ಸಂಪುಟ

ಹಾಲಿ ಇರುವ  “ಭಾಗಶಃ ಸಾಲ ಖಾತ್ರಿ ಯೋಜನೆ(ಪಿಸಿಜಿಎಸ್)” ಮಾರ್ಪಾಡುಗಳಿಗೆ ಕೇಂದ್ರ ಸಂಪುಟದ ಅನುಮೋದನೆ

Posted On: 20 MAY 2020 2:30PM by PIB Bengaluru

ಹಾಲಿ ಇರುವ  ಭಾಗಶಃ ಸಾಲ ಖಾತ್ರಿ ಯೋಜನೆ(ಪಿಸಿಜಿಎಸ್)” ಮಾರ್ಪಾಡುಗಳಿಗೆ ಕೇಂದ್ರ ಸಂಪುಟದ ಅನುಮೋದನೆ

ಪಿಎಸ್ ಬಿಯಿಂದ ಎಎ ಮತ್ತು ಅದಕ್ಕಿಂತ ಕಡಿಮೆ ಶ್ರೇಣಿಯ  ಬಾಂಡ್  ಅಥವಾ ವಾಣಿಜ್ಯ ಪತ್ರಗಳು(ಸಿಪಿಎಸ್)ಗಳ ಖರೀದಿಗೆ ಬಂಡವಾಳ ಖಾತರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಎ ಮತ್ತು ಅದಕ್ಕಿಂತ ಕಡಿಮೆ ಶ್ರೇಣಿಯ ಬಾಂಡ್ ಅಥವಾ ವಾಣಿಜ್ಯ ಪತ್ರಗಳ ಖರೀದಿ (ಸಿಪಿಎಸ್) ಮೊದಲ ನಷ್ಟದ ಮೇಲಿನ ಶೇ.20ರವರೆಗೆ ಸಾವರಿನ್ ಬಂಡವಾಳ ಖಾತರಿ ಗ್ಯಾರಂಟಿಗೆ ಅನುಮೋದನೆ ನೀಡಿದೆ. (ಇದರಲ್ಲಿ ದರ ನಿಗದಿ ಮಾಡದ ಮೂಲ ಕಾಗದ, ಒಂದು ವರ್ಷದವರೆಗೆ ಆರಂಭಿಕ ಮೆಚ್ಯುರಿಟಿ ಇರುವುದೂ ಸೇರಿ) ಇವುಗಳನ್ನು ಎನ್ ಬಿಎಫ್ ಸಿಗಳು/ಎಂಎಫ್ ಸಿ ಗಳು/ ಸಾರ್ವಜನಿಕ ವಲಯದ ಬ್ಯಾಂಕ್ ಗಳು(ಪಿಎಸ್ ಬಿ)ಗಳ ಸಣ್ಣ ಹಣಕಾಸು ಸಂಸ್ಥೆಗಳು(ಎಂಎಫ್ಐಎಸ್) ಮೂಲಕ ಭಾಗಶಃ ಸಾಲ ಖಾತ್ರಿ ಯೋಜನೆಯನ್ನು (ಪಿಸಿಜಿಎಸ್)ಅನ್ನು ವಿಸ್ತರಿಸಲು ಒಪ್ಪಿಗೆ ನೀಡಿದೆ.

ಅಲ್ಲದೆ ಸಚಿವ ಸಂಪುಟ, ಸಂಗ್ರಹಿಸಲ್ಪಟ್ಟ ಸ್ವತ್ತು ಖರೀದಿ ಮತ್ತು ಅದರ ವ್ಯಾಪ್ತಿ ಹೆಚ್ಚಳ ಕುರಿತಂತೆ ಹಾಲಿ ಇರುವ (ಪಿಸಿಜಿಎಸ್)ನಲ್ಲಿ ಮಾರ್ಪಾಡುಗಳನ್ನು ಮಾಡಲು ಅನುಮೋದಿಸಿದೆ.

·        ಎಸ್ಎಂಎ ಕ್ಯಾಟಗರಿ ಅಡಿಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಮಾತ್ರ ಹಿಂದಿನ ಒಂದು ವರ್ಷದ ಅವಧಿಯಲ್ಲಿ ಅಂದರೆ 1.8.2018ಕ್ಕಿಂತಲೂ ಮುಂಚಿನ ಎನ್ ಬಿಎಫ್ ಸಿಗಳು/ಎಚ್ಎಫ್ ಸಿ ಗಳು ಅರ್ಹ. ಮೊದಲು ಎನ್ ಬಿಎಫ್ ಸಿಗಳು/ಎಚ್ಎಫ್ ಸಿಗಳ ವರದಿಗಳನ್ನು ಎಸ್ಎಂಎ-1 ಅಥವಾ ಎಸ್ಎಂಎ-2 ಅಡಿಯಲ್ಲಿ ಈ ಅವಧಿಗೆ ಯೋಜನೆ ಅಡಿ ಅನರ್ಹವಾಗುತ್ತಿದ್ದವು.

·        2017-18, 2018-19, 2019-20ನೇ ಹಣಕಾಸು ವರ್ಷಗಳಿಗೆ ಕನಿಷ್ಠ ಒಂದು ಹಣಕಾಸು ವರ್ಷದಲ್ಲಿ ಲಾಭಗಳಿಸಿದ್ದರೆ, ಅಂತಹ ಎನ್ ಬಿಎಫ್ ಸಿ/ಎಚ್ಎಫ್ ಸಿಗಳಿಗೆ ನಿವ್ವಳ ಲಾಭದಿಂದ ವಿನಾಯಿತಿ ನೀಡಲಾಗುವುದು. ಮೊದಲು ಎನ್ ಬಿಎಫ್ ಸಿ/ಎಚ್ಎಫ್ ಸಿಗಳು 2017-18 ಮತ್ತು 2018-19ನೇ ಹಣಕಾಸು ವರ್ಷದಲ್ಲಿ ಕನಿಷ್ಠ ಒಂದು ವರ್ಷ ನಿವ್ವಳ ಲಾಭ ಮಾಡಿರಬೇಕಿತ್ತು.

·        ಸ್ವತ್ತುಗಳ ಖರೀದಿಗೆ ಹೊಸ ಆಸ್ತಿಗಳೂ ಸೇರಿದಂತೆ ಅವಧಿಯನ್ನು ಆರು ತಿಂಗಳು ವಿಸ್ತರಿಸಲಾಗಿದೆ. ಮೊದಲು 31.03.2019ರ ವರೆಗೆ ಸೃಷ್ಟಿಸಲಾದ ಸ್ವತ್ತುಗಳಿಗೆ ಮಾತ್ರ ಈ ಯೋಜನೆ ಅಡಿ ಅರ್ಹವಾಗಿದ್ದವು.

·        ಸಂಗ್ರಹಿಸಲ್ಪಟ್ಟ ಸ್ವತ್ತುಗಳ ಖರೀದಿಗೆ ಯೋಜನೆಯ ಅವಧಿಯನ್ನು 30.6.2020 ರಿಂದ 31.3.2021ರ ವರೆಗೆ ವಿಸ್ತರಿಸಲಾಯಿತು.

ಹಾಲಿ ಇರುವ ಪಿಸಿಜಿಎಸ್ ಅನ್ನು 11.12.2019ಕ್ಕೆ ಹೊರಡಿಸಲಾಗಿತ್ತು. ಅದರಡಿ ಬಿಬಿಬಿ+ ಅಥವಾ 1,00,000 ಕೋಟಿ ರೂ. ಮೌಲ್ಯಕ್ಕಿಂತ ಅಧಿಕ ಆಸ್ತಿಗಳನ್ನು ಉತ್ತಮ ಹಣಕಾಸು ಹೊಂದಿರುವ      ಎನ್ ಬಿಎಫ್ ಸಿ/ಎಂಎಫ್ ಸಿಗಳು ಸಂಗ್ರಹಿಸಲ್ಪಟ್ಟ ಸ್ವತ್ತುಗಳನ್ನು ಖರೀದಿಸಿದರೆ ಅಂತಹ ಸಂದರ್ಭದಲ್ಲಿ ಪಿಎಸ್ ಬಿಗಳಿಂದ ಆಗುವ ಮೊದಲ ನಷ್ಟದ ಶೇ.10ರ ವರೆಗೆ ಸಾವರಿನ್ ಖಾತ್ರಿಯನ್ನು ಒದಗಿಸಲಾಗುತ್ತಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ವಾಣಿಜ್ಯ ವಹಿವಾಟು ಬಂದ್ ಆಗಿದ್ದರಿಂದ ಎನ್ ಬಿಎಫ್ ಸಿ/ಎಚ್ಎಫ್ ಸಿಗಳನ್ನು ಬೆಂಬಲಿಸಲು ಹೆಚ್ಚುವರಿ ಕ್ರಮಗಳನ್ನು ಅಳವಡಿಸಿ ಕೊಳ್ಳುವುದು ಅತ್ಯಗತ್ಯವಾಗಿದೆ. ಎನ್ ಬಿಎಫ್ ಸಿ/ಎಚ್ಎಫ್ ಸಿಗಳು ವಿತರಿಸುವ ಬಾಂಡ್ಸ್ ಮತ್ತು ಸಿಪಿಗಳ ಖರೀದಿಗೆ ಒದಗಿಸುತ್ತಿರುವ ಸಾವರಿನ್ ಖಾತ್ರಿಯಿಂದ ಆಗುವ ಹೊಣೆಗಾರಿಕೆಯಲ್ಲಿ ಎಂಎಫ್ಐಗಳು ಅತ್ಯಂತ ಪ್ರಮುಖ ಪಾತ್ರವಹಿಸಲಿದ್ದು, ಅವು ಸಣ್ಣ ಸಾಲಗಾರರಿಗೆ ಸಾಲ ವಿತರಣೆಯಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಮತ್ತು ಸ್ವತ್ತುಗಳ ವಿಚಾರದಲ್ಲಿ ಹಾಲಿ ಇರುವ ಪಿಸಿಜಿಎಸ್ ಮಾರ್ಪಾಡಿನಿಂದಾಗಿ ಅದರ ವ್ಯಾಪ್ತಿ ವಿಸ್ತರಣೆಗೊಳ್ಳುತ್ತದೆ.

ಅನುಷ್ಠಾನ ವೇಳಾಪಟ್ಟಿ

ಭಾರತ ಸರ್ಕಾರ ನೀಡುತ್ತಿರುವ ಏಕಕಾಲದ ಆಂಶಿಕ ಸಾಲ ಖಾತ್ರಿ ಯೋಜನೆಯ ಅವಧಿ 2021ರ ಮಾರ್ಚ್ 31ರ ವರೆಗೆ ಲಭ್ಯವಿದ್ದು, ಅದು ಸಂಗ್ರಹಿಸಲ್ಪಟ್ಟ ಸ್ವತ್ತುಗಳ ಖರೀದಿ ಮತ್ತು ಯೋಜನೆಯಲ್ಲಿ ನಮೂದಿಸಲಾದ ಬಾಂಡ್ ಮತ್ತು ಸಿಪಿಗಳ ಖರೀದಿ ಅವಧಿ ಅಥವಾ 10,000 ಕೋಟಿ ರೂ. ಮೌಲ್ಯದ ಖಾತ್ರಿ ಆಗುವವರೆಗೆ ಲಭ್ಯವಿರುತ್ತದೆ. ಇದರಲ್ಲಿ ಒಟ್ಟುಗೂಡಿಸಿದ ಸ್ವತ್ತು ಖರೀದಿ ಮತ್ತು ಸರ್ಕಾರ ಒದಗಿಸುವ ಬಾಂಡ್ ಮತ್ತು ಸಿಪಿಗಳ ಖರೀದಿ ಯಾವುದು ಮೊದಲೋ ಅದಕ್ಕೆ ಅನ್ವಯವಾಗುತ್ತದೆ.

ಪರಿಣಾಮ:

ಕೋವಿಡ್-19 ಬಿಕ್ಕಟ್ಟು ಮತ್ತು ಆನಂತರದ ಲಾಕ್ ಡೌನ್ ನಿರ್ಬಂಧಗಳಿಂದಾಗಿ ಹೊಸದಾಗಿ ಸಾಲ ವಿತರಣೆ ಮತ್ತು ಸಂಗ್ರಹದ ಮೇಲೆ ನಕಾರಾತ್ಮಕ ಪರಿಣಾಮಗಳಾಗಿವೆ. ಒಟ್ಟಾರೆ ಇದು ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟುಮಾಡಿದೆ. ಎನ್ ಬಿಎಫ್ ಸಿ/ಎಚ್ಎಫ್ ಸಿ/ಎಂಎಫ್ಐ ವಲಯಗಳಿಗೆ ಸ್ವತ್ತು ಗುಣಮಟ್ಟದ ವಿಚಾರದ ಮೇಲೂ ಪರಿಣಾಮಗಳನ್ನು ಬೀರಿದೆ. ಇದರಿಂದಾಗಿ ವಲಯದಲ್ಲಿ ಕಡಿಮೆ ಸಾಲ ಪ್ರಗತಿ ಮತ್ತು ಹೆಚ್ಚಿನ ಸಾಲ ಬೆಳವಣಿಗೆಯಾಗಿದೆ. ಇದರ ಪ್ರತಿಕೂಲ ಪರಿಣಾಮದಿಂದಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್ಎಂಇ) ಸಾಲಗಳ ಮೇಲೂ ಆಗಿದೆ. ಆರ್ ಬಿಐ ಸ್ವತ್ತಿನ ವಿಚಾರದಲ್ಲಿ ಮೂರು ತಿಂಗಳು ಮುಂದೂಡಿಕೆ (ಮಾರಿಟೋರಿಯಂ )ನೀಡುವ ಮೂಲಕ ಕೆಲವು ಪರಿಹಾರಗಳನ್ನು ನೀಡಿವೆ. ಹೊಣೆಗಾರಿಕೆ ಕಡೆಯಿಂದ ವಲಯ ಇನ್ನೂ ಹೆಚ್ಚಿನ ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದೆ. ಈಗ ಯೋಜನೆ ವಿಸ್ತರಣೆಯಿಂದ ಹೊಣೆಗಾರಿಕೆ ಕಡೆಯಿಂದ ಆಗುವ ಸಮಸ್ಯೆಗಳನ್ನು ಎದುರಿಸಬಹುದಾಗಿದೆ. ಅಲ್ಲದೆ ಹಾಲಿ ಇರುವ ಪಿಜಿಸಿಎಸ್ ನಲ್ಲಿ ಮಾರ್ಪಾಡುಗಳು ಮಾಡುವುದರಿಂದ ಯೋಜನೆಯ ಸ್ವತ್ತುಗಳ ವ್ಯಾಪ್ತಿ ವಿಸ್ತೃತಗೊಳ್ಳಲಿದೆ. ಎನ್ ಬಿಎಫ್ ಸಿಗಳು, ಎಚ್ಎಫ್ ಸಿಗಳು, ಮತ್ತು ಎಂಎಫ್ಐಗಳು ಬಳಕೆ ಬೇಡಿಕೆಯನ್ನು ಸುಸ್ಥಿರವಾಗಿಟ್ಟುಕೊಳ್ಳಲು ಮತ್ತು ಸಣ್ಣ ಮತ್ತು ಮಧ್ಯಮ ವರ್ಗದಲ್ಲಿ ಬಂಡವಾಳ ಹೂಡಿಕೆಗೆ ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಅವುಗಳಿಗೆ ಯಾವುದೇ ಅಡೆತಡೆ ಇಲ್ಲದೆ, ನಿರಂತರ ಆರ್ಥಿಕ ನೆರವು ಮುಂದುವರಿಸಬೇಕಾಗಿದೆ ಮತ್ತು ವಿಸ್ತರಿಸಲ್ಪಟ್ಟಿರುವ ಪಿಸಿಜಿಎಸ್ ಕ್ರಮೇಣ ಅದನ್ನು ಪೂರೈಸುವ ನಿರೀಕ್ಷೆ ಇದೆ.

***(Release ID: 1625498) Visitor Counter : 148