ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 21 MAY 2020 3:27PM by PIB Bengaluru

ಕೋವಿಡ್-19 ಹೊಸ ಮಾಹಿತಿ

 

ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆಗೆ, ಹತೋಟಿಗಾಗಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ . ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೋವಿಡ್-19ರಿಂದ ಒಟ್ಟು 45,299 ರೋಗಿಗಳನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಿಂದ ಒಟ್ಟು 3,002 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ಚೇತರಿಕೆಯ ಪ್ರಮಾಣವು ನಿರಂತರವಾಗಿ ಸುಧಾರಿಸುತ್ತಿದೆ ಮತ್ತು ಪ್ರಸ್ತುತ ಅದು 40.32% ಆಗಿದೆ.

ಭಾರತದಲ್ಲಿ ಪ್ರಸ್ತುತ 63,624 ಸಕ್ರಿಯ ಪ್ರಕರಣಗಳಿವೆ. ಇವೆಲ್ಲವೂ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ. ಸಕ್ರಿಯ ಪ್ರಕರಣಗಳಲ್ಲಿ ಅಂದಾಜು 2.94% ಪ್ರಕರಣಗಳು ಮಾತ್ರ ಐಸಿಯುನಲ್ಲಿವೆ.

ಭಾರತದಲ್ಲಿ ಮರಣ ಪ್ರಮಾಣವು 3.06% ಆಗಿದೆ, ಇದು ಜಾಗತಿಕ ಪ್ರಕರಣಗಳ ಮರಣ ಪ್ರಮಾಣದ 6.65% ಕ್ಕೆ ಹೋಲಿಸಿದರೆ ಬಹಳ ಕಡಿಮೆ. ಇದು ಪ್ರಕರಣಗಳ ಸಮಯೋಚಿತ ಗುರುತಿಸುವಿಕೆ ಮತ್ತು ಪ್ರಕರಣಗಳ ಸರಿಯಾದ ಕ್ಲಿನಿಕಲ್ ನಿರ್ವಹಣೆಯತ್ತ ನಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ.

ಮರಣದ ಪ್ರಮಾಣದ ವಿಶ್ಲೇಷಣೆಯು ಪುರುಷರಲ್ಲಿ 64% ಮತ್ತು ಮಹಿಳೆಯರಲ್ಲಿ 36% ಸಾವುಗಳನ್ನು ಸೂಚಿಸುತ್ತದೆ. ವಯಸ್ಸಿನ ವಿತರಣೆಯ ದೃಷ್ಟಿಯಿಂದ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 0.5% ಸಾವುಗಳು, 15-30 ವರ್ಷ ವಯಸ್ಸಿನವರಲ್ಲಿ 2.5%, 30-45 ವರ್ಷ ವಯಸ್ಸಿನವರಲ್ಲಿ 11.4%, 45-60 ವರ್ಷಗಳಲ್ಲಿ 35.1% ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 50.5%. ಸಾವು ಸಂಭವಿಸಿದೆ ಎಂದು ಗಮನಿಸಲಾಗಿದೆ. ಇದಲ್ಲದೆ, 73% ಸಾವಿನ ಪ್ರಕರಣಗಳಲ್ಲಿ ರೋಗಿಗಳು ಇತರ ಕಾಯಿಲೆಗಳನ್ನೂ ಸಹ ಹೊಂದಿದ್ದಾರೆ. ವಯಸ್ಸಾದವರು (60 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ಇತರ ಕಾಯಿಲೆಗಳನ್ನೂ ಹೊಂದಿರುವ ಜನರನ್ನು ಕೋವಿಡ್-19ಕ್ಕಾಗಿ ಹೆಚ್ಚಿನ ಅಪಾಯದ ಗುಂಪುಗಳಾಗಿ ಗುರುತಿಸಲಾಗುತ್ತದೆ.

ಕೋವಿಡ್ ತಡೆಗಟ್ಟಲು ಸೂಕ್ತ ನಡವಳಿಕೆಯ ಬಗ್ಗೆ ಸಮುದಾಯದ ಅರಿವು ರೋಗದ ಹರಡುವಿಕೆಯನ್ನು ತಡೆಗಟ್ಟುವ ಪ್ರಮುಖ ಕಾರ್ಯವಾಗಿದೆ ಎಂದು ಸೂಚಿಸಲಾಗಿದೆ. ವೈಯಕ್ತಿಕ ನೈರ್ಮಲ್ಯ, ಕೈಗಳ ನೈರ್ಮಲ್ಯ ಮತ್ತು ಉಸಿರಾಟದ ಶಿಷ್ಟಾಚಾರ ಮತ್ತು ಪರಿಸರ ನೈರ್ಮಲ್ಯದ ಬಗ್ಗೆ ಗಮನ ಹರಿಸಬೇಕಾಗಿದೆ. ಫೇಸ್ ಕವರ್ ಮತ್ತು ಮುಖಗವಸುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಸಬೇಕು ಮತ್ತು ದೈಹಿಕ ಅಂತರವನ್ನು ಅನುಸರಿಸಬೇಕು. ದೊಡ್ಡ ಸಭೆಗಳನ್ನು ತಪ್ಪಿಸಬೇಕು. ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ ಹೆಚ್ಚಿನ ಅಪಾಯದ ಗುಂಪುಗಳಲ್ಲಿನ ವ್ಯಕ್ತಿಗಳು ಮನೆಯಲ್ಲಿಯೇ ಇರಬೇಕು.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1625997) Visitor Counter : 191