PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 12 MAY 2020 6:21PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರ ಮತ್ತು ಲಡಾಖ್ಗಳಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡ ಸಿದ್ಧತೆ ಮತ್ತು ನಿಗ್ರಹ ಕ್ರಮಗಳನ್ನು ಪರಿಶೀಲಿಸಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಹಾಗೂ ಲಡಾಖ್ ಲೆಫ್ಟಿನೆಂಟ್ ಗವರ್ನರ್ಗಳು ಮತ್ತು ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಹಿಂದಿರುಗಿರುವ ವಲಸೆ ಕಾರ್ಮಿಕರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಹೆಚ್ಚು ಪರಿಣಾಮಕಾರಿಯಾದ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ, ಸಮರ್ಪಕ ಪರೀಕ್ಷೆ ಮತ್ತು ಮರಳಿ ಬಂದಿರುವ  ಎಲ್ಲರ ಸಮಯೋಚಿತ ಚಿಕಿತ್ಸೆಯತ್ತ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು. ವಿದೇಶದಿಂದ ಹಿಂದಿರುಗಿರುವವರೂ ಸಹ  ಇದರಲ್ಲಿ ಸೇರುತ್ತಾರೆ.

ಮೇ 12, 2020 ರಂದು  ದೇಶದಲ್ಲಿ ಒಟ್ಟು 70,756 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 22,455 ಜನರನ್ನು ಗುಣಪಡಿಸಲಾಗಿದೆ ಮತ್ತು 2,293 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ, 3,604 ಹೊಸ ದೃಢಪಟ್ಟ ಪ್ರಕರಣಗಳು ವರದಿಯಾಗಿವೆ ಮತ್ತು 1538 ರೋಗಿಗಳು ಗುಣಮುಖರಾಗಿದ್ದಾರೆ. ಕಳೆದ 14 ದಿನಗಳಲ್ಲಿ ದ್ವಿಗುಣಗೊಳ್ಳುವ ಅವಧಿ 10.9 ಆಗಿದ್ದರೆ, ಕಳೆದ ಮೂರು ದಿನಗಳಲ್ಲಿ ಇದು 12.2 ಕ್ಕೆ ಸುಧಾರಿಸಿದೆ ಎಂದು ಅವರು ಹೇಳಿದರು. ಸಾವಿನ ದರವು ಶೇ.3.2 ಮತ್ತು ಚೇತರಿಕೆಯ ದರ ಶೇ.31.74 ಇದೆ ಎಂದು ಅವರು ಹೇಳಿದರು. ಕೋವಿಡೇತರ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಗಮನ ಹರಿಸಬೇಕು ಎಂದು ರಾಜ್ಯಗಳಿಗೆ ಮತ್ತೊಮ್ಮೆ ಸ್ಪಷ್ಟಪಡಿಸಲಾಯಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623292

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ  ಸಂವಾದ ನಡೆಸಿದ ಪ್ರಧಾನ ಮಂತ್ರಿ

ಕೋವಿಡ್-19 ವಿರುದ್ಧ ಭಾರತದ ಹೋರಾಟದಲ್ಲಿ ಮುಂದಿನ ಹಾದಿ ಕುರಿತು ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಭೆ ನಡೆಸಿದರು. ಕೊರೊನಾವೈರಸ್ ವಿರುದ್ಧದ ಯುದ್ಧದಲ್ಲಿ ನಾವು ಈಗ ನಮ್ಮ ಕಾರ್ಯತಂತ್ರವನ್ನು ಮತ್ತಷ್ಟು ಕೇಂದ್ರೀಕರಿಸಬಹುದು. ನಮಗೀಗ ಎರಡು ರೀತಿಯ ಸವಾಲುಗಳು ಎದುರಾಗಿವೆ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ರೋಗದ ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಚಟುವಟಿಕೆಯನ್ನು ಕ್ರಮೇಣ ಹೆಚ್ಚಿಸುವುದು. ಎರಡೂ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಕೋವಿಡ್-19 ಗ್ರಾಮೀಣ ಪ್ರದೇಶಗಳಿಗೆ ಹರಡುವುದನ್ನು ತಡೆಯುವ ಪ್ರಯತ್ನ ಈಗ ಆಗಬೇಕು ಎಂದು ಪ್ರಧಾನಿ ಹೇಳಿದರು. ಕೋವಿಡ್-19 ನಂತರ ವಿಶ್ವವು ಮೂಲಭೂತವಾಗಿ ಬದಲಾಗಿರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ವಿಶ್ವ ಸಮರಗಳಂತೆಯೇ ಈಗ ವಿಶ್ವವು ಕೊರೋನಾಗೆ ಮೊದಲು, ಕೊರೊನಾ ನಂತರ ಎಂದು ಆಗಿರುತ್ತದೆ. ಇದು ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂಬುದರ ಮೇಲೆ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡುತ್ತದೆ. ಹೊಸ ಜೀವನ ವಿಧಾನವು "ಜನ್ ಸೆ ಲೇಕರ್ ಜಗ್ ತಕ್" - ಒಬ್ಬ ವ್ಯಕ್ತಿಯಿಂದ ಇಡೀ ಮಾನವೀಯತೆಯವರೆಗೆ- ತತ್ತ್ವದ ಮೇಲೆ ಇರುತ್ತದೆ, ಹೊಸ ವಾಸ್ತವಕ್ಕಾಗಿ ನಾವೆಲ್ಲರೂ ಸಿದ್ಧರಾಗಬೇಕು ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623213

ಭಾರತೀಯ ರೈಲ್ವೆಯಿಂದ  542 “ಶ್ರಮಿಕ್ ವಿಶೇಷರೈಲುಗಳನ್ನು 2020 ಮೇ 12 ರವರೆಗೆ (09:30 ಗಂ) ದೇಶಾದ್ಯಂತ ಓಡಿಸಲಾಗಿದೆ

ಮೇ 12, 2020 ಹೊತ್ತಿಗೆ, ದೇಶದ ವಿವಿಧ ರಾಜ್ಯಗಳಿಂದ ಒಟ್ಟು 542 “ಶ್ರಮಿಕ್ ವಿಶೇಷರೈಲುಗಳನ್ನು ಕಾರ್ಯಗತಗೊಳಿಸಲಾಗಿದ್ದು, ಇದರಲ್ಲಿ 448 ರೈಲುಗಳು ಗಮ್ಯಸ್ಥಾನವನ್ನು ತಲುಪಿವೆ ಮತ್ತು 94 ರೈಲುಗಳು ಸಂಚಾರದಲ್ಲಿವೆ. 448 ರೈಲುಗಳು ಆಂಧ್ರಪ್ರದೇಶ (1 ರೈಲು), ಬಿಹಾರ (117 ರೈಲುಗಳು), ಛತ್ತೀಸ್ಗಢ (1 ರೈಲು), ಹಿಮಾಚಲ ಪ್ರದೇಶ (1 ರೈಲು), ಜಾರ್ಖಂಡ್ (27 ರೈಲುಗಳು), ಕರ್ನಾಟಕ (1 ರೈಲು), ಮಧ್ಯಪ್ರದೇಶ (38ರೈಲುಗಳು), ಮಹಾರಾಷ್ಟ್ರ (3 ರೈಲುಗಳು), ಒಡಿಶಾ (29 ರೈಲುಗಳು), ರಾಜಸ್ಥಾನ (4 ರೈಲುಗಳು), ತಮಿಳುನಾಡು (1 ರೈಲು), ತೆಲಂಗಾಣ (2 ರೈಲುಗಳು), ಉತ್ತರ ಪ್ರದೇಶ (221 ರೈಲುಗಳು), ಪಶ್ಚಿಮ ಬಂಗಾಳ (2 ರೈಲುಗಳು) ಗಳಿಗೆ ಸಂಚರಿಸಿವೆ. ಶ್ರಮಿಕ್ ವಿಶೇಷ ರೈಲುಗಳನ್ನು ಹತ್ತುವ ಮೊದಲು ಪ್ರಯಾಣಿಕರ ಸೂಕ್ತ ತಪಾಸಣೆಯನ್ನು ಖಾತ್ರಿಪಡಿಸಲಾಗಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ಒದಗಿಸಲಾಗುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623404

ಆಯ್ದ ಪ್ರಯಾಣಿಕರ ರೈಲು ಸೇವೆಗಳ ಪುನರಾರಂಭ

ಭಾರತೀಯ ರೈಲ್ವೆಯು ಇಂದು 8 ರೈಲುಗಳೊಂದಿಗೆ ಪ್ರಯಾಣಿಕ ರೈಲು ಸೇವೆಗಳನ್ನು ಪುನರಾರಂಭಿಸಿದೆ. ರೈಲುಗಳು ನವದೆಹಲಿ, ಮುಂಬೈ, ಹೌರಾ, ಅಹಮದಾಬಾದ್, ಪಾಟ್ನಾ ಮತ್ತು ಬೆಂಗಳೂರಿನಿಂದ ಸಂಚರಿಸುತ್ತವೆ. ಕೋವಿಡ್-19 ಕಾರಣದಿಂದಾಗಿ ಪ್ರಯಾಣಿಕರ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಪುನರಾರಂಭದ ಮೊದಲ ವಿಶೇಷ ರೈಲು, ರೈಲು ಸಂಖ್ಯೆ 02442 ನವದೆಹಲಿಯಿಂದ ಬಿಲಾಸ್ಪುರಕ್ಕೆ ಇಂದು ನವದೆಹಲಿ ರೈಲ್ವೆ ನಿಲ್ದಾಣದಿಂದ ಪ್ರಯಾಣ ಆರಂಭಿಸಿತು.  3400 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಒಟ್ಟು 03 ವಿಶೇಷ ರೈಲುಗಳು ಇಂದು ನವದೆಹಲಿಯಿಂದ ನಿರ್ಗಮಿಸಲಿವೆ. ಒಟ್ಟು 05 ವಿಶೇಷ ರೈಲುಗಳು ಇತರ ನಗರಗಳಿಂದ ನವದೆಹಲಿ ಕಡೆಗೆ ಹೊರಡಲಿವೆ. ವಿಶೇಷ ರೈಲು ಸೇವೆಯು ಭಾರತೀಯ ರೈಲ್ವೆ ನಡೆಸುತ್ತಿರುವ ಶ್ರಮಿಕ್ ವಿಶೇಷಗಳಿಗೆ ಹೆಚ್ಚುವರಿಯಾಗಿರುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623383

7 ಮೇ 2020 ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ 31 ವಿಮಾನಗಳಲ್ಲಿ 6037 ಭಾರತೀಯರು ವಿದೇಶದಿಂದ ಹಿಂದಿರುಗಿದ್ದಾರೆ

ಮೇ 7, 2020 ರಂದು ಭಾರತ ಸರ್ಕಾರವು ವಂದೇ ಭಾರತ್ ಮಿಷನ್ ಅನ್ನು ಪ್ರಾರಂಭಿಸಿತು. ಇದು ನಾಗರಿಕರನ್ನು ಭಾರತಕ್ಕೆ ವಾಪಸ್ ಕರೆತರುವ ಅತಿದೊಡ್ಡ ಉಪಕ್ರಮಗಳಲ್ಲಿ ಒಂದಾಗಿದೆ. ಕಾರ್ಯಾಚರಣೆಯಡಿಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ವಿದೇಶಾಂಗ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಮೊದಲ ಹಂತದಲ್ಲಿ ಅಮೆರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ, ಸಿಂಗಾಪುರ್, ಸೌದಿ ಅರೇಬಿಯಾ, ಕುವೈತ್, ಫಿಲಿಪೈನ್ಸ್, ಯುಎಇ ಮತ್ತು ಮಲೇಷ್ಯಾ ಮೊದಲಾದ ದೇಶಗಳಿಂದ 14,800 ಭಾರತೀಯರನ್ನು ವಾಪಸ್ ಕರೆತರಲು ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ 12 ದೇಶಗಳಿಗೆ ಒಟ್ಟು 64 ವಿಮಾನಗಳನ್ನು (ಏರ್ ಇಂಡಿಯಾದಿಂದ 42 ಮತ್ತು ಎಐ ಎಕ್ಸ್ಪ್ರೆಸ್ 24) ನಿರ್ವಹಿಸುತ್ತಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623376

ಅಂತರರಾಷ್ಟ್ರೀಯ ದಾದಿಯರ ದಿನದಂದು ಪ್ರಧಾನಿಯವರಿಂದ ದಾದಿಯರಿಗೆ ಕೃತಜ್ಞತೆ ಸಲ್ಲಿಕೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಂತರರಾಷ್ಟ್ರೀಯ ದಾದಿಯರ ದಿನದಂದು ದಾದಿಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನಮ್ಮ ಗ್ರಹವನ್ನು ಆರೋಗ್ಯವಾಗಿಡಲು ಹಗಲು ರಾತ್ರಿಯೆನ್ನದೇ ದುಡಿಯುವ ಅದ್ಭುತ ದಾದಿಯರಿಗೆ ಕೃತಜ್ಞತೆ ಸಲ್ಲಿಸುವ ಅಂತರರಾಷ್ಟ್ರೀಯ ದಾದಿಯರ ದಿನವು ಒಂದು ವಿಶೇಷ ದಿನವಾಗಿದೆ. ಪ್ರಸ್ತುತ, ಅವರು ಕೋವಿಡ್-19ನ್ನು ಸೋಲಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದಾದಿಯರು ಮತ್ತು ಅವರ ಕುಟುಂಬಗಳಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆಎಂದು ಅವರು ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623370

ಅಂತರರಾಷ್ಟ್ರೀಯ ದಾದಿಯರ ದಿನದ ಆಚರಣೆ

ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯ ನಡೆದ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಯ್ರಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ವಹಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್) ಇದನ್ನುದಾದಿಯರ ಮತ್ತು ಶುಶ್ರೂಷಕಿಯರ ವರ್ಷಎಂದು ಘೋಷಿಸಿರುವುದರಿಂದ ವರ್ಷ ಮಹತ್ವದ್ದಾಗಿದೆ. ಶುಶ್ರೂಷಾ ವೃತ್ತಿಪರರ ಕೆಲಸ ಮತ್ತು ನಿಸ್ವಾರ್ಥ ಸಮರ್ಪಣೆಯನ್ನು ಶ್ಲಾಘಿಸಿ ಮತ್ತು ಅವರನ್ನು ಆರೋಗ್ಯ ವಿತರಣಾ ವ್ಯವಸ್ಥೆಯ ಬಲವಾದ ಮತ್ತು ಪ್ರಮುಖ ಸ್ತಂಭಗಳೆಂದು ಕರೆದ ಡಾ.ಹರ್ಷವರ್ಧನ್, "ನಿಮ್ಮ ಕೆಲಸದ ಆಳ ಮತ್ತು ಪ್ರಾಮಾಣಿಕತೆಯನ್ನು ಸಮರ್ಪಕವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ, ನಿಮ್ಮ ದಿನ ಎಷ್ಟೇ ಕಠೋರವಾಗಿದ್ದರೂ ಯಾವಾಗಲೂ ರೋಗಿಗಳಿಗೆ ಮೊದಲ ಸ್ಥಾನವನ್ನು ನೀಡುತ್ತೀರಿ. ನಿಮ್ಮ ದಯೆ, ಸಮರ್ಪಣೆ ಮತ್ತು ಗುಣಪಡಿಸುವ ಸ್ಪರ್ಶಕ್ಕಾಗಿ ಧನ್ಯವಾದಗಳುಎಂದರು. ಸದ್ಯದ ಸಾಂಕ್ರಾಮಿಕದ ಸಮಯದಲ್ಲಿ ದಾದಿಯರ ಅದ್ವಿತೀಯ ಮತ್ತು ನಿರಂತರ ಕೆಲಸಗಳಿಗಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623376

ಗಾಂಧಿ ಶಾಂತಿ ಪ್ರಶಸ್ತಿ 2020 ನಾಮನಿರ್ದೇಶನಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು ಸರ್ಕಾರವು 15.6.2020 ರವರೆಗೆ ವಿಸ್ತರಿಸಿದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623195

ಅಸ್ಸೋಚಾಮ್ ಆಯೋಜಿಸಿದ್ದ ಇಂಡೋ-ಬಾಂಗ್ಲಾದೇಶದವರ್ಚುವಲ್ ಕಾನ್ಫರೆನ್ಸ್ಅನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್

ಕೋವಿಡ್ ನಂತರದ ಆರ್ಥಿಕ, ವ್ಯಾಪಾರ, ವೈಜ್ಞಾನಿಕ ಸಂಶೋಧನೆ ಮತ್ತು ಹಲವಾರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೊಸ ಪ್ರಗತಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಮಾದರಿಗಳು ಹೊರಹೊಮ್ಮಲಿವೆ ಎಂದು ಕೇಂದ್ರ ಈಶಾನ್ಯ ಪ್ರದೇಶಾಭಿವೃದ್ಧಿ ರಾಜ್ಯ ಸಚಿವ (ಸ್ವತಂತ್ರ) ಡಾ.ಜಿತೇಂದ್ರ ಸಿಂಗ್ ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623170

ತಂತ್ರಜ್ಞಾನ ಕೇಂದ್ರಗಳು ಈಗ ನೈಜ ಸಮಯದ ಪರಿಮಾಣಾತ್ಮಕ ಮೈಕ್ರೋ ಪಿಸಿಆರ್ ವ್ಯವಸ್ಥೆಯ ಪ್ರಮುಖ ಭಾಗಗಳನ್ನು ತಯಾರಿಸುತ್ತಿವೆ

ಎಂಎಸ್ಎಂಇ ಸಚಿವಾಲಯದ ಭುವನೇಶ್ವರ, ಜಮ್ಶೆಡ್ ಪುರ ಮತ್ತು ಕೋಲ್ಕತಾದ ತಂತ್ರಜ್ಞಾನ ಕೇಂದ್ರಗಳು, ಈಗ ವಿಶಾಖಪಟ್ಟಣಂನ ಎಎಮ್ಟಿಜಡ್ಗಾಗಿ ನೈಜ ಸಮಯದ ಪರಿಮಾಣಾತ್ಮಕ ಮೈಕ್ರೋ ಪಿಸಿಆರ್ ವ್ಯವಸ್ಥೆಯ ಪ್ರಮುಖ ಭಾಗಗಳನ್ನು ತಯಾರಿಸುತ್ತಿವೆ. ಯಂತ್ರವು ಕೋವಿಡ್-19 ಪರೀಕ್ಷಾ ಫಲಿತಾಂಶಗಳನ್ನು 1 ಗಂಟೆಗಿಂತ ಕಡಿಮೆ ಅವಧಿಯಲ್ಲಿ ನೀಡಬಹುದು (ಸಾಮಾನ್ಯ ಪರೀಕ್ಷಾ ಫಲಿತಾಂಶವು ಕನಿಷ್ಠ 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ) ಮತ್ತು ಇದನ್ನು ಖಾಸಗಿ MSME ಉದ್ಯಮವು ವಿನ್ಯಾಸಗೊಳಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623196

ಬೆಂಗಳೂರಿನ ಸಿಎಸ್ಐಆರ್-ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್ಎಎಲ್)ವು, ಕೋವಿಡ್-19ಕ್ಕಾಗಿ BiPAP ಆಕ್ರಮಣಕಾರಿಯಲ್ಲದ ವೆಂಟಿಲೇಟರ್ಸ್ವಸ್ಥ ವಾಯುವನ್ನು 36 ದಿನಗಳಲ್ಲಿ ಅಭಿವೃದ್ಧಿಪಡಿಸಿದೆ

ವ್ಯವಸ್ಥೆಯನ್ನು ಸುರಕ್ಷತೆ ಮತ್ತು ಕಾರ್ಯಕ್ಷಮತೆಗಾಗಿ ಎನ್ಎಬಿಎಲ್ ಮಾನ್ಯತೆ ಪಡೆದ ಏಜೆನ್ಸಿಗಳು ಪ್ರಮಾಣೀಕರಿಸಿದೆ ಮತ್ತು ಕಠಿಣ ಬಯೋಮೆಡಿಕಲ್ ಪರೀಕ್ಷೆಗಳಿಗೆ ಒಳಗಾಗಿದೆ. ಬೈಪಾಪ್ ಆಕ್ರಮಣಶೀಲವಲ್ಲದ ವೆಂಟಿಲೇಟರ್ ಮೈಕ್ರೊಕಂಟ್ರೋಲರ್-ಆಧಾರಿತ ನಿಖರವಾದ ಕ್ಲೋಸ್ಡ್-ಲೂಪ್ ಅಡಾಪ್ಟಿವ್ ಕಂಟ್ರೋಲ್ ಸಿಸ್ಟಮ್ ಆಗಿದ್ದು, ಇದು ವೈರಸ್ ಹರಡುವಿಕೆಯ ಭಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623148

ಎಂಎಸ್ಎಂಇ ಸಚಿವಾಲಯದಿಂದ ಚಾಂಪಿಯನ್ಸ್ ಪೋರ್ಟಲ್ ಆರಂಭ

ಕೇಂದ್ರ ಎಂಎಸ್ಎಂಇ ಸಚಿವಾಲಯವು ತಂತ್ರಜ್ಞಾನ ಚಾಲಿತ ಕಂಟ್ರೋಲ್ ರೂಮ್-ಕಮ್-ಮ್ಯಾನೇಜ್ಮೆಂಟ್ ಮಾಹಿತಿ ವ್ಯವಸ್ಥೆಯಾದ ಚಾಂಪಿಯನ್ಸ್ ಪೋರ್ಟಲ್ www.Champions.gov.in ಅನ್ನು ಪ್ರಾರಂಭಿಸಿದೆ. ಆಧುನಿಕ ಐಸಿಟಿ ಪರಿಕರಗಳ ವ್ಯವಸ್ಥೆಯು ಭಾರತೀಯ ಎಂಎಸ್ಎಂಇಗಳು ರಾಷ್ಟ್ರೀಯ ಮತ್ತು ಜಾಗತಿಕ ಚಾಂಪಿಯನ್ಗಳಂತೆ ಹೊರಹೊಮ್ಮಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623201

ಪಿಎಂ-ಕೇರ್ಸ್ ನಿಧಿಗೆ ಬಿಪಿಪಿಐ ನಿಂದ 25 ಲಕ್ಷ ರೂ.ಕೊಡುಗೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623399

 

ಪಿಐಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಚಂಡಿಗಢ: ಚಂಡಿಗಢ ಆಡಳಿತ ವಲಸೆ ಕಾರ್ಮಿಕರ ಸಂಚಾರಕ್ಕೆ ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿರುವುದಕ್ಕಾಗಿ ಆಡಳಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ಅಗತ್ಯ ಆಹಾರ ಮತ್ತು ನೀರು ಒದಗಿಸಿರುವುದಕ್ಕೆ ಆಡಳಿತ ಸಂತಸ ವ್ಯಕ್ತಪಡಿಸಿದ್ದು, ರೈಲು ಟಿಕೆಟ್ ಸೇರಿದಂತೆ ಇಡೀ ವೆಚ್ಚವನ್ನು ಆಡಳಿತವೇ ಭರಿಸಿದೆ.
  • ಪಂಜಾಬ್: ಪಂಜಾಬ್ ಸರ್ಕಾರ ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿಕೊಂಡು ಗುರುದ್ವಾರ ಮಂಜುಕಾತಿಲ್ಲಾದಲ್ಲಿ ವಾಸ್ತವ್ಯ ಹೂಡಿರುವ 336 ಪಂಜಾಬಿಗಳನ್ನು ವಾಪಸ್ ಕರೆತರಲು 13 ಪಂಜಾಬ್ ರಸ್ತೆ ಸಾರಿಗೆ ಬಸ್ ಗಳನ್ನು ಕಳುಹಿಸಿದೆ. ಪಂಜಾಬ್ ಗೆ ಆಗಮಿಸುವ ಪ್ರತಿಯೊಬ್ಬರೂ ಕೋವಿಡ್-19 ಆರೋಗ್ಯ ಶಿಷ್ಟಾಚಾರದ ಪ್ರಕಾರ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಬೇಕು. ಸರ್ಕಾರದ ಏಜೆನ್ಸಿಗಳು ಮತ್ತು ಖಾಸಗಿ ವರ್ತಕರು 26ನೇ ದಿನ 1,50,918 ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿದ್ದಾರೆ. ಸರ್ಕಾರಿ ಏಜೆನ್ಸಿಗಳು 1,50,771 ಮೆಟ್ರಿಕ್ ಟನ್ ಗೋಧಿಯನ್ನು ಮತ್ತು ಖಾಸಗಿ ವರ್ತಕರು(ಅರ್ತಿಯಾಸ್) 147 ಮೆಟ್ರಿಕ್ ಟನ್ ಗೋಧಿಯನ್ನು ಖರೀದಿ ಮಾಡಿದ್ದಾರೆ.
  • ಹರಿಯಾಣ: ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ವಿಶೇಷ ಒತ್ತು ನೀಡಲಾಗಿದ್ದು, ಕೋವಿಡ್-19 ಸಾಂಕ್ರಾಮಿಕದಿಂದಾಗಿ ರಾಜ್ಯದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸುವ ಕಾರ್ಯವನ್ನು ಹರಿಯಾಣ ಸರ್ಕಾರ ಆರಂಭಿಸಿದೆ. ನಿನ್ನೆ ರೆವಾರಿಯಿಂದ 1,208 ಕೃಷಿ ವಲಸೆ ಕಾರ್ಮಿಕರು ಮತ್ತು ಅಂಬಾಲದ ಕಂಟೋನ್ಮೆಂಟ್ ನಿಂದ 1,188 ವಲಸೆ ಕಾರ್ಮಿಕರನ್ನು ವಿಶೇಷ ಶ್ರಮಿಕ ರೈಲುಗಳ ಮೂಲಕ ಅವರ ಕುಟುಂಬದವರೊಂದಿಗೆ ಕಳುಹಿಸಲಾಯಿತು.
  • ಹಿಮಾಚಲ ಪ್ರದೇಶ: ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ಬಂಡವಾಳ ವೆಚ್ಚವನ್ನು ಖಡಿತ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅನಗತ್ಯ ಮತ್ತು ನಿಷ್ಪ್ರಯೋಜಕ ವೆಚ್ಚವನ್ನು ಖಡಿತ ಮಾಡುವ ಮೂಲಕ ಆರ್ಥಿಕ ಮಿತವ್ಯಯ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ನಗರ ಪ್ರದೇಶಗಳಲ್ಲಿ ಪ್ರತಿಯೊಂದು ಕುಟುಂಬಕ್ಕೂ ಕೌಶಲ್ಯರಹಿತ 120 ದಿನಗಳ ಕಾಲ ಖಾತ್ರಿಪಡಿಸಿದ ಉದ್ಯೋಗವನ್ನು ಒದಗಿಸಲು ಮುಖ್ಯಮಂತ್ರಿ ಶಹರಿಅಜೀವಿಕ ಖಾತ್ರಿ ಯೋಜನೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
  • ಕೇರಳ: ಕೇರಳ ಸರ್ಕಾರ ರಸ್ತೆ ಮತ್ತು ರೈಲುಗಳ ಮೂಲಕ ರಾಜ್ಯದಲ್ಲಿ ಯಾವುದೇ ಅಡೆತಡೆ ಇಲ್ಲದೆ, ಜನರ ಸಂಚಾರಕ್ಕೆ ವಿಸ್ತೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಯಾರು ಪಾಸ್ ಗಳನ್ನು ಪಡೆದು ಬರುವುದಿಲ್ಲವೋ ಅಂತಹವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗುವುದು. ಮಧ್ಯೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ, ಕ್ವಾರಂಟೈನ್ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳು ವ್ಯತಿರಿಕ್ತವಾಗಿರುವುದನ್ನು ಗಮನಿಸಿದ ನ್ಯಾಯಪೀಠ, ರಾಜ್ಯಕ್ಕೆ ವಾಪಸ್ಸಾದವರ ಕ್ವಾರಂಟೈನ್ ಕುರಿತು ಸ್ಪಷ್ಟನೆ ನೀಡುವಂತೆ ಕೇಳಿದೆ. ಇಂದು ಕೊಲ್ಲಿ ರಾಷ್ಟ್ರಗಳಲ್ಲಿ ಕೋವಿಡ್-19ಗೆ ಕೇರಳದ 5 ಮಂದಿ ಬಲಿಯಾಗಿದ್ದಾರೆ. ಕೊಲ್ಲಿ ರಾಷ್ಟ್ರಗಳಿಂದ ನಾಲ್ಕು ವಿಮಾನಗಳು ಇಂದು ರಾತ್ರಿ ಕೇರಳಕ್ಕೆ ಆಗಮಿಸಲಿವೆ. 202 ಭಾರತೀಯರನ್ನು ಹೊತ್ತ ಎರಡನೇ ಹಡಗು ಮಾಲ್ಡವೀಸ್ ನಿಂದ ಇಂದು ಸಂಜೆ ಕೊಚ್ಚಿಗೆ ಆಗಮಿಸಿತು. ಸದ್ಯ ರಾಜ್ಯದಲ್ಲಿ 27 ಕೋವಿಡ್-19 ಸೋಂಕಿತ ಪ್ರಕರಣಗಳಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ರಾಜ್ಯದಲ್ಲಿ 34 ಹಾಟ್ ಸ್ಪಾಟ್ ಗಳಿವೆ.
  • ತಮಿಳುನಾಡು: ತಿರುನಲ್ವೇಲಿಯಿಂದ ಇಂದು 1,140 ವಲಸೆ ಕಾರ್ಮಿಕರನ್ನು ಹೊತ್ತ ವಿಶೇಷ ರೈಲು ಬಿಹಾರಕ್ಕೆ ಪ್ರಯಾಣ ಬೆಳಸಲಿದೆ. ಓರ್ವ ಚಾಲಕನಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕುಂಭಕೋಣಂ ಮಾರುಕಟ್ಟೆಯನ್ನು ಸೀಲ್ ಮಾಡಲಾಗಿದೆ. ರಾಜ್ಯದಲ್ಲಿ ಸದ್ಯ ಕೋವಿಡ್-19ಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಖಾಸಗಿ ಆಸ್ತಿಗಳನ್ನು ಗುರುತಿಸುವ ಚಿಂತನೆ ನಡೆದಿದೆ. ಸರ್ಕಾರ ಜೂನ್ ತಿಂಗಳಲ್ಲಿ ಎಲ್ಲ ಪಡಿತರದಾರರಿಗೆ ಉಚಿತ ಆಹಾರಧಾನ್ಯವನ್ನು ವಿತರಿಸಲು 219 ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ ಆರಂಭವಾಗಿದೆ. ಈವರೆಗೆ ಒಟ್ಟು ಪ್ರಕರಣಗಳು -8002, ಕ್ರಿಯಾಶೀಲ ಪ್ರಕರಣಗಳು - 5895, ಸಾವು - 53, ಗುಣಮುಖರಾದವರು - 2051. ಚೆನ್ನೈನಲ್ಲಿ ಕ್ರಿಯಾಶೀಲವಾಗಿರುವ ಪ್ರಕರಣಗಳು 4371.
  • ಕರ್ನಾಟಕ: 42 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈವರೆಗೂ ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ 5 ಪ್ರಕರಣಗಳು ದೃಢಪಟ್ಟಿವೆ. ಇಂದು ಈವರೆಗಿನ ಪ್ರಕರಣಗಳು: ಬಾಗಲಕೋಟೆ 15, ಧಾರವಾಡ 9, ಹಾಸನ 5, ಬೆಂಗಳೂರು 3, ಯಾದಗಿರಿ, ಬೀದರ್ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಎರಡು ಮತ್ತು ಚಿಕ್ಕಬಳ್ಳಾಪುರ, ಮಂಡ್ಯ, ಬಳ್ಳಾರಿ ಮತ್ತು ಕಲಬುರಗಿಯಲ್ಲಿ ತಲಾ ಒಂದು. ಒಟ್ಟು ಪ್ರಕರಣಗಳು 904, ಸಾವು 31 ಮತ್ತು 426 ಮಂದಿ ಗುಣಮುಖರಾಗಿ ಬಿಡುಗಡೆ. ಮುಖ್ಯಮಂತ್ರಿ ಇಂದು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯದ ಸ್ಥಿತಿಗತಿ ಕುರಿತು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
  • ಆಂಧ್ರಪ್ರದೇಶ: ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ರಾಜಧಾನಿಯನ್ನು ವಿಶಾಖಪಟ್ಟಣಂಗೆ ಸ್ಥಳಾಂತರಿಸುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದೆ. ಎಸ್ ಸಿಇಆರ್ ಟಿ 58 ಪುಟಗಳ ವರದಿಯಲ್ಲಿ ಆಂಧ್ರಪ್ರದೇಶ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಸಹಮತ ವ್ಯಕ್ತಪಡಿಸಿದೆ. ರಾಜ್ಯದಲ್ಲಿ 53 ಹೊಸ ಪ್ರಕರಣಗಳು ವರದಿಯಾಗಿದ್ದು, 58 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 10,730 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 2051ಕ್ಕೆ ಏರಿಕೆ. ಕ್ರಿಯಾಶೀಲ ಪ್ರಕರಣಗಳು: 949, ಗುಣಮುಖರಾದವರು: 1056, ಸಾವುಗಳು: 46. ಪಾಸಿಟಿವ್ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳು: ಕರ್ನೂಲ್(584), ಗುಂಟೂರು(387), ಕೃಷ್ಣ(346), ಚಿತ್ತೂರು(131), ಅನಂತಪುರ(115), ನೆಲ್ಲೂರು(111).
  • ತೆಲಂಗಾಣ: ನಾಲ್ಕನೆವಂದೆ ಭಾರತ್ ಮಿಷನ್ವಿಮಾನ ಬ್ರಿಟನ್ ನಿಂದ ಹೈದ್ರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಮುಂಜಾನೆ ಆಗಮಿಸಿತು. ಅದರಲ್ಲಿ 331 ಪ್ರಯಾಣಿಕರಿದ್ದರು. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಎಸ್ ಆರ್ ಟಿಸಿ) ಲಾಕ್ ಡೌನ್ ತೆರವುಗೊಳಿಸಿದ ನಂತರ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ಬಸ್ ಗಳಲ್ಲಿ ಆಸನದ ಸಾಮರ್ಥ್ಯವನ್ನು ತಗ್ಗಿಸಲು ಯೋಚಿಸುತ್ತಿದೆ. ಒಟ್ಟು ಪಾಸಿಟಿವ್ ಪ್ರಕರಣಗಳು ನಿನ್ನೆಯವರೆಗೆ 1275, ಕ್ರಿಯಾಶೀಲ ಪ್ರಕರಣಗಳು 444, ಗುಣಮುಖರಾಗಿ ಬಿಡುಗಡೆಯಾದವರು 801, ಸಾವು 30.
  • ಮಹಾರಾಷ್ಟ್ರ: ರಾಜ್ಯದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ ಈವರೆಗೆ 23,401ಕ್ಕೆ ಏರಿಕೆಯಾಗಿದೆ. ಮುಂಬೈವೊಂದರಲ್ಲೇ 14,355 ಪ್ರಕರಣಗಳು ದೃಢಪಟ್ಟಿದ್ದು, ಮೊದಲ ಪ್ರಕರಣ ವರದಿಯಾಗಿ ಎರಡು ತಿಂಗಳ ನಂತರ ಪ್ರಮಾಣ ಕಂಡುಬಂದಿದೆ. ಪೊಲೀಸ್ ಅಧಿಕಾರಿಗಳಲ್ಲಿ ಕೋವಿಡ್-19 ಸೋಂಕಿತರ ಪ್ರಮಾಣ 106ಕ್ಕೆ ಏರಿಕೆಯಾಗಿದೆ ಮತ್ತು 901 ಪೇದೆಗಳಿಗೆ ಈವರೆಗೆ ಸೋಂಕು ತಗುಲಿದೆ. ನಾಗ್ಪುರದಲ್ಲಿ ಕೋವಿಡ್ ಪ್ರಕರಣಗಳು 300 ತಲುಪಿದ್ದು, ಇಂದು ಮತ್ತೆರಡು ಪ್ರಕರಣ ವರದಿಯಾಗಿದೆ. ಕಿತ್ತಳೆ ನಗರಿಯಲ್ಲಿ ಈವರೆಗೆ ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ.
  • ಗುಜರಾತ್: ರಾಜ್ಯ ಆರೋಗ್ಯ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 347 ಹೊಸ ಪ್ರಕರಣಗಳು ಹಾಗೂ 20 ಸಾವುಗಳು ವರದಿಯಾಗಿವೆ. ಈವರೆಗೆ ರಾಜ್ಯದಲ್ಲಿ 8,541 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಗುಜರಾತ್ ನಲ್ಲಿ ಈವರೆಗೆ 513 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೊಸ ಪಾಸಿಟಿವ್ ಪ್ರಕರಣಗಳ ಪೈಕಿ 268 ಅಹಮದಾಬಾದ್ ನಲ್ಲಿ, 29 ವಡೋದರದಲ್ಲಿ, 19 ಸೂರತ್ ನಲ್ಲಿ ಮತ್ತು 10 ಗಾಂಧಿನಗರದಲ್ಲಿ ವರದಿಯಾಗಿವೆ.
  • ರಾಜಸ್ಥಾನ: ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು(ಮಧ್ಯಾಹ್ನ 2 ಗಂಟೆಯವರೆಗೆ) 68, ಅವುಗಳಲ್ಲಿ 32 ಪ್ರಕರಣಗಳು ಉದಯಪುರದಲ್ಲಿ ದೃಢಪಟ್ಟಿವೆ. ಗರಿಷ್ಠ ರೋಗಿಗಳು ಜೈಪುರ ಮತ್ತು ಜೋಧ್ ಪುರದಲ್ಲಿ ಇದ್ದು, ಮೂರನೇ ಸ್ಥಾನದಲ್ಲಿ ಉದಯಪುರ ಇದೆ. ರಾಜಸ್ಥಾನದಲ್ಲಿ 18 ದಿನಗಳಿಂದೀಚೆಗೆ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಇಲ್ಲಿ ಶೇ.60ರಷ್ಟು ಗುಣಮುಖರಾಗುತ್ತಿರುವುದು ಉತ್ತೇಜನಕಾರಿಯಾಗಿದೆ. ರಾಜ್ಯದಲ್ಲಿ 3,988 ಕೋವಿಡ್-19 ಪ್ರಕರಣಗಳು ಈವರೆಗೆ ದೃಢಪಟ್ಟಿದ್ದು, ಅವುಗಳಲ್ಲಿ 1,551 ಪ್ರಕರಣ ಕ್ರಿಯಾಶೀಲವಾಗಿದ್ದು, 2,059 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
  • ಮಧ್ಯಪ್ರದೇಶ: ನಿನ್ನೆ 171 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಡುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,785ಕ್ಕೆ ಏರಿದೆ. ಭೂಪಾಲ್ ನಲ್ಲಿ 30 ಹೊಸ ಪ್ರಕರಣಗಳು ವರದಿಯಾಗಿದ್ದು, ಇಂದೋರ್ ನಿಂದ 81 ಪ್ರಕರಣ ದೃಢಪಟ್ಟಿವೆ.
  • ಗೋವಾ: ಗೋವಾ ಕೆಲವು ವಿನಾಯಿತಿಗಳ ನಿರೀಕ್ಷೆಯಲ್ಲಿದೆ. ವಿಶೇಷವಾಗಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಮೂರನೇ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮೇ 17 ನಂತರ ನಿರ್ಬಂಧಗಳನ್ನು ಸ್ವಲ್ಪ ಸಡಿಲಿಕೆ ಮಾಡಿ, ಅಂತರ ರಾಜ್ಯ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಲಹೆ ನೀಡಿದ್ದಾರೆ. ಗೋವಾದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಕ್ರಿಯಾಶೀಲವಾಗಿಲ್ಲ.
  • ಅರುಣಾಚಲ ಪ್ರದೇಶ: ಆರೋಗ್ಯ ಸಚಿವರು ನಹರ್ ಲಗೂನ್ ನಲ್ಲಿ ಎರಡನೇ ಕೋವಿಡ್-19 ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿದರು. ಟ್ರೂನಾಟ್ ನಿಂದ ಪರೀಕ್ಷೆಗಳನ್ನು ನಡೆಸಲಾಗುವುದು.
  • ಅಸ್ಸಾಂ: ಅಂತಾರಾಷ್ಟ್ರೀಯ ದಾದಿಯರ ದಿನದಂದು ಮುಖ್ಯಮಂತ್ರಿ ಅವರು, ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ನರ್ಸ್ ಗಳು ಬೆನ್ನೆಲುಬಾಗಿದ್ದು, ಅವರು ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ನಿಂತು ನಿರಂತರವಾಗಿ ದೃಢ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
  • ಮಣಿಪುರ: ರಾಜ್ಯಕ್ಕೆ ವಾಪಸ್ಸಾಗಿರುವವರನ್ನು ನಿರ್ವಹಿಸಲು ಪ್ರತಿ ಜಿಲ್ಲೆಯಲ್ಲೂ ಸಮಗ್ರ ತಪಾಸಣಾ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿದೆ. ಸೋಂಕಿರುವ ಎಲ್ಲ ವ್ಯಕ್ತಿಗಳಿಗೂ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ವಿಧಿಸಲಾಗುವುದು. ಜ್ವರದಂತಹ ಸೋಂಕಿರುವ ವ್ಯಕ್ತಿಗಳನ್ನು ಐಸೋಲೇಶನ್ ವಾರ್ಡ್ ಗಳಲ್ಲಿಟ್ಟು, ನಿಗಾವಹಿಸಲಾಗುವುದು.
  • ಮಿಝೋರಾಂ: ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಮಿಝೋಗಳ ಸುರಕ್ಷತೆಗೆ ಬದ್ಧವಾಗಿದೆ ಎಂದು ಹೇಳಿದ್ದು, ಸರ್ಕಾರ ಕೈಗೊಂಡಿರುವ ನಾನಾ ಕ್ರಮಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
  • ನಾಗಾಲ್ಯಾಂಡ್: ದಿಮಾಪುರ್ ನಲ್ಲಿ ಸಮ-ಬೆಸ ನಿಯಮ ಜಾರಿಗೆ ಬಂದ ಮೊದಲ ದಿನವೇ ಸುಮಾರು 746 ವಾಹನಗಳಿಗೆ ದಂಡ ವಿಧಿಸಿ, 1.41 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
  • ಸಿಕ್ಕಿಂ: ಜಿಒಸಿ ಬ್ಲಾಕ್ ಕ್ಯಾಟ್ ವಿಭಾಗದ ಮೇಜರ್ ಜನರಲ್ ಆರ್.ಸಿ. ತಿವಾರಿ ಅವರು ಸಿಕ್ಕಿಂ ಗೌರ್ನರ್ ಅವರನ್ನು ಭೇಟಿ ಮಾಡಿದ್ದರು, ಅವರು ಸೇನೆ ಕೈಗೊಂಡಿರುವ ಸುರಕ್ಷತಾ ಶಿಷ್ಟಾಚಾರಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಕ್ಕಿಂನಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಲ್ಲಿ ಈವರೆಗೂ ಯಾವುದೇ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿಲ್ಲ.

ಪಿ ಐ ಬಿ ವಾಸ್ತವ ಪರೀಶೀಲನೆ

 

***


(Release ID: 1623387) Visitor Counter : 287