ರಕ್ಷಣಾ ಸಚಿವಾಲಯ
ಕೊವಿಡ್ -19 ನಿರ್ವಹಣೆ ಕುರಿತು ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಜಪಾನ್ ರಕ್ಷಣಾ ಸಚಿವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು
Posted On:
08 MAY 2020 5:58PM by PIB Bengaluru
ಕೊವಿಡ್ -19 ನಿರ್ವಹಣೆ ಕುರಿತು ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಜಪಾನ್ ರಕ್ಷಣಾ ಸಚಿವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು
ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಜಪಾನ್ ದೇಶದ ರಕ್ಷಣಾ ಸಚಿವ ಶ್ರೀ ತಾರೊ ಕೊನೊ ಅವರೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದರು.
ಕೊವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ತಮ್ಮ ಸ್ಪಂದನೆಗಳ ಕುರಿತು ಇಬ್ಬರು ರಕ್ಷಣಾ ಸಚಿವರು ಚರ್ಚೆ ನಡೆಸಿದರು. ಕೊವಿಡ್ -19 ವಿರುದ್ಧದ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಭಾರತದ ಕೊಡುಗೆ ಕುರಿತು ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಶ್ರೀ ಕೊನೊ ತಾರೊ ಅವರಿಗೆ ಮಾಹಿತಿ ನೀಡಿದರು. ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪರಸ್ಪರ ಸಹಕಾರದ ಕ್ಷೇತ್ರಗಳ ಬಗ್ಗೆ ಇಬ್ಬರೂ ಚರ್ಚಿಸಿದರು. ಕೊವಿಡ್-19 ನಂತರದ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತ-ಜಪಾನ್ ರೂಪಿಸುವ ವಿಶೇಷ ಕಾರ್ಯತಂತ್ರಗಳು ಮತ್ತು ಇತರ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಜಾಗತಿಕ ಸಹಭಾಗಿತ್ವವು ಉತ್ತಮ ಆಧಾರವನ್ನು ನೀಡುತ್ತದೆ ಎಂದು ಇಬ್ಬರೂ ಸಚಿವರು ಪರಸ್ಪರ ಒಪ್ಪಿಕೊಂಡರು.
ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಚೌಕಟ್ಟಿನಡಿಯಲ್ಲಿ ದ್ವಿಪಕ್ಷೀಯ ಭದ್ರತಾ ಸಹಕಾರದ ಉಪಕ್ರಮಗಳನ್ನು, ಹಾಗೂ ಮುಂದೆ ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಬದ್ಧತೆಯನ್ನು ಉಭಯ ಸಚಿವರು ಪರಸ್ಪರ ತಿಳಿಸಿ ವಿವರಗಳನ್ನು ಹಂಚಿಕೊಂಡರು.
***
(Release ID: 1622336)
Visitor Counter : 233
Read this release in:
Punjabi
,
English
,
Urdu
,
Marathi
,
Hindi
,
Manipuri
,
Assamese
,
Bengali
,
Odia
,
Tamil
,
Telugu