PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 13 MAY 2020 7:14PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಪ್ರಧಾನಮಂತ್ರಿ ಅವರಿಂದ ಆತ್ಮನಿರ್ಭರ ಭಾರತಕ್ಕೆ ಕರೆ; 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಸಾಂಕ್ರಾಮಿಕದ ವಿರುದ್ಧ ಹೋರಾಡಿ, ಸಾವನ್ನಪ್ಪಿದವರನ್ನು ಸ್ಮರಿಸಿದ ಪ್ರಧಾನಿ ಅವರು, ಕೋವಿಡ್-19ನಿಂದ ಉದ್ಭವಿಸಿರುವ ಬಿಕ್ಕಟ್ಟು ಅನಿರೀಕ್ಷಿತವಾದುದು. ಆದರೆ ಸಮರದಲ್ಲಿ ನಮ್ಮನ್ನು ನಾವು ರಕ್ಷಿಸುವ ಅಗತ್ಯವಿದೆಯಷ್ಟೇ ಅಲ್ಲದೆ ನಾವು ಮುಂದಡಿ ಸಾಗಬೇಕಿದೆ ಎಂದರು. 21ನೇ ಶತಮಾನ ಭಾರತದ ಶತಮಾನವನ್ನಾಗಿ ಮಾಡುವ ನಮ್ಮ ಕನಸನ್ನು ಈಡೇರಿಸಿಕೊಳ್ಳಲು ನಾವು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಅತ್ಯಗತ್ಯವಾಗಿದೆ ಎಂದರು. ಸ್ವಾವಲಂಬಿ ಭಾರತ, ಐದು ಆಧಾರಸ್ಥಂಬಗಳ ಮೇಲೆ ನಿಂತಿದೆ. ಅವುಗಳೆಂದರೆ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, 21ನೇ ಶತಮಾನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು, ಚೈತನ್ಯಶೀಲ ಜನಸಂಖ್ಯೆ ಮತ್ತು ಬೇಡಿಕೆ. ಪ್ರಧಾನಮಂತ್ರಿ ಅವರು, ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಪ್ರಕಟಿಸಿ, ಆತ್ಮನಿರ್ಭರ ಭಾರತಕ್ಕೆ ಸ್ಪಷ್ಟ ಕರೆ ನೀಡಿದರು. ಒಟ್ಟು ಪ್ಯಾಕೇಜ್ ನಲ್ಲಿ ಕೋವಿಡ್-19 ಬಿಕ್ಕಟ್ಟು ಸಮಯದಲ್ಲಿ ಸರ್ಕಾರ ಈವರೆಗೆ ಮಾಡಿರುವ ಘೋಷಣೆಗಳನ್ನು ಮತ್ತು ಆರ್ ಬಿಐ ನಿರ್ಧಾರಗಳನ್ನು ಒಳಗೊಂಡಿದ್ದು, ಒಟ್ಟು 20 ಲಕ್ಷ ಕೋಟಿ ರೂ.ಗಳಾಗಲಿದೆ. ಇದು ಭಾರತದ ಜಿಡಿಪಿಯ ಶೇ.10ಕ್ಕೆ ಸಮನಾದುದು ಎಂದರು. ಈ ಪ್ಯಾಕೇಜ್ ‘ಆತ್ಮನಿರ್ಭರ’ ಭಾರತ ಸಾಧನೆ ನಿಟ್ಟಿನಲ್ಲಿ ಅತ್ಯಂತ ಅಗತ್ಯ ಉತ್ತೇಜನ ನೀಡಲಿದೆ ಎಂದರು.

ವಿವರಗಳಿಗೆ :https://pib.gov.in/PressReleseDetail.aspx?PRID=1623423

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12.05.2020ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಪಠ್ಯ

ವಿವರಗಳಿಗೆ : https://pib.gov.in/PressReleseDetail.aspx?PRID=1623506

ಕೋವಿಡ್-19 ವಿರುದ್ಧ ಹೋರಾಟಕ್ಕೆ ಭಾರತದ ಆರ್ಥಿಕತೆ ಬೆಂಬಲಿಸಲು ವಿಶೇಷವಾಗಿ ಎಂಎಸ್ಎಂಇ ಹಾಗೂ ವಾಣಿಜ್ಯೋದ್ಯಮಕ್ಕೆ ಸಾಲದ ನೆರವು ಮತ್ತು ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಹಣಕಾಸು ಸಚಿವರು

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು, ನೌಕರರು ಮರಳಿ ಉದ್ಯೋಗಕ್ಕೆ ತೆರಳುವ ನಿಟ್ಟಿನಲ್ಲಿ ಆದ್ಯತಾ ಕ್ರಮಗಳನ್ನು ಪ್ರಕಟಿಸಿದರು. ಅಂದರೆ ನೌಕರರು ಮತ್ತು ಉದ್ಯೋಗದಾತರು, ವಾಣಿಜ್ಯೋದ್ಯಮಿಗಳು, ವಿಶೇಷವಾಗಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಎಂದಿನಂತೆ ಮರಳಿ ತಮ್ಮ ಉತ್ಪಾದನೆಯನ್ನು ಆರಂಭಿಸಲು ಹಾಗೂ ಕಾರ್ಮಿಕರು ತಮ್ಮ ಲಾಭದಾಯಕ ಉದ್ಯೋಗಕ್ಕೆ ಮರಳಲು ಕ್ರಮಗಳನ್ನು ಪ್ರಕಟಿಸಿದರು. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು(ಎನ್ ಬಿಎಫ್ ಸಿ), ವಸತಿ ಹಣಕಾಸು ಕಂಪನಿಗಳು(ಎಚ್ಎಫ್ ಸಿ), ಸಣ್ಣ ಹಣಕಾಸು ವಲಯ ಮತ್ತು  ವಿದ್ಯುತ್ ವಲಯದ ಬಲವರ್ಧನೆ  ಕ್ರಮಗಳನ್ನು ಬಹಿರಂಗಪಡಿಸಿದರು. ಅಲ್ಲದೆ ವಾಣಿಜ್ಯೋದ್ಯಮಿಗಳಿಗೆ ತೆರಿಗೆ ಪರಿಹಾರವನ್ನು, ಸಾರ್ವಜನಿಕ ಖರೀದಿಯಲ್ಲಿ ಗುತ್ತಿಗೆದಾರರಿಗೆ ಒಪ್ಪಂದಗಳ ಬದ್ಧತೆಗಳಿಂದ ಪರಿಹಾರ  ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ನಿಯಮಗಳ ಪಾಲನೆ  ಪರಿಹಾರಗಳು ಇದರ ವ್ಯಾಪ್ತಿಯಲ್ಲಿ ಸೇರಿವೆ.

ವಿವರಗಳಿಗೆ :https://pib.gov.in/PressReleseDetail.aspx?PRID=1623703

ಪಂಜಾಬ್ ನಲ್ಲಿ  ಕೋವಿಡ್-19 ನಿರ್ವಹಣೆಗೆ ಕೈಗೊಂಡಿರುವ ನಿರ್ಬಂಧಿತ ಕ್ರಮಗಳು ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದ  ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಪಂಜಾಬ್ ಆರೋಗ್ಯ ಸಚಿವರೊಂದಿಗೆ  ವಿಡಿಯೋ ಸಂವಾದವನ್ನು ನಡೆಸಿದರು. ಡಾ. ಹರ್ಷವರ್ಧನ್ ಅವರು 2020ರ ಮೇ 13ರ ವರೆಗೆ  ದೇಶದಲ್ಲಿ ಒಟ್ಟು 74,281 ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 24,386 ವ್ಯಕ್ತಿಗಳು ಗುಣಮುಖರಾಗಿದ್ದಾರೆ ಮತ್ತು 2,415 ಸಾವುಗಳು ಸಂಭವಿಸಿವೆ. 24  ಗಂಟೆಗಳಲ್ಲಿ 3,525 ಹೊಸ ಪ್ರಕರಣಗಳು ದೃಢಪಟ್ಟಿವೆ. ಕಳೆದ 14 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದು,  ಕಳೆದ ಮೂರು ದಿನಗಳಿಂದೀಚಿಗೆ ಶೇ. 12.6ರಷ್ಟು ಸುಧಾರಣೆಯಾಗಿದೆ.  ಒಟ್ಟಾರೆ ಸಾವಿನ ಪ್ರಮಾಣ ಶೇ.3.2ರಷ್ಟಿದೆ ಹಾಗೂ ಗುಣಮುಖರಾಗುತ್ತಿರುವವರ ಪ್ರಮಾಣ  ಶೇ. 32.8ರಷ್ಟಿದೆ ಎಂದು ತಿಳಿಸಿದರು. ಅಲ್ಲದೆ ಅವರು(ನಿನ್ನೆಯವರೆಗೂ) ಶೇ. 2.75ರಷ್ಟು ಕ್ರಿಯಾಶೀಲ ಕೋವಿಡ್-19 ರೋಗಿಗಳು ಐಸಿಯುನಲ್ಲಿದ್ದರು, ಶೇ.0.37ರಷ್ಟು ವೆಂಟಿಲೇಟರ್ ಗಳಲ್ಲಿದ್ದರು ಮತ್ತು ಶೇ. 1.89ರಷ್ಟು ಆಕ್ಸಿಜನ್ ನೆರವಿನಲ್ಲಿದ್ದರು. ಒಟ್ಟಾರೆ ದೇಶದಲ್ಲಿ 18,56,477 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ನಿನ್ನೆ 94708 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಡಾ. ಹರ್ಷವರ್ಧನ್ ಅವರು, ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳ ಕಾರ್ಯಾಚರಣೆಯಲ್ಲಿ ಪಂಜಾಬ್ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಅವುಗಳನ್ನು ಮಧುಮೇಹ ತಪಾಸಣೆ, ರಕ್ತದೊತ್ತಡ, ಮೂರು ಬಗೆಯ ಸಾಮಾನ್ಯ ಕ್ಯಾನ್ಸರ್(ಬಾಯಿ, ಸ್ತನ ಮತ್ತು ಗರ್ಭ) ಮತ್ತು ಸಮಗ್ರ ಆರೋಗ್ಯ ರಕ್ಷಣಾ ಸೇವೆಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1623706

ಜೂನ್ 1, 2020ರಿಂದ ದೇಶಾದ್ಯಂತ ಎಲ್ಲ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಕ್ಯಾಂಟೀನ್ ಮತ್ತು ಮಳಿಗೆಗಳಲ್ಲಿ ದೇಶೀಯ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುವುದು

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ 2020ರ ಜೂನ್ 1 ರಿಂದ ದೇಶಾದ್ಯಂತ ಇರುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಕ್ಯಾಂಟೀನ್ ಮತ್ತು ಮಳಿಗೆಗಳಲ್ಲಿ ದೇಶೀಯ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ. ಒಟ್ಟು ಸುಮಾರು 2800 ಕೋಟಿ ರೂ.ಗಳ ವಸ್ತುಗಳನ್ನು ಖರೀದಿಯನ್ನು ಮಾಡಲಾಗುವುದು. ಈ ನಿರ್ಧಾರದೊಂದಿಗೆ ಸಿಎಪಿಎಫ್ ಸುಮಾರು 10 ಲಕ್ಷ ಸಿಬ್ಬಂದಿ ಹಾಗೂ 50 ಲಕ್ಷ ಕುಟುಂಬಗಳ ಸದಸ್ಯರು ಕೇವಲ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಬಳಕೆ ಮಾಡಲಿದ್ದಾರೆ.  ಅಲ್ಲದೆ ಗೃಹಸಚಿವಾಲಯ ದೇಶದ ಎಲ್ಲ ನಾಗರಿಕರಲ್ಲಿ ದೇಸಿ ಉತ್ಪನ್ನಗಳ ಬಳಕೆಗೆ ಮನವಿ ಮಾಡಿದೆ. ಅದು “ಸಾಧ್ಯವಾದಷ್ಟು ದೇಸೀಯ ಉತ್ಪನ್ನಗಳನ್ನೇ ಬಳಸಬೇಕು ಮತ್ತು ಇತರರಿಗೂ  ಅದಕ್ಕೆ ಪ್ರೋತ್ಸಾಹ ನೀಡಬೇಕು, ಇದು ಹಿಂದೆ ಬೀಳುವಂತಹ ಕಾಲವಲ್ಲ, ಬಿಕ್ಕಟ್ಟನ್ನು ಅವಕಾಶವನ್ನಾಗಿ ಮಾಡಿಕೊಳ್ಳುವ ಸುಸಮಯ” ಎಂದು ಹೇಳಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623658

ಎಂಎಸ್ಎಂಇಗಳಿಗೆ ಪ್ರಧಾನಮಂತ್ರಿಗಳ ಆರ್ಥಿಕ ಪ್ಯಾಕೇಜ್ ಸ್ವಾಗತಿಸಿದ ಶ್ರೀ ನಿತಿನ್ ಗಡ್ಕರಿ:  ಇದರಿಂದ ವಲಯ ಮತ್ತೊಂದು ಎತ್ತರಕ್ಕೇರಲಿದೆ ಎಂದು ಹೇಳಿಕೆ

ಕೇಂದ್ರ ಎಂಎಸ್ಎಂಇ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಪ್ರಧಾನಮಂತ್ರಿಗಳು 20 ಲಕ್ಷ ಕೋಟಿ ರೂ.ಗಳು ಆರ್ಥಿಕ ಪ್ಯಾಕೇಜ್ ಪ್ರಕಟಿಸಿರುವುದನ್ನು ಸ್ವಾಗತಿಸಿದ್ದಾರೆ. ಅವರು ಇದು ಐತಿಹಾಸಿಕ ಪ್ಯಾಕೇಜ್ ಆಗಿದೆ. ಪ್ರಧಾನಮಂತ್ರಿಗಳು ಇದರ ಮೂಲಕ ಎಂಎಸ್ಎಂಇ, ಗ್ರಾಮ ಹಾಗೂ ಖಾದಿ ಉದ್ಯಮದ ಆಶೋತ್ತರಗಳನ್ನು ನಿರೀಕ್ಷೆಗಳನ್ನು ಈಡೇರಿಸಿದ್ದಾರೆ ಎಂದು ಹೇಳಿದ್ದಾರೆ.  ಶ್ರೀ ಗಡ್ಕರಿ ಅವರು, ಯಥೇಚ್ಛ ಸಂಪನ್ಮೂಲ, ಉತ್ಕೃಷ್ಟ ತಂತ್ರಜ್ಞಾನ ಮತ್ತು ಕಚ್ಚಾ ಸಾಮಗ್ರಿಗಳಿಂದಾಗಿ ಭಾರತ ಸದ್ಯದಲ್ಲೇ ಎಲ್ಲ ವಲಯಗಳಲ್ಲಿ ಸ್ವಾವಲಂಬಿಯಾಗಲಿದೆ ಎಂದು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1623453

ವಂದೇ ಭಾರತ್ ಮಿಷನ್ ಅಡಿಯಲ್ಲಿ 2020 ಮೇ 7ರಿಂದೀಚೆಗೆ 43 ವಿಮಾನಗಳ ಮೂಲಕ  ವಿದೇಶದಲ್ಲಿದ್ದ 8503 ಭಾರತೀಯರು ಸ್ವದೇಶಕ್ಕೆ ವಾಪಸ್

ವಿದೇಶಗಳಿಂದ ಸ್ವದೇಶಕ್ಕೆ ಕರೆತರಲಾಗಿದೆ. ಭಾರತ ಸರ್ಕಾರ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು 2020ರ ಮೇ 7ರಿಂದ ಅತಿದೊಡ್ಡ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಕೈಗೊಂಡಿದೆ. ಏರ್ ಇಂಡಿಯಾ ಸಂಸ್ಥೆ ತನ್ನ ಉಪ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೂಲಕ ಒಟ್ಟು 64 ವಿಮಾನಗಳು(42 ಏರ್ ಇಂಡಿಯಾ ಮತ್ತು 24 ಏರ್ ಇಂಡಿಯಾ ಎಕ್ಸ್ ಪ್ರೆಸ್) ಮೂಲಕ 12 ದೇಶಗಳು ಅಂದರೆ ಅಮೆರಿಕ, ಬ್ರಿಟನ್, ಬಾಂಗ್ಲಾದೇಶ, ಸಿಂಗಾಪುರ, ಸೌದಿ ಅರೆಬಿಯಾ, ಕುವೈತ್, ಪಿಲಿಪೈನ್ಸ್, ಯುಎಇ ಮತ್ತು ಮಲೇಷ್ಯಾದಿಂದ ಮೊದಲ ಹಂತದಲ್ಲಿ 14,800 ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623664

ಭಾರತೀಯ ರೈಲ್ವೆಯಿಂದ ದೇಶಾದ್ಯಂತ 2020 ಮೇ 13 ವರೆಗೆ 642 “ಶ್ರಮಿಕ ರೈಲುಗಳ ಕಾರ್ಯನಿರ್ವಹಣೆ

ದೇಶಾದ್ಯಂತ ನಾನಾ ರಾಜ್ಯಗಳಲ್ಲಿ 2020ರ ಮೇ 13ರ ವರೆಗೆ ಒಟ್ಟು 642 “ಶ್ರಮಿಕ ರೈಲು”ಗಳ ಕಾರ್ಯಾಚರಣೆ ನಡೆಸಲಾಗಿದೆ. ಈ 642 ರೈಲುಗಳು ಬೇರೆ ಬೇರೆ ರಾಜ್ಯಗಳಿಂದ ಹೊರಟು, ಅವುಗಳು ನಿಗದಿತ ರಾಜ್ಯಗಳಲ್ಲಿ ಪ್ರಯಾಣ ಮುಕ್ತಾಯಗೊಳಿಸಿವೆ ರಾಜ್ಯಗಳೆಂದರೆ ಆಂಧ್ರಪ್ರದೇಶ(3 ರೈಲು), ಬಿಹಾರ(169 ರೈಲು), ಛತ್ತೀಸ್ ಗಢ(6 ರೈಲು), ಹಿಮಾಚಲಪ್ರದೇಶ(1 ರೈಲು), ಜಮ್ಮು ಮತ್ತು ಕಾಶ್ಮೀರ(3 ರೈಲು), ಜಾರ್ಖಂಡ್(40 ರೈಲು), ಕರ್ನಾಟಕ(1 ರೈಲು), ಮಧ್ಯಪ್ರದೇಶ(53 ರೈಲು), ಮಹಾರಾಷ್ಟ್ರ(3 ರೈಲು), ಮಣಿಪುರ(1 ರೈಲು), ಮಿಝೋರಾಂ(1 ರೈಲು), ಒಡಿಶಾ(38 ರೈಲು), ರಾಜಸ್ಥಾನ(8 ರೈಲು), ತಮಿಳುನಾಡು(1 ರೈಲು), ತೆಲಂಗಾಣ(1 ರೈಲು), ತ್ರಿಪುರಾ(1 ರೈಲು), ಉತ್ತರಪ್ರದೇಶ(301 ರೈಲು), ಉತ್ತರಾಖಂಡ(4 ರೈಲು), ಪಶ್ಚಿಮಬಂಗಾಳ(7 ರೈಲು).

ವಿವರಗಳಿಗೆ: https://pib.gov.in/PressReleseDetail.aspx?PRID=1623564

ಲಾಕ್ ಡೌನ್ ವೇಳೆ ಎಫ್ ಸಿಐನಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 160 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಣೆ

ಎಫ್ ಸಿ ಐನಲ್ಲಿ ದೇಶಕ್ಕೆ ಅಗತ್ಯವಿರುವಷ್ಟು ಆಹಾರಧಾನ್ಯಗಳು ದಾಸ್ತಾನು ಇದೆ. 2020ರ ಮೇ 1ರ ವರೆಗೆ ದಾಸ್ತಾನು ಸ್ಥಿತಿ 642.7 ಲಕ್ಷ ಮೆಟ್ರಿಕ್ ಟನ್ ಇತ್ತು. ಅದರಲ್ಲಿ 285.03 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು 357.7 ಲಕ್ಷ ಮೆಟ್ರಿಕ್ ಟನ್ ಗೋಧಿ, 2020ರ ಮೇ 12ರ ವರೆಗೆ ನಾನಾ ಯೋಜನೆಗಳಡಿ 159.36 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ವಿತರಿಸಲಾಗಿದೆ. ರಾಜ್ಯ ಸರ್ಕಾರಗಳು ಎನ್ಎಫ್ಎಸ್ಎ ಅಡಿಯಲ್ಲಿ 60.87 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯವನ್ನು ಎತ್ತುವಳಿ ಮಾಡಿವೆ. ಇದು ತಿಂಗಳ ಅಗತ್ಯಕ್ಕೆ ಹೋಲಿಸಿದರೆ ಒಂದೂವರೆಪಟ್ಟಿಗೆ ಸಮನಾದುದು. ಅಲ್ಲದೆ ಪಿಎಂಜಿಕೆಎವೈ ಅಡಿಯಲ್ಲಿ ವಿತರಣೆಗಾಗಿ 79.74 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಎತ್ತುವಳಿ ಮಾಡಲಾಗಿದೆ. ಇದು ಎರಡು ತಿಂಗಳಿಗೆ ಹಂಚಿಕೆಯಾಗಿರುವ ಒಟ್ಟು 120 ಲಕ್ಷ ಮೆಟ್ರಿಕ್ ಟನ್ ಗೆ ಸಮ.

ವಿವರಗಳಿಗೆ: https://pib.gov.in/PressReleseDetail.aspx?PRID=1623666

ದೇಶಾದ್ಯಂತ ಆಹಾರಧಾನ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಲು ಎಫ್ ಸಿಐ ಕೈಗೊಂಡಿರುವ ಕ್ರಮಗಳು ಹೀಗಿವೆ

ವಿವರಗಳಿಗೆ: https://pib.gov.in/PressReleseDetail.aspx?PRID=1623561

ಮಿಷನ್ ಸಾಗರ್: ಮಾಲ್ಡವೀಸ್ ಗೆ ಐಎನ್ಎಸ್ ಕೇಸರಿಯಿಂದ  ಆಹಾರ ಉತ್ಪನ್ನಗಳ ಹಸ್ತಾಂತರ

ಮಿಷನ್ ಸಾಗರ್ ಯೋಜನೆಯ ಭಾಗವಾಗಿ ಭಾರತೀಯ ನೌಕಾಪಡೆಯ ಹಡಗು ಕೇಸರಿ, ಮಾಲ್ಡವೀಸ್ ಮಾಲೆ ಬಂದರನ್ನು 2020ರ ಮೇ 12 ರಂದು ತಲುಪಿದೆ. ಭಾರತ ಸರ್ಕಾರ ನೆರೆಹೊರೆಯ ರಾಷ್ಟ್ರಗಳಿಗೆ ನೆರವಿನ ಹಸ್ತಚಾಚಿದೆ ಮತ್ತು ಐಎನ್ಎಸ್ ಕೇಸರಿ ಮೂಲಕ ಮಾಲ್ಡವೀಸ್ ಜನರಿಗೆ 580 ಟನ್ ಆಹಾರ ಉತ್ಪನ್ನಗಳನ್ನು ಪೂರೈಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623455

ನರೇಂದ್ರ ಮೋದಿ ಸರ್ಕಾರ ಉದ್ಯೋಗಿಗಳ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಅವರ ದೂರುಗಳನ್ನು ನ್ಯಾಯಯುತವಾಗಿ ಬಗೆಹರಿಸಲಿದೆ: ಡಾ. ಜಿತೇಂದ್ರ ಸಿಂಗ್

ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ವಿನೂತನ ಕ್ರಮವಾಗಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಒಪಿಟಿ, ಡಿಎಆರ್ ಪಿಜಿ ಮತ್ತು ಡಿಒಪಿಪಿಡಬ್ಲ್ಯೂ ಇಲಾಖೆಗಳ ಸಿಬ್ಬಂದಿ ಮತ್ತು ಸೆಕ್ಷನ್ ಅಧಿಕಾರಿ ಮಟ್ಟದವರೆಗಿನ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಡಾ. ಸಿಂಗ್ ಅವರು, ಮೋದಿ ಸರ್ಕಾರ ಉದ್ಯೋಗಿಗಳ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಅವರ ಸಮಸ್ಯೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಬಗೆಹರಿಸಲಾಗುವುದು ಎಂದು ಹೇಳಿದರು. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆಗಾಗಿ ಮನೆಯಿಂದಲೇ ಕೆಲಸ ಮಾಡುವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಕಚೇರಿಗಳಲ್ಲಿ ಶೇ.33ರಷ್ಟು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಕೆಲಸದಸ್ನೇಹಿ ವಾತಾವರಣದ ಅತ್ಯುತ್ತಮ ಪುರಾವೆಯನ್ನು ಒದಗಿಸುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623701

ಕೃಷಿ, ಮೀನುಗಾರಿಕೆ ಮತ್ತು ಅರಣ್ಯಕ್ಕೆ ಸಂಬಂಧಿಸಿದ ಎಂಎಸ್ಎಂಇಗಳು  ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಿ, ಉತ್ಪನ್ನಗಳನ್ನು ಉತ್ಪಾದಿಸಲು ಶ್ರೀ ನಿತಿನ್ ಗಡ್ಕರಿ ಕರೆ

ಸಚಿವರು ಹೊಸ  ಹಸಿರು ಎಕ್ಸ್ ಪ್ರೆಸ್ ಹೈವೆ ಕಾರಿಡಾರ್ ನಿಂದಾಗಿ ಕೈಗಾರಿಕಾ ಕ್ಲಸ್ಟರ್ ಗಳಲ್ಲಿ,  ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಲಾಜಿಸ್ಟಿಕ್ ಪಾರ್ಕ್ ಗಳಲ್ಲಿ ಇನ್ನೂ ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ಉದ್ಯಮಳಿಗೆ  ಒಳ್ಳೆಯ ಅವಕಾಶಗಳಿವೆ ಎಂದು ಪುನರುಚ್ಚರಿಸಿದರು. ಕೈಗಾರಿಕೆಗಳ ವಿಕೇಂದ್ರೀಕರಣಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ದೇಶದ ಹಿಂದುಳಿದ ಪ್ರದೇಶಗಳು, ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಿಗೆ ಒತ್ತು ನೀಡಬೇಕು ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1623324

ಬುಡಕಟ್ಟು ವ್ಯವಹಾರಗಳ ಸಚಿವರಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಆದಿವಾಸಿಗಳ ಜೀವನೋಪಾಯ ಮತ್ತು ಸುರಕ್ಷತೆಕುರಿತ ವಿಡಿಯೋ ಕಾನ್ಫರೆನ್ಸ್

ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಶ್ರೀ ಅರ್ಜುನ್ ಮುಂಡಾ ಅವರು, ಪರಿಷ್ಕೃತ ಎಂಎಸ್ ಪಿ ಅಡಿಯಲ್ಲಿ ಉಪ ಅರಣ್ಯ ಉತ್ಪನ್ನಗಳ ಖರೀದಿಗೆ ಮುಂದಾಗುವ ಮೂಲಕ ಬುಡಕಟ್ಟು ಜನರ ಜೀವನೋಪಾಯಕ್ಕೆ ಬೆಂಬಲ ನೀಡುತ್ತಿರುವ ರಾಜ್ಯಗಳ ಕ್ರಮಕ್ಕೆ ಅಭಿನಂದಿಸಿದರು. ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು, ರಾಜ್ಯಗಳಲ್ಲಿ ಪ್ರಧಾನಮಂತ್ರಿಗಳ ವನಧನ ಯೋಜನೆ ಜಾರಿ ಕುರಿತು ಪರಾಮರ್ಶೆ ನಡೆಸಿದರು. ಬುಡಕಟ್ಟು ಜನರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಅಗತ್ಯವಿದೆ. ಆ ಮೂಲಕ ಅವುಗಳಿಗೆ  ಜಾಗತಿಕ ಮಾರುಕಟ್ಟೆ ಕಲ್ಪಿಸಬೇಕೆಂಬುದು ಪ್ರಧಾನಮಂತ್ರಿ ಅವರ ದೂರದೃಷ್ಟಿಯ ಆಲೋಚನೆ ಎಂದು ಹೇಳಿದರು. ಶ್ರೀ ಅರ್ಜುನ್ ಮುಂಡಾ ಅವರು, ಕೋವಿಡ್-19 ಸೃಷ್ಟಿಸಿರುವ ಸ್ಥಿತಿಯಿಂದಾಗಿ ತವರಿಗೆ ವಾಪಸ್ಸಾಗುತ್ತಿರುವ ಬುಡಕಟ್ಟು ವಲಸಿಗರು ಮತ್ತು ವಿದ್ಯಾರ್ಥಿಗಳಿಗೆ ರಾಜ್ಯಗಳು ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.

ವಿವರಗಳಿಗೆ:https://pib.gov.in/PressReleseDetail.aspx?PRID=1623325

ಜಮ್ಮುವಿನಲ್ಲಿ  ಸಾಮಾನ್ಯ ರೈಲು ಸೇವೆಗಳ ಪುನರಾರಂಭ ಮತ್ತು  ಕೋವಿಡ್-19 ಕುರಿತು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಲ್ಲಿ ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದ ಡಾ. ಜಿತೇಂದ್ರ ಸಿಂಗ್

ಡಾ. ಜಿತೇಂದ್ರ ಸಿಂಗ್ ಅವರು, ಕೋವಿಡ್-19 ಸ್ಥಿತಿಗತಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಲ್ಲ ಜಿಲ್ಲೆಗಳ ಡಿಸಿಗಳ ಜೊತೆ ಸಂವಾದ ನಡೆಸಿದರು. ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಗಳ ಆಗಮನ ಮತ್ತು ಶ್ರಮಿಕ ವಿಶೇಷ ರೈಲುಗಳಲ್ಲಿ ಆಗಮಿಸಲಿರುವ ಪ್ರಯಾಣಿಕರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು  ಹಾಗೂ ಜಮ್ಮುವಿನಲ್ಲಿ ಬುಧವಾರದಿಂದ ಪುನರಾರಂಭವಾಗಿರುವ ರೈಲು ಸೇವೆಗಳ ಕುರಿತಂತೆ ಪರಿಶೀಲನೆ ನಡೆಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1623456

2022 ಡಿಸೆಂಬರ್ ಒಳಗೆ ಎಲ್ಲ ಗ್ರಾಮೀಣ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಹರಿಯಾಣ ಸಜ್ಜು

ರಾಜ್ಯ 2019-20ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ 1.05 ಲಕ್ಷ ನೀರಿನ ಸಂಪರ್ಕಗಳನ್ನು ನೀಡಿದೆ. ಇದೀಗ  ರಾಜ್ಯ ಸರ್ಕಾರ 2022 ಡಿಸೆಂಬರ್ ವೇಳೆಗೆ ಶೇ.100ರಷ್ಟು ಯಶಸ್ಸು ಸಾಧಿಸಲು ಯೋಜಿಸುತ್ತಿದೆ. ರಾಷ್ಟ್ರೀಯ ಗುರಿ ಸಾಧನೆಗೆ 2024-25 ಗಡುವು ಇದ್ದು, ಅದಕ್ಕೆ ಮುನ್ನವೇ ಸಾಧನೆಗೆ ಮುಂದಾಗಿದೆ. ಮೂಲಕ ಹರಿಯಾಣ ಪ್ರತಿಯೊಂದು  ಗ್ರಾಮೀಣ ಮನೆಗಳಿಗೂ ನೀರಿನ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಗುರಿ ಸಾಧನೆ ಮಾಡಿ, ರಾಜ್ಯಗಳ ಸಾಲಿನಲ್ಲಿ ಅಗ್ರಸ್ಥಾನಕ್ಕೇರಲು ಮುಂದಾಗಿದೆ. ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆಯ ಡ್ಯಾಶ್ ಬೋರ್ಡ್ ಅನ್ನು ಇತ್ತೀಚೆಗೆ  ಮುಖ್ಯಮಂತ್ರಿ ಉದ್ಘಾಟಿಸಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಖಂಡಿತವಾಗಿ ಜನಜೀವನ ಮಟ್ಟ ಸುಧಾರಿಸಲಿದೆ. ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ನೆರವಾಗಲಿದ್ದು, ಅವರಿಗೆ ಸುರಕ್ಷತೆ ಹಾಗೂ ಗೌರವಯುತವಾಗಿ ಬಾಳುವಂತೆ ಮಾಡುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623492

ಡಿಸೆಂಬರ್ 2022 ವೇಳೆಗೆ ಪ್ರತಿಯೊಂದು ಮನೆಗೂ ನಲ್ಲಿ ನೀರು ಒದಗಿಸಲಿರುವ ಜಮ್ಮು ಮತ್ತು ಕಾಶ್ಮೀರ

ಪ್ರಸಕ್ತ ವರ್ಷ ರಾಜ್ಯ ಮೂರು ಜಿಲ್ಲೆಗಳ 5,000 ಗ್ರಾಮಗಳ ವ್ಯಾಪ್ತಿಯಲ್ಲಿ ಅಂದರೆ ಗಂದರ್ಭಾಲ್, ಶ್ರೀನಗರ ಮತ್ತು ರೈಸಿಗಳಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಯ ಶೇ.100ರಷ್ಟು ತಲುಪಿಸಲು ಮುಂದಾಗಿದೆ. ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ನಿನ್ನೆ ತನ್ನ ಕ್ರಿಯಾ ಯೋಜನೆಯನ್ನು ಮಂಡಿಸಿ, ಜೆಜೆಎಂ ಅಡಿಯಲ್ಲಿ  ಪ್ರತಿಯೊಂದು ಮನೆಗೂ ನಲ್ಲಿ ನೀರು ಒದಗಿಸುವ ಗುರಿ ಸಾಧನೆ ಮಾಡುವುದಾಗಿ ಹೇಳಿದೆ. ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಒಟ್ಟು 18.17 ಲಕ್ಷ ಕುಟುಂಬಗಳು ಇವೆ, ಅವುಗಳಲ್ಲಿ ಈಗಾಗಲೇ 5.75 ಲಕ್ಷ ಮನೆಗಳಿಗೆ ಫಂಕ್ಷನಲ್ ಹೌಸ್ ಹೋಲ್ಡ್ ಟ್ಯಾಪ್ ಕನೆಕ್ಷನ್ಸ್(ಎಫ್ಎಚ್ ಟಿಸಿ) ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. ಉಳಿದ ಮನೆಗಳ ಪೈಕಿ ಜಮ್ಮು ಮತ್ತು ಕಾಶ್ಮೀರ 2020-21ರ ವೇಳೆಗೆ 1.76 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623491

ಕೋವಿಡ್-19 ಸವಾಲಿನಿಂದ ಹೊರಬರಲು ಉದ್ಯಮ ಮತ್ತು ಸಹಭಾಗಿತ್ವಗಳಲ್ಲಿ ಸಂಶೋಧನೆಗೆ ಒತ್ತು, ಕೋವಿಡ್-19 ನಂತರ ಉತ್ಪಾದನಾ ಕಂಪನಿಗಳ ಪರಿವರ್ತನೆಗೆ ಆದ್ಯತೆ

ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಂಶೋಧನಾ ಪರಿವರ್ತಕದ ಮೂಲಕ ಆರ್ಥಿಕ ಪುನಶ್ಚೇತನ(ರಿಸ್ಟಾರ್ಟ್) ಕುರಿತ ಒಂದು ದಿನದ ಸಮಾವೇಶ ನಡೆಯಿತು. ಅದರಲ್ಲಿ ಕೋವಿಡ್-19 ಸಾಂಕ್ರಾಮಿಕದ ನಂತರ ಉತ್ಪಾದನಾ ಕಂಪನಿಗಳ ಪರಿವರ್ತನೆಗೆ ಪ್ರಾಮುಖ್ಯತೆ ನೀಡಲು ಚರ್ಚಿಸಲಾಯಿತು ಮತ್ತು ಪ್ರಸಕ್ತ ಸವಾಲಿನಿಂದ ಹೊರಬರಲು ಉದ್ಯಮ ಮತ್ತು ಸಂಶೋಧನೆ ಎರಡರ ನಡುವೆ ನಿಕಟ ಸಹಭಾಗಿತ್ವದ ಬಗ್ಗೆ ಚರ್ಚಿಸಲಾಯಿತು.

ವಿವರಗಳಿಗೆ:https://pib.gov.in/PressReleseDetail.aspx?PRID=1623332

ಪ್ರವಾಸೋದ್ಯಮ ಸಚಿವಾಲಯ ತನ್ನ 18ನೇ ದೇಖೊ ಅಪ್ನಾ ದೇಶ್ವೆಬಿನಾರ್ ಸರಣಿಯಲ್ಲಿ ಒಡಿಶಾ-ಭಾರತದ ಅತ್ಯುತ್ತಮ ರಹಸ್ಯಆಯೋಜನೆ

ವಿವರಗಳಿಗೆ: https://pib.gov.in/PressReleseDetail.aspx?PRID=1623662

ಕೋವಿಡ್-19 ವಿರುದ್ಧ ಹೋರಾಟಕ್ಕೆ ಬಾಗಲ್ಪುರ್ ಸ್ಮಾರ್ಟ್ ಸಿಟಿಯಿಂದ ವಿನೂತನ ತಂತ್ರಜ್ಞಾನ ಬಳಕೆ

ವಿವರಗಳಿಗೆ: https://pib.gov.in/PressReleseDetail.aspx?PRID=1623568

 

ಪಿಐಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಕೇರಳ: ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್, ವಂದೇ ಭಾರತ್ ಮಿಷನ್ ಎರಡನೇ ಹಂತದಲ್ಲಿ ಕೇರಳಕ್ಕೆ 36 ವಿಮಾನಗಳ ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಏರ್ ಇಂಡಿಯಾಕ್ಕಿಂತ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಕರೆತರುವ ಭರವಸೆಯನ್ನು ಯಾವ ಖಾಸಗಿ ವಿಮಾನಯಾನ ಸಂಸ್ಥೆಗಳು ನೀಡಿಲ್ಲ ಎಂದರು. ಗಲ್ಫ್ ನಿಂದ ಹೊರಟಿರುವ ಎರಡು ವಿಮಾನಗಳು ಇಂದು ರಾತ್ರಿ ಕೊಚ್ಚಿ ತಲುಪಲಿವೆ. ಕೋವಿಡ್ ನಿಯಂತ್ರಣ ಕ್ರಮಗಳಿಗೆ ಹಣ ಹೊಂದಿಸಲು ಮದ್ಯದ ಮೇಲೆ ಶೇ.10 ರಿಂದ ಶೇ.35ರಷ್ಟು ವಿಶೇಷ ಸೆಸ್ ಅನ್ನು ಹೆಚ್ಚುವರಿ ತೆರಿಗೆ ರೂಪದಲ್ಲಿ ವಿಧಿಸಲು ರಾಜ್ಯ ನಿರ್ಧರಿಸಿದೆ. ಮೇ 17ಕ್ಕೆ ಮೂರನೇ ಹಂತದ ಲಾಕ್ ಡೌನ್ ಮುಕ್ತಾಯದ ನಂತರ ಮದ್ಯ ಮಾರಾಟ ಆರಂಭವಾಗಲಿದೆ. ಬ್ರಿಟನ್ ನಲ್ಲಿ ಮತ್ತೊಬ್ಬ ಕೇರಳದ ವಾಸಿ ಕೋವಿಡ್-19ಗೆ ಬಲಿಯಾಗಿದ್ದಾರೆ.
  • ತಮಿಳುನಾಡುಪುದುಚೆರಿಯಲ್ಲಿ ಕಾರ್ಖಾನೆಯ ನೌಕರನೊಬ್ಬನಿಗೆ ಕೋವಿಡ್-19 ಸೋಂಕು ದೃಢಪಡುವುದರೊಂದಿಗೆ ಪುದುಚೆರಿಯಲ್ಲಿ ಕ್ರಿಯಾಶೀಲ ಪ್ರಕರಣಗಳ ಸಂಖ್ಯೆ 4ಕ್ಕೇರಿದೆ. ಮಧ್ಯೆ, ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ವೈದ್ಯಕೀಯೇತರ ಮುಂಚೂಣಿ ಕಾರ್ಯಕರ್ತರಿಗೆ ಪಿಪಿಇ ಕಿಟ್   ಪೂರೈಕೆ ಕುರಿತಂತೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ. ಕೈಗಾರಿಕಾ ಸಂಸ್ಥೆಗಳು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕು ಎಂದು ಕೋರಿದ್ದು, ನಿರ್ಬಂಧಿತ ಪರಿಸರದಲ್ಲಿ ಕಾರ್ಖಾನೆಗಳ ಆರಂಭಕ್ಕೆ ಅವಕಾಶವಿಲ್ಲ, ಹಾಗಾಗಿ ಅವಕಾಶ ಮಾಡಿಕೊಡುವಂತೆ ಕೋರಿವೆ. ಸುಮಾರು 1,100 ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ತಮಿಳುನಾಡಿಗೆ ಆಗಮಿಸುತ್ತಿದ್ದು, ಅವರೆಲ್ಲಾ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಚೆನ್ನೈ ಅಲ್ಲದೆ, ಚೆಂಗಲಪಟ್ಟು ಮತ್ತು ತಿರುವಳ್ಳೂರ್ ಪ್ರದೇಶದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೋಯಂಬೀಡು ಕ್ಲಸ್ಟರ್ ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ವೆರಗೆ ಒಟ್ಟು ಪ್ರಕರಣಗಳ ಸಂಖ್ಯೆ 8718, ಕ್ರಿಯಾಶೀಲ ಪ್ರಕರಣಗಳು: 6520, ಸಾವು: 61, ಗುಣಮುಖರಾದವರು: 2134. ಚೆನ್ನೈನಲ್ಲಿ ಕ್ರಿಯಾಶೀಲ ಪ್ರಕರಣಗಳು 4882.
  • ಕರ್ನಾಟಕ: ಕರ್ನಾಟಕದಲ್ಲಿ ಮಧ್ಯಾಹ್ನ 12ಗಂಟೆಯ ವೇಳೆಗೆ 26 ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೀದರ್ 11, ಹಾಸನ 4, ಉತ್ತರ ಕನ್ನಡ, ಕಲಬುರಗಿ, ವಿಜಯಪುರ ಮತ್ತು ದಾವಣಗೆರೆಯಲ್ಲಿ ತಲಾ ಎರಡು, ಬೆಂಗಳೂರು, ದಕ್ಷಿಣ ಕನ್ನಡ, ಬಳ್ಳಾರಿಯಲ್ಲಿ ತಲಾ ಒಂದು. ಇಂದು ಕಲಬರುಗಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಒಟ್ಟು ಪ್ರಕರಣಗಳ ಸಂಖ್ಯೆ 951ಕ್ಕೆ ಏರಿಕೆಯಾಗಿದೆ. ಈವರೆಗೆ 442 ಮಂದಿ ಗುಣಮುಖರಾಗಿದ್ದಾರೆ. ರಾಜ್ಯ ಸರ್ಕಾರ ಅಸಂಘಟಿತ ವಲಯಕ್ಕೆ ಎರಡನೇ ಕೋವಿಡ್ ಪರಿಹಾರ ಪ್ಯಾಕೇಜ್ ಪ್ರಕಟಿಸಲು ಚಿಂತನೆ ನಡೆಸಿದೆ.
  • ಆಂಧ್ರಪ್ರದೇಶ: ಕೆಲವು  ವಿನಾಯಿತಿಗಳ ನಡುವೆ ರಾಜ್ಯ ಸರ್ಕಾರ ಮೇ 18ರಿಂದ ಸಾರ್ವಜನಿಕ ಬಸ್ ಸಂಚಾರವನ್ನು ಆರಂಭಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಈವರೆಗೆ 2.1 ಲಕ್ಷ ಕೋವಿಡ್-19 ಪರೀಕ್ಷೆಗಳನ್ನು ನಡೆಸಿದೆ. ವಿಜಯನಗರಂ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಸದ್ಯದಲ್ಲೇ ಖಾಸಗಿ ಕಾಲೇಜುಗಳಲ್ಲಿ ಎರಡು ಪರೀಕ್ಷಾ ಪ್ರಯೋಗಾಲಯಗಳು ಸ್ಥಾಪನೆಯಾಗಲಿವೆ. 48 ಹೊಸ ಪ್ರಕರಣಗಳು(8 ವಲಸೆ ಪ್ರಕರಣಗಳು) ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 86 ಮಂದಿ ಬಿಡುಗಡೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆಒಟ್ಟು ಪ್ರಕರಣಗಳ ಸಂಖ್ಯೆ 2137ಕ್ಕೇ ಏರಿಕೆಯಾಗಿದೆ. ಕ್ರಿಯಾಶೀಲ ಪ್ರಕರಣಗಳು 948, ಗುಣಮುಖರಾದವರು 1142, ಸಾವು 47. ಪಾಸಿಟಿವ್ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳು: ಕರ್ನೂಲು(591), ಗುಂಟೂರು(399), ಕೃಷ್ಣ(349), ಚಿತ್ತೂರು(142), ಅನಂತಪುರ(118), ನೆಲ್ಲೂರು(111).
  • ತೆಲಂಗಾಣ: ರಾಜ್ಯ ಸರ್ಕಾರ ಆನ್ ಲೈನ್ ಹೊರರೋಗಿ ವಿಭಾಗ(ಒಪಿಡಿ) ಸೇವೆ, -ಸಂಜೀವಿನಿಯನ್ನು ಆರಂಭಿಸಿದೆ. ಮೊದಲು ಪ್ರಾಯೋಗಿಕವಾಗಿ ಸೇವೆಯನ್ನು ಸೀಮಿತ ರೂಪದಲ್ಲಿ ನೀಡಲಾಗುತ್ತಿತ್ತು ಮತ್ತು ಇದೀಗ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿನ್ನೆ ಸಂಜೆವರೆಗೆ 1326 ಇತ್ತು, ಬಿಡುಗಡೆಯಾದವರು 822, ಕ್ರಿಯಾಶೀಲ ಪ್ರಕರಣಗಳು 472, ಸಾವು 32.
  • ಅರುಣಾಚಲ ಪ್ರದೇಶ: ರಾಜ್ಯ ನಹರ್ ಲಗೂನ್ ನಲ್ಲಿ ಎರಡನೇ ಕೋವಿಡ್-19 ಪರೀಕ್ಷಾ ಕೇಂದ್ರವನ್ನು ಪಡೆದಿದೆ. ಪರೀಕ್ಷೆಗಳನ್ನು ಟ್ರೂನೆಟ್ ಯಂತ್ರಗಳಲ್ಲಿ ಮಾಡಲಾಗುವುದು. ದಿನಕ್ಕೆ 20 ಮಾದರಿಗಳನ್ನು ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ.
  • ಅಸ್ಸಾಂ: ಓರ್ವ ಕೋವಿಡ್-19 ರೋಗಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತನನ್ನು ಎಂಎಂಜಿಎಚ್ ನಿಂದ ಇಂದು ಬಿಡುಗಡೆ ಮಾಡಲಾಗಿದೆ. ಈವರೆಗೆ ಗುಣಮುಖರಾದ ರೋಗಿಗಳು 39, ಅಸ್ಸಾಂ ಆರೋಗ್ಯ ಸಚಿವರು  ಟ್ವೀಟ್ ನಲ್ಲಿ ತಿಳಿಸಿದ್ದಾರೆ. 163 ವಿದ್ಯಾರ್ಥಿಗಳು ದೆಹಲಿಯಿಂದ ಮತ್ತು ಚೆನ್ನೈನಿಂದ 24 ಕ್ಯಾನ್ಸರ್ ರೋಗಿಗಳು ಇಂದು ಗುವಾಹತಿ ತಲುಪಿದ್ದಾರೆ. ಅವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇಡಲಾಗುವುದು.
  • ಮಣಿಪುರ: ವಿಶೇಷ ರೈಲಿನ ಮೂಲಕ ಚೆನ್ನೈನಿಂದ ಸಂಕಷ್ಟಕ್ಕೆ ಸಿಲುಕಿದ್ದ 1141 ಮಣಿಪುರಿಗಳು, ಜಿರಿಬಾಮ್ ರೈಲು ನಿಲ್ದಾಣ ತಲುಪಿದರು. ಅವರನ್ನು 14 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ನಲ್ಲಿ ಇಡಲಾಗುವುದು ಮತ್ತು ನಿಯೋಜಿತ ಸಾಂಸ್ಥಿಕ ಹಾಗೂ ಸಮುದಾಯ ಕೇಂದ್ರಗಳಲ್ಲಿ ಇಡಲಾಗುವುದು. ಅಧಿಕಾರಿಗಳು ಮತ್ತು ಅಲ್ಲಿರುವವರು ಮಾತ್ರ ಕ್ವಾರಂಟೈನ್ ಕೇಂದ್ರಗಳಿಗೆ ಪ್ರವೇಶಿಸಬಹುದಾಗಿದೆ.
  • ಮಿಝೋರಾಂ: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರು ವಾಪಸ್ಸಾದ ನಂತರ ಕಾಯಂ ನಿವಾಸಿ ಸ್ಥಾನ ನೀಡುವ ಕುರಿತು ಎಸ್ಒಪಿ ಬಿಡುಗಡೆ ಮಾಡಲಾಗಿದೆ.
  • ನಾಗಾಲ್ಯಾಂಡ್: ರೈಲುಗಳ ಮೂಲಕ ಸಂಕಷ್ಟದಲ್ಲಿರುವ ಜನರು ರಾಜ್ಯಕ್ಕೆ ವಾಪಸ್ಸಾದರೆ ಅವರ ಪ್ರಯಾಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಕೋವಿಡ್-19 ಕುರಿತ ಉನ್ನತಾಧಿಕಾರ ಸಮಿತಿ ವಿವರವಾದ ಯೋಜನೆಯನ್ನು ರೂಪಿಸಿದೆ.
  • ಮೇಘಾಲಯ: ಕೊಹಿಮ ಜಿಲ್ಲಾಡಳಿತ 4221 ಸಂಕಷ್ಟದಲ್ಲಿ ಸಿಲುಕಿದ್ದ ಸ್ಥಳೀಯ ನಿವಾಸಿಗಳನ್ನು ಅವರ ತವರು ಜಿಲ್ಲೆಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ. ಕಿಫೇರೆ ಜಿಲ್ಲೆಯ 332 ನಿವಾಸಿಗಳು ತವರು ತಲುಪಿದ್ದಾರೆ.
  • ಸಿಕ್ಕಿಂ: ಗ್ರಾಮೀಣಾಭಿವೃದ್ಧಿ ಇಲಾಖೆ ಮನ್ರೇಗಾ, ಪಿಎಂಎವೈ ಮತ್ತು ಪಿಎಂಜಿಎಸ್ ವೈ ಅಡಿಯಲ್ಲಿ ರಾಜ್ಯಾದ್ಯಂತ ಕಾಮಗಾರಿಗಳನ್ನು ಪುನರಾರಂಭಿಸಿದೆ. ಇದರಿಂದಾಗಿ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಸ್ವಲ್ಪಮಟ್ಟಿನ ಪರಿಹಾರ ದೊರೆತಿದೆ.
  • ತ್ರಿಪುರಾ: ಪುಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತ್ರಿಪುರಾ ವಾಸಿಗಳನ್ನು ಎರಡನೇ ಬಸ್ ನಲ್ಲಿ  ಅಗರ್ತಲಾಗೆ ಕರೆತರಲಾಗುತ್ತಿದೆ.
  • ಮಹಾರಾಷ್ಟ್ರ: 1026 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 339 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 53 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳು 24,427ಕ್ಕೆ ಏರಿಕೆಯಾಗಿದೆ. ಮಧ್ಯೆ, ಮಹಾರಾಷ್ಟ್ರ ಸರ್ಕಾರ, ಕೇಂದ್ರದಿಂದ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ 20 ತುಕಡಿಗಳನ್ನು ಕಳುಹಿಸಿಕೊಡಲು ಕೋರಿದೆ. ಮೂಲಕ ಅವರು ರಾಜ್ಯ ಪೊಲೀಸ್ ಪಡೆಗೆ ಬೆಂಬಲ ನೀಡಲಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸೋಮವಾರ ಪ್ರಧಾನಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಅಂಶವನ್ನು ಉಲ್ಲೇಖಿಸಿದ್ದಾರೆ.
  • ಗುಜರಾತ್: ಗುಜರಾತ್ ನಲ್ಲಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 362 ಹೊಸ ಪ್ರಕರಗಳು ಪತ್ತೆಯಾಗುವುದರೊಂದಿಗೆ ಅಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 8903ಕ್ಕೆ ಏರಿದೆ. ಅಲ್ಲದೆ ನಿನ್ನೆ 24 ಸಾವುಗಳು ಸಂಭವಿಸಿದೆ. 135ಕ್ಕೂ ಅಧಿಕ ಮುನ್ಸಿಪಲ್ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆಗಳು ಪುನರಾರಂಭವಾಗಿದ್ದು, ಸುಮಾರು 8 ಲಕ್ಷ ಕಾರ್ಯಕರ್ತರಿಗೆ ಉದ್ಯೋಗ ದೊರಕಿಸಿ ಕೊಡಲಾಗಿದೆ. ಸುಮಾರು 3 ಲಕ್ಷ ವಲಸೆ ಕಾರ್ಮಿಕರು ಗುಜರಾತ್ ನಿಂದ ತಮ್ಮ ತವರು ರಾಜ್ಯಗಳಿಗೆ ಹೊರಟಿದ್ದಾರೆ.
  • ರಾಜಸ್ಥಾನರಾಜಸ್ಥಾನದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ 4000 ದಾಟಿದೆ. ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ರಾಜಸ್ಥಾನ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ  4173ಕ್ಕೆ ಏರಿಕೆಯಾಗಿದೆ. ಇಂದು 152 ಹೊಸ ಪ್ರಕರಣ ಪತ್ತೆಯಾಗಿದೆ. ಜೈಪುರ್ ದಿಂದ 49 ಹೊಸ ಪ್ರಕರಣ ದೃಢಪಟ್ಟಿವೆ, ಉದಯಪುರದಿಂದ 22, ಜಲೋರ್ ನಿಂದ 28, ಪಾಲಿಯಿಂದ 24 ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನದ ಮುಖ್ಯಮಂತ್ರಿ ಕೋವಿಡ್-19 ಸೋಂಕಿನಿಂದ ಗ್ರಾಮಗಳನ್ನು ಉಳಿಸಲು ತಮ್ಮ ಸರ್ಕಾರ  ಕ್ವಾರಂಟೈನ್ ಗೆ ಅಗ್ರ ಆದ್ಯತೆ ನೀಡಿದೆ. ರಾಜ್ಯದಲ್ಲಿ ಪ್ರತಿ ದಿನ 25 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ 201 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 3986 ಏರಿಕೆಯಾಗಿದೆ. ಇತ್ತೀಚಿನ ಮಾಹಿತಿಯಂತೆ ಇಂದೋರ್ ನಿಂದ 81, ಭೂಪಾಲ್ ನಿಂದ 30, ಉಜ್ಜಯಿನಿಯಿಂದ 27 ಮತ್ತು ಖಾಂಡ್ವಾದಿಂದ 20 ಪ್ರಕರಣ ವರದಿಯಾಗಿವೆ. 864 ರೋಗಿಗಳ ಪೈಕಿ 535 ಮಂದಿ ರೋಗಿಗಳು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯ ಸರ್ಕಾರದಿಂದ ಆನ್ ಲೈನ್ ಆರೋಗ್ಯ ತಪಾಸಣೆಗಾಗಿ -ಸಂಜೀವಿನಿ ಪೋರ್ಟಲ್ ಆರಂಭಿಸಲಾಗಿದೆ. -ಸಂಜೀವಿನಿ ಸಮಗ್ರ ಟೆಲಿ ಮೆಡಿಸನ್ ಯೋಜನೆಯಾಗಿದ್ದು, ಅದನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಾಯೋಗಿಕವಾಗಿ ಟೆಲಿಮೆಡಿಸನ್ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲಿದೆ.

 

ಪಿ ಐ ಬಿ ವಾಸ್ತವ ಪರೀಶೀಲನೆ

***


(Release ID: 1623710) Visitor Counter : 642