PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 10 MAY 2020 6:23PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ನಿರ್ವಹಣೆಗೆ ಸಾಕಷ್ಟು ಆರೋಗ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ

ದೇಶದಲ್ಲಿ ಕೋವಿಡ್-19 ನಿರ್ವಹಣೆಗೆ ಸಾಕಷ್ಟು ಆರೋಗ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಗುರುತಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ. ಕೋವಿಡ್-19 ಪ್ರಕರಣಗಳ ನಿರ್ವಹಣೆಗೆ ಮೀಸಲಾಗಿರುವ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. 10/05/2020 ರಂತೆ, ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 483 ಜಿಲ್ಲೆಗಳಲ್ಲಿ 7740 ಸೌಲಭ್ಯಗಳನ್ನು ಗುರುತಿಸಲಾಗಿದೆ, ಇದರಲ್ಲಿ ಆಸ್ಪತ್ರೆಗಳು ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳುಮತ್ತು ಕೇಂದ್ರ ಸರ್ಕಾರಗಳ ಸೌಲಭ್ಯಗಳು ಸೇರಿವೆ. 65,6769 ಪ್ರತ್ಯೇಕತಾ ಹಾಸಿಗೆಗಳು, ದೃಢಪಟ್ಟ ಪ್ರಕರಣಗಳಿಗೆ 305567 ಹಾಸಿಗೆಗಳು, ಶಂಕಿತ ಪ್ರಕರಣಗಳಿಗೆ 351204 ಹಾಸಿಗೆಗಳು, 99492 ಆಮ್ಲಜನಕ ಬೆಂಬಲಿತ ಹಾಸಿಗೆಗಳು, ಆಕ್ಸಿಜನ್ ಮ್ಯಾನಿಫೋಲ್ಡ್ನೊಂದಿಗೆ 1696 ಸೌಲಭ್ಯಗಳು ಮತ್ತು 34076 ಐಸಿಯು ಹಾಸಿಗೆಗಳಿವೆ. ಈವರೆಗೆ ಒಟ್ಟು 19,357 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1511 ರೋಗಿಗಳು ಗುಣಮುಖರಾಗಿದ್ದಾರೆ. ಇದು ಒಟ್ಟು ಚೇತರಿಕೆ ದರವನ್ನು ಶೇ.30.76 ಕ್ಕೇರಿಸಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 62,939 ಆಗಿದೆ. ನಿನ್ನೆಯಿಂದ, ಭಾರತದಲ್ಲಿ COVID-19 ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ 3277 ಹೆಚ್ಚಳವಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1622631

ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲು ಕೇಂದ್ರ ತಂಡಗಳನ್ನು ಕಳುಹಿಸಲಾಗುತ್ತಿದೆ

ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗಿರುವ 10 ರಾಜ್ಯಗಳಿಗೆ ಕೇಂದ್ರ ತಂಡಗಳನ್ನು ನಿಯೋಜಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ಧರಿಸಿದೆ. ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆಗೆ ಅನುಕೂಲವಾಗುವಂತೆ ತಂಡಗಳು ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಸಹಾಯ ಮಾಡುತ್ತವೆ. ತಂಡಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿ, ಜಂಟಿ ಕಾರ್ಯದರ್ಶಿ ಮಟ್ಟದ ನೋಡಲ್ ಅಧಿಕಾರಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿವೆ. ಆಯಾ ರಾಜ್ಯಗಳ ಜಿಲ್ಲೆಗಳು/ ನಗರಗಳಲ್ಲಿನ ಪೀಡಿತ ಪ್ರದೇಶಗಳಲ್ಲಿ ನಿಗ್ರಹ ಕ್ರಮಗಳನ್ನು ಅನುಷ್ಠಾನಗೊಳಿಸಲು ತಂಡವು ರಾಜ್ಯ ಆರೋಗ್ಯ ಇಲಾಖೆಗೆ ನೆರವು ನೀಡುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622625

ಕೋವಿಡ್-19 ನಿರ್ವಹಣೆಯನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಸಂಪುಟ ಕಾರ್ಯದರ್ಶಿ

3.5 ಲಕ್ಷ ವಲಸೆ ಕಾರ್ಮಿಕರನ್ನು ಹೊತ್ತ 350 ಕ್ಕೂ ಹೆಚ್ಚು ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗಿರುವುದನ್ನು ಸಂಪುಟ ಕಾರ್ಯದರ್ಶಿಯವರು ಗಮನಿಸಿದರು. ಹೆಚ್ಚಿನ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆಗೆ ಸಹಕರಿಸಬೇಕೆಂದು ಅವರು ರಾಜ್ಯ ಸರ್ಕಾರಗಳಿಗೆ ವಿನಂತಿಸಿದರು. ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಭಾರತೀಯರನ್ನು ಕರೆತರಲು ರಾಜ್ಯಗಳ ಸಹಕಾರದ ಬಗ್ಗೆ ಅವರು ಗಮನಿಸಿದರು. ವೈದ್ಯರು, ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಚಲನವಲನಗಳಿಗೆ ಯಾವುದೇ ಅಡ್ಡಿಯಾಗಬಾರದು ಮತ್ತು ಕೊರೊನಾ ಯೋಧರನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ತಮ್ಮ ರಾಜ್ಯಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು ಮತ್ತು ಕೋವಿಡ್ ನಿಂದ ರಕ್ಷಿಸಿಕೊಳ್ಳುವ ಅಗತ್ಯವಿದ್ದರೂ, ಆರ್ಥಿಕ ಚಟುವಟಿಕೆಗಳನ್ನು ಸಹ ಸೂಕ್ತ ರೀತಿಯಲ್ಲಿ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1622782

ನಾಳೆ ಪ್ರಧಾನಿಯವರಿಂದ  ಮುಖ್ಯಮಂತ್ರಿಗಳೊಂದಿಗೆ ಸಭೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ 5 ನೇ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಾಳೆ, ಮೇ 11, 2020 ರಂದು ಮಧ್ಯಾಹ್ನ 3 ಗಂಟೆಗೆ ನಡೆಸಲಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622778

ಭಾರತೀಯ ರೈಲ್ವೆಯು 2020 ಮೇ 10 ರವರೆಗೆ (1500 ಗಂಟೆ) ದೇಶಾದ್ಯಂತ 366 “ಶ್ರಮಿಕ್ ವಿಶೇಷರೈಲುಗಳನ್ನು ಓಡಿಸಿದೆ

ಮೇ 10, 2020 ರ ಹೊತ್ತಿಗೆ, ದೇಶಾದ್ಯಂತ ವಿವಿಧ ರಾಜ್ಯಗಳಿಂದ ಒಟ್ಟು 366 “ಶ್ರಮಿಕ್ ವಿಶೇಷರೈಲುಗಳನ್ನು ಓಡಿಸಲಾಗಿದ್ದು, ಇದರಲ್ಲಿ 287 ರೈಲುಗಳು ಅವುಗಳ ಗಮ್ಯಸ್ಥಾನವನ್ನು ತಲುಪಿವೆ ಮತ್ತು 79 ರೈಲುಗಳು ಸಂಚಾರದಲ್ಲಿವೆ. ಆಂಧ್ರಪ್ರದೇಶ (1 ರೈಲು), ಬಿಹಾರ (87 ರೈಲುಗಳು), ಹಿಮಾಚಲ ಪ್ರದೇಶ (1 ರೈಲು), ಜಾರ್ಖಂಡ್ (16 ರೈಲುಗಳು), ಮಧ್ಯಪ್ರದೇಶ (24 ರೈಲುಗಳು), ಮಹಾರಾಷ್ಟ್ರ (3 ರೈಲುಗಳು), ಒಡಿಶಾ ( 20 ರೈಲುಗಳು), ರಾಜಸ್ಥಾನ್ (4 ರೈಲುಗಳು), ತೆಲಂಗಾಣ (2 ರೈಲುಗಳು), ಉತ್ತರ ಪ್ರದೇಶ (127 ರೈಲುಗಳು), ಪಶ್ಚಿಮ ಬಂಗಾಳ (2 ರೈಲುಗಳು) ಗಳಿಗೆ ಈ 287 ರೈಲುಗಳನ್ನು ಓಡಿಸಲಾಗಿದೆ. ಈ ಶ್ರಮಿಕ್ ವಿಶೇಷ ರೈಲುಗಳಲ್ಲಿ ಗರಿಷ್ಠ 1200 ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪ್ರಯಾಣಿಸಬಹುದು. ರೈಲು ಹತ್ತುವ ಮೊದಲು ಪ್ರಯಾಣಿಕರನ್ನು ಸೂಕ್ತ ತಪಾಸಣೆಗೊಳಪಡಿಸಲಾಗುತ್ತಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ಒದಗಿಸಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622790

ಸಿಬಿಎಸ್ ಮಂಡಳಿಯ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು 3000 ಸಿಬಿಎಸ್ ಮಾನ್ಯತೆ ಪಡೆದ ಶಾಲೆಗಳನ್ನು ಮೌಲ್ಯಮಾಪನ ಕೇಂದ್ರಗಳಾಗಿ ತೆರೆಯಲು ಗೃಹ ಸಚಿವಾಲಯ ಅನುಮತಿ ನೀಡಿದೆ

ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ಅನುಮತಿ ನೀಡಿದ್ದಕ್ಕಾಗಿ ಗೃಹ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು. ಭಾರತದಾದ್ಯಂತ 3000 ಸಿಬಿಎಸ್ ಮಾನ್ಯತೆ ಪಡೆದ ಶಾಲೆಗಳನ್ನು ಮೌಲ್ಯಮಾಪನ ಕೇಂದ್ರಗಳಾಗಿ ಗುರುತಿಸಲಾಗಿದೆ ಮತ್ತು ಮೌಲ್ಯಮಾಪನದ ಸೀಮಿತ ಉದ್ದೇಶಕ್ಕಾಗಿ ಮಾತ್ರ ಶಾಲೆಗಳಿಗೆ ವಿಶೇಷ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1622593

ಕಾನೂನು ಸಚಿವರಿಂದ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಭಾರತ ಸರ್ಕಾರದ ಎಲ್ಲಾ ಕಾನೂನು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ

ಕಾನೂನು ಮತ್ತು ನ್ಯಾಯ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಇಂದು ಕಾನೂನು ಅಧಿಕಾರಿಗಳ ತಂಡದೊಂದಿಗೆ ಸಂವಾದ ನಡೆಸಿದರು. ಇಂತಹ ಗಂಭೀರ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಾಗ ಸಂಕೀರ್ಣ ಮತ್ತು ಸೂಕ್ಷ್ಮ ಸ್ವರೂಪವನ್ನು ಸವಾಲುಗಳು ಎದುರಾಗುತ್ತವೆ. ಇದಕ್ಕೆ ಆಡಳಿತ ವ್ಯವಸ್ಥೆಯು ಪ್ರತಿಕ್ರಿಯಿಸಿದೆ ಮತ್ತು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ನಂಬುವ ಅವಶ್ಯಕತೆಯಿದೆ ಎಂದು ಸಚಿವರು ವಿಶೇಷವಾಗಿ ಒತ್ತಿ ಹೇಳಿದರು,. ಸವಾಲಿನ ಕಾಲದಲ್ಲಿ ಅತಿಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಪ್ಪಿಸುವ ಅಗತ್ಯವಿದೆ ಎಂದು ಕಾನೂನು ಸಚಿವರು ಹೇಳಿದರು. ನ್ಯಾಯ ವಿತರಣೆಯಲ್ಲಿ ಡಿಜಿಟಲ್ ವ್ಯವಸ್ಥೆಗಳನ್ನು ಹೆಚ್ಚಿಸುವ ಅವಕಾಶವಾಗಿ ಸವಾಲನ್ನು ಬಳಸಿಕೊಳ್ಳಬೇಕು ಎಂದು ಕಾನೂನು ಸಚಿವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1622675

ಮಿಷನ್ ಸಾಗರ್ - 10 ಮೇ 2020

ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಭಾರತ ಸರ್ಕಾರದ ನೆರವಿನ ಭಾಗವಾಗಿ, ಆಹಾರ ಪದಾರ್ಥಗಳು, ಎಚ್ಸಿಕ್ಯು ಮಾತ್ರೆಗಳು ಸೇರಿದಂತೆ ಕೋವಿಡ್ ಸಂಬಂಧಿತ ಔಷಧಿಗಳು, ವಿಶೇಷ ಆಯುರ್ವೇದ ಔಷಧಿಗಳು ಮತ್ತು ವೈದ್ಯಕೀಯ ನೆರವು ತಂಡಗಳೊಂದಿಗೆ ಭಾರತೀಯ ನೌಕಾ ಹಡಗು ಕೇಸರಿ ಮಾಲ್ಡೀವ್ಸ್, ಮಾರಿಷಸ್, ಸೀಶೆಲ್ಸ್, ಮಡಗಾಸ್ಕರ್ ಮತ್ತು ಕೊಮೊರೊಸ್ಗೆ 2020 ಮೇ 10 ತೆರಳಿದೆ. 'ಮಿಷನ್ ಸಾಗರ್' ಎಂದು ಕರೆಯಲಾಗುವ ನಿಯೋಜನೆಯು ಪ್ರದೇಶದ ಮೊದಲ ಪ್ರತಿಸ್ಪಂದಕನಾಗಿ ಭಾರತದ ಪಾತ್ರವನ್ನು ಎತ್ತಿಹಿಡಿದಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ ಮತ್ತು ಅದರ ಸಮಸ್ಯೆಗಳ ವಿರುದ್ಧ ಹೋರಾಡಲು ದೇಶಗಳ ನಡುವೆ ಇರುವ ಅತ್ಯುತ್ತಮ ಸಂಬಂಧಗಳನ್ನು ನಿರ್ಮಿಸುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622784

ಚಿಲ್ಲರೆ ವ್ಯಾಪಾರಿಗಳು ಹಾಗೂ ಕಟ್ಟಡ ಮತ್ತು ನಿರ್ಮಾಣ ವೃತ್ತಿಪರರನ್ನು ಎಂಎಸ್ಎಂಇಗಳಾಗಿ ನೋಂದಾಯಿಸುವ ಪ್ರಸ್ತಾವವನ್ನು ಪರಿಶೀಲಿಸಲಾಗುವುದು: ಶ್ರೀ ಗಡ್ಕರಿ

ಚಿಲ್ಲರೆ ವ್ಯಾಪಾರಿಗಳ ಸಂಘ ಮತ್ತು ವೃತ್ತಿನಿರತ ಎಂಜಿನಿಯರ್ಗಳು, ವಾಸ್ತುಶಿಲ್ಪಿಗಳು ಮತ್ತು ಪಟ್ಟಣ ಯೋಜಕರ ಸಂಘ (ಭಾರತ) ಗಳಿಗೆ ಎಂಎಸ್ಎಂಇಗಳಾಗಿ ನೋಂದಾಯಿಸುವಂತೆ ಸಲ್ಲಿಸಿರುವ ಮನವಿಯನ್ನು ತ್ವರಿತವಾಗಿ ಪರಿಶೀಲಿಸಲಾಗುವುದು ಎಂದು ಎಂಎಸ್ಎಂಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಇಂದು ಭರವಸೆ ನೀಡಿದರು. ಸಂಸ್ಥೆಗಳು ಉದ್ಯೋಗ ಸೃಷ್ಟಿಕರ್ತರಾಗಿರುವ ದೃಷ್ಟಿಯಿಂದ ಮತ್ತು ವಿಮೆ, ವೈದ್ಯಕೀಯ, ಪಿಂಚಣಿ ಮುಂತಾದ ವಿವಿಧ ಪ್ರಯೋಜನಗಳನ್ನು ಕಾರ್ಮಿಕರಿಗೆ ನೀಡಬಹುದೇ ಎಂದು ನೋಡುವ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು. ಮನೆ ವಿತರಣೆಯ ಆಯ್ಕೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಗ್ರಾಹಕರು/ ಉದ್ಯೋಗಿಗಳಿಗೆ ಸ್ಯಾನಿಟೈಜರ್ಗಳ ಲಭ್ಯತೆ ಮತ್ತು ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮುಖಗವಸುಗಳ ಬಳಕೆಯನ್ನು ಪ್ರಾರಂಭಿಸುವ ಬಗ್ಗೆ ಅನ್ವೇಷಿಸಬೇಕೆಂದು ಅವರು ಚಿಲ್ಲರೆ ವ್ಯಾಪಾರಿಗಳಿಗೆ ಕರೆ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1622626

ಕೋವಿಡ್-19 ಲಾಕ್ಡೌನ್ ಕಟ್ಟುನಿಟ್ಟಿನ ನಿರ್ಬಂಧಗಳ ಹೊರತಾಗಿಯೂ, ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಮಾರಾಟವು ಏಪ್ರಿಲ್ 2020 ರಲ್ಲಿ ಶೇ.71 ರಷ್ಟು ಹೆಚ್ಚಾಗಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1622788

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಹಿಮಾಚಲ ಪ್ರದೇಶ: ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಗೋವಾದಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ತಿವಿಮ್ / ಮಾರ್ಗೋವಾ / ಕರಮಾಲಿ (ಗೋವಾ) ಯಿಂದ ಉನಾಕ್ಕೆ ವಿಶೇಷ ರೈಲು ಓಡಿಸಲು ಕೇಂದ್ರ ಸರ್ಕಾರ ಒಪ್ಪಿದೆ. ಹಿಮಾಚಲಿಯರನ್ನು ಮರಳಿ ಮನೆಗೆ ಕರೆದೊಯ್ಯಲು ವಿಶೇಷ ರೈಲು ಮೇ 13 ಅಥವಾ 14 ರಂದು ಗೋವಾದಿಂದ ಸಂಚಾರ ಆರಂಭಿಸಲಿದೆ.
  • ಪಂಜಾಬ್: ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಗಳನ್ನು ಬರೆಯಬೇಕಾಗಿಲ್ಲ ಮತ್ತು ಮಂಡಳಿ ಪೂರ್ವ ಪರೀಕ್ಷೆಗಳಲ್ಲಿ ಅವರ ಸಾಧನೆಯ ಆಧಾರದ ಮೇಲೆ ಬಡ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಹಿಂದೆಂದೂ ಕಾಣದ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೀರ್ಘ ಕಾಲ ಲಾಕ್ ಡೌನ್/ಕರ್ಪ್ಯೂ ವಿಧಿಸಬೇಕಾಗಿ ಬಂದಿದ್ದರಿಂದ, ಪಂಜಾಬ್ ಶಾಲಾ ಶಿಕ್ಷಣ ವ್ಯವಸ್ಥೆಯಡಿ 5 ರಿಂದ 10 ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ, ಎಂದು ಮುಖ್ಯಮಂತ್ರಿ ಬಹಿರಂಗಪಡಿಸಿದರು. ಹನ್ನೊಂದು ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದಂತೆ ರಾಜ್ಯ ನಿರ್ಧಾರ ಕೈಗೊಳ್ಳುತ್ತದೆ.
  • ಹರಿಯಾಣ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ ಹರಿಯಾಣ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ (ದಿವ್ಯಾಂಗ ಜನರ ಸುರಕ್ಷತೆ ಮತ್ತು ರಕ್ಷಣೆಗಾಗಿ. ಎಲ್ಲಾ ಇಲಾಖೆಗಳ ಮುಖ್ಯಸ್ಥರು ಅಥವಾ ಕಚೇರಿಗಳ ಮುಖ್ಯಸ್ಥರು ಸಿಬ್ಬಂದಿಯ ಕರ್ತವ್ಯದ ರೋಸ್ಟರ್ ತಯಾರಿಸುವಾಗ ತೀವ್ರ ವಿಕಲಚೇತನರಾಗಿರುವ ನೌಕರರನ್ನು ಕರ್ತವ್ಯಕ್ಕೆ ಕರೆಯಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ. ಹರಿಯಾಣ ಸರ್ಕಾರವು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುವ ಪ್ರಯತ್ನಗಳನ್ನು ಮಾಡುತ್ತಿದೆ. ಒಂದೆಡೆ, ಶೈಕ್ಷಣಿಕ ಪಠ್ಯಕ್ರಮವನ್ನು ಐದು ಡಿಟಿಎಚ್ ಚಾನೆಲ್ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ, ಮತ್ತೊಂದೆಡೆ, ಹರಿಯಾಣ ಎಡುಸಾಟ್ ನಾಲ್ಕು ವಾಹಿನಿಯನ್ನು ರಾಜ್ಯದ ಎಲ್ಲಾ ಕೇಬಲ್ ಆಪರೇಟರ್ಗಳು ಪ್ರಸಾರ ಮಾಡುತ್ತಿದ್ದಾರೆ.
  • ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ 1,165 ಹೊಸ ಸೋಂಕಿನ ಪ್ರಕರಣಗಳು ವರದಿಯಾದ ನಂತರ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 20,228 ಕ್ಕೆ ಏರಿದೆ. ಮುಂಬೈ ಒಂದರಲ್ಲೇ ಇದುವರೆಗೆ 12,864 ಪ್ರಕರಣಗಳು ವರದಿಯಾಗಿದ್ದು, 489 ಸಾವು ದಾಖಲಾಗಿವೆ.
  • ಗುಜರಾತ್: ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು ಅಹಮದಾಬಾದ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಳಂಕದ ಭಯದಿಂದ ಕೋವಿಡ್ -19 ರೋಗಿಗಳನ್ನು ತಡವಾಗಿ ಆಸ್ಪತ್ರೆಗೆ ದಾಖಲಿಸುವುದು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ಮೂತ್ರಪಿಂಡ ಕಾಯಿಲೆಗಳಂತಹ ಸಹ-ಅಸ್ವಸ್ಥ ಸ್ಥಿತಿಗಳು ಗುಜರಾತ್ನಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ಸಾವಿನ ಹಿಂದಿನ ಕಾರಣಗಳೆಂದು ತಿಳಿಸಿದರು. ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 7,747 ಆಗಿದ್ದರೆ, ಸಾವಿನ ಸಂಖ್ಯೆ 452 ತಲುಪಿದೆ.
  • ರಾಜಸ್ಥಾನ: ರಾಜಸ್ಥಾನದಲ್ಲಿ ಇಂದು ಇನ್ನೂ 33 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ 3,741 ಕ್ಕೆ ತಲುಪಿದೆ. ರಾಜ್ಯವು ಸುಮಾರು ಶೇ.60ರಷ್ಟು ಚೇತರಿಕೆಯ ಪ್ರಮಾಣವನ್ನು ಹೊಂದಿದೆ. ಈಗಾಗಲೇ 2,176 ಜನರು ಚೇತರಿಸಿಕೊಂಡಿದ್ದರೆ, 1,917 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
  • ಮಧ್ಯಪ್ರದೇಶ: ಸಂಸದರಲ್ಲಿ 273 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ವರದಿಯಾದ ಪ್ರಕರಣಗಳು 3,614 ಕ್ಕೆ ತಲುಪಿವೆ. ಈವರೆಗೆ ಒಟ್ಟು ಸೋಂಕಿತರ ಪೈಕಿ 1,676 ಮಂದಿ ಚೇತರಿಸಿಕೊಂಡಿದ್ದರೆ, 215 ಮಂದಿ ಮೃತಪಟ್ಟಿದ್ದಾರೆ.
  • ಗೋವಾ: ಕಾರ್ಖಾನೆಗಳ ಕಾಯ್ದೆ 1948ರಡಿ ಕಾರ್ಮಿಕ ಕಾನೂನುಗಳನ್ನು ಸಡಿಲಿಸಿದ ಹಲವು ರಾಜ್ಯಗ ಸಾಲಿಗೆ ಗೋವಾ ಸೇರಿಕೊಂಡಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ 12 ಗಂಟೆಗಳ ದೈನಂದಿನ ಕೆಲಸದ ಪಾಳಿಗೆ ಅನುಮೋದಿಸಿದೆ. ಕಾರ್ಮಿಕರಿಗೆ ಹೆಚ್ಚುವರಿ ಗಂಟೆಗಳ ಕೆಲಸಕ್ಕೆ ಓವರ್ ಟೈಮ್ ಭತ್ಯೆ ನೀಡಲಾಗುತ್ತದೆ.
  • ಕೇರಳ: ತಮಿಳುನಾಡಿನ ವಲಾಯರ್ ಗಡಿ ಚೆಕ್ಪೋಸ್ಟ್ನಲ್ಲಿ ನಿನ್ನೆಯಿಂದ ಸಿಲುಕಿರುವವರಿಗೆ ಒಂದು ಬಾರಿಯ ಕ್ರಮವಾಗಿ -ಪಾಸ್ ನೀಡುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬಹಳಷ್ಟು ಕೇರಳಿಗರು ಪಾಸ್ ಇಲ್ಲದಿದ್ದರೂ ಸರಕಾರದ ಎಚ್ಚರಿಕೆಯ ಹೊರತಾಗಿಯೂ ಗಡಿ ಪ್ರದೇಶಗಳತ್ತ ಆಗಮಿಸಿದ್ದರು. ಐಎನ್‌.ಎಸ್ ಜಲಾಶ್ವದಲ್ಲಿ ಮಾಲ್ಡೀವ್ಸ್ ನಿಂದ ಸ್ಥಳಾಂತರಿಸಲ್ಪಟ್ಟ ಒಟ್ಟು 698 ಜನರು ಇಂದು ಬೆಳಗ್ಗೆ ಕೊಚ್ಚಿಗೆ ಆಗಮಿಸಿದರು. 698 ಪ್ರಯಾಣಿಕರಲ್ಲಿ 440 ಕೇರಳ ಮೂಲದವರು, 156 ಮಂದಿ ತಮಿಳುನಾಡಿನವರು ಮತ್ತು ಉಳಿದವರು ದೇಶದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಲಕ್ಷದ್ವೀಪದಿಂದ ಇನ್ನೂ 121 ಮಂದಿ ಇಂದು ಅರೇಬಿಯನ್ ಸಮುದ್ರದ ಮೂಲಕ ಕೊಚ್ಚಿಗೆ ಆಗಮಿಸಿದರು. ದೋಹಾದಿಂದ 182 ಪ್ರಯಾಣಿಕರನ್ನು ಹೊತ್ತ ವಿಮಾನ ಇಂದು ರಾತ್ರಿ ತಿರುವನಂತಪುರಂಗೆ ಆಗಮಿಸಲಿದೆ.
  • ತಮಿಳುನಾಡು: ವಲಸೆ ಕಾರ್ಮಿಕರ ಸಾರಿಗೆ ವೆಚ್ಚವನ್ನು ರಾಜ್ಯ ಸರ್ಕಾರ ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ ಭರಿಸಲಿದೆ. ಸರ್ವ ಮಹಿಳಾ ಸಿಬ್ಬಂದಿಯ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮೂಲಕ 177 ಭಾರತೀಯರು ಮಲೇಷ್ಯಾದಿಂದ ತಿರುಚಿಗೆ ಮರಳಿದ್ದಾರೆ. ಚೆನ್ನೈನಲ್ಲಿ ವಾರ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ವಿಶೇಷ ಅಧಿಕಾರಿ ಜೆ ರಾಧಾಕೃಷ್ಣನ್ ಹೇಳಿದ್ದಾರೆ. ಸೋಮವಾರದಿಂದ ಕೋವಿಡ್ -19 ಲಾಕ್ಡೌನ್ ನಿರ್ಬಂಧಗಳನ್ನು ರಾಜ್ಯ ಮತ್ತಷ್ಟು ಸಡಿಲಿಸಲಿದೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 6535, ಸಕ್ರಿಯ ಪ್ರಕರಣಗಳು: 4664, ಸಾವು: 44, ಡಿಸ್ಚಾರ್ಜ್: 1824. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 3330.
  • ಕರ್ನಾಟಕ: ರಾಜ್ಯದ ಕೋವಿಡ್-19 ರೋಗಿಗಳಲ್ಲಿ ಶೇ.76 ಕ್ಕಿಂತಲೂ ಹೆಚ್ಚು ಜನರಲ್ಲಿ ರೋಗಲಕ್ಷಣಗಳಿಲ್ಲ. ನಾಲ್ಕು ಶ್ರಾಮಿಕ ರೈಲುಗಳು ಯು.ಪಿ., ಬಿಹಾರ, ಜಾರ್ಖಂಡ್ಗೆ ತೆರಳಿವೆ. ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಯಾದೃಚ್ಛಿಕವಾಗಿ ಮಾದರಿ ಸಮೀಕ್ಷೆಗೆ ಆದೇಶಿಸಲಾಗಿದೆ. ರಾಜ್ಯದಲ್ಲಿ ಹೊಸ 53 ಪ್ರಕರಣಗಳು ದಾಖಲಾಗಿದ್ದು, ಇದು ಅತಿ ಹೆಚ್ಚಿನ ಸಂಖ್ಯೆಯಾಗಿದೆ; ಇದರೊಂದಿಗೆ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 847 ಆಗಿದೆ. ಮೇ 7 ರಂದು ನಿಧನರಾದ 56 ವರ್ಷದ ಮಹಿಳೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 31 ಆಗಿದೆ.

 

ಪಿ ಐ ಬಿ ವಾಸ್ತವ ಪರೀಶೀಲನೆ

***



(Release ID: 1622794) Visitor Counter : 181