ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿರ್ವಹಣೆಗೆ ಬೆಂಬಲ ನೀಡಲು ರಾಜ್ಯಗಳಿಗೆ ಕೇಂದ್ರ ತಂಡಗಳ ನಿಯೋಜನೆ

Posted On: 09 MAY 2020 9:04PM by PIB Bengaluru

ಕೋವಿಡ್-19 ನಿರ್ವಹಣೆಗೆ ಬೆಂಬಲ ನೀಡಲು ರಾಜ್ಯಗಳಿಗೆ ಕೇಂದ್ರ ತಂಡಗಳ ನಿಯೋಜನೆ

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಅತಿ ಹೆಚ್ಚಿನ ಕೋವಿಡ್-19 ಪ್ರಕರಣಗಳನ್ನು ಹರಡುತ್ತಿರುವ ಮತ್ತು ಹೆಚ್ಚಿನ ಪ್ರಕರಣಗಳಿರುವ 10 ರಾಜ್ಯಗಳಿಗೆ ಕೇಂದ್ರ ತಂಡಗಳನ್ನು ನಿಯೋಜಿಸಲು ನಿರ್ಧರಿಸಿದೆ. ತಂಡಗಳು ಕೋವಿಡ್-19 ನಿಯಂತ್ರಣಕ್ಕೆ ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಅಗತ್ಯ ನೆರವು ನೀಡಲಿವೆ.

ತಂಡಗಳಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿ, ಜಂಟಿ ಕಾರ್ಯದರ್ಶಿ ಮಟ್ಟದ ನೋಡಲ್ ಅಧಿಕಾರಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಇರುತ್ತಾರೆ. ತಂಡಗಳು ಆಯಾ ರಾಜ್ಯಗಳ ಜಿಲ್ಲೆಗಳು/ನಗರಗಳಲ್ಲಿ ಸೋಂಕಿತ ಪ್ರದೇಶಗಳಲ್ಲಿ ನಿರ್ಬಂಧಿತ ಕ್ರಮಗಳನ್ನು ಜಾರಿಗೊಳಿಸಲು ರಾಜ್ಯ ಆರೋಗ್ಯ ಇಲಾಖೆಗಳಿಗೆ ನೆರವು ನೀಡಲಿವೆ.

ತಂಡಗಳನ್ನು ಕೆಳಗಿನ ರಾಜ್ಯಗಳಿಗೆ ಕಳುಹಿಸಲಾಗುವುದು:

  1. ಗುಜರಾತ್
  2. ತಮಿಳುನಾಡು
  3. ಉತ್ತರ ಪ್ರದೇಶ
  4. ದೆಹಲಿ
  5. ರಾಜಸ್ಥಾನ
  6. ಮಧ್ಯಪ್ರದೇಶ
  7. ಪಂಜಾಬ್
  8. ಪಶ್ಚಿಮ ಬಂಗಾಳ
  9. ಆಂಧ್ರಪ್ರದೇಶ
  10. ತೆಲಂಗಾಣ

ಇದು ಅಧಿಕ ಸೋಂಕಿತ ಪ್ರಕರಣಗಳಿರುವ ಜಿಲ್ಲೆಗಳಿಗೆ ಮೊದಲೇ ಕಳುಹಿಸಲಾಗಿರುವ ಸಾರ್ವಜನಿಕ ಆರೋಗ್ಯ ತಜ್ಞರ 20 ಕೇಂದ್ರ ತಂಡಗಳಲ್ಲದೆ, ಇದೀಗ ಹೆಚ್ಚುವರಿಯಾಗಿ ಕಳುಹಿಸಲಾಗುತ್ತಿದೆ.

ಉನ್ನತ ಮಟ್ಟದ ತಂಡವನ್ನು ಇತ್ತೀಚೆಗೆ ಮುಂಬೈಗೆ ನಿಯೋಜಿಸಲಾಗಿದ್ದು, ಅಲ್ಲಿ ಕೋವಿಡ್-19 ನಿರ್ವಹಣೆಗೆ ರಾಜ್ಯಕ್ಕೆ ಬೆಂಬಲ ನೀಡುತ್ತಿದೆ.

***



(Release ID: 1622625) Visitor Counter : 216