ಪ್ರಧಾನ ಮಂತ್ರಿಯವರ ಕಛೇರಿ

ಸಿಐಐ ನ ವಾರ್ಷಿಕ ಅಧಿವೇಶನದ ಪ್ರಾರಂಭೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ಅಭಿವೃದ್ಧಿ ಸಾಧಿಸುವುದು ಖಚಿತ: ಪ್ರಧಾನಿ ಆತ್ಮ ನಿರ್ಭರ ಭಾರತ - ಉದ್ದೇಶ, ಸೇರ್ಪಡೆ, ಹೂಡಿಕೆ, ಮೂಲಭೂತ ಸೌಲಭ್ಯ ಮತ್ತು ಆವಿಷ್ಕಾರಗಳು ಮಹತ್ವದ ವಿಷಯಗಳಾಗಿವೆ: ಪ್ರಧಾನಿ

Posted On: 02 JUN 2020 2:21PM by PIB Bengaluru

ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) 125 ನೇ ವಾರ್ಷಿಕ ಅಧಿವೇಶನದಲ್ಲಿ ಇಂದು ಪ್ರಧಾನ ಮಂತ್ರಿಗಳು ಉದ್ಘಾಟನಾ ಭಾಷಣ ಮಾಡಿದರು ವರ್ಷದ ವಾರ್ಷಿಕ ಸಮ್ಮೇಳನದ ವಿಷಯ ಹೊಸ ವಿಶ್ವಕ್ಕಾಗಿ ಭಾರತದ ನಿರ್ಮಾಣಜೀವನಜೀವನೋಪಾಯ ಅಭಿವೃದ್ಧಿ.

 ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೊರೊನಾದಿಂದಾಗಿ ಇಂತಹ ಆನ್ ಲೈನ್ ಕಾರ್ಯಕ್ರಮಗಳು ಸರ್ವೆ ಸಾಮಾನ್ಯವಾಗಿವೆ ಎಂದು ಹೇಳಿದರುಇದು ಮಾನವನ ಅತಿ ದೊಡ್ಡ ಶಕ್ತಿಯೂ ಆಗಿದ್ದುಪ್ರತಿ ಸಮಸ್ಯೆಯಿಂದ ಹೊರಬರಲು ಒಂದು ಮಾರ್ಗವೂ ಆಗಿದೆ ಎಂದು ಅವರು ಹೇಳಿದರು. “ಒಂದೆಡೆ ವೈರಾಣು ವಿರುದ್ಧ ಹೋರಾಡಲು ಕಠಿಣ ಕ್ರಮಗಳನ್ನು ಕೈಗೊಂಡು ದೇಶದ ಜನರ ಜೀವ ಉಳಿಸಬೇಕಿದೆ ಇನ್ನೊಂದೆಡೆ ಆರ್ಥಿಕತೆಯನ್ನು ಸ್ಥಿರಗೊಳಿಸಿ ಅದರ ವೇಗ ವೃದ್ಧಿಸಬೇಕಿದೆ” ಎಂದು ಅವರು ಹೇಳಿದರು.

  ವರ್ಷದ ವಾರ್ಷಿಕ ಅಧಿವೇಶನದ ವಿಷಯವನ್ನು ಉದ್ದೇಶಿಸಿ ಮಾತನಾಡುತ್ತಾ ಬೆಳವಣಿಗೆಯನ್ನು ಮರಳಿ ಸಾಧಿಸುವುದು” ಎಂಬ ಚರ್ಚೆಯನ್ನು ಆರಂಭಿಸಿದ ಭಾರತೀಯ ಉದ್ಯಮವನ್ನು ಪ್ರಧಾನ ಮಂತ್ರಿಗಳು ಪ್ರಶಂಸಿಸಿದರುಅದನ್ನು ಮೀರಿ ಸಾಧನೆಗೈಯ್ಯಬೇಕೆಂದು ಉದ್ಯಮಗಳನ್ನು ಆಗ್ರಹಿಸಿದ ಅವರು ಹೌದುಖಂಡಿತವಾಗಿ ನಾವು ಮತ್ತೆ ನಮ್ಮ ಅಭಿವೃದ್ಧಿಯನ್ನು ಸಾಧಿಸುತ್ತೇವೆ” ಎಂದು ಹೇಳಿದರುಭಾರತದ ಸಾಮರ್ಥ್ಯ ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿಭಾರತದ ಕೌಶಲ್ಯ ಮತ್ತು ತಂತ್ರಜ್ಞನದಲ್ಲಿಭಾರತದ ಆವಿಷ್ಕಾರ ಮತ್ತು ಜ್ಞಾನದಲ್ಲಿಭಾರತದ ರೈತರಲ್ಲಿಎಂ ಎಸ್ ಎಂ  ಗಳಲ್ಲಿ ಮತ್ತು ಉದ್ಯಮಿಗಳಲ್ಲಿ ತಮಗಿರುವ ವಿಶ್ವಾಸ  ಬೆಳವಣಿಗೆಯನ್ನು ಮತ್ತೆ ಸಾಧಿಸುವ ಬಗ್ಗೆ ತಮಗೆ ನಂಬಿಕೆಯನ್ನು ಮೂಡಿಸಿದೆ ಎಂದು ಅವರು ಹೇಳಿದ್ದಾರೆ.    

ಕೊರೊನಾ ಬೆಳವಣಿಗೆ ವೇಗವನ್ನು ತಗ್ಗಿಸಿರಬಹುದುಆದರೆ ಇಂದು ಭಾರತ ಲಾಕ್ ಡೌನ್ ಹಂತವನ್ನು ದಾಟಿ ಮೊದಲ ಅನ್ ಲಾಕ್ ಹಂತವನ್ನು ಪ್ರವೇಶಿಸಿದೆ ಎಂಬುದು ನಮಗೆ ತಿಳಿದಿರುವ ದೊಡ್ಡ ಸಂಗತಿಯಾಗಿದೆಮೊದಲನೇ ಅನ್ ಲಾಕ್ ಹಂತದಲ್ಲಿ ಆರ್ಥಿಕತೆಯ ಬಹುಭಾಗ ಚಟುವಟಿಕೆಗೆ ತೆರೆದುಕೊಂಡಿದೆ. 8 ಜೂನ್ ನಂತರ ಮತ್ತಷ್ಟು ತೆರೆಯಲಿದೆ. ಅಭಿವೃದ್ಧಿಯನ್ನು ಮತ್ತೆ ಸಾಧಿಸುವ ಸಮಯ ಆರಂಭಗೊಂಡಿದೆ ಎಂದು ಕೂಡಾ ಪ್ರಧಾನ ಮಂತ್ರಿಗಳು ಹೇಳಿದರು.       

ವಿಶ್ವದಲ್ಲಿ ಕೊರೊನಾ ವೈರಾಣು ಹರಡುತ್ತಿರುವಾಗ ಭಾರತ ಸಕಾಲಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. “ಇತರ ದೇಶಗಳೊಂದಿಗೆ ಹೋಲಿಸಿದಲ್ಲಿ ಭಾರತದಲ್ಲಿ ಲಾಕ್ ಡೌನ್ ಪರಿಣಾಮ ಎಷ್ಟು ವ್ಯಾಪಕವಾಗಿತ್ತು ಎಂಬುದನ್ನು ಇಂದು ನಾವು ತಿಳಿದುಕೊಳ್ಳಬಹುದು” ಎಂದು ಅವರು ಹೇಳಿದರು. “ಕೊರೊನಾದ ವಿರುದ್ಧ ಆರ್ಥಿಕತೆಯನ್ನು ಮತ್ತೆ ಬಲಗೊಳಿಸುವುದು ಪ್ರಥಮ ಆದ್ಯತೆಯಾಗಿದೆ” ಎಂದು ಅವರು ಹೇಳಿದರು.

ಇದಕ್ಕಾಗಿ ಸರ್ಕಾರ ತಕ್ಷಣಕ್ಕೆ ಅಗತ್ಯವಿರುವ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಮತ್ತು ದೀರ್ಘಾವಧಿಯಲ್ಲಿ ಅಗತ್ಯವಿರುವ ನಿರ್ಧಾರಗಳನ್ನು ಕೂಡ ಕೈಗೊಳ್ಳುತ್ತಿದೆ” ಎಂದು ಅವರು ಹೇಳಿದರು ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯವಾಗುವಂತೆ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರುಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಬಡವರಿಗೆ ತಕ್ಷಣದ ಪ್ರಯೋಜನಗಳನ್ನು ಒದಗಿಸಲು ಸಾಕಷ್ಟು ಸಹಾಯ ಮಾಡಿದೆ.   ಯೋಜನೆಯಡಿ ಸುಮಾರು 74  ಕೋಟಿ ಫಲಾನುಭವಿಗಳಿಗೆ ಪಡಿತರವನ್ನು ವಿತರಿಸಲಾಗಿದೆವಲಸೆ ಕಾರ್ಮಿಕರಿಗೆ ಉಚಿತ ಪಡಿತರವನ್ನೂ ಸಹ ನೀಡಲಾಗಿದೆಮಹಿಳೆಯರುಅಂಗವಿಕಲರುವೃದ್ಧರುಕಾರ್ಮಿಕರು ಎಲ್ಲರೂ ಇದರ ಲಾಭ ಪಡೆದಿದ್ದಾರೆಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಕೋಟಿಗಿಂತ ಹೆಚ್ಚು ಅಡುಗೆ ಅನಿಲವನ್ನು ಉಚಿತವಾಗಿ ವಿತರಿಸಿದೆ. 50 ಲಕ್ಷ ಖಾಸಗಿ ಉದ್ಯೋಗಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಸರ್ಕಾರದ ಪಾಲುದಾರಿಕೆಯ 24% ರಷ್ಟು ಅಂದರೆ ರೂ 800 ಕೋಟಿಗಳಷ್ಟು ಇಪಿಎಫ್ ನ್ನು ಪಡೆದುಕೊಂಡಿದ್ದಾರೆ.

ಉದ್ದೇಶಸೇರ್ಪಡೆಹೂಡಿಕೆಮೂಲಭೂತ ಸೌಲಭ್ಯ ಮತ್ತು ಆವಿಷ್ಕಾರಗಳು ಪ್ರಮುಖ ವಿಷಯಗಳನ್ನು ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಮತ್ತು ಭಾರತವನ್ನು ತ್ವರಿತಗತಿಯ ಅಭಿವೃದ್ಧಿ ಹಾದಿಗೆ ತರಲು ಪ್ರಧಾನ ಮಂತ್ರಿಗಳು ಪಟ್ಟಿ ಮಾಡಿದ್ದಾರೆಇತ್ತೀಚೆಗೆ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರಗಳಲ್ಲಿ ಇವು ಪ್ರತಿಬಿಂಬಿಸುತ್ತವೆ ಎಂದೂ ಅವರು ಹೇಳಿದರುಭವಿಷ್ಯಕ್ಕಾಗಿ ಇಂತಹ ಅನೇಕ ಕ್ಷೇತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೂಡಾ ಅವರು ಹೇಳಿದರು.

ನಮಗೆ ಸುಧಾರಣೆಗಳೆನ್ನುವುವು ಯಾವುದೇ ಯಾದೃಚ್ಛಿಕ ಅಥವಾ ಅಸ್ತವ್ಯಸ್ತ ನಿರ್ಧಾರಗಳಲ್ಲಸುಧಾರಣೆಗಳು ವ್ಯವಸ್ಥಿತಯೋಜಿತಸಂಯೋಜಿತಅಂತರ್ ಸಂಪರ್ಕ ಹೊಂದಿದ ಮತ್ತು ಭವಿಷ್ಯದ ಪ್ರಕ್ರಿಯೆಗಳಾಗಿವೆನಮಗೆ  ಸುಧಾರಣೆಗಳು ಎಂದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಹೊಂದುವುದು ಮತ್ತು ತರ್ಕಬದ್ಧವಾಗಿ ಅವುಗಳ ತೀರ್ಮಾನ ತೆಗೆದುಕೊಳ್ಳುವುದಾಗಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರುದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ), ಬ್ಯಾಂಕುಗಳ ವಿಲೀನತೆಜಿ ಎಸ್ ಟಿ ಮತ್ತು ಪ್ರತ್ಯಕ್ಷವಲ್ಲದ ಐಟಿ ಮೌಲ್ಯಮಾಪನದಂತಹ ಖಾಸಗಿ ಉದ್ಯಮಗಳಿಗೆ ಪ್ರೋತ್ಸಾಹದಾಯಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಸರ್ಕಾರದ ಉಪಕ್ರಮಗಳನ್ನು ಅವರು ಪಟ್ಟಿ ಮಾಡಿದರು.

ದೇಶ ತಮ್ಮ ಭರವಸೆಯನ್ನು ಕಳೆದುಕೊಳ್ಳದಂತಹ ನೀತಿ ಸುಧಾರಣೆಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರುಕೃಷಿ ಕ್ಷೇತ್ರದಲ್ಲಿ ಸ್ವಾತಂತ್ರ್ಯಾ ನಂತರ ರೂಪಿಸಿದ ನೀತಿ ನಿಯಮಗಳು ರೈತರನ್ನು ಮಧ್ಯವರ್ತಿಗಳ ಹಿಡಿತಕ್ಕೆ ಒಳಗಾಗುವಂತೆ ಮಾಡಿದ್ದವು ಎಂದು ಪ್ರಧಾನ ಮಂತ್ರಿಗಳು ಹೇಳಿದರುಆದರೆ ಕೃಷಿ ಉತ್ಪಾದನಾ ಮಾರುಕಟ್ಟೆ ಸಮೀತಿ (ಎಪಿಎಂಸಿಕಾಯ್ದೆಯಲ್ಲಿ ತಿದ್ದುಪಡಿ ತಂದ ನಂತರ ಈಗ ದೇಶದ ಯಾವುದೇ ರಾಜ್ಯದಲ್ಲಿ ರೈತರು ಯಾರಿಗೆ ಬೇಕಾದರೂ ತಮ್ಮ ಸರಕನ್ನು ನೇರ ಮಾರಾಟ ಮಾಡುವ ಹಕ್ಕು ಪಡೆದಿದ್ದಾರೆ.   

ಉದ್ಯೋಗಾವಕಾಶಗಳನ್ನು ಹೆಚ್ಚಿಸಲುಕೆಲಸಗಾರರ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಮಿಕ ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರುಖಾಸಗಿ ವಲಯಗಳಿಗೆ ಅವಕಾಶ ನೀಡದ ಕಾರ್ಯತಂತ್ರರಹಿತ ಕ್ಷೇತ್ರಗಳನ್ನು ಕೂಡಾ ಮುಕ್ತವಾಗಿಸಲಾಗಿದೆಕಲ್ಲಿದ್ದಲು ಕ್ಷೇತ್ರದಲ್ಲಿ ಈಗ ವಾಣಿಜ್ಯಿಕ ಗಣಿಗಾರಿಕೆಗೆ ಅವಕಾಶವಿದೆ ಎಂದು ಕೂಡ ಅವರು ಹೇಳಿದರು. “ ಸರ್ಕಾರ ಮುನ್ನಡೆಯುತ್ತಿರುವ ದೆಸೆಯಲ್ಲಿ ಅದು ನಮ್ ಗಣಿಗಾರಿಕಾ ಕ್ಷೇತ್ರಇಂಧನ ಕ್ಷೇತ್ರ ಅಥವಾ ಸಂಶೋಧನಾ ಮತ್ತು ತಂತ್ರಜ್ಞಾನ ಕ್ಷೇತ್ರವೇ ಆಗಿರಲಿ ಉದ್ಯಮ ಪ್ರತಿ ಕ್ಷೇತ್ರದಲ್ಲೂ ಅವಕಾಶ ಪಡೆಯುತ್ತಿದೆ ಮತ್ತು ಯುವಕರಿಗೂ ಸಹ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆನೀವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುತ್ತಿರಬಹುದು ಅಥವಾ ಪರಮಾಣು ಶಕ್ತಿಯ ಹೊಸ ಅವಕಾಶಗಳನ್ನು ಅನ್ವೇಷಿಸಲು ಬಯಸುತ್ತಿರಬಹುದು ಎಲ್ಲ ಸಾಧ್ಯಾಸಾಧ್ಯತೆಗಳು ನಿಮಗಾಗಿ ಮುಕ್ತವಾಗಿವೆ ಎಂದು ಪ್ರಧಾನ ಮಂತ್ರಿ ಹೇಳಿದರು.      

ಸಣ್ಣಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ ಎಸ್ ಎಂ ವಲಯ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಿದ್ದಂತೆ ಮತ್ತು ಜಿಡಿಪಿಯ 30% ರಷ್ಟು ಕೊಡುಗೆಯನ್ನು ನೀಡುತ್ತಿವೆ ಎಂದು ಪ್ರಧಾನ ಮಂತ್ರಿಗಳು ಹೇಳಿದರುಎಂ ಎಸ್ ಎಂ   ಗಳ ವ್ಯಾಖ್ಯಾನವನ್ನು ನವೀಕರಿಸುವ ಉದ್ಯಮದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆಇದು ಎಂ ಎಸ್ ಎಂ  ಗಳು ಯಾವುದೇ ಆತಂಕವಿಲ್ಲದೆ ವೃದ್ಧಿಸಲು ಅನುವು ಮಾಡಿಕೊಡುತ್ತದೆ ಮತ್ತು ಅವು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯಾವುದೇ ಇತರ ಮಾರ್ಗಗಳನ್ನು ಅನುಸರಿಸಬೇಕಿಲ್ಲ ಎಂದು ಅವರು  ಹೇಳಿದರುದೇಶದಲ್ಲಿನ ಎಂ ಎಸ್ ಎಂ  ಗಳಲ್ಲಿ ಕಾರ್ಯನಿರ್ವಹಿಸಲುವ ಕೋಟ್ಯಾಂತರ ಸಹವರ್ತಿಗಳಿಗೆ ಅನುಕೂಲವಾಗಲು ರೂ  200 ಕೋಟಿಗಳಷ್ಟು ಜಾಗತಿಕ ಟೆಂಡರ್ ಗಳ ಖರೀದಿಯನ್ನು ಸರ್ಕಾರ ರದ್ದುಪಡಿಸಿದೆ ಎಂದೂ ಸಹ ಅವರು ಹೇಳಿದರು .

ಜಗತ್ತಿನಾದ್ಯಂತ ಭಾರತದ ಕುರಿತು ನಿರೀಕ್ಷೆ ಹೆಚ್ಚಿದೆ ಮತ್ತು ಅವರು ಭಾರತದ  ಮೇಲೆ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರುಭಾರತ 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಾಡಿ ಸಹಾಯ ಮಾಡಿದೆ ಎಂದು ಕೂಡಾ ಅವರು ಹೇಳಿದರುವಿಶ್ವ ನಂಬಿಕಸ್ಥ ಮತ್ತು ವಿಶ್ವಾಸಾರ್ಹ ಪಾಲುದಾರನಿಗಾಗಿ ಎದುರು ನೋಡುತ್ತಿದೆಭಾರತದಲ್ಲಿ  ಸಾಮರ್ಥ್ಯ ಶಕ್ತಿ ಮತ್ತು ಕೌಶಲ್ಯ ಹೊಂದಿದೆ ಎಂದು  ಪ್ರಧಾನ ಮಂತ್ರಿ ಹೇಳಿದರುಹಾಗಾಗಿ ಭಾರತದ ಕುರಿತು ಬೆಳೆದಿರುವಂತಹ  ವಿಶ್ವಾಸದ ಸಂಪೂರ್ಣ ಲಾಭವನ್ನು ಉದ್ಯಮಗಳು ಪಡೆಯುವಂತೆ ಅವರು ಆಗ್ರಹಿಸಿದರು.  

ನಾವು ಮತ್ತೆ ಅಭಿವೃದ್ಧಿಶೀಲರಾಗುವುದು ಕಷ್ಟವೇನಲ್ಲ ಎಂದು ಅವರು ಒತ್ತಿ ಹೇಳಿದರುಈಗ ನಮ್ಮಲ್ಲಿರುವ ದೊಡ್ಡ ವಿಷಯವೆಂದರೆ ಭಾರತದ ಉದ್ಯಮಗಳಿಗೆ ಮುನ್ನಡೆಯಲು ಸ್ಪಷ್ಟ ಮಾರ್ಗ ದೊರೆತಿದೆಅದೇ ಆತ್ಮನಿರ್ಭರ್ ಭಾರತಆತ್ಮನಿರ್ಭರ್ ಭಾರತ ಎಂದರೆ ನಾವು ಮತ್ತಷ್ಟು ಬಲಿಷ್ಠರಾಗುತ್ತೇವೆ ಮತ್ತು ನಾವು ಜಗತ್ತನ್ನು ಆವರಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರುಆತ್ಮನಿರ್ಭರ್ ಭಾರತ ಎಂದರೆ ವಿಶ್ವದ ಆರ್ಥಿಕತೆಯೊಂದಿಗೆ ಸಂಪೂರ್ಣ ಸಂಯೋಜಿತಗೊಳ್ಳುವುದು ಮತ್ತು ಸಹಕಾರಿಯಾಗುವುದಾಗಿದೆ .    

 

ಜಾಗತಿಕ ಸರಬರಾಜು ಸರಪಳಿಯಲ್ಲಿ ಭಾರತದ ಪಾಲನ್ನು ಬಲಿಷ್ಠಗೊಳಿಸುವಂತಹ ಧೃಡವಾದ ಸ್ಥಳೀಯ ಸರಬರಾಜು ಸರಪಳಿಯ ರಚಣೆಗೆ ಹೂಡಿಕೆಯ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ಒತ್ತಿ ಹೇಳಿದರುಕೊರೊನಾ ನಂತರದ ದಿನಗಳಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ಸಿಐಐ ನಂತಹ ದೊಡ್ಡ ಸಂಸ್ಥೆಗಳು ಹೊಸ ಜವಾಬ್ದಾರಿಯೊಂದಿಗೆ  ಮುಂದೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆದೇಶದಲ್ಲಿ ಉತ್ಪಾದಿಸುವ ವಸ್ತುಗಳನ್ನು ವಿಶ್ವಕ್ಕಾಗಿ ತಯಾರಿಸುವ ಅಗತ್ಯತೆಯ ಕುರಿತು ಅವರು ಒತ್ತಿ ಹೇಳಿದರುಎಲ್ಲ ಕ್ಷೇತ್ರಗಳಲ್ಲಿನ ಉತ್ಪಾದಕತೆಯನ್ನು ಹೆಚ್ಚಿಸಲು ಉದ್ಯಮಗಳು ನಿಗದಿತ ಗುರಿ ಹೊಂದಿರಬೇಕೆಂದು ಅವರು ಆಗ್ರಹಿಸಿದರುಕೇವಲ ತಿಂಗಳಲ್ಲಿ ನೂರಾರು ಕೋಟಿ ಬೆಲೆ ಬಾಳುವ ವೈಯಕ್ತಿಕ ರಕ್ಷಣಾ ಸಾಧನಗಳನ್ನು ತಯಾರಿಸಿದ – ಪಿಪಿಇ ಉದ್ಯಮಗಳನ್ನು ಅವರು ಶ್ಲಾಘಿಸಿದರು.   

ಗ್ರಾಮೀಣ ಆರ್ಥಿಕತೆಯಲ್ಲಿ ರೈತರೊಂದಿಗೆ ಹೂಡಿಕೆ ಮಾಡುವ ಮತ್ತು ಸಹಭಾಗಿತ್ವದ ಅವಕಾಶ ಸೃಷ್ಟಿಸುವ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ಉದ್ಯಮಗಳನ್ನು ಪ್ರಧಾನ ಮಂತ್ರಿಯವರು ಆಗ್ರಹಿಸಿದರುಈಗ ಗ್ರಾಮದ ಸಮೀಪವಿರುವ ಸ್ಥಳೀಯ ಕೃಷಿ ಉತ್ಪನ್ನಗಳ ಸಮೂಹಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಲಾಗುತ್ತಿದೆದೇಶಾಭಿವೃದ್ಧಿಯ ಪಯಣದಲ್ಲಿ ಖಾಸಗಿ ವಲಯವನ್ನು ಪಾಲುದಾರನ್ನಾಗಿ  ಸರ್ಕಾರ ಪರಿಗಣಿಸುತ್ತದೆ ಎಂದು ಅವರು ಹೇಳಿದರುಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಅಗತ್ಯತೆಯನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರುದೇಶವನ್ನು ಸ್ವಾವಲಂಬಿಯಾಗಿಸಲು ಮತ್ತು  ಸಂಕಲ್ಪವನ್ನು ಪೂರೈಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸುವಂತೆ ಪ್ರತಿಜ್ಞೆ ಮಾಡಲು ಅವರು ಉದ್ಯಮಗಳನ್ನು ಕೇಳಿಕೊಂಡರು.    

***


(Release ID: 1628914) Visitor Counter : 241