ರೈಲ್ವೇ ಸಚಿವಾಲಯ 
                
                
                
                
                
                
                    
                    
                        ಜೂನ್ 1, 2020 ರಿಂದ ದೇಶಾದ್ಯಂತ 200 ವಿಶೇಷ ರೈಲುಗಳ ಸಂಚಾರ ಪ್ರಾರಂಭ
                    
                    
                        
                    
                
                
                    Posted On:
                31 MAY 2020 6:12PM by PIB Bengaluru
                
                
                
                
                
                
                ಜೂನ್ 1, 2020 ರಿಂದ ದೇಶಾದ್ಯಂತ 200 ವಿಶೇಷ ರೈಲುಗಳ ಸಂಚಾರ ಪ್ರಾರಂಭ
ಜೂನ್ 1 ರಿಂದ ಪ್ರಾರಂಭವಾಗುವ 200 ರೈಲುಗಳಲ್ಲಿ, ಮೊದಲ ದಿನವೇ 1.45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲಿದ್ದಾರೆ
ಜೂನ್ 01 ರಿಂದ 30, 2020 ರವರೆಗಿನ ಮುಂಗಡ ಕಾಯ್ದಿರಿಸುವಿಕೆ ಅವಧಿಗೆ ಸುಮಾರು 26 ಲಕ್ಷ ಪ್ರಯಾಣಿಕರು ಮುಂಗಡ ಕಾಯ್ದಿರಿಸಿದ್ದಾರೆ
ಪ್ರಯಾಣಿಕರು ನಿಲ್ದಾಣವನ್ನು 90 ನಿಮಿಷಗಳ ಮುಂಚಿತವಾಗಿ ತಲುಪಬೇಕು;
ಮುಂಗಡ ಕಾಯ್ದಿರಿಸಿದ ಖಚಿತ/ ಆರ್.ಎ.ಸಿ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ
ರೈಲ್ವೆ ನಿಲ್ದಾಣಕ್ಕೆ ಪ್ರವೇಶಿಸಲು ಮತ್ತು ರೈಲು ಹತ್ತಲು ಅವಕಾಶವಿರುತ್ತದೆ
 
ಶ್ರಮಿಕ್ ವಿಶೇಷ ರೈಲುಗಳು ಮತ್ತು ಮೇ 12 ರಿಂದ ಪ್ರಾರಂಭವಾದ 30 ವಿಶೇಷ ಎ.ಸಿ ರೈಲುಗಳಿಗೆ
ಹೆಚ್ಚುವರಿಯಾಗಿ ಈ ರೈಲು ಸೇವೆಗಳನ್ನು ಪ್ರಾರಂಭಿಸಲಾಗಿದೆ
 
ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸಲಾಗುವುದು 
ಮತ್ತು ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ರೈಲು ನಿಲ್ದಾಣ ಪ್ರವೇಶಿಸಲು/ ರೈಲು ಹತ್ತಲು ಅವಕಾಶವಿರುತ್ತದೆ
 
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಯೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರ ರೈಲ್ವೆ ಸಚಿವಾಲಯವು ಭಾರತೀಯ ರೈಲ್ವೆಯ ಪ್ರಯಾಣಿಕರ ರೈಲು ಸೇವೆಗಳನ್ನು ಮತ್ತಷ್ಟು ಹೆಚ್ಚಿಸಿ, ಜೂನ್ 1, 2020 ಭಾಗಶಃ ಪುನಃರಾರಂಭಿಸುವುದಾಗಿ ತಿಳಿಸಿದೆ. ಮೊದಲನೇ ದಿನದಲ್ಲಿ ಪ್ರಾರಂಭವಾಗುವ 200 ರೈಲುಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲಿದ್ದಾರೆ. ಭಾರತೀಯ ರೈಲ್ವೆ ಜೂನ್ 01,2020(ಅಂದರೆ ನಾಳೆ) ರಿಂದ ಕೆಳಗಿನ ಅನುಬಂಧದಲ್ಲಿ ಪಟ್ಟಿ ಮಾಡಿರುವಂತೆ 200 ಪ್ರಯಾಣಿಕರ ರೈಲು ಸೇವೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ (ಅನುಬಂಧ/ಪಟ್ಟಿಯ ಲಿಂಕ್ ಕೊನೆಯಲ್ಲಿದೆ).
ಮೇ 01, 2020 ಪ್ರಾರಂಭವಾದ ಈಗಿರುವ ಶ್ರಮಿಕ್ ವಿಶೇಷ ರೈಲುಗಳ ಹಾಗೂ ಮೇ 12, 2020 ರಂದು ಪ್ರಾರಂಭವಾದ 30 ವಿಶೇಷ ಎ.ಸಿ ರೈಲುಗಳ ಸಂಚಾರದ ಹೊರತಾಗಿ ಪ್ರಯಾಣಿಕರ ರೈಲು ಸೇವೆಗಳ ಶ್ರೇಣೀಕೃತ ಪುನಃಸ್ಥಾಪನೆಯ ಪ್ರಮುಖ ಹೆಜ್ಜೆಯಾಗಿ, ಭಾರತೀಯ ರೈಲ್ವೆ ನಾಳೆ (ಜೂನ್ 01, 2020) ರಂದು 200 ರೈಲುಗಳನ್ನು ಪ್ರಾರಂಭಿಸಲಿದೆ. 
ಈ ರೈಲುಗಳು ಸಾಮಾನ್ಯ ರೈಲುಗಳ ಮಾದರಿಯಲ್ಲಿವೆ. ಇವು ಎ.ಸಿ ಮತ್ತು ನಾನ್ ಎ.ಸಿ ತರಗತಿಗಳ ಭೋಗಿಗಳನ್ನು ಹೊಂದಿರುವ ಸಂಪೂರ್ಣ ಕಾಯ್ದಿರಿಸಿದ ರೈಲುಗಳಾಗಿವೆ. ಜನರಲ್ (ಜಿ.ಎಸ್) ಭೋಗಿಗಳು ಮುಂಗಡ ಕಾಯ್ದಿರಿಸಿದ ಕುಳಿತುಕೊಳ್ಳುವ ಸೌಕರ್ಯಗಳನ್ನು ಮಾತ್ರ ಹೊಂದಿರುತ್ತವೆ. ರೈಲಿನಲ್ಲಿ ಯಾವುದೇ ಕಾಯ್ದಿರಿಸದ ಭೋಗಿಗಳು/ಕೋಚ್ ಇರುವುದಿಲ್ಲ. ಸಾಮಾನ್ಯ ವರ್ಗವಾರು ಶುಲ್ಕವನ್ನು ವಿಧಿಸಲಾಗುತ್ತದೆ ಮತ್ತು ಕಾಯ್ದಿರಿಸಿದ ಜಿ.ಎಸ್ (ಜನರಲ್ ಸಿಟ್ಟಿಂಗ್) ಬೋಗಿಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲಾಗಿದೆ, ಕಾಯ್ದಿರಿಸಿದ ರೈಲುಗಳಿಗೆ ಎರಡನೇ ಆಸನ (2 ಎಸ್) ಶುಲ್ಕ ಮಾತ್ರ ವಿಧಿಸಲಾಗುತ್ತದೆ ಮತ್ತು ಎಲ್ಲಾ ಪ್ರಯಾಣಿಕರಿಗೆ ಆಸನ ನೀಡಲಾಗುವುದು. 
ಐ.ಆರ್.ಸಿ.ಟಿ.ಸಿ. ಜಾಲತಾಣ ಅಥವಾ ಮೊಬೈಲ್ ಆ್ಯಪ್ ಮೂಲಕ ರೈಲುಗಳ ಆಸನಗಳ ಟಿಕೆಟ್ ಕಾಯ್ದಿರಿಸಲಾಗುತ್ತಿದೆ. ಇಂದು ಬೆಳಗ್ಗೆ 09.00 ಗಂಟೆಗೆ, ಪ್ರಯಾಣಿಕರ ಒಟ್ಟು ಮುಂಗಡ ಬುಕಿಂಗ್ 25,82,671 ಆಗಿತ್ತು. ಭಾರತೀಯ ರೈಲ್ವೆ ಮೀಸಲಾತಿ ಕೌಂಟರ್ಗಳು, ಸಾಮಾನ್ಯ ಸೇವಾ ಕೇಂದ್ರಗಳು (ಸಿ.ಎಸ್.ಸಿ) ಮತ್ತು ಟಿಕೆಟಿಂಗ್ ಏಜೆಂಟ್ಗಳ ಮೂಲಕ ಮೀಸಲಾತಿ ಟಿಕೆಟ್ ಕಾಯ್ದಿರಿಸಲು ಅನುಮತಿ ನೀಡಿದೆ.
ಈ ಹಿಂದೆ ತಿಳಿಸಿದಂತೆ, ಭಾರತೀಯ ರೈಲ್ವೆ 12.05.2020 ರಿಂದ ಅನ್ವಯವಾಗುವಂತೆ ತನ್ನ 30 ವಿಶೇಷ ರಾಜಧಾನಿ ಮಾದರಿಯ ರೈಲುಗಳಿಗೆ ಸೂಚನೆಗಳನ್ನು ಮಾರ್ಪಡಿಸಿದೆ ಮತ್ತು 01.06.2020 ರಿಂದ 200 ವಿಶೇಷ ಮೇಲ್ ಎಕ್ಸ್ ಪ್ರೆಸ್ ಅನ್ನು (ಒಟ್ಟು 230 ರೈಲುಗಳು) ಸೇರಿಸಿ ನೂತನ ಸೂಚನೆ ಜಾರಿಗೊಳಿಸಲಾಗಿದೆ. ಎಲ್ಲಾ 230 ವಿಶೇಷ ರೈಲುಗಳ ಮುಂಗಡ ಕಾಯ್ದಿರಿಸುವ ಅವಧಿಯನ್ನು (ಎ.ಆರ್.ಪಿ) 30 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಎಲ್ಲಾ 230 ವಿಶೇಷ ರೈಲುಗಳಲ್ಲಿ ಪಾರ್ಸೆಲ್ ಮತ್ತು ಸಾಮಾನುಗಳನ್ನು ಕಾಯ್ದಿರಿಸಲು ಅನುಮತಿ ನೀಡಲಾಗುತ್ತದೆ. ಈ ಮೇಲಿನ ಬದಲಾವಣೆಗಳನ್ನು ಮೇ 31, 2020 ರ ರೈಲು ಬುಕಿಂಗ್ ದಿನಾಂಕದ 08:00 ಗಂಟೆಯಿಂದ ಜಾರಿಗೆ ತರಲಾಗಿದೆ. ಪ್ರಸ್ತುತ ಬುಕಿಂಗ್, ದಾರಿ ನಡುವಿನ ನಿಲ್ದಾಣಗಳಿಗೆ ತತ್ಕಾಲ್ ಕೋಟಾ ಹಂಚಿಕೆ ಇತ್ಯಾದಿ ಈ ಹಿಂದಿನ ಸಾಮಾನ್ಯ ರೈಲುಗಳಂತೆಯೇ ಇರುತ್ತದೆ. ಪ್ರಯಾಣ ದಿನಾಂಕ ಜೂನ್ 30, 2020 ಮತ್ತು ಆನಂತರದ ದಿನಗಳ ತತ್ಕಾಲ್ ಟಿಕೆಟ್ ಕಾಯ್ದಿರಿಸುವುದನ್ನು ಜೂನ್ 29, 2020 ರಿಂದ ಮಾಡಬಹುದು. ಭಾರತೀಯ ರೈಲ್ವೆ www.indianrailways.gov.in ವೆಬ್ ಸೈಟ್ನಲ್ಲಿ ಟ್ರಾಫಿಕ್ ಕಮರ್ಷಿಯಲ್ ಡೈರೆಕ್ಟರೇಟ್ (Traffic Commercial Directorate) ನಲ್ಲಿನ ವಾಣಿಜ್ಯ ಸುತ್ತೋಲೆಗಳ(commercial circulars) ಅಡಿಯಲ್ಲಿ ಈ ಸೂಚನೆಗಳನ್ನು ವೀಕ್ಷಿಸಬಹುದು .
ರೈಲುಗಳ ಚಾರ್ಟಿಂಗ್ ಮತ್ತು ಬೋರ್ಡಿಂಗ್:
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಆರ್.ಎ.ಸಿ ಮತ್ತು ಕಾಯುವಿಕೆ ಪಟ್ಟಿಯನ್ನು ರಚಿಸಲಾಗುತ್ತದೆ.
ಯಾವುದೇ ಮುಂಗಡ ಕಾಯ್ದಿರಿಸದ (ಯು.ಟಿ.ಎಸ್) ಟಿಕೆಟ್ಗಳನ್ನು ನೀಡಲಾಗುವುದಿಲ್ಲ ಮತ್ತು ಪ್ರಯಾಣದ ಸಮಯದಲ್ಲಿ ಯಾವುದೇ ಪ್ರಯಾಣಿಕರಿಗೆ ಯಾವುದೇ ಟಿಕೆಟ್ಗಳನ್ನು ನೀಡಲಾಗುವುದಿಲ್ಲ.
ಅನುಮತಿಸಲಾಗಿದೆ- ಸಂಪೂರ್ಣ ಕಾಯ್ದಿರಿಸಿದ/ದೃಢೀಕರಿಸಿದ ಮತ್ತು ಆರ್.ಎ.ಸಿ ಪ್ರಯಾಣಿಕರ ಜೊತೆಗೆ, ಭಾಗಶಃ ವೇಟ್ಲಿಸ್ಟ್ ಮಾಡಿದ ಟಿಕೆಟ್ ಹೊಂದಿರುವವರು (ಒಂದೇ ಪಿ.ಎನ್.ಆರ್.ನಲ್ಲಿದ್ದರೆ ಕಾಯ್ದಿರಿಸಿ/ದೃಢೀಕರಿಸಲ್ಪಟ್ಟಿದ್ದರೆ ಮತ್ತು ಡಬ್ಲ್ಯೂ.ಎಲ್ ಪ್ರಯಾಣಿಕರಿಬ್ಬರೂ) ಸಹ ಅನುಮತಿಸಲಾಗಿದೆ.
ಅನುಮತಿಸಲಾಗಿಲ್ಲ - ವೇಟ್ ಲಿಸ್ಟ್ ಮಾಡಿದ ಪ್ರಯಾಣಿಕರು.
ಪ್ರಯಾಣ ದಿನಾಂಕ 30 ಜೂನ್, 30 2020 ಮತ್ತು ಆನಂತರದ ದಿನಗಳ ತತ್ಕಾಲ್ ಟಿಕೆಟ್ ಅನ್ನು ಜೂನ್ 29,2020 ರಿಂದ ಕಾಯ್ದಿರಿಸಬಹುದು.
ನಿಲ್ದಾಣದಿಂದ ರೈಲು ನಿಗದಿತ ನಿರ್ಗಮನಕ್ಕೆ ಕನಿಷ್ಠ 4 ಗಂಟೆಗಳ ಮೊದಲು “ಮೊದಲ ಚಾರ್ಟ್” ಅನ್ನು ಸಿದ್ಧಪಡಿಸಲಾಗುವುದು ಮತ್ತು ನಿಗದಿತ ನಿರ್ಗಮನದ ಕನಿಷ್ಠ 2 ಗಂಟೆಗಳ ಮೊದಲು “ಎರಡನೇ ಚಾರ್ಟ್” (ಈ ಹಿಂದೆ ಅದು 30 ನಿಮಿಷಗಳು) ಸಿದ್ಧಪಡಿಸಬೇಕು .
ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸಲಾಗುವುದು ಮತ್ತು ಕೋವಿಡ್ 19 ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ರೈಲು ನಿಲ್ದಾಣ ಪ್ರವೇಶಿಸಲು / ಹತ್ತಲು ಅವಕಾಶವಿದೆ.
ಈ ವಿಶೇಷ ಸೇವೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಗಮನಿಸಬೇಕು:
1. ಎಲ್ಲಾ ಪ್ರಯಾಣಿಕರು ಪ್ರವೇಶ ಸಂದರ್ಭದಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖಕವಚ / ಮುಖಗವಸು(ಗುರಾಣಿ)ಗಳನ್ನು ಕಡ್ಡಾಯವಾಗಿ ಧರಿಸಬೇಕು.
2. ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ಅನುಕೂಲವಾಗುವಂತೆ ಪ್ರಯಾಣಿಕರು 90 ನಿಮಿಷಗಳ ಮುಂಚಿತವಾಗಿ ನಿಲ್ದಾಣವನ್ನು ತಲುಪಬೇಕು. ಲಕ್ಷಣರಹಿತವಾಗಿ ಕಂಡುಬರುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ.
3. ಪ್ರಯಾಣಿಕರು ಸಾಮಾಜಿಕ ಅಂತರವನ್ನು ಪಾಲಿಸಿ ನಿಯಮ ಕಾಪಾಡಬೇಕು.
4. ತಮ್ಮ ಅಂತಿಮತಾಣ/ಗಮ್ಯಸ್ಥಾನಕ್ಕೆ ಆಗಮಿಸಿದಾಗ, ಆಯಾಯ ರಾಜ್ಯ/ ಕೇಂದ್ರಾಡಳಿಪ್ರದೇಶಗಳು ಸೂಚಿಸಿರುವಂತಹ ಆರೋಗ್ಯ ಶಿಷ್ಠಾಚಾರಗಳನ್ನು ಪ್ರಯಾಣಿಸುವ ಪ್ರಯಾಣಿಕರು ಅನುಸರಿಸಬೇಕಾಗುತ್ತದೆ.
ರದ್ದತಿ ಮತ್ತು ಮರುಪಾವತಿ ನಿಯಮ: 
ರೈಲ್ವೆ ಪ್ರಯಾಣಿಕರು (ಟಿಕೆಟ್ ರದ್ದತಿ ಮತ್ತು ಶುಲ್ಕದ ಮರುಪಾವತಿ) ನಿಯಮಗಳು, 2015 ಪ್ರಯಾಣಿಕರಿಗೆ ಅನ್ವಯವಾಗುತ್ತದೆ. ಪ್ರಯಾಣಿಕರಲ್ಲಿ ಅಧಿಕ ಜ್ವರ ಅಥವಾ ಕೋವಿಡ್ -19 ನ ರೋಗಲಕ್ಷಣ ಕಂಡುಬಂದ ಕಾರಣಗಳಿಂದಾಗಿ ಪ್ರಯಾಣಿಸಲು ಅನುಮತಿಸಿಗದಿದ್ದರೆ, ಶುಲ್ಕ ಮರುಪಾವತಿ ಮಾಡಲಾಗುವುದು.
ರೈಲ್ವೇ ನಿಲ್ದಾಣದಲ್ಲಿ ರೋಗಲಕ್ಷಣ ಪರೀಕ್ಷೇಯ ಸಮಯದಲ್ಲಿ ಪ್ರಯಾಣಿಕರು ಹೆಚ್ಚಿನ ತಾಪಮಾನ / ಕೋವಿಡ್ -19 ರೋಗಲಕ್ಷಣಗಳನ್ನು ಇತ್ಯಾದಿಗಳ ಹೊಂದಿದ್ದರೆ, ಮುಂಗಡ ಕಾಯ್ದಿರಿಸಿದ ದೃಢಪಡಿಸಿದ ಟಿಕೆಟ್ಗಳನ್ನು ಹೊಂದಿದ್ದರೂ ಸಹ ಆ ಪ್ರಯಾಣಿಕರಿಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಮಾಡಲಾಗುವುದು: -
ಏಕ ಪ್ರಯಾಣಿಕ ರೋಗಲಕ್ಷಣ ಹೊಂದಿರುವ ಪಿ.ಎನ್.ಆರ್.ನಲ್ಲಿ.
ತಂಡದ ಟಿಕೆಟ್ನಲ್ಲಿ ಒಬ್ಬ ಪ್ರಯಾಣಿಕನು ಪ್ರಯಾಣಿಸಲು ಅನರ್ಹನೆಂದು ಕಂಡುಬಂದಲ್ಲಿ ಮತ್ತು ಅದೇ ಪಿ.ಎನ್.ಆರ್.ನಲ್ಲಿರುವ ಇತರ ಎಲ್ಲಾ ಪ್ರಯಾಣಿಕರು ಆ ಸಂದರ್ಭದಲ್ಲಿ ಪ್ರಯಾಣಿಸಲು ಬಯಸುವುದಿಲ್ಲವಾದರೆ ಎಲ್ಲಾ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಮಾಡಲಾಗುವುದು.
ತಂಡದ ಟಿಕೆಟ್ನಲ್ಲಿ ಒಬ್ಬ ಪ್ರಯಾಣಿಕನು ಪ್ರಯಾಣಿಸಲು ಅನರ್ಹನೆಂದು ಕಂಡುಬಂದಲ್ಲಿ, ಆದರೆ ಪಿ.ಎನ್.ಆರ್.ನಲ್ಲಿರುವ ಇತರ ಪ್ರಯಾಣಿಕರು ಆ ಸಂದರ್ಭದಲ್ಲಿ ಪ್ರಯಾಣಿಸಲು ಬಯಸಿದರೆ ಪ್ರಯಾಣಕ್ಕೆ ಅವಕಾಶವಿಲ್ಲದ ಪ್ರಯಾಣಿಕರಿಗೆ ಸಂಪೂರ್ಣ ಶುಲ್ಕ ಮರುಪಾವತಿ ಮಾಡಲಾಗುತ್ತದೆ.
ಮೇಲಿನ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ, ರೈಲ್ವೇ ನಿಲ್ದಾಣದ ಪ್ರವೇಶ / ತಪಾಸಣೆ / ಪರೀಕ್ಷೆ (ಸ್ಕ್ರೀನಿಂಗ್) ಪಾಯಿಂಟ್ ನಲ್ಲಿ “ಜ್ವರ ಅಥವಾ ಕೋವಿಡ್ -19 ರ ಲಕ್ಷಣಗಳಿಂದಾಗಿ ಪ್ರಯಾಣಿಸಲು ಅನುಮತಿಸದ ಪ್ರಯಾಣಿಕರ ಸಂಖ್ಯೆ ಒಂದು ಅಥವಾ ಹೆಚ್ಚಿನ ಪ್ರಯಾಣಿಕರು” ಎಂದು ಪ್ರಯಾಣಿಕರಿಗೆ ಟಿ.ಟಿ.ಇ. ಪ್ರಮಾಣಪತ್ರಗಳನ್ನು ನೀಡುತ್ತಾರೆ
	- .ಟಿ.ಇ. ಪ್ರಮಾಣಪತ್ರಗಳನ್ನು ಪಡೆದ ನಂತರ, ಪ್ರಯಾಣಿಸದ ಪ್ರಯಾಣಿಕರ ಮರುಪಾವತಿಗಾಗಿ ಪ್ರಯಾಣದ ದಿನಾಂಕದಿಂದ 10 ದಿನಗಳ ಳಗಾಗಿ ಟಿ.ಡಿ.ಆರ್. ಅನ್ನು ಸಲ್ಲಿಸಬೇಕಾಗುತ್ತದೆ. 
 
ಅಡುಗೆ:
ಟಿಕೆಟು ದರದಲ್ಲಿ/ಶುಲ್ಕದಲ್ಲಿ ಯಾವುದೇ ಅಡುಗೆ ಶುಲ್ಕವನ್ನು ಸೇರಿಸಲಿಲ್ಲ. ಪೂರ್ವ ಪಾವತಿಸಿದ ಊಟದ ಬುಕಿಂಗ್, ಇ-ಕ್ಯಾಟರಿಂಗ್ ಅನ್ನು ಸ್ಥಗಿತ/ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೂ, ಪ್ಯಾಂಟ್ರಿ ಭೋಗಿಯನ್ನು ಲಗತ್ತಿಸಲಾದ ಸೀಮಿತ ರೈಲುಗಳಲ್ಲಿ ಮಾತ್ರ ಸೀಮಿತ ತಿನ್ನಬಹುದಾದ ಮತ್ತು ಪ್ಯಾಕೇಜ್ ಮಾಡಿದ ಕುಡಿಯುವ ನೀರನ್ನು ಪಾವತಿ ಆಧಾರದ ಮೇಲೆ ಐ.ಆರ್.ಸಿ.ಟಿ.ಸಿ ಒದಗಿಸುತ್ತದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ಈ ವ್ಯತಿರಿಕ್ತ ಪರಿಣಾಮಗಳ/ಬದಲಾವಣೆಗಳ ಮಾಹಿತಿಯನ್ನು ಪ್ರಯಾಣಿಕರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ಯಾಸೆಂಜರ್ಗಳಿಗೆ ತಮ್ಮದೇ ಆದ ಆಹಾರ ಮತ್ತು ಕುಡಿಯುವ ನೀರನ್ನು ಜೊತೆಯಲ್ಲಿ ಸಾಗಿಸಲು ಅವಕಾಶ ನೀಡಿದ್ದು, ಈ ಕ್ರಮವನ್ನು ರೈಲ್ವೇ ಪ್ರೋತ್ಸಾಹಿಸುತ್ತದೆ. ರೈಲ್ವೆ ನಿಲ್ದಾಣಗಳಲ್ಲಿನ ಎಲ್ಲಾ ಸ್ಥಿರ ಅಡುಗೆಶಾಲೆ ಮತ್ತು ಮಾರಾಟ ಘಟಕಗಳು (ಬಹುಪಯೋಗಿ ಮಳಿಗೆಗಳು, ಪುಸ್ತಕ ಮಳಿಗೆಗಳು, ಇತರೆ / ರಸಾಯನಶಾಸ್ತ್ರಜ್ಞರ ಮಳಿಗೆಗಳು) ಮುಕ್ತವಾಗಿ ತೆರೆದಿರುತ್ತವೆ. ಫುಡ್ ಪ್ಲಾಜಾ ಮತ್ತು ಉಪಹಾರ/ರಿಫ್ರೆಶ್ ಮೆಂಟ್ ಕೋಣೆಗಳು ಇತ್ಯಾದಿಗಳ ಸಂದರ್ಭದಲ್ಲಿ, ಆಹಾರ ಪೊಟ್ಟಣ / ಬೇಯಿಸಿದ ವಸ್ತುಗಳನ್ನು ಖರೀದಿಸಿ ತೆಗೆದುಕೊಂಡು ಹೋಗಬಹುದು ವಿನಹಃ ಬೇಯಿಸಿದ ವಸ್ತುಗಳನ್ನು ಕುಳಿತು ತಿನ್ನುವ ಆಹಾರ ವ್ಯವಸ್ಥೆಗೆ ಮಾತ್ರ ಅನುಮತಿಯಿಲ್ಲ. 
ಲಿನಿನ್ ಮತ್ತು ಕಂಬಳಿ: ರೈಲಿನೊಳಗೆ ಯಾವುದೇ ಲಿನಿನ್, ಕಂಬಳಿ ಮತ್ತು ಪರದೆಗಳನ್ನು ಒದಗಿಸುವುದಿಲ್ಲ. ಪ್ರಯಾಣಕ್ಕಾಗಿ ತಮ್ಮದೇ ಆದ ಲಿನಿನ್ ಹೊದಿಕೆಗಳನ್ನು ಸಾಗಿಸಲು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಹಾಗಾಗಿ, ಎ.ಸಿ ಬೋಗಿಗಳೊಳಗಿನ ತಾಪಮಾನವನ್ನು ಈ ಉದ್ದೇಶದಿಂದ ಸೂಕ್ತವಾಗಿ ನಿಯಂತ್ರಣದಲ್ಲಿ ಇಡಲಾಗುತ್ತದೆ.
ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮುಖಾಮುಖಿ ಚಲನೆ ಇರದಂತೆ ಕಾರ್ಯಸಾಧ್ಯವಾದ ಮಟ್ಟಿಗೆ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಏರ್ಪಡಿಸಲಾಗಿದೆ. ಈ ಕುರಿತು ವ್ಯವಸ್ಥೆ ಮಾಡಲು ಮತ್ತು ದೃಢಪಡಿಸಿ/ಖಚಿತಪಡಿಸಿಕೊಳ್ಳಲು ವಲಯ ರೈಲ್ವೆಗೆ ಸೂಚನೆ ನೀಡಲಾಗಿದೆ. ನಿಲ್ದಾಣಗಳು ಮತ್ತು ರೈಲುಗಳಲ್ಲಿನ ಪ್ರಮಾಣಿತ ಸಾಮಾಜಿಕ ಅಂತರದ ಮಾರ್ಗಸೂಚಿಗಳಂತೆ ಸುರಕ್ಷತೆ, ಸುಭದ್ರತೆ ಮತ್ತು ನೈರ್ಮಲ್ಯ ಶಿಷ್ಠಾಚಾರಗಳನ್ನು ಏರ್ಪಡಿಸಿ ಅತಿ ಸನಿಹದಿಂದ ಮೇಲ್ವಿಚಾರಣೆ ಮಾಡಿ, ಗಮನಿಸಲು ವಲಯ ರೈಲ್ವೆಗೆ ಮಾರ್ಗದರ್ಶನ ನೀಡಲಾಗಿದೆ. 
ಎಲ್ಲಾ ಪ್ರಯಾಣಿಕರು “ಆರೋಗ್ಯ ಸೆತು” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕಡ್ಡಾಯವಾಗಿ ಬಳಸಬೇಕು. ಪ್ರಯಾಣ ಸಣದರ್ಭದಲ್ಲಿ ಜೊತೆಗೆ ಕಡಿಮೆ ಸಾಮಾನುಗಳೊಂದಿಗೆ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಅನುಬಂಧ ಪಟ್ಟಿಯ ಕೊಂಡಿ 
 
***
                
                
                
                
                
                (Release ID: 1628502)
                Visitor Counter : 405
                
                
                
                    
                
                
                    
                
                Read this release in: 
                
                        
                        
                            Punjabi 
                    
                        ,
                    
                        
                        
                            Assamese 
                    
                        ,
                    
                        
                        
                            English 
                    
                        ,
                    
                        
                        
                            हिन्दी 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Odia