ಹಣಕಾಸು ಸಚಿವಾಲಯ
ಕೋವಿಡ್-19 ವಿರುದ್ಧದ ಭಾರತದ ಆರ್ಥಿಕತೆಯ ಹೋರಾಟವನ್ನು ಬೆಂಬಲಿಸಲು ವ್ಯವಹಾರಗಳಿಗೆ ಸಂಬಂಧಿಸಿದ ಪರಿಹಾರ ಮತ್ತು ವಿಶೇಷವಾಗಿ ಎಂಎಸ್ಎಂಇಗಳಿಗೆ ಸಾಲ ನೆರವು ಘೋಷಿಸಿದ ಹಣಕಾಸು ಸಚಿವರು
Posted On:
13 MAY 2020 6:39PM by PIB Bengaluru
ಕೋವಿಡ್-19 ವಿರುದ್ಧದ ಭಾರತದ ಆರ್ಥಿಕತೆಯ ಹೋರಾಟವನ್ನು ಬೆಂಬಲಿಸಲು ವ್ಯವಹಾರಗಳಿಗೆ ಸಂಬಂಧಿಸಿದ ಪರಿಹಾರ ಮತ್ತು ವಿಶೇಷವಾಗಿ ಎಂಎಸ್ಎಂಇಗಳಿಗೆ ಸಾಲ ನೆರವು ಘೋಷಿಸಿದ ಹಣಕಾಸು ಸಚಿವರು
- ಎಂಎಸ್ಎಂಇಗಳು ಸೇರಿದಂತೆ ವ್ಯವಹಾರಗಳಿಗೆ 3 ಲಕ್ಷ ಕೋಟಿ ರೂ. ತುರ್ತು ಮೂಲ ಬಂಡವಾಳ ಸೌಲಭ್ಯ
- ಸಂಕಷ್ಟದಲ್ಲಿರುವ ಎಂಎಸ್ಎಂಇಗಳಿಗೆ 20,000 ಕೋಟಿ ರೂ. ಅಧೀನ ಸಾಲ
- ಎಂಎಸ್ಎಂಇ ಫಂಡ್ ಆಫ್ ಫಂಡ್ಗಳ ಮೂಲಕ 50,000 ಕೋಟಿ ರೂ. ಈಕ್ವಿಟಿ ಪುನರ್ಧನ
- ಎಂಎಸ್ಎಂಇಗಾಗಿ ಹೊಸ ವ್ಯಾಖ್ಯಾನ ಮತ್ತು ಎಂಎಸ್ಎಂಇಗಾಗಿ ಇತರ ಕ್ರಮಗಳು
- 200 ಕೋಟಿ ವರೆಗಿನ ಸರ್ಕಾರಿ ಟೆಂಡರ್ಗಳಿಗೆ ಜಾಗತಿಕ ಟೆಂಡರ್ಗಳಿಲ್ಲ
- ಜೂನ್, ಜುಲೈ ಮತ್ತು ಆಗಸ್ಟ್ 2020 ರ ವೇತನ ತಿಂಗಳುಗಳಿಗಾಗಿ ವ್ಯವಹಾರ ಮತ್ತು ಸಂಘಟಿತ ಕಾರ್ಮಿಕರಿಗೆ ನೌಕರರ ಭವಿಷ್ಯ ನಿಧಿ ಬೆಂಬಲ ಇನ್ನೂ 3 ತಿಂಗಳು ವಿಸ್ತರಣೆ
- ಇಪಿಎಫ್ಒ ವ್ಯಾಪ್ತಿಗೆ ಬರುವ ಎಲ್ಲಾ ಸಂಸ್ಥೆಗಳಿಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಇಪಿಎಫ್ ಕೊಡುಗೆ ಮುಂದಿನ 3 ತಿಂಗಳವರೆಗೆ ಶೇ.12 ರಿಂದ ಶೇ. 10 ಕ್ಕೆ ಇಳಿಕೆ.
- ಎನ್ಬಿಎಫ್ಸಿ / ಎಚ್ಎಫ್ಸಿ / ಎಂಎಫ್ಐಗಳಿಗಾಗಿ 30,000 ಕೋಟಿ ವಿಶೇಷ ದ್ರವ್ಯತೆ ಯೋಜನೆ.
- ಎನ್ಬಿಎಫ್ಸಿ / ಎಂಎಫ್ಐಗಳ ಸಾಲಸೋಲಗಳಿಗಾಗಿ 45,000 ಕೋಟಿ ಭಾಗಶಃ ಸಾಲ ಖಾತರಿ ಯೋಜನೆ 2.0
- DISCOMS ಗಳಿಗೆ 90,000 ಕೋಟಿ ರೂ. ದ್ರವ್ಯತೆಯ ಪ್ರೋತ್ಸಾಹ
- ಇಪಿಸಿ ಮತ್ತು ರಿಯಾಯಿತಿ ಒಪ್ಪಂದಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಕಟ್ಟುಪಾಡುಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಆರು ತಿಂಗಳವರೆಗೆ ಕಾಲಾವಕಾಶ ವಿಸ್ತರಣೆ
- ರಿಯಲ್ ಎಸ್ಟೇಟ್ ಯೋಜನೆಗಳಿಗೆ ಪರಿಹಾರವಾಗಿ ಎಲ್ಲಾ ನೋಂದಾಯಿತ ಯೋಜನೆಗಳ ನೋಂದಣಿ ಮತ್ತು ಪೂರ್ಣಗೊಳಿಸುವ ಅವಧಿ ಆರು ತಿಂಗಳವರೆಗೆ ವಿಸ್ತರಣೆ
- ವ್ಯವಹಾರಕ್ಕೆ ತೆರಿಗೆ ಪರಿಹಾರವಾಗಿ ಚಾರಿಟಬಲ್ ಟ್ರಸ್ಟ್ಗಳು ಮತ್ತು ಕಾರ್ಪೊರೇಟ್ ಅಲ್ಲದ ವ್ಯವಹಾರಗಳು ಮತ್ತು ವೃತ್ತಿಗಳಿಗೆ ಆದಾಯ ತೆರಿಗೆ ಮರುಪಾವತಿ ಬಾಕಿ ತಕ್ಷಣವೇ ವಿತರಣೆ
- 2020-21 ಹಣಕಾಸು ವರ್ಷದ ಉಳಿದ ಅವಧಿಗೆ ‘ಮೂಲದಲ್ಲಿ ತೆರಿಗೆ ಕಡಿತ’ (TDS) ಮತ್ತು ‘ಮೂಲದಲ್ಲಿ ತೆರಿಗೆ ಸಂಗ್ರಹ’ (TCS) ಶೇ.25 ರಷ್ಟು ಕಡಿತ.
- ವಿವಿಧ ತೆರಿಗೆ ಸಂಬಂಧಿತ ಪಾಲನೆಯ ಅಂತಿಮ ದಿನಾಂಕಗಳ ವಿಸ್ತರಣೆ
ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್ ಘೋಷಿಸಿದ್ದಾರೆ - ಇದು ಭಾರತದ ಜಿಡಿಪಿಯ ಶೇ.10 ಕ್ಕೆ ಸಮಾನವಾಗಿದೆ. ಅವರು आत्मनिर्भर भारत अभियान ಅಥವಾ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸ್ಪಷ್ಟ ಕರೆ ನೀಡಿದರು. ಸ್ವಾವಲಂಬಿ ಭಾರತದ ಐದು ಸ್ತಂಭಗಳಾದ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆಯನ್ನು ಅವರು ವಿವರಿಸಿದ್ದರು.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸಮಗ್ರ ದೃಷ್ಟಿಕೋನವನ್ನು ರೂಪಿಸಿದ್ದಾರೆ ಎಂದು ಹೇಳಿದರು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಆರ್ಥಿಕ ಪ್ಯಾಕೇಜಿನ ಒಂದು ಭಾಗದ ಬಗ್ಗೆ ಪಡೆದ ಮಾಹಿತಿ ಕುರಿತು ವ್ಯಾಪಕವಾದ ಸಮಾಲೋಚನೆ ನಡೆಸಿದ ನಂತರ ಸ್ವತಃ ಪ್ರಧಾನ ಮಂತ್ರಿಯವರು ಖಚಿತಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
“ಮೂಲಭೂತವಾಗಿ, ಸ್ವಾವಲಂಬಿ ಭಾರತವನ್ನು ನಿರ್ಮಿಸುವುದು ಗುರಿಯಾಗಿದೆ, ಅದಕ್ಕಾಗಿಯೇ ಆರ್ಥಿಕ ಪ್ಯಾಕೇಜ್ ಅನ್ನು ಆತ್ಮ ನಿರ್ಭರ್ ಭಾರತ್ ಅಭಿಯಾನ್ ಎಂದು ಕರೆಯಲಾಗುತ್ತದೆ. ಆತ್ಮ ನಿರ್ಭರ್ ಭಾರತ್ ಅಭಿಯಾನವನ್ನು ಸೃಷ್ಟಿಸಲು ನಮ್ಮ ಗಮನವು ಭೂಮಿ, ಕಾರ್ಮಿಕರು, ದ್ರವ್ಯತೆ ಮತ್ತು ಕಾನೂನಿನ ಮೇಲೆ ಇರುತ್ತದೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಆಲಿಸುವ ಮತ್ತು ಸ್ಪಂದಿಸುವ ಸರ್ಕಾರವಾಗಿದೆ, ಆದ್ದರಿಂದ 2014 ರಿಂದ ಕೈಗೊಂಡ ಕೆಲವು ಸುಧಾರಣೆಗಳನ್ನು ನೆನಪಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
"2020 ರ ಬಜೆಟ್ ಮಂಡನೆಯಾದ ತಕ್ಷಣವೇ ಕೋವಿಡ್-19 ಬಂತು, ಲಾಕ್ಡೌನ್ 1.0 ಘೋಷಣೆಯಾದ ಕೆಲವೇ ಗಂಟೆಗಳಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ)ಯನ್ನು ಘೋಷಿಸಲಾಯಿತು," ಎಂದು ಶ್ರೀಮತಿ. ಸೀತಾರಾಮನ್ ಹೇಳಿದರು.
"ನಿನ್ನೆ ಪ್ರಧಾನ ಮಂತ್ರಿ ರೂಪಿಸಿದ ಆತ್ಮ ನಿರ್ಭರ ಭಾರತದ ಬಗ್ಗೆ ಪ್ರಧಾನಿಯವರ ದೃಷ್ಟಿಕೋನವನ್ನು ವಿವರಿಸಲು ಇಂದಿನಿಂದ, ಮುಂದಿನ ಕೆಲವು ದಿನಗಳವರೆಗೆ ಹಣಕಾಸು ಸಚಿವಾಲಯದ ಸಂಪೂರ್ಣ ತಂಡದೊಂದಿಗೆ ನಾನು ಇಲ್ಲಿಗೆ ಬರುತ್ತೇನೆ, " ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಕೆಲಸಕ್ಕೆ ಮರಳುವತ್ತ ಗಮನಹರಿಸುವ ಅಂದರೆ, ನೌಕರರು ಮತ್ತು ಉದ್ಯೋಗದಾತರು, ವ್ಯವಹಾರಗಳು, ವಿಶೇಷವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಉತ್ಪಾದನೆಗೆ ಮರಳಲು ಮತ್ತು ಕಾರ್ಮಿಕರನ್ನು ಲಾಭದಾಯಕ ಉದ್ಯೋಗಕ್ಕೆ ಮರಳಿಸಲು ಅನುವು ಮಾಡಿಕೊಡುವ ಕ್ರಮಗಳನ್ನು ಪ್ರಕಟಿಸಿದರು. ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ), ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್ಎಫ್ಸಿ), ಸಣ್ಣ ಹಣಕಾಸು ವಲಯ ಮತ್ತು ಇಂಧನ ವಲಯವನ್ನು ಬಲಪಡಿಸುವ ಪ್ರಯತ್ನಗಳನ್ನೂ ಸಹ ಪ್ರಕಟಿಸಲಾಯಿತು. ಇದಲ್ಲದೆ, ವ್ಯವಹಾರಕ್ಕೆ ತೆರಿಗೆ ಪರಿಹಾರ, ಗುತ್ತಿಗೆದಾರರಿಗೆ ಒಪ್ಪಂದದ ಬದ್ಧತೆಗಳಿಂದ ಪರಿಹಾರ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅನುಸರಣೆಯ ಪರಿಹಾರವನ್ನು ಇವು ಒಳಗೊಂಡಿದೆ.
ಕಳೆದ ಐದು ವರ್ಷಗಳಲ್ಲಿ, ಉದ್ಯಮ ಮತ್ತು ಎಂಎಸ್ಎಂಇಗಾಗಿ ಸರ್ಕಾರವು ವಿವಿಧ ಸಕ್ರಿಯ ಕ್ರಮಗಳನ್ನು ತೆಗೆದುಕೊಂಡಿದೆ. ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಉದ್ಯಮದಲ್ಲಿ ಹೆಚ್ಚು ಪಾರದರ್ಶಕತೆ ತರಲು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ (ರೇರಾ) ಯನ್ನು 2016 ರಲ್ಲಿ ಜಾರಿಗೆ ತರಲಾಯಿತು. ಈ ಕ್ಷೇತ್ರದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ಕೈಗೆಟುಕುವ ಮತ್ತು ಮಧ್ಯಮ ಆದಾಯದ ವಸತಿಗಾಗಿ ವಿಶೇಷ ನಿಧಿಯನ್ನು ಕಳೆದ ವರ್ಷ ಸ್ಥಾಪಿಸಲಾಯಿತು. ಎಂಎಸ್ಎಂಇಗಳಿಗೆ ಯಾವುದೇ ಸರ್ಕಾರಿ ಇಲಾಖೆ ಅಥವಾ ಸಾರ್ವಜನಿಕ ಉದ್ಯಮಗಳಿಂದ ವಿಳಂಬ ಪಾವತಿ ಸಮಸ್ಯೆಯನ್ನು ಬಗೆಹರಿಸಲು ಸಮಾಧಾನ್ ಪೋರ್ಟಲ್ ಅನ್ನು 2017 ರಲ್ಲಿ ಪ್ರಾರಂಭಿಸಲಾಯಿತು. ದೇಶದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು SIDBI ಅಡಿಯಲ್ಲಿ ಸ್ಟಾರ್ಟ್ಅಪ್ಗಳಿಗಾಗಿ ನಿಧಿಯ ನಿಧಿಯನ್ನು ಸ್ಥಾಪಿಸಲಾಯಿತು ಮತ್ತು MSME ಗಳಿಗೆ ಹಲವಾರು ಸಾಲ ಖಾತರಿ ಯೋಜನೆಗಳನ್ನು ಆರಂಭಿಸಲಾಯಿತು.
ಇಂದು ಘೋಷಿಸಲಾದ ಪ್ರಮುಖ ಕ್ರಮಗಳು:
1. ಎಂಎಸ್ಎಂಇಗಳು ಸೇರಿದಂತೆ ವ್ಯವಹಾರಗಳಿಗೆ 3 ಲಕ್ಷ ಕೋಟಿ ರೂ. ತುರ್ತು ಮೂಲ ಬಂಡವಾಳ ಸೌಲಭ್ಯ
ವ್ಯವಹಾರಗಳಿಗೆ ಪರಿಹಾರವನ್ನು ಒದಗಿಸಲು, ಫೆಬ್ರವರಿ 29, 2020 ರ ವೇಳೆಗೆ ಬಾಕಿ ಇರುವ ಸಾಲದ ಶೇ.20 ಹೆಚ್ಚುವರಿ ಮೂಲ ಬಂಡವಾಳವನ್ನು ರಿಯಾಯಿತಿ ಬಡ್ಡಿ ದರದಲ್ಲಿ ಅವಧಿ ಸಾಲದ ರೂಪದಲ್ಲಿ ಒದಗಿಸಲಾಗುವುದು. ಇದು 25 ಕೋಟಿ ರೂ.ಗಳವರೆಗೆ ಬಾಕಿ ಇರುವ ಮತ್ತು 100 ಕೋಟಿ ರೂ.ಗಳ ವಹಿವಾಟು ಹೊಂದಿರುವ ಘಟಕಗಳಿಗೆ ಲಭ್ಯವಿರುತ್ತದೆ. ಇದಕ್ಕೆ ಘಟಕಗಳು ಯಾವುದೇ ಗ್ಯಾರಂಟಿ ಅಥವಾ ಪೂರಕ ಆಧಾರವನ್ನು ಒದಗಿಸಬೇಕಾಗಿಲ್ಲ. 45 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇಗಳಿಗೆ ಒಟ್ಟು ರೂ. 3.0 ಲಕ್ಷ ಕೋಟಿಗಳ ಈ ಮೊತ್ತಕ್ಕೆ ಭಾರತ ಸರ್ಕಾರವೇ ಸಂಪೂರ್ಣವಾಗಿ ಖಾತ್ರಿ ನೀಡಲಿದೆ.
2. ಸಂಕಷ್ಟದಲ್ಲಿರುವ ಎಂಎಸ್ಎಂಇಗಳಿಗೆ 20,000 ಕೋಟಿ ರೂ. ಅಧೀನ ಸಾಲ
ಎನ್ಪಿಎ ಅಥವಾ ಒತ್ತಡಕ್ಕೊಳಗಾದ ಎರಡು ಲಕ್ಷ ಎಂಎಸ್ಎಂಇಗಳಿಗೆ 20,000 ಕೋಟಿ ರೂ. ಅಧೀನ ಸಾಲ ನೀಡಲಾಗುವುದು. ಸರ್ಕಾರವು ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳ (ಸಿಜಿಟಿಎಂಎಸ್ಇ) ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಮೂಲಕ ಅವರಿಗೆ 4,000 ಕೋಟಿ.ರೂ. ಬೆಂಬಲ ನೀಡಲಿದೆ. ಅಂತಹ ಎಂಎಸ್ಎಂಇಗಳ ಪ್ರವರ್ತಕರಿಗೆ ಬ್ಯಾಂಕುಗಳು ಅಧೀನ-ಸಾಲವನ್ನು ಈಗಿರುವ ಶೇ.15 ಪಾಲಿಗೆ ಸಮನಾಗಿ ಗರಿಷ್ಠ 75 ಲಕ್ಷ ರೂ.ಗಳವರೆಗೆ ನೀಡುತ್ತವೆ.
3. ಎಂಎಸ್ಎಂಇ ಫಂಡ್ ಆಫ್ ಫಂಡ್ಗಳ ಮೂಲಕ 50,000 ಕೋಟಿ ರೂ. ಈಕ್ವಿಟಿ ಪುನರ್ಧನ
ಎಂಎಸ್ಎಂಇಗಳಿಗೆ ಈಕ್ವಿಟಿ ಫಂಡಿಂಗ್ ಬೆಂಬಲವನ್ನು ಒದಗಿಸುವ 10,000 ಕೋಟಿ ರೂ.ಗಳ ಮೂಲಧನದೊಂದಿಗೆ ಸರ್ಕಾರವು ನಿಧಿಯ ನಿಧಿಯನ್ನು ಸ್ಥಾಪಿಸುತ್ತದೆ. ಈ ನಿಧಿಯು ಸುಮಾರು 50,000 ಕೋಟಿ ರೂ.ಗಳನ್ನು ಸಂಗ್ರಹಿಸಲಿದೆ.
4. ಎಂಎಸ್ಎಂಇಗೆ ಹೊಸ ವ್ಯಾಖ್ಯಾನ
ಹೂಡಿಕೆ ಮಿತಿಯನ್ನು ಹೆಚ್ಚಿಸುವ ಮೂಲಕ ಎಂಎಸ್ಎಂಇ ವ್ಯಾಖ್ಯಾನವನ್ನು ಪರಿಷ್ಕರಿಸಲಾಗುತ್ತದೆ. ವಹಿವಾಟಿನ ಹೆಚ್ಚುವರಿ ಮಾನದಂಡಗಳನ್ನು ಸಹ ಪರಿಚಯಿಸಲಾಗುತ್ತಿದೆ. ಉತ್ಪಾದನೆ ಮತ್ತು ಸೇವಾ ವಲಯದ ನಡುವಿನ ವ್ಯತ್ಯಾಸವನ್ನು ಸಹ ತೆಗೆದುಹಾಕಲಾಗುತ್ತದೆ.
5. ಎಂಎಸ್ಎಂಇಗಾಗಿ ಇತರ ಕ್ರಮಗಳು
ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳಿಗೆ ಬದಲಿಯಾಗಿ ಕಾರ್ಯನಿರ್ವಹಿಸಲು ಎಂಎಸ್ಎಂಇಗಳಿಗಾಗಿ ಇ-ಮಾರುಕಟ್ಟೆ ಸಂಪರ್ಕವನ್ನು ಉತ್ತೇಜಿಸಲಾಗುತ್ತದೆ. ಸರ್ಕಾರ ಮತ್ತು ಸಿಪಿಎಸ್ಇಗಳಿಂದ ಎಂಎಸ್ಎಂಇ ಕರಾರು 45 ದಿನಗಳಲ್ಲಿ ಬಿಡುಗಡೆಯಾಗಲಿದೆ.
6. 200 ಕೋಟಿ ರೂ.ಗಳವರೆಗೆ ಸರ್ಕಾರಿ ಟೆಂಡರ್ ಗಳಿಗೆ ಜಾಗತಿಕ ಟೆಂಡರ್ ಇಲ್ಲ.
200 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಸರಕು ಮತ್ತು ಸೇವೆಗಳನ್ನು ಖರೀದಿಸಲು ಜಾಗತಿಕ ಟೆಂಡರ್ ತೆಗೆದುಹಾಕುವ ಸರ್ಕಾರದ ಸಾಮಾನ್ಯ ಹಣಕಾಸು ನಿಯಮಗಳನ್ನು (ಜಿಎಫ್ಆರ್) ತಿದ್ದುಪಡಿ ಮಾಡಲಾಗುವುದು.
7. ಉದ್ಯೋಗಿಗಳು ಮತ್ತು ಸಂಘಟಿತ ಕಾರ್ಮಿಕರಿಗೆ ನೌಕರರ ಭವಿಷ್ಯ ನಿಧಿ ಬೆಂಬಲ
ಪಿಎಂಜಿಕೆಪಿಯ ಭಾಗವಾಗಿ ಪರಿಚಯಿಸಲಾದ ಈ ಯೋಜನೆಯು ಉದ್ಯೋಗದಾತರು ಮತ್ತು ಉದ್ಯೋಗಿ ಇಬ್ಬರ ಪರವಾಗಿ ಇಪಿಎಫ್ಗೆ ತಲಾ ಶೇ.12 ರಷ್ಟು ವೇತನವನ್ನು ಭಾರತ ಸರ್ಕಾರವು ಜೂನ್, ಜುಲೈ ಮತ್ತು ಆಗಸ್ಟ್ 2020 ರ ವೇತನ ತಿಂಗಳುಗಳಿಗೆ ಮತ್ತೆ 3 ತಿಂಗಳು ವಿಸ್ತರಿಸಲಿದೆ. ಇದರಿಂದ 72.22 ಲಕ್ಷ ಉದ್ಯೋಗಿಗಳಿಗೆ ಒಟ್ಟು ಸುಮಾರು 2500 ಕೋಟಿ ರೂ. ಲಾಭವಾಗಲಿದೆ.
8. ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ 3 ತಿಂಗಳವರೆಗೆ ಇಪಿಎಫ್ ಕೊಡುಗೆಯಲ್ಲಿ ಇಳಿಕೆ
ಮುಂದಿನ 3 ತಿಂಗಳವರೆಗೆ ಇಪಿಎಫ್ಒ ವ್ಯಾಪ್ತಿಗೆ ಬರುವ ಎಲ್ಲಾ ಸಂಸ್ಥೆಗಳಿಗೆ ಉದ್ಯೋಗದಾತ ಮತ್ತು ಉದ್ಯೋಗಿಗಳ ಪಿಎಫ್ ಕೊಡುಗೆಯನ್ನು ಅಸ್ತಿತ್ವದಲ್ಲಿರುವ ಶೇ.12 ರಿಂದ ಶೇ.10 ಕ್ಕೆ ಇಳಿಸಲಾಗಿದೆ. ಇದು ತಿಂಗಳಿಗೆ ಸುಮಾರು 2250 ಕೋಟಿ ರೂ.ದ್ರವ್ಯತೆಯನ್ನು ಒದಗಿಸುತ್ತದೆ.
9. ಎನ್ಬಿಎಫ್ಸಿ / ಎಚ್ಎಫ್ಸಿ / ಎಂಎಫ್ಐಗಳಿಗಾಗಿ 30,000 ಲಕ್ಷ ಕೋಟಿ ರೂ. ವಿಶೇಷ ದ್ರವ್ಯತೆ ಯೋಜನೆ
ಆರ್ಬಿಐ ಒದಗಿಸುವ 30,000 ಲಕ್ಷ ಕೋಟಿ ರೂ.ಗಳ ವಿಶೇಷ ದ್ರವ್ಯತೆ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದೆ. ಎನ್ಬಿಎಫ್ಸಿ, ಎಚ್ಎಫ್ಸಿ ಮತ್ತು ಎಂಎಫ್ಐಗಳ ಹೂಡಿಕೆ ದರ್ಜೆಯ ಸಾಲ ಪತ್ರದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಮಾರುಕಟ್ಟೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಗುವುದು. ಇದಕ್ಕೆ ಭಾರತ ಸರ್ಕಾರವು ಶೇಕಡಾ 100 ರಷ್ಟು ಖಾತರಿ ನೀಡುತ್ತದೆ.
10. 45,000 ಕೋಟಿ ರೂ. ಎನ್ಬಿಎಫ್ಸಿ / ಎಂಎಫ್ಐಗಳ ಸಾಲಸೋಲಗಳಿಗಾಗಿ ಭಾಗಶಃ ಸಾಲ ಖಾತರಿ ಯೋಜನೆ 2.0
ಅಸ್ತಿತ್ವದಲ್ಲಿರುವ ಭಾಗಶಃ ಸಾಲ ಖಾತರಿ ಯೋಜನೆಯನ್ನು ಪರಿಷ್ಕರಿಸಲಾಗುತ್ತಿದೆ ಮತ್ತು ಈಗ ಕಡಿಮೆ ದರದ ಎನ್ಬಿಎಫ್ಸಿ, ಎಚ್ಎಫ್ಸಿ ಮತ್ತು ಇತರ ಸಣ್ಣ ಹಣಕಾಸು ಸಂಸ್ಥೆಗಳ (ಎಂಎಫ್ಐ) ಸಾಲವನ್ನು ಸರಿದೂಗಿಸಲು ವಿಸ್ತರಿಸಲಾಗುವುದು. ಭಾರತ ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಶೇಕಡಾ 20 ರಷ್ಟು ಮೊದಲ ನಷ್ಟ ಖಾತ್ರಿ ನೀಡುತ್ತದೆ.
11. DISCOM ಗಳಿಗೆ 90,000 ಕೋಟಿ ರೂ. ದ್ರವ್ಯತೆಯ ಪ್ರೋತ್ಸಾಹ
ವಿದ್ಯುತ್ ಹಣಕಾಸು ನಿಗಮ ಮತ್ತು ಗ್ರಾಮೀಣ ವಿದ್ಯುದ್ದೀಕರಣ ನಿಗಮವು ಎರಡು ಸಮಾನ ಕಂತುಗಳಲ್ಲಿ 90000 ಕೋಟಿ ರೂ.ಗಳವರೆಗೆ ಡಿಸ್ಕಾಮ್ ನಲ್ಲಿ ದ್ರವ್ಯತೆಯನ್ನು ತುಂಬಲಿದೆ. ಈ ಮೊತ್ತವನ್ನು DISCOM ಗಳು ತಮ್ಮ ಬಾಕಿ ಹಣವನ್ನು ಪ್ರಸರಣ ಮತ್ತು ಉತ್ಪಾದನಾ ಕಂಪನಿಗಳಿಗೆ ಪಾವತಿಸಲು ಬಳಸುತ್ತವೆ. ಇದಲ್ಲದೆ, CPSE GENCOಗಳು DISCOM ಗಳಿಗೆ ರಿಯಾಯಿತಿ ನೀಡುತ್ತವೆ, ಇದು ಅಂತಿಮವಾಗಿ ಗ್ರಾಹಕರಿಗೆ ಅವರ ನಿಗದಿತ ಶುಲ್ಕಗಳಿಗೆ ಪರಿಹಾರವಾಗಿ ರವಾನೆಯಾಗುತ್ತದೆ.
12. ಗುತ್ತಿಗೆದಾರರಿಗೆ ಪರಿಹಾರ
ಎಲ್ಲಾ ಕೇಂದ್ರ ಏಜೆನ್ಸಿಗಳಾದ ರೈಲ್ವೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಸಿಪಿಡಬ್ಲ್ಯುಡಿಗಳು, ಇಪಿಸಿ ಮತ್ತು ರಿಯಾಯಿತಿ ಒಪ್ಪಂದಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಕಟ್ಟುಪಾಡುಗಳನ್ನು ಪೂರ್ಣಗೊಳಿಸಲು 6 ತಿಂಗಳವರೆಗೆ ಕಾಲಾವಕಾಶ ವಿಸ್ತರಿಸುತ್ತವೆ.
13. ರಿಯಲ್ ಎಸ್ಟೇಟ್ ಯೋಜನೆಗಳಿಗೆ ಪರಿಹಾರ
ರೇರಾ ಅಡಿಯಲ್ಲಿ ಫೋರ್ಸ್ ಮಜೂರ್ ಷರತ್ತು ವಿಧಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗುತ್ತಿದೆ. ಎಲ್ಲಾ ನೋಂದಾಯಿತ ಯೋಜನೆಗಳಿಗೆ ನೋಂದಣಿ ಮತ್ತು ಪೂರ್ಣಗೊಳಿಸುವ ದಿನಾಂಕವನ್ನು 6 ತಿಂಗಳವರೆಗೆ ವಿಸ್ತರಿಸಲಾಗುವುದು ಮತ್ತು ರಾಜ್ಯದ ಪರಿಸ್ಥಿತಿಯನ್ನು ಆಧರಿಸಿ ಇನ್ನೂ 3 ತಿಂಗಳು ವಿಸ್ತರಿಸಬಹುದು. ರೇರಾ ಅಡಿಯಲ್ಲಿ ವಿವಿಧ ಶಾಸನಬದ್ಧ ಅನುಸರಣೆಗಳನ್ನು ಸಹ ವಿಸ್ತರಿಸಲಾಗುವುದು.
14. ವ್ಯವಹಾರಕ್ಕೆ ತೆರಿಗೆ ಪರಿಹಾರ
ಚಾರಿಟಬಲ್ ಟ್ರಸ್ಟ್ಗಳು ಮತ್ತು ಕಾರ್ಪೊರೇಟ್ ಅಲ್ಲದ ವ್ಯವಹಾರಗಳು ಮತ್ತು ಮಾಲೀಕತ್ವ, ಪಾಲುದಾರಿಕೆ ಮತ್ತು ಎಲ್ಎಲ್ಪಿಗಳು ಮತ್ತು ಸಹಕಾರಿ ಸಂಸ್ಥೆಗಳು ಸೇರಿದಂತೆ ಇತರ ವೃತ್ತಿಗಳ ಬಾಕಿ ಇರುವ ಆದಾಯ ತೆರಿಗೆ ಮರುಪಾವತಿಯನ್ನು ತಕ್ಷಣ ಪಾವತಿ ಮಾಡಲಾಗುತ್ತದೆ.
15. ತೆರಿಗೆ ಸಂಬಂಧಿತ ಕ್ರಮಗಳು
* 'ಮೂಲದಲ್ಲಿ ತೆರಿಗೆ ಕಡಿತ' (TDS) ಮತ್ತು 'ಮೂಲದಲ್ಲಿ ಸಂಗ್ರಹಿಸಿದ ತೆರಿಗೆ' (TCS) ದರಗಳಲ್ಲಿನ ಕಡಿತ - ಸಂಬಳವಲ್ಲದ ಎಲ್ಲಾ ಪಾವತಿಗಾಗಿ ಟಿಡಿಎಸ್ ಮತ್ತು ಟಿಸಿಎಸ್ ದರಗಳನ್ನು 2020-21 ಹಣಕಾಸು ವರ್ಷದ ಉಳಿದ ಅವಧಿಗೆ ದರಗಳಿಗೆ 25 ಪ್ರತಿಶತದಷ್ಟು ಕಡಿಮೆಗೊಳಿಸಲಾಗುತ್ತದೆ. ಇದು 50,000 ಕೋಟಿ ರೂ.ಗಳ ದ್ರವ್ಯತೆಯನ್ನು ಒದಗಿಸುತ್ತದೆ.
* 2020-21ರ ಮೌಲ್ಯಮಾಪನ ವರ್ಷಕ್ಕೆ ಎಲ್ಲಾ ಆದಾಯ ತೆರಿಗೆ ರಿಟರ್ನ್ಗಳ ಸಲ್ಲಿಕೆಯನ್ನು ನವೆಂಬರ್ 30, 2020 ಕ್ಕೆ ವಿಸ್ತರಿಸಲಾಗುವುದು. ಅಂತೆಯೇ, ತೆರಿಗೆ ಲೆಕ್ಕಪರಿಶೋಧನೆಯ ಕಡೆಯ ದಿನವನ್ನು ಅಕ್ಟೋಬರ್ 31, 2020 ಕ್ಕೆ ವಿಸ್ತರಿಸಲಾಗುತ್ತದೆ.
* “ವಿವಾದ್ ಸೆ ವಿಶ್ವಾಸ್” ಯೋಜನೆಯಡಿ ಹೆಚ್ಚುವರಿ ಮೊತ್ತವಿಲ್ಲದೆ ಪಾವತಿ ಮಾಡುವ ಕೊನೆಯ ದಿನವನ್ನು ಡಿಸೆಂಬರ್ 31, 2020 ಕ್ಕೆ ವಿಸ್ತರಿಸಲಾಗುವುದು.
***
(Release ID: 1623703)
Visitor Counter : 2411
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam