ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 27 MAY 2020 5:03PM by PIB Bengaluru

ಕೋವಿಡ್-19 ಹೊಸ ಮಾಹಿತಿ

ಚೇತರಿಕೆಯ ಪ್ರಮಾಣವು 42.4% ಕ್ಕೆ ಸುಧಾರಿಸಿದೆ

ನಿನ್ನೆ 1,16,041 ಮಾದರಿಗಳ ಪರೀಕ್ಷೆ

 

ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಲಾಕ್ಡೌನ್ ನಿಂದ ಅನೇಕ ಪ್ರಯೋಜನಗಳಾಗಿವೆ, ಅವುಗಳಲ್ಲಿ ಮುಖ್ಯವಾಗಿ ಇದು ರೋಗದ ಹರಡುವಿಕೆಯ ವೇಗವನ್ನು ಕುಂಠಿತಗೊಳಿಸಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಂದಾಜಿನ ಪ್ರಕಾರ, ಹೆಚ್ಚಿನ ಸಂಖ್ಯೆಯ ಸಾವುಗಳು ಮತ್ತು ಪ್ರಕರಣಗಳನ್ನು ತಪ್ಪಿಸಲಾಗಿದೆ. ಅದೇ ಸಮಯದಲ್ಲಿ, ಕೋವಿಡ್19ನಿಂದಾದ ಲಾಕ್ಡೌನ್ ಅವಧಿಯಲ್ಲಿ ನಿರ್ದಿಷ್ಟ ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿ; ಆನ್ಲೈನ್ ತರಬೇತಿ ಮಾಡ್ಯೂಲ್ಗಳು ಮತ್ತು ವೆವಿನಾರ್ಗಳ ಮೂಲಕ ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ; ಹೆಚ್ಚಿದ ಆರೋಗ್ಯ ತಪಾಸಣಾ ಸಾಮರ್ಥ್ಯ; ಸರಬರಾಜು, ಉಪಕರಣಗಳು, ಆಮ್ಲಜನಕದ ಪೋರೈಕೆಯಲ್ಲಿ ಹೆಚ್ಚಳ; ಸಂಬಂಧಿತ ಮಾರ್ಗಸೂಚಿಗಳನ್ನು ನೀಡುವುದು, ಮಾನದಂಡಗಳನ್ನು ಸಿದ್ಧಪಡಿಸುವುದು, ಪ್ರಸಾರ ಮಾಡುವುದು, ಅಳವಡಿಸಿಕೊಳ್ಳುವುದು ಹಾಗೂ ಅಭ್ಯಾಸ ಮಾಡುವುದು; ರೋಗನಿರ್ಣಯ, ಔಷಧ ಪ್ರಯೋಗಗಳು, ಲಸಿಕೆ ಸಂಶೋಧನೆ; ಮತ್ತು ತಾಂತ್ರಿಕತೆಯಲ್ಲಿ ಸಂಪರ್ಕ ಕಣ್ಗಾವಲು ವ್ಯವಸ್ಥೆಗಳು, ಹೆಚ್ಚಿನ ಸಂಪರ್ಕ ಪತ್ತೆಹಚ್ಚುವಿಕೆಯೊಂದಿಗೆ ಬಲಗೊಂಡವು, ಮನೆ ಮನೆ ಸಮೀಕ್ಷೆಗಳು ಮತ್ತು ಆರೋಗ್ಯ ಸೇತು ಮುಂತಾದವುಗಳನ್ನು ಸಾಧಿಸಲಾಯಿತು.

ಲಾಕ್ ಡೌನ್ ಸಮಯದಲ್ಲಿ ಕೋವಿಡ್-19 ನಿರ್ವಹಣೆಗೆ ಅಗತ್ಯವಾದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಯಿತು. 27 ಮೇ 2020 ಹೊತ್ತಿಗೆ, 1,58,747 ಪ್ರತ್ಯೇಕ ಹಾಸಿಗೆಗಳು, 20,355 ಐಸಿಯು ಹಾಸಿಗೆಗಳು ಮತ್ತು 69,076 ಆಮ್ಲಜನಕ ಆಸರೆಯುಳ್ಳ ಹಾಸಿಗೆಗಳನ್ನು ಹೊಂದಿರುವ 930 ಮೀಸಲಾದ ಕೋವಿಡ್ ಆಸ್ಪತ್ರೆಗಳು ಲಭ್ಯವಿದೆ. 1,32,593 ಪ್ರತ್ಯೇಕ ಹಾಸಿಗೆಗಳೊಂದಿಗೆ 2,362 ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು; 10,903 ಐಸಿಯು ಹಾಸಿಗೆಗಳು ಮತ್ತು 45,562 ಆಮ್ಲಜನಕ ಆಸರೆಯುಳ್ಳ ಹಾಸಿಗೆಗಳನ್ನು ಕಾರ್ಯಗತಗೊಳಿಸಲಾಗಿದೆ. ದೇಶದಲ್ಲಿ ಕೋವಿಡ್-19 ಎದುರಿಸಲು 10,341 ಸಂಪರ್ಕತಡೆ ಕೇಂದ್ರಗಳು ಮತ್ತು 6,52,830 ಹಾಸಿಗೆಗಳನ್ನು ಹೊಂದಿರುವ 7,195 ಕೋವಿಡ್ ಆರೈಕೆ ಕೇಂದ್ರಗಳು ಈಗ ಲಭ್ಯವಿದೆ. ಕೇಂದ್ರವು ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ 113.58 ಲಕ್ಷ ಎನ್95 ಮುಖಗವಸುಗಳು ಮತ್ತು 89.84 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸಿದೆ. ದೇಶದಲ್ಲಿ 435 ಸರ್ಕಾರಿ ಪ್ರಯೋಗಾಲಯಗಳು ಮತ್ತು 189 ಖಾಸಗಿ ಪ್ರಯೋಗಾಲಯಗಳ ಮೂಲಕ (ಒಟ್ಟು 624 ಪ್ರಯೋಗಾಲಯಗಳು) ಪರೀಕ್ಷಾ ಸಾಮರ್ಥ್ಯವು ಹೆಚ್ಚಾಗಿದೆ. ಒಟ್ಟಾರೆಯಾಗಿ, ಕೋವಿಡ್-19ಕ್ಕಾಗಿ ಇದುವರೆಗೆ 32,42,160 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 1,16,041 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ.

ದೇಶದಲ್ಲಿ ಒಟ್ಟು 1,51,767 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 64,426 ಜನರನ್ನು ಗುಣಪಡಿಸಲಾಗಿದೆ ಮತ್ತು ಚೇತರಿಕೆಯ ಪ್ರಮಾಣವನ್ನು 42.4% ಎಂದು ಗುರುತಿಸಲಾಗಿದೆ. ಹಾಗೆಯೇ ವಿಶ್ವದ ಸರಾಸರಿ 6.36%ಕ್ಕೆ ಹೋಲಿಸಿದರೆ ಸಾವಿನ ಪ್ರಮಾಣವು 2.86% ಆಗಿದೆ

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮತ್ತು ನಂತರದ ಸಂತಾನೋತ್ಪತ್ತಿ, ತಾಯಿಯ, ನವಜಾತ, ಮಗು, ಹದಿಹರೆಯದ ಆರೋಗ್ಯ + ಪೋಷಣೆ (RMNCAH + N) ಸೇವೆಗಳನ್ನು ಒದಗಿಸುವುದರ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗದರ್ಶನದ ಟಿಪ್ಪಣಿ ನೀಡಿದೆ. ಅದರ ವಿವರಗಳನ್ನು ಇಲ್ಲಿ ನೋಡಬಹುದು:

https://www.mohfw.gov.in/pdf/GuidanceNoteonProvisionofessentialRMNCAHNServices24052020.pdf

ಕಣ್ಣಿನ ರಕ್ಷಣೆಯ ಗಾಗಲ್ ಕನ್ನಡಕಗಳ ಮರು ಸಂಸ್ಕರಣೆ ಮತ್ತು ಮರು ಬಳಕೆ ಕುರಿತು ಸಚಿವಾಲಯವು ಸಲಹೆಯನ್ನು ಸಹ ನೀಡಿದೆ. ಅದರ ವಿವರಗಳನ್ನು ಇಲ್ಲಿ ನೋಡಬಹುದು:

https://www.mohfw.gov.in/pdf/Advisoryonreprocessingandreuseofeyeprotectiongoggles.pdf

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1627310) Visitor Counter : 195