PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 17 MAY 2020 6:28PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

http://164.100.117.97/WriteReadData/userfiles/image/image002482A.pnghttp://164.100.117.97/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಡಾ. ಹರ್ಷವರ್ಧನ್: ವೈಯಕ್ತಿಕ ಅಂತರ ಮತ್ತು ನಡೆವಳಿಕೆಯ ಶಿಷ್ಟಾಚಾರಗಳೇ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಸಮರ್ಥ ಸಾಮಾಜಿಕ ಲಸಿಕೆಯಾಗಿದೆ; ನಮ್ಮ ಚೇತರಿಕೆ ಪ್ರಮಾಣ ಶೇ.37.5ಕ್ಕೆ ಏರಿಕೆಯಾಗಿದೆ ಮತ್ತು 22 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ

ದೇಶ ಲಾಕ್ ಡೌನ್ 3.0ಯಿಂದ ಹೊರಬರುತ್ತಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಡಾ. ಹರ್ಷವರ್ಧನ್, ಈ ಹಿಂದೆ ಡಬ್ಲಿಂಗ್ ಅವಧಿ ಕಳೆದ 14 ದಿನಗಳ ಅವಧಿಯಲ್ಲಿ 11.5 ಆಗಿತ್ತು. ಕಳೆದ ಮೂರು ದಿನಗಳಲ್ಲಿ ಇದು 13.6ಕ್ಕೆ ಏರಿಕೆಯಾಗಿದೆ ಎಂದರು. ಅದೇ ರೀತಿ ಮೃತ್ಯು ಪ್ರಮಾಣ ದರ ಕೂಡ ಶೇ.3.1ಕ್ಕೆ ಕುಸಿದಿದೆ ಮತ್ತು ಚೇತರಿಕೆಯ ದರ ಶೇ.37.5ಕ್ಕೆ ಏರಿಕೆಯಾಗಿದೆ ಎಂದೂ ತಿಳಿಸಿದರು. ನಿನ್ನೆಯವರೆಗೆ ಶೇ.3.1ರಷ್ಟು ಕೋವಿಡ್ ರೋಗಿಗಳು ಐಸಿಯುನಲ್ಲಿದ್ದು, ಶೇ.0.45ರಷ್ಟು ರೋಗಿಗಳು ವೆಂಟಿಲೇಟರ್ ಮತ್ತು ಶೇ.2.7ರಷ್ಟು ಮಂದಿ ಆಕ್ಸಿಜೆನ್ ಬೆಂಬಲದಲ್ಲಿದ್ದಾರೆ ಎಂದರು. 2020ರ ಮೇ 17ರವರೆಗೆ ಒಟ್ಟು 90,927 ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಈ ಪೈಕಿ 34,109 ಜನರು ಗುಣಮುಖರಾಗಿದ್ದಾರೆ, 2872 ಜನರು ಸಾವಿಗೀಡಾಗಿದ್ದಾರೆ ಎಂದರು. ಕಳೆದ 24 ಗಂಟೆಗಳ ಅವಧಿಯಲ್ಲಿ 4,987 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದೂ ತಿಳಿಸಿದರು.

ಡಾ. ಹರ್ಷವರ್ಧನ್ ಮತ್ತೆ ಭಾರತ ಹೊಸ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದ್ದು, ಸರಳ ನೈರ್ಮಲ್ಯ ಕ್ರಮಗಳು ಅಂದರೆ ಪದೇಪದೇ ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯುವುದು, ಅಥವಾ ಮದ್ಯಸಾರಯುಕ್ತ ಸ್ಯಾನಿಟೈಸರ್ ಬಳಕೆ, ಸಾರ್ವಜನಿಕವಾಗಿ ಉಗಿಯದಿರುವುದು, ಕಾರ್ಯಕ್ಷೇತ್ರದ ಸ್ಯಾನಿಟೈಸಿಂಗ್, ಪದೆ ಪದೆ ಮುಟ್ಟುವ ಮೇಜಿನ ಮೇಲ್ಮೈ ಸ್ವಚ್ಛ ಮಾಡುವುದು, ತಮ್ಮ ಮತ್ತು ಅನ್ಯರ ಸುರಕ್ಷತೆಗಾಗಿ ಸಾರ್ವಜನಿಕ ಸ್ಥಳದಲ್ಲಿ ಸದಾ ಮುಖ ಕವಚ ಬಳಸುವುದು, ಸೂಕ್ತ ಶ್ವಾಸದ ನೈರ್ಮಲ್ಯದ ಖಾತ್ರಿ ಇವು ಕಡ್ಡಾಯ ಎಂದರು. ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಸಮರ್ಥ ಲಭ್ಯ ಸಾಮಾಜಿಕ ಲಸಿಕೆಯಾಗಿದೆ ಮತ್ತು ಹೀಗಾಗಿಯೇ ಇತರರೊಂದಿಗೆ ಮಾತುಕತೆ ನಡೆಸುವಾಗ ಎರಡು ಗಜ ದೂರ ಇರಲು, ಸಾಮಾಜಿಕ ಸಭೆಗಳನ್ನು ತಗ್ಗಿಸಿ ವರ್ಚುಯಲ್ ಸಭೆ ನಡೆಸಲು ಸಲಹೆ ಮಾಡಲಾಗಿದೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624705

ಹಣಕಾಸು ಸಚಿವರು ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ ಏಳು ವಲಯಗಳಿಗೆ ಸರ್ಕಾರದ ಸುಧಾರಣೆಗಳು ಮತ್ತು ಚೈತನ್ಯವರ್ಧನೆಯನ್ನು ಪ್ರಕಟಿಸಿದ್ದಾರೆ

ಸರ್ಕಾರದ ಸುಧಾರಣೆಗಳು ಮತ್ತು ಚೈತನ್ಯವರ್ಧನೆಯ ನಿಟ್ಟಿನಲ್ಲಿ  5ನೇ ಮತ್ತು ಕೊನೆಯ ಕಂತಿನ ಕ್ರಮಗಳನ್ನು ಪ್ರಕಟಿಸಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು, ಉದ್ಯೋಗ ಒದಗಿಸಲು, ವ್ಯಾಪಾರಕ್ಕೆ, ಸುಗಮ ವಾಣಿಜ್ಯಕ್ಕೆ, ಮತ್ತು ರಾಜ್ಯ ಸರ್ಕಾರಗಳು ಮತ್ತು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು 7 ಕ್ರಮಗಳ ವಿವರ ನೀಡಿದರು. ಇವುಗಳಲ್ಲಿ ಎಂ.ಜಿ. ನರೇಗಾಕ್ಕೆ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲು 40000 ಕೋಟಿ ರೂ.ಗಳ ಹೆಚ್ಚುವರಿಯಾಗಿ ಒದಗಿಸುವುದು;. ಭವಿಷ್ಯದ ಸಾಂಕ್ರಾಮಿಕಗಳಿಗೆ ಭಾರತವನ್ನು ಸಜ್ಜುಗೊಳಿಸಲು ಸಾರ್ವಜನಿಕ ಆರೋಗ್ಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಇತರ ಆರೋಗ್ಯ ಸುಧಾರಣೆಗಳು; ಕೋವಿಡೋತ್ತರದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ; ಸುಗಮ ವಾಣಿಜ್ಯಕ್ಕೆ ಹೆಚ್ಚಳಕ್ಕೆ ಐಬಿಸಿ ಸಂಬಂಧಿತ ಕ್ರಮಗಳು; ಕಂಪನಿಗಳ ಕಾಯಿದೆಯಲ್ಲಿ ಬಾಕಿ ಉಳಿಸಿಕೊಳ್ಳುವಿಕೆಗೆ ಅಪರಾಧೀಕರಣ ಕೈಬಿಡುವಿಕೆ; ಸಾಂಸ್ಥಿಕಗಳಿಗೆ ಸುಗಮ ವಾಣಿಜ್ಯ; ಮತ್ತು ಹೊಸ ಸ್ವಾವಲಂಬಿ ಭಾರತಕ್ಕೆ ಸಾರ್ವಜನಿಕ ವಲಯದ ನೀತಿ ಪ್ರಕಟಿಸಿದರು. ಅವರು 2020-21ರಲ್ಲಿ ಮಾತ್ರ ರಾಜ್ಯಗಳ ಸಾಲ ಪಡೆಯುವಿಕೆ ಪ್ರಮಾಣವನ್ನು ಶೇ.3ರಿಂದ ಶೇ.5ಕ್ಕೆ ಹೆಚ್ಚಳ ಮತ್ತು ರಾಜ್ಯ ಮಟ್ಟದ ಸುಧಾರಣೆಗಳನ್ನು ಪ್ರಕಟಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624728

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಭಾರತೀಯ ಆರ್ಥಿಕತೆಗೆ ಬೆಂಬಲ ನೀಡಲು ಆತ್ಮನಿರ್ಭರ ಭಾರತ ಅಭಿಯಾನದ 5ನೇ ಕಂತಿನ ವಿವರಗಳನ್ನು ಪ್ರಸ್ತುತಪಡಿಸಿದರು

ವಿವರಗಳಿಗೆ: https://pib.gov.in/PressReleseDetail.aspx?PRID=1624781

ಹಣಕಾಸು ಸಚಿವರು ಇಂದು ಪ್ರಕಟಿಸಿರುವ ಕ್ರಮಗಳು ನಮ್ಮ ಗ್ರಾಮೀಣ ಆರ್ಥಿಕತೆಗೆ ಮತ್ತು ಮೂಲಸೌಕರ್ಯಕ್ಕೆ ದೊಡ್ಡ ಚೈತನ್ಯ ನೀಡಲಿವೆ, ಕೋಟ್ಯಂತರ ಬಡಜನರಿಗೆ ಮತ್ತು ವಲಸೆ ಕಾರ್ಮಿಕರಿಗೆ ಉದ್ಯೋಗವನ್ನೂ ಒದಗಿಸಲಿವೆಗೃಹ ಸಚಿವರು

ಕೇಂದ್ರ ಗೃಹ ಸಚಿವ, ಅಮಿತ್ ಶಾ ಅವರು ಇಂದಿನ ಆರ್ಥಿಕ ಪ್ಯಾಕೇಜ್ ಪ್ರಕಟಣೆಗಾಗಿ ಪ್ರಧಾನಮಂತ್ರಿ ಶ್ರೀ  ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.   ಇಂದು ಪ್ರಕಟಿಸಿರುವ ಕ್ರಮಗಳು ಭಾರತದ ಸ್ವಾವಲಂಬನೆಯ ಕನಸನ್ನು ನನಸು ಮಾಡುವಲ್ಲಿ ಬಹುದೂರ ಸಾಗಲಿದೆ ಎಂದು ತಿಳಿಸಿದ್ದಾರೆ.

ಕ್ರಮಗಳು ಆರೋಗ್ಯ, ಶಿಕ್ಷಣ ಮತ್ತು ವಾಣಿಜ್ಯ ವಲಯದ ದಿಕ್ಕನ್ನೇ ಬದಲಾಯಿಸಬಲ್ಲುವಾಗಿವೆ, ಕೋಟ್ಯಂತರ ಬಡವರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624669

ಪ್ರಗತಿಯ ಹೊಸ ದಿಗಂತದ ಪ್ರಕಟಣೆ ಮಾಡಿದ ಹಣಕಾಸು ಸಚಿವರು ; 8 ವಲಯಗಳಲ್ಲಿ ರಚನಾತ್ಮಕ ಸುಧಾರಣೆ ಆತ್ಮ ನಿರ್ಭರ ಭಾರತಕ್ಕೆ ಹಾದಿ ಸುಗಮ

ಹಣಕಾಸು ಸಚಿವರು ಶನಿವಾರ, ಆತ್ಮ ನಿರ್ಭರ ಭಾರತದ ಪ್ರಯತ್ನದ ನಿಟ್ಟಿನಲ್ಲಿ ತ್ವರಿತ ಗತಿಯ ಹೂಡಿಕೆ ಕೆಳಗಿನ ನೀತಿ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ: ಇದು ಅಧಿಕಾರಯುತ ಕಾರ್ಯದರ್ಶಿಗಳ ಗುಂಪಿನ ಮೂಲಕ ಹೂಡಿಕೆ ಅನುಮತಿಯನ್ನು ತ್ವರಿತವಾಗಿ ಶೋಧಿಸುವುದಾಗಿದೆ; ಯೋಜನಾ ಅಭಿವೃದ್ಧಿ ಕೋಶವನ್ನು ಪ್ರತಿ ಸಚಿವಾಲಯದಲ್ಲಿ ಸ್ಥಾಪಿಸಿ ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ಸಿದ್ಧಪಡಿಸಿ, ಹೂಡಿಕೆದಾರರು ಮತ್ತು ಕೇಂದ್ರ/ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಲಾಗುವುದು; ಹೊಸ ಹೂಡಿಕೆಯಲ್ಲಿ ಸ್ಪರ್ಧೆ ನೀಡಿ ಹೂಡಿಕೆಯನ್ನು ಸೆಳೆಯುವ ರಾಜ್ಯಗಳಿಗೆ ಶ್ರೇಣೀಕರಣವೂ ಇರುತ್ತದೆ; ಹೊಸ ಚಾಂಪಿಯನ್ ವಲಯಗಳಿಗೆ ಉತ್ತೇಜನ ನೀಡಲು, ಸೋಲಾರ್ ಪಿವಿ ಉತ್ಪಾದನೆ, ಮುಂದುವರಿದ ಸೆಲ್ ಬ್ಯಾಟರಿ ಸ್ಟೋರೇಜ್ ಇತ್ಯಾದಿಗೆ ಪ್ರೋತ್ಸಾಹಕ ಯೋಜನೆಯನ್ನು ಆರಂಭಿಸಲಾಗುವುದು ಎಂದರು, ಹಣಕಾಸು ಸಚಿವರು ಕೆಳಗಿನ ರಚನಾತ್ಮಕ ಸುಧಾರಣೆಗಳನ್ನು ಕಲ್ಲಿದ್ದಲು, ಖನಿಜ, ರಕ್ಷಣಾ ಉತ್ಪಾದನೆ, ನಾಗರಿಕ ವಿಮಾನಯಾನ, ವಿದ್ಯುತ್ ವಲಯ, ಸಾಮಾಜಿಕ ಮೂಲಸೌಕರ್ಯ, ಬಾಹ್ಯಾಕಾಶ ಮತ್ತು ಅಣು ಶಕ್ತಿ ಕ್ಷೇತ್ರದಲ್ಲಿ ಪ್ರಕಟಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624623

ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿರುವ ರಚನಾತ್ಮಕ ಸುಧಾರಣಾ ಕ್ರಮಗಳಿಗೆ ಕೇಂದ್ರ ಗೃಹ ಸಚಿವರ ಮೆಚ್ಚುಗೆ

ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿರುವ ರಚನಾತ್ಮಕ ಸುಧಾರಣಾ ಕ್ರಮಗಳ ಬಗ್ಗೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಇಂದಿನ ಮೈಲಿಗಲ್ಲಿನ ನಿರ್ಣಯಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ, ಇದು ನಿಜಕ್ಕೂ ನಮ್ಮ ಆರ್ಥಿಕತೆಗೆ ಚೈತನ್ಯ ನೀಡಲಿದ್ದು, ಸ್ವಾಭಿಮಾನಿ ಭಾರತದ ಪ್ರಯತ್ನಕ್ಕೆ ಬೆಂಬಲ ನೀಡಲಿದೆ’ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ‘ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ’ ಮಂತ್ರ ಕಳೆದ 6 ವರ್ಷಗಳಲ್ಲಿ ಭಾರತದ  ಅದ್ಭುತ ಪ್ರಗತಿಗೆ ಪ್ರಮುಖ ಸಾಧನವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624627

ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ಪೂರೈಸುವ  ಆತ್ಮ ನಿರ್ಭರ ಭಾರತ ಯೋಜನೆಗೆ ಚಾಲನೆ

ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿ, ಭಾರತ ಸರ್ಕಾರ, ಎನ್.ಎಫ್.ಎಸ್.ಎ. ಅಥವಾ ರಾಜ್ಯಗಳ ಪಿ.ಡಿ.ಎಸ್. ಕಾರ್ಡ್ ವ್ಯಾಪ್ತಿಗೆ ಬಾರದ 8 ಕೋಟಿ ವಲಸೆ ಕಾರ್ಮಿಕರಿಗೆ  2020ರ ಮೇ ಮತ್ತು ಜೂನ್ ಎರಡು ತಿಂಗಳಲ್ಲಿ ಉಚಿತವಾಗಿ ತಿಂಗಳಿಗೆ 5 ಕೆಜಿ ಆಹಾರ ಧಾನ್ಯ ಪೂರೈಸಲು ನಿರ್ಧರಿಸಿದೆ.

 ಯೋಜನೆಯ ಅನುಷ್ಠಾನಕ್ಕೆ ಒಟ್ಟು ಅಂದಾಜು ವೆಚ್ಚ 3500 ಕೋಟಿ ರೂ. ಆಗಲಿದ್ದು, ಇದರ ಪೂರ್ಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ. ದೇಶಾದ್ಯಂತ ಯೋಜನೆಯಡಿ 8 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿ ಆಹಾರ ಧಾನ್ಯ ಪೂರೈಕೆಯನ್ನು ಭಾರತೀಯ ಆಹಾರ ನಿಗಮ ಈಗಾಗಲೇ ಆರಂಭಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624634

ಕೇಂದ್ರ ಸರ್ಕಾರ ವಿವಿಧ ವಲಯಗಳಿಗೆ ಪ್ರಕಟಿಸಿರುವ ಪರಿಹಾರ ಪ್ಯಾಕೇಜ್ ಮತ್ತು ಎಂ.ಎಸ್.ಎಂ..ಗಳಿಗೆ ನೀಡಿರುವ ಹೊಸ ವ್ಯಾಖ್ಯೆ ಕೈಗಾರಿಕೆಗೆ ದೊಡ್ಡ ಚೈತನ್ಯ ನೀಡಲಿದೆ:  ಶ್ರೀ ಗಡ್ಕರಿ

 ಎಂ.ಎಸ್.ಎಂ.ಇ., ಕಾರ್ಮಿಕ, ಕೃಷಿ ಇತ್ಯಾದಿ ಸೇರಿದಂತೆ ವಿವಿಧ ಬಾಧ್ಯಸ್ಥರು/ ವಲಯಗಳಿಗೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಪರಿಹಾರ ಪ್ಯಾಕೇಜ್ ಗಳು ಮತ್ತು ಎಂ.ಎಸ್.ಎಂ.ಇ.ಗೆ ನೀಡಿರುವ ಹೊಸ ವ್ಯಾಖ್ಯೆ ಕೈಗಾರಿಕೆಗಳಿಗೆ ಚೈತನ್ಯ ನೀಡಲಿದೆ ಎಂದು ಕೇಂದ್ರ ಎಂ.ಎಸ್.ಎಂ.ಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಎಂ.ಎಸ್.ಎಂ.ಇ. ಪ್ಯಾಕೇಜ್ ಭಾಗವಾಗಿ ಎಂ.ಎಸ್.ಎಂ.ಇ.ಗಳ ಶ್ರೇಣೀಕರಣದ ಪರಿಶೋಧನೆಗೆ ಕರೆ ನೀಡಿದ ಅವರು, ನಿಧಿಯ ನಿಧಿಯನ್ನು ಸಮರ್ಥವಾಗಿ ಜಾರಿ ಮಾಡಲು ಭಾಗಿಯಾಗಿದ್ದವರಿಂದ ಸಲಹೆ ಕೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624700

ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆ (ಎನ್.ಎಂ..ಎಸ್.) – ವಲಸೆ ಕಾರ್ಮಿಕರ ಕುರಿತ ಕೇಂದ್ರ ಆನ್ ಲೈನ್ ಮಾಹಿತಿ ಕೋಶರಾಜ್ಯಗಳಾದ್ಯಂತ ತಡೆರಹಿತ ಓಡಾಟಕ್ಕೆ ಅವಕಾಶ ಕಲ್ಪಿಸಲು ಎನ್.ಡಿ.ಎಂ..ಯಿಂದ ಅಭಿವೃದ್ಧಿ

ವಲಸ  ಕಾರ್ಮಿಕರ ಓಡಾಟದ ಬಗ್ಗೆ ಮಾಹಿತಿ ಪಡೆಯಲು ಮತ್ತು ರಾಜ್ಯಗಳಾದ್ಯಂತ ಸಿಲುಕಿರುವ ವ್ಯಕ್ತಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ.) ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆ (ಎನ್.ಎಂ.ಐ.ಎಸ್.)- ಆನ್ ಲೈನ್ ಡ್ಯಾಷ್ ಬೋರ್ಡ್ ಅಭಿವೃದ್ಧಿ ಪಡಿಸಿದೆ.  ಈ ಆನ್ ಲೈನ್ ಪೋರ್ಟಲ್ ಅನ್ನು ವಲಸೆ ಕಾರ್ಮಿಕರ ಕೇಂದ್ರೀಯ ಕೋಶವಾಗಿ ನಿರ್ವಹಣೆ ಮಾಡಲಿದ್ದು, ಅವರು ತಮ್ಮ ಸ್ವಂತ ಊರಿನತ್ತ ಸುಗಮ ಸಂಚಾರಕ್ಕೆ ತ್ವರಿತ ಅಂತರ – ರಾಜ್ಯ ಸಂವಹನ/ಸಹಯೋಗ ನೀಡುತ್ತದೆ. ಇದರಿಂದ ಸಂಪರ್ಕ ಪತ್ತೆಗೂ ನೆರವಾಗಲಿದೆ, ಇದು ಒಟ್ಟಾರೆ ಕೋವಿಡ್ 19 ಸ್ಪಂದನಾ ಕಾರ್ಯಕ್ಕೆ ಉಪಯುಕ್ತವಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624603

ವಲಸಿಗರ ತ್ವರಿತ ಮತ್ತು ಸುರಕ್ಷಿತ ಸಾಗಾಟವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ, ದೇಶದಲ್ಲಿ ರೈಲ್ವೆ ಸಂಪರ್ಕಿತ ಎಲ್ಲ ಜಿಲ್ಲೆಗಳಿಂದ ಶ್ರಮಿಕ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಿದ್ಧವಾಗಿದೆ

ರೈಲ್ವೆ ಸಂಪರ್ಕಿತ ಎಲ್ಲ ಜಿಲ್ಲಿಗಳಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಿದ್ಧವಾಗಿದೆ. ರೈಲ್ವೆ ಸಚಿವರು, ಸಿಲುಕಿರುವ ಕಾರ್ಮಿಕರು ಮತ್ತು ಗಮ್ಯಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ರಾಜ್ಯ ನೋಡಲ್ ಅಧಿಕಾರಿ ಮೂಲಕ ರೈಲ್ವೆಗೆ ಸಲ್ಲಿಸುವಂತೆ ರೈಲ್ವೆ ಸಚಿವರು ದೇಶದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಭಾರತೀಯ ರೈಲ್ವೆ ದಿನಕ್ಕೆ ಸುಮಾರು 300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ, ಆದಾಗ್ಯೂ, ಪ್ರಸ್ತುತ ಅರ್ಧಕ್ಕಿಂತಲೂ ಕಡಿಮೆ ರೈಲುಗಳನ್ನು ಬಳಸಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624587

ಓಪಿ ಸಮುದ್ರ ಸೇತು ಹಂತ 2 – .ಎನ್.ಎಸ್. ಜಲಾಶ್ವ 588 ಭಾರತೀಯರನ್ನು ಮಾಲ್ಡೀವ್ಸ್ ನಿಂದ ಕರೆತಂದಿದೆ

ಓಪಿ ಸಮುದ್ರ ಸೇತುವಿಗಾಗಿ ನಿಯುಕ್ತಿಗೊಂಡಿದ್ದ ಐ.ಎನ್.ಎಸ್. ಜಲಾಶ್ವ, ಕೊಚ್ಚಿ ಬಂದರಿಗೆ ಇಂದು ಬೆಳಗ್ಗೆ ಆಗಮಿಸಿದ್ದು, ಮಾಲ್ಡಿವ್ಸ್ ಮಾಲೆಯಿಂದ ಭಾರತೀಯರನ್ನು ಕರೆತಂದಿದೆ. ಈ ಹಡಗಿನಲ್ಲಿ 588 ಭಾರತೀಯ ನಾಗರಿಕರಿದ್ದು, ಅದರಲ್ಲಿ 70 ಮಹಿಳೆಯರು (6 ಗರ್ಭಿಣಿಯರು) ಮತ್ತು 21 ಮಕ್ಕಳು ಕೊಚ್ಚಿನ್ ಬಂದರಿನ ಸಮುದ್ರಿಕಾ ಕ್ರೂಸ್ ಟರ್ಮಿನಲ್ ನಲ್ಲಿ ಇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624668

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಎಂಟು ಈಶಾನ್ಯ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್ ಕುರಿತಂತೆ ಚರ್ಚಿಸಿದರು

ಒಂದು ಗಂಟೆಗಳ ಕಾಲ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ, ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾದ ಪ್ರತಿನಿಧಿಗಳು ಭಾಗಿಯಾಗಿ ಪ್ರಸಕ್ತ ಸನ್ನಿವೇಶ ಮತ್ತು ದೇಶದ ವಿವಿಧ ಭಾಗಗಳಲ್ಲಿನ ವಲಸೆ ಕಾರ್ಮಿಕರ ಸಂಚಾರ, ಪ್ರಧಾನಮಂತ್ರಿಯವರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಮತ್ತು ಮುಂಬರುವ ದಿನಗಳಲ್ಲಿ ನೀಡಬಹುದಾದ ಸಡಿಲಿಕೆಗಳ ಕುರಿತಂತೆ ಚರ್ಚಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624634

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಅರುಣಾಚಲ ಪ್ರದೇಶ: ಮೇ ಮತ್ತು ಜೂನ್ ತಿಂಗಳಿಗೆ ಪಿಎಂಜಿಕೆವೈ ಅಡಿಯಲ್ಲಿ ಪೂರೈಸಲು 200 ಎಂಟಿ ದ್ವಿದಳ ಧಾನ್ಯಗಳನ್ನು ಈಗಾಗಲೇ ಎರಡು ಗೋದಾಮುಗಳಿಗೆ ತಲುಪಿಸಲಾಗಿದೆ. ಪಡಿತರ ಕಾರ್ಡ್ ಹೊಂದಿಲ್ಲದೆ ಇರುವವರಿಗಾಗಿ ಶೀಘ್ರದಲ್ಲೇ ರಾಜ್ಯಕ್ಕೆ ಹೆಚ್ಚುವರಿ ಆಹಾರ ಧಾನ್ಯವನ್ನು ನಾಫೆಡ್ ಒದಗಿಸಲಿದೆ.
 • ಅಸ್ಸಾಂ: ದೆಹಲಿಯಿಂದ ಬಂದ ಜೋರ್ಹತ್ ಜಿಲ್ಲೆಯ ವಾರ್ಡ್ ನಂ .3 ಒಂಬತ್ತು ವರ್ಷದ ಬಾಲಕನಲ್ಲಿ ಕೋವಿಡ್ 19 ದೃಢಪಟ್ಟಿದೆ. ಒಟ್ಟು ಪ್ರಕರಣಗಳು 96, ಸಕ್ರಿಯ ಪ್ರಕರಣ 51, ಚೇತರಿಸಿಕೊಂಡವರು 41, ಸಾವು 2 ಎಂದು ಅಸ್ಸಾಂ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
 • ಮಣಿಪುರ: ಕೃಷಿ, ಎಂಎಸ್‌.ಎಂಇ ಮತ್ತು ಮನ್ರೇಗಾ ಕೆಲಸಗಳಿಗೆ ವಿನಾಯಿತಿ ನೀಡಿ ಸರ್ಕಾರವು ಮೇ 31 ರವರೆಗೆ ಲಾಕ್ಡೌನ್ ವಿಸ್ತರಿಸಿದೆ. ಅಸ್ತಿತ್ವದಲ್ಲಿರುವ ಪರೀಕ್ಷೆಯ ಬ್ಯಾಕ್ಲಾಗ್ ಪೂರ್ಣಗೊಳ್ಳುವವರೆಗೆ ರಸ್ತೆ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ಜನರಿಗೆ ಹೊಸ ಪರವಾನಗಿಗಳನ್ನು ನೀಡುವುದನ್ನು ನಿಲ್ಲಿಸುತ್ತದೆ.
 • ಮೇಘಾಲಯ: ಗುಜರಾತ್ನಲ್ಲಿ ಅಧ್ಯಯನ ಮಾಡುತ್ತಿದ್ದ ಅಥವಾ ಕೆಲಸ ಮಾಡುತ್ತಿದ್ದ ಮೇಘಾಲಯದ ಒಟ್ಟು 163 ಜನರು ಗುವಾಹಟಿ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ.
 • ಮಿಜೋರಾಂ: ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಿಲುಕಿದ್ದ ಮಿಜೋರಾಂನ ಸರ್ಚಿಪ್ ಜಿಲ್ಲೆಯ 36 ನಿವಾಸಿಗಳು ರಾಜ್ಯವನ್ನು ತಲುಪಿದ್ದಾರೆ ಮತ್ತು ಏಕಲವ್ಯಾ ವಸತಿ ಶಾಲೆಯ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
 • ನಾಗಾಲ್ಯಾಂಡ್: ಮಣಿಪುರದಲ್ಲಿ ಸಿಲುಕಿದ್ದ ನಾಗಾಲ್ಯಾಂಡ್ 134 ನಾಗರಿಕರು 6 ಬಸ್ಗಳಲ್ಲಿ ತವರಿಗೆ ತಲುಪುತ್ತಾರೆ. ಕೆಲವು ಸಾರ್ವಜನಿಕ ಮತ್ತು ಕಾಲೇಜುಗಳು ಶಿಕ್ಷಣ ಸಂಸ್ಥೆಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸುವುದಕ್ಕೆ ಆಕ್ಷೇಪಿಸುತ್ತಿವೆ
 • ಸಿಕ್ಕಿಂ: ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಶಿಕ್ಷಣ ತರಗತಿಗಳಿಂದ ವಂಚಿತರಾಗಿರುವ ದೂರದ ಸ್ಥಳಗಳಲ್ಲಿರುವ ವಿದ್ಯಾರ್ಥಿಗಳಿಗೆ ಮೊದಲೇ ಲೋಡ್ ಮಾಡಲಾದ ಶೈಕ್ಷಣಿಕ ವಿಷಯಗಳೊಂದಿಗೆ ಲ್ಯಾಪ್ಟಾಪ್ಗಳನ್ನು ಕಳುಹಿಸಲಾಗುತ್ತಿದೆ ಎಂದು ಶಿಕ್ಷಣ ವಿಭಾಗದ ರಾಜ್ಯ ಯೋಜನಾ ನಿರ್ದೇಶಕ ಭೀಮ್ ಥತಾಲ್ ತಿಳಿಸಿದ್ದಾರೆ.
 • ಚಂಡೀಗ: ಲಾಕ್ ಡೌನ್ ನಿಂದಾಗಿ, ಕೆಲವು ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳು ಚಂಡೀಗಢದಲ್ಲಿ ಸಿಲುಕಿಕೊಂಡಿದ್ದಾರೆ. ವ್ಯಕ್ತಿಗಳ ಸುಗಮ ಸಂಚಾರಕ್ಕೆ, ಚಂಡೀಗ ಆಡಳಿತವು ತಮ್ಮ ಆರಾಮದಾಯಕ ಮತ್ತು ಸುರಕ್ಷಿತವಾಗಿ ಮನೆಗೆ ಮರಳಿಸಲು ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ. ನಿನ್ನೆ ಅಂದರೆ 16.05.2020 ರಂದು ಕೇಂದ್ರಾಡಳಿತ ಪ್ರದೇಶ ಲಡಾಖ್ನಿಂದ ಒಟ್ಟು 166 ಜನರನ್ನು ವೈದ್ಯಕೀಯ ತಪಾಸಣೆ ಮಾಡಿ 07 ವಿಶೇಷ ಬಸ್ಗಳ ಮೂಲಕ ಲೇಹ್ಗೆ ಕಳುಹಿಸಲಾಗಿದೆ. ಹಿಂದೆ 13.05.2020 ರಂದು ಒಟ್ಟು 242 ಜನರನ್ನು ಲಡಾಖ್ಗೆ ಕಳುಹಿಸಲಾಗಿತ್ತು.
 • ಪಂಜಾಬ್: ಕಳೆದ ನಾಲ್ಕು ದಿನಗಳಿಂದ ಹೊಸ ಪ್ರಕರಣಗಳ ದೈನಂದಿನ ಎಣಿಕೆ ಕುಸಿತದ ನಡುವೆಯೂ, ಪಂಜಾಬ್ ಮುಖ್ಯಮಂತ್ರಿ ರಾಜ್ಯದಲ್ಲಿ ಮೇ 31 ರವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ನೊಂದಿಗೆ ಲಾಕ್ಡೌನ್ ಮೂಲಕ ಬದಲಾಯಿಸುವುದಾಗಿ ಘೋಷಿಸಿದ್ದಾರೆ, ಮೇ 18 ರಿಂದ ಕಂಟೈನ್ಮೆಂಟ್ ಅಲ್ಲದ ವಲಯಗಳಲ್ಲಿ ಗರಿಷ್ಠ ಸಂಭವನೀಯ ಸಡಿಲಿಕೆಗಳನ್ನು ಮತ್ತು ಸೀಮಿತ ಸಾರ್ವಜನಿಕ ಸಾರಿಗೆ ಪುನರಾರಂಭದ ಇಂಗಿತ ವ್ಯಕ್ತಪಡಿಸಿದ್ದಾರೆ.. ಎಲ್ಲಾ ಸಡಿಲಿಕೆಗಳ ವಿವರಗಳನ್ನು ಸೋಮವಾರದೊಳಗೆ ಘೋಷಿಸಲಾಗುವುದು, ಲಾಕ್ಡೌನ್ 4.0 ಕೇಂದ್ರದ ಹೊಸ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. 10 ಲಕ್ಷ ಮಾಸ್ಕ್ಗಳನ್ನು ತಯಾರಿಸಿದ ರಾಜ್ಯದ ಐಟಿಐಗಳ ಬಾಲಕಿಯನ್ನು ಮುಖ್ಯಮಂತ್ರಿ ಅಭಿನಂದಿಸಿದ್ದಾರೆ.
 • ಹರಿಯಾಣ: ಸಣ್ಣ ಅಂಗಡಿಯವರು, ರೈತರು ಮತ್ತು ಕಾರ್ಮಿಕರು, ಕೃಷಿ ಕ್ಷೇತ್ರ, ಮಂಡಿಗಳ ಮೂಲಸೌಕರ್ಯ ಮೇಲ್ದರ್ಜೀಕರಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಸೂರಿನ ಖಾತ್ರಿ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು 20 ಲಕ್ಷ ಕೋಟಿ ರೂ.ಗಳ ಬೃಹತ್ ಆರ್ಥಿಕ ಪ್ಯಾಕೇಜ್ ನಲ್ಲಿ ಸೇರಿಸಿ, ಘೋಷಿಸಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ತಮ್ಮ ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಜಾಗತಿಕ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಮೆಗಾ ಆರ್ಥಿಕ ಪ್ಯಾಕೇಜ್ ಖಂಡಿತವಾಗಿಯೂ ಹರಿಯಾಣದ ಎಂಎಸ್‌.ಎಂಇಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಪ್ರಧಾನ ಮಂತ್ರಿಗಳ 'ಮೇಕ್ ಇನ್ ಇಂಡಿಯಾ' ಮುನ್ನೋಟವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದು ಎಂಎಸ್‌.ಎಂಇಗಳ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ ಮತ್ತು ರಫ್ತು ಅವಕಾಶಗಳನ್ನು ಹೆಚ್ಚಿಸುತ್ತದೆ.
 • ಹಿಮಾಚಲ ಪ್ರದೇಶ: ಕೋವಿಡ್-19 ಗೆ ಸಂಬಂಧಿಸಿದಂತೆ ಆಯಾ ಪ್ರದೇಶಗಳ ಜನರನ್ನು ಸಂವೇದನಾಶೀಲಗೊಳಿಸಲು ಮತ್ತು ದೇಶದ ಇತರ ಭಾಗಗಳಿಂದ ಆಗಮಿಸಿದ ಜನರು ಹೋಂ ಕ್ವಾರಂಟೈನ್ ಓಡಿ ಹೋಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ತಮ್ಮ ಪೂರ್ಣ ಬೆಂಬಲವನ್ನು ನೀಡುವಂತೆ ಮುಖ್ಯಮಂತ್ರಿಗಳು ಪಂಚಾಯತ್ ಪ್ರಧಾನರುಗಳನ್ನು ಕೋರಿದ್ದಾರೆ.. ಪರಿಸ್ಥಿತಿಯನ್ನು ನಿಭಾಯಿಸಲು ಸಾಮೂಹಿಕ ಪ್ರಯತ್ನಗಳು ಅಗತ್ಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹೋಂ ಕ್ವಾರಂಟೈನ್ ಪ್ರಾಮುಖ್ಯತೆ ನೀಡುವ ಬಗ್ಗೆ ಪ್ರಧಾನರುಗಳು ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
 • ಕೇರಳ: ರಾಜ್ಯಗಳ ಸಾಲ ಮಿತಿಯನ್ನು ಹೆಚ್ಚಿಸುವ ಕೇಂದ್ರದ ಘೋಷಣೆಯನ್ನು ಸ್ವಾಗತಿಸಿರುವ ರಾಜ್ಯ ಹಣಕಾಸು ಸಚಿವರು, ಮುಂದಿಟ್ಟಿರುವ ಷರತ್ತುಗಳನ್ನು ಹಿಂಪಡೆಯಬೇಕು ಅಥವಾ ರಾಜ್ಯಗಳೊಂದಿಗೆ ಚರ್ಚಿಸಬೇಕು ಎಂದು ಹೇಳಿದ್ದಾರೆ. ಸಾಲ ಪಡೆಯುವ ಮಿತಿಯ ಹೆಚ್ಚಳವು ರಾಜ್ಯದ ಆದಾಯದ ನಷ್ಟದ ಅರ್ಧದಷ್ಟು ಮಾತ್ರ ಭರಿಸುವುದರಿಂದ ರಾಜ್ಯವು ಶೇ.5ರಷ್ಟು ತನ್ನ ಆದಾಯವನ್ನು ಕೇಂದ್ರ ಬಜೆಟ್ನಿಂದ ಎರವಲು ಪಡೆಯಲು ಅನುಮತಿಸಬೇಕು ಎಂದು ಅವರು ಒತ್ತಾಯಿಸಿದರು. ಜಿಎಸ್ಟಿ ಬಾಕಿಗಳನ್ನು ಸಂಪೂರ್ಣವಾಗಿ ನೀಡಬೇಕು ಮತ್ತು ಮನ್ರೇಗಾ ಅಡಿಯಲ್ಲಿ ವೇತನವು ಮುಂಚಿತವಾಗಿ ಕಾರ್ಮಿಕರನ್ನು ತಲುಪಬೇಕು ಎಂದರು. ಮಾಲ್ಡೀವ್ಸ್ನಲ್ಲಿ ಸಿಲುಕಿರುವ 580 ಕ್ಕೂ ಹೆಚ್ಚು ಭಾರತೀಯ ನಾಗರಿಕರು ಇಂದು "ಆಪರೇಷನ್ ಸಮುದ್ರ ಸೇತು" ಅಡಿಯಲ್ಲಿ ಕೊಚ್ಚಿಗೆ ತಲುಪಿದ್ದಾರೆ. ಅವರಲ್ಲಿ 568 ಮಂದಿ ಕೇರಳ ಮೂಲದವರಿದ್ದಾರೆ. ಕೊಲ್ಲಿಯಿಂದ ಎರಡು ವಿಮಾನಗಳು ಇಂದು ಆಗಮಿಸಲಿವೆ. ನಿನ್ನೆ ರಾಜ್ಯದಲ್ಲಿ ಇನ್ನೂ 11 ಕೋವಿಡ್ -19 ಪ್ರಕರಣಗಳು ದೃಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 87 ಕ್ಕೆ ಏರಿಕೆಯಾಗಿದೆ.
 • ತಮಿಳುನಾಡು: ತಮಿಳುನಾಡಿನಲ್ಲಿ ಮೇ 31 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು, 25 ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಪುನರಾರಂಭಗೊಳ್ಳಲಿದೆ; ಚೆನ್ನೈ ಸೇರಿದಂತೆ ಇತರ 12 ಜಿಲ್ಲೆಗಳಲ್ಲಿ ಮುಂದುವರಿಯಲು ನಿರ್ಬಂಧಿಸಲಾಗಿದೆ. ಇಬ್ಬರು ಚೆನ್ನೈ ಪಡಿತರ ಅಂಗಡಿಯ ನೌಕರರಿಗೆ ನಾಗಪಟ್ಟಣಂನಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಸಂಖ್ಯೆ 50 ಕ್ಕೆ ತಲುಪಿದೆ. ನಿನ್ನೆ ತನಕ ವರದಿಯಾದ ಒಟ್ಟು ಪ್ರಕರಣಗಳು: 10,585, ಸಕ್ರಿಯ ಪ್ರಕರಣಗಳು: 6970, ಸಾವು: 74, ಬಿಡುಗಡೆ: 3538. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5939.
 • ಕರ್ನಾಟಕ: ಆತ್ಮನಿರ್ಭರ ಭಾರತ್ ಅಡಿಯಲ್ಲಿ ಇಂದು ಮಾಡಿರುವ ಪ್ರಕಟಣೆಗಳು ರಾಜ್ಯಕ್ಕೆ ಪ್ರಯೋಜನವನ್ನು ತರುತ್ತವೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಖನಿಜ ಕ್ಷೇತ್ರಗಳಲ್ಲಿನ ನೀತಿ ಬದಲಾವಣೆಗಳು ರಾಜ್ಯದ ಖನಿಜ ನೀತಿಗೆ ಪೂರಕವಾಗಿವೆ ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ಹೆಚ್ಚು ಅಡೆತಡೆಗಳಿಲ್ಲದೆ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ. 54 ಹೊಸ ಕೋವಿಡ್ ಪ್ರಕರಣಗಳು ಇಂದು ಮಧ್ಯಾಹ್ನ 12 ರವರೆಗೆ ವರದಿಯಾಗಿದೆ; ಮಂಡ್ಯ 22, ಕಲ್ಬುರ್ಗಿ 10, ಹಾಸನ 6, ಧಾರವಾಡ 4, ಯಾದಗಿರಿ 3, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದಲ್ಲಿ ತಲಾ ಎರಡು, ಕೋಲಾರ 3, ಉಡುಪಿ ಮತ್ತು ವಿಜಯಪುರದಲ್ಲಿ ತಲಾ ಒಂದು. ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 1146 ಕ್ಕೆ ತಲುಪಿವೆ. ಸಕ್ರಿಯ ಪ್ರಕರಣಗಳು: 611, ಚೇತರಿಸಿಕೊಂಡವರು: 497, ಸಾವು: 37.
 • ಆಂಧ್ರಪ್ರದೇಶ: ನೆರೆಯ ರಾಜ್ಯಗಳ ವಲಸೆ ಕಾರ್ಮಿಕರಿಗೆ ವೆಚ್ಚ ರಹಿತ ಪ್ರಯಾಣ ಸೌಲಭ್ಯವನ್ನು ರಾಜ್ಯ ಒದಗಿಸುತ್ತಿದೆ. ವಲಸೆ ಕಾರ್ಮಿಕರನ್ನು ಸ್ಥಳಾಂತರಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ಲಾಠಿ ಚಾರ್ಜ್ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ವೇತನ ಕಡಿತದ ವಿರುದ್ಧ ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಮಾರ್ಚ್ನಿಂದ ಸರ್ಕಾರಿ ನೌಕರರಿಗೆ ಸಂಪೂರ್ಣ ವೇತನವನ್ನು ಪಾವತಿಸಬೇಕು ಮತ್ತು ನಿಟ್ಟಿನಲ್ಲಿ ಸರ್ಕಾರಿ ಆದೇಶ ಅಮಾನತುಗೊಳಿಸಬೇಕು ಎಂದು ಕೋರಲಾಗಿದೆ. ಕಳೆದ 24 ಗಂಟೆಗಳಲ್ಲಿ 25 ಹೊಸ ಪ್ರಕರಣಗಳು, ಒಂದು ಸಾವು 103 ಬಿಡುಗಡೆ ವರದಿಯಾಗಿದೆ. ಒಟ್ಟು ಪ್ರಕರಣಗಳು: 2230. ಸಕ್ರಿಯ: 747, ಚೇತರಿಕೆ: 1433, ಸಾವು: 50. ಇತರ ರಾಜ್ಯಗಳಿಂದ ಹಿಂದಿರುಗಿದವರಲ್ಲಿ 127 ಜನರಲ್ಲಿ ಸೋಂಕು ದೃಢಪಟ್ಟಿದೆ. ಹೆಚ್ಚು ಸೋಂಕಿನ ಪ್ರಕರಣಗಳಲ್ಲಿ ಪ್ರಮುಖವಾಗಿರುವ ಜಿಲ್ಲೆಗಳು: ಕರ್ನೂಲ್ (611), ಗುಂಟೂರು (417) ಮತ್ತು ಕೃಷ್ಣ (367).
 • ತೆಲಂಗಾಣ: ವಂದೇ ಭಾರತ್ ಅಭಿಯಾನದ ಅಂಗವಾಗಿ ಭಾನುವಾರ ಮುಂಜಾನೆ 4.45 ಕ್ಕೆ ಬಂದ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ 168 ಭಾರತೀಯ ಪ್ರಯಾಣಿಕರು ಚಿಕಾಗೊದಿಂದ (ಯುಎಸ್) ಹೈದರಾಬಾದ್ಗೆ ಮರಳಿದ್ದಾರೆ. ವಾರದುದ್ದಕ್ಕೂ ಕಂಡುಬರುವಂತೆ ಕೋವಿಡ್ -19 ಗ್ರಾಫ್ ತೆಲಂಗಾಣದಲ್ಲಿ 1,509 ಕ್ಕೆ ಏರಿದೆ. ಇತ್ತೀಚಿನ ದಿನಗಳಲ್ಲಿ ತೆಲಂಗಾಣಕ್ಕೆ ಮರಳಿದ 52 ವಲಸೆ ಕಾರ್ಮಿಕರನ್ನು ಈವರೆಗೆ ಸೋಂಕಿಗಾಗಿ ಪರೀಕ್ಷಿಸಲಾಗಿದೆ.

 

ಪಿ ಐ ಬಿ ವಾಸ್ತವ ಪರೀಶೀಲನೆ

***(Release ID: 1624791) Visitor Counter : 33