ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಸಿ.ಬಿ.ಎಸ್.ಇ. ಹತ್ತನೇ ಮತ್ತು ಹನ್ನೆರಡನೇ ತರಗತಿಗಳಿಗೆ ಉಳಿದ ಪರೀಕ್ಷೆಗಳ ದಿನಾಂಕಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಪ್ರಕಟಿಸಿದರು
Posted On:
18 MAY 2020 5:04PM by PIB Bengaluru
ಸಿ.ಬಿ.ಎಸ್.ಇ. ಹತ್ತನೇ ಮತ್ತು ಹನ್ನೆರಡನೇ ತರಗತಿಗಳಿಗೆ ಉಳಿದ ಪರೀಕ್ಷೆಗಳ ದಿನಾಂಕಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಪ್ರಕಟಿಸಿದರು
ಸಿ.ಬಿ.ಎಸ್.ಇ. ಹತ್ತನೇ ಮತ್ತು ಹನ್ನೆರಡನೇ ತರಗತಿಗಳ ಉಳಿದ ಪರೀಕ್ಷೆಗಳ ದಿನಾಂಕಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ಇಂದು ನವದೆಹಲಿಯಲ್ಲಿ ಪ್ರಕಟಿಸಿದರು. “ಈಶಾನ್ಯ ದೆಹಲಿಯ ವಿದ್ಯಾರ್ಥಿಗಳಿಗೆ ಮಾತ್ರ ಹತ್ತನೇ ತರಗತಿಯ ಪರೀಕ್ಷೆಗಳನ್ನು ನಡೆಸಲಾಗುವುದು. ಈಶಾನ್ಯ ದೆಹಲಿ ಸೇರಿದಂತೆ ದೇಶಾದ್ಯಂತದ ಎಲ್ಲಾ ವಿದ್ಯಾರ್ಥಿಗಳಿಗೆ ಹನ್ನೆರಡನೇ ತರಗತಿಯ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಇರುತ್ತವೆ” ಎಂದು ಸಚಿವರು ತಿಳಿಸಿದರು.
Dr Ramesh Pokhriyal Nishank✔@DrRPNishank
Dear students of class 10th of #CBSE Board studying in North East District, New Delhi, here is the date sheet for your board exams.
All the best
#StaySafe #StudyWell@HRDMinistry @mygovindia@cbseindia29 @PIB_India @DDNewslive @MIB_India
1,556
1:13 PM - May 18, 2020
Twitter Ads info and privacy
465 people are talking about this
Dr Ramesh Pokhriyal Nishank✔@DrRPNishank
Dear students of class 12th of #CBSE Board here is the date sheet for your board exams.
All the best
#StaySafe #StudyWell@HRDMinistry @mygovindia@cbseindia29 @PIB_India @MIB_India @DDNewslive
2,667
1:20 PM - May 18, 2020
Twitter Ads info and privacy
1,020 people are talking about this
ಈ ಮೊದಲು ಮೇ 5, 2020 ರಂದು ಜರುಗಿದ ವಿದ್ಯಾರ್ಥಿಗಳೊಂದಿಗಿನ ವೆಬ್ನಾರ್ ಸಂವಾದದ ಸಂದರ್ಭದಲ್ಲಿ, "ಸಿ.ಬಿ.ಎಸ್.ಇ. ಹತ್ತನೇ ಮತ್ತು ಹನ್ನೆರಡನೇ ತರಗತಿಗಳ ಉಳಿದ ಪರೀಕ್ಷೆಗಳನ್ನು ಜುಲೈ 1-15, 2020ರ ನಡುವೆ ನಡೆಸಲಾಗುವುದು" ಎಂದು ಸಚಿವ ಶ್ರೀ ಪೋಖ್ರಿಯಾಲ್ ಅವರು ಹೇಳಿದ್ದರು.
"ಪರೀಕ್ಷಾ ದಿನಾಂಕಗಳನ್ನು ಘೋಷಿಸುವಾಗ ವಿಶೇಷ ಕಾಳಜಿ ವಹಿಸಲಾಗುವುದು ಎಂಬ ತನ್ನ ಧೋರಣೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಂಪೂರ್ಣ ಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗಾಗಿ ಸಾಕಷ್ಟು ಸಮಯ ಸಿಗುವಂತೆ ಮತ್ತು ವಿದ್ಯಾರ್ಥಿಗಳು ತಮ್ಮ ಸಿದ್ಧತೆಗಳತ್ತ ಗಮನಹರಿಸಲು ಸಾಧ್ಯವಾಗುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯವನ್ನು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸಿ.ಬಿ.ಎಸ್.ಇ.ಗೆ ಸೂಚನೆ ಕೂಡಾ ನೀಡಿದ್ದೇವೆ ಎಂದು ಸಚಿವ ಶ್ರೀ ಪೋಖ್ರಿಯಾಲ್ ಅವರು ಹೇಳಿದರು.
ಈ ಸಂದರ್ಭದಲ್ಲಿ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ಶುಭ ಹಾರೈಸಿದರು.
ಹತ್ತನೇ ತರಗತಿಯ ಪರೀಕ್ಷೆಯ ದಿನಾಂಕ ಹಾಳೆಗಾಗಿ ಇಲ್ಲಿ ಕ್ಲಿಕ್ ಮಾಡಿ
ಹನ್ನೆರಡನೇ ತರಗತಿಯ ಪರೀಕ್ಷೆಯ ದಿನಾಂಕದ ಹಾಳೆಗಾಗಿ ಇಲ್ಲಿ ಕ್ಲಿಕ್ ಮಾಡಿ
***
(Release ID: 1624944)
Visitor Counter : 274
Read this release in:
Tamil
,
Telugu
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Malayalam