ರೈಲ್ವೇ ಸಚಿವಾಲಯ

ರಾಜ್ಯದ ಅಧಿಕಾರಿಗಳಿಗೆ ಕೊವಿಡ್  ಚಿಕಿತ್ಸಾ ಕೇಂದ್ರಗಳನ್ನು ಒದಗಿಸಲು ಸಜ್ಜಾದ ಭಾರತೀಯ ರೈಲ್ವೆ

Posted On: 07 MAY 2020 3:18PM by PIB Bengaluru

ರಾಜ್ಯದ ಅಧಿಕಾರಿಗಳಿಗೆ ಕೊವಿಡ್  ಚಿಕಿತ್ಸಾ ಕೇಂದ್ರಗಳನ್ನು ಒದಗಿಸಲು ಸಜ್ಜಾದ ಭಾರತೀಯ ರೈಲ್ವೆ

ಭಾರತೀಯ ರೈಲ್ವೆಯಾದ್ಯಂತ ಕೊವಿಡ್  ಚಿಕಿತ್ಸಾ ಕೇಂದ್ರಗಳಾಗಿ 5231 ರೈಲ್ವೇ ಬೋಗಿಗಳು ಸಿದ್ಧ

ಕೊವಿಡ್  ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲು 215 ನಿಲ್ದಾಣಗಳನ್ನು ಗುರುತಿಸಲಾಗಿದೆ

215 ನಿಲ್ದಾಣಗಳ ಪೈಕಿ, 85 ನಿಲ್ದಾಣಗಳಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ರೈಲ್ವೇ ಒದಗಿಸಲಿದೆ, ಇನ್ನುಳಿದ 130 ನಿಲ್ದಾಣಗಳಲ್ಲಿ ಅಗತ್ಯ ಔಷಧಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಲು ಒಪ್ಪಿಕೊಂಡರೆ ಮಾತ್ರ ರಾಜ್ಯಗಳು ಚಿಕಿತ್ಸಾ ಬೋಗಿಗಳಿಗೆ ಮನವಿ ಮಾಡಿಕೊಳ್ಳಬಹುದು

ಕೊವಿಡ್  ಚಿಕಿತ್ಸಾ ಕೇಂದ್ರಗಳಲ್ಲಿ ನೀರು, ವಿದ್ಯುತ್ ಸರಬರಾಜು, ರಿಪೇರಿಗಳು, ಅಡುಗೆ ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಭಾರತೀಯ ರೈಲ್ವೇ ವಹಿಸಿಕೊಳ್ಳಲಿದೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಹೊರಡಿಸಿವೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ ಒ ಎಚ್ ಎಫ್ ಡಬ್ಲ್ಯೂ) ಮತ್ತು ಇತರ ಸಂಸ್ಥೆಗಳೊಂದಿಗೆ ಸಮಾಲೋಚಿಸಿದ ನಂತರ ಸಿದ್ಧಪಡಿಸಲಾದ ಮಾರ್ಗಸೂಚಿಗಳು

ಕೊವಿಡ್-19 ಬಿಕ್ಕಟ್ಟನ್ನು ಎದುರಿಸಲು 2500 ಕ್ಕೂ ಹೆಚ್ಚು ವೈದ್ಯರು ಮತ್ತು 35000 ಅರೆವೈದ್ಯಕೀಯ ಸಿಬ್ಬಂದಿಯನ್ನು ಭಾರತೀಯ ರೈಲ್ವೆ ನಿಯೋಜಿಸಿದೆ

ಪ್ರತಿಕೂಲ ಸಂದರ್ಭಗಳಲ್ಲಿ ರಾಷ್ಟ್ರೀಯ ಸರಬರಾಜು ಸರಪಳಿಯನ್ನು ನಿಯಂತ್ರಿಸುವುದರ ಜೊತೆಗೆ, ಕೊವಿಡ್ ವಿರುದ್ಧದ ಭಾರತ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಭಾರತೀಯ ರೈಲ್ವೆ ಮಹತ್ವದ ಕೊಡುಗೆ ನೀಡಿದೆ

ತಮ್ಮ ಮುಂಚೂಣಿಯ ಕಾರ್ಮಿಕರನ್ನು ರಕ್ಷಿಸಲು ರೈಲ್ವೇ ಇಲಾಖೆ ತನ್ನದೇ ಪಿಪಿಇಗಳನ್ನು ಉತ್ಪಾದಿಸುತ್ತಿದೆ
 

 

ರೈಲ್ವೆ ಸಚಿವಾಲಯ ತನ್ನ 5231 ಬೋಗಿಗಳನ್ನ ಕೊವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ಎಂ ಒ ಎಚ್ ಎಫ್ ಡಬ್ಲ್ಯೂ ಹೊರಡಿಸಿದ ಮಾರ್ಗಸೂಚಿಗಳಂತೆ ಕೊವಿಡ್ ಚಿಕಿತ್ಸಾ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಪ್ರಾಥಮಿಕ ಪ್ರಕರಣಗಳನ್ನು ಮಾತ್ರ ನಿಯೋಜಿಸಲು ಬೋಗಿಗಳನ್ನು ಬಳಸಬಹುದಾಗಿದೆ. ಸೌಲಭ್ಯಗಳ ಕೊರತೆ ಇರುವ ಪ್ರದೇಶಗಳಲ್ಲಿ ಈ ಬೋಗಿಗಳನ್ನು ರಾಜ್ಯಗಳು ಬಳಸಿಕೊಳ್ಳಬಹುದು ಮತ್ತು ಶಂಕಿತ ಹಾಗೂ ದೃಢಪಟ್ಟ ಪ್ರಕರಣಗಳನ್ನು ಪ್ರತ್ಯೇಕವಾಗಿ ಇರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿದೆ.

ಎಂ ಒ ಎಚ್ ಎಫ್ ಡಬ್ಲ್ಯೂ ಹೊರಡಿಸಿರುವ ಮಾರ್ಗಸೂಚಿಗಳು ಹೀಗಿವೆ (ಕೆಳಗೆ ನೀಡಲಾದ ಲಿಂಕ್ ನಲ್ಲಿ)

ಕೊವಿಡ್-19 ವಿರುದ್ಧದ ಹೋರಾಟವನ್ನು ಎದಿರಿಸಲು, ಭಾರತ ಸರ್ಕಾರದ ಆರೋಗ್ಯ ರಕ್ಷಣಾ ಪ್ರಯತ್ನಗಳಿಗೆ ಪೂರಕವಾಗಿ ಭಾರತೀಯ ರೈಲ್ವೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ರಾಜ್ಯಕ್ಕೆ 5231 ಕೊವಿಡ್  ಚಿಕಿತ್ಸಾ ಕೇಂದ್ರಗಳನ್ನು ಒದಗಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ವಲಯ ರೈಲ್ವೇ ಈ ಬೋಗಿಗಳನ್ನು ಪ್ರತ್ಯೇಕ ಸೌಲಭ್ಯವನ್ನಾಗಿ ಪರಿವರ್ತಿಸಿದೆ.

215 ನಿಲ್ದಾಣಗಳಲ್ಲಿ, ರೈಲ್ವೇ 85 ನಿಲ್ದಾಣಗಳಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಿದೆ, ಇನ್ನುಳಿದ 130 ನಿಲ್ದಾಣಗಳಲ್ಲಿ ಅಗತ್ಯ ಔಷಧಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಲು ಅಂಗೀಕರಿಸಿದರೆ ಮಾತ್ರ ರಾಜ್ಯಗಳು ಚಿಕಿತ್ಸಾ ಬೋಗಿಗಳಿಗೆ ಮನವಿ ಮಾಡಿಕೊಳ್ಳಬಹುದು. ಈ ಕೊವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ, 158 ನಿಲ್ದಾಣಗಳನ್ನು ನೀರು ಮತ್ತು ಚಾರ್ಜಿಂಗ್ ಸೌಲಭ್ಯದೊಂದಿಗೆ ಮತ್ತು 58 ನಿಲ್ದಾಣಗಳನ್ನು ನೀರಿನ ಸೌಲಭ್ಯದೊಂದಿಗೆ ಭಾರತೀಯ ರೈಲ್ವೆ ಸಿದ್ಧವಾಗಿಸಿದೆ. (ಪಟ್ಟಿಯನ್ನು ಅನುಬಂಧ ಎ ಎಂದು ಕೆಳಗಿನ ಲಿಂಕ್ ನಲ್ಲಿ ನೀಡಲಾಗಿದೆ)

ಕೊವಿಡ್ ಚಿಕಿತ್ಸಾ ಕೇಂದ್ರಗಳ ಹೊರತಾಗಿ, ಕೊವಿಡ್-19 ಬಿಕ್ಕಟ್ಟನ್ನು ಎದುರಿಸಲು 2500 ಕ್ಕೂ ಹೆಚ್ಚು ವೈದ್ಯರು ಮತ್ತು 35000 ಅರೆವೈದ್ಯಕೀಯ ಸಿಬ್ಬಂದಿಯನ್ನು ಭಾರತೀಯ ರೈಲ್ವೆ ನಿಯೋಜಿಸಿದೆ. ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ವಿವಿಧ ವಲಯಗಳಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. 17 ಮೀಸಲಿಟ್ಟ ಆಸ್ಪತ್ರೆಗಳಲ್ಲಿ ಸುಮಾರು 5000 ಹಾಸಿಗೆಗಳು ಮತ್ತು ರೈಲ್ವೆ ಆಸ್ಪತ್ರೆಗಳಲ್ಲಿ 33 ಆಸ್ಪತ್ರೆ ಬ್ಲಾಕ್ ಗಳನ್ನು ಕೊವಿಡ್-19 ರೋಗಿಗಳ ಚಿಕಿತ್ಸೆಗಾಗಿ ಗುರುತಿಸಲಾಗಿದ್ದು, ಯಾವುದೇ ಹರಡುವಿಕೆಯನ್ನು ಎದುರಿಸಲು ಸಿದ್ಧಪಡಿಸಲಾಗುತ್ತಿದೆ.

ಎಂ ಒ ಎಚ್ ಎಫ್ ಡಬ್ಲ್ಯೂ ಮಾರ್ಗಸೂಚಿಗಳಂತೆ, ರಾಜ್ಯ ಸರ್ಕಾರಗಳು ರೈಲ್ವೆಗೆ ಮನವಿಯನ್ನು ಕಳುಹಿಸುತ್ತವೆ. ಈ ಬೋಗಿಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ರೈಲ್ವೆ ಹಂಚಿಕೆ ಮಾಡುತ್ತದೆ. ರೈಲ್ವೆ ಹಂಚಿಕೆ ನಂತರ, ಅಗತ್ಯ ಮೂಲಸೌಕರ್ಯಗಳೊಂದಿಗೆ ಅಗತ್ಯ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗುವುದು ಮತ್ತು ಜಿಲ್ಲಾಧಿಕಾರಿ/ನ್ಯಾಯಾಧೀಶರು ಅಥವಾ ಇತರ ಅಧಿಕೃತ ವ್ಯಕ್ತಿಗಳಿಗೆ ಹಸ್ತಾಂತರಿಸಲಾಗುವುದು. ರೈಲನ್ನು ನಿಲ್ಲಿಸಿದೆಡೆ ಅವಶ್ಯಕ ನೀರು, ವಿದ್ಯುತ್, ರಿಪೇರಿಗಳು, ಅಡುಗೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ರೈಲ್ವೆ ಕೈಗೊಳ್ಳುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಲಿಂಕ್:

ನಿಲ್ದಾಣಗಳ ಅನುಬಂಧ ಎ ಗಾಗಿ ಲಿಂಕ್:

 

***


(Release ID: 1621990) Visitor Counter : 210