ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವಾಲಯದಿಂದ ರೈಲುಗಳ ಮೂಲಕ ಜನರ ಪ್ರಯಾಣಕ್ಕೆ ಸಹಕರಿಸಲು ನಿರ್ದಿಷ್ಠ ಕಾರ್ಯಾನುಷ್ಠಾನ ಮಾನದಂಡ (ಎಸ್ ಒಪಿ) ಬಿಡುಗಡೆ

Posted On: 11 MAY 2020 2:41PM by PIB Bengaluru

ಕೇಂದ್ರ ಗೃಹ ಸಚಿವಾಲಯದಿಂದ ರೈಲುಗಳ ಮೂಲಕ ಜನರ ಪ್ರಯಾಣಕ್ಕೆ ಸಹಕರಿಸಲು

ನಿರ್ದಿಷ್ಠ ಕಾರ್ಯಾನುಷ್ಠಾನ ಮಾನದಂಡ (ಎಸ್ ಒಪಿ) ಬಿಡುಗಡೆ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ ) ರೈಲುಗಳ ಮೂಲಕ ಜನರ ಪ್ರಯಾಣಕ್ಕೆ ಸಹಕರಿಸಲು ನಿರ್ದಿಷ್ಠ ಕಾರ್ಯಾನುಷ್ಠಾನ ಮಾನದಂಡ(ಎಸ್ ಒಪಿ) ಬಿಡುಗಡೆ ಮಾಡಿದೆ.

ಖಚಿತವಾದ -ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲು ನಿಲ್ದಾಣಗಳಿಗೆ ಪ್ರವೇಶಿಸಲು, ನಿಲ್ದಾಣಗಳಿಗೆ ಬರಲು ಮತ್ತು ಹೋಗಲು ಅವಕಾಶ ನೀಡಲಾಗುವುದು. ಪ್ರತಿಯೊಬ್ಬ ಪ್ರಯಾಣಿಕರ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿದೆ. ಸೋಂಕಿನ ಲಕ್ಷಣಗಳು ಇಲ್ಲದಿರುವವರಿಗೆ ಮಾತ್ರ ರೈಲುಗಳನ್ನು ಹತ್ತಲು ಅವಕಾಶ ಮಾಡಿಕೊಡಲಾಗುವುದು. ಪ್ರಯಾಣದ ವೇಳೆ ಮತ್ತು ರೈಲು ನಿಲ್ದಾಣಗಳಲ್ಲಿ, ಆರೋಗ್ಯ ಮತ್ತು ಶುಚಿತ್ವ ಶಿಷ್ಟಾಚಾರಗಳನ್ನು ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುವುದು.

ಎಲ್ಲ ಪ್ರಯಾಣಿಕರಿಗೆ ರೈಲು ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಹಾಗೂ ರೈಲುಗಳ ಒಳಗೆ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಒದಗಿಸಲಾಗುವುದು. ಅಲ್ಲದೆ, ಎಲ್ಲ ಪ್ರಯಾಣಿಕರು ಇಡೀ ಪ್ರಯಾಣದ ಅವಧಿಯಲ್ಲಿ ಮತ್ತು ನಿಲ್ದಾಣದ ಪ್ರವೇಶದ ವೇಳೆ ಮುಖಗವಸು/ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ತಲುಪಬೇಕಾದ ಸ್ಥಳ ಆಗಮಿಸುತ್ತಿದ್ದಂತೆಯೇ, ಅಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೂಚಿಸುವ ಆರೋಗ್ಯ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ರೈಲ್ವೆ ಸಚಿವಾಲಯ (ಎಂಒಆರ್ ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ ಎಫ್ ಡಬ್ಲೂ) ಮತ್ತು ಕೇಂದ್ರ ಗೃಹ ಸಚಿವಾಲಯ (ಎಂಎಚ್ ) ಜೊತೆ ಸಮಾಲೋಚನೆ ನಡೆಸಿ ರೈಲುಗಳ ಸಂಚಾರಕ್ಕೆ ಹಂತ ಹಂತವಾಗಿ ಅನುಮತಿ ನೀಡಬಹುದು.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾದ ಸಂವಹನದ ಪತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ

 

***(Release ID: 1622998) Visitor Counter : 112