ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಲಾಕ್‌ಡೌನ್ ನಡುವೆಯೂ ಎಚ್.ಐ.ಎಲ್. (ಭಾರತ) ನಿಯಮಿತ ಆಫ್ರಿಕಾದ ದೇಶಗಳಿಂದ ದೊಡ್ಡ ಖರೀದಿ ಆದೇಶ ಪಡೆದಿದೆ
Posted On:
12 MAY 2020 1:58PM by PIB Bengaluru
ಲಾಕ್‌ಡೌನ್ ನಡುವೆಯೂ ಎಚ್.ಐ.ಎಲ್. (ಭಾರತ) ನಿಯಮಿತ ಆಫ್ರಿಕಾದ ದೇಶಗಳಿಂದ ದೊಡ್ಡ ಖರೀದಿ ಆದೇಶ ಪಡೆದಿದೆ
ಕೋವಿಡ್-19 ಲಾಕ್‌ಡೌನ್‌ನಿಂದ ದೇಶದಲ್ಲಿ ಉಂಟಾದ ಅಗಾಧವಾದ ಸಾಗಾಟ (ಲಾಜಿಸ್ಟಿಕ್) ಮತ್ತು ಇತರ ಸವಾಲುಗಳ ಹೊರತಾಗಿಯೂ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿರುವ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ಅಂಗ ಸಂಸ್ಥೆ ಹಾಗೂ ಸಾರ್ವಜನಿಕ ಕ್ಷೇತ್ರದ "ಎಚ್‌ಐಎಲ್ (ಭಾರತ) ನಿಯಮಿತ" ಸಂಸ್ಥೆ, ದೇಶದ ರೈತ ಸಮುದಾಯಕ್ಕೆ ಕೀಟನಾಶಕಗಳ ಸಮರ್ಪಕ ಪೂರೈಕೆಯನ್ನು ದೃಢಪಡಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಹಾಗೂ ಅದೇ ಸಮಯದಲ್ಲಿ ಇದರ ಜೊತೆಗೆ ಆಫ್ರಿಕನ್ ದೇಶಗಳಿಂದ ಡಿ.ಡಿ.ಟಿ.ಯ ದೊಡ್ಡ ರಫ್ತು ಆದೇಶವನ್ನೂ ಪಡೆದಿದೆ.
ಮುಂಬರುವ ತಿಂಗಳಲ್ಲಿ ಆಫ್ರಿಕನ್ ದೇಶಗಳ ಕೆಲವು ಪ್ರದೇಶಗಳಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಡಿ.ಡಿ.ಟಿ ಪೂರೈಕೆ ಸಾದ್ಗಾಯತೆ ಕುರಿತು ಹತ್ತು ದಕ್ಷಿಣ ಆಫ್ರಿಕಾದ ಅಭಿವೃದ್ಧಿ ಸಮುದಾಯಕ್ಕೆ (ಎಸ್.ಎ.ಡಿ.ಸಿ) ಎಚ್.ಐ.ಎಲ್ ಸಂಸ್ಥೆ ಪತ್ರ ಬರೆದಿದೆ.
ದೇಶದಲ್ಲಿ ಮೇ 7, 2020 ರವರೆಗಿನ ಲಾಕ್‌ಡೌನ್ ಅವಧಿಯಲ್ಲಿ, ಎಚ್.ಐ.ಎಲ್ ಒಟ್ಟು 120.40 ಮೆ.ಟನ್ (ಡಿಡಿಟಿ ಟೆಕ್ನಿಕಲ್), 226.00 ಮೆ.ಟನ್ (ಡಿಡಿಟಿ 50 ಪ್ರತಿಶತ ಡಬ್ಲ್ಯೂಡಿಪಿ), 85.00 ಮೆ.ಟನ್ (ಮಾಲಾಥಿಯಾನ್ ಟೆಕ್ನಿಕಲ್), 16.38 ಮೆ.ಟಿ (ಹಿಲ್ಗೋಲ್ಡ್ ) ಮತ್ತು 27.66 ಮೆ.ಟಿ (ರಾಸಾಯನಿಕ ಸೂತ್ರೀಕರಣ) ಮುಂತಾದವುಗಳನ್ನು ಉತ್ಪಾದಿಸಿದೆ, ಇದರಿಂದಾಗಿ ರೈತ ಸಮುದಾಯವು ಲಾಕ್‌ಡೌನ್ ನಿಂದಾಗಿ ಕೀಟನಾಶಕಗಳ ಕೊರತೆಯ ಸಮಸ್ಯೆಗಳನ್ನು ಅನುಭವಿಸಬೇಕಾಗಿಲ್ಲ. ಇದಲ್ಲದೆ ಲೋಕಸ್ಟ್ ನಿಯಂತ್ರಣ ಕಾರ್ಯಕ್ರಮಕ್ಕಾಗಿ ಮಾಲಾಥಿಯಾನ್ ತಾಂತ್ರಿಕ ಉತ್ಪಾದನೆಯೂ ಮುಂದುವರೆದಿದೆ. ಗುಜರಾತ್ ಮತ್ತು ರಾಜಸ್ಥಾನಗಳ ಕೃಷಿ ಸಚಿವಾಲಯದ ಮಿಡತೆ ನಿಯಂತ್ರಣ ಕಾರ್ಯಕ್ರಮಗಳಿಗೆ ಮಾಲಾಥಿಯಾನ್ ತಾಂತ್ರಿಕ ಪೂರೈಕೆಯನ್ನು ಮುಂದುವರಿಸಿದೆ ಮತ್ತು ಪೂರ್ಣಗೊಳಿಸಿದೆ. ಎನ್‌ವಿಬಿಡಿಸಿಪಿ ಪೂರೈಕೆ ಆದೇಶದ ಪ್ರಕಾರ ಸುಮಾರು 30 ಮೆ.ಟನ್ ಗಳಷ್ಟು ಡಿಡಿಟಿ 50 ಶೇಕಡಾ ಡಬ್ಲ್ಯೂಡಿಪಿಯನ್ನು ಒಡಿಶಾಗೆ ರವಾನೆ ಮಾಡಲಾಗಿದೆ.
ಈ ನಿಟ್ಟಿನಲ್ಲಿ , ಎಚ್.ಐ.ಎಲ್‌ನ ಉತ್ಪಾದನಾ ಘಟಕಗಳು ಕಟ್ಟುನಿಟ್ಟಾದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ ಪ್ರಕಾರ ಕನಿಷ್ಠ ಮಾನವಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಘಟಕಗಳಲ್ಲಿ ನೈರ್ಮಲ್ಯ ಮಟ್ಟವನ್ನು ಹೆಚ್ಚಿಸಲಾಗಿದೆ. ಕಾರ್ಖಾನೆಗೆ ಪ್ರವೇಶಿಸುವ ಎಲ್ಲಾ ಕೆಲಸದ ಸ್ಥಳಗಳು, ಸಸ್ಯಗಳು, ಟ್ರಕ್ ಗಳು ಮತ್ತು ಬಸ್ಸುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಲಾಗುತ್ತಿದೆ.
ಕಳೆದ ವಾರ ಕಂಪನಿಯ ಒಟ್ಟು ಮಾರಾಟ ರೂ .278.82 ಲಕ್ಷವಾಗಿತ್ತು ಮತ್ತು ಕೃಷಿ ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಬೀಜಗಳ ಮಾರಾಟವೂ ಇದರಲ್ಲಿ ಸೇರಿದೆ. ಆನ್‌ಲೈನ್ ಟೆಂಡರ್‌ನ ಮೂಲಕ ಸಂಸ್ಕರಣೆ ಮತ್ತು ಖರೀದಿ ಚಟುವಟಿಕೆಗಳನ್ನು ಸಹ ಸಂಸ್ಥೆಯಲ್ಲಿ ನಡೆಸಲಾಗುತ್ತಿದೆ.
***
(Release ID: 1623381)
Visitor Counter : 241
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Odia
,
Tamil
,
Telugu
,
Malayalam