ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಶ್ವದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 4.1 ಸಾವು; ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಲಕ್ಷ ಜನಸಂಖ್ಯೆಗೆ 0.2 ಸಾವು; ಈವರೆಗೆ 24ಲಕ್ಷಕ್ಕೂ ಅಧಿಕ ಮಾದರಿಗಳ ಪರೀಕ್ಷೆ

Posted On: 19 MAY 2020 3:43PM by PIB Bengaluru

ವಿಶ್ವದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 4.1 ಸಾವು; ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಲಕ್ಷ ಜನಸಂಖ್ಯೆಗೆ 0.2 ಸಾವು;

ಈವರೆಗೆ 24ಲಕ್ಷಕ್ಕೂ ಅಧಿಕ ಮಾದರಿಗಳ ಪರೀಕ್ಷೆ

 

ತಾಜಾ ಸ್ಥಿತಿಗತಿ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,350 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 39,174ಕ್ಕೆ ಏರಿದೆ. ಅದರ ಅರ್ಥ ಕೋವಿಡ್ ರೋಗಿಗಳಲ್ಲಿ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.38.73ರಷ್ಟಿದೆ ಎಂದು. ಗುಣಮುಖರಾಗುತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಭಾರತದಲ್ಲಿ ಪ್ರಸ್ತುತ ಕ್ರಿಯಾಶೀಲ ಪ್ರಕರಣಗಳು 58,802. ಅವರೆಲ್ಲಾ ತೀವ್ರ ವೈದ್ಯಕೀಯ ನಿಗಾದಲ್ಲಿದ್ದಾರೆ. ಕ್ರಿಯಾಶೀಲ ಪ್ರಕರಣಗಳ ಪೈಕಿ ಕೇವಲ ಶೇ.2.9ರಷ್ಟು ರೋಗಿಗಳು ಮಾತ್ರ ಐಸಿಯುನಲ್ಲಿದ್ದಾರೆ.

ಮರಣ ಪ್ರಮಾಣದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಭಾರತದಲ್ಲಿ ಒಂದು ಲಕ್ಷ ಜನರಿಗೆ ಶೇ.0.2ರಷ್ಟು ಸಾವಿನ ಪ್ರಮಾಣವಿದೆ. ಅದೇ ಇಡೀ ವಿಶ್ವದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ 4.1ರಷ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ-119 ಆಧರಿಸಿ ರಾಷ್ಟ್ರಗಳಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ ಸ್ಥಿತಿಗತಿ ಕೆಳಗಿನಂತಿದೆ.

ದೇಶಗಳು

ಒಟ್ಟಾರೆ ಸಾವು

ಒಂದು ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ

ವಿಶ್ವ

3,11,847

4.1

ಯುನೈಟೆಡ್ ಸ್ಟೇಟ್ಸ್ ಆಫ್ ಆಮೆರಿಕ

87180

26.6

ದಿ ಯುನೈಟೆಡ್ ಕಿಂಗ್ ಡಂ

34636

52.1

ಇಟಲಿ

31908

52.8

ಫ್ರಾನ್ಸ್

28059

41.9

ಸ್ಪೇನ್

27650

59.2

ಬ್ರೆಜಿಲ್

15633

7.5

ಬೆಲ್ಜಿಯಂ

9052

79.3

ಜರ್ಮನಿ

7935

9.6

ಇರಾನ್(ಇಸ್ಲಾಂ ಗಣರಾಜ್ಯ )

6988

8.5

ಕೆನಡ

5702

15.4

ನೆದರ್ ಲ್ಯಾಂಡ್ಸ್

5680

33.0

ಮೆಕ್ಸಿಕೋ

5045

4.0

ಚೀನಾ

4645

0.3

ಟರ್ಕಿ

4140

5.0

ಸ್ವೀಡನ್

3679

36.1

ಭಾರತ

3163*

0.2

 

*2020 ಮೇ.19ರಂದು ಅಪ್ ಡೇಟ್ ಮಾಡಲಾದ ಇತ್ತೀಚಿನ ಮಾಹಿತಿ

ಕಡಿಮೆ ಮರಣ ಪ್ರಮಾಣ ಅಂಕಿ ಅಂಶಗಳಿಗೆ ಕಾರಣವೆಂದರೆ ಸಕಾಲದಲ್ಲಿ ಪ್ರಕರಣಗಳನ್ನು ಗುರುತಿಸುತ್ತಿರುವುದು ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆಯನ್ನು ಕೈಗೊಳ್ಳುತ್ತಿರುವುದು

ಪರೀಕ್ಷೆ

ದೇಶದಲ್ಲಿ ನಿನ್ನೆ ಒಂದೇ ದಿನ ದಾಖಲೆ ಪ್ರಮಾಣದ 1,08,233 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಈವರೆಗೆ ಒಟ್ಟು 24,25,742 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.

ಕಳೆದ ಜನವರಿ ತಿಂಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಕೋವಿಡ್ ಪರೀಕ್ಷಾ ಪ್ರಯೋಗಾಲಯವಿತ್ತು. ನಂತರ ಕ್ಷಿಪ್ರವಾಗಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಳ ಮಾಡಿ, ದೇಶದಲ್ಲಿ ಸುಮಾರು 385 ಸರ್ಕಾರಿ ಪ್ರಯೋಗಾಲಯಗಳು ಮತ್ತು 158 ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಯೋಗಾಲಯಗಳು, ರಾಜ್ಯಗಳ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಖಾಸಗಿ ವಲಯದ ಸಹಭಾಗಿತ್ವ ಸಾಧಿಸಿ, ದೇಶದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸಲಾಗಿದೆ. ಅಲ್ಲದೆ ಟ್ರೂನಾಟ್ ಮತ್ತು ಸಿಬಿನಾಟ್ ಪರೀಕ್ಷಾ ಯಂತ್ರಗಳನ್ನು ಪರೀಕ್ಷೆಗಾಗಿ ಒಟ್ಟುಗೂಡಿಸಲಾಗಿದೆ.

14 ಏಮ್ಸ್ ಮಾದರಿಯ ಮಾರ್ಗದರ್ಶನ ಸಂಸ್ಥೆಗಳು, ದೇಶಾದ್ಯಂತ ಎಲ್ಲಾ ಪರೀಕ್ಷಾ ಪ್ರಯೋಗಾಲಯಗಳನ್ನು ತನ್ನ ಅಧ್ಯಯನದಲ್ಲಿಟ್ಟುಕೊಂಡು ಜೈವಿಕ ಸುರಕ್ಷತಾ ಮಾನದಂಡಗಳು ಮತ್ತು ಪ್ರಯೋಗಾಲಯಗಳ ಪ್ರಮಾಣೀಕರಣವನ್ನು ಖಾತ್ರಿಪಡಿಸುತ್ತಿದೆ. ಪ್ರಯೋಗಾಲಯಗಳಿಗೆ ಅಗತ್ಯ ಪರೀಕ್ಷಾ ಸೌಕರ್ಯವನ್ನು ನಿರಂತರವಾಗಿ ನಿರ್ವಹಿಸಲು ಭಾರತೀಯ ಅಂಚೆ ಇಲಾಖೆ ಮತ್ತು ಖಾಸಗಿ ಏಜೆನ್ಸಿಗಳನ್ನು ಸೇರಿಸಿಕೊಂಡು 15 ಡಿಪೋಗಳನ್ನು ಸೃಷ್ಟಿಸಲಾಗಿದ್ದು, ಅವುಗಳ ಮೂಲಕ ವಿತರಣೆಯನ್ನು ಕೈಗೊಳ್ಳಲಾಗಿದೆ. ಮೊದಲು ವಿದೇಶಗಳಿಂದ ಪರೀಕ್ಷಾ ಸಾಮಗ್ರಿಗಳನ್ನು ಪಡೆಯಬೇಕಿತ್ತು, ಆದರೆ ಇದೀಗ ಹಲವು ಭಾರತೀಯ ಕಂಪನಿಗಳು, ವೈದ್ಯಕೀಯ ಪರೀಕ್ಷಾ ಸಾಮಗ್ರಿಗಳ ಉತ್ಪಾದನೆ ಮೂಲಕ ಬೆಂಬಲ ನೀಡುತ್ತಿವೆ. ಇದರಿಂದಾಗಿ ದೇಶಾದ್ಯಂತ ಪರೀಕ್ಷಾ ಸಾಮಗ್ರಿಗಳ ನಿರಂತರ ಪೂರೈಕೆ ಕಾಯ್ದುಕೊಳ್ಳಲು ಸಹಾಯಕವಾಗಿದೆ.

ಎಂಒಎಚ್ಎಫ್ ಡಬ್ಲ್ಯೂ ಹೊಸ ಮಾರ್ಗಸೂಚಿ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೋವಿಡ್-19 ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೊದಲು ಇದ್ದ ಮಾನದಂಡಗಳ ಜೊತೆಗೆ ಹೆಚ್ಚುವರಿಯಾಗಿ ಪರೀಕ್ಷಾ ಕಾರ್ಯತಂತ್ರವನ್ನು ವಿಸ್ತೃತಗೊಳಿಸಲಾಗಿದೆ ಮತ್ತು ಕೋವಿಡ್-19 ನಿಯಂತ್ರಣ ಮತ್ತು ನಿರ್ಬಂಧಿತ ಕ್ರಮಗಳಲ್ಲಿ ಮುಂಚೂಣಿ ಕಾರ್ಯಕರ್ತರನ್ನು ಸೇರಿಸಿಕೊಳ್ಳಲಾಗಿದೆ. ಅದರಲ್ಲಿ ಐಎಲ್ಐ ಲಕ್ಷಣಗಳು ಕಂಡುಬಂದ ಎಲ್ಲ ರೋಗಿಗಳು ಮತ್ತು ಐಎಲ್ಐ ಸೋಂಕಿಲ್ಲದಿದ್ದರೂ ವಾಪಸ್ಸಾದ ವಲಸಿಗರಲ್ಲಿ 7 ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ಅವರನ್ನೂ ಸಹ ಒಳಪಡಿಸಲಾಗುವುದು. ವಿವರಗಳಿಗೆ :

https://www.mohfw.gov.in/pdf/Revisedtestingguidelines.pdf

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ದುಡಿಯುವ ಸ್ಥಳಗಳಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸುವ ಕುರಿತಂತೆ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಚೇರಿಗಳಲ್ಲಿ ಕೋವಿಡ್-19 ಸೋಂಕಿತ ಪ್ರಕರಣ ಅಥವಾ ಶಂಕಿತ ಪ್ರಕರಣ ಕಂಡುಬಂದರೆ ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಸಲಾಗಿದೆ. ಮಾರ್ಗಸೂಚಿಗಳನ್ನು ಇಲ್ಲಿ ಪಡೆಯಬಹುದು:

https://www.mohfw.gov.in/pdf/GuidelinesonpreventivemeasurestocontainspreadofCOVID19inworkplacesettings.pdf

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದಂತ ವೈದ್ಯಕೀಯ ವೃತ್ತಿಪರರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸೋಂಕು ತಗುಲುವ ಅಪಾಯವಿರುವ ರೋಗಿಗಳನ್ನು ದಂತ ವೈದ್ಯರಾಗಿ ಹೇಗೆ ನಿರ್ವಹಿಸಬೇಕು ಎಂಬುದನ್ನು ವಿವರಿಸಲಾಗಿದೆ. ವಿವರವಾದ ಮಾರ್ಗಸೂಚಿಗಳನ್ನು ಇಲ್ಲಿ ಪಡೆಯಬಹುದು.:

https://www.mohfw.gov.in/pdf/DentalAdvisoryF.pdf

ಮಾರ್ಗಸೂಚಿಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ(ನೌಕರರು ಮತ್ತು ಭೇಟಿ ನೀಡುವವರು) ಎಲ್ಲರಿಗೂ ಮೂಲ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡಿವೆ. ಅಲ್ಲದೆ ಒಂದು ವೇಳೆ ಖಚಿತ ಪ್ರಕರಣ ವರದಿಯಾದರೆ ಅಂತಹ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಪಾಲಿಸಬೇಕು, ಸಂಪರ್ಕಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಸೋಂಕು ನಿವಾರಣಾ ಪ್ರಕ್ರಿಯೆ ಸೇರಿದಂತೆ ಎಲ್ಲ ಕ್ರಮಗಳನ್ನು ವಿವರಿಸಲಾಗಿದೆ.

ವೈಯಕ್ತಿಕ ಶುಚಿತ್ವ, ಕೈಶುಚಿತ್ವ ಮತ್ತು ಉತ್ತಮ ಉಸಿರಾಟದ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದನ್ನು ಉತ್ತೇಜಿಸುವುದೂ ಸೇರಿದಂತೆ ಸಮುದಾಯದಲ್ಲಿ ಪರಿಣಾಮಕಾರಿ ಜಾಗೃತಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಕೋವಿಡ್-19 ಕುರಿತ ಎಲ್ಲ ಅಧಿಕೃತ ಮತ್ತು ತಾಜಾ ಮಾಹಿತಿಗೆ, ತಾಂತ್ರಿಕ ವಿಷಯಗಳಿಗೆ, ಮಾರ್ಗಸೂಚಿಗಳಿಗೆ ಮತ್ತು ಸಲಹಾ ಸೂಚಿಗಳಿಗೆ, ನಿರಂತರವಾಗಿ ಇಲ್ಲಿ ಭೇಟಿ ನೀಡಬಹುದು. https://www.mohfw.gov.in/.

ಕೋವಿಡ್-19 ಕುರಿತ ತಾಂತ್ರಿಕ ಸಂಬಂಧಿ ಪ್ರಶ್ನೆಗಳನ್ನು -ಮೇಲ್ ಮಾಡಬಹುದು. technicalquery.covid19[at]gov[dot]in ಮತ್ತು ಇತರೆ ಪ್ರಶ್ನೆಗಳನ್ನು ncov2019[at]gov[dot]in ಇಲ್ಲಿಗೆ ಕಳುಹಿಸಬಹುದು ಮತ್ತು ಟ್ವೀಟ್ ಮೂಲಕ ಕೇಳಲು @CovidIndiaSeva.

ಕೋವಿಡ್-19 ಕುರಿತಂತೆ ಯಾವುದೇ ದೂರುಗಳಿದ್ದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ +91-11-23978046 ಅಥವಾ 1075 (ಉಚಿತ ಕರೆಗೆ). ಕೋವಿಡ್-19 ಕುರಿತಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆ ಇಲ್ಲಿ ಲಭ್ಯ. https://www.mohfw.gov.in/pdf/coronvavirushelplinenumber.pdf .

***



(Release ID: 1625183) Visitor Counter : 190