ರಕ್ಷಣಾ ಸಚಿವಾಲಯ

ಸಮುದ್ರ ಸೇತು ಕಾರ್ಯಾಚರಣೆ – ಎರಡನೇ ಹಂತಕ್ಕಾಗಿ ಮಾಲ್ದೀವ್ಸ್ ಗೆ ಮರಳಿದ ಐ.ಎನ್.ಎಸ್. ಜಲಾಶ್ವ

Posted On: 14 MAY 2020 6:15PM by PIB Bengaluru

ಸಮುದ್ರ ಸೇತು ಕಾರ್ಯಾಚರಣೆ ಎರಡನೇ ಹಂತಕ್ಕಾಗಿ ಮಾಲ್ದೀವ್ಸ್ ಗೆ ಮರಳಿದ .ಎನ್.ಎಸ್. ಜಲಾಶ್ವ

 

ಎರಡನೆ ಹಂತದ ಸಮುದ್ರ ಸೇತು ಕಾರ್ಯಾಚರಣೆಗಾಗಿ ಭಾರತೀಯ ನೌಕಾ ಪಡೆಯ ಹಡಗು ಜಲಾಶ್ವ ಮಾಲ್ದೀವ್ಸ್ ಮಾಲೆಗೆ ಮರಳಿದೆ. ವಿದೇಶೀ ರಾಷ್ಟ್ರಗಳ ದಡದಿಂದ ಭಾರತೀಯರನ್ನು ಕರೆತರಲು ಸಮುದ್ರ ಸೇತು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. 20 ಮೇ 15 ರಂದು ಬೆಳಗ್ಗಿನ ಜಾವ ಹಡಗು ಮಾಲೆ ಬಂದರನ್ನು ತಲುಪಲಿದೆ ಮತ್ತು ಈಗಾಗಲೆ ಮಾಲ್ದೀವ್ಸ್ ಭಾರತೀಯ ರಾಯಭಾರ ಕಚೇರಿಯಲ್ಲಿ ನೊಂದಾಯಿಸಿದ ಭಾರತೀಯ ನಾಗರಿಕರು ಹಡಗನ್ನೇರುವ ಪ್ರಕ್ರಿಯೆ ನಡೆಯಲಿದೆ. ತನ್ನ ಎರಡನೆಯ ಪ್ರಯಾಣದಲ್ಲಿ .ಎನ್.ಎಸ್. ಜಲಾಶ್ವವು 700 ಭಾರತೀಯ ನಾಗರಿಕರನ್ನು ಹೊತ್ತುಕೊಂಡು ಮೇ 15 ರಾತ್ರಿ ಕೊಚ್ಚಿಗೆ ಹೊರಡಲಿದೆ.

ಮೊದಲು, 20 ಮೇ 12 ರಂದು ಕೊಚ್ಚಿಗೆ 698 ಭಾರತೀಯರನ್ನು ಯಶಸ್ವಿಯಾಗಿ ಕರೆತಂದ ಬಳಿಕ .ಎನ್.ಎಸ್. ಜಲಾಶ್ವವು ಎರಡನೆ ಹಂತದ ಕಾರ್ಯಾಚರಣೆಗಾಗಿ ಸಿದ್ದತಾ ಚಟುವಟಿಕೆಗಳಲ್ಲಿ ನಿರತವಾಗಿತ್ತು. ಇದರಲ್ಲಿ ಕ್ರಿಮಿನಾಶಗೊಳಿಸುವಿಕೆ ಮತ್ತು ಹಿಂದಿನ ಪ್ರಯಾಣದಲ್ಲಿ ಭಾರತಕ್ಕೆ ಮರಳಿದ್ದ ಪ್ರಯಾಣಿಕರು ಬಳಸಿದ್ದ ಪ್ರದೇಶಕ್ಕೆ ವಿಶೇಷ ಒತ್ತು ಕೊಟ್ಟು ಇಡೀಯ ಹಡಗನ್ನು ಸ್ಯಾನಿಟೈಸ್ ಮಾಡುವುದೂ ಸೇರಿತ್ತು.

ಹಡಗು ಮಾಲೆಯಲ್ಲಿ ಲಂಗರು ಹಾಕಲಿದೆ ಮತ್ತು 20 ಮೇ 15 ರಂದು ಭಾರತೀಯರ ಎರಡನೆ ತಂಡದ ಹಡಗು ಏರುವ ಪ್ರಕ್ರಿಯೆಯನ್ನು ಆರಂಭಿಸಲಿದೆ. ಇದರಲ್ಲಿ ಸುಮಾರು 100 ಮಂದಿ ಮಹಿಳೆಯರು ಮತ್ತು ಮಕ್ಕಳು ಸಹಿತ 700 ಭಾರತೀಯರು ಸ್ವದೇಶಕೆ ಬರಲಿದ್ದಾರೆ. ಸ್ಥಳಾಂತರಗೊಳ್ಳಲಿರುವ ಭಾರತೀಯರ ವೈದ್ಯಕೀಯ ತಪಾಸಣೆ ನಡೆಸಿ , ಗುರುತಿನ ಕಾರ್ಡ್ ನೀಡಿ ಅವರ ಬ್ಯಾಗೇಜುಗಳನ್ನು ಸ್ಯಾನಿಟೈಸ್ ಮಾಡಿದ ಬಳಿಕವಷ್ಟೇ ಹಡಗನ್ನೇರಲು ಅವಕಾಶ ಕೊಡಲಾಗುತ್ತದೆ.

***



(Release ID: 1624016) Visitor Counter : 174