ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ನಿರ್ವಹಣೆಗೆ ಈಶಾನ್ಯ ರಾಜ್ಯಗಳು ಕೈಗೊಂಡ ಕ್ರಮಗಳು ಮತ್ತು ಸಿದ್ಧತೆಯನ್ನು ಪರಿಶೀಲಿಸಿದ ಡಾ ಹರ್ಷವರ್ಧನ್
Posted On:
09 MAY 2020 4:35PM by PIB Bengaluru
ಕೋವಿಡ್-19 ನಿರ್ವಹಣೆಗೆ ಈಶಾನ್ಯ ರಾಜ್ಯಗಳು ಕೈಗೊಂಡ ಕ್ರಮಗಳು ಮತ್ತು ಸಿದ್ಧತೆಯನ್ನು ಪರಿಶೀಲಿಸಿದ ಡಾ ಹರ್ಷವರ್ಧನ್
“ನಾವು ಜೊತೆಗೂಡಿ ಕಿತ್ತಳೆ ವಲಯಗಳನ್ನು ಹಸಿರು ವಲಯಗಳನ್ನಾಗಿ ಪರಿವರ್ತಿಸೋಣ ಮತ್ತು ರಾಜ್ಯಗಳಾದ್ಯಂತ ಸುರಕ್ಷತಾ ಸ್ಥಿತಿಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸೋಣ”: ಡಾ ಹರ್ಷವರ್ಧನ್
ಈಶಾನ್ಯ ರಾಜ್ಯಗಳಲ್ಲಿನ ಕೋವಿಡ್ -19 ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಹರ್ಷವರ್ಧನ್ ಇಂದು ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ್, ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದರು. ಜೊತೆಗೆ ರೋಗ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೈಗೊಳ್ಳಲಾದ ಕ್ರಮಗಳ ಕುರಿತೂ ಸಹ ಅವರು ಶ್ರೀ ಅಶ್ವಿನ್ ಕುಮಾರ್ ಚೌಬೆ, ಎಂಒಎಸ್ (ಹೆಚ್ ಎಫ್ ಡಬ್ಲ್ಯೂ) ಅವರ ಜೊತೆ ಚರ್ಚಿಸಿದರು. ಈ ಪರಿಶೀಲನಾ ಸಭೆಯಲ್ಲಿ (ವಿಡಿಯೋ ಕಾನ್ಫೆರೆನ್ಸ್ ಮೂಲಕ) ಮಿಜೊರಾಂ ನ ಆರೋಗ್ಯ ಸಚಿವರಾದ ಡಾ. ಲಲಿತಾಂಗ್ಲಿಯಾನಾ ಅರುಣಾಚಲ ಪ್ರದೇಶದ ಆರೋಗ್ಯ ಸಚಿವರಾದ ಶ್ರೀ ಅಲೊ ಲಿಬಂಗ್, ಅಸ್ಸಾಂ ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವರಾದ ಶ್ರೀ ಪಿಯೂಷ್ ಹಜಾರಿಕಾ ಹಾಗೂ 8 ರಾಜ್ಯಗಳ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಡಾ ಹರ್ಷವರ್ಧನ್ ದೇಶದಲ್ಲಿ ಕೋವಿಡ್ -19 ರ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಎಲ್ಲ ರಾಜ್ಯಗಳ ಬದ್ಧತೆಯನ್ನು ಶ್ಲಾಘಿಸಿದರು. “ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಹಸಿರು ವಲಯಗಳನ್ನು ನೋಡುವುದು ಒಂದು ಸಮಾಧಾನಕರ ಮತ್ತು ಪ್ರೋತ್ಸಾಹದಾಯಕ ಸಂಗತಿಯಾಗಿದೆ. ಇಲ್ಲಿವರೆಗೆ ಕೇವಲ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಮಾತ್ರ ಕೋವಿಡ್ – 19 ಸಕ್ರೀಯ ಪ್ರಕರಣಗಳು ಕಂಡುಬಂದಿದ್ದು ಉಳಿದ ರಾಜ್ಯಗಳು ಹಸಿರು ವಲಯಗಳಾಗಿವೆ. ಕಿತ್ತಳೆ ವಲಯಗಳನ್ನು ಹಸಿರು ವಲಯಗಳಾಗಿ ಪರಿವರ್ತಿಸುವತ್ತ ಕೇಂದ್ರೀಕೃತವಾಗಿ ಒಗ್ಗೂಡಿ ಕೆಲಸ ಮಾಡೋಣ ಮತ್ತು ರಾಜ್ಯಾದ್ಯಂತ ಸುರಕ್ಷತಾ ಸ್ಥಿತಿಯನ್ನು ನಿರ್ವಹಿಸೋಣ”. ಎಂದು ಅವರು ಹೇಳಿದರು. 9 ಮೇ 2020 ರವರೆಗೆ ದೇಶಾದ್ಯಂತ ಒಟ್ಟು 59,662 ಪ್ರಕರಣಗಳು ವರದಿಯಾಗಿವೆ ಅದರಲ್ಲಿ 17,847 ಜನರು ಗುಣಮುಖರಾಗಿದ್ದಾರೆ ಮತ್ತು 1,981 ಸಾವು ಸಂಭವಿಸಿವೆ ಎಂದು ಡಾ ಹರ್ಷವರ್ಧನ್ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,320 ಹೊಸ ಪ್ರಕರಣಗಳು ಧೃಡಪಟ್ಟಿವೆ ಮತ್ತು 1307 ರೋಗಿಗಳು ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ 3.3% ಮತ್ತು ಚೇತರಿಕೆ ಪ್ರಮಾಣ 29.9% ಎಂದು ಕೂಡ ಅವರು ಹೇಳಿದರು. (ನೆನ್ನೆವರೆಗೆ) ಐಸಿಯುನಲ್ಲಿ ಪ್ರಸ್ತುತ 2.41% ಸಕ್ರೀಯ ಕೋವಿಡ್ -19 ರೋಗಿಗಳಲ್ಲಿ 0.38% ವೆಂಟಿಲೇಟರ್ ಗಳಲ್ಲಿ ಮತ್ತು 1.88% ಆಮ್ಲಜನಕದ ಸಹಾಯದೊಂದಿಗೆ ಇರುವ ರೋಗಿಗಳಿದ್ದಾರೆ ಎಂದೂ ಸಹ ಅವರು ಹೇಳಿದರು. “ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿದೆ ಮತ್ತು ಇದು ಪ್ರತಿದಿನಕ್ಕೆ 95,000 ಪರೀಕ್ಷೆಗಳು, 332 ಸರ್ಕಾರಿ ಪ್ರಯೋಗಾಲಯಗಳು ಮತ್ತು 125 ಖಾಸಗಿ ಪ್ರಯೋಗಾಲಯಗಳನ್ನು ಹೊಂದಿದೆ. ಒಟ್ಟಾರೆ ಇದುವರೆಗೆ 15,25,631 ಕೋವಿಡ್ – 19 ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಕೂಡ ಡಾ ಹರ್ಷವರ್ಧನ್ ಹೇಳಿದ್ದಾರೆ
ಈಶಾನ್ಯ ರಾಜ್ಯಗಳೊಂದಿಗಿನ ವಿವರವಾದ ಚರ್ಚೆ ವೇಳೆ ಪರೀಕ್ಷಾ ಸೌಲಭ್ಯಗಳು, ಆರೋಗ್ಯ ಮೂಲಭೂತ ಸೌಕರ್ಯ, ನಿಗಾವಣೆ, ಸಂಪರ್ಕ ಪತ್ತೆಹಚ್ಚುವುದು ಇತ್ಯಾದಿ ಸಮಸ್ಯೆಗಳ ಕುರಿತು ಅವರು ಒತ್ತಿ ಹೇಳಿದರು ಮತ್ತು ಉತ್ತಮ ಅಭ್ಯಾಸಗಳ ಕುರಿತಾದ ವಿಷಯಗಳನ್ನು ಹಂಚಿಕೊಂಡರು. ಇಲ್ಲಿವರೆಗೆ ಕೋವಿಡ್- 19 ರ ವಿರುದ್ಧ ಹೋರಾಡಲು ಕೇಂದ್ರ ತೆಗೆದುಕೊಂಡ ವಿವಿಧ ಕ್ರಮಗಳ ಬಗ್ಗೆ ಡಾ ಹರ್ಷವರ್ಧನ್ ಪ್ರಸ್ತಾಪಿಸಿದರು. “ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಉನ್ನತ ಮಟ್ಟದ ರಾಜಕೀಯ ಬದ್ಧತೆಯನ್ನು ಹೊಂದಿದೆ ಮತ್ತು ನೋವಲ್ ಕೊರೊನಾ ವೈರಾಣು ರೋಗ (ಕೋವಿಡ್ – 19) ವಿರುದ್ಧ ಸರ್ಕಾರ ತನ್ನ ಹೋರಾಟವನ್ನು ಮುಂದುವರಿಸುತ್ತಿದೆ. ಭಾರತ ವಿವಿಧ ಸಮಯೋಚಿತ ಕ್ರಮಗಳನ್ನು ಅನುಸರಿಸುವ ಮೂಲಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಿದ್ಧವಾಗಿದೆ ಮತ್ತು ಹೋರಾಡುತ್ತಿದೆ ಮತ್ತು ನೋವಲ್ ಕೊರೊನಾ ವೈರಾಣು ಮೇಲೆ ನಿಗಾವಹಿಸುವ ವ್ಯವಸ್ಥೆಗಳು ಮುಂದುವರಿದಿವೆ” ಎಂದು ಡಾ ಹರ್ಷವರ್ಧನ್ ಹೇಳಿದ್ದಾರೆ.
ಕೋವಿಡ್ – 19 ರ ವಿರುದ್ಧ ಹೋರಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ಮಾಡಿದ ಪ್ರಯತ್ನದಿಂದ ಸಮರ್ಪಕವಾಗಿ ಬೆಳೆಯುತ್ತಿರುವ ಆಸ್ಪತ್ರೆಗಳ ಸಂಖ್ಯೆ, ಐಸೋಲೇಶನ್ ಮತ್ತು ಐಸಿಯು ಹಾಸಿಗೆಗಳು ಮತ್ತು ಕ್ವಾರೆಂಟೈನ್ ಕೇಂದ್ರಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಮಾಹಿತಿ ನೀಡಿದರು. ಕೋವಿಡ್ – 19 ರಿಂದ ಉದ್ಭವಿಸುವ ಯಾವುದೇ ಸಮಸ್ಯೆಗಳನ್ನು ಎದುರಿಸಲು ದೇಶ ಸಿದ್ಧವಾಗಿದೆ ಎಂಬ ಭರವಸೆಯನ್ನು ಇವು ನೀಡುತ್ತವೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ಕೇಂದ್ರ ಸಂಸ್ಥೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್ ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು, ವೆಂಟಿಲೇಟರ್ ಗಳು ಇತ್ಯಾದಿಗಳನ್ನು ಒದಗಿಸುವ ಮೂಲಕ ಕೇಂದ್ರವೂ ಸಹಕರಿಸುತ್ತಿದೆ ಎಂದು ಅವರು ಹೇಳಿದರು.
ಈಶಾನ್ಯ ಭಾಗದಲ್ಲಿ ಕೋವಿಡ್ – 19 ನಿರ್ವಹಣೆಯ ಸಕಾರಾತ್ಮಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯವು ರೂಪಿಸಿರುವ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳ ಪ್ರಕಾರ ಹಿಂದಿರುಗುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ವಿದೇಶದಿಂದ ವಾಪಾಸಾಗುವವರನ್ನು ಪರೀಕ್ಷಿಸಿ ನಿರ್ಭಂಧಿಸಬೇಕು ಎಂದು ಡಾ ಹರ್ಷವರ್ಧನ್ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಗುಣಮುಖರಾದ ರೋಗಿಗಳನ್ನು ಬಿಡುಗಡೆ ಮಾಡುವ ಮಾರ್ಗಸೂಚಿಗಳನ್ನೂ ಸಹ ನವೀಕರಿಸಲಾಗಿದ್ದು ಎಲ್ಲ ತಾಜ್ಯಗಳು ಇದನ್ನು ಅನುಸರಿಸಬೇಕು ಎಂದೂ ಸಹ ಅವರು ಹೇಳಿದ್ದಾರೆ.
“ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿವೆ, ಇತರರು ಹೆಚ್ಚು ಪರಿಣಾಮಕಾರಿ ಕಣ್ಗಾವಲಿನ ಮೇಲೆ ನಿಗಾವಹಿಸಬೇಕು, ಸಂಪರ್ಕ ಪತ್ತೆ ಹಚ್ಚುವಿಕೆ, ಮನೆಮನೆಗೂ ಸಮೀಕ್ಷೆ ಮತ್ತು ಪ್ರಾಥಮಿಕ ರೋಗ ನಿರ್ಣಯದತ್ತ ಗಮನಹರಿಸಬೇಕಿದೆ ಎಂದು ಡಾ ಹರ್ಷವರ್ಧನ್ ಹೇಳಿದ್ದಾರೆ. “ತೀವ್ರ ಉಸಿರಾಟದ ತೊಂದರೆ ಮೇಲೆ ಕಣ್ಗಾವಲು(ಎಸ್ ಎ ಆರ್ ಐ), ನೆಗಡಿಯಂತಹ ರೋಗ (ಐಎಲ್ಐ) ಗಳನ್ನು ಕಳೆದ 14 ದಿನಗಳಿಂದ ಪ್ರಕರಣಗಳು ವರದಿಯಾಗದ ಬಾಧಿತ ಜಿಲ್ಲೆಗಳು ಮತ್ತು ಬಾಧಿತವಲ್ಲದ ಜಿಲ್ಲೆಗಳಲ್ಲಿ ನಿಗಾ ತೀವ್ರಗೊಳಿಸಬೇಕು ಮತ್ತು ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳ ಸಹಯೋಗದೊಂದಿಗೆ ಐ ಡಿ ಎಸ್ ಪಿ ಜಾಲವನ್ನು ಹೆಚ್ಚಿಸಬೇಕು ಎಂದೂ ಅವರು ಹೇಳಿದರು. ಸಂಪರ್ಕ ಪತ್ತೆಹಚ್ಚಲು ಮತ್ತು ನಿಗಾವಹಿಸಲು ಸಹಾಯವಾಗುವಂತೆ ಮತ್ತು ಜನರು ಸ್ವಯಂ ಮೌಲ್ಯಮಾಪನಕ್ಕಾಗಿ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡುವುದನ್ನು ತೀವ್ರವಾಗಿ ಮುಂದುವರಿಸಲು ರಾಜ್ಯಗಳನ್ನು ಆಗ್ರಹಿಸಿದರು. ಸೇವೆಗಳನ್ನು ಬಳಸಿಕೊಳ್ಳಲು ಜನರಿಗೆ ಸಹಾಯವಾಗುವಂತೆ ಮೀಸಲಿಟ್ಟ ಕೋವಿಡ್ ಆಸ್ಪತ್ರೆಗಳು, ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾ ಕೇಂದ್ರಗಳಂತಹ ಕೋವಿಡ್ – 19 ಕ್ಕಾಗಿ ಮೀಸಲಿಟ್ಟ ಸೌಲಭ್ಯಗಳ ಮಾಹಿತಿಯನ್ನು ಸಾರ್ವಜನಿಕ ವಲಯದಲ್ಲಿ ಇರಿಸಲು ರಾಜ್ಯಗಳಿಗೆ ಸಲಹೆ ನೀಡಿದರು. ಆರೋಗ್ಯ ಮೂಲಲ ಸೌಕರ್ಯಗಳ ಬಲವರ್ಧನೆಗೆ ಡೋನರ್ ಸಚಿವರು (ಡೋನರ್ ಸಚಿವಾಲಯ) ಹಣದ ಹಂಚಿಕೆ ಮಾಡಿದ್ದಾರೆ ಎಂದು ರಾಜ್ಯಗಳಿಗೆ ತಿಳಿಸಲಾಯಿತು ಮತ್ತು ರಾಜ್ಯಗಳು ಈ ನಿಧಿಯಡಿಯಲ್ಲಿ ಹಣ ಪಡೆಯಲು ತಮ್ಮ ಪ್ರಸ್ತಾವಣೆಗಳನ್ನು ಸಲ್ಲಿಸಬೇಕು.
ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿದ ರಾಜ್ಯಗಳಿಗೆ, ಈ ರಾಜ್ಯಗಳು ಗಡಿಗಳಲ್ಲಿ ಪ್ರವೇಶಿಸುವ ಪ್ರತಿಯೊಬ್ಬರನ್ನು ಪ್ರವೇಶ ಹಂತದಲ್ಲೇ ಸ್ಕ್ರೀನಿಂಗ್ ಮಾಡುವ ಮೂಲಕ ಮಾರ್ಗಸೂಚಿಯಂತೆ ಕ್ವಾರಂಟೈನ್ ಶಿಷ್ಠಾಚಾರಗಳನ್ನು ಅನುಸರಿಸುವ ಮೂಲಕ ರೋಗಕ್ಕೆ ತುತ್ತಾಗುವುದನ್ನು ತಡೆಯಬಹುದಾಗಿದೆ ಎಂದು ಡಾ. ಹರ್ಷವರ್ಧನ್ ಹೇಳಿದರು.
ಕೊವಿಡ್-19 ಚಿಕಿತ್ಸೆ ಜೊತೆಗೆ, ಕೊವಿಡ್-19 ಅಲ್ಲದ ಆರೋಗ್ಯ ಸೇವೆಗಳು ಕೂಡಾ ಅಷ್ಟೇ ಮಹತ್ವದ್ದಾಗಿವೆ ಮತ್ತು ಅವನ್ನು ನಿರ್ಲಕ್ಷಿಸಬಾರದೆಂದು ರಾಜ್ಯಗಳಿಗೆ ನೆನಪಿಸಿದರು. ಗರ್ಭಿಣಿಯರಿಗೆ ಎ ಎನ್ ಸಿ ಗಳು, ಲಸಿಕೆ ಕಾರ್ಯಕ್ರಮಗಳು, ಒಪಿಡಿ/ ಐಪಿಡಿ ಸೇವೆಗಳು, ಎನ್ ಸಿ ಡಿ ಗಳ ಸ್ಕ್ರೀನಿಂಗ್ ಮತ್ತು ಕ್ಷಯ ರೋಗ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಗಳು ಮತ್ತು ಆ ರೋಗಿಗಳ ಆರೋಗ್ಯ ರಕ್ಷಣೆಗೆ ಸೂಕ್ತ ಗಮನ ಹರಿಸಬೇಕಾದ ಆವಶ್ಯಕತೆಯಿದೆ ಎಂದು ಹೇಳಿದರು. ವೆಕ್ಟರ್ ನಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಬಗ್ಗೆಯೂ ತೀವ್ರ ಕ್ರಮ ಕೈಗೊಳ್ಳಬೇಕಿದೆ. ಹೆಚ್ಚಿನ ಜನರಿಗೆ ಆರೋಗ್ಯ ರಕ್ಷಣೆ ಅವಶ್ಉಕತೆಯನ್ನು ಪೂರೈಸಲು ಟೆಲಿ ಮೆಡಿಸಿನ್ ಮತ್ತು ಟೆಲಿ ಸಮಾಲೋಚನೆ, ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಆರೋಗ್ಯ ರಕ್ಷಣಾ ಸಿಬ್ಬಂದಿ, ಅರೆವೈದ್ಯಕೀಯ ಮತ್ತು ಇತರ ಆರೋಗ್ಯ ರಕ್ಷಣಾ ಕೆಲಸಗಾರರಿಗೆ ವೇತನ ಮತ್ತು ಪ್ರೋತ್ಸಾಹ ಧನ ನೀಡುವುದನ್ನು ಖಚಿತಪಡಿಸಬೇಕೆಂದು ರಾಜ್ಯಗಳಿಗೆ ಸಲಹೆ ನೀಡಲಾಯಿತು. ಇದಕ್ಕಾಗಿ ಆರೋಗ್ಯ ಇಲಾಖೆಗೆ ಎನ್ ಹೆಚ್ ಎಂ ನಿಧಿಯನ್ನು ವರ್ಗಾಯಿಸಲಾಗಿದೆ ಎಂಬುದನ್ನೂ ಕೂಡಾ ಖಚಿತಪಡಿಸಬೇಕೆಂದು ರಾಜ್ಯಗಳಿಗೆ ತಿಳಿಸಲಾಗಿದೆ. ಕೊವಿಡ್-19 ಅಲ್ಲದ ಅಗತ್ಯ ಸೇವೆಗಳಿಗೆ 1075 ಜೊತೆಗೆ 104 ಸಹಾಯವಾಣಿಯನ್ನು ಬಳಸಹುದು ಮತ್ತು ಅಗತ್ಯವಿರುವ ಮಾಹಿತಿಯನ್ನು ಅವರ ಸ್ಥಳದಲ್ಲೇ ಜನರಿಗೆ ಒದಗಿಸಬಹುದೆಂದು ರಾಜ್ಯಗಳಿಗೆ ತಿಳಿಸಲಾಯಿತು. ರಾಜ್ಯಗಳು ಅವಶ್ಯಕ ಔಷಧಿಗಳ ಸಾಕಷ್ಟು ಸಂಗ್ರಹವನ್ನು ಇಟ್ಟುಕೊಳ್ಳಬೇಕು ಮತ್ತು ಈ ಉದ್ದೇಶಕ್ಕಾಗಿ ಸ್ವಯಂ ಸೇವಕರನ್ನು ನೇಮಿಸಿಕೊಂಡು ಮನೆ ಬಾಗಿಲಿಗೆ ಔಷಧಿ ವಿತರಣೆ ಸಾಧ್ಯತೆಗಳನ್ನು ಅನ್ವೇಷಿಸಬೇಕು ಎಂದು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ಕೆಲ ರಾಜ್ಯಗಳಲ್ಲಿ ಧೂಮಪಾನ ರಹಿತ ತಂಬಾಕು ಬಳಕೆ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಗಮನದಲ್ಲಿರಿಸಿಕೊಂಡು, ರಾಜ್ಯಗಳು ತಂಬಾಕು ಬಳಕೆಯ ನಿಷೇಧಕ್ಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನೂ ನಿಷೇಧಿಸಲು ವ್ಯಾಪಕ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಬೇಕೆಂದು ಮತ್ತು ಇದು ಕೊವಿಡ್-19 ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ ಎಂದು ಡಾ. ಹರ್ಷವರ್ಧನ್ ರಾಜ್ಯಗಳಿಗೆ ಸಲಹೆ ನೀಡಿದರು. ಈ ದಿಸೆಯಲ್ಲಿ ಬಲವಾದ ಸುಧಾರಣೆಗಳ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಅಗಿಯುವ ತಂಬಾಕು ನಿಷೇಧ ಮಾಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕೆ ದಂಡ ವಿಧಿಸುವ ರಾಜ್ಯಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
(ಹೆಚ್ ಎಫ್ ಡಬ್ಲ್ಯೂ) ಕಾರ್ಯದರ್ಶಿ, ಮಿಸ್. ಪ್ರೀತಿ ಸುಡಾನ್, (ಹೆಚ್ ಎಫ್ ಡಬ್ಲ್ಯೂ) ಒ ಎಸ್ ಡಿ, ಶ್ರೀ. ರಾಜೇಶ್ ಭೂಷಣ್, (ಎನ್ ಹೆಚ್ ಎಂ) ಎ ಎಸ್ ಮತ್ತು ಎಂ ಡಿ, ಮಿಸ್ ವಂದನಾ ಗುರುನಾನಿ, (ಎಮ್ ಒ ಹೆಚ್ ಎಫ್ ಡಬ್ಲ್ಯೂ) ಜಂಟಿ ಕಾರ್ಯದರ್ಶಿಗಳಾದ ಡಾ. ಮನೋಹರ್ ಅಜ್ಞಾನಿ, ಎನ್ ಸಿ ಡಿ ಸಿ ನಿರ್ದೇಶಕರಾದ ಡಾ. ಎಸ್ ಕೆ ಸಿಂಗ್ ಮತ್ತು (ಆರೋಗ್ಯ) ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಇತರ ಆರೋಗ್ಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಸುದ್ದರು.
***
(Release ID: 1622545)
Visitor Counter : 217
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Odia
,
Tamil
,
Telugu