ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಆರೋಗ್ಯ ಕ್ಷೇತ್ರಗಳಲ್ಲಿ ಕೋವಿಡ್ 19 ಅನ್ನು ಸಮರ್ಥವಾಗಿ ಎದುರಿಸಲು ಸಿಪೆಟ್ ಸಂಸ್ಥೆಯಿಂದ ನೂತನ ಸಂಶೋಧನಾ ಮತ್ತು ಅಭಿವೃದ್ಧಿ ಉಪಕ್ರಮಗಳು
प्रविष्टि तिथि:
27 MAY 2020 1:37PM by PIB Bengaluru
ಆರೋಗ್ಯ ಕ್ಷೇತ್ರಗಳಲ್ಲಿ ಕೋವಿಡ್ 19 ಅನ್ನು ಸಮರ್ಥವಾಗಿ ಎದುರಿಸಲು ಸಿಪೆಟ್ ಸಂಸ್ಥೆಯಿಂದ ನೂತನ ಸಂಶೋಧನಾ ಮತ್ತು ಅಭಿವೃದ್ಧಿ ಉಪಕ್ರಮಗಳು;
ವಿಶ್ವ ಆರೋಗ್ಯ ಸಂಸ್ಥೆ/ ಐ.ಎಸ್.ಒ ಮಾರ್ಗಸೂಚಿಗಳ ಪ್ರಕಾರ ಪಿ.ಪಿ.ಇ ಹಾಗು ಇತರ ಸಂಬಂಧಿತ ಉತ್ಪನ್ನಗಳ ತಯಾರಿಕೆ ಮತ್ತು ಪ್ರಮಾಣೀಕರಣ
ಮುರುತಾಲ್, ಜೈಪುರ, ಮಧುರೈ ಮತ್ತು ಲಕ್ನೋದಲ್ಲಿನ ಸಿಪೆಟ್ ಕೇಂದ್ರಗಳಿಂದ
'ಕೊರೊನ ವೈರಸ್' ವಿರುದ್ಧ ಹೋರಾಡಲು ಅಗತ್ಯ ರಕ್ಷಣಾತ್ಮಕ ಸಾಧನವಾಗಿ "ಫೇಸ್ ಶೀಲ್ಡ್" ಅಭಿವೃದ್ಧಿ
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ ಪ್ರಮುಖ ರಾಷ್ಟ್ರೀಯ ಸಂಸ್ಥೆಯಾದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (ಸಿಪೆಟ್) ಸಂಸ್ಥೆ, ಈಗ ಕೋವಿಡ್ -19 ಸಾಂಕ್ರಾಮಿಕವನ್ನು ಎದುರಿಸಲು ಭಾರತ ಸರ್ಕಾರ , ವಿಶ್ವ ಆರೋಗ್ಯ ಸಂಸ್ಥೆ/ ಐ.ಎಸ್.ಒ ಮಾರ್ಗಸೂಚಿಗಳ ಪ್ರಕಾರ ಪಿ.ಪಿ.ಇ ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಪ್ರಮಾಣೀಕರಿಸುವುದು ಮುಂತಾದ ಆರೋಗ್ಯ ಕ್ಷೇತ್ರದ ವಿಷಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉಪಕ್ರಮಗಳನ್ನು ಪ್ರಾರಂಭಿಸಿದೆ.
ಸಿಪೆಟ್ ಕ್ಯಾಬಿನೆಟ್ ಸೆಕ್ರೆಟರಿಯಟ್ ಅವರ ನಿರ್ದೇಶನದಂತೆ ಆರೋಗ್ಯ ರಕ್ಷಣೆಯ ಕ್ಷೇತ್ರಗಳಲ್ಲಿ ಆರ್ & ಡಿ ಉಪಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಿಪೆಟ್ ಸಂಸ್ಥೆ ಹೇಳಿದೆ. ಅಂತೆಯೇ, ವಿಶ್ವ ಆರೋಗ್ಯ ಸಂಸ್ಥೆ / ಐ.ಎಸ್.ಒ ಮಾರ್ಗಸೂಚಿಗಳ ಪ್ರಕಾರ ಪಿ.ಪಿ.ಇ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಪರೀಕ್ಷಾ ಸೌಲಭ್ಯಗಳು ಮತ್ತು ಪರೀಕ್ಷಾ ಹಾಗೂ ಮಾಪನಾಂಕ ನಿರ್ಣಯ ಪ್ರಯೋಗಾಲಯಗಳು (ಎನ್.ಎ.ಬಿ.ಎಲ್.) ಮಾನ್ಯತೆಗಾಗಿ ಸಿಪೆಟ್ ನ ಮೂರು ರಾಷ್ಟ್ರೀಯ ಮಾನ್ಯತೆ ಮಂಡಳಿಗಳು ಶೀಘ್ರದಲ್ಲೇ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಟೆಕ್ನಾಲಜಿ (ಐ.ಪಿ.ಟಿ) ಕೇಂದ್ರ, ಭುವನೇಶ್ವರ, ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಟೆಕ್ನಾಲಜಿ (ಐ.ಪಿ.ಟಿ) ಕೇಂದ್ರ, ಚೆನ್ನೈ, ಮತ್ತು ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಟೆಕ್ನಾಲಜಿ (ಐ.ಪಿ.ಟಿ) ಕೇಂದ್ರ, ಲಕ್ನೋಗಳಲ್ಲಿ ಸಿದ್ಧವಾಗಲಿದೆ.
ಸಿಪೆಟ್: ಆರೋಗ್ಯ ಕಾರ್ಯಕರ್ತರು, ರೈತರು, ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಇತ್ಯಾದಿಗಳಿಗೆ 'ಕೊರೊನ ವೈರಸ್' ವಿರುದ್ಧ ಹೋರಾಡಲು ರಕ್ಷಣಾತ್ಮಕ ಸಾಧನವಾಗಿ ಸಹಾಯ ಮಾಡಲು 'ಮುಖಗುರಾಣಿ(ಫೇಸ್ ಶೀಲ್ಡ್)' ಅನ್ನು ಸ್ಕಿಲ್ಲಿಂಗ್ ಮತ್ತು ತಾಂತ್ರಿಕ ಬೆಂಬಲ ಕೇಂದ್ರ (ಸಿ.ಎಸ್.ಟಿ.ಎಸ್.) ಮುರ್ತಾಲ್ ಅಭಿವೃದ್ಧಿಪಡಿಸಿದ್ದರು.
ಸಿಪೆಟ್: ಸಿ.ಎಸ್.ಟಿ.ಎಸ್ , ಜೈಪುರ, ಹಾಗೂ ಸಿಪೆಟ್ : ಐ.ಪಿ.ಟಿ, ಲಕ್ನೋ ಮತ್ತು ಸಿಪೆಟ್ : ಸಿ.ಎಸ್.ಟಿ.ಎಸ್, ಮಧುರೈಗಳು ನೂತನ 'ಮುಖಗುರಾಣಿ(ಫೇಸ್ ಶೀಲ್ಡ್)' ಅಭಿವೃದ್ಧಿಪಡಿಸಿವೆ ಮತ್ತು ಈ ಮುಖಗುರಾನಿಗಳ ಚೌಕಟ್ಟುಗಳ ಉತ್ಪಾದನಾ ಕಾರ್ಯ ಪ್ರಗತಿಯಲ್ಲಿದೆ.


ಆಡಳಿತ ಸಚಿವಾಲಯದ ನಿರ್ದೇಶನದ ಪ್ರಕಾರ ಅಗತ್ಯ ಸೇವೆಯನ್ನು ಬೆಂಬಲಿಸುವ ಸಲುವಾಗಿ ಆಹಾರ ಧಾನ್ಯ ಪ್ಯಾಕೇಜಿಂಗ್ ಅನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಸಿಪೆಟ್ ವಿಸ್ತರಿಸಿದೆ.
ಅಡೆತಡೆಗಳನ್ನು ನಿವಾರಿಸಲು ಉಪಕ್ರಮ ತೆಗೆದುಕೊಳ್ಳಲು ಒಂಬತ್ತು ಸದಸ್ಯರ ಆಂತರಿಕ ಸ್ಥಾನೀಯ-ತಂಡವನ್ನು ರಚಿಸಲಾಗಿದೆ ಮತ್ತು ಅದರ ಪ್ರಕಾರ ತಂತ್ರಜ್ಞಾನದ ಬೆಂಬಲವನ್ನು ನೀಡಲು ಉದ್ಯಮಕ್ಕೆ ಆನ್-ಲೈನ್ ತರಬೇತಿ ಕಾರ್ಯಕ್ರಮಗಳು ಮತ್ತು ಮನೆ ಬಾಗಿಲ ಮಟ್ಟದ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅಂತೆಯೇ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಸಿಪೆಟ್ ಕನಿಷ್ಠ ಮಾನವಶಕ್ತಿಯೊಂದಿಗೆ ಮೂರು ಶಿಫ್ಟ್ ಆಧಾರದ ಮೇಲೆ ಕೆಲಸ ಕಾರ್ಯಗಳನ್ನು ಚಲಾಯಿಸಲು ಪ್ರಸ್ತಾಪಿಸಿದೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು, ಪ್ರಧಾನಮಂತ್ರಿ ನಿಧಿಗೆ (ಪಿ.ಎಮ್. ಕೇರ್ಸ್ ) ಮತ್ತು ಸ್ಥಳೀಯ ಸಂಸ್ಥೆ / ಮುನ್ಸಿಪಲ್ ಕಾರ್ಪೊರೇಷನ್/ ರಾಜ್ಯ ಸರ್ಕಾರಗಳಿಗೆ ಸಿಪೆಟ್ ಸಿಪೆಟ್ ಕೊಡುಗೆ ನೀಡುವ ಮೂಲಕ ಸಮುದಾಯ ಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಸಿಪೆಟ್ನ ಎಲ್ಲಾ ಅಧಿಕಾರಿಗಳು. ಮತ್ತು ಉದ್ಯೋಗಿಗಳು ಒಟ್ಟಾಗಿ ಒಂದು ದಿನದ ವೇತನವನ್ನು ಸಂಗ್ರಹಿಸುವ ಮೂಲಕ ಒಟ್ಟು ರೂ .188.25 ಲಕ್ಷವನ್ನು "ಪಿಎಂ ಕೇರ್ಸ್" ನಿಧಿಗೆ ಕೊಡುಗೆ ನೀಡಿದ್ದಾರೆ.
ಸಿಪೆಟ್ ಇದುವರೆಗೆ ವಿವಿಧ ಸ್ಥಳೀಯ ಸಂಸ್ಥೆಗಳು/ ಮಹಾನಗರ ಪಾಲಿಕೆಗಳು/ ರಾಜ್ಯ ಸರ್ಕಾರಗಳಿಗೆ ಆರ್ಥಿಕ ಸಹಾಯವಾಗಿ ರೂ .85.50 ಲಕ್ಷಗಳ ಕೊಡುಗೆಯನ್ನು ನೀಡಿದೆ. ಸಿ.ಪಿ.ಇ.ಟಿ.ಯ ಸಮರ್ಥ ಪ್ರಾಧಿಕಾರಗಳ ಸೂಕ್ತ ಅನುಮೋದನೆಯೊಂದಿಗೆ, ಕೊರೊನ ವೈರಸ್ ಕೋವಿಡ್-19 ಹರಡುವಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯವಿರುವ ಸಿಬ್ಬಂದಿಗಳು, ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮ್ಯಯೆಗಳನ್ನು ಕಡಿಮೆ ಮಾಡಲು ಸಕಾಲಿಕವಾಗಿ ಆಹಾರ ಮತ್ತು ಆಶ್ರಯವನ್ನು ಒದಗಿಸುವ ಮೂಲಕ ತಮ್ಮ ಕೊಡುಗೆ ಮತ್ತು ಪಾಲುಗಾರಿಕೆಯನ್ನೂ ನೀಡಿದೆ.
***
(रिलीज़ आईडी: 1627311)
आगंतुक पटल : 318
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Odia
,
Tamil
,
Telugu
,
Malayalam