ಪ್ರಧಾನ ಮಂತ್ರಿಯವರ ಕಛೇರಿ

ಆಂಫಾನ್ ಚಂಡಮಾರುತದಿಂದಾದ ಪರಿಸ್ಥಿತಿಯ ಕುರಿತಂತೆ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ರೂಪಾಂತರ

Posted On: 22 MAY 2020 2:54PM by PIB Bengaluru

ಆಂಫಾನ್ ಚಂಡಮಾರುತದಿಂದಾದ ಪರಿಸ್ಥಿತಿಯ ಕುರಿತಂತೆ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ರೂಪಾಂತರ

 

ಮತ್ತೊಮ್ಮೆ ಚಂಡಮಾರುತ ಭಾರತದ ಕರಾವಳಿಯನ್ನು ಅದರಲ್ಲೂ ಪೂರ್ವ ವಲಯದಲ್ಲಿ ಅಪ್ಪಳಿಸಿದೆ. ಅದು ನಮ್ಮ ಪಶ್ಚಿಮ ಬಂಗಾಳದ ಸಹೋದರ ಮತ್ತು ಸಹೋದರಿಯರಿಗೆ ದೊಡ್ಡ ನಷ್ಟವನ್ನುಂಟುಮಾಡಿದ್ದು, ಅಲ್ಲಿ ಆಸ್ತಿಗೆ ತೀವ್ರ ಸ್ವರೂಪದ ಹಾನಿ ಮಾಡಿದೆ.

ಚಂಡಮಾರುತದ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಂಬಂಧಿತ ಎಲ್ಲರೊಂದಿಗೆ ನಾನು ಅವರೆಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಭಾರತ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಕೂಡ ಸತತ ಸಂಪರ್ಕದಲ್ಲಿದೆ. ಚಂಡಮಾರುತದಿಂದ ಆಗಬಹುದಾದ ಹಾನಿಯನ್ನು ತಗ್ಗಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿ ಶ್ರಮಿಸಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದವು. ಇದರ ನಡುವೆಯೂ ನಾವು ಸುಮಾರು 80 ಜನರ ಜೀವನನ್ನು ಉಳಿಸಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ನಮಗೆಲ್ಲರಿಗೂ ನೋವಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಾವೆಲ್ಲರೂ ತಮ್ಮ ಆಪ್ತೇಷ್ಟರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ ಮತ್ತು ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಅವರೊಂದಿಗೆ ಇರುತ್ತೇವೆ.

ಜೊತೆಗೆ ಸಾಕಷ್ಟು ಪ್ರಮಾಣದ ಆಸ್ತಿಗೂ ಹಾನಿಯಾಗಿದೆ ಅದು ಕೃಷಿ ಇರಲಿ, ವಿದ್ಯುತ್ ವಲಯ ಇರಲಿ, ದೂರಸಂಪರ್ಕವಿರಲಿ ಅಥವಾ ಹಾನಿಗೊಳಗಾದ ಮನೆಗಳೇ ಆಗಿರಲಿ. ವಿವಿಧ ಮೂಲ ಸೌಕರ್ಯಗಳಿಗೆ ನಷ್ಟವಾಗಿದೆ ಮತ್ತು ವಾಣಿಜ್ಯ ವಿಶ್ವವದಲ್ಲ ಮತ್ತು ಕೃಷಿ ವಲಯದಲ್ಲಿ ಪ್ರತಿಯೊಬ್ಬರೂ ಭಾರೀ ನಷ್ಟ ಅನುಭವಿಸಿದ್ದಾರೆ.

ಇಂದು ನಾನು ಮುಖ್ಯಮಂತ್ರಿ ಮತ್ತು ರಾಜ್ಯಪಾಲರೊಂದಿಗೆ ಚಂಡಮಾರುತ ಪೀಡಿತ ವಿಶಾಲ ಪ್ರದೇಶದ ವೈಮಾನಿಕ ಸಮೀಕ್ಷೆಯನ್ನು ಮಾಡಿ, ಸೂಕ್ಷ್ಮವಾಗಿ ಗಮನಿಸಿದ್ದೇನೆ. ಈಗಷ್ಟೇ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ನನಗೆ ಪ್ರಾಥಮಿಕ ಅಂದಾಜು ಹಾನಿಯ ವಿವರ ನೀಡಿದರು. ಕೃಷಿ, ವಿದ್ಯುತ್ ಕ್ಷೇತ್ರ, ದೂರಸಂಪರ್ಕ, ಮನೆಗಳ ಸ್ಥಿತಿ ಮತ್ತು ಮೂಲಸೌಕರ್ಯಗಳಂತಹ ವಿವಿಧ ಕ್ಷೇತ್ರಗಳ ಹಾನಿಯ ಬಗ್ಗೆ ವಿವರವಾದ ಸಮೀಕ್ಷೆಯನ್ನು ನಡೆಸಲು ಕೇಂದ್ರ ತಂಡವನ್ನು ಕಳುಹಿಸಲು ನಾವು ನಿರ್ಧರಿಸಿದ್ದೇವೆ.
ತತ್ ಕ್ಷಣವೇ ಕೇಂದ್ರದಿಂದ ತಂಡ ಆಗಮಿಸಿ ಅದು ಎಲ್ಲ ಪ್ರದೇಶದಲ್ಲಿ ಅಧ್ಯಯನ ನಡೆಸಲಿದೆ, ಇದರ ಜೊತೆಗೇ ನಾವು ಪುನರ್ವಸತಿ, ಪುನರ್ ನಿರ್ಮಾಣ ವ್ಯವಸ್ಥೆಯನ್ನೂ ಒಟ್ಟಾಗಿ ಮಾಡುತ್ತೇವೆ. ಸಮಗ್ರ ಯೋಜನೆ ತಯಾರಿಸುವ ಮೂಲಕ, ನಾವು ಬಂಗಾಳಕ್ಕೆ ಸಂಕಷ್ಟದ ಕಾಲದಲ್ಲಿ ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ ಮತ್ತು ಬಂಗಾಳ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮರಳಿ ಪುಟಿದೇಳಲು ನೆರವಾಗುತ್ತೇವೆ. ಇದಕ್ಕಾಗಿ, ಭಾರತ ಸರ್ಕಾರ ಹೆಗಲಿಗೆ ಹೆಗಲುಕೊಟ್ಟು ರಾಜ್ಯ ಸರ್ಕಾರದೊಂದಿಗೆ ಶ್ರಮಿಸಲಿದೆ. ನಾವು ರಾಜ್ಯದೊಂದಿಗೆ ನಿಲ್ಲುತ್ತೇವೆ ಮತ್ತು ಪಶ್ಚಿಮ ಬಂಗಾಳಕ್ಕೆ ಅವಶ್ಯಕತೆಗಳನ್ನು ಪೂರೈಸಲು ಭಾರತ ಸರ್ಕಾರದ ಪ್ರತಿಯೊಂದು ನೀತಿ ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ಸಹಾಯ ಮಾಡಲಿದೆ.
ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಮುಂಗಡ ನೆರವಾಗಿ ಭಾರತ ಸರ್ಕಾರ ಒಂದು ಸಾವಿರ ಕೋಟಿ ರೂಪಾಯಿಗಳನ್ನು ವ್ಯವಸ್ಥೆ ಮಾಡಲಿದೆ. ಅದೇ ವೇಳೆ, ತಮ್ಮ ಆಪ್ತೇಷ್ಟರನ್ನು ಕಳೆದುಕೊಂಡ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಎರಡು ಲಕ್ಷ ರೂಪಾಯಿಗಳವರೆಗೆ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿಗಳವರೆಗೆ ಪರಿಹಾರ ಧನವನ್ನೂ ನೀಡುತ್ತೇವೆ.
ಇಡೀ ವಿಶ್ವವೇ ಇಂದು ಬಿಕ್ಕಟ್ಟಿನೊಂದಿಗೆ ಸೆಣಸುತ್ತಿದೆ. ಭಾರತ ಕೂಡ ನಿರಂತರವಾಗಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುತ್ತಿದೆ. ಕೊರೊನಾ ವೈರಾಣು ಮತ್ತು ಚಂಡಮಾರುತದ ವಿರುದ್ಧದ ಹೊರಾಟದಲ್ಲಿ ಗೆಲ್ಲುವ ಮಂತ್ರ ಪರಸ್ಪರ ಸಂಪೂರ್ಣ ಭಿನ್ನವಾಗಿದೆ.
ಕೊರೊನಾ ವೈರಾಣು ವಿರುದ್ಧ ಹೋರಾಟದಲ್ಲಿ ನಮ್ಮ ಮಂತ್ರ ಅಗತ್ಯವಿಲ್ಲದಿದ್ದಲ್ಲಿ ಮನೆಯಿಂದ ಹೊರಗೆ ಬರಬೇಡಿ ಮತ್ತು ಎಲ್ಲಿದ್ದೀರೋ ಅಲ್ಲೆ ಇರಿ ಎಂಬುದಾಗಿದೆ. ಆದರೆ ಚಂಡಮಾರುತ ವಿಚಾರದಲ್ಲಿ ಸುರಕ್ಷತ ಸ್ಥಳಕ್ಕೆ ತೆರಳಿ, ನಿಮ್ಮ ಮನೆಯನ್ನು ತೊರೆದು ಅಲ್ಲಿ ಇರಿ ಎಂದು ಹೇಳುವಂತಾಗಿದೆ. ಹೀಗಾಗಿ ಎರಡೂ ವಿಭಿನ್ನ ಸ್ವರೂಪದ ಹೋರಾಟಗಳಾಗಿವೆ ಅದನ್ನು ಪಶ್ಚಿಮ ಬಂಗಾಳ ಜೊತೆಯಾಗಿ ಮಾಡಬೇಕಾಗಿದೆ.
ರಾಜ್ಯ ಸರ್ಕಾರ ಮಮತಾ ಜೀ ಅವರ ನಾಯಕತ್ವದಲ್ಲಿ ಉತ್ತಮ ಕಾರ್ಯ ಮಾಡಿದೆ. ಭಾರತ ಸರ್ಕಾರ ಕೂಡ ಅವರೊಂದಿಗೆ ನಿರಂತರವಾಗಿ ನಿಂತಿದೆ ಮತ್ತು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ತೊಂದರೆ ತಪ್ಪಿಸಲು ಎಲ್ಲ ಅಗತ್ಯ ಕ್ರಮಗಳನ್ನು ಮುಂಚಿತವಾಗಿಯೇ ತೆಗೆದುಕೊಂಡಿದೆ.
ಇಂದು, ರಾಜಾ ರಾಮ್ ಮೋಹನರಾಯ್ ಅರ ಜನ್ಮದಿನ. ಅವರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ಒಂದಡೆ ಸಮಯದಲ್ಲಿ ಪವಿತ್ರ ಪಶ್ಚಿಮ ಬಂಗಾಳದ ನೆಲದಲ್ಲಿರುವ ನಾನು, ಸಂತುಷ್ಟನಾಗಿದ್ದೇನೆ. ಆದರೆ, ಮತ್ತೊಂದೆಡೆ ನಾವು ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿದ್ದೇವೆ. ಆದ್ದರಿಂದ, ರಾಜಾ ರಾಮ ಮೋಹನ್ ರಾಯ್ ಜಿ ನಮ್ಮೆಲ್ಲರನ್ನೂ ಆಶೀರ್ವದಿಸಲಿ, ಮೂಲಕ ನಾವು ಒಟ್ಟಿಗೆ ಕಲೆತು ಒಟ್ಟಾಗಿ ಶ್ರಮಿಸಿ ಅವರು ಕಂಡಿದ್ದ ಸಾಮಾಜಿಕ ಬದಲಾವಣೆಯ ಕನಸುಗಳನ್ನು ನನಸಾಗಿಸಬಹುದು! ನಾವು ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಸಾಮಾಜಿಕ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ರಾಜಾ ರಾಮಮೋಹನ್ ರಾಯ್ ಅವರಿಗೆ ಅದು ನಾವು ಸಲ್ಲಿಸುವ ಅತ್ಯುತ್ತಮ ಗೌರವವಾಗುತ್ತದೆ.
ನಾನು, ಪಶ್ಚಿಮ ಬಂಗಾಳದ ನನ್ನ ಎಲ್ಲ ಸೋದರ ಮತ್ತು ಸೋದರಿಯರಿಗೆ ಭರವಸೆ ನೀಡುತ್ತೇನೆ, ಇಡೀ ದೇಶವೇ ನಿಮ್ಮೊಂದಿಗೆ ಸಂಕಷ್ಟದ ಸಮಯದಲ್ಲಿ ನಿಂತಿದೆ. ಕೇಂದ್ರ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ಎಲ್ಲ ಕೆಲಸ ಮಾಡಲಿದೆ. ನಾನು ಸಂಕಷ್ಟದ ಸಮಯದಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡಲು ಬಂದಿದ್ದೇನೆ, ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ನನಗೆ ಎಲ್ಲ ನಾಗರಿಕರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇಂದು ನಾನು ಇಲ್ಲಿಂದ ಒಡಿಶಾಗೆ ಹೋಗುತ್ತೇನೆ ಮತ್ತು ಅಲ್ಲಿಯೂ ವೈಮಾನಿಕ ಸಮೀಕ್ಷೆ ನಡೆಸುತ್ತೇನೆ. ನಾನು ಅಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಸರ್ಕಾರದೊಂದಿಗೆ ಮಾತನಾಡಲಿದ್ದೇನೆ.

ಪಶ್ಚಿಮ ಬಂಗಾಲದ ಕಷ್ಟ ಕಾಲದಲ್ಲಿ ನಿಮ್ಮೊಂದಿಗಿರುತ್ತೇನೆ ಎಂದು ಮತ್ತೊಮ್ಮೆ ನಾನು ಹೇಳುತ್ತೇನೆ. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ, ನೀವು ಸಾಧ್ಯವಾದಷ್ಟೂ ಬೇಗ ಸಂಕಷ್ಟದಿಂದ ಪಾರಾಗುತ್ತೀರಿ.
ಧನ್ಯವಾದಗಳು.!

***



(Release ID: 1626354) Visitor Counter : 199