ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಮೋದಿ ಸರಕಾರವು ಸಿಬ್ಬಂದಿಗಳ ಕ್ಷೇಮಕ್ಕೆ ಬದ್ದವಾಗಿದೆ ಮತ್ತು ಅವರ ಕುಂದು ಕೊರತೆಗಳನ್ನು ನ್ಯಾಯಯುತವಾಗಿ ಬಗೆ ಹರಿಸಲಾಗುತ್ತದೆ: ಡಾ. ಜಿತೇಂದ್ರ ಸಿಂಗ್

Posted On: 13 MAY 2020 4:08PM by PIB Bengaluru

ಮೋದಿ ಸರಕಾರವು ಸಿಬ್ಬಂದಿಗಳ ಕ್ಷೇಮಕ್ಕೆ ಬದ್ದವಾಗಿದೆ ಮತ್ತು ಅವರ ಕುಂದು ಕೊರತೆಗಳನ್ನು ನ್ಯಾಯಯುತವಾಗಿ ಬಗೆ ಹರಿಸಲಾಗುತ್ತದೆ: ಡಾ. ಜಿತೇಂದ್ರ ಸಿಂಗ್

 

ಕೋವಿಡ್ ಜಾಗತಿಕ ಸಾಂಕ್ರಾಮಿಕದಲ್ಲಿ ಒಂದು ವಿಶಿಷ್ಟ ಮತ್ತು ಮಾದರಿಯ ಮೊದಲ ಉಪಕ್ರಮವಾಗಿ ಕೇಂದ್ರ ಸರಕಾರದ ಈಶಾನ್ಯ ವಲಯ ಅಭಿವೃದ್ದಿ (ಡಿ..ಎನ್..ಆರ್.) ಸಹಾಯಕ ಸಚಿವರೂ (ಸ್ವತಂತ್ರ ನಿರ್ವಹಣೆ), ಎಂ..ಎಸ್. ಪ್ರಧಾನ ಮಂತ್ರಿ ಅವರ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ , ನಿವೃತ್ತಿ ವೇತನ , ಅಣು ವಿಜ್ಞಾನ ಮತ್ತು ಬಾಹ್ಯಾಕಾಶ ಖಾತೆಗಳ ಹೊಣೆಯನ್ನೂ ಹೊತ್ತಿರುವ ಡಾ. ಜಿತೇಂದ್ರ ಸಿಂಗ್ ಅವರಿಂದು ಡಿ..ಪಿ.ಟಿ, ಡಿ..ಆರ್.ಪಿ.ಜಿ. ಮತ್ತು ಡಿ..ಪಿ.ಪಿ.ಡಬ್ಲ್ಯು ಮೂರೂ ಇಲಾಖೆಗಳ ಸೆಕ್ಷನ್ ಅಧಿಕಾರಿಗಳ ಮಟ್ಟದವರೆಗಿನ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದರು.

Description: C:\Users\MHA\Desktop\DJS-2.JPG

ತಮ್ಮ ಆರಂಭಿಕ ಮಾತುಗಳಲ್ಲಿ ಡಾ. ಸಿಂಗ್ ಅವರು ಮೋದಿ ಸರಕಾರ ತನ್ನ ಸಿಬ್ಬಂದಿಗಳ ಕ್ಷೇಮಕ್ಕೆ ಬದ್ದವಾಗಿದೆ ಮತ್ತು ಅವರ ಕಲ್ಯಾಣದ ಬಗ್ಗೆ ಅತ್ಯಂತ ಸೂಕ್ಷ್ಮತೆಯ ಕಳಕಳಿಯನ್ನು ತೋರಿಸಿದೆ ಎಂದರು. ಕೋವಿಡ್ ಬಿಕ್ಕಟ್ಟಿನಲ್ಲಿ ಕಚೇರಿಗಳಲ್ಲಿ 33 ಶೇಕಡಾ ಹಾಜರಾತಿ ಇಟ್ಟುಕೊಂಡು ಉಳಿದಂತೆ ಮನೆಯಿಂದಲೇ ಕೆಲಸ ಮಾಡುವ ಆರೋಗ್ಯ ಪೂರ್ಣ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ. ಮತ್ತು ಇದು ಕೆಲಸ ಸ್ನೇಹೀ ಪರಿಸರಕ್ಕೆ ಸಾಕ್ಷಿ ಎಂದವರು ನುಡಿದರು. ಪರೀಕ್ಷಾ ಸಮಯದಲ್ಲಿ ಇತರ ಸಿಬ್ಬಂದಿಗಳನ್ನು ಅಪಾಯಕ್ಕೆ ದೂಡದೆ ಸಚಿವಾಲಯದ ಹಿರಿಯ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರಲ್ಲದೆ, ಇಲಾಖೆಗಳ ಕೆಲಸದ ಫಲಿತ ಹೆಚ್ಚಾಗಿದೆ , ಕೆಲಸದ ಸಂಸ್ಕೃತಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ತೃಪ್ತಿ ವ್ಯಕ್ತಪಡಿಸಿದರು.

ಲಾಕ್ ಡೌನ್ ತೆಗೆದುಹಾಕಿದ ಬಳಿಕ ಭಡ್ತಿ ಸಹಿತ ಎಲ್ಲಾ ಕುಂದುಕೊರತೆಗಳನ್ನು ಪರಿಗಣಿಸಲಾಗುವುದು ಎಂದವರು ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಭರವಸೆ ನೀಡಿದರು.400 ಕ್ಕೂ ಅಧಿಕ ಭಡ್ತಿಗಳಿಗಾಗಿ ವರ್ಷದ ಜನವರಿಯಲ್ಲೇ ಆದೇಶಗಳನ್ನು ಹೊರಡಿಸಲಾಗಿದೆ ಎಂದೂ ಅವರು ತಿಳಿಸಿದರು.

Description: C:\Users\MHA\Desktop\DJS-1.jpeg

ಹೊಸ ಸಾಮಾನ್ಯ ಕೆಲಸದ ವಾತಾವರಣದಲ್ಲಿ ಸಮಾವೇಶ ಮಾಡಿದ ಮುಖ್ಯ ಉದ್ದೇಶದ ಕುರಿತು ಮಾತನಾಡಿದ ಡಾ. ಜಿತೇಂದ್ರ ಸಿಂಗ್ , ಸಿಬ್ಬಂದಿಗಳ ಕ್ಷೇಮ ಮತ್ತು ಅವರ ಕುಟುಂಬಗಳ ಕ್ಷೇಮ ಸಮಾಚಾರ ತಿಳಿದುಕೊಳ್ಳುವುದಾಗಿದೆ ಮತ್ತು ಕುಂದು ಕೊರತೆಗಳೇನಾದರೂ ಇದ್ದರೆ ಅದನ್ನು ಬಹಳ ಸೂಕ್ಷ್ಮವಾಗಿ ಪರಿಹರಿಸಲು ಗಮನಹರಿಸುವುದಾಗಿದೆ ಎಂದೂ ಹೇಳಿದರು. ಸಿಬ್ಬಂದಿ ಸಚಿವಾಲಯವು ಇತರ ಸಚಿವಾಲಯಗಳ ಕಾರ್ಯನಿರ್ವಹಣೆಗೆ ಮಾನದಂಡಗಳನ್ನು ನಿರ್ಧರಿಸುತ್ತದೆ ಎಂದು ಹೇಳಿದ ಅವರು ಉಳಿದ ಸಚಿವಾಲಯಗಳೂ ಇಂತಹ ಸಮಾವೇಶಗಳನ್ನು ನಡೆಸಲು ಪ್ರೇರಣೆ ಪಡೆಯಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಡಿ..ಆರ್.ಪಿ.ಜಿ. ಕಾರ್ಯದರ್ಶಿ ಡಾ. ಕ್ಷತ್ರಪತಿ ಶಿವಾಜಿ, ಡಿ..ಪಿ.ಟಿ. ಕಾರ್ಯದರ್ಶಿ ಡಾ. ಸಿ. ಚಂದ್ರಮೌಳಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1623701) Visitor Counter : 203