ಸಂಸ್ಕೃತಿ ಸಚಿವಾಲಯ

ಬುದ್ಧ ಪೂರ್ಣಿಮಾ ಅಂಗವಾಗಿ ಇಂದು ವರ್ಚ್ಯುಯಲ್ ‘ವೆಸಾಕ್ ಜಾಗತಿಕ ಆಚರಣೆ’ಗಳನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

Posted On: 07 MAY 2020 5:05PM by PIB Bengaluru

ಬುದ್ಧ ಪೂರ್ಣಿಮಾ ಅಂಗವಾಗಿ ಇಂದು ವರ್ಚ್ಯುಯಲ್ ವೆಸಾಕ್ ಜಾಗತಿಕ ಆಚರಣೆಗಳನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

ವಸ್ತುಶಃ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಜಗತ್ತಿನಾದ್ಯಂತ ಬೌದ್ಧ ಸಂಘಗಳ ಮುಖ್ಯಸ್ಥರು ಭಾಗಿ

ಕೋವಿಡ್-19 ವಾರಿಯರ್ಸ್ ಮತ್ತು ಸಂತ್ರಸ್ತರ ಗೌರವಾರ್ಥ ಜಾಗತಿಕ ಪ್ರಾರ್ಥನಾ ವಾರ ಸಮರ್ಪಣೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬುದ್ಧ ಪೂರ್ಣಿಮೆ ದಿನವಾದ ಇಂದು ವಸ್ತುಶಃ ವೆಸಾಕ್ ಜಾಗತಿಕ ಆಚರಣೆಗಳನ್ನುದ್ದೇಶಿಸಿ ಮಾತನಾಡಿದರು. ಸಂಸ್ಕೃತಿ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಕಿರಣ್ ರಿಜಿಜು ಅವರು ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರಾಸ್ತಾವಿಕ ಭಾಷಣದಲ್ಲಿ ಬುದ್ಧನ ಸಂದೇಶ, ಬೋಧನೆ ಮತ್ತು ಜೀವನ ಜಗತ್ತಿನಾದ್ಯಂತ ನಿರಂತರವಾಗಿ ಜನರ ಬದುಕನ್ನು ಶ್ರೀಮಂತಗೊಳಿಸಿದೆ. ಅವರ ಸಂದೇಶ ಯಾವುದೇ ಒಂದು ಸಂದರ್ಭಕ್ಕೆ ಸೀಮಿತವಾದುದಲ್ಲ, ಅಥವಾ ಯಾವುದೇ ಒಂದು ವಿಷಯಕ್ಕೆ ಸೀಮಿತವಾದುದಲ್ಲ, ಕಾಲ ಬದಲಾಗುತ್ತದೆ, ಪರಿಸ್ಥಿತಿ ಬದಲಾಗುತ್ತದೆ, ಸಮಾಜದ ಕಾರ್ಯವೈಖರಿ ಬದಲಾಗುತ್ತದೆ, ಆದರೆ ಬುದ್ಧನ ಸಂದೇಶಗಳು ನಿರಂತರವಾಗಿ ನಮ್ಮ ಜೀವನದಲ್ಲಿ ಹರಿಯುತ್ತಿರುತ್ತವೆ. ಬುದ್ಧ ಬರಿ ಒಂದು ಹೆಸರಲ್ಲ, ಅವರೊಂದು ಪವಿತ್ರ ಚಿಂತನೆ, ಚಿಂತನೆ ಪ್ರತಿಯೊಬ್ಬ ಮನುಷ್ಯರ ಹೃದಯವನ್ನು ಮೀಟುತ್ತದೆ ಮತ್ತು ಮಾನವೀಯತೆಯ ಮಾರ್ಗದರ್ಶನ ತೋರುತ್ತದೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗೆಳೆಯರೇ, ಬುದ್ಧನ ಪ್ರತಿಯೊಂದು ಬೋಧನೆಗಳು ಮತ್ತು ಪ್ರತಿಯೊಂದು ಪದವೂ ಮಾನವೀಯತೆಯ ಸೇವೆಗೈಯುವ ಭಾರತದ ಬದ್ಧತೆಯನ್ನು ಪುನರ್ ಪ್ರತಿಪಾದಿಸುತ್ತದೆ. ಬುದ್ಧ ಭಾರತದ ಜ್ಞಾನದೋಯ ಅಲ್ಲ, ಭಾರತದ ಸ್ವಯಂ ಸಾಕ್ಷಾತ್ಕಾರ ಕೂಡ ಹೌದು. ತಮ್ಮ ಸ್ವಯಂ ಸಾಕ್ಷಾತಾರದ ಮೂಲಕ ಭಾರತ ಇಡೀ ಮನುಕುಲಕ್ಕೆ ಮತ್ತು ಇಡೀ ಜಗತ್ತಿಗೆ ಪ್ರಯೋಜನವಾಗುವಂತಹ ಕೆಲಸವನ್ನು ಮುಂದುವರಿಸುತ್ತದೆ. ಭಾರತದ ಪ್ರಗತಿ ಸದಾ ವಿಶ್ವದ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂಪೂರ್ಣ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ https://pib.gov.in/PressReleseDetailm.aspx?PRID=1621741

ಸಂದರ್ಭದಲ್ಲಿ ಮಾತನಾಡಿದ ಸಂಸ್ಕೃತಿ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಬುದ್ಧ ಪೂರ್ಣಿಯ ಸಂದರ್ಭದಲ್ಲಿ ಪ್ರತಿಯೊಬ್ಬರನ್ನು ಅಭಿನಂದಿಸುವುದಾಗಿ ಹೇಳಿದರು ಮತ್ತು 2015ರಲ್ಲಿ ಬುದ್ಧ ಪೂರ್ಣಿಮೆಯನ್ನು ರಾಷ್ಟ್ರೀಯ ಆಚರಣೆಯನ್ನಾಗಿ ಮಾಡಲು ನಿರ್ಧರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಶ್ರೀ ಪಟೇಲ್ ಅವರು, ಬುದ್ಧ, ಪ್ರೀತಿ ಮತ್ತು ಅಹಿಂಸೆಯ ಶಕ್ತಿಯನ್ನು ನಮಗೆ ತೋರಿದರು. ಬುದ್ಧ ಇಡೀ ವಿಶ್ವಕ್ಕೆ ಅಹಿಂಸೆಯನ್ನು ಬೋಧಿಸಿದರು. ಅದೇ ಜ್ಞಾನದ ಭಾಷೆಯಾಯಿತು ಎಂದರು. ಬುದ್ಧ ಇಡೀ ಜಗತ್ತಿಗೆ ಪ್ರೀತಿಯ ಶಕ್ತಿಯನ್ನು ಬೋಧಿಸಿದರು ಎಂದರು. ಶ್ರೀ ಪಟೇಲ್ ಅವರು, ಬುದ್ಧನ ಬೋಧನೆಗಳ ಕೆಲವು ಉದಾಹರಣೆಗಳನ್ನು ತಮ್ಮ ಭಾಷಣದಲ್ಲಿ ಹಂಚಿಕೊಂಡರು.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಕಿರಣ್ ರಿಜಿಜು ಮಾತನಾಡಿ, “ಕೋವಿಡ್-19 ಸಂಕಷ್ಟದ ಸಮಯದಲ್ಲೂ ಬುದ್ಧ ಪೂರ್ಣಿಮೆ ಆಚರಣೆಗೆ ಜಗತ್ತಿನಾದ್ಯಂತ ಇರುವ ಜನರು ಒಂದು ಕುಟುಂಬದಂತೆ ವಸ್ತುಶಃ ಇಲ್ಲಿ ಸೇರಿರುವುದು ಹೆಮ್ಮೆ ಎನಿಸುತ್ತದೆ. ವಸುದೈವಕುಟುಂಬಕಂ ಎಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದರು.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಜಾಗತಿಕ ಬೌದ್ಧರ ಸಂಘಟನೆಗಳ ಒಕ್ಕೂಟ, ಅಂತಾರಾಷ್ಟ್ರೀಯ ಬೌದ್ಧರ ಒಕ್ಕೂಟ(ಐಬಿಸಿ) ಸಹಯೋಗದಲ್ಲಿ ವಸ್ತುಶಃ ಪ್ರಾರ್ಥನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಜಗತ್ತಿನಾದ್ಯಂತ ಇರುವ ಬೌದ್ಧ ಸಂಘಗಳ ಮುಖ್ಯಸ್ಥರು ಭಾಗವಹಿಸಿದ್ದರು. ಜಗತ್ತಿನಾದ್ಯಂತ ಕೋವಿಡ್-19 ಸಾಂಕ್ರಾಮಿಕದ ಪರಿಣಾಮದ ಹಿನ್ನೆಲೆಯಲ್ಲಿ ಬುದ್ಧ ಪೂರ್ಣಿಮೆ ಆಚರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚ್ಯುಯಲ್ ಸಮಾವೇಶದ ರೂಪದಲ್ಲಿ ಆಚರಿಸಲಾಯಿತು. ಇದನ್ನು ಕೋವಿಡ್-19 ವಿರುದ್ಧದ ಮುಂಚೂಣಿಯಲ್ಲಿರುವ ಯೋಧರು ಮತ್ತು ಸಂತ್ರಸ್ತರ ಗೌರವಾರ್ಥ ಜಾಗತಿಕ ಪ್ರಾರ್ಥನಾ ವಾರವನ್ನಾಗಿ ಸಮರ್ಪಿಸಲಾಯಿತು.

ಬೋಧ್ ಗಯಾದ ಮಹಾಬೋಧಿ ದೇವಾಲಯ, ಭಾರತದ ಸಾರಾನಾಥದ ಮುಳಗಂಧ್ ಕುಟಿ ವಿಹಾರ, ಭಾರತದ ಖುಷಿನಗರದ ಪರಿನಿರ್ವಾಣ ಸ್ತೂಪ, ನೇಪಾಳದ ಪವಿತ್ರ ಲುಂಬಿನಿ ಗಾರ್ಡನ್ , ಶ್ರೀಲಂಕಾದ ಐತಿಹಾಸಿಕ ಅನುರಾಧಾಪುರ ಸ್ತೂಪ ಆವರಣ ಮತ್ತು ಪವಿತ್ರ ರುವಾನ್ವೇಲಿ ಮಹಾ ಸೇಯಾದಿಂದ ನೇಪಾಳದ ಬೌದ್ಧನಾಥ್, ಸ್ವಯಂಭು, ನಮೋ ಸ್ತೂಪಗಳು ಮತ್ತು ಇತರ ಪ್ರಸಿದ್ಧ ಬೌದ್ಧರ ಕ್ಷೇತ್ರಗಳಿಂದ ಪ್ರಾರ್ಥನೆಗಳನ್ನು ಲೈವ್ ಸ್ಟ್ರೀಮ್ ಮಾಡಲಾಯಿತು.

ಕಾರ್ಯಕ್ರಮವನ್ನು ಐಬಿಸಿ ಸಾಮಾಜಿಕ ಮಾಧ್ಯಮ ನಿರ್ವಹಿಸುವ ಮತ್ತು ಮಾಂದಳ ಮೊಬೈಲ್ ಆಪ್ ನಿಂದ ಫೇಸ್ ಬುಕ್ ಲೈವ್, ಯೂಟ್ಯೂಬ್ ಲೈವ್ ಪ್ರಸಾರ ನಡೆಸಲಾಯಿತು.

ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಜೆಕ್ ಗಣರಾಜ್ಯ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಮ್ಯಾನ್ಮಾರ್, ಮಂಗೋಲಿಯಾ, ಮಲೇಷಿಯಾ, ನೇಪಾಳ, ರಷ್ಯಾ, ಶ್ರೀಲಂಕಾ, ಸಿಂಗಾಪೂರ್, ತೈವಾನ್, ವಿಯೆಟ್ನಾಂ ಮತ್ತಿತರ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

ವೆಸಾಕ್-ಬುದ್ಧ ಪೂರ್ಣಿಮೆಯನ್ನು ಗೌತಮ ಬುದ್ಧನ ಜನ್ಮದಿನ, ಜ್ಞಾನೋದಯ ಮತ್ತು ಮಹಾ ಪರಿನಿರ್ವಾಣ ಮೂರರ ಸಂಗಮದ ದಿನವನ್ನಾಗಿ ಪರಿಗಣಿಸಿ ಆಚರಿಸಲಾಗುತ್ತಿದೆ.

***



(Release ID: 1621988) Visitor Counter : 261