ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೋವಿಡ್-19 ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ  ಕುಂದುಕೊರತೆಗಳು, ಪ್ರಶ್ನೆಗಳು ಮತ್ತು ಇತರ ಶೈಕ್ಷಣಿಕ ವಿಚಾರಗಳ ಮೇಲ್ವಿಚಾರಣೆಗೆ ಯುಜಿಸಿ ಹಲವಾರು ಕ್ರಮಗಳನ್ನು ಕೈಗೊಂಡಿದೆ

Posted On: 11 MAY 2020 12:14PM by PIB Bengaluru

ಕೋವಿಡ್-19 ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ  ಕುಂದುಕೊರತೆಗಳು, ಪ್ರಶ್ನೆಗಳು ಮತ್ತು ಇತರ ಶೈಕ್ಷಣಿಕ ವಿಚಾರಗಳ ಮೇಲ್ವಿಚಾರಣೆಗೆ ಯುಜಿಸಿ ಹಲವಾರು ಕ್ರಮಗಳನ್ನು ಕೈಗೊಂಡಿದೆ

 

29ಏಪ್ರಿಲ್ 2020 ರಂದು ಸಾಂಕ್ರಾಮಿಕ ಬಿಕ್ಕಟ್ಟಿನ ದೃಷ್ಟಿಯಿಂದ ಯುಜಿಸಿ ಪರೀಕ್ಷೆಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಎಲ್ಲ ವಿಶ್ವ ವಿದ್ಯಾಲಯಗಳು, ಎಲ್ಲ ಶೈಕ್ಷಣಿಕ ಹೂಡಿಕೆದಾರರ ಸುರಕ್ಷತೆ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಶೈಕ್ಷಣಿಕ ಚಟುವಟಿಕೆಯನ್ನು ಯೋಜಿಸಲು ಸೂಚಿಸಲಾಗಿದೆ. ಸಂಬಂಧಪಟ್ಟವರ ಎಲ್ಲರ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಆದರೆ ಮರ್ಗಸೂಚಿಗಳನ್ನು ಅಳವಡಿಸಿಕೊಂಡು ಇದನ್ನು ಕಾರ್ಯಗತಗೊಳಿಸಬೇಕಾಗುತ್ತದೆ.

ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಉದ್ಭವಿಸಬಹುದಾದ ಪರೀಕ್ಷೆಗಳು ಮತ್ತು ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿಯಂತ್ರಿಸಲು ಒಂದು ಘಟಕವನ್ನು ಸ್ಥಾಪಿಸಲು ವಿಶ್ವ ವಿದ್ಯಾಲಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಮತ್ತು ವಿದ್ಯಾರ್ಥಿಗಳಿಗೂ ಈ ಕುರಿತು ಸೂಚಿಸಬೇಕಾಗಿ ತಿಳಿಸಲಾಗಿದೆ.

ಇದಲ್ಲದೆ ಕೋವಿಡ್ – 19 ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಉದ್ಭವಿಸಬಹುದಾದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ  ಕುಂದುಕೊರತೆಗಳು, ಪ್ರಶ್ನೆಗಳು ಮತ್ತು ಇತರ ಶೈಕ್ಷಣಿಕ ವಿಚಾರಗಳ ಮೇಲ್ವಿಚಾರಣೆಗೆ ಯುಜಿಸಿ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ.

  1. ಮೀಸಲಿರಿಸಿದ ಸಹಾಯವಾಣಿ ಸಂಖ್ಯೆ : 011-23236374 ಅನ್ನು ಸ್ಥಾಪಿಸಲಾಗಿದೆ.
  2. ಮಿಂಚಂಚೆ ವಿಳಾಸ : covid19help.ugc[at]gmail[dot]com ಅನ್ನು ಸೃಷ್ಟಿಸಲಾಗಿದೆ.
  3. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಕುರಿತು ಪ್ರಸ್ತುತ ಲಭ್ಯವಿರುವ ಯುಜಿಸಿ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರದ ಆನ್ ಲೈನ್ ಪೋರ್ಟಲ್ https://www.ugc.ac.in/grievance/student_reg.aspx ನಲ್ಲಿ ಸಲ್ಲಿಸಬಹುದು
  4. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ  ಯೋಗಕ್ಷೇಮ/ಕುಂದುಕೊರತೆಗಳ ಮೇಲ್ವಿಚಾರಣೆಗೆ ಮತ್ತು ಅವುಗಳಿಗೆ ತಕ್ಕ ಪರಿಹಾರ ಸೂಚಿಸಲು ಯುಜಿಸಿಯಲ್ಲಿ ಒಂದು ಕಾರ್ಯಪಡೆಯನ್ನು ರಚಿಸಲಾಗಿದೆ.

ಎಲ್ಲ  ವಿಶ್ವ ವಿದ್ಯಾಲಯಗಳು ಮತ್ತು ಎಲ್ಲ ಕಾಲೇಜುಗಳು ಈ ಸಾರ್ವಜನಿಕ ಪ್ರಕಟಣೆಯ ಪ್ರತಿಯನ್ನು ತಮ್ಮ ಅಧಿಕೃತ ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡಲು ವಿನಂತಿಸಲಾಗಿದೆ ಮತ್ತು ಅದನ್ನು ಈ ಮೇಲ್ ಮತ್ತು ಇತರ ಡಿಜಿಟಲ್ ಮಾಧ್ಯಮಗಳ ಮೂಲಕ ಬೋಧನಾ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸಮುದಾಯದೊಂದಿಗೆ ಹಂಚಿಕೊಳ್ಳಬೇಕಾಗಿ ಮನವಿ ಮಾಡಲಾಗಿದೆ.

***


(Release ID: 1622921) Visitor Counter : 271