ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ

Posted On: 12 MAY 2020 10:14PM by PIB Bengaluru

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ

 

ಎಲ್ಲ ದೇಶವಾಸಿಗಳಿಗೆ ಆದರ ಪೂರ್ವಕ ನಮಸ್ಕಾರಗಳು..

ಕೊರೊನಾ ಪ್ರಸರಣ ವಿರುದ್ಧದ ಹೋರಾಟ ಜಗತ್ತಿಗೆ 4 ತಿಂಗಳುಗಳೇ ಕಳೆದಿದೆ. ಸನ್ನಿವೇಶದಲ್ಲಿ ಇಡೀ ದೇಶದಲ್ಲಿ 42 ಲಕ್ಷಕ್ಕೂ ಅಧಿಕ ಜನರು ಕೊರೊನಾದಿಂದ ಸೋಂಕಿತರಾಗಿದ್ದಾರೆ.2 ಲಕ್ಷ 75 ಸಾವಿರಕ್ಕೂ ಹೆಚ್ಚು ಜನರು ದುಃಖದಾಯಕವಾಗಿ ಮರಣ ಹೊಂದಿದ್ದಾರೆ. ಭಾರತದಲ್ಲಿ ಕೂಡ ಅನೇಕ ಪರಿವಾರಗಳು ತಮ್ಮ ಆಪ್ತರನ್ನು ಕಳೆದುಕೊಂಡಿವೆ. ಎಲ್ಲರಿಗೂ ನಾನು ಸಂತಾಪ ವ್ಯಕ್ತಪಡಿಸುತ್ತೇನೆ.

ಮಿತ್ರರೇ,

ಒಂದು ವೈರಾಣು, ಜಗತ್ತನ್ನು ತತ್ತರಿಸುವಂತೆ ಮಾಡಿದೆ, ವಿಶ್ವಾದ್ಯಂತ ಕೋಟ್ಯಂತರ ಜೀವಗಳು ಸಂಕಟವನ್ನು ಎದುರಿಸುತ್ತಿವೆ. ಇಡೀ ವಿಶ್ವ ಜೀವ ಉಳಿಸುವ ಯುದ್ಧದಲ್ಲಿ ಒಗ್ಗೂಡಿವೆ. ನಾವು ಇಂಥ ಸಂಕಟವನ್ನು ಹಿಂದೆ ಎಂದೂ ಕಂಡಿರಲಿಲ್ಲ, ಕೇಳಿರಲಿಲ್ಲ, ನಿಶ್ಚಿತವಾಗಿ ಮಾನವ ಕುಲಕ್ಕೆ ಇದು ಊಹೆಗೂ ನಿಲುಕದ್ದು, ಬಿಕ್ಕಟ್ಟು ಅಭೂತಪೂರ್ವವಾದುದಾಗಿದೆ. ಇದರಿಂದ ಸುಸ್ತಾಗಿ ಕೂರುವುದು, ಸೋಲುವುದು, ಕೈ ಚೆಲ್ಲುವುದು ಮಾನವರಿಗೆ ಎಂದಿಗೂ ಸಮ್ಮತವಲ್ಲ. ಎಚ್ಚರಿಕೆ ಇರುತ್ತಲೇ ಹೋರಾಟದಲ್ಲಿ ಎಲ್ಲ ನಿಯಮ ಪಾಲಿಸುತ್ತಾ ನಾವು ಉಳಿಯಲೂ ಬೇಕು, ಮುಂದೆ ಸಾಗಲೂ ಬೇಕು. ಇಂದು ವಿಶ್ವ ಸಂಕಟದಲ್ಲಿದೆ. ನಾವು ಈಗ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ನಮ್ಮ ಸಂಕಲ್ಪ ಸಂಕಷ್ಟಕ್ಕಿಂತಲೂ ದೊಡ್ಡದಾಗಿರಬೇಕು.

ಸ್ನೇಹಿತರೆ, ಕಳೆದ ಒಂದು ಶತಮಾನದಿಂದ ನಾವು ಕೇಳುತ್ತಾ ಬಂದಿದ್ದೇವೆ. 21ನೇ ಶತಮಾನ ಭಾರತದ ಶತಮಾನ ಎಂದು. ನಮಗೆ ಕೊರೊನಾ ಪೂರ್ವ ವಿಶ್ವ, ಜಾಗತಿಕ ವ್ಯವಸ್ಥೆಯನ್ನು ವಿಸ್ತಾರವಾಗಿ ನೋಡಿ ತಿಳಿಯುವ ಅವಕಾಶ ಸಿಕ್ಕಿತ್ತು. ಕೊರೊನಾ ಸಂಕಷ್ಟದ ನಂತರವೂ ವಿಶ್ವದಲ್ಲಿ ಸ್ಥಿತಿ ಏನಾಗಿದೆ ಎನ್ನುವುದನ್ನು ನಾವು ನಿರಂತರವಾಗಿ ನೋಡುತ್ತಿದ್ದೇವೆ. ಎರಡೂ ಕಾಲಘಟ್ಟವನ್ನು ನಾವು ಭಾರತದ ದೃಷ್ಟಿಯಿಂದ ನೋಡಿದರೆ, 21ನೇ ಶತಮಾನ ಭಾರತದ್ದು, ಇದು ಕೇವಲ ಕನಸಷ್ಟೇ ಅಲ್ಲ ನಮ್ಮೆಲ್ಲರ ಜವಾಬ್ದಾರಿ. ಇದರ ಮಾರ್ಗವೇನು? ವಿಶ್ವದ ಇಂದಿನ ಸ್ಥಿತಿ ನಮಗೆ ತಿಳಿಸುವುದೇನೆಂದರೆ, ಇದಕ್ಕೆ ಇರುವುದು ಒಂದೇ ಮಾರ್ಗ, ಅದು ಸ್ವಾವಲಂಬಿ ಭಾರತ. ನಮ್ಮ ಶಾಸ್ತ್ರದಲ್ಲಿ ಹೇಳಿರುವಂತೆ ಏಷಃ ಪಂಥಾಃ ಅಂದರೆ ಇದುವೇ ಮಾರ್ಗ. ಅದು ಸ್ವಾವಲಂಬಿ ಭಾರತ.

ಸ್ನೇಹಿತರೆ, ಒಂದು ರಾಷ್ಟ್ರವಾಗಿ, ಇಂದು ನಾವು ಮಹತ್ವದ ಪರಿಸ್ಥಿತಿಯಲ್ಲಿ ನಿಂತಿದ್ದೇವೆ. ಇಷ್ಟು ದೊಡ್ಡ ಅಪತ್ತು ಭಾರತಕ್ಕೆ ಒಂದು ಸಂಕೇತ ಒಂದು ಸಂದೇಶ ಹೊತ್ತು ತಂದಿದೆ. ಒಂದು ಅವಕಾಶವನ್ನೂ ತಂದು ಕೊಟ್ಟಿದೆ. ನಾನು ಉದಾಹರಣೆಯ ಮೂಲಕ ನನ್ನ ಮಾತು ತಿಳಿಸಲು ಇಚ್ಛಿಸುತ್ತೇನೆ. ಕೊರೊನಾ ಸಂಕಷ್ಟ ಶುರವಾದಾಗ ನಮ್ಮಲ್ಲಿ ಒಂದೇ ಒಂದು ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ. ಎನ್.95 ಮಾಸ್ಕ್ ಹೆಸರಿಗಷ್ಟೇ ತಯಾರಾಗುತ್ತಿತ್ತು. ಈಗ ಭಾರತದಲ್ಲಿ ಪ್ರತಿ ದಿನ 2 ಲಕ್ಷ ಪಿಪಿಇ 2 ಲಕ್ಷ ಎನ್. 95 ಮಾಸ್ಕ್ ತಯಾರಾಗುತ್ತಿದೆ. ನಾವು ಇದನ್ನು ಏಕೆ ಮಾಡುತ್ತಿದ್ದೇವೆ ಎಂದರೆ, ಭಾರತ ಸಂಕಷ್ಟವನ್ನು ಅವಕಾಶವಾಗಿ ಬದಲಾಯಿಸಿದೆ. ಅವಕಾಶವಾಗಿ ಬದಲಾಯಿಸಿದ ಭಾರತದ ದೃಷ್ಟಿ ಸ್ವಾವಲಂಬಿ ಭಾರತದ ಸಂಕಲ್ಪಕ್ಕೆ ಅಷ್ಟೇ ಪ್ರಭಾವಿಯಾಗಿ ಸಿದ್ಧ ಮಾಡಿ ತೋರಿಸುತ್ತದೆ. ಇಂದು ವಿಶ್ವದ ಸನ್ನಿವೇಶದಲ್ಲಿ ಸ್ವಾವಲಂಬಿ ಎಂಬ ಶಬ್ದದ ಅರ್ಥ ಬದಲಾಗಿದೆ. ಜಾಗತಿಕ ವಿಶ್ವದಲ್ಲಿ ಸ್ವಾವಲಂಬನೆಯ ವ್ಯಾಖ್ಯೆ ಬದಲಾಗುತ್ತಿದೆ. ಅರ್ಥ ಕೇಂದ್ರಿತ ಜಾಗತಿಕರಣ ಮತ್ತು ಮಾನವ ಕೇಂದ್ರಿತ ಜಾಗತೀಕರಣ ಕುರಿತಂತೆ ಚರ್ಚೆ ಇಂದು ನಡೆಯುತ್ತಿದೆ.

ವಿಶ್ವದ ಮುಂದೆ ಭಾರತದ ಮೂಲಭೂತ ಚಿಂತನೆ ಆಶಾ ಕಿರಣವಾಗಿ ಕಾಣುತ್ತಿದೆ. ಭಾರತದ ಸಂಸ್ಕೃತಿ, ಭಾರತದ ಸಂಸ್ಕಾರ, ಸ್ವಾವಲಂಬನೆಯ ಮತ್ತು ಆತ್ಮದ ಮಾತನಾಡುತ್ತದೆ, ಇಲ್ಲಿ ಆತ್ಮ ವಸುದೈವ ಕುಟುಂಬಕಂ ಆಗಿದೆ. ವಿಶ್ವ ಒಂದು ಪರಿವಾರ. ಭಾರತ ಯಾವಾಗ ಸ್ವಾವಲಂಬನೆಯ ಮಾತನಾಡುತ್ತದೋ ಆಗ ಆತ್ಮ ಕೇಂದ್ರೀತ ವ್ಯವಸ್ಥೆಯ ವಕಾಲತ್ತು ನಡೆಸುವುದಿಲ್ಲ. ಭಾರತದ ಸ್ವಾವಲಂಬನೆಯಲ್ಲಿ ಸಂಸಾರದ ಸುಖ, ಸಹಯೋಗ, ಮತ್ತು ಶಾಂತಿಯ ಚಿಂತೆ ಇರುತ್ತದೆ. ಯಾವ ಸಂಸ್ಕೃತಿ ಜೈ ಜಗತ್ತಿನಲ್ಲಿ ವಿಶ್ವಾಸವಿಡುತ್ತದೆಯೋ, ಸಂಸ್ಕೃತಿ ಜೀವಿಗಳ ಕಲ್ಯಾಣವನ್ನೂ ಬಯಸುತ್ತದೆಯೋ, ಅದು ಪೂರ ವಿಶ್ವವನ್ನೇ ಕುಟುಂಬವೆಂದು ತಿಳಿಯುತ್ತದೆಯೋ, ಯಾವುದು ತನ್ನ ಶ್ರದ್ಧೆಯಲ್ಲಿ, 'माता भूमिः पुत्रो अहम् पृथिव्यः' – ಅಂದರೆ, ಯಾವ ಸಂಸ್ಕೃತಿ ಪೃಥ್ವಿಯನ್ನು ತಾಯಿ ಎಂದು ಭಾವಿಸುತ್ತದೋ ಸಂಸ್ಕೃತಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಆಗ ಅದರಿಂದ ಸುಖಿ, ಸಮೃದ್ಧ ಜಗತ್ತಿನ ಸಂಭವ ಸುನಿಶ್ಚಿತವಾಗುತ್ತದೆ. ಭಾರತದ ಪ್ರಗತಿಯಲ್ಲಿ ಸದಾ ವಿಶ್ವದ ಪ್ರಗತಿ ಸೇರಿದೆ. ಭಾರತದ ಗುರಿಯ ಪ್ರಭಾವ, ಭಾರತದ ಕಾರ್ಯದ ಪ್ರಭಾವ ವಿಶ್ವದ ಕಲ್ಯಾಣದ ಮೇಲೆ ಪ್ರಭಾವ ಬೀರುತ್ತದೆ. ಭಾರತ ಬಯಲು ಶೌಚಮುಕ್ತವಾದರೆ ವಿಶ್ವದ ಚಿತ್ರಣವೂ ಬದಲಾಗುತ್ತದೆ. ಕ್ಷಯ ಇರಲಿ, ಕುಪೋಷಣೆಯೇ ಇರಲಿ, ಪೋಲಿಯೋ ಇರಲಿ ಭಾರತದ ಅಭಿಯಾನದ ಪ್ರಭಾವ ವಿಶ್ವಕ್ಕೇ ಆಗುತ್ತದೆ. ಅಂತಾರಾಷ್ಟ್ರೀಯ ಸೌರ ಸಹಯೋಗ, ಹವಾಮಾನ ಬದಲಾವಣೆ, ವಿರುದ್ಧ ಭಾರತದ ಕೊಡುಗೆಯಾಗಿದೆ. ಅಂತಾರಾಷ್ಟ್ರೀಯ ಯೋಗ ದಿನದ ಉಪಕ್ರಮ ಮಾನವ, ಬದುಕಿನ ಒತ್ತಡದಿಂದ ಪಾರಾಗಲು ಭಾರತ ನೀಡಿದ ಕೊಡುಗೆಯಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜಗತ್ತಿಗೆ ಭಾರತದ ಔಷಧಿ ಹೊಸ ಆಸೆ ಹೊತ್ತು ಸಾಗುತ್ತದೆ. ಕ್ರಮಗಳಿಂದಾಗಿ ವಿಶ್ವದೆಲ್ಲಡೆ ಭಾರತದ ಪ್ರಶಂಸೆ ನಡೆಯುತ್ತದೆ. ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುತ್ತಾರೆ. ಭಾರತ ಉತ್ತಮವಾದ್ದನ್ನು ಮಾಡುತ್ತದೆ. ಮಾನವ ಕಲ್ಯಾಣಕ್ಕೆ ಉತ್ತಮವಾದ್ದನ್ನೇ ಕೊಡುತ್ತದೆ ಎಂಬ ವಿಶ್ವಾಸ ಜಗತ್ತಿಗೇ ಮೂಡಿದೆ.

ಈಗಿರುವ ಸವಾಲು ಏನೆಂದರೆ, ಅದು ಹೇಗೆ?

ಸವಾಲಿಗೂ ಉತ್ತರ ಇದೆ. ಅದೇನೆಂದರೆ 130 ಕೋಟಿ ದೇಶವಾಸಿಗಳ ಸ್ವಾವಲಂಬಿ ಭಾರತದ ಸಂಕಲ್ಪ.

ಸ್ನೇಹಿತರೆ, ನಮಗೆ ಶತಮಾನಗಳ ಗೌರವ ಪೂರ್ಣ ಇತಿಹಾಸವಿದೆ. ಭಾರತ ಸಮೃದ್ಧವಾಗಿದ್ದಾಗ, ಚಿನ್ನದ ಪಕ್ಷಿ ಎಂದು ಕರೆಯಲಾಗುತ್ತಿದ್ದಾಗಲೂ, ಸಂಪೂರ್ಣವಾಗಿ ವಿಶ್ವ ಕಲ್ಯಾಣದ ಮಾರ್ಗದಲ್ಲೇ ನಡೆದಿದೆ. ಕಾಲ ಬದಲಾಯಿತು. ದೇಶ ಗುಲಾಮಗಿರಿಗೆ ಸಿಲುಕಿತು. ನಾವು ವಿಕಾಸಕ್ಕೆ ತಹತಹಿಸುತ್ತಿದ್ದೆವು. ಇಂದು ಮತ್ತೆ ಭಾರತ ಯಶಸ್ವಿಯಾಗಿ ವಿಕಾಸದತ್ತ ಸಾಗಿದೆ. ಆದರೂ ವಿಶ್ವ ಕಲ್ಯಾಣದ ವಿಚಾರದಲ್ಲಿ ಅಛಲವಾಗಿದೆ. ನೆನಪು ಮಾಡಿಕೊಳ್ಳಿ ಶತಮಾನದ ಆರಂಭದಲ್ಲಿ ವೈ 2 ಕೆ ಸಮಸ್ಯೆ ಬಂದಿತ್ತು. ಭಾರತದ ತಂತ್ರಜ್ಞಾನ ನುರಿತರು ವಿಶ್ವವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಇಂದು ನಮ್ಮ ಬಳಿ ಸಾಮರ್ಥ್ಯ ಇದೆ. ಸಾಧನ ಇದೆ. ಜಗತ್ತಿನ ಅತಿ ದೊಡ್ಡ ಪ್ರತಿಭೆ ನಮ್ಮಲ್ಲಿ ಇದೆ. ನಾವು ನಾವು ಉತ್ತಮ ವಸ್ತು ತಯಾರಿಸಬಲ್ಲೆವು, ಗುಣ ಮಟ್ಟ ಉತ್ತಮ ಪಡಿಸಬಲ್ಲೆವು. ಪೂರೈಕೆ ಸರಪಣಿಯನ್ನು ಉತ್ತಮ ಪಡಿಸಬಲ್ಲೆವು, ಆಧುನಿಕವಾಗಿಸಲೂಬಲ್ಲೆವು.

ಸ್ನೇಹಿತರೆ, ನಾನು ನನ್ನ ಕಣ್ಣೆದುರೇ ಕಚ್ ಭೂಕಂಪದ ದಿನ ನೋಡಿದ್ದೇನೆ. ಎಲ್ಲ ಕಡೆ ಕೇವಲ ಅವಶೇಷಗಳೇ. ಎಲ್ಲ ದ್ವಂಸವಾಗಿತ್ತು. ಕಚ್ ಮೃತ್ಯುವಿನ ಹೊದಿಕೆ ಹೊದ್ದು ಮಲಗಿತ್ತು. ಅಂಥ ಪರಿಸ್ಥಿತಿ ಬದಲಾಗುತ್ತದೆ ಎಂದು ಯಾರೂ ಎಂದುಕೊಂಡಿರಲಿಲ್ಲ ಕಚ್ ಮೈ ಕೊಡವಿ ಎದ್ದಿತು. ಇದು ಭಾರತೀಯರ ಸಂಕಲ್ಪ ಶಕ್ತಿ. ನಾವು ಮನಸ್ಸು ಮಾಡಿದರೆ, ಯಾವುದೇ ಗುರಿ ಸಾಧನೆ ಅಸಂಭವ ಅಲ್ಲ, ಯಾವುದೇ ದಾರಿ ಕಷ್ಟವಲ್ಲ. ಇಂದು ನಮ್ಮ ನಮ್ಮ ಬಳಿ ದಾರಿ ಇದೆ. ಸಂಕಲ್ಪವೂ ಇದೆ. ಇದು ಭಾರತವನ್ನು ಸ್ವಾವಲಂಬಿ ಮಾಡುವ ಸಂಕಲ್ಪ ಶಕ್ತಿ ಆಗಬಲ್ಲುದಾಗಿದೆ.

ಸ್ನೇಹಿತರೆ, ಭಾರತ, ಸ್ವಾವಲಂಬಿ ಆಗುತ್ತದೆ. ಬೃಹತ್ ಸ್ವಾವಲಂಬಿ ಭಾರತ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ. ಮೊದಲನೆಯದು ಆರ್ಥಿಕತೆ, ಎಂಥ ಆರ್ಥಿಕತೆ ಎಂದರೆ ಅದು ಇಂಕ್ರಿಮೆಂಟಲ್ ಚೇಂಜ್ ಅಲ್ಲ ಬದಲಾಗಿ ಕ್ವಾಟಂ ಜಂಪ್ ನೀಡಬೇಕು. ಎರಡನೆಯದು ಮೂಲಸೌಕರ್ಯ, ಎಂಥ ಮೂಲಸೌಕರ್ಯ ಬೇಕು ಎಂದರೆ ಅದು ಆಧುನಿಕ ಭಾರತದ ಸಂಕೇತವಾಗಬೇಕು, ಪರಿಚಯ ಆಗಿರಬೇಕು. ಮೂರನೆಯದು ನಮ್ಮ ವ್ಯವಸ್ಥೆ, ಎಂಥ ವ್ಯವಸ್ಥೆ ಎಂದರೆ ಕಳೆದ ಶಥಮಾನದ ರೀತಿ ನೀತಿ ಅಲ್ಲ, ಆದರೆ 21ನೇ ಶತಮಾನದ ಕನಸು ನನಸು ಮಾಡುವ ತಂತ್ರಜ್ಞಾನ ಚಾಲಿತ ವ್ಯವಸ್ಥೆ ಆಧರಿಸಿರಬೇಕು. ನಾಲ್ಕನೇದು ನಮ್ಮ ಜನಸಂಖ್ಯೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ನಮ್ಮ ಚೈತನ್ಯ ಶೀಲ ಜನಸಂಖ್ಯೆ ನಮ್ಮ ಬಲವಾಗಿದೆ. ಅದು ಸ್ವಾವಲಂಬಿ ಭಾರತಕ್ಕೆ ನಮ್ಮ ಚೈತನ್ಯ ಶಕ್ತಿಯಾಗಿದೆ. ಐದನೆಯದು ಬೇಡಿಕೆ. ನಮ್ಮ ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ಸರಪಳಿಯ ಚಕ್ರವಿದೆಯೋ, ಶಕ್ತಿ ಇದೆಯೋ ಅದನ್ನು ಪೂರ್ಣ ಸಾಮರ್ಥ್ಯದೊಂದಿಗೆ ಬಳಸುವ ಅಗತ್ಯವಿದೆ. ದೇಶದಲ್ಲಿ ಬೇಡಿಕೆ ಹೆಚ್ಚಿಸಲು ಬೇಡಿಕೆ ಪೂರ್ಣಗೊಳಿಸಲು ಪೂರೈಕೆ ಸಪರಣಿಯ ನಮ್ಮ ಎಲ್ಲ ಭಾಧ್ಯಸ್ಥರೂ ಸಶಕ್ತರಾಗುವುದು ಅತ್ಯಗತ್ಯ. ನಮ್ಮ ಪೂರೈಕೆ ಸರಪಣಿ, ನಮ್ಮ ಅವಶ್ಯಕತೆಯನ್ನು ಬಲಪಡಿಸುತ್ತದೆ. ಇದರಲ್ಲಿ ನನ್ನ ದೇಶದ ಮಣ್ಣಿನ ಮಹತ್ವವಿದೆ, ದೇಶದ ಕಾರ್ಮಿಕರ ಬೆವರಿಸ ಸುಂಗಂಧವಿದೆ.

ಮಿತ್ರರೇ, ಕೊರೊನಾ ಸಂಕಷ್ಟ ಎದುರಿಸುತ್ತಲೇ ಹೊಸ ಸಂಕಲ್ಪದೊಂದಿಗೆ ನಾನು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುತ್ತೇನೆ. ಇದು ಸ್ವಾವಲಂಬಿ ಭಾರತದ ಅಭಿಯಾನಕ್ಕೆ ಆರಂಭಿಕ ಕೊಂಡಿಯಾಗಿ ಕೆಲಸ ಮಾಡುತ್ತದೆ. ಸ್ನೇಹಿತರೆ, ಸರ್ಕಾರ ಕೊರೊನಾ ಸಂಕಷ್ಟಕ್ಕೆ ಸಂಬಂಧಿಸಿದಂತೆ ಏನೇನು ಆರ್ಥಿಕ ಘೋಷಣೆ ಮಾಡಿತ್ತೋ. ಭಾರತೀಯ ರಿಸರ್ವ್ ಬ್ಯಾಂಕ್ ಯಾವೆಲ್ಲಾ ನಿರ್ಧಾರ ಪ್ರಕಟಿಸಿತ್ತೋ. ಅದೆಲ್ಲವಿನೂ ಒಗ್ಗೂಡಿಸಿ, ಆರ್ಥಿಕ ಪ್ಯಾಕೇಜ್ ಘೋಷಣೆ ಸೇರಿಸಿದರೆ ಹತ್ತಿರ ಹತ್ತಿರ 20 ಲಕ್ಷ ಕೋಟಿ ರೂ. ಆಗುತ್ತದೆ. ಪ್ಯಾಕೇಜ್ ಭಾರತದ ಜಿಡಿಪಿಯ ಸರಿ ಸುಮಾರು ಶೇಕಡ 10ರಷ್ಟು ಆಗುತ್ತದೆ. ಇದೆಲ್ಲದರ ಜೊತೆಗೆ ದೇಶದ ವಿಭಿನ್ನ ವರ್ಗದ ಆರ್ಥಿಕ ವ್ಯವಸ್ಥೆಯೊಂದಿಗೆ ಸೇರಿದ್ದು, 20 ಲಕ್ಷ ಕೋಟಿ ರೂ. ಬೆಂಬಲ ಸಿಗುತ್ತದೆ. 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ 2020ರಲ್ಲಿ ದೇಶದ ವಿಕಾಸ ಯಾತ್ರೆಗೆ ಸ್ವಾವಲಂಬಿ ಭಾರತಕ್ಕೆ ಹೊಸ ವೇಗ ನೀಡುತ್ತದೆ. ಸ್ವಾವಲಂಬಿ ಭಾರತದ ಸಂಕಲ್ಪ ಬಲಪಡಿಸಲು ಪ್ಯಾಕೇಜ್ ಲ್ಯಾಂಡ್, ಲೇಬರ್, ಲಿಕ್ವಿಡಿಟಿ, ಲಾಸ್ ಎಲ್ಲಕ್ಕೂ ಬಲ ನೀಡುತ್ತದೆ. ಆರ್ಥಿಕ ಪ್ಯಾಕೇಜ್ ಲಕ್ಷಾಂತರ ಜನರಿಗೆ ಜೀವನೋಪಾಯವಾಗಿರುವ ನಮ್ಮ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಸಣ್ಣ ಕೈಗಾರಿಕೆ, ಎಂ.ಎಸ್ಎಂಇಗಳಿಗೆ ಸಾಧನವಾಗಲಿದೆ. ಸ್ವಾವಲಂಬಿ ಭಾರತದ ಸಂಕಲ್ಪಕ್ಕೆ ಬಲವಾದ ಆಧಾರವಾಗಲಿದೆ. ಆರ್ಥಿಕ ಪ್ಯಾಕೇಜ್ ದೇಶದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ದೇಶದ ಶ್ರಮಿಕರಿಗೆ, ದೇಶದ ರೈತರಿಗೆ, ಎಲ್ಲ ಸಂದರ್ಭದಲ್ಲೂ, ಎಲ್ಲ ಋತುವಿನಲ್ಲೂ ನೆರವಾಗಲಿದೆ. ಆರ್ಥಿಕ ಪ್ಯಾಕೇಜ್, ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ದೇಶದ ಮಧ್ಯಮ ವರ್ಗದವರಿಗಾಗಿ ಇರುತ್ತದೆ, ಆರ್ಥಿಕ ಪ್ಯಾಕೇಜ್ ಭಾರತೀಯ ಉದ್ಯೋಗ ಜಗತ್ತಿಗಾಗಿದ್ದು, ಇದು ಭಾರತದ ಆರ್ಥಿಕ ಸಾಮರ್ಥ್ಯವಕ್ಕೆ ಉತ್ತೇಜನ ನೀಡಲು ಸಂಕಲ್ಪಿತವಾಗಿದೆ. ನಾಳೆಯಿಂದ ಮುಂದಿನ ಕೆಲ ದಿನಗಳವರೆಗೆ . ವಿತ್ತ ಸಚಿವರ ಮೂಲಕ ನಿಮಗೆ ಸ್ವಾವಲಂಬಿ ಭಾರತ ಪ್ರೇರಿತ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸ್ವಾವಲಂಬಿ ಭಾರತದ ಮಾಡಲು ಕಠಿಣ ಸುಧಾರಣೆಯ ಮುಂದೆ ದೇಶ ಸಾಗುವುದು ಅನಿವಾರ್ಯವಾಗಿದೆ. ಕಳೆದ 6 ವರ್ಷಗಳಲ್ಲಿ ಏನೆಲ್ಲಾ ಸುಧಾರಣೆ ಆಗಿದೆ ಎಂಬುದು ನಿಮಗೂ ಅನುಭವಕ್ಕೆ ಬಂದಿರಬಹುದು, ಅದರಿಂದ ಇಂದು ಸಂಕಷ್ಟದ ಕಾಲದಲ್ಲಿ ಕೂಡ ಭಾರತದ ವ್ಯವಸ್ಥೆ, ಅಧಿಕ ಸಾಮರ್ಥ್ಯ ಮತ್ತೂ ಸಕ್ಷಮವಾಗಿದೆ ಗೋಚರಿಸಿದೆ. ಇಲ್ಲವಾಗಿದ್ದರೆ, ಯಾರು ಯೋಚಿಸುತ್ತಾರೆ ಹೇಳಿ, ಭಾರತ ಸರ್ಕಾರ ನೀಡುವ ಹಣ ಬಡವರ, ಜೇಬಿಗೆ ಹೋಕುತ್ತದೆ ಎಂದು. ಎಲ್ಲ ಸರ್ಕಾರಿ ಕಚೇರಿ, ಸಾರಿಗೆ ಬಂದ್ ಆಗಿದ್ದಾಗಲೂ ಹಣ ಅವರಿಗೆ ತಲುಪಿದೆ. ಜನ್ ಧನ್, ಆಧಾರ್, ಮೊಬೈಲ್ -ಜಾಮ್ ತ್ರಿಶಕ್ತಿಯ ಸುಧಾರಣೆಯನ್ನು ಈಗ ನಾವು ನೋಡಿದ್ದೇವೆ. ಸುಧಾರಣೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಇಂಥ ಸುಧಾರಣೆ ರೈತರ ಜಮೀನಿನಿಂದ ಹಿಡಿದು ಸಂಪೂರ್ಣ ಪೂರೈಕೆ ಸರಪಳಿ ವರೆಗೆ ಇರಬೇಕು. ಆಗ ರೈತರು ಸಶಕ್ತರಾಗುತ್ತಾರೆ. ಮುಂದೆಯೂ ಕೊರೊನಾದಂಥ ಯಾವುದೇ ಸಂಕಷ್ಟ ಎದುರಾದರೂ ಅದರ ಪರಿಣಾಮ ಕೃಷಿ ಮೇಲೆ ಕಡಿಮೆ ಆಗಬೇಕು. ಸುಧಾರಣೆ ತರ್ಕಬದ್ಧ ತೆರಿಗೆ ವ್ಯವಸ್ಥೆ, ಸರಳ, ಸ್ಪಷ್ಟ ನಿಯಮ ಕಾನೂನು, ಉತ್ತಮ ಮೂಲ ಸೌಕರ್ಯ , ಸಮರ್ಥ ಮಾನವ ಸಂಪಮ್ಮೂಲ, ಬಲಿಷ್ಠವಾದ ಆರ್ಥಿಕ ವ್ಯವಸ್ಥೆಯ ನಿರ್ಮಾಣಕ್ಕಾಗಿ ಆಗುತ್ತದೆ. ವ್ಯವಸ್ಥೆ ವ್ಯಾಪಾರಕ್ಕೆ ಬೆಂಬಲ ನೀಡುತ್ತದೆ. ಬಂಡವಾಳ ಆಕರ್ಷಿಸುತ್ತದೆ. ಮತ್ತು ಮೇಕ್ ಇನ್ ಇಂಡಿಯಾ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ.

ಸ್ನೇಹಿತರೆ, ಸ್ವಾವಲಂಬಿ, ಆತ್ಮ ಬಲ ಮತ್ತು ಆತ್ಮ ವಿಶ್ವಾಸದಿಂದ ಮಾತ್ರ ಇದು ಸಾಧ್ಯ. ಸ್ವಾವಲಂಬನೆ ಜಾಗತಿಕ ಪೂರೈಕೆ ಸರಪಣಿಯಲ್ಲಿನ ದೊಡ್ಡ ಸ್ಪರ್ಧೆಗೆ ದೇಶವನ್ನು ಸಜ್ಜು ಗೊಳಿಸುತ್ತದೆ. ಸಮಯದ ಅಗತ್ಯವೇನೆಂದರೆ, ಭಾರತ ಎಲ್ಲ ಸ್ಪರ್ಧೆಗಳಲ್ಲೂ ಗೆಲ್ಲಬೇಕು, ಜಾಗತಿಕ ಪೂರೈಕೆ ಸರಪಣಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಬೇಕು. ಆರ್ಥಿಕ ಪ್ಯಾಕೇಜ್ ನಲ್ಲಿ ಅನೇಕ ಅವಕಾಶ ಮಾಡಲಾಗಿದೆ. ಎಲ್ಲ ವಲಯದ ಸಾಮರ್ಥ್ಯ ಹೆಚ್ಚುತ್ತದೆ, ಗುಣಮಟ್ಟವೂ ಸುನಿಶ್ಚಿತವಾಗುತ್ತದೆ. ಸಂಕಷ್ಟ ಎಷ್ಟು ದೊಡ್ಡದು ಎಂದರೆ, ದೊಡ್ಡ ವ್ಯವಸ್ಥೆಗಳೇ ಅಲುಗಾಡಿವೆ. ಆದರೂ ಇಂಥ ಪರಿಸ್ಥಿತಿಯಲ್ಲೂ ನಮ್ಮ ಬಡ ಸೋದರ ಸೋದರಿಯರು ಸಂಘರ್ಷದ ಶಕ್ತಿ, ಸಂಯಮ ಶಕ್ತಿಯ ದರ್ಶನ ಮಾಡಿಸಿದ್ದಾರೆ. ನಮ್ಮ ಬೀದಿ ಬದಿ ಮಾರಾಟ ಮಾಡುವ ಸೋದರರು, ಮನೆಯಲ್ಲಿ ಕೆಲಸ ಮಾಡೋರು, ಕಷ್ಟ ಅನುಭವಿಸಿದ್ದಾರೆ. ತ್ಯಾಗ ಮಾಡಿದ್ದಾರೆ. ಇವರ ಅನುಪಸ್ಥಿತಿಯನ್ನು ಯಾರು ತಾನೆ ಗುರುತಿಸುವುದಿಲ್ಲ. ಈಗ ಅವರನ್ನು ಬಲಶಾಲಿ ಮಾಡೋದು, ಅವರ ಆರ್ಥಿಕ ಹಿತಕ್ಕಾಗಿ ದೊಡ್ಡ ಹೆಜ್ಜೆ ಇಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿಯೇ ಇದನ್ನು ಗಮನದಲ್ಲಿಟ್ಟುಕೊಂಡು ಶ್ರಮಿಕರು