ಹಣಕಾಸು ಸಚಿವಾಲಯ

ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಗವರ್ನರುಗಳ ಮಂಡಳಿಯ ವಿಶೇಷ ಸಭೆಯಲ್ಲಿ ಭಾಗವಹಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್

प्रविष्टि तिथि: 27 MAY 2020 5:55PM by PIB Bengaluru

ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಗವರ್ನರುಗಳ ಮಂಡಳಿಯ

ವಿಶೇಷ ಸಭೆಯಲ್ಲಿ ಭಾಗವಹಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್

 

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯೂ ಡೆವಲಪ್ಮೆಂಟ್ ಬ್ಯಾಂಕಿನ (ಎನ್.ಡಿ.ಬಿ.) ಗವರ್ನರುಗಳ ಮಂಡಳಿಯ ವಿಶೇಷ ಸಭೆಯಲ್ಲಿ ಭಾಗವಹಿಸಿದರು.

ಎನ್.ಡಿ.ಬಿ. ಮುಂದಿನ ಅಧ್ಯಕ್ಷರ ಆಯ್ಕೆ, ಉಪಾಧ್ಯಕ್ಷರ ಮತ್ತು ಮುಖ್ಯ ಅಪಾಯ ಅಧಿಕಾರಿಯ ನೇಮಕ ಹಾಗು ಸದಸ್ಯತ್ವ ವಿಸ್ತರಣೆ ವಿಷಯಗಳು ಸಭೆಯ ಕಾರ್ಯಕಲಾಪ ಪಟ್ಟಿಯಲ್ಲಿದ್ದವು.

ತಮ್ಮ ಪ್ರಾರಂಭಿಕ ಮಾತುಗಳಲ್ಲಿ ಹಣಕಾಸು ಸಚಿವರು ಮೂಲಸೌಕರ್ಯ ಅಭಿವೃದ್ದಿಯಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಎನ್.ಡಿ.ಬಿ. ಕೊಡುಗೆಯನ್ನು ಶ್ಲಾಘಿಸಿದರಲ್ಲದೆ ಇದರಿಂದ ಭಾರತವೂ ಸೇರಿದಂತೆ ಸದಸ್ಯ ರಾಷ್ಟ್ರಗಳಲ್ಲಿ ಅಭಿವೃದ್ಧಿ ಕಾರ್ಯಪಟ್ಟಿಯಲ್ಲಿ ಧನಾತ್ಮಕ ಪರಿಣಾಮಗಳಾಗಿವೆ ಎಂದರು. ಅತ್ಯಂತ ಕಡಿಮೆ ಅವಧಿಯಲ್ಲಿ , ಎನ್.ಡಿ.ಬಿ.ಯು ಸದಸ್ಯ ರಾಷ್ಟ್ರಗಳ 16.6 ಬಿಲಿಯನ್ ಡಾಲರ್ ಮೊತ್ತದ 55 ಯೋಜನೆಗಳಿಗೆ ಅನುಮೋದನೆ ನೀಡಿದೆ, ಇದು ಗಮನಾರ್ಹವಾದ ಸಾಧನೆ ಎಂದು ಬಣ್ಣಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ಬ್ಯಾಂಕು ತನಗಾಗಿ ಗಣ್ಯ ಸ್ಥಾನವನ್ನು ಯಶಸ್ವಿಯಾಗಿ ರೂಪಿಸಿಕೊಂಡಿರುವುದಲ್ಲದೆ ಎಂ.ಡಿ.ಬಿ.ಗಳ ಜೊತೆ ಹೆಮ್ಮೆಯಿಂದ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದರು.

2014 ರಲ್ಲಿ ಬ್ರಿಕ್ಸ್ ನಾಯಕರು ಕಂಡಂತಹ ಮುಂಗಾಣ್ಕೆಯನ್ನು ಬಹಳ ತ್ವರಿತವಾಗಿ ಕಾರ್ಯರೂಪಕ್ಕೆ ತಂದಿರುವುದಕ್ಕೆ ಎನ್.ಡಿ.ಬಿ. ನಿರ್ಗಮನ ಅಧ್ಯಕ್ಷ ಶ್ರೀ ಕೆ.ವಿ. ಕಾಮತ್ ಅವರ ದೃಢ ನಾಯಕತ್ವವನ್ನು ಹಣಕಾಸು ಸಚಿವರು ಶ್ಲಾಘಿಸಿದರು. ಕೋವಿಡ್ -19 ಕ್ಕೆ ತ್ವರಿತ ಪ್ರತಿಕ್ರಿಯೆಯಾಗಿ ಕೋವಿಡ್ -19 ತುರ್ತು ಕಾರ್ಯಕ್ರಮ ಮುಂಗಡ ಉತ್ಪನ್ನವನ್ನು ರೂಪಿಸಿದ್ದು, ಅವರ ಪ್ರಮುಖ ಕೊಡುಗೆಗಳಲ್ಲೊಂದು, ಮತ್ತು ಇದಕ್ಕಾಗಿ ಅವರು ನೆನಪಿನಲ್ಲುಳಿಯುತ್ತಾರೆ ಎಂದೂ ಅವರು ಹೇಳಿದರು.

ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬ್ರೆಜಿಲ್ ಶ್ರೀ ಮಾರ್ಕೋಸ್ ಟ್ರೋಯ್ಜೋ ಮತ್ತು ಹೊಸದಾಗಿ ಉಪಾಧ್ಯಕ್ಷರಾಗಿ ಮತ್ತು ಸಿ.ಆರ್. . ಆಗಿ ನೇಮಕಗೊಂಡ ಭಾರತದ ಅನಿಲ್ ಕಿಶೋರ ಅವರನ್ನು ಹಣಕಾಸು ಸಚಿವರು ಅಭಿನಂದಿಸಿದರು. ಅವರನ್ನು ಅಭಿನಂದಿಸುವ ಮಾತುಗಳಲ್ಲಿ ಶ್ರೀಮತಿ ಸೀತಾರಾಮನ್ ಅವರು ವೇಗವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಮತ್ತು ಸದಸ್ಯರಿಗೆ ಮುಂಗಡ ನೀಡುವ ಸಾಧನೆಯಲ್ಲಿ ಹೊಸ ಎತ್ತರವನ್ನು ಸಾಧಿಸುವಲ್ಲಿ ಹೊಸ ನಾಯಕತ್ವದ ಮೇಲೆ ತಾವು ಬಹಳ ನಿರೀಕ್ಷೆ ಹೊಂದಿರುವುದಾಗಿ ಹೇಳಿದರು ಪಾರದರ್ಶಕತೆ, ಅಂತಾರಾಷ್ಟ್ರೀಯ ವಿಶ್ವಾಸಾರ್ಹತೆ ಹಾಗು ದಕ್ಷತೆಯುಕ್ತವಾಗಿ ಎನ್.ಡಿ.ಬಿ. ಧ್ಯೇಯ ಸಾಧನೆಯ ನಿಟ್ಟಿನಲ್ಲಿ ಬಹಳ ಅಪೇಕ್ಷೆಗಳಿವೆ ಎಂದೂ ಅವರು ಹೇಳಿದರು. ಬ್ರಿಕ್ಸ್ ಮೌಲ್ಯಗಳನ್ನು ಕಾಪಾಡಿಕೊಂಡು, ಎನ್.ಡಿ.ಬಿ.ಯನ್ನು ಜಾಗತಿಕ ಸಂಸ್ಥೆಯಾಗಿ ಬೆಳೆಸುವ ಅವಳಿ ಉದ್ದೇಶಗಳನ್ನು ಸಾಧಿಸಲು ಆದ್ಯ ಗಮನ ನೀಡಬೇಕು ಎಂದೂ ಅವರು ಸಲಹೆ ಮಾಡಿದರು.

***


(रिलीज़ आईडी: 1627385) आगंतुक पटल : 274
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Punjabi , Tamil , Telugu , Malayalam