PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 30 MAY 2020 6:35PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image0046PC5.jpg

 

ಕಳೆದ 24 ಗಂಟೆಗಳಲ್ಲಿ ಒಟ್ಟು 11,264 ಕೋವಿಡ್ -19 ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ; ಚೇತರಿಕೆ ದರ 47.40% ಗೆ ಜಿಗಿದಿದೆ. , 24 ಗಂಟೆಗಳಲ್ಲಿ 4.51% ಹೆಚ್ಚಳವಾಗಿದೆ; ಆಕ್ಟಿವ್ ರೋಗಿಗಳ ಸಂಖ್ಯೆ 89,987 ರಿಂದ 86,422 ಕ್ಕೆ ಇಳಿದಿದೆ.

ಕಳೆದ 24 ಗಂಟೆಗಳಲ್ಲ್ಲಿ ಒಟ್ಟು 11,264 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಇದು ದಿನವೊಂದಕ್ಕೆ ಗುಣಮುಖರಾಗಿ ಚೇತರಿಸಿಕೊಂಡ ಗರಿಷ್ಟ ರೋಗಿಗಳ ಸಂಖ್ಯೆ ಎಂದು ದಾಖಲಾಗಿದೆ. ಹೀಗಾಗಿ ಒಟ್ಟು 82,369 ರೋಗಿಗಳು ಕೋವಿಡ್ -19 ರಿಂದ ಚೇತರಿಸಿಕೊಂಡಂತಾಗಿದೆ. ಇದರಿಂದಾಗಿ ಕೋವಿಡ್ -19 ರೋಗಿಗಳ ಚೇತರಿಕೆ ದರ 47.40% ಆಗಿದೆ. ಹಿಂದಿನ ದಿನ ಚೇತರಿಕೆ ದರ 42.89 % ಇದ್ದಿತ್ತು, ಅದೀಗ 4.51% ಹೆಚ್ಚಳಗೊಂಡಿದೆ. ಚೇತರಿಸಿಕೊಂಡ ರೋಗಿಗಳ ಸಂಖ್ಯೆಯಲ್ಲಾದ ಹೆಚ್ಚಳದಿಂದ ಆಕ್ಟಿವ್ ಪ್ರಕರಣಗಳ ಸಂಖ್ಯೆಯೂ 89,987 ರೋಗಿಗಳಿಂದ ಮೇ 29 ಕ್ಕೆ 86,422 ಕ್ಕೆ ಇಳಿಕೆಯಾಗಿದೆ. ಎಲ್ಲಾ ಆಕ್ಟಿವ್ ಪ್ರಕರಣಗಳೂ ವೈದ್ಯಕೀಯ ನಿಗಾದಲ್ಲಿವೆ.

2020 ಮೇ 30 ರಲ್ಲಿದ್ದಂತೆ ಕಳೆದ 14 ದಿನಗಳಲ್ಲಿ ಪ್ರಕರಣಗಳ ದುಪ್ಪಟ್ಟು ದರ 13.3 ಇದ್ದದ್ದು, ಕಳೆದ ಮೂರು ದಿನಗಳಲ್ಲಿ 15.4 ಕ್ಕೆ ಸುಧಾರಿಸಿದೆ. ಮೃತ್ಯು ದರ 2.86 % . 2020 ಮೇ 29 ರಂದು 2.55 % ಆಕ್ಟಿವ್ ಕೋವಿಡ್ -19 ರೋಗಿಗಳು .ಸಿ.ಯು. ನಲ್ಲಿದ್ದಾರೆ, 0.48 % ವೆಂಟಿಲೇಟರಿನಲ್ಲಿದ್ದಾರೆ ಮತ್ತು 1.96% ಆಮ್ಲಜನಕ ಬೆಂಬಲದಲ್ಲಿದ್ದಾರೆ. ದೇಶದಲ್ಲಿ 462 ಸರಕಾರಿ ಪ್ರಯೋಗಾಲಯಗಳಲ್ಲಿ ಮತ್ತು 200 ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇದುವರೆಗೆ ಒಟ್ಟು 36,12,242 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದೆ, ಇದರಲ್ಲಿ 1,26,842 ಮಾದರಿಗಳನ್ನು ನಿನ್ನೆ ಪರೀಕ್ಷೆ ಒಳಪಡಿಸಲಾಗಿದೆ.

https://static.pib.gov.in/WriteReadData/userfiles/image/image005WR3O.jpg

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627755

ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಪತ್ರ

“.....ಕೊರೊನಾ ಭಾರತಕ್ಕೆ ಅಪ್ಪಳಿಸಿದಾಗ ಹಲವರು ಭಾರತವು ವಿಶ್ವಕ್ಕೆ ಒಂದು ಸಮಸ್ಯೆಯಾಗಬಹುದು ಎಂದು ಭಯಪಟ್ಟಿದ್ದರು. ಆದರೆ ಇಂದು ಸ್ಪಷ್ಟ ವಿಶ್ವಾಸದೊಂದಿಗೆ ಮತ್ತು ಪುನಶ್ಚೇತನದೊಂದಿಗೆ ನೀವು ಜಗತ್ತೇ ನಮ್ಮನ್ನು ನೋಡುವಂತೆ ಪರಿವರ್ತನೆ ತಂದಿದ್ದೀರಿ. ಸಾಮೂಹಿಕ ಶಕ್ತಿ ಮತ್ತು ಭಾರತೀಯರ ಸಾಮರ್ಥ್ಯವು ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಸಮೃದ್ದ ದೇಶಗಳಿಗೆ ಹೋಲಿಸಿದಾಗ ಸಾಟಿ ಇಲ್ಲದ್ದು ಎಂದು ನೀವು ಸಾಬೀತು ಮಾಡಿದ್ದೀರಿ. ಕೊರೊನಾ ವಾರಿಯರ್ ಗಳಿಗಾಗಿ ಚಪ್ಪಾಳೆ ತಟ್ಟುವುದರಿಂದ ಹಿಡಿದು, ಅವರಿಗಾಗಿ ದೀಪ ಹಚ್ಚಿ, ಭಾರತೀಯ ಸಶಸ್ತ್ರ ಪಡೆಗಳು ಅವರಿಗೆ ಗೌರವ ಸಲ್ಲಿಸುವವರೆಗೆ, ಜನತಾ ಕರ್ಫ್ಯೂ, ಅಥವಾ ರಾಷ್ಟ್ರೀಯ ಲಾಕ್ ಡೌನ್ ಅವಧಿಯಲ್ಲಿ ನಿಯಮಗಳಿಗೆ ವಿಧೇಯರಾಗಿ ನಡೆದುಕೊಳ್ಳುವಲ್ಲಿಯವರೆಗೆ ಪ್ರತಿಯೊಂದು ಸಂದರ್ಭದಲ್ಲಿಯೂ ನೀವು ಶ್ರೇಷ್ಟ ಭಾರತಕ್ಕೆ ಏಕ್ ಭಾರತ್ ಗ್ಯಾರಂಟಿ ಎಂಬುದನ್ನು ತೋರಿಸಿಕೊಟ್ಟಿದ್ದೀರಿ

ಇಂತಹ ತೀವ್ರತೆಯ ಬಿಕ್ಕಟ್ಟಿನಲ್ಲಿ , ಇದರಿಂದ ಯಾರಿಗೂ ತೊಂದರೆಯಾಗಿಲ್ಲ, ಅವರ ಸೌಲಭ್ಯಗಳಿಗೆ ಧಕ್ಕೆ ಬಂದಿಲ್ಲ ಎಂದು ಹೇಳಿಕೊಳ್ಳುವುದು ಖಚಿತವಾಗಿಯೂ ಸಾಧ್ಯವಿಲ್ಲ. ನಮ್ಮ ಕಾರ್ಮಿಕರು, ವಲಸೆ ಕಾರ್ಮಿಕರು, ಕರ ಕುಶಲಕರ್ಮಿಗಳು, ಕಲಾವಿದರು, ಸಣ್ಣ ಕೈಗಾರಿಕೆಗಳು, ಬೀದಿ ಬದಿ ಮಾರಾಟಗಾರರು ಮತ್ತು ದೇಶವಾಸಿಗಳು ಭಾರೀ ಸಮಸ್ಯೆಗಳನ್ನು , ತೊಂದರೆಗಳನ್ನು ಅನುಭವಿಸಿದ್ದಾರೆ. ಅವರ ಸಮಸ್ಯೆಗಳನ್ನು ನಿವಾರಿಸಲು ನಾವು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ ಮತ್ತು ದೃಢ ನಿರ್ಧಾರ ಮಾಡಿದ್ದೇವೆ.

ಆದಾಗ್ಯೂ ನಾವು ಎದುರಿಸುತ್ತಿರುವ ಕ್ಲಿಷ್ಟಕರ ಪರಿಸ್ಥಿತಿ ದುರಂತದ ಹಂತಕ್ಕೆ ಹೋಗದಂತೆ ನಾವು ಜಾಗ್ರತೆ ವಹಿಸಬೇಕಾಗುತ್ತದೆ. ಆದುದರಿಂದ ಎಲ್ಲಾ ನಿಯಮಗಳನ್ನು ಮತ್ತು ಮಾರ್ಗದರ್ಶಿಗಳನ್ನು ಪಾಲಿಸುವುದು ಪ್ರತೀ ಭಾರತೀಯನಿಗೂ ಮಹತ್ವದ್ದು. ನಾವು ಇದುವರೆಗೆ ತಾಳ್ಮೆಯನ್ನು ಪ್ರದರ್ಶಿಸಿದ್ದೇವೆ, ಮತ್ತು ನಾವು ಅದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಭಾರತವು ಇಂದು ಹಲವು ಇತರ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿರಲು ಮತ್ತು ಸುರಕ್ಷಿತವಾಗಿರಲು ಮಹತ್ವದ ಕಾರಣಗಳಲ್ಲಿ ಇದೂ ಒಂದು. ಇದು ಬಲು ಧೀರ್ಘ ಯುದ್ಧ, ಆದರೆ ನಾವು ವಿಜಯದ ಪಥದಲ್ಲಿ ಸಾಗುತ್ತಿದ್ದೇವೆ. ಮತ್ತು ವಿಜಯ ನಮ್ಮ ಸಾಮೂಹಿಕ ನಿರ್ಧಾರ…”

ವಿವರಗಳಿಗೆ : https://pib.gov.in/PressReleseDetail.aspx?PRID=1627794

ಲಾಕ್ ಡೌನ್ ಅವಧಿಯಲ್ಲಿ ವಿಶಾಲ ದೇಶದ ಎಲ್ಲ ಕಡೆಯಲ್ಲೂ ಪ್ರತಿಯೊಬ್ಬರಿಗೂ ಉಚಿತ ಆಹಾರ ಧಾನ್ಯ ಒದಗಿಸಿರುವುದು ಮತ್ತು ಅದರ ಸಾಗಾಟ ವ್ಯವಸ್ಥೆ ನಿಭಾಯಿಸಿರುವುದು ಬಹಳ ದೊಡ್ಡ ಕಾರ್ಯಾಚರಣೆ. ಮತ್ತು ಕಳೆದ ಒಂದು ವರ್ಷದಲ್ಲಿ ಸಚಿವಾಲಯದ ಬಹಳ ದೊಡ್ಡ ಸಾಧನೆ ಎಂದು ಶ್ರೀ ರಾಂ ವಿಲಾಸ್ ಪಾಸ್ವಾನ್ ಬಣ್ಣನೆ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ  ಸಚಿವರಾದ ಶ್ರೀ ರಾಂ ವಿಲಾಸ್ ಪಾಸ್ವಾನ್ ಅವರಿಂದು ಕಳೆದ ಒಂದು ವರ್ಷದಲ್ಲಿ ತಮ್ಮ ಸಚಿವಾಲಯದ ಸಾಧನೆಗಳ ಮತ್ತು ಕೈಗೊಂಡ ಉಪಕ್ರಮಗಳ ಪಟ್ಟಿ ಮಾಡಿದರು. ದೊಡ್ಡ ಸಾಧನೆ ಎಂದರೆ ಸರಕಾರವು ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ಒದಗಿಸಲು ಅದರ ಸಾಗಾಟ ಮತ್ತು ವಿತರಣೆಯನ್ನು ಮಾಡಿರುವುದಾಗಿದೆ. ಗ್ರಾಹಕ ರಕ್ಷಣಾ ಕಾಯ್ದೆ 2019 ಜಾರಿ , ಸಿ.ಡಬ್ಲ್ಯು.ಸಿ.ಯಿಂದ ಗರಿಷ್ಟ ವಹಿವಾಟು, ಎಫ್.ಸಿ.. ಅಧಿಕೃತ ಬಂಡವಾಳ 3,500 ಕೋ.ರೂ.ಗಳಿಂದ 10,000 ಕೋ.ರೂ.ಗಳಿಗೆ ಏರಿಕೆ. ಮತ್ತು ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಗಳು ಸಚಿವಾಲಯದ ಕಳೆದ ಒಂದು ವರ್ಷದ ಸಾಧನೆಗಳು ಎಂದವರು ವಿವರಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627917

ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜೊತೆ ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್ ದೂರವಾಣಿ ಮಾತುಕತೆ

ಭಾರತದ ರಕ್ಷಣಾ ಸಚಿವರಾದ ಶ್ರೀ ರಾಜ್ ನಾಥ್ ಸಿಂಗ್ ಅವರು ನಿನ್ನೆ ಆಮೆರಿಕಾ ರಕ್ಷಣಾ ಕಾರ್ಯದರ್ಶಿ ಡಾ. ಮಾರ್ಕ್ ಟಿ. ಎಸ್ಪರ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಇಬ್ಬರು ಸಚಿವರೂ ಪರಸ್ಪರ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದದ ಹೋರಾಟದ ಅನುಭವಗಳನ್ನು ಹಂಚಿಕೊಂಡರು ಮತ್ತು ನಿಟ್ಟಿನಲ್ಲಿ ಅತ್ಯುತ್ತಮ ದ್ವಿಪಕ್ಷೀಯ ಸಹಕಾರ ಮುಂದುವರೆಸುವುದಕ್ಕೆ ಬದ್ದತೆ ವ್ಯಕ್ತಪಡಿಸಿದರು. ಅವರು ವಿವಿಧ ದ್ವಿಪಕ್ಷೀಯ ರಕ್ಷಣಾ ಸಹಕಾರ ಒಪ್ಪಂದಗಳನ್ನು ಪರಾಮರ್ಶೆ ಮಾಡಿದ್ದಲ್ಲದೆ , ರಕ್ಷಣಾ ಸಹಭಾಗಿತ್ವವನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಅವರ ಬದ್ದತೆಯನ್ನು ವ್ಯಕ್ತಪಡಿಸಿದರು.

ವಿವರಗಳಿಗೆ : https://pib.gov.in/PressReleseDetail.aspx?PRID=1627702

ಬ್ರಿಕ್ಸ್ ತೆರಿಗೆ ಪ್ರಾಧಿಕಾರಿಗಳ ಮುಖ್ಯಸ್ಥರ ಸಭೆ ನಡೆಯಿತು

ಬ್ರೆಜಿಲ್, ರಶ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕಾಗಳನ್ನು  ಒಳಗೊಂಡ ಬ್ರಿಕ್ಸ್ ದೇಶಗಳ ತೆರಿಗೆ ಪ್ರಾಧಿಕಾರಿಗಳ ಮುಖ್ಯಸ್ಥರ ಸಭೆ 2020 ಮೇ 29 ರಂದು ನಡೆಯಿತು. ಭಾರತ ಸರಕಾರದ ಹಣಕಾಸು ಕಾರ್ಯದರ್ಶಿ ಅವರು ತೆರಿಗೆದಾರರ ಮೇಲೆ ಜಾಗತಿಕ ಸಾಂಕ್ರಾಮಿಕದ ಪರಿಣಾಮವನ್ನು ಕಡಿಮೆ ಮಾಡಲು ಭಾರತ ಸರಕಾರವು ನಿಯಮಾನುಸರಣೆ ಆವಶ್ಯಕತೆಗಳಲ್ಲಿ ರಿಯಾಯತಿ, ತಡ ಪಾವತಿಯ ಮೇಲಿನ ಬಡ್ಡಿ ದರ ಇಳಿಕೆ, ಮತ್ತು ತಡೆ ಹಿಡಿಯುವ ತೆರಿಗೆ ದರದಲ್ಲಿ ಇಳಿಕೆ ಇತ್ಯಾದಿ ಕ್ರಮಗಳನ್ನು ಕೈಗೊಂಡಿರುವುದನ್ನು ಹಂಚಿಕೊಂಡರು. ಕೋವಿಡ್ -19  ಸಂಬಂಧಿ ಆಯಾ ತೆರಿಗೆ ಆಡಳಿತಗಳು ಕಾಲ ಕಾಲಕ್ಕೆ ತೆಗೆದುಕೊಂಡ ತೆರಿಗೆ ಕ್ರಮಗಳನ್ನು ಹಂಚಿಕೊಳ್ಳುವಂತೆ ಅವರು ಬ್ರಿಕ್ಸ್ ರಾಷ್ಟ್ರಗಳನ್ನು ಕೋರಿದರು. ಇದರಿಂದ ಜಾಗತಿಕ ಸಾಂಕ್ರಾಮಿಕವು ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಂಟು ಮಾಡಿರುವ ಪರಿಣಾಮವನ್ನು ತಿಳಿದುಕೊಳ್ಳಲು ಮತ್ತು ಜಾಗತಿಕ ಸಾಂಕ್ರಾಮಿಕದ ಹರಡುವಿಕೆ ತಡೆಯಲು ಹಾಗು ಅದರ ಪರಿಣಾಮದಿಂದ ಪುನಶ್ಚೇತನ ಪಡೆಯಲು ನಮ್ಮ  ಸರಕಾರದ ಪ್ರಯತ್ನಗಳಿಗೆ ಸಹಾಯ ಮಾಡುವುದಕ್ಕಾಗಿ ಅವುಗಳ ವಿವಿಧ ಸಾಧ್ಯತೆಗಳ ಮೌಲ್ಯಮಾಪನ ಮಾಡಲು ಉತ್ತೇಜನ ಸಿಕ್ಕಂತಾಗುತ್ತದೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1627742

ಎಂ..ಎಫ್.ಪಿ.. ಕುಂದುಕೊರತೆ ಘಟಕ ಕೋವಿಡ್ -19 ಪರಿಸ್ಥಿತಿಯ ನಡುವೆ ಕೈಗಾರಿಕೋದ್ಯಮದಿಂದ ಬಂದ 585 ದೂರುಗಳಲ್ಲಿ 581 ನ್ನು ವಿಲೇವಾರಿ ಮಾಡಿದೆ

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಕುಂದುಕೊರತೆ ನಿವಾರಣಾ ಘಟಕ ಧನಾತ್ಮಕ ಧೋರಣೆ ಮತ್ತು ಸಕಾಲದಲ್ಲಿ ಪರಿಹಾರ ಕ್ರಮದ ಮೂಲಕ 585 ದೂರುಗಳಲ್ಲಿ 581 ನ್ನು ವಿಲೇವಾರಿ ಮಾಡಲು ಸಮರ್ಥವಾಗಿದೆ. ಕಾರ್ಯಪಡೆಯು ಸಂಬಂಧಿಸಿದ ರಾಜ್ಯ ಸರಕಾರಗಳು ಮತ್ತು ಹಣಕಾಸು ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಸಹಿತ ಇತರ ಸಂಬಂಧಿತ ಪ್ರಾಧಿಕಾರಿಗಳ ಜೊತೆ ವಿಷಯಗಳನ್ನು ಕೈಗೆತ್ತಿಕೊಂಡು ನಿಭಾಯಿಸುತ್ತಿದೆ. ಕಾರ್ಯಪಡೆಯು ಆಹಾರ ಮತ್ತು ಸಂಬಂಧಿ ಕೈಗಾರಿಕೆಗಳು ರಾಜ್ಯಗಳಲ್ಲಿ ಎದುರಿಸುವ ಸಮಸ್ಯೆಗಳು/ ಸವಾಲುಗಳನ್ನು ಪರಿಹರಿಸಲು ಮತ್ತು ಅವುಗಳ ಗರಿಷ್ಟ ಉತ್ಪಾದನಾ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸಲು ಅನುಕೂಲವಾಗುವಂತೆ ಪ್ರಮುಖ ಕೈಗಾರಿಕಾ ಸಂಘಟನೆಗಳ ಜೊತೆ ಮತ್ತು ಆಹಾರ ಸಂಸ್ಕರಣಾಗಾರರ ಜೊತೆ ಸತತ ಸಂಪರ್ಕದಲ್ಲಿದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627872

ಪ್ರಮಖ ಆನ್ ಲೈನ್ ಟ್ರಾವೆಲ್ ಏಜೆಂಟರ ನಿಯೋಗದಿಂದ  ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ಭೇಟಿ.

ಭಾರತದ ಪ್ರಮುಖ ಆನ್ ಲೈನ್ ಟ್ರಾವೆಲ್ ಏಜೆಂಟರ (.ಟಿ..ಎಸ್.) ನಿಯೋಗವು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಹಾಯಕ ಸಚಿವ (ಪ್ರಭಾರ) ರಾದ ಶ್ರೀ ಪ್ರಹ್ಲಾದ ಸಿಂಗ್ ಪಟೇಲ್ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿತು. ಹೊಟೇಲುಗಳ ಆರಂಭ ಮತ್ತು ವಾಸ್ತವ್ಯದ ಘಟಕಗಳ ಕಾರ್ಯಾರಂಭ ಕುರಿತು ಚರ್ಚೆ ನಡೆಯಿತು. ಸುರಕ್ಷೆಗಾಗಿ ಲಾಕ್ ಡೌನೋತ್ತರ ಶಿಷ್ಟಾಚಾರಗಳ ಹೊರಡಿಸುವಿಕೆ  ಮತ್ತು ವಾಸ್ತವ್ಯದ ಘಟಕಗಳಲ್ಲಿ ನೈರ್ಮಲ್ಯ , ಸಾರಿಗೆ , ಪ್ರವಾಸಿ ಸಂಬಂಧಿ ಕಾರ್ಯಚಟುವಟಿಕೆಗಳು ಮಾತುಕತೆಯಲ್ಲಿ ಪ್ರಸ್ತಾಪವಾದವು.

ವಿವರಗಳಿಗೆ : https://pib.gov.in/PressReleseDetail.aspx?PRID=1627670

ಸಂಶೋಧನೆ ಮತ್ತು ಅನ್ವೇಷಣೆಗೆ ಸವಲತ್ತುಗಳು: ಜೈವಿಕ ತಂತ್ರಜ್ಞಾನ ವಿಭಾಗದಿಂದ 4 ಕೋವಿಡ್ -19 ಜೈವಿಕ ಬ್ಯಾಂಕುಗಳ ಸ್ಥಾಪನೆ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕವನ್ನು ತೊಡೆದು ಹಾಕಲು ಸಂಶೋಧನೆ ಮತ್ತು ಅಭಿವೃದ್ದಿ ಪ್ರಯತ್ನಗಳು ಲಸಿಕೆ ಅಭಿವೃದ್ದಿ, ರೋಗ ಪತ್ತೆ, ಮತ್ತು ಚಿಕಿತ್ಸಾ ವಿಧಾನಗಳತ್ತ ನಿರ್ದೇಶಿಸಲ್ಪಟ್ಟಿವೆ. ಕೋವಿಡ್ -19 ಪಾಸಿಟಿವ್ ವ್ಯಕ್ತಿಗಳಿಂದ ಸಂಗ್ರಹಿಸಿದ ಸ್ಯಾಂಪಲ್ / ಮಾದರಿಗಳು ಸಂಶೋಧನೆ ಮತ್ತು ಅಭಿವೃದ್ದಿ ಪ್ರಯತ್ನಗಳಿಗೆ ಮೌಲ್ಯಯುತ ಸಂಪನ್ಮೂಲಗಳಾಗಬಲ್ಲವು. ನೀತಿ ಆಯೋಗವು ಇತ್ತೀಚೆಗೆ ಕೋವಿಡ್ -19 ಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ಜೈವಿಕ ಪ್ರಯೋಗ ಮಾದರಿಗಳು ಮತ್ತು ದತ್ತಾಂಶಗಳನ್ನು ಹಂಚಿಕೊಳ್ಳುವುದಕ್ಕೆ ಮಾರ್ಗದರ್ಶಿಗಳನ್ನು ಹೊರಡಿಸಿದೆ. ಸಂಪುಟ ಕಾರ್ಯದರ್ಶಿ ಅವರ ನಿರ್ದೇಶನಗಳ ಪ್ರಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (.ಸಿ.ಎಂ.ಆರ್.) ಯು 16 ಜೈವಿಕ ಸಂಗ್ರಹಾಲಯಗಳನ್ನು  ಕೋವಿಡ್ -19 ರೋಗಿಗಳ ಕ್ಲಿನಿಕಲ್ ಮಾದರಿಗಳನ್ನು ಸಂಗ್ರಹಿಸಲು, ದಾಸ್ತಾನು ಮಾಡಿಡಲು ಮತ್ತು ನಿರ್ವಹಿಸುವುದಕ್ಕಾಗಿ ಅಧಿಸೂಚಿಸಿದೆ.16 ಜೈವಿಕ ಸಂಗ್ರಹಾಲಯಗಳ ಪಟ್ಟಿ ಕೆಳಗಿನಂತಿದೆ: .ಸಿ.ಎಂ.ಆರ್- 9, ಡಿ.ಬಿ.ಟಿ -4 ಮತ್ತು ಸಿ.ಎಸ್..ಆರ್. -3

ವಿವರಗಳಿಗಾಗಿhttps://pib.gov.in/PressReleseDetail.aspx?PRID=1627861

ಸಂಸ್ಕೃತಿ ಸಚಿವಾಲಯದ ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿಯಿಂದ ಕೋವಿಡ್ -19 ವಿರುದ್ದದ ಹೋರಾಟ ಬೆಂಬಲಿಸುವುದಕ್ಕಾಗಿ ಜಾರ್ಖಂಡ ಆಡಳಿತಕ್ಕೆ ಪಿ.ಪಿ.. ಕಿಟ್ ಗಳು ಮತ್ತು ಇತರ ವಸ್ತುಗಳ ರವಾನೆ

ಕೋವಿಡ್ -19 ವಿರುದ್ದದ ಹೋರಾಟದ ಅಂಗವಾಗಿ ಹೊಸದಿಲ್ಲಿಯ ಗಾಂಧಿ ಸ್ಮೃತಿ ಮತ್ತು ದರ್ಶನ ಸಮಿತಿ ಹಾಗು ಲುಪಿನ್ ಮಾನವ ಕಲ್ಯಾಣ ಸಂಘಟನೆ , ರಾಜಸ್ಥಾನ ಗಳು ಮೇ 29,2020 ರಂದು 200 ಪಿ.ಪಿ.. ಕಿಟ್ ಗಳು , 50 ಥರ್ಮೋಮೀಟರುಗಳು , 10,000 ಪಿ.ಸಿ.ಎಸ್. ನೈಟ್ರಿಲೇ ಕೈಗವಸುಗಳು, 11,000 ಮುಖಗವಸುಗಳು ಮತ್ತು 500 ಫೇಸ್ ಶೀಲ್ಡ್ ಗಳನ್ನು ಜಾರ್ಖಂಡದ ಬುಡಕಟ್ಟು ಜಿಲ್ಲೆಯಾದ ಕುಂತಿ ಜಿಲ್ಲೆಗೆ ಉಚಿತವಾಗಿ ಜಿಲ್ಲಾಡಳಿತದ ಬಳಕೆಗಾಗಿ ಕಳುಹಿಸಿಕೊಟ್ಟಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627755

ಕೋವಿಡ್ -19 ವಿರುದ್ದದ ಹೋರಾಟಕ್ಕಾಗಿ ಉತ್ತರಾಖಂಡ ಸರಕಾರಕ್ಕೆ ಪಿ.ಎಫ್.ಸಿ.ಯಿಂದ ಪಿ.ಪಿ.. ಕಿಟ್ ಗಳು ಮತ್ತು ಅಂಬುಲೆನ್ಸ್ ಗಳ ಕೊಡುಗೆ

ಇಂಧನ ಸಚಿವಾಲಯದಡಿಯಲ್ಲಿರುವ ಕೇಂದ್ರೀಯ ಸಾರ್ವಜನಿಕ ರಂಗದ ಉದ್ದಿಮೆಯಾಗಿರುವ ಇಂಧನ ಹಣಕಾಸು ನಿಗಮ ನಿಯಮಿತವು ಉತ್ತರಾಖಂಡ ಸರಕಾರಕ್ಕೆ 1.23 ಕೋ.ರೂ.ಗಳ ಹಣಕಾಸು ನೆರವು ನೀಡಲು ಮುಂದೆ ಬಂದಿದೆ. ಹಣವನ್ನು ಮುಂಚೂಣಿ ಸಿಬ್ಬಂದಿಗಳಿಗಾಗಿ  500 ಪಿ.ಪಿ.. ಕಿಟ್ ಗಳನ್ನು ಖರೀದಿಸಲು ಮತ್ತು 6 ಸುಸಜ್ಜಿತ ಅಂಬುಲೆನ್ಸ್ ಗಳ ಖರೀದಿಗಾಗಿ ಬಳಸಲು ಉತ್ತರಾಖಂಡ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627869

ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳ ಹೆಚ್ಚಳ (ಹಬ್ ಮತ್ತು ಸ್ಪೋಕ್ ಮಾದರಿ)

ದೇಶಾದ್ಯಂತ ತಲುಪಲು ಮತ್ತು ಪರೀಕ್ಷೆಗಳನ್ನು ಹೆಚ್ಚಿಸಲು , ನಗರ/ ಪ್ರಾದೇಶಿಕ ಗುಚ್ಚಗಳನ್ನು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಸ್ಥಾಪಿಸಲಾಗಿದೆ. ದೇಶಾದ್ಯಂತ ಕೋವಿಡ್ -19 ಮಾದರಿಗಳನ್ನು ಸರಕಾರಿ ಸಂಸ್ಥೆಗಳಲ್ಲಿ ಪರೀಕ್ಷೆಗೆ ಒಳಪಡಿಸಲು  ಇದರಿಂದ ಅವಕಾಶವಾಗುತ್ತದೆ. ಮಾದರಿ ಸಂಗ್ರಹ , ನಿರ್ವಹಣೆ/ ಸಂಸ್ಕರಣೆ (ಬಿ.ಎಸ್.ಎಲ್.-2 ಸೌಲಭ್ಯ ) ಮತ್ತು ಪರೀಕ್ಷಾ (ಆರ್.ಟಿ-ಪಿ.ಸಿ.ಆರ್.) ಸಾಮರ್ಥ್ಯ ಮತ್ತು ತಜ್ಞತೆಯನ್ನು ಹೊಂದಿರುವ ಸಂಸ್ಥೆಗಳು, ಪ್ರಯೋಗಾಲಯಗಳು ಹಬ್ ಗಳಾಗಿ ಕಾರ್ಯನಿರ್ವಹಿಸಬಹುದು ಮತ್ತು ಅವು ಆರ್. ಟಿಪಿ.ಸಿ.ಆರ್. ಯಂತ್ರಗಳನ್ನು ಹಾಗು ಅವಶ್ಯ ಮಾನವ ಸಂಪನ್ಮೂಲಗಳನ್ನು ಹೊಂದಿರುವ ಹಲವು ಪ್ರಯೋಗಾಲಯಗಳನ್ನು ಅವುಗಳ ವಿಸ್ತರಣಾ ಪರೀಕ್ಷಾ ಸೌಲಭ್ಯಗಳಾಗಿ ಒಳಗೊಂಡಿರಬಹುದಾಗಿರುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627871

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ವಿದೇಶಗಳಿಂದ 116 ಮಂದಿ ಚಂಡೀಗಢ ತಲುಪಿದ್ದಾರೆ, ಅವರಲ್ಲಿ 29 ಮಂದಿಯನ್ನು ಅವಶ್ಯ ಪರೀಕ್ಷೆಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. 281 ಮಂದಿ ದೇಶೀಯ ವಿಮಾನಗಳಲ್ಲಿ ಬಂದಿದ್ದಾರೆ, ಅವರಿಗೆ ಭಾರತ ಸರಕಾರದ ಮಾರ್ಗದರ್ಶಿಗಳ ಅನ್ವಯ ಮನೆಗಳಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಚಂಡೀಗಢದ ಸಲಹೆಗಾರರು ಚಂಡೀಗಢ ಆಡಳಿತವು ಕ್ಷೀಣ ಮತ್ತು ಗಂಭೀರ ವರ್ಗದ ರೋಗಿಗಳನ್ನು ದಾಖಲಿಸಿಕೊಳ್ಳಲು 3,000 ಹಾಸಿಗೆಗಳ ಆಸ್ಪತ್ರೆ ಸಿದ್ದಗೊಂಡಿದೆ ಎಂದು ತಿಳಿಸಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೆಂಟಿಲೇಟರುಗಳ ಕೊರತೆ ಇಲ್ಲ, ಆಮ್ಲಜನಕ , ಪಿ.ಪಿ..ಗಳು ಅಥವಾ ಔಷಧಿಗಳಿಗೆ ಯಾವುದೇ ಕೊರತೆ ಇಲ್ಲ. ಭಾರತ ಸರಕಾರದ ಮಾರ್ಗದರ್ಶಿಗಳ ಅನ್ವಯ ನಿಯತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕಾಲಕಾಲಕ್ಕೆ ಕಂಟೈನ್ಮೆಂಟ್ ವಲಯದ ಪರಾಮರ್ಶೆಯನ್ನು ವಾರಕ್ಕೊಂದಾವರ್ತಿ ಮಾಡಲಾಗುತ್ತಿದೆ.
  • ಪಂಜಾಬ್ : ಕೋವಿಡ್ -19 ನಿರ್ವಹಣೆ ಮತ್ತು ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಲು ಕೊರೊನಾವೈರಸ್ ಪ್ರಸರಣ ನಿರ್ಬಂಧಿಸಲು ಹೊರಡಿಸಲಾದ ಮಾರ್ಗಸೂಚಿಗಳು ಮತ್ತು ಇತರ ಸೂಚನೆಗಳನ್ನು ಉಲ್ಲಂಘಿಸುವವರಿಗೆ ಪಂಜಾಬ್ ಸರಕಾರವು ದಂಡದ ಪ್ರಮಾಣವನ್ನು ಹೆಚ್ಚಿಸಿದೆ. ಈಗ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದವರಿಗೆ 500 ರೂ ದಂಡ ವಿಧಿಸಲಾಗುತ್ತದೆ. ಗೃಹ ಕ್ವಾರಂಟೈನ್ ಸೂಚನೆಗಳನ್ನು ಉಲ್ಲಂಘಿಸುವವರಿಗೆ 2,000 ರೂ.ಗಳ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುತ್ತಿರುವವರಿಗೆ 500 ರೂ, ಸಾಮಾಜಿಕ ಅಂತರವನ್ನು ಉಲ್ಲಂಘಿಸುವ ಅಂಗಡಿಗಳ/ವಾಣಿಜ್ಯ ಸ್ಥಳಗಳ  ಮಾಲಕರಿಗೆ 2000 ರೂ. ದಂಡ ಮತ್ತು ಸಾಮಾಜಿಕ ಅಂತರ ಪಾಲಿಸದಿದ್ದರೆ  ಬಸ್ಸುಗಳ ಮಾಲಕರಿಗೆ 3000 ರೂ. , ಕಾರುಗಳಿಗಾದರೆ 2,000ರೂ., ಮತ್ತು ಅಟೋರಿಕ್ಷಾ / ದ್ವಿಚಕ್ರ ವಾಹನಗಳಿಗಾದರೆ 500 ರೂ . ದಂಡ ವಿಧಿಸಲಾಗುತ್ತದೆ.
  • ಹರ್ಯಾಣಾ: ಹರ್ಯಾಣಾ ಪ್ರವಾಸೋದ್ಯಮ ನಿಗಮವು  ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ರಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಪ್ರವಾಸೀ ಸಂಕೀರ್ಣಗಳಲ್ಲಿ ವಾಸ್ತವ್ಯ ಮತ್ತು ಆಹಾರದ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸುತ್ತಿದೆ. ಕೋವಿಡ್ -19 ಹಿನ್ನೆಲೆಯಲ್ಲಿ 2020 ಮಾರ್ಚ್ 24 ರಿಂದ ಚಾಲ್ತಿಯಲ್ಲಿರುವ ರಾಷ್ಟ್ರ ವ್ಯಾಪ್ತಿಯ ಲಾಕ್ ಡೌನ್ ನಿಂದಾಗಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಉಚಿತ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಪ್ರವಾಸೀ ಸಂಕೀರ್ಣಗಳಲ್ಲಿ ಒದಗಿಸಲು ಸರಕಾರ ನಿರ್ಧರಿಸಿತ್ತು.
  • ಹಿಮಾಚಲ ಪ್ರದೇಶ: ಕೋವಿಡ್ -19  ಜಾಗತಿಕ ಸಾಂಕ್ರಾಮಿಕವನ್ನು ಸಮರ್ಪಕವಾಗಿ ಎದುರಿಸುವಲ್ಲಿ ರಾಜ್ಯ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ ಕೈಗಾರಿಕೋದ್ಯಮಿಗಳಿಗೆ ಅದರಲ್ಲೂ ಔಷಧಿ ತಯಾರಿಕಾ ಉದ್ಯಮಕ್ಕೆ ಮುಖ್ಯಮಂತ್ರಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ರಾಜ್ಯವು ಪ್ರಮುಖ ಔಷಧಿಗಳನ್ನು ಮತ್ತು ಜೆನೆರಿಕ್ ಗಳನ್ನು ದೊಡ್ದ ಪ್ರಮಾಣದಲ್ಲಿ ಉತ್ಪಾದಿಸುವ ತಾಣವಾಗಿ ಮೂಡಿ ಬಂದಿದೆ ಮತ್ತು ದೇಶದಲ್ಲಿ ಹಾಗು ಹೊರದೇಶಗಳಲ್ಲಿ ಮಾರುಕಟ್ಟೆಯ  ಬಹು ಪ್ರಮಾಣವನ್ನು ಗಳಿಸಿಕೊಂಡಿದೆ ಎಂದವರು ಹೇಳಿದರು. ಕೈಗಾರಿಕೋದ್ಯಮಿಗಳಿಗೆ ಪಿ.ಎಂ. ಕೇರ್ಸ್ ಗೆ ಮತ್ತು ಎಚ್.ಪಿ. ಎಸ್.ಡಿ.ಎಂ.. ಕೋವಿಡ್ -19 ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿಗೆ ಧಾರಾಳವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ ಅವರು ಹಣ ಕೊರೊನಾವೈರಸ್ ವಿರುದ್ದ ಹೋರಾಟದಲ್ಲಿ ಬಹು ಕಾಲದವರೆಗೆ ಪ್ರಯೋಜನಕ್ಕೆ ಒದಗಲಿದೆ ಎಂದರು.
  • ಕೇರಳ: ವಿದೇಶದಿಂದ ಬಂದು ಕೋಝಿಕ್ಕೋಡಿನಲ್ಲಿ ಕ್ವಾರಂಟೈನಿನಲ್ಲಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿದ್ದು, ವ್ಯಕ್ತಿಯ ಕೋವಿಡ್ -19 ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ಕೆಲವು ಗಂಟೆಗಳ ಕಾಲ ನೆಲೆಗೊಂಡಿದ್ದ ಆತಂಕದ ವಾತಾವರಣ ಕೊನೆಗೊಂಡಿತು. ತಿರುವನಂತಪುರಂನ ಹೊರಭಾಗದಲ್ಲಿ ಕ್ವಾರಂಟೈನ್ ನಲ್ಲಿದ್ದ 8 ಮಂದಿ ಪೊಲೀಸರ ಪರೀಕ್ಷಾ ವರದಿಗಳೂ ನೆಗೆಟಿವ್ ಬಂದಿವೆ. ಪಟ್ಟಣಂತಿಟ್ಟದಲ್ಲಿ ಎರಡು ಕಡೆಗಳಲ್ಲಿ ವಲಸೆ ಕಾರ್ಮಿಕರು ಪ್ರತಿಭಟನೆಗಳನ್ನು ನಡೆಸಿದರು. ಬಿಹಾರಕ್ಕೆ ಮರಳಲು ರೈಲಿಗಾಗಿ ಅವರು ಒತ್ತಾಯಿಸಿದರು. ಲಾಕ್ ಡೌನ್ ನಿರ್ಬಂಧಗಳನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿರುವುದರಿಂದ ಕಣ್ಣೂರಿನಲ್ಲಿ ತ್ರಿವಳಿ ಲಾಕ್ ಡೌನ್ ಜಾರಿ ಮಾಡಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಏತನ್ಮಧ್ಯೆ ಮತ್ತೆ ಮೂರು ಮಂದಿ ಕೇರಳೀಯನ್ನರು ಕೊಲ್ಲಿ ದೇಶಗಳಲ್ಲಿ ಕೋವಿಡ್ -19   ವಿರುದ್ದ ಸೆಣಸಾಡುತ್ತಾ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ನಿನ್ನೆ ಎರಡು ಸಾವು ಮತ್ತು 62 ದೃಢೀಕೃತ ಪ್ರಕರಣಗಳು ವರದಿಯಾಗಿವೆ. 577 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ರಾಜ್ಯಾದ್ಯಂತ 1,24,167 ಮಂದಿ ನಿಗಾದಲ್ಲಿದ್ದಾರೆ.
  • ತಮಿಳುನಾಡು: ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲು ರಾಜ್ಯವು 300 ಕೋ.ರೂ.ಗಳ ಕೋವಿಡ್ -19 ಸಹಾಯಧನ ಪ್ಯಾಕೇಜನ್ನು ಘೋಷಿಸಿದೆ. ಚೆನ್ನೈ ಅಂಡಮಾನ್ ಹಡಗು ಸೇವೆ ಪುನರಾರಂಭಗೊಂಡಿದೆ. ನಮಕ್ಕಲ್ ನಲ್ಲಿ ಮೊದಲ ಕೋವಿಡ್ -19 ಸಾವು ದಾಖಲಾಗಿದೆ. 47 ವರ್ಷದ ಲಾರಿ ಚಾಲಕ ಮಾರಕ ವೈರಸ್ ದಾಳಿಗೆ ಬಲಿಯಾಗಿದ್ದಾರೆ. 78 ಮಂದಿ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಮತ್ತು ಇದುವರೆಗೆ 77 ಮಂದಿ ಚೇತರಿಸಿಕೊಂಡಿದ್ದಾರೆ. ತಮಿಳುನಾಡಿನಾದ್ಯಂತ ಸಂಗ್ರಹಿಸಿದ 90 ಮಾದರಿಗಳಲ್ಲಿ 40 ಮಂದಿ ಕೈದಿಗಳು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ನಿನ್ನೆ 874 ಹೊಸ ಪ್ರಕರಣಗಳ ಪತ್ತೆಯೊಂದಿಗೆ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 20 ಸಾವಿರ ದಾಟಿದೆ. ಇದುವರೆಗೆ ಒಟ್ಟು ಪ್ರಕರಣಗಳು : 20,246. ಆಕ್ಟಿವ್ ಪ್ರಕರಣಗಳು : 8676, ಸಾವುಗಳು : 154 ಗುಣಮುಖರಾಗಿ ಬಿಡುಗಡೆಯಾದವರು : 11,313. ಚೆನ್ನೈಯಲ್ಲಿ ಆಕ್ಟಿವ್ ಪ್ರಕರಣಗಳು 6353.
  • ಕರ್ನಾಟಕ: ಭಾನುವಾರದ ಸಂಪೂರ್ಣ ಬಂದ್  ಆದೇಶವನ್ನು ವಿವಿಧ ವಲಯಗಳ ಹಿಮ್ಮಾಹಿತಿ ಆಧಾರದಲ್ಲಿ ರಾಜ್ಯ ಸರಕಾರ ಹಿಂಪಡೆದಿದೆ. ಎಲ್ಲಾ ಪ್ರವಾಸಿಗರೂ ಖಾಸಗಿ ಪ್ರಯೋಗಾಲಯಗಳ ಪರೀಕ್ಷೆಗೆ 650 ರೂ. ಪಾವತಿಸಬೇಕೆಂದು ಸರಕಾರ ನಿರ್ಧಾರ ಮಾಡಿದೆ. ಪರೀಕ್ಷೆಗೆ ಪೂಲಿಂಗ್ ವಿಧಾನವನ್ನು ಅಳವಡಿಕೆ ಮಾಡಿಕೊಳ್ಳಲಾಗುವುದು. ಒಂದೇ ದಿನದಲ್ಲಿ ಕರ್ನಾಟಕದಲ್ಲಿ  ಶುಕ್ರವಾರದಂದು 248 ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ದಾಖಲಾಗಿವೆ . ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 2,781 ಕ್ಕೇರಿದೆ. ಒಟ್ಟು ಪಾಸಿಟಿವ್ ಪ್ರಕರಣಗಳು ಇದುವರೆಗೆ : 2781, ಆಕ್ಟಿವ್: 1837, ಸಾವುಗಳು : 48, ಚೇತರಿಸಿಕೊಂಡವರು : 894.
  • ಆಂಧ್ರ ಪ್ರದೇಶ:ಮುಖ್ಯಮಂತ್ರಿ ಅವರು 10,641 ರೈತು ಭರೋಸಾ ಕೇಂದ್ರಗಳನ್ನು ಆನ್ ಲೈನ್ ಮೂಲಕ ಕಾರ್ಯಾರಂಭಗೊಳಿಸಿದರು. ಇವು ರೈತರಿಗೆ ವಾರ್ಷಿಕ 13,500 ರೂ. ನಗದು ಪ್ರೋತ್ಸಾಹ ಧನ ಒದಗಿಸಲಿವೆ.  5 ಎಕರೆವರೆಗೆ ಕೃಷಿ ಭೂಮಿ ಹೊಂದಿರುವ ರೈತರಿಗೆ , ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು , ಹಿಂದುಳಿದ ವರ್ಗಗಳ ಗೇಣಿದಾರ ರೈತರಿಗೆ  ಮತ್ತು ಅಲ್ಪಸಂಖ್ಯಾತ ಗುಂಪುಗಳಿಗೂ ಯೋಜನೆ ಅಡಿಯಲ್ಲಿ ಪ್ರಯೋಜನಗಳು ಲಭಿಸಲಿವೆ. ಕೇಂದ್ರ ಸರಕಾರವು ಪಿ.ಎಂ. ಕಿಸಾನ್ ಯೋಜನಾ ಅಡಿಯಲ್ಲಿ ಕುಟುಂಬವೊಂದಕ್ಕೆ ನೀಡುವ ವಾರ್ಷಿಕ 6,000 ರೂ. ಗಳ ಪ್ರಯೋಜನವೂ ಇದರಲ್ಲಿ ಅಡಕಗೊಂಡಿದೆ. ಇದರಿಂದ 51 ಲಕ್ಷಕ್ಕೂ ಅಧಿಕ  ರೈತರಿಗೆ ಪ್ರಯೋಜನವಾಗಲಿದೆ ಮತ್ತು ಉಚಿತ ಕೊಳವೆ ಬಾವಿಗಳು ಹಾಗು ದಿನಕ್ಕೆ  9 ಗಂಟೆಗಳ ಕಾಲ ಉಚಿತ ವಿದ್ಯುತ್   ಲಭಿಸಲಿದೆ. ಕಳೆದ 24 ಗಂಟೆಗಳಲ್ಲಿ 70 ಹೊಸ ಪ್ರಕರಣಗಳು ವರದಿಯಾಗಿವೆ , ಯಾವುದೇ ಮೃತ್ಯು ಸಂಭವಿಸಿಲ್ಲ, 55 ಮಂದಿ ಗುಣಮುಖರಾಗಿದ್ದಾರೆ. 9504 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು ಪ್ರಕರಣಗಳು :2944, ಆಕ್ಟಿವ್ ;792, ಗುಣಮುಖರಾದವರು: 2092, ಮರಣ : 60. ಇತರ ರಾಜ್ಯಗಳಿಂದ ಬಂದವರಲ್ಲಿ  ಒಟ್ಟು ಪಾಸಿಟಿವ್ ಪ್ರಕರಣಗಳು 406 ಮತ್ತು ಅದರಲ್ಲಿ ಆಕ್ಟಿವ್ ಪ್ರಕರಣಗಳು : 217. ವಿದೇಶಗಳಿಂದ ಬಂದವರಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 111.
  • ತೆಲಂಗಾಣ: ರಾಷ್ಟ್ರೀಯ ಪೋಷಕಾಂಶ ಸಂಸ್ಥೆಯ ಸಹಯೋಗದಲ್ಲಿ .ಸಿ.ಎಂ.ಆರ್. ಹೈದರಾಬಾದಿನ ಐದು ಕಂಟೈನ್ಮೆಂಟ್ ವಲಯಗಳಲ್ಲಿ ತೆಲಂಗಾಣದ ನಗರ ಜನಸಮೂಹದಲ್ಲಿ ಸಾರ್ಸ್ ಕೋವ್-2 ಸೋಂಕಿನ ಬಗ್ಗೆ ತಿಳಿದುಕೊಳ್ಳಲು ತ್ವರಿತ ಸರ್ವೇಕ್ಷಣೆಯನ್ನು ಕೈಗೆತ್ತಿಕೊಂಡಿದೆ. .ಸಿ.ಎಂ.ಆರ್. ಮತ್ತು ಎನ್..ಎನ್ . ತಂಡಗಳು ರಾಜ್ಯ ಸರಕಾರಿ ಅಧಿಕಾರಿಗಳೊಂದಿಗೆ ಶನಿವಾರ ಮತ್ತು ಭಾನುವಾರಗಳಂದು 100 ಮಾದರಿಗಳನ್ನು ಸಂಗ್ರಹಿಸಲಿದ್ದಾರೆ. ತೆಲಂಗಾಣದಲ್ಲಿ ಮೇ 30 ವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 2425. ಇಂದಿನವರೆಗೆ 180 ವಲಸೆಗಾರರು ಮತ್ತು 237 ಮಂದಿ ವಿದೇಶಗಳಿಂದ ಬಂದವರಲ್ಲಿ ಕೋವಿಡ್ ದೃಢೀಕರಿಸಲ್ಪಟ್ಟಿದೆ.
  • ಅಸ್ಸಾಂ: ಅಸ್ಸಾಂನಲ್ಲಿ ಸಿ.ಎಸ್..ಆರ್-ಎನ್...ಎಸ್.ಟಿ. ಕೋವಿಡ್ -19 ಪರೀಕ್ಷಾ ಪ್ರಯೋಗಾಲಯ ಈಗ ಜೋರ್ಹಟ್ ನಲಿ ಕಾರ್ಯಾಚರಣೆ ಆರಂಭಿಸಿದೆ. ಅಸ್ಸಾಂನಲ್ಲಿ 43 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 1100, ಆಕ್ಟಿವ್ ಪ್ರಕರಣಗಳು: 968, ಚೇತರಿಸಿಕೊಂಡವರು 125 ಮತ್ತು ಸಾವುಗಳು -4.
  • ಮಣಿಪುರ: ಮಣಿಪುರದಲ್ಲಿ ಮತ್ತೊಂದು ಕೋವಿಡ್ -19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ, ಒಟ್ಟು ಪ್ರಕರಣಗಳ ಸಂಖ್ಯೆ 60 ಕ್ಕೇರಿದೆ.
  • ಮಿಜೋರಾಂ: ಕರ್ತವ್ಯ ನಿರ್ವಹಿಸುವಾಗ ಕೋವಿಡ್ -19 ಸೋಂಕಿನಿಂದಾಗಿ ಮೃತಪಟ್ಟರೆ ಅಂತಹ ಸರಕಾರಿ ಸಿಬ್ಬಂದಿಗಳಿಗೆ , ಅವರು ಕೇಂದ್ರೀಯ ನಾಗರಿಕ ಸೇವಾ (ನಿವೃತ್ತಿ ವೇತನ ) ನಿಯಮಗಳು , 1972 ರಡಿ ಸೌಲಭ್ಯಗಳಿಗೆ ಒಳಗೊಳ್ಳದೇ ಇದ್ದರೆ ಅವರ ಕುಟುಂಬಗಳಿಗೆ 20 ಲಕ್ಷ ರೂ. ಪರಿಹಾರವನ್ನು ನೀಡಲಾಗುತ್ತದೆ.
  • ನಾಗಾಲ್ಯಾಂಡ್ : ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಗಾಲ್ಯಾಂಡಿನಲ್ಲಿ ಶಾಲೆಗಳು ಮತ್ತು ಕಾಲೇಜುಗಳ ಶುಲ್ಕ ಮನ್ನಾ ಮಾಡಲಾಗುವುದು. ವಿದ್ಯಾರ್ಥಿ ಸಂಘಟನೆಗಳು ಕ್ರಮವನ್ನು ಸ್ವಾಗತಿಸಿವೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಅವುಗಳು ಹೇಳಿವೆ. ಕೋವಿಡ್ -19 ಕ್ಕಾಗಿನ ನಾಗಾ ಕಾರ್ಯ ಪಡೆ ಬೆಂಗಳೂರು ಸಂಘಟನೆಯು ನಾಗಾ ನಾಗರಿಕರಿಗೆ ಅವರ ವಿಶೇಷ ರೈಲು ಮುಂದೂಡಿಕೆಯಾದ ಬಳಿಕ ಬೆಂಗಳೂರಿನಲ್ಲಿ ಸಿಲುಕಿಹಾಕಿಕೊಂಡಿರುವ ನಾಗಾ ನಾಗರಿಕರಿಗೆ ವಸತಿಯನ್ನು ಏರ್ಪಾಡು ಮಾಡಿದೆ.
  • ಸಿಕ್ಕಿಂ: ಕೋವಿಡ್ -19 ಪಾಸಿಟಿವ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದ ಸಿಕ್ಕಿಂನ ಎಸ್.ಟಿ.ಎನ್.ಎಂ. ಆಸ್ಪತ್ರೆಯ 32 ಮಂದಿ ಆರೋಗ್ಯ ಕಾರ್ಯಕರ್ತರ ಮೊದಲ ತಂಡವನ್ನು 14 ದಿನಗಳ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
  • ಮಹಾರಾಷ್ಟ್ರ: 692 ಹೊಸ ರೋಗಿಗಳಲ್ಲಿ ಕೋವಿಡ್ -19 ದೃಢಪಡುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 62,228 ಕ್ಕೆ ಏರಿಕೆಯಾಗಿದೆ. ಆಕ್ಟಿವ್ ಕೋವಿಡ್ ಪ್ರಕರಣಗಳ ಸಂಖ್ಯೆ 33,124. ರಾಜ್ಯದಲ್ಲಿ 2,098 ಮಂದಿ ರೋಗಕ್ಕೆ ಬಲಿಯಾಗಿದ್ದಾರೆ. ಏತನ್ಮಧ್ಯೆ ಮಹಾರಾಷ್ಟ್ರ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡು ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಪದಾರ್ಥಗಳನ್ನು ಸೇದುವುದನ್ನು ಮತ್ತು ಜಗಿದು ಉಗುಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
  • ಗುಜರಾತ್: 372 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 15,944 ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ ಅಹ್ಮದಾಬಾದ್ ನಲ್ಲಿ ಗರಿಷ್ಟ ಸಂಖ್ಯೆಯ ಪ್ರಕರಣಗಳು ಅಂದರೆ 253 ಪ್ರಕರಣಗಳು ವರದಿಯಾಗಿವೆ. ಶುಕ್ರವಾರದಂದು 16 ಜಿಲ್ಲೆಗಳಲ್ಲಿ ಏಕ ಸಂಖ್ಯೆಯ (ಸಿಂಗಲ್ ಡಿಜಿಟ್ ) ಲ್ಲಿ ಪ್ರಕರಣಗಳ ಹೆಚ್ಚಳವಾಗಿದೆ. ರಾಜ್ಯದಲ್ಲೀಗ 6,355 ಆಕ್ಟಿವ್ ಕೋವಿಡ್ -19 ಪ್ರಕರಣಗಳಿವೆ. ಇಂದಿನವರೆಗೆ 14 ಲಕ್ಷ ವಲಸೆ ಕಾರ್ಮಿಕರನ್ನು ಗುಜರಾತಿನಿಂದ ವಿವಿಧ ಮಾದರಿಯ ಸಾರಿಗೆ ವ್ಯವಸ್ಥೆಗಳ ಮೂಲಕ ಅವರ ತವರು ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಶ್ರಮಿಕ ಎಕ್ಸ್ ಪ್ರೆಸ್ ರೈಲುಗಳ ಮೂಲಕ ಹೆಚ್ಚಿನ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ.  
  • ಮದ್ಯ ಪ್ರದೇಶ: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಒಟ್ಟು ಸಂಖ್ಯೆ 7,645 ಕ್ಕೇರಿದೆ, ಇದರಲ್ಲಿ 3042 ಆಕ್ಟಿವ್ ಪ್ರಕರಣಗಳು. ರಾಜ್ಯ ಸರಕಾರವು ವಿಶಿಷ್ಟ ಯೋಜನೆ ರೋಜ್ಗಾರ್ ಸೇತುವನ್ನು ಕಾರ್ಮಿಕರಿಗೆ ಉದ್ಯೋಗ ಒದಗಿಸುವುದಕ್ಕಾಗಿ ಆರಂಭಿಸಿದೆ. ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ಕೈಗಾರಿಕೆಗಳಲ್ಲಿ , ನಿರ್ಮಾಣ ಕಾಮಗಾರಿಗಳಲ್ಲಿ ಅವರವರ ಕೌಶಲ್ಯಗಳಿಗೆ ಅನುಸಾರವಾಗಿ ಉದ್ಯೋಗ ಒದಗಿಸಲಾಗುವುದು.
  • ರಾಜಸ್ಥಾನ: ಇಂದು 49  ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 8414 ಕ್ಕೇರಿದೆ. ಇವರಲ್ಲಿ 5290 ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಆಕ್ಟಿವ್ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದೆ ಮತ್ತು ಕಳೆದ ಆರು ದಿನಗಳಲ್ಲಿ ಚೇತರಿಕೆ ದರ ಹೆಚ್ಚಳವಾಗಿದೆ.
  • ಛತೀಸ್ ಗಢ: ರಾಜ್ಯದಲ್ಲಿ ಮೊದಲ ಕೋವಿಡ್ -19 ಸಂಬಂಧಿ ಸಾವು ರಾಯ್ಪುರದಿಂದ ವರದಿಯಾಗಿದೆ.ಆಕ್ಟಿವ್ ಪ್ರಕರಣಗಳ ಸಂಖ್ಯೆ 314, ಇಂದಿನವರೆಗೆ 100 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಪಿ ಐ ಬಿ ವಾಸ್ತವ ಪರಿಶೀಲನೆ

https://static.pib.gov.in/WriteReadData/userfiles/image/image006N3UW.jpg

https://static.pib.gov.in/WriteReadData/userfiles/image/image007454R.jpg

https://static.pib.gov.in/WriteReadData/userfiles/image/image008BS76.jpg

***

 



(Release ID: 1628238) Visitor Counter : 318