ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
20 MAY 2020 6:23PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಜಾಗತಿಕ, ಲಕ್ಷ ಜನರಿಗೆ 62.3 ಪ್ರಕರಣಗಳಿಗೆ ಹೋಲಿಸಿದರೆ ಭಾರತದ ಪ್ರಮಾಣವು ಪ್ರತಿ ಲಕ್ಷ ಜನರಿಗೆ ಕೇವಲ 7.9 ಪ್ರಕರಣಗಳು ಇವೆ
ಚೇತರಿಕೆಯ ಪ್ರಮಾಣವು 39.6% ಕ್ಕೆ ಸುಧಾರಿಸಿದೆ
ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19ರ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಭಾರತವು ಕೋವಿಡ್-19ರ ಪ್ರಸರಣ ವೇಗವನ್ನು ತುಲನಾತ್ಮಕವಾಗಿ ಕಡಿಮೆ ಮಾಡಿದೆ ಮತ್ತು ಕೋವಿಡ್-19 ಪ್ರಕರಣಗಳ ದತ್ತಾಂಶಗಳಲ್ಲಿ ಇದರ ಪರಿಣಾಮವನ್ನು ಕಾಣಬಹುದು. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ, ಪ್ರತಿ ಲಕ್ಷಕ್ಕೆ 62.3 ಪ್ರಕರಣಗಳಿವೆ, ಭಾರತದಲ್ಲಿ ಇನ್ನೂ ಪ್ರತಿ ಲಕ್ಷ ಜನರಿಗೆ 7.9 ಪ್ರಕರಣಗಳು ಮಾತ್ರ ಇದೆ. ಅಂತೆಯೇ, ಪ್ರತಿ ಲಕ್ಷ ಮರಣದ ಪ್ರಮಾಣಕ್ಕೆ, ಜಾಗತಿಕ ಸರಾಸರಿ ಪ್ರಮಾಣವು 4.2 ಆಗಿದ್ದರೆ, ಭಾರತದ ಅಂಕಿ ಅಂಶವು 0.2 ರಷ್ಟಿದೆ. ತುಲನಾತ್ಮಕವಾಗಿ ಕಡಿಮೆ ಸಾವಿನ ಅಂಕಿಅಂಶಗಳು ಸಮಯೋಚಿತ ಪ್ರಕರಣಗಳ ಗುರುತಿಸುವಿಕೆ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆಯನ್ನು ತೋರಿಸುತ್ತವೆ.
ಕ್ಲಿನಿಕಲ್ ನಿರ್ವಹಣೆ ಮತ್ತು ಚೇತರಿಕೆಯ ಮೇಲಿನ ಗಮನವು ಚೇತರಿಕೆಯ ಪ್ರಮಾಣದಲ್ಲಿ ಸುಧಾರಣೆಗೆ ಕಾರಣವಾಗಿದೆ. ಈ ದಿನ ದೃಢಪಡಿಸಿದ ಪ್ರಕರಣದ 39.6%ಕ್ಕಿಂತ ಹೆಚ್ಚು ಪ್ರಮಾಣದಿಂದಾಗಿ ಒಟ್ಟು ಗುಣಮುಖರಾದವರ ಸಂಖ್ಯೆಯು 42,298 ಆಗಿದೆ. ಇದು ಗುಣಪಡಿಸಬಲ್ಲ ರೋಗ ಮತ್ತು ಭಾರತವು ಅಳವಡಿಸಿಕೊಂಡ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೋಟೋಕಾಲ್ಗಳು ಪರಿಣಾಮಕಾರಿಯಾಗಿದೆ ಎಂದು ಮತ್ತೆ ಸೂಚಿಸುತ್ತದ. ನಿರ್ವಹಣೆಯ ಅಡಿಯಲ್ಲಿರುವ ಎಲ್ಲಾ ಸಕ್ರಿಯ ಪ್ರಕರಣಗಳಲ್ಲಿ ಸುಮಾರು 2.9% ರಷ್ಟಕ್ಕೆ ಆಮ್ಲಜನಕದ ಆಸರೆ ಬೇಕಾಗುತ್ತದೆ ಎಂದು ಚೇತರಿಕೆಯ ದತ್ತಾಂಶದಲ್ಲಿ ಗಮನಿಸಲಾಗಿದೆ; ನಿರ್ವಹಣೆಯ ಅಡಿಯಲ್ಲಿ ಸುಮಾರು 3% ಸಕ್ರಿಯ ಪ್ರಕರಣಗಳಿಗೆ ಐಸಿಯು ಬೆಂಬಲ ಅಗತ್ಯವಿರುತ್ತದೆ ಮತ್ತು ನಿರ್ವಹಣೆಯ ಅಡಿಯಲ್ಲಿ 0.45% ಸಕ್ರಿಯ ಪ್ರಕರಣಗಳಿಗೆ ವೆಂಟಿಲೇಟರ್ ಸೌಲಭ್ಯ ಬೇಕಾಗುತ್ತದೆ. ಭಾರತವು ಏಕಕಾಲದಲ್ಲಿ ಕೋವಿಡ್ ಗೆ ಮೀಸಲಾದ ಆರೋಗ್ಯ ಮೂಲಸೌಕರ್ಯಗಳನ್ನು ನವೀಕರಿಸುವತ್ತ ಗಮನ ಹರಿಸುತ್ತಿದೆ.
ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1625677)
Visitor Counter : 215
Read this release in:
Punjabi
,
English
,
Urdu
,
Hindi
,
Marathi
,
Assamese
,
Manipuri
,
Odia
,
Tamil
,
Telugu
,
Malayalam