಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದರು. ಸಮ-ಬೆಸ ಅಥವಾ ಎಡ-ಬಲ ಸೂತ್ರವನ್ನು ಪಾಲಿಸಲಾಗುವುದಿಲ್ಲ. ಅದರ ಬದಲಿಗೆ ಆಡಳಿತ ಸ್ಥಳೀಯ ಸ್ಥಿತಿಗತಿಗಳನ್ನು ಆಧರಿಸಿ ಜನದಟ್ಟಣೆಯಾಗುವಂತಹ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ನಿಯಮಗಳನ್ನು ಕಾಯ್ದುಕೊಳ್ಳುವಂತೆ ನಿರ್ದೇಶನಗಳನ್ನು ನೀಡಲಿದೆ ಎಂದರು. ಕೇಂದ್ರ ಸರ್ಕಾರದ ನಿರ್ದೇಶನಗಳನುಸಾರ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗುವುದು ಮತ್ತು ಸಮಯದಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
  • ಹಿಮಾಚಲಪ್ರದೇಶ: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತರ ಹಿಮಾಚಲಪ್ರದೇಶ ಪ್ರವೇಶಿಸಿರುವ ವಲಸೆ ಕಾರ್ಮಿಕರ ದತ್ತಾಂಶವನ್ನು ಸಿದ್ಧಪಡಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿವೃದ್ಧಿಪಡಿಸಿರುವ ಕೌಶಲ್ಯ ರಿಜಿಸ್ಟಾರ್ ನೋಂದಣಿ ಅಭಿಯಾನಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಆಸಕ್ತ ವ್ಯಕ್ತಿಗಳು skillregister.hp.gov.in. ಮೂಲಕ ಇಲ್ಲಿ ನೋಂದಣಿ ಮಾಡಬಹುದು. ಅಲ್ಲದೆ ಹಲವು ಕಂಪನಿಗಳು ಮತ್ತು ಕೈಗಾರಿಕಾ ಸಂಸ್ಥೆಗಳೂ ಸಹ ತಮ್ಮ ಅಗತ್ಯತೆಗಳನ್ನು ಪೋರ್ಟಲ್ ನಲ್ಲಿ ದಾಖಲಿಸಬಹುದು. ಇದರಲ್ಲಿ ರಾಜ್ಯಕ್ಕೆ ಮರಳಿರುವ ಕೆಲಸಗಾರರ ಶೈಕ್ಷಣಿಕ ವಿದ್ಯಾರ್ಹತೆ, ಕೌಶಲ್ಯ ಮತ್ತು ಉದ್ಯೋಗದ ಅಗತ್ಯತೆಗಳ ಕುರಿತ ಮಾಹಿತಿಯನ್ನೂ ಸಹ ಅಪ್ ಲೋಡ್ ಮಾಡಬೇಕು ಎಂದರು. ಇದರಿಂದ ರಾಜ್ಯದಲ್ಲಿ ಲಭ್ಯವಿರುವ ಕೌಶಲ್ಯವನ್ನು ಗುರುತಿಸಲು ಸಹಾಯಕವಾಗುವುದಲ್ಲದೆ, ಕೌಶಲ್ಯ ಉನ್ನತೀಕರಣ ಅಗತ್ಯತೆಗಳ ವಿಶ್ಲೇಷಣೆ ನಡೆಸಲು ಸಹ ಸಹಾಯಕವಾಗಲಿದೆ ಎಂದರು. ಅಲ್ಲದೆ ಇದು ಸುಮ್ಮನೆ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದ ಲಭ್ಯತೆಗಳನ್ನು ತಿಳಿದುಕೊಳ್ಳಲು  ಕೈಗಾರಿಕೋದ್ಯಮಿಗಳಿಗೆ ನೆರವಾಗಲಿದೆ ಎಂದು ಹೇಳಿದರು.
  • ಅರುಣಾಚಲಪ್ರದೇಶ: ಪಿಎಂಕೆಎಸ್ ವೈ ಅಡಿಯಲ್ಲಿ  ಕೇಂದ್ರ ಸರ್ಕಾರ 68 ಸಾವಿರ ರೈತರಿಗೆ ತಲಾ 2,000 ರೂ. ನೆರವು ನೀಡಿದೆ ಮತ್ತು ರಾಜ್ಯ ಸರ್ಕಾರ ಕೂಡ ಹೆಚ್ಚುವರಿಯಾಗಿ ರೈತರಿಗೆ 1,000 ರೂ. ನೆರವು ನೀಡಿದೆ.
  • ಅಸ್ಸಾಂ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ, ಕೋವಿಡ್-19 ಪರೀಕ್ಷೆಗಳನ್ನು ಅಧಿಕೃತವಾಗಿ ನಡೆಸಲು ಅಸ್ಸಾಂನ ತೇಜ್ ಪುರ್ ನಲ್ಲಿರುವ ರಕ್ಷಣಾ ಸಂಶೋಧನಾ ಪ್ರಯೋಗಾಲಯಕ್ಕೆ ಅನುಮೋದನೆ ನೀಡಿದೆ. ಅಸ್ಸಾಂನಲ್ಲಿ 28 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 1513,  ಗುಣಮುಖರಾದವರು 284, ಸಕ್ರಿಯ ಪ್ರಕರಣಗಳು 1222 ಮತ್ತು 4 ಸಾವು.
  • ಮಣಿಪುರ: ಮಣಿಪುರದಲ್ಲಿ ಮತ್ತೆ 2 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 85ಕ್ಕೆ ಏರಿಕೆಯಾಗಿದ್ದು, 74 ಪ್ರಕರಣ ಸಕ್ರಿಯವಾಗಿವೆ.
  • ಮಿಝೋರಾಂ: ರಾಜ್ಯಪಾಲ ಶ್ರೀ ಶ್ರೀಧರನ್ ಪಿಳ್ಳೈ ಅವರು 2020 ಮೇ ತಿಂಗಳಿಂದ ಆರು ತಿಂಗಳ ಕಾಲ ತಮ್ಮ ವೇತನದ ಶೇ.30ರಷ್ಟನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಬದ್ಧತೆಯನ್ನು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಮೂಲವೇತನದ ಶೇ.60ರಷ್ಟನ್ನು ಕೋವಿಡ್-19 ನಿಯಂತ್ರಣಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ. ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದ ಹಿನ್ನೆಲೆಯಲ್ಲಿ ಕ್ರಮ ತೆಗೆದು ಕೊಳ್ಳಲಾಗಿದೆ.
  • ನಾಗಾಲ್ಯಾಂಡ್: ಸರ್ಕಾರ ಹಾಲಿ ಇರುವ ಲಾಕ್ ಡೌನ್ ನಿಯಮಾವಳಿಗಳು ಜಾರಿ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ ಎಂದು ಅಧಿಸೂಚನೆ ಹೊರಡಿಸಿದೆ. ದಿಮಾಪುರಕ್ಕೆ ವಾಪಸ್ಸಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದಿಮಾಪುರ್ ಕಾರ್ಯಪಡೆ  ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ನಾಗಾಲ್ಯಾಂಡ್ ಸರ್ಕಾರದ ಒಡೆತನದಲ್ಲಿರುವ ದಿಮಾಪುರದ ಪ್ರವಾಸಿ ಲಾಡ್ಜ್ ಅನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿದೆ.
  • ಸಿಕ್ಕಿಂ: ಸೆಂಟರ್ ಫಾರ್ ಕಂಪ್ಯೂಟರ್ ಅಂಡ್ ಕಮ್ಯುನಿಕೇಶನ್ ಟೆಕ್ನಾಲಜಿ, ಚಿಸೊಪಾನಿ ಡಿಪ್ಲೊಮಾ ಕಾಲೇಜನ್ನು ದಕ್ಷಿಣ ಸಿಕ್ಕಿಂಗೆ ಸೇರಿದವರು ನಾನಾ ರಾಜ್ಯಗಳಿಂದ ವಾಪಸ್ಸಾಗುತ್ತಿರುವುದರಿಂದ ಅವರಿಗೆ ಉಚಿತ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು.
  • ಮಹಾರಾಷ್ಟ್ರ: ಕಳೆ 24 ಗಂಟೆಗಳಿಂದೀಚೆಗೆ 2,361 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಮತ್ತು 76 ಸಾವು ಸಂಭವಿಸಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 70,013 ಏರಿಕೆಯಾಗಿದೆ ಮತ್ತು ಸಾವಿನ ಸಂಖ್ಯೆ 2,362ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳು 37,543 ಇವೆ. ಮಹಾರಾಷ್ಟ್ರದಲ್ಲಿ ಈವರೆಗೆ 4,71,473 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ಭಾರತದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಮಧ್ಯೆಯೇ ಪಶ್ಚಿಮ ಮೆಟ್ರೋ ಪಾಲಿಟನ್ ಜೂನ್ 3 ರಂದು ಮಧ್ಯಾಹ್ನ ಮಹಾರಾಷ್ಟ್ರದ ಆಲಿಬಾಗ್ ಹಾದು ಹೋಗಲಿರುವ ನಿಸರ್ಗ ಚಂಡಮಾರುತವನ್ನು ಎದುರಿಸಲು ಸಜ್ಜಾಗಿದೆ. ಚಂಡಮಾರುತದ ದಾಳಿ ಪ್ರತಿ ಗಂಟೆಗೆ 100 ರಿಂದ 110 ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಅಧಿಕಾರಿಗಳು ಸುಮಾರು 150 ಶಂಕಿತ ಕೋವಿಡ್-19 ರೋಗಿಗಳನ್ನು ಬಿಕೆಸಿ ಪ್ರದೇಶದಿಂದ ವೊರ್ಲಿ ಪ್ರದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ.
  • ಗುಜರಾತ್: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೆಚ್ಚುವರಿಯಾಗಿ 423 ಪ್ರಕರಣಗಳು ಸೇರ್ಪಡೆಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 17,217ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಹೊಸದಾಗಿ 25 ಮಂದಿ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 1,063 ಏರಿಕೆಯಾಗಿದೆ. ಕೋವಿಡ್-19ನಿಂದ ಗುಣಮುಖರಾದ 861 ಮಂದಿಯನ್ನು ರಾಜ್ಯದ ನಾನಾ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 10,000 ಗಡಿ ದಾಟಿದೆ. ಅಲ್ಲದೆ ರಾಜ್ಯದ ಆಡಳಿತ ನಾಳೆ ಗುಜರಾತ್ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇರುವ ನಿಸರ್ಗ ಚಂಡಮಾರುತ ಎದುರಿಸಲೂ ಸಹ ಸಜ್ಜಾಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಇಂದು ಸಂಬಂಧಿಸಿದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಾಳೆ ಸಂಜೆಯೊಳಗೆ ತಗ್ಗು ಪ್ರದೇಶಗಳಲ್ಲಿ ನೆಲೆಸಿರುವವರನ್ನು ಸುರಕ್ಷಿತ ತಾಣಗಳಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಕೋವಿಡ್-19  ಹರಡುವುದನ್ನು ತಡೆಯಲು ಕಲೆಕ್ಟರ್ ಗಳು, ಸ್ಥಳಾಂತರ ಪ್ರಕ್ರಿಯೆ ವೇಳೆ ಮಾಸ್ಕ್ ಮತ್ತು ಪಿಪಿಇಗಳನ್ನು ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದೂ ಸಹ ಸೂಚನೆ ನೀಡಲಾಗಿದೆ.
  • ಮಧ್ಯಪ್ರದೇಶ: ಕಳೆದ 24 ಗಂಟೆಗಳಿಂದೀಚೆಗೆ ರಾಜ್ಯದಲ್ಲಿ 194 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು 8,283 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 358 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದ ಒಟ್ಟು 52 ಜಿಲ್ಲೆಗಳ ಪೈಕಿ 51 ಜಿಲ್ಲೆಗಳಿಗೆ ಸೋಂಕು ವ್ಯಾಪಿಸಿದೆ. ಈವರೆಗೆ ಸುಮಾರು 5 ಸಾವಿರಕ್ಕೂ ಅಧಿಕ ಸೋಂಕಿತರು ಚೇತರಿಸಿಕೊಂಡಿದ್ದಾರೆ.
  • ರಾಜಸ್ಥಾನ: ಇಂದು ರಾಜ್ಯದಲ್ಲಿ ಒಟ್ಟಾರೆ 171 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 8,980ಕ್ಕೆ ಏರಿಕೆಯಾಗಿದೆ. ಆದರೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,742 ಮಾತ್ರ. ಉಳಿದ 6,040 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
  • ಛತ್ತೀಸ್ ಗಢ: ಇತ್ತೀಚಿನ ಮಾಹಿತಿಯಂತೆ ರಾಜ್ಯದಲ್ಲಿ 45 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ವರದಿಯಾಗಿರುವ ಪ್ರಕರಣಗಳ ಸಂಖ್ಯೆ 547ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರ ರಾಯ್ ಪುರ ಸೇರಿದಂತೆ 16 ಜಿಲ್ಲೆಗಳನ್ನು ಕೆಂಪು ವಲಯ ಪ್ರದೇಶ ಎಂದು ಘೋಷಿಸಿದ್ದು, ಉಳಿದ 17 ಜಿಲ್ಲೆಗಳು ಕಿತ್ತಳೆ ವಲಯದಲ್ಲಿವೆ

ಪಿ ಐ ಬಿ ವಾಸ್ತವ ಪರಿಶೀಲನೆ

https://static.pib.gov.in/WriteReadData/userfiles/image/image006W3QN.png

https://static.pib.gov.in/WriteReadData/userfiles/image/image007KQ4K.png

***



(Release ID: 1628920) Visitor Counter : 254