ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷವರ್ಧನ್ 32ನೇ ಕಾಮನ್ ವೆಲ್ತ್ ಆರೋಗ್ಯ ಮಂತ್ರಿಗಳ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು

Posted On: 14 MAY 2020 6:36PM by PIB Bengaluru

ಡಾ. ಹರ್ಷವರ್ಧನ್ 32ನೇ ಕಾಮನ್ ವೆಲ್ತ್ ಆರೋಗ್ಯ ಮಂತ್ರಿಗಳ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು

ಕೋವಿಡ್-19 ನಿರ್ವಹಣೆಗೆ ಭಾರತ ಕೈಗೊಂಡ ಸಮಯೋಚಿತ, ಶ್ರೇಣೀಕೃತ ಮತ್ತು ಪೂರ್ವಭಾವಿ ಕ್ರಮಗಳನ್ನು ಎತ್ತಿ ತೋರಿಸುತ್ತದೆ

 

ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನಡೆದ 32ನೇ ಕಾಮನ್ ವೆಲ್ತ್ ಆರೋಗ್ಯ ಮಂತ್ರಿಗಳ ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ರವರು ಭಾಗವಹಿಸಿದ್ದರು. ಸಭೆಯ ವಿಷಯವೆಂದರೆ - ಒಂದು ಸಂಯೋಜಿತ ಕಾಮನ್ ವೆಲ್ತ್ ಕೋವಿಡ್-19 ಪ್ರತಿಸ್ಪಂದನೆಯನ್ನು ನೀಡುವುದು.

ಜಾಗತಿಕ ಸಭೆಯಲ್ಲಿ ಮಧ್ಯಸ್ಥಿಕೆಯ ಭಾಗವಾಗಿ ಕೇಂದ್ರ ಆರೋಗ್ಯ ಸಚಿವರ ಹೇಳಿಕೆ ಹೀಗಿದೆ :

ಮೊದಲಿಗೆ, ‘ಒಂದು ಸಂಯೋಜಿತ ಕಾಮನ್ ವೆಲ್ತ್ ಕೋವಿಡ್-19 ಪ್ರತಿಸ್ಪಂದನೆಯನ್ನು ನೀಡುವಾಗ’, ಕೋವಿಡ್-19ರಿಂದ ಉಂಟಾದ ಪ್ರಾಣಹಾನಿ ಬಗ್ಗೆ ನನ್ನ ಆಳವಾದ ಸಂತಾಪ ಮತ್ತು ಕಳವಳವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಹಲವಾರು ಮುಂಚೂಣಿ ಆರೋಗ್ಯ ಸೇವಾ ಪೂರೈಕೆದಾರರು ಮತ್ತು ಇತರ ನಾಗರಿಕ ಸಂಸ್ಥೆಗಳ ಅಪಾರ ಕೊಡುಗೆಯನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ಉನ್ನತ ಮಟ್ಟದ ರಾಜಕೀಯ ಬದ್ಧತೆಯೊಂದಿಗೆ ಭಾರತವು ಕೋವಿಡ್-19 ನಿರ್ವಹಣೆಯನ್ನು ಕೈಗೆತ್ತಿಕೊಂಡಿದೆ, ಅವರ ಮಾರ್ಗದರ್ಶನದಲ್ಲಿ, ಕೋವಿಡ್ -19 ಗೆ ನಮ್ಮ ಪ್ರತಿಕ್ರಿಯೆ ಸಕ್ರಿಯ, ಪೂರ್ವಭಾವಿ ಮತ್ತು ಶ್ರೇಣೀಕೃತವಾಗಿದೆ.

ಪ್ರವೇಶದ ಹಂತಗಳಲ್ಲಿ ಕಣ್ಗಾವಲು, ವಿದೇಶದಲ್ಲಿ ನಮ್ಮ ಪ್ರಜೆಗಳನ್ನು ಸ್ಥಳಾಂತರಿಸುವುದು, ರೋಗಗಳ ಕಣ್ಗಾವಲು ಜಾಲದ ಮೂಲಕ ಸಮುದಾಯದಲ್ಲಿ ಕಣ್ಗಾವಲು, ಆರೋಗ್ಯ ಮೂಲಸೌಕರ್ಯಗಳ ಬಲಪಡಿಸುವಿಕೆ, ಆರೋಗ್ಯ ಸಿಬ್ಬಂದಿಯ ತರಬೇತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು, ಅಪಾಯದ ಬಗ್ಗೆ ಸಂವಹನ ಮತ್ತು ಸಮುದಾಯದ ಒಳಗೊಳ್ಳುವಿಕೆ ಸೇರಿದಂತೆ ಎಲ್ಲಾ ಅಗತ್ಯ ಮತ್ತು ಸಮಯೋಚಿತ ಕ್ರಮಗಳನ್ನು ಭಾರತವು ತನ್ನ ನಿರ್ವಹಣಾ ಪ್ರಯತ್ನಗಳ ಭಾಗವಾಗಿ.ಕೈಗೊಂಡಿದೆ.

ಸಾಂಕ್ರಾಮಿಕ ರೋಗವನ್ನು ಹರಡುವುದನ್ನು ತಡೆಯಲು ವಿಶ್ವದ ಅತಿದೊಡ್ಡ ಲಾಕ್ಡೌನ್ ಅನ್ನು ಕಾರ್ಯಗತಗೊಳಿಸುವಲ್ಲಿ, ರೋಗದ ಸ್ಫೋಟಕ ಬೆಳವಣಿಗೆಯನ್ನು ತಗ್ಗಿಸುವ ಮೂಲಕ ನಮ್ಮ ಆರೋಗ್ಯ ವ್ಯವಸ್ಥೆಯು ರೋಗದ ಬೆಳವಣಿಗೆಯನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವ ಮೂಲಕ ಜೀವಗಳನ್ನು ರಕ್ಷಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಅದೇ ಸಮಯದಲ್ಲಿ, ನಾವು ಜೀವಗಳನ್ನು ಮತ್ತು ಜೀವನೋಪಾಯವನ್ನು ಉಳಿಸುವ ಬಗ್ಗೆಯೂ ಎಚ್ಚರವಹಿಸುತ್ತೇವೆ ಮತ್ತು ಆದ್ದರಿಂದ ಎಲ್ಲಾ ಅಗತ್ಯ ಸೇವೆಗಳನ್ನು ಲಾಕ್ಡೌನ್ ವ್ಯಾಪ್ತಿಯಿಂದ ಹೊರಗಿಟ್ಟಿದ್ದೇವೆ.

ನಮ್ಮ ಪ್ರಧಾನ ಮಂತ್ರಿಯವರು ಆರ್ಥಿಕ ಚೇತರಿಕೆಗೆ ಬೆಂಬಲ ನೀಡಲು ಮತ್ತು ನಮ್ಮ ಜನಸಂಖ್ಯೆಯ ದುರ್ಬಲ ವರ್ಗವನ್ನು ಬೆಂಬಲಿಸಲು 265 ಶತಕೋಟಿ ಯುಎಸ್ ಡಾಲರ್ಗಳಿಗಿಂತ ಹೆಚ್ಚಿನ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ನಾವು ರೋಗವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಪ್ರದೇಶಗಳಲ್ಲಿ ಕ್ರಮೇಣ ನಿರ್ಬಂಧಗಳನ್ನು ಸಡಿಲಿಸುತ್ತಿದ್ದೇವೆ.

ಭವಿಷ್ಯದ ಸನ್ನದ್ಧತೆ, ಪ್ರತಿಕ್ರಿಯೆ ಮತ್ತು ಮರುಸ್ಥಾಪನೆಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ವಿಶೇಷವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಮುಖ ಸಾಮರ್ಥ್ಯಗಳನ್ನು ನಿರ್ಮಿಸುವುದು ಮತ್ತು ಬಲಪಡಿಸುವುದು ನಿರ್ಣಾಯಕವಾಗಿದೆ.

ಕೋವಿಡ್-19 ಸವಾಲಿನ ವಿರುದ್ಧ ಹೋರಾಡಲು ಏಕೀಕೃತ ಜಾಗತಿಕ ಕ್ರಮವನ್ನು ಒತ್ತಾಯಿಸಿದ ಮೊದಲ ದೇಶ ಭಾರತ. ಮಾರ್ಚ್ ಮಧ್ಯದಲ್ಲಿ ನಾವು ನಮ್ಮ ಪ್ರದೇಶದಲ್ಲಿ ಸಾರ್ಕ್ ನಾಯಕರ ಸಭೆಯನ್ನು ಕರೆದಿದ್ದೇವೆ, ಇದರಲ್ಲಿ ಒಟ್ಟಿಗೆ ಸೇರುವುದು, ಬೇರೆಯಾಗುವುದಿಲ್ಲ; ಸಹಯೋಗ ಗೊಂದಲವಲ್ಲ; ಮತ್ತು ತಯಾರಿ, ಭೀತಿಪಡುವುದಲ್ಲ ”, ಎನ್ನುವುದನ್ನು ಒತ್ತಿ ಹೇಳಲಾಗಿದೆ . ಇವುಗಳು ಬಿಕ್ಕಟ್ಟಿಗೆ ಭಾರತದ ಪ್ರತಿಸ್ಪಂದನೆಯನ್ನು ಸೂಚಿಸುವ ಅಂಶಗಳಾಗಿವೆ

ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಸುಮಾರು 100 ಅಗತ್ಯವಿರುವ ದೇಶಗಳಿಗೆ ಹೈಡ್ರಾಕ್ಸಿ ಕ್ಲೋರೊಕ್ವಿನ್ನಂತಹ ಅಗತ್ಯ ಔಷಧಿಗಳನ್ನು ಒದಗಿಸಿ, ಒಗ್ಗಟ್ಟು ಮತ್ತು ಬೆಂಬಲವನ್ನು ನೀಡಿದೆ.

ಸಾಂಕ್ರಾಮಿಕ ರೋಗದ ಕಾರಣಗಳ ಬಗ್ಗೆ ಕೆಲಸ ಮಾಡುವುದು ಮತ್ತು ಪ್ರಸರಣವನ್ನು ನಿಯಂತ್ರಿಸಲು ಮತ್ತು ಮರುಕಳಿಕೆಯನ್ನು ತಡೆಗಟ್ಟಲು ಔಷಧಗಳು ಮತ್ತು ಲಸಿಕೆಗಳನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

ಅಸ್ತಿತ್ವದಲ್ಲಿರುವ ಮತ್ತು ಹೊಸ ಎರಡೂ ಸಂಬಂಧಿತ ವೈದ್ಯಕೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಸಾರ್ವತ್ರಿಕ ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತೆ ಮಾಡುವುದು ಮುಖ್ಯವಾಗಿದೆ. ಕೋವಿಡ್-19 ಅನ್ನು ನಿಭಾಯಿಸಲು ಇವುಗಳನ್ನು ನ್ಯಾಯಯುತ ರೀತಿಯಲ್ಲಿ ಲಭ್ಯವಾಗುವಂತೆ ಮಾಡಬೇಕು.

ಭಾರತೀಯ ವಿಜ್ಞಾನಿಗಳು ಲಸಿಕೆ, ಔಷಧಿಗಳ ಆವಿಷ್ಕಾರ ಮತ್ತು ಮಿತವ್ಯಯದ ರೋಗನಿರ್ಣಯ ಕಿಟ್ಗಳ ಅಭಿವೃದ್ಧಿ ಮತ್ತು ಹಲವಾರು ಜೀವ ಉಳಿಸುವ ಸಾಧನಗಳಿಗಾಗಿ ಭಾರತ ಸರ್ಕಾರದ ಸಕ್ರಿಯ ಬೆಂಬಲದೊಂದಿಗೆ ಕೆಲಸ ಮಾಡುತ್ತಿದ್ದಾರೆ.

ನಮ್ಮ ಉತ್ತಮ ಕಾರ್ಯಶೈಲಿಯನ್ನು ನಾವು ಪರಸ್ಪರ ಬೆಂಬಲಿಸಬೇಕು ಮತ್ತು ಹಂಚಿಕೊಳ್ಳಬೇಕು ಮತ್ತು ಕೋವಿಡ್ ನಂತರದ ಕಾಲಘಟ್ಟದಲ್ಲಿ ಹೊಸ ಅಪಾಯಗಳು ಮತ್ತು ಸವಾಲುಗಳನ್ನು ಎದುರಿಸಲು ನವೀನ ಮಾರ್ಗಗಳನ್ನು ಅನ್ವೇಷಿಸಬೇಕು.

***


(Release ID: 1623948) Visitor Counter : 285