ಹಣಕಾಸು ಸಚಿವಾಲಯ

ಸ್ವಾವಲಂಬಿ ಭಾರತ ಅಭಿಯಾನದಡಿಯಲ್ಲಿ ಏಳು ಕ್ಷೇತ್ರಗಳಲ್ಲಿ ಸರ್ಕಾರಿ ಸುಧಾರಣೆಗಳು ಹಾಗೂ ಅವುಗಳನ್ನು ಸಾಧ್ಯವಾಗಿಸುವ ಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು

Posted On: 17 MAY 2020 3:11PM by PIB Bengaluru

ಸ್ವಾವಲಂಬಿ ಭಾರತ ಅಭಿಯಾನದಡಿಯಲ್ಲಿ ಏಳು ಕ್ಷೇತ್ರಗಳಲ್ಲಿ ಸರ್ಕಾರಿ ಸುಧಾರಣೆಗಳು ಹಾಗೂ ಅವುಗಳನ್ನು ಸಾಧ್ಯವಾಗಿಸುವ ಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು

 

ಪ್ರಮುಖ ಅಂಶಗಳು

  • ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಮನ್ರೇಗಾ ಯೋಜನೆಯಡಿ ಹಂಚಿಕೆಯಲ್ಲಿ 40,000 ಕೋಟಿ ರೂ. ಹೆಚ್ಚಳ
  • ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಭಾರತವನ್ನು ಸನ್ನದ್ಧಗೊಳಿಸಲು  ಸಾರ್ವಜನಿಕ ಆರೋಗ್ಯ ಮತ್ತು ಇತರ ಆರೋಗ್ಯ ಸುಧಾರಣೆಗಳಲ್ಲಿ ಹೆಚ್ಚಿನ ಹೂಡಿಕೆ
  • ಕೋವಿಡ್ ನಂತರ ಈಕ್ವಿಟಿಯೊಂದಿಗೆ ತಂತ್ರಜ್ಞಾನ ಚಾಲಿತ ಶಿಕ್ಷಣ
  • ಐಬಿಸಿ ಸಂಬಂಧಿತ ಕ್ರಮಗಳ ಮೂಲಕ  ಸುಗಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವುದು
  • ಕಂಪನಿಗಳ ಕಾಯ್ದೆಯ ಡಿಫಾಲ್ಟ್ ಗಳನ್ನುಅಪರಾಧವಾಗಿ ಪರಿಗಣಿಸದಿರುವುದು
  • ಕಾರ್ಪೊರೇಟ್ಸಂಸ್ಥೆಗಳಿಗೆ ವ್ಯವಹಾರವನ್ನು ಸುಲಭಗೊಳಿಸುವುದು
  • ಹೊಸ, ಸ್ವಾವಲಂಬಿ ಭಾರತಕ್ಕಾಗಿ ಸಾರ್ವಜನಿಕ ವಲಯದ ಉದ್ಯಮ ನೀತಿ
  • 2020-21 ನೇ ಸಾಲಿಗೆ ರಾಜ್ಯಗಳ ಸಾಲ ಮಿತಿಗಳು ಶೇ.3 ರಿಂದ ಶೇ.5 ಕ್ಕೆ ಹೆಚ್ಚಳ ಮತ್ತು ರಾಜ್ಯ ಮಟ್ಟದ ಸುಧಾರಣೆಗಳಿಗೆ ಪ್ರೋತ್ಸಾಹ

 

ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮೇ, 12 2020 ರಂದು 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್ ಘೋಷಿಸಿದ್ದಾರೆ - ಇದು ಭಾರತದ ಜಿಡಿಪಿಯ ಶೇ.10 ಕ್ಕೆ ಸಮಾನವಾಗಿದೆ. ಅವರು आत्मनिर्भर भारत अभियान ಅಥವಾ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸ್ಪಷ್ಟ ಕರೆ ನೀಡಿದರು. ಸ್ವಾವಲಂಬಿ ಭಾರತದ ಐದು ಸ್ತಂಭಗಳಾದ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಅವರು ವಿವರಿಸಿದ್ದರು.

ಸ್ವಾವಲಂಬಿ ಬಾರತ ಅಭಿಯಾನದಡಿಯಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಉತ್ತೇಜನ ಪ್ಯಾಕೇಜ್ ಘೋಷಣೆಯ 5 ನೇ ಪತ್ರಿಕಾಗೋಷ್ಠಿಯಲ್ಲಿಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರಮಲಾ ಸೀತಾರಾಮನ್ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2020 ಮೇ 12 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನೀಡಿದ ದೃಷ್ಟಿಕೋನವನ್ನು ಉಲ್ಲೇಖಿಸಿದರು. ಪ್ರಧಾನ ಮಂತ್ರಿಯವರು ಹೇಳಿರುವ ಹಾಗೆ ದೇಶ ಈಗ ನಿರ್ಣಾಯಕ ಘಟ್ಟದಲ್ಲಿದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಕೋವಿಡ್-19 ಸಾಂಕ್ರಾಮಿಕವು ಒಂದು ಸಂದೇಶದೊಂದಿಗೆ ಅವಕಾಶವನ್ನೂ ತಂದಿದೆ. ನಾವೀಗ ಸ್ವಾವಲಂಬಿ ಭಾರತ ನಿರ್ಮಿಸಬೇಕಾಗಿದೆ ಎಂದು ಅವರು ಹೇಳಿದರು.

ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಬೀತುಪಡಿಸುವ ಸಲುವಾಗಿ, ಭೂಮಿ, ಕಾರ್ಮಿಕ, ದ್ರವ್ಯತೆ ಮತ್ತು ಕಾನೂನುಗಳೆಲ್ಲವನ್ನೂ ಆತ್ಮ ನಿರ್ಭರ ಭಾರತ್ ಪ್ಯಾಕೇಜ್ನಲ್ಲಿ ಒತ್ತಿ ಹೇಳಲಾಗಿದೆ ಎಂದು ಸೀತಾರಾಮನ್ ಹೇಳಿದರು. ಬಿಕ್ಕಟ್ಟು ಮತ್ತು ಸವಾಲು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಒಂದು ಅವಕಾಶವಾಗಿದೆ ಎಂದು ಅವರು ತಿಳಿಸಿದರು.

ಸುಧಾರಣೆಗಳ ಸರಣಿ ಪ್ರಕಟಣೆ ಇಂದು ಮುಂದುವರೆದಿದೆ ಎಂದು ಹಣಕಾಸು ಸಚಿವರು ಹೇಳಿದರು. ಲಾಕ್ ಡೌನ್ ಘೋಷಣೆಯಾದ ಕೂಡಲೇ ನಾವು ಪ್ರಧಾನಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಪ್ರಕಟಿಸಿದ್ದೇವೆ. 1.70 ಲಕ್ಷ ಕೋಟಿ ರೂ.ಗಳ ಪಿಎಂಜಿಕೆಪಿಯ ಭಾಗವಾಗಿ, ಉಚಿತ ಆಹಾರ ಧಾನ್ಯಗಳ ವಿತರಣೆ, ಮಹಿಳೆಯರು ಮತ್ತು ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ನಗದು ಪಾವತಿ ಇತ್ಯಾದಿಗಳನ್ನು ಸರ್ಕಾರ ಘೋಷಿಸಿತು. ಪ್ಯಾಕೇಜ್ ತ್ವರಿತ ಅನುಷ್ಠಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪಿಎಂಜಿಕೆಪಿ ಅಡಿಯಲ್ಲಿ ಸುಮಾರು 41 ಕೋಟಿ ಬಡವರು 52,608 ಕೋಟಿ ರೂ. ಹಣಕಾಸು ನೆರವು ಪಡೆದಿದ್ದಾರೆ. ಜನರಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮಾಡಲು ಪಿಎಂಜಿಕೆಪಿಯು ತಂತ್ರಜ್ಞಾನವನ್ನು ಬಳಸಿಕೊಂಡಿದೆ ಎಂದು ಹಣಕಾಸು ಸಚಿವರು ಹೇಳಿದರು.

ಇದಲ್ಲದೆ, 84 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ರಾಜ್ಯಗಳು ಪಡೆದುಕೊಂಡಿವೆ ಮತ್ತು 3.5 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ವಿವಿಧ ರಾಜ್ಯಗಳಿಗೆ ರವಾನಿಸಲಾಗಿದೆ. ಇದಕ್ಕಾಗಿ, ಸವಾಲುಗಳ ನಡುವೆಯೂ ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಿದ ಎಫ್ಸಿಐ, ನಾಫೆಡ್ ಮತ್ತು ರಾಜ್ಯಗಳ ಒಗ್ಗಟ್ಟಿನ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು,

ಸರ್ಕಾರಿ ಸುಧಾರಣೆಗಳು ಹಾಗೂ ಅವುಗಳನ್ನು ಸಾಧ್ಯವಾಗಿಸುವ ಕ್ರಮಗಳನ್ನು ಕುರಿತಂತೆ ಐದನೇ ಮತ್ತು ಕೊನೆಯ ಹಂತದ ಕ್ರಮಗಳಲ್ಲಿ ಪ್ರಕಟಿಸಿದ ಶ್ರೀಮತಿ ಸೀತಾರಾಮನ್ ಉದ್ಯೋಗ ಸೃಷ್ಟಿ, ವ್ಯವಹಾರಗಳಿಗೆ ಬೆಂಬಲ, ಸುಗಮ ವ್ಯವಹಾರ, ಮತ್ತು ರಾಜ್ಯ ಸರ್ಕಾರಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಏಳು ಕ್ರಮಗಳನ್ನು ವಿವರಿಸಿದರು,

1.         ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಎಂಜಿಎನ್ಆರ್ಇಜಿಎಸ್ಹಂಚಿಕೆಯಲ್ಲಿ 40,000 ಕೋಟಿ ರೂ. ಹೆಚ್ಚಳ

ಸರ್ಕಾರವು ಈಗ ಎಂಜಿಎನ್ಆರ್ಇಜಿಎಸ್ ಅಡಿಯಲ್ಲಿ ಹೆಚ್ಚುವರಿಯಾಗಿ 40,000 ಕೋಟಿ ರೂ. ಗಳನ್ನು ಹಂಚಿಕೆ ಮಾಡಲಿದೆ. ಮುಂಗಾರು ಋತುವಿನಲ್ಲಿ ಸ್ವಂತ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರು ಸೇರಿದಂತೆ ಹೆಚ್ಚಿನ ಕೆಲಸದ ಅಗತ್ಯವನ್ನು ಪರಿಹರಿಸಲು ಒಟ್ಟು 300 ಕೋಟಿ ವ್ಯಕ್ತಿ ದಿನಗಳನ್ನು ಉತ್ಪಾದಿಸಲು ಇದು ಸಹಾಯ ಮಾಡುತ್ತದೆ. ನೀರಿನ ಸಂರಕ್ಷಣಾ ಸ್ವತ್ತುಗಳು ಸೇರಿದಂತೆ ಹೆಚ್ಚು ಬಾಳಿಕೆ ಬರುವ ಮತ್ತು ಜೀವನೋಪಾಯದ ಸ್ವತ್ತುಗಳನ್ನು ಸೃಷ್ಟಿಸುವುದರಿಂದ ಗ್ರಾಮೀಣ ಆರ್ಥಿಕತೆಯ ವೃದ್ಧಿಯಾಗುತ್ತದೆ.

2.         ಆರೋಗ್ಯ ಸುಧಾರಣೆಗಳು ಮತ್ತು ಉಪಕ್ರಮಗಳು

ತಳಮಟ್ಟದ ಆರೋಗ್ಯ ಸಂಸ್ಥೆಗಳಲ್ಲಿ ಹೂಡಿಕೆಯ ಮೂಲಕ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಹೆಚ್ಚಿಸಲು ಮೂಲಕ ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಬ್ಲಾಕ್ಗಳನ್ನು ಸ್ಥಾಪಿಸುವುದು ಮತ್ತು ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸಲು ಎಲ್ಲಾ ಜಿಲ್ಲೆಗಳು, ಬ್ಲಾಕ್ ಮಟ್ಟದ ಲ್ಯಾಬ್ಗಳು ಮತ್ತು ಸಾರ್ವಜನಿಕ ಆರೋಗ್ಯ ಘಟಕಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಲ್ಯಾಬ್ ನೆಟ್ವರ್ಕ್ ಮತ್ತು ಕಣ್ಗಾವಲುಗಳ ಮೂಲಕ ಬಲಪಡಿಸಲಾಗುವುದು. ಇದಲ್ಲದೆ, ಐಸಿಎಂಆರ್ ಆರೋಗ್ಯಕ್ಕಾಗಿ ರಾಷ್ಟ್ರೀಯ ಸಾಂಸ್ಥಿಕ ವೇದಿಕೆಯು ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅಡಿಯಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ನೀಲನಕ್ಷೆಯನ್ನು ಅನುಷ್ಠಾನಗೊಳಿಸುತ್ತದೆ.

3.         ಕೋವಿಡ್ ನಂತರ ಈಕ್ವಿಟಿಯೊಂದಿಗೆ ತಂತ್ರಜ್ಞಾನ ಚಾಲಿತ ಶಿಕ್ಷಣ

ಡಿಜಿಟಲ್/ಆನ್ಲೈನ್ ಶಿಕ್ಷಣಕ್ಕೆ ಮಲ್ಟಿ-ಮೋಡ್ ಪ್ರವೇಶದ ಕಾರ್ಯಕ್ರಮ PM eVIDYA ವನ್ನು ಕೂಡಲೇ ಪ್ರಾರಂಭಿಸಲಾಗುವುದು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳಿಗೆ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಮಾನಸಿಕ-ಸಾಮಾಜಿಕ ಬೆಂಬಲಕ್ಕಾಗಿ ಮನೋದರ್ಪಣ್ ಉಪಕ್ರಮವನ್ನು ತಕ್ಷಣವೇ ಪ್ರಾರಂಭಿಸಲಾಗುವುದು. ಶಾಲೆ, ಬಾಲ್ಯ ಮತ್ತು ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಪಠ್ಯಕ್ರಮ ಮತ್ತು ಶಿಕ್ಷಣ ಚೌಕಟ್ಟನ್ನು ಸಹ ಪ್ರಾರಂಭಿಸಲಾಗುವುದು. 2025 ವೇಳೆಗೆ ಪ್ರತಿ ಮಗುವು 5 ನೇ ತರಗತಿಯಲ್ಲಿ ಕಲಿಕೆಯ ಮಟ್ಟವನ್ನು ಮತ್ತು ಫಲಿತಾಂಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಅಡಿಪಾಯ ಸಾಕ್ಷರತೆ ಮತ್ತು ಸಂಖ್ಯಾ ಮಿಷನ್ ಅನ್ನು ಡಿಸೆಂಬರ್ 2020 ರೊಳಗೆ ಪ್ರಾರಂಭಿಸಲಾಗುವುದು.

4.         ಐಬಿಸಿ ಸಂಬಂಧಿತ ಕ್ರಮಗಳ ಮೂಲಕ ಸುಗಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವುದು

ದಿವಾಳಿತನ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಕನಿಷ್ಠ ಮಿತಿಯನ್ನು 1 ಕೋಟಿ ರೂ.ಗೆ (ರೂ. 1 ಲಕ್ಷದಿಂದ, ಇದು ಹೆಚ್ಚಾಗಿ ಎಂಎಸ್ಎಂಇಗಳಿಗೆ ರಕ್ಷಣೆ ನೀಡುತ್ತದೆ) ಹೆಚ್ಚಿಸಲಾಗಿದೆ. ಕೋಡ್ ಸೆಕ್ಷನ್ 240 ಅಡಿಯಲ್ಲಿ ಎಂಎಸ್ಎಂಇಗಳಿಗಾಗಿ ವಿಶೇಷ ದಿವಾಳಿತನ ಪರಿಹಾರದ ಚೌಕಟ್ಟನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಸಾಂಕ್ರಾಮಿಕ ಪರಿಸ್ಥಿತಿಗೆ ಅನುಗುಣವಾಗಿ ಒಂದು ವರ್ಷದವರೆಗೆ ಹೊಸ ದಿವಾಳಿತನದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ದಿವಾಳಿತನ ಪ್ರಕ್ರಿಯೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೋಡ್ ಅಡಿಯಲ್ಲಿ "ಡೀಫಾಲ್ಟ್" ವ್ಯಾಖ್ಯಾನದಿಂದ ಕೋವಿಡ್-19 ಸಂಬಂಧಿತ ಸಾಲವನ್ನು ಹೊರಗಿಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗುವುದು.

5.         ಕಂಪನಿಗಳ ಕಾಯ್ದೆಯ ಡಿಫಾಲ್ಟ್ ಗಳನ್ನುಅಪರಾಧವಾಗಿ ಪರಿಗಣಿಸದಿರುವುದು

ಸಿಎಸ್ಆರ್ ವರದಿಯಲ್ಲಿನ ನ್ಯೂನತೆಗಳು, ಮಂಡಳಿಯ ವರದಿಯಲ್ಲಿನ ಅಸಮರ್ಪಕತೆಗಳು, ಡೀಫಾಲ್ಟ್ಗಳನ್ನು ಸಲ್ಲಿಸುವುದು, ಎಜಿಎಂ ನಡೆಸಲು ವಿಳಂಬ ಮುಂತಾದ ಸಣ್ಣ ತಾಂತ್ರಿಕ ಮತ್ತು ಕಾರ್ಯವಿಧಾನದ ಡೀಫಾಲ್ಟ್ಗಳನ್ನು ಒಳಗೊಂಡ ಕಂಪನಿಗಳ ಕಾಯ್ದೆ ಉಲ್ಲಂಘನೆಗಳನ್ನು ಅಪರಾಧವಾಗಿ ಪರಿಗಣಿಸುವುದಿಲ್ಲ. ತಿದ್ದುಪಡಿಗಳು ಕ್ರಿಮಿನಲ್ ನ್ಯಾಯಾಲಯಗಳು ಮತ್ತು ಎನ್ಸಿಎಲ್ಟಿಯನ್ನು ಅಡಚಣೆ ಮುಕ್ತ ಮಾಡುತ್ತವೆ. 7 ಸಂಯುಕ್ತ ಅಪರಾಧಗಳನ್ನು ಒಟ್ಟಾರೆಯಾಗಿ ಕೈಬಿಡಲಾಗುವುದು ಮತ್ತು ಐದನ್ನು ಪರ್ಯಾಯ ಚೌಕಟ್ಟಿನಡಿಯಲ್ಲಿ ವ್ಯವಹರಿಸಬೇಕು.

6.         ಕಾರ್ಪೊರೇಟ್ಸಂಸ್ಥೆಗಳಿಗೆ ಸುಗಮ ವ್ಯಾಪಾರ

ಪ್ರಮುಖ ಸುಧಾರಣೆಗಳು:

  • ಅನುಮತಿ ನೀಡುವ ವಿದೇಶಿ ನ್ಯಾಯವ್ಯಾಪ್ತಿಯಲ್ಲಿ ಭಾರತೀಯ ಸಾರ್ವಜನಿಕ ಕಂಪನಿಗಳಿಂದ ಸೆಕ್ಯೂರಿಟಿಗಳ ನೇರ ಲಿಸ್ಟಿಂಗ್.
  • ಷೇರು ವಿನಿಮಯ ಕೇಂದ್ರಗಳಲ್ಲಿ ಎನ್ಸಿಡಿಗಳನ್ನು ಪಟ್ಟಿ ಮಾಡುವ ಖಾಸಗಿ ಕಂಪನಿಗಳನ್ನು ಪಟ್ಟಿಮಾಡಿದ ಕಂಪನಿಗಳೆಂದು ಪರಿಗಣಿಸಬಾರದು.
  • ಕಂಪೆನಿಗಳ ಕಾಯ್ದೆ, 2013 ರಲ್ಲಿ, ಕಂಪೆನಿ ಕಾಯ್ದೆ, 1956 ಭಾಗ IXA (ನಿರ್ಮಾಪಕ ಕಂಪನಿಗಳು) ನಿಬಂಧನೆಗಳನ್ನು. ಸೇರಿಸುವುದು.
  • ಎನ್ಸಿಎಎಲ್ಟಿಗೆ ಹೆಚ್ಚುವರಿ / ವಿಶೇಷ ಬೆಂಚುಗಳನ್ನು ರಚಿಸುವ ಅಧಿಕಾರ
  • ಸಣ್ಣ ಕಂಪನಿಗಳು, ಏಕ ವ್ಯಕ್ತಿ ಕಂಪನಿಗಳು, ನಿರ್ಮಾಪಕ ಕಂಪನಿಗಳು ಮತ್ತು ಸ್ಟಾರ್ಟ್ ಅಪ್ಗಳ ಎಲ್ಲಾ ಡೀಫಾಲ್ಟ್ಗಳಿಗೆ ಕಡಿಮೆ ದಂಡ.

7. ಹೊಸ, ಸ್ವಾವಲಂಬಿ ಭಾರತಕ್ಕಾಗಿ ಸಾರ್ವಜನಿಕ ವಲಯದ ಉದ್ಯಮ ನೀತಿ

ಸರ್ಕಾರವು ಹೊಸ ನೀತಿಯನ್ನು ಪ್ರಕಟಿಸುತ್ತದೆ

  • ಸಾರ್ವಜನಿಕ ಹಿತಾಸಕ್ತಿಗಾಗಿ ಪಿಎಸ್ಇಗಳ ಉಪಸ್ಥಿತಿಯ ಅಗತ್ಯವಿರುವ ಕಾರ್ಯತಂತ್ರದ ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ
  • ಕಾರ್ಯತಂತ್ರದ ಕ್ಷೇತ್ರಗಳಲ್ಲಿ, ಕನಿಷ್ಠ ಒಂದು ಉದ್ಯಮವು ಸಾರ್ವಜನಿಕ ವಲಯದಲ್ಲಿ ಉಳಿಯುತ್ತದೆ ಆದರೆ ಖಾಸಗಿ ವಲಯಕ್ಕೂ ಅವಕಾಶವಿರುತ್ತದೆ
  • ಇತರ ಕ್ಷೇತ್ರಗಳಲ್ಲಿ, ಪಿಎಸ್ಇಗಳನ್ನು ಖಾಸಗೀಕರಣಗೊಳಿಸಲಾಗುತ್ತದೆ (ಕಾರ್ಯಸಾಧ್ಯತೆ ಇತ್ಯಾದಿಗಳ ಆಧಾರದ ಮೇಲೆ)
  • ವ್ಯರ್ಥ ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಲು, ಕಾರ್ಯತಂತ್ರದ ಕ್ಷೇತ್ರಗಳಲ್ಲಿನ ಉದ್ಯಮಗಳ ಸಂಖ್ಯೆ ಸಾಮಾನ್ಯವಾಗಿ ಒಂದರಿಂದ ನಾಲ್ಕು ಆಗಿರುತ್ತದೆ; ಉಳಿದವನ್ನು ಖಾಸಗೀಕರಣಗೊಳಿಸಲಾಗುತ್ತದೆ / ವಿಲೀನಗೊಳಿಸಲಾಗುತ್ತದೆ / ಹಿಡುವಳಿ ಕಂಪನಿಗಳ ಅಡಿಯಲ್ಲಿ ತರಲಾಗುತ್ತದೆ.

8. ರಾಜ್ಯ ಸರ್ಕಾರಗಳಿಗೆ ಬೆಂಬಲ

2020-21ಕ್ಕೆ ಮಾತ್ರ ರಾಜ್ಯಗಳ ಸಾಲ ಮಿತಿಯನ್ನು ಶೇ.3 ರಿಂದ ಶೇ.5 ಕ್ಕೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ. ಇದು ರಾಜ್ಯಗಳಿಗೆ ಹೆಚ್ಚುವರಿಯಾಗಿ 4.28 ಲಕ್ಷ ಕೋಟಿ ರೂ. ಸಂಪನ್ಮೂಲವನ್ನು ಒದಗಿಸುತ್ತದೆ. ಸಾಲ ಪಡೆಯುವ ಭಾಗವನ್ನು ನಿರ್ದಿಷ್ಟ ಸುಧಾರಣೆಗಳೊಂದಿಗೆ (ಹಣಕಾಸು ಆಯೋಗದ ಶಿಫಾರಸುಗಳನ್ನು ಒಳಗೊಂಡಂತೆ) ಸಂಪರ್ಕಿಸಲಾಗುವುದು. ಸುಧಾರಣಾ ಸಂಪರ್ಕವು ನಾಲ್ಕು ಕ್ಷೇತ್ರಗಳಲ್ಲಿರುತ್ತದೆ: ‘ಒನ್ ನೇಷನ್ ಒನ್ ರೇಷನ್ ಕಾರ್ಡ್ಅನ್ನು ಸಾರ್ವತ್ರಿಕಗೊಳಿಸುವುದು, ವ್ಯವಹಾರವನ್ನು ಸುಲಭಗೊಳಿಸುವುದು, ವಿದ್ಯುತ್ ವಿತರಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆದಾಯ. ಒಂದು ನಿರ್ದಿಷ್ಟ ಯೋಜನೆಯನ್ನು ವೆಚ್ಚ ಇಲಾಖೆಯಿಂದ ಕೆಳಗಿನ ಮಾದರಿಯಲ್ಲಿ ಪ್ರಕಟಿಸಲಾಗುತ್ತದೆ:

  • ಶೇ.0.50 ಬೇಷರತ್ತಾದ ಹೆಚ್ಚಳ
  • ಶೇ. 1 ರಲ್ಲಿ ಶೇ.0.25 4 ಕಂತುಗಳು, ಪ್ರತಿ ಕಂತನ್ನೂಸ್ಪಷ್ಟವಾಗಿ ನಿರ್ದಿಷ್ಟಪಡಿಸಿದ, ಅಳೆಯಬಹುದಾದ ಮತ್ತು ಕಾರ್ಯಸಾಧ್ಯವಾದ ಸುಧಾರಣಾ ಕ್ರಮಗಳೊಂದಿಗೆ ಸಂಪರ್ಕಿಸಲಾಗಿದೆ.
  • ನಾಲ್ಕು ಸುಧಾರಣಾ ಕ್ಷೇತ್ರಗಳಲ್ಲಿ ಕನಿಷ್ಠ ಮೂರರಲ್ಲಿ ಮೈಲಿಗಲ್ಲುಗಳನ್ನು ಸಾಧಿಸಿದರೆ ಮತ್ತೆ ಶೇ.0.50

ಸ್ವಾವಲಂಬಿ ಭಾರತಕ್ಕಾಗಿ ಇದುವರೆಗೆ ನೀಡಿರುವ ಉತ್ತೇಜನಾ ಕ್ರಮಗಳ ವಿವರಗಳನ್ನು ಹಣಕಾಸು ಸಚಿವರು ಇಂದು ಮುಕ್ತಾಯಗೊಳಿಸಿದರು.

***


(Release ID: 1624728) Visitor Counter : 3821