ರಕ್ಷಣಾ ಸಚಿವಾಲಯ   
                
                
                
                
                
                
                    
                    
                        ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಸ್ಟ್ರೇಲಿಯಾದ ರಕ್ಷಣಾ ಸಚಿವರೊಂದಿಗೆ ಕೊವಿಡ್-19 ತಡೆಗಟ್ಟುವ ಕುರಿತು ದೂರವಾಣಿ ಮೂಲಕ ಚರ್ಚಿಸಿದರು
                    
                    
                        
                    
                
                
                    Posted On:
                26 MAY 2020 3:28PM by PIB Bengaluru
                
                
                
                
                
                
                ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಸ್ಟ್ರೇಲಿಯಾದ ರಕ್ಷಣಾ ಸಚಿವರೊಂದಿಗೆ 
ಕೊವಿಡ್-19 ತಡೆಗಟ್ಟುವ ಕುರಿತು ದೂರವಾಣಿ ಮೂಲಕ ಚರ್ಚಿಸಿದರು
 
ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವೆ ಮಿಸ್ ಲಿಂಡಾ ರೆನಾಲ್ಡ್ಸ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
ಉಭಯ ರಕ್ಷಣಾ ಸಚಿವರು ಕೊವಿಡ್-19 ಸಾಂಕ್ರಾಮಿಕ ರೋಗದ ಕುರಿತು ತಾವು ಕೈಗೊಂಡ ಕ್ರಮಗಳ ಕುರಿತು ಚರ್ಚಿಸಿದರು. ಕೊವಿಡ್-19 ವಿರುದ್ಧದ ಅಂತಾರಾಷ್ಟ್ರೀಯ ಮಟ್ಟದ ಹೋರಾಟದಲ್ಲಿ ಭಾರತದ ಪಾಲುದಾರಿಕೆಯ ಕುರಿತು ಶ್ರೀ ರಾಜನಾಥ್ ಸಿಂಗ್, ಮಿಸ್ ಲಿಂಡಾ ರೆನಾಲ್ಡ್ಸ್ ಅವರಿಗೆ ಮಾಹಿತಿ ನೀಡಿದರು ಮತ್ತು ಈ ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪರಸ್ಪರರ ಸಹಕಾರ ಕ್ಷೇತ್ರಗಳ ಕುರಿತು ಚರ್ಚಿಸಲಾಯಿತು. ಕೊವಿಡ್-19 ರ ನಂತರದ ಸವಾಲುಗಳನ್ನು ಎದುರಿಸಲು ಭಾರತ-ಆಸ್ಟ್ರೇಲಿಯಾ ಕಾರ್ಯತಂತ್ರದ ಸಹಭಾಗಿತ್ವವು ಇತರ ದೇಶಗಳೊಂದಿಗೆ ಒಗ್ಗೂಡಿ ಕೆಲಸ ಮಾಡಲು ಉತ್ತಮ ಅಡಿಪಾಯವನ್ನು ಹಾಕಿದಂತಾಗುತ್ತದೆ ಎಂದು ಕೂಡ ಅವರು ಒಪ್ಪಿಕೊಂಡರು.
ಭಾರತ-ಆಸ್ಟ್ರೇಲಿಯಾ ಕಾರ್ಯತಂತ್ರದ ಸಹಭಾಗಿತ್ವದ ಚೌಕಟ್ಟಿನಲ್ಲಿ ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಹಕಾರದ ಉಪ-ಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಉಭಯ ಸಚಿವರು ತಿಳಿಸಿದರು.
***
                
                
                
                
                
                (Release ID: 1627111)
                Visitor Counter : 208
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Assamese 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Punjabi 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam