ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಪಿ.ಎಂ.-ಜಿ.ಕೆ.ಎ.ವೈ. ಅಡಿಯಲ್ಲಿ ದೇಶಾದ್ಯಂತ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಬೇಳೆ ಕಾಳುಗಳನ್ನು ಒದಗಿಸುವ ಬೃಹತ್ ಕಾರ್ಯಾಚರಣೆ ಪ್ರಗತಿಯಲ್ಲಿದೆ: ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು
Posted On:
08 MAY 2020 5:24PM by PIB Bengaluru
ಪಿ.ಎಂ.-ಜಿ.ಕೆ.ಎ.ವೈ. ಅಡಿಯಲ್ಲಿ ದೇಶಾದ್ಯಂತ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಬೇಳೆ ಕಾಳುಗಳನ್ನು ಒದಗಿಸುವ ಬೃಹತ್ ಕಾರ್ಯಾಚರಣೆ ಪ್ರಗತಿಯಲ್ಲಿದೆ: ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು
ಒಟ್ಟು 2641 ರೇಕ್ ಗಳಲ್ಲಿ 74 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಹೇರಿ ಎಫ್.ಸಿ.ಐ.ಯಿಂದ ಸಾರ್ವಕಾಲಿಕ ದಾಖಲೆ, ಎಂದು ಶ್ರೀ ರಾಮ್ ವಿಲಾಸ್ ಪಾಸ್ವಾನ್ ಹೇಳಿಕೆ
3 ತಿಂಗಳು ಕಾಲ ದೇಶದ 19.50 ಕೋಟಿ ಮನೆಗಳಿಗೆ ಉಚಿತ ಬೇಳೆ ಕಾಳುಗಳನ್ನು ಪೂರೈಸಲು ನಫೇಡ್ ನಿಂದ ಬೃಹತ್ ಕಾರ್ಯಾಚರಣೆ, ಸಚಿವರ ಹೇಳಿಕೆ
ಆಹಾರ ಧಾನ್ಯಗಳ ಕೊರತೆ ಇಲ್ಲ; ಖರೀದಿ ಕೂಡಾ ಸರಿಯಾದ ದಾರಿಯಲ್ಲಿದೆ: ಶ್ರೀ ಪಾಸ್ವಾನ್
ಪಿ.ಎಂ. – ಜಿ.ಕೆ.ಎ.ವೈ. ಅಡಿಯಲ್ಲಿ ಆಹಾರ ಧಾನ್ಯಗಳ ವಿತರಣೆ
“ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ (ಪಿ.ಎಂ.-ಜಿ.ಕೆ.ಎ.ವೈ.) “ಅಡಿಯಲ್ಲಿ ಎಲ್ಲಾ ರಾಜ್ಯಗಳಿಗೆ ಅವುಗಳ ಆವಶ್ಯಕತೆಯಷ್ಟು ಆಹಾರ ಧಾನ್ಯಗಳು ಲಭ್ಯ ಇರುವಂತೆ ಖಾತ್ರಿಪಡಿಸಲು ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಕೇಂದ್ರ ಬಳಕೆದಾರರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವರಾದ ಶ್ರೀ ರಾಂ ವಿಲಾಸ್ ಪಾಸ್ವಾನ್ ಅವರಿಂದಿಲ್ಲಿ ಈ ವಿಷಯ ತಿಳಿಸಿ ಎಫ್.ಸಿ.ಐ.ಯು ಒಟ್ಟು 2641 ರೇಕ್ ಗಳಿಗೆ ( ಗೋಧಿ ಮತ್ತು ಅಕ್ಕಿ ಸಹಿತ) ಸಾಮಗ್ರಿಗಳನ್ನು ಹೇರಿಕೆ ಮಾಡಿದೆ ಮತ್ತು ಇದರ ಪ್ರಮಾಣ ಸುಮಾರು 73.95 ಎಲ್.ಎಂ.ಟಿ. (55.38 ಎಲ್.ಎಂ.ಟಿ. ಅಕ್ಕಿ ಹಾಗು 18.57 ಎಲ್.ಎಂ.ಟಿ. ಗೋಧಿ) ಯಷ್ಟು ಎಂದರು. ಈ ಬೃಹತ್ ಪ್ರಮಾಣದ ಆಹಾರ ಧಾನ್ಯಗಳ ಸಾಗಾಟ 24.03.2020 (ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ದಿನ) ರಿಂದ 08.05.2020.ರವರೆಗೆ ನಡೆದಿದೆ ಮತ್ತು ಇದು ಸಾರ್ವಕಾಲಿಕ ದಾಖಲೆ ಸಾಗಾಟವಾಗಿದೆ.
21 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಪಿ.ಎಂ.-ಜಿ.ಕೆ.ಎ.ವೈ. ಅಡಿಯಲ್ಲಿ ಏಪ್ರಿಲ್ ತಿಂಗಳಲ್ಲಿ 90%ಗೂ ಅಧಿಕ ವಿತರಣೆಯನ್ನು ಪೂರ್ಣಗೊಳಿಸಿವೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 41.35 ಕೋಟಿ ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದೆ. ಅಂಡಮಾನ್, ನಿಕೋಬಾರ್ ದ್ವೀಪಗಳು, ಡಿ.ಮತ್ತು ಎನ್.ಎಚ್. ಮತು ದಾಮನ್ ಮತ್ತು ದಿಯು, ಮಧ್ಯಪ್ರದೇಶ, ಒಡಿಶಾ, ಪುದುಚೇರಿ, ಹಿಮಾಚಲ ಪ್ರದೇಶ ಇತ್ಯಾದಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಪಿ.ಎಂ.ಜಿ.ಕೆ.ಎ.ವೈ. ಅಡಿಯಲ್ಲಿ ಒಂದೇ ಬಾರಿಗೆ ಎರಡು ತಿಂಗಳ ಆಹಾರ ಧಾನ್ಯಗಳನ್ನು ವಿತರಿಸುತ್ತಿವೆ ಎಂದವರು ತಿಳಿಸಿದರು.
ಪಿ.ಎಂ.-ಜಿ.ಕೆ.ಎ.ವೈ. ಅಡಿಯಲ್ಲಿ ಆಹಾರ ಧಾನ್ಯಗಳ ಹೆಚ್ಚುವರಿ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಎನ್.ಎಫ್.ಎಸ್.ಎ. ಪಡಿತರ ಕಾರ್ಡುದಾರರಿಗೆ ಸುಮಾರು 20 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ 6 ಕೋಟಿ ವಿಶೇಷ ಎಸ್.ಎಂ.ಎಸ್. ಗಳನ್ನು ಕಳುಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪಿ.ಎಂ.-ಜಿ.ಕೆ.ಎ.ವೈ.ಯು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಉಂಟು ಮಾಡಿರುವ ವಿವಿಧ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಬಡವರಿಗೆ ನೆರವಾಗುವ ಉದ್ದೇಶವನ್ನು ಹೊಂದಿದೆ. ಈ ಪ್ಯಾಕೇಜಿನಡಿ ಸರಕಾರವು ಯಾವುದೇ ಬಡ ಅಥವಾ ಅಪಾಯಕ್ಕೀಡಾಗುವ ಸಂಭಾವ್ಯತೆ ಇರುವ ಕುಟುಂಬದ ವ್ಯಕ್ತಿಗೆ ಮುಂದಿನ ಮೂರು ತಿಂಗಳು ಆಹಾರ ಧಾನ್ಯಗಳು ಲಭಿಸದೆ ತೊಂದರೆಗೀಡಾಗಬಾರದು ಎಂಬುದನ್ನು ಖಾತ್ರಿಪಡಿಸುವ ಉದ್ದೇಶವನ್ನು ಹೊಂದಿದೆ.
ಅದರನ್ವಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಈ ನಿಟ್ಟಿನಲ್ಲಿ ಹೆಚ್ಚುವರಿ ಆಹಾರ ಧಾನ್ಯಗಳನ್ನು ವಿತರಿಸಲು ನೀತಿ ನಿರ್ಧಾರಗಳನ್ನು ಕೈಗೊಂಡು, ಅದನ್ನು ಘೋಷಣೆ ಮಾಡಿತು. ಇದರನ್ವಯ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 80 ಕೋಟಿ ಎನ್.ಎಫ್.ಎಸ್.ಎ.. ಫಲಾನುಭವಿಗಳಿಗೆ ಪಿ.ಎಂ.-ಜಿ.ಕೆ.ಎ.ವೈ. ಅಡಿಯಲ್ಲಿ ಹೆಚ್ಚುವರಿ ಆಹಾರ ಧಾನ್ಯಗಳನ್ನು 2020 ರ ಏಪ್ರಿಲ್ ತಿಂಗಳಿಂದ ಜೂನ್ ತಿಂಗಳವರೆಗೆ ವಿತರಿಸಲು ತೀರ್ಮಾನ ಕೈಗೊಳ್ಳಲಾಯಿತು. ಡಿ.ಬಿ.ಟಿ. ನಗದು ವರ್ಗಾವಣೆ ಮಾದರಿ ಅನುಸರಿಸುತ್ತಿರುವ ಕೇಂದ್ರಾಡಳಿತ ಪ್ರದೇಶಗಳಿಗೂ ಇದನ್ನು ಅನ್ವಯಿಸಲಾಯಿತು.
ಪಿ.ಎಂ.-ಜಿ.ಕೆ.ಎ.ವೈ. ಅಡಿಯಲ್ಲಿ ಬೇಳೆ ಕಾಳುಗಳ ವಿತರಣೆ
ಆಹಾರ ಧಾನ್ಯಗಳಲ್ಲದೆ ಸರಕಾರವು ದೇಶದಲ್ಲಿರುವ ಸುಮಾರು 19.50 ಕೋಟಿ ಮನೆಗಳಿಗೆ ಮುಂದಿನ ಮೂರು ತಿಂಗಳ ಕಾಲ 1 ಕಿಲೋ ಬೇಳೆ ಕಾಳುಗಳನ್ನು ವಿತರಿಸುತ್ತದೆ ಎಂದು ಶ್ರೀ ಪಾಸ್ವಾನ್ ತಿಳಿಸಿದರು. ಬಳಕೆದಾರರ ವ್ಯವಹಾರಗಳ ಇಲಾಖೆಯು ಇದೇ ಮೊದಲ ಬಾರಿಗೆ ಬೇಳೆ ಕಾಳುಗಳ ಈ ಬೃಹತ್ ಕಾರ್ಯಾಚರಣೆಯನ್ನು ಕೈಗೊಂಡಿದೆ ಎಂದವರು ತಿಳಿಸಿದರು. ಸರಕಾರವು ದೇಶಾದ್ಯಂತ ತನ್ನ 165 ನಫೇಡ್ ದಾಸ್ತಾನುಗಾರಗಳಲ್ಲಿರುವ ದಾಸ್ತಾನನ್ನು ಈ ಯೋಜನೆಗೆ ಬಳಸಲು ಅವಕಾಶ ನೀಡಿದೆ. ದೇಶಾದ್ಯಂತ ಇದುವರೆಗೆ ಸುಮಾರು 100 ದಾಲ್ ಮಿಲ್ ಗಳನ್ನು ನಫೇಡ್ ಸೇವೆಗೆ ಬಳಸಿಕೊಂಡಿದೆ.
ಇದುವರೆಗೆ 21 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ 51,105 ಎಲ್.ಎಂ.ಟಿ.ಯಷ್ಟು ಬೇಳೆ ಕಾಳುಗಳನ್ನು ವಿತರಿಸಲಾಗಿದೆ. ತೊಗರಿ ಬೇಳೆ, ಉದ್ದು, ಕಡಲೆ, ಕಡಲೆ ಬೇಳೆ, ಹೆಸರು, ಮತ್ತು ಕೆಂಪು ಮಸೂರ ಬೇಳೆ ಗಳಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಆಯ್ಕೆಯನ್ನು ತಿಳಿಸುವಲ್ಲಿ ವಿಳಂಬ ಮಾಡಿದುದರಿಂದ ಬೇಳೆ ಕಾಳುಗಳ ಪೂರೈಕೆ ಮತ್ತು ವಿತರಣೆಯಲ್ಲಿ ವಿಳಂಬವಾಗಿದೆ, ಇದಕ್ಕೆ ಲಾಕ್ ಡೌನ್ ಅವಧಿಯಲ್ಲಿ ವಿವಿಧ ರಾಜ್ಯಗಳ ನಡುವೆ ಸಾಗಾಣಿಕ ಸಮಸ್ಯೆಯೂ ಎದುರಾಗಿತ್ತು ಎಂದರು. ಮ್ಯಾನ್ಮಾರ್ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ವಿಜಯನಗರ ಮತ್ತು ಲಡಾಕ್ ಗಳಂತಹ ದುರ್ಗಮ ಪ್ರದೇಶಗಳಿಗೆ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಬೇಳೆ ಕಾಳುಗಳನ್ನು ವಾಯು ಮಾರ್ಗದ ಮೂಲಕ ಸಾಗಿಸಲಾಯಿತು. ಇದಲ್ಲದೆ ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳು ಸಾಮಾಜಿಕ ಸಂಪರ್ಕವನ್ನು ಕಡಿಮೆ ಮಾಡುವುದಕ್ಕಾಗಿ ಆಹಾರ ಧಾನ್ಯಗಳ ಜೊತೆ ಬೇಳೆ ಕಾಳುಗಳನ್ನು ವಿತರಿಸಲು ನಿರ್ಧರಿಸಿದವು.ಇದು ವಿತರಣೆ ವಿಳಂಬಕ್ಕೆ ಕಾರಣವಾಯಿತು ಎಂದರು.
17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು “ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್” ಅಡಿಯಲ್ಲಿ ಬಂದಿವೆ.
’ಒಂದು ರಾಷ್ಟ್ರ ಒಂದು ರೇಶನ್ ಕಾರ್ಡ್ “ ಯೋಜನೆ ಅಡಿಯಲ್ಲಿ ಮತ್ತೆ 5 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾದ ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಡಾರ್ಡಾ ಮತ್ತು ನಗರ ಹವೇಲಿ ಹಾಗು ದಾಮನ್ ಮತ್ತು ದಿಯುಗಳಿಗೆ ರಾಷ್ಟ್ರೀಯ ಗುಚ್ಚಗಳೊಂದಿಗೆ ಸಮಗ್ರಗೊಳ್ಳುವಂತೆ ತಿಳಿಸಲಾಗಿದೆ. ಈ ಗುಚ್ಚದಲ್ಲಿ ಈಗಾಗಲೇ 12 ರಾಜ್ಯಗಳಿವೆ , ಅವುಗಳೆಂದರೆ – ಆಂಧ್ರ ಪ್ರದೇಶ, ಗೋವಾ, ಗುಜರಾತ್, ಹರ್ಯಾಣಾ, ಜಾರ್ಖಂಡ, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರಾಗಳು. 2020 ರ ಜನವರಿಯಿಂದ ಇವು ಗುಚ್ಚವಾಗಿವೆ. ಈಗ 17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಒಗ್ಗೂಡಿ ರಾಷ್ಟ್ರೀಯ ಗುಚ್ಚದಡಿ ಸಮಗ್ರಗೊಂಡಿರುವುದರಿಂದ ರಾಷ್ಟ್ರೀಯ ಅಂತರ ರಾಜ್ಯ ಪೋರ್ಟೆಬಿಲಿಟಿ ಸಾಧ್ಯವಾಗಲಿದೆ ಮತ್ತು ಇದು 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 60 ಕೋಟಿ ಎನ್.ಎಫ್.ಎಸ್.ಎ. ಫಲಾನುಭವಿಗಳಿಗೆ ಅವರ ನಿಗದಿತ ಕೋಟಾದಷ್ಟು ಆಹಾರ ಧಾನ್ಯಗಳನ್ನು ಅವರ ಆಯ್ಕೆಯ ಯಾವುದೇ ನ್ಯಾಯ ಬೆಲೆ ಅಂಗಡಿಗಳಿಂದ ಅವರು ಈಗಿರುವ ರೇಶನ್ ಕಾರ್ಡ್ ಬಳಸಿ ಪಡೆಯಬಹುದು.
ಎಫ್.ಸಿ.ಐ.ಯಿಂದ ಆಹಾರ ಧಾನ್ಯಗಳ ಖರೀದಿ ಸರಿಯಾದ ರೀತಿಯಲ್ಲಿ ಸಾಗಿದೆ.
ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಆಹಾರ ಧಾನ್ಯಗಳು ಲಭ್ಯ ಇವೆ ಎಂಬ ಭರವಸೆಯನ್ನು ನೀಡಿರುವ ಶ್ರೀ ಪಾಸ್ವಾನ್ ಖರೀದಿ ಕೂಡಾ ಚಾಲ್ತಿಯಲ್ಲಿದೆ ಎಂದರು. 08.05.2020 ರಲ್ಲಿದ್ದಂತೆ ರಾಬಿ ಮಾರುಕಟ್ಟೆ ಋತುವಿನಲ್ಲಿ ಗೋಧಿಯ ಒಟ್ಟು ಖರೀದಿ (ಆರ್.ಎಂ.ಎಸ್. ) 2020-21 ರಲ್ಲಿ 226.85 ಎಲ್.ಎಂ.ಟಿ. 2019-20 ರ ಆರ್.ಎಂ.ಎಸ್. ನಲ್ಲಿ ಈ ಪ್ರಮಾಣ 277.83 ಎಲ್.ಎಂ.ಟಿ. ಆದುದರಿಂದ ಪ್ರಸಕ್ತ ಋತುವಿನಲ್ಲಿ ಗೋಧಿ ಖರೀದಿ ಪ್ರಮಾಣ ಹಿಂದಿನ ಅವಧಿಗೆ ಹೋಲಿಸಿದರೆ 18.35% ಕಡಿಮೆಯಾಗಿದೆ ಎಂದವರು ಹೇಳಿದರು. 06.05.2020 ರಲ್ಲಿದ್ದಂತೆ ಭತ್ತದ ಒಟ್ಟು ಖರೀದಿ ಖಾರೀಫ್ ಮಾರುಕಟ್ಟೆ ಋತು (ಕೆ.ಎಂ.ಎಸ್.) 2019-20 ಅವಧಿಗೆ ಅಕ್ಕಿಯ ಪ್ರಮಾಣ 439.02 ಎಲ್.ಎಂ.ಟಿ. ಆದರೆ 2018-19 ರಲ್ಲಿ ಈ ಖರೀದಿ ಪ್ರಮಾಣ 398.13 ಎಲ್.ಎಂ.ಟಿ. ಆದುದರಿಂದ ಪ್ರಸಕ್ತ ಹಂಗಾಮಿನಲ್ಲಿ ಅಕ್ಕಿಯ ಖರೀದಿ 10.27% ಹೆಚ್ಚಳವಾಗಿದೆ. ಎಂದೂ ಅವರು ಹೇಳಿದರು.
ಗೋಧಿ ಮತ್ತು ಭತ್ತದ/ ಅಕ್ಕಿಯ ಖರೀದಿಯು ಸಾಮಾನ್ಯವಾಗಿ 2020-21 ರ ಆರ್.ಎಂ.ಎಸ್. ನಲ್ಲಿ ಏಪ್ರಿಲ್ 1 ರಿಂದ ಆರಂಭಗೊಳ್ಳುತ್ತದೆ. ಆದರೆ ಕೋವಿಡ್ -19 ಪರಿಸ್ಥಿತಿಯಿಂದಾಗಿ ಬಹುತೇಕ ರಾಜ್ಯಗಳು ತಮ್ಮ ಖರೀದಿ ಕಾರ್ಯಾಚರಣೆಯನ್ನು ಏಪ್ರಿಲ್ 15 ರ ಸುಮಾರಿಗೆ ಆರಂಭ ಮಾಡಿದವು.
ಹಾಲಿ ಚಾಲ್ತಿಯಲ್ಲಿರುವ ಅಭೂತಪೂರ್ವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬರಲಿರುವ 2020-21 ರ ರಾಬಿ ಮಾರುಕಟ್ಟೆ ಋತುವಿನಲ್ಲಿ (ಆರ್.ಎಂ.ಎಸ್.) ಗೋಧಿ ಖರೀದಿಯನ್ನು ಮತ್ತು ಭತ್ತ/ ರಾಬಿ ಬೆಳೆಯ ಅಕ್ಕಿಯನ್ನು ಖಾರೀಫ್ ಮಾರುಕಟ್ಟೆ ಋತುವಿನಲ್ಲಿ 2019-20 ರ ತಾತ್ಕಾಲಿಕ ಆಧಾರದಲ್ಲಿ ಮಾಡಬಹುದು, ಆದರೆ ಖರೀದಿ ಪ್ರಮಾಣ/ ಅಂದಾಜು ಗೋಧಿ ಮತ್ತು ಭತ್ತ/ ಅಕ್ಕಿಗಳಿಗೆ ಅನುಕ್ರಮವಾಗಿ ಹಿಂದಿನ ಆರ್.ಎಂ.ಎಸ್. -2019-20 ಮತ್ತು ಕೆ.ಎಂ.ಎಸ್. 2018-19 (ರಾಬಿ ಬೆಳೆ) ಗಳ ಪ್ರಮಾಣದಷ್ಟೇ ಇರಬೇಕು.
ಖರೀದಿ ಪ್ರಕ್ರಿಯೆಯಲ್ಲಿ ರೈತರು ಏಕಕಾಲದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಮಾವೇಶಗೊಳ್ಳುವುದನ್ನು ತಡೆಯಲು ಇದಕ್ಕಾಗಿ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯಗಳಿಗೆ ಸೂಚಿಸಲಾಗಿದೆ. ಖರೀದಿ ಕೇಂದ್ರಗಳ ಸಂಖ್ಯೆಯನ್ನು ಸಾಧ್ಯ ಇರುವಷ್ಟರ ಮಟ್ಟಿಗೆ ಹೆಚ್ಚಿಸಿ, ವ್ಯಾಪಕ ವ್ಯಾಪ್ತಿಯಲ್ಲಿ ಖರೀದಿ ಪ್ರಕ್ರಿಯೆಯನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಈ ಕೇಂದ್ರಗಳಲ್ಲಿ ನೈರ್ಮಲ್ಯವನ್ನು ಖಾತ್ರಿಪಡಿಸಿಕೊಂಡು ನಡೆಸಲಾಗುತ್ತದೆ.
ಕೋವಿಡ್ -19 ರ ಲಾಕ್ ಡೌನ್ ಕಾರಣದಿಂದಾಗಿ ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಗಾಗಿರುವ ಸೆಣಬಿನ ಚೀಲಗಳ ಕೊರತೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಮೌಲ್ಯ ಮಾಪನ ಮಾಡಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಕಾರ್ಯಪಡೆಯನ್ನು ರಚಿಸಿದೆ ಎಂದು ಶ್ರೀ ಪಾಸ್ವಾನ್ ತಿಳಿಸಿದರು. ಸೆಣಬಿನ ಚೀಲಗಳ ಕೊರತೆಯ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಪ್ಲಾಸ್ಟಿಕ್ ಬ್ಯಾಗ್ ಎಂದು ಕರೆಯಲ್ಪಡುವ ಎಚ್.ಡಿ.ಪಿ.ಇ. /ಪಿ.ಪಿ.ಇ. ಬ್ಯಾಗ್ ಗಳನ್ನು ಆಹಾರಧಾನ್ಯಗಳ ಪ್ಯಾಕಿಂಗ್ ಗೆ ಆದರಲ್ಲೂ ಗೋಧಿಯನ್ನು ಪ್ಯಾಕ್ ಮಾಡಲು ಬಳಸಲು ಮಾರ್ಗದರ್ಶಿಗಳಲ್ಲಿ ಸಡಿಲಿಕೆಯನ್ನು ಮಾಡಲಾಗಿದೆ ಎಂದರು.
***
(Release ID: 1625066)
Visitor Counter : 302
Read this release in:
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu