ಗೃಹ ವ್ಯವಹಾರಗಳ ಸಚಿವಾಲಯ

ಹಣಕಾಸು ಸಚಿವರ ಇಂದಿನ ಘೋಷಣೆಗಳು ಗ್ರಾಮೀಣ ಆರ್ಥಿಕತೆಯನ್ನು ಮತ್ತು ಮೂಲಸೌಕರ್ಯವನ್ನು ಬಹುವಾಗಿ ಉತ್ತೇಜಿಸುತ್ತವೆ, ಜೊತೆಗೆ ಕೋಟ್ಯಾಂತರ ಗ್ರಾಮೀಣ ಜನತೆಗೆ ಹಾಗು ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡುತ್ತವೆ: ಗೃಹ ಸಚಿವರು

Posted On: 17 MAY 2020 4:20PM by PIB Bengaluru

ಹಣಕಾಸು ಸಚಿವರ ಇಂದಿನ ಘೋಷಣೆಗಳು ಗ್ರಾಮೀಣ ಆರ್ಥಿಕತೆಯನ್ನು ಮತ್ತು ಮೂಲಸೌಕರ್ಯವನ್ನು ಬಹುವಾಗಿ ಉತ್ತೇಜಿಸುತ್ತವೆ, ಜೊತೆಗೆ ಕೋಟ್ಯಾಂತರ ಗ್ರಾಮೀಣ ಜನತೆಗೆ ಹಾಗು ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡುತ್ತವೆ: ಗೃಹ ಸಚಿವರು

ಆರ್ಥಿಕ ಪ್ಯಾಕೇಜ್ ಆರೋಗ್ಯ, ಶಿಕ್ಷಣ ಮತ್ತು ವ್ಯಾಪಾರೋದ್ಯಮ ವಲಯಗಳಲ್ಲಿ ಅಮೂಲಾಗ್ರ ಬದಲಾವಣೆ ತರಲಿವೆ: ಶ್ರೀ ಅಮಿತ್ ಶಾ

ಕೋವಿಡ್ -19 ನಿರ್ವಹಿಸುವಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ನಾಯಕತ್ವ ಅಭಿವೃದ್ದಿ ಹೊಂದಿದ ಹಲವು ದೇಶಗಳನ್ನು ಮಂಕುಗೊಳಿಸಿದೆ: ಗೃಹ ಸಚಿವರು

 

ಇಂದಿನ ಆರ್ಥಿಕ ಪ್ಯಾಕೇಜ್ ಘೋಷಣೆಗಳಿಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದ್ದಾರೆ. ಮೋದಿ ಸರಕಾರದ ಇಂದಿನ ಘೋಷಣೆಗಳು ಅತ್ಮನಿರ್ಭರ ಭಾರತ್ ಚಿಂತನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಹಳ ದೂರ ಕೊಂಡೊಯ್ಯಲಿವೆ. ಕ್ರಮಗಳು ಆರೋಗ್ಯ, ಶಿಕ್ಷಣ ಮತ್ತು ವ್ಯಾಪಾರೋದ್ಯಮ ವಲಯಗಳಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಗಲಿವೆ , ಹಾಗೂ ಅವು ಕೋಟ್ಯಾಂತರ ಬಡವರಿಗೆ ಉದ್ಯೋಗ ಒದಗಿಸಲಿವೆಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಭಾರತಕ್ಕೆ ಹಣಕಾಸು ಒದಗಣೆ ಕುರಿತಂತೆ ಮಾತನಾಡಿದ ಶ್ರೀ ಶಾ, “ಎಂ.ಜಿ. ನರೇಗಾ ಅಡಿಯಲ್ಲಿ ಮೋದಿ ಸರಕಾರದಿಂದ “40,000 ಕೋ.ರೂ. ಗಳ ಹೆಚ್ಚುವರಿ ಮಂಜೂರಾತಿ ಬಡವರಿಗೆ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವುದು ಮಾತ್ರವಲ್ಲದೆ ಬಾಳಿಕೆ ಬರುವ ಜೀವನೋಪಾಯ ಆಸ್ತಿಗಳ ನಿರ್ಮಾಣಕ್ಕೂ ಸಹಾಯ ಮಾಡಲಿದೆಎಂದರು. ಇದು ನಮ್ಮ ಗ್ರಾಮೀಣ ಆರ್ಥಿಕತೆಗೆ ಮತ್ತು ಮೂಲಸೌಕರ್ಯಗಳಿಗೆ ಬಹಳ ದೊಡ್ಡ ಉತ್ತೇಜನ ನೀಡಲಿದೆ ಎಂದೂ ಅವರು ಹೇಳಿದರು.

ಕೋವಿಡ್ -19 ನಿಭಾಯಿಸುವಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಗೃಹ ಸಚಿವರು, ಇದರೆದುರು ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಂಕಾಗಿವೆ ಎಂದರು. ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಭವಿಷ್ಯದಲ್ಲಿ ಇಂತಹ ಯಾವುದೇ ಜಾಗತಿಕ ಸಾಂಕ್ರಾಮಿಕ ಬಂದಾಗ ಅದನ್ನು ಎದುರಿಸಲು ಭಾರತ ತಯಾರಾಗಿರಬೇಕು ಎಂಬ ನಿರ್ಧಾರವನ್ನು ತಳೆದಿದ್ದಾರೆ. ಇದಕ್ಕಾಗಿ ಅವರು ಭಾರತದ ಆರೋಗ್ಯ ವಲಯವನ್ನು ಬಲಪಡಿಸುವ ಮತ್ತು ಪುನಃಶ್ಚೇತನಗೊಳಿಸುವ ಮೂಲಕ ಇದನ್ನು ಸಾಧಿಸಲು ಹೊರಟಿದ್ದಾರೆ. ಮೋದಿ ಸರಕಾರವು ಭಾರತದ ಆರೋಗ್ಯ ವೆಚ್ಚವನ್ನು ಹೆಚ್ಚಿಸಿ, ಪ್ರತೀ ಜಿಲ್ಲೆಯಲ್ಲೂ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ರೂಪಿಸಲು, ಪ್ರಯೋಗಾಲಯಗಳ ಜಾಲವನ್ನು ಬಲಪಡಿಸಲು ಮತ್ತು ಸರ್ವೇಕ್ಷಣೆಯನ್ನು ಹೆಚ್ಚಿಸಲು ಹಾಗು ಸಂಶೋಧನೆಯನ್ನು ಪ್ರೋತ್ಸಾಹಿಸಲು ನಿರ್ಧರಿಸಿದೆ. ದೂರದೃಷ್ಟಿಯು ಭಾರತವನ್ನು ವೈದ್ಯಕೀಯ ವಲಯದಲ್ಲಿ ಬಹಳ ಮುಂದೆ ಕೊಂಡೊಯ್ಯಬಲ್ಲದು ಎಂಬುದು ತಮಗೆ ಖಚಿತವಾಗಿದೆ ಎಂದವರು ಹೇಳಿದ್ದಾರೆ.

ಸಾರ್ವಜನಿಕ ರಂಗದ ಉದ್ಯಮಗಳ ನೀತಿಯನ್ನು ಮರುಕಲ್ಪಿಸುವ, .ಬಿ.ಸಿ.ಸಂಬಂಧಿತ ಕ್ರಮಗಳ ಮೂಲಕ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವನ್ನಾಗಿ ಇನ್ನಷ್ಟು ಸುಧಾರಣೆಗಳನ್ನು ಮಾಡುವ ಬಗ್ಗೆ ಗಮನ ಮತ್ತು ಕಂಪೆನಿಗಳ ಕಾಯ್ದೆಯ ಕ್ರಿಮಿನಲೀಕರಣ ಪ್ರಸ್ತಾವನೆಗಳನ್ನು ತೆಗೆದುಹಾಕುವ ನಿರ್ಧಾರಗಳ ಬಗ್ಗೆ ಮಾತನಾಡಿದ ಶ್ರೀ ಅಮಿತ್ ಶಾ ಇಂತಹ ನಿರ್ಧಾರಗಳು ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ಭವಿಷ್ಯವಾದೀ ಮುಂಗಾಣ್ಕೆಯನ್ನು ಮತ್ತು ಸ್ವಾವಲಂಬೀ ಭಾರತ ನಿರ್ಮಾಣದತ್ತ ಇರುವ ಬದ್ದತೆಯನ್ನೂ ಪ್ರತಿಬಿಂಬಿಸುತ್ತವೆ ಎಂದರು.

ಮೋದಿ ಸರಕಾರವು ರಾಜ್ಯಗಳ ಸಾಲ ಮಾಡುವ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಇದರಿಂದ ಅವುಗಳಿಗೆ 4.28 ಲಕ್ಷ ಕೋ.ರೂ. ಹೆಚ್ಚುವರಿ ಸಂಪನ್ಮೂಲ ಒದಗಿ ಬರಲಿದೆ ಎಂದು ಗೃಹ ಸಚಿವರು ಹೇಳಿದರು. ರಾಜ್ಯಗಳಿಗೆ ಈಗಾಗಲೇ ನೀಡಲಾಗಿರುವ ಇತರ ನಿಧಿಗಳ ಬಗ್ಗೆ ಪ್ರಸ್ತಾಪಿಸಿದ ಅವರು ಕೇಂದ್ರವು ಹಿಂದೆ ಏಪ್ರಿಲ್ ತಿಂಗಳಲ್ಲಿ ತೆರಿಗೆ ಪಾಲಿನಲ್ಲಿ 46,038 ಕೋ.ರೂ. ಗಳನ್ನು ವರ್ಗಾವಣೆ ಮಾಡಿದೆ, ಆದಾಯ ಕೊರತೆ ಅನುದಾನವಾಗಿ 12,390 ಕೋ.ರೂ.ಗಳನ್ನು ಮತ್ತು ಎಸ್.ಡಿ.ಆರ್. ಎಫ್. ನಿಧಿಗಳಾಗಿ 11,000 ಕೋ.ರೂ.ಗಳಷ್ಟನ್ನು ಒದಗಿಸಿದೆ ಎಂದವರು ತಿಳಿಸಿದರು.

***



(Release ID: 1625068) Visitor Counter : 170