PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 05 MAY 2020 6:22PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ ಒಟ್ಟು 12,726 ಜನರು ಗುಣಮುಖರಾಗಿದ್ದಾರೆ. ಇದು ನಮ್ಮ ಒಟ್ಟು ಚೇತರಿಕೆ ದರವನ್ನು ಶೇ.27.41 ಕ್ಕೇರಿಸಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 46,433 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ದೃಢಪಟ್ಟ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ 3,900 ಹೆಚ್ಚಳ ಕಂಡುಬಂದಿದೆ. ಇಲ್ಲಿಯವರೆಗೆ ವರದಿಯಾದ ಒಟ್ಟು ಸಾವುಗಳ ಸಂಖ್ಯೆ 1568 ಆಗಿದ್ದು, ನಿನ್ನೆಯಿಂದ 195 ಸಾವುಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ದೃಢಪಟ್ಟ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಇದುವರೆಗಿನ ಅತ್ಯಧಿಕ ಹೆಚ್ಚಳ ಕಂಡುಬಂದಿದೆ, ಸಂಪರ್ಕ ಪತ್ತೆಹಚ್ಚುವಿಕೆ, ಸಕ್ರಿಯ ಪ್ರಕರಣಗಳ ಪತ್ತೆಹಚ್ಚಿಕೆ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621216

ಕೋವಿಡ್-19 ನಿರ್ವಹಣೆಯ ಪ್ರಸ್ತುತ ಸ್ಥಿತಿ, ಸಿದ್ಧತೆ ಮತ್ತು ಕ್ರಮಗಳನ್ನು ಪರಿಶೀಲಿಸಿದ ಸಚಿವರ ಸಮೂಹ

ಕೋವಿಡ್-19ರ ನಿಗ್ರಹ ಕಾರ್ಯತಂತ್ರ ಮತ್ತು ನಿರ್ವಹಣಾ ಅಂಶಗಳು ಹಾಗೂ ಕೇಂದ್ರ ಮತ್ತು ವಿವಿಧ ರಾಜ್ಯಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಚಿವರ ಸಮೂಹ (GoM) ಆಳವಾದ ಚರ್ಚೆ ನಡೆಸಿತು. ಕ್ಲಸ್ಟರ್ ನಿರ್ವಹಣೆ ಮತ್ತು ಧಾರಕ ತಂತ್ರದ ಜೊತೆಗೆ ಲಾಕ್‌ಡೌನ್‌ನ ಸಕಾರಾತ್ಮಕ ಪರಿಣಾಮವಾಗಿ ಸದ್ಯಕ್ಕೆ ಸಾವಿನ ಪ್ರಮಾಣವು ಸುಮಾರು ಶೇ.3.2 ರಷ್ಟಿದ್ದು, ಚೇತರಿಕೆ ಪ್ರಮಾಣ ಶೇ. 25ಕ್ಕಿಂತ ಹೆಚ್ಚಾಗಿದೆ. ದೇಶದ ವಿವಿಧ ಭಾಗಗಳ ರೋಗಿಗಳಿಂದ ಪ್ರತ್ಯೇಕಿಸಲ್ಪಟ್ಟ ನೊವೆಲ್ ಕೊರೊನಾವೈರಸ್‌ ತಳಿಗಳ ಜೀನೋಮ್ ಅನುಕ್ರಮವನ್ನು ಪ್ರಾರಂಭಿಸಲಾಗಿದೆ. ಪಿಪಿಇಗಳು, ಮುಖಗವಸುಗಳು, ವೆಂಟಿಲೇಟರ್‌ಗಳು, ಔಷಧಗಳು ಮತ್ತು ಇತರ ಅಗತ್ಯ ಉಪಕರಣಗಳ ಸಮರ್ಪಕತೆ ಮತ್ತು ಲಭ್ಯತೆಯ ಬಗ್ಗೆ ಸಚಿವರ ಸಮೂಹಕ್ಕೆ ತಿಳಿಸಲಾಯಿತು. ಪಿಎಂಜಿಕೆಪಿ ಅಡಿಯಲ್ಲಿ 2020 ರ ಮೇ 4 ರವರೆಗೆ 29.38 ಲಕ್ಷ ಮೆ.ಟನ್ ಆಹಾರ ಧಾನ್ಯಗಳನ್ನು ಮೊದಲ ತಿಂಗಳು 58.77 ಕೋಟಿ ಫಲಾನುಭವಿಗಳಿಗೆ ಮತ್ತು ಎರಡನೇ ತಿಂಗಳಲ್ಲಿ 5.82 ಲಕ್ಷ ಮೆ.ಟನ್ ಅನ್ನು 11.63 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಏಪ್ರಿಲ್-ಮೇ, 2020 ರ ಅವಧಿಯಲ್ಲಿ 4.98 ಕೋಟಿ ಪಿಎಂಯುವೈ ಸಿಲಿಂಡರ್‌ಗಳನ್ನು ಕಾಯ್ದಿರಿಸಲಾಗಿದೆ ಮತ್ತು 4.72 ಕೋಟಿ ಸಿಲಿಂಡರ್ ವಿತರಿಸಲಾಗಿದೆ. 20-21ರ ಅವಧಿಯಲ್ಲಿ 8.18 ಕೋಟಿ ರೈತರಿಗೆ ತಲಾ 2000 ರೂ.ಗಳ ಆರ್ಥಿಕ ಅನುಮೋದನೆ ನಿಡಲಾಗಿದೆ. ಹಿರಿಯ ನಾಗರಿಕರು, ವಿಧವೆಯರು ಮತ್ತು ದಿವ್ಯಾಂಗರಿಗೆ ಬೆಂಬಲವಾಗಿ, ಅರ್ಹ ಫಲಾನುಭವಿಗಳ ಎಲ್ಲಾ 2.812 ಕೋಟಿ ಖಾತೆಗಳಿಗೆ ಮೊದಲ ಕಂತಿನ 500 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.  20.05 ಕೋಟಿ ಮಹಿಳೆಯರು ಪ್ರಧಾನ ಮಂತ್ರಿ ಜನ ಧನ್ ಖಾತೆಗಳಿಗೆ ಪ್ರತಿ ಖಾತೆಗೆ 500 ರೂ. ಹಾಕಲಾಗಿದೆ. ಇಪಿಎಫ್‌ಒನ 9.27 ಲಕ್ಷ ಸದಸ್ಯರು ಆನ್‌ಲೈನ್ ವಾಪಸಾತಿ ಸೌಲಭ್ಯದ ಮೂಲಕ 2895 ಕೋಟಿ ರೂ.ಪಡೆದಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621207

NAM ಸಂಪರ್ಕ ಗುಂಪಿನ ಆನ್ಲೈನ್ ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಿ

ಕೋವಿಡ್ -19 ಸಾಂಕ್ರಾಮಿಕ ಬಿಕ್ಕಟ್ಟಿನ ಪ್ರತಿಕ್ರಿಯೆಯನ್ನು ಚರ್ಚಿಸಲು 2020 ರ ಮೇ 4 ರ ಸಂಜೆ ನಡೆದ ಆನ್‌ಲೈನ್ ಅಲಿಪ್ತ ಚಳವಳಿಯ (ಎನ್‌ಎಎಂ) ಸಂಪರ್ಕ ಸಮೂಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621103

ಕೋವಿಡ್-19ಕ್ಕೆ ಪ್ರತಿಕ್ರಿಯೆ ಕುರಿತು NAM ಸಂಪರ್ಕ ಗುಂಪಿನ ವೀಡಿಯೊ ಕಾನ್ಫರೆನ್ಸ್ ನಲ್ಲಿ ಪ್ರಧಾನಮಂತ್ರಿಯವರ ಹೇಳಿಕೆ

"ಇಂದು, ಮಾನವೀಯತೆಯು ಹಲವು ದಶಕಗಳ ನಂತರ ಅತ್ಯಂತ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಮಯದಲ್ಲಿ, ಅಲಿಪ್ತ ಚಳುವಳಿ ಜಾಗತಿಕ ಒಗ್ಗಟ್ಟನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. NAM ಆಗಿಂದಾಗ್ಗೆ ವಿಶ್ವದ ನೈತಿಕ ಧ್ವನಿಯಾಗಿದೆ. ಈ ಪಾತ್ರವನ್ನು ಉಳಿಸಿಕೊಳ್ಳಲು NAM ಎಲ್ಲರನ್ನೂ ಒಳಗೊಳ್ಳಬೇಕು. ಇಂದಿನ ಪ್ರಪಂಚವನ್ನು ಹೆಚ್ಚು ಪ್ರತಿನಿಧಿಸುತ್ತಿರುವ  ಅಂತರರಾಷ್ಟ್ರೀಯ ಸಂಸ್ಥೆಗಳು ನಮಗೆ ಅಗತ್ಯವಿದೆ. ನಾವು ಆರ್ಥಿಕ ಬೆಳವಣಿಗೆಯ ಮೇಲೆ ಮಾತ್ರ ಗಮನಹರಿಸದೇ ಮಾನವ ಕಲ್ಯಾಣವನ್ನು ಉತ್ತೇಜಿಸಬೇಕಾಗಿದೆ. ಭಾರತವು ದೀರ್ಘಕಾಲದಿಂದಲೂ ಇಂತಹ ಉಪಕ್ರಮಗಳಲ್ಲಿ ಮುಂದಿದೆ ”

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621115

ವೆಬಿನಾರ್ ಮೂಲಕ ದೇಶದಾದ್ಯಂತದ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸಂವಾದ

ಈ ಸಂವಾದದ ಸಮಯದಲ್ಲಿ, ಕೇಂದ್ರ ಮಾನವ ಸಂಪನ್ಮೂಲ ಸಚಿವರು ಬಾಕಿಯಿದ್ದ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನು ಘೋಷಿಸಿದರು. 2020 ರ ಜುಲೈ 26 ರಂದು ನೀಟ್ ಪರೀಕ್ಷೆ ನಡೆಯಲಿದೆ. ಜೆಇಇ ಮುಖ್ಯ ಪರೀಕ್ಷೆಯನ್ನು 2020 ರ ಜುಲೈ 18, 20, 21, 22 ಮತ್ತು 23 ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಆಗಸ್ಟ್‌ನಲ್ಲಿ ಜೆಇಇ (ಅಡ್ವಾನ್ಸ್) ನಡೆಯಬಹುದು ಎಂದು ಅವರು ಹೇಳಿದರು. ಯುಜಿಸಿ ನೆಟ್ 2020 ಮತ್ತು ಸಿಬಿಎಸ್‌ಇ 12 ನೇ ಬೋರ್ಡ್ ಪರೀಕ್ಷೆಗಳ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು. 2020-21ರ ಶೈಕ್ಷಣಿಕ ವರ್ಷಕ್ಕೆ ಐಐಟಿ, ಐಐಐಟಿ ಮತ್ತು ಎನ್‌ಐಟಿಗಳಿಗೆ ಯಾವುದೇ ಶುಲ್ಕ ಹೆಚ್ಚಳವಾಗುವುದಿಲ್ಲ ಎಂದೂ ಅವರು ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621189

ಲಾಕ್ ಡೌನ್ ಸಮಯದಲ್ಲಿ ಔಷಧಿ ಖರೀದಿಗೆ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಭಾರತಿಯ ಜನೌಷಧಿ ಕೇಂದ್ರಗಳು ವಾಟ್ಸಾಪ್ ಮತ್ತು -ಮೇಲ್ನಲ್ಲಿ ಆದೇಶಗಳನ್ನು ಸ್ವೀಕರಿಸುತ್ತಿವೆ

ಪ್ರಸ್ತುತ ದೇಶದ 726 ಜಿಲ್ಲೆಗಳಲ್ಲಿ 6300 ಕ್ಕೂ ಹೆಚ್ಚು ಪಿಎಂಬಿಜೆಕೆಗಳು ಕಾರ್ಯನಿರ್ವಹಿಸುತ್ತಿದ್ದು, ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳ ಪೂರೈಕೆಯನ್ನು ಖಾತ್ರಿಪಡಿಸಿದೆ. ಈ ಔಷಧಿಗಳು ಸರಾಸರಿ 50% ರಿಂದ 90% ರಷ್ಟು ಅಗ್ಗವಾಗಿವೆ. ಏಪ್ರಿಲ್ 2020 ರಲ್ಲಿ ಸುಮಾರು 52 ಕೋಟಿ ರೂಪಾಯಿ ಮೌಲ್ಯದ ಔಷಧಿಯನ್ನು ದೇಶಾದ್ಯಂತ ಸರಬರಾಜು ಮಾಡಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621141

ಇಪಿಎಫ್ ತನ್ನ ಪಿಂಚಣಿದಾರರಿಗೆ 764 ಕೋಟಿ ರೂ. ಬಿಡುಗಡೆ ಮಾಡಿದೆ

ಇಪಿಎಫ್‌ಒ ತನ್ನ ಪಿಂಚಣಿ ಯೋಜನೆಯಡಿ 65 ಲಕ್ಷ ಪಿಂಚಣಿದಾರರನ್ನು ಹೊಂದಿದೆ. ರಾಷ್ಟ್ರವ್ಯಾಪಿ ಕೋವಿಡ್ -19 ಲಾಕ್‌ಡೌನ್ ಕಾರಣದಿಂದಾಗಿ ಪಿಂಚಣಿದಾರರಿಗೆ ಅನಾನುಕೂಲತೆಯನ್ನು ತಪ್ಪಿಸಲು ಇಪಿಎಫ್‌ಒನ ಎಲ್ಲಾ 135 ಕ್ಷೇತ್ರ ಕಚೇರಿಗಳು 2020 ರ ಏಪ್ರಿಲ್‌ನಲ್ಲಿ ಪಿಂಚಣಿ ಪಾವತಿಯನ್ನು ಪ್ರಕ್ರಿಯೆಗೊಳಿಸಿದವು. ಇಪಿಎಫ್‌ಒ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಿಂಚಣಿ ವಿತರಿಸುವ ಭಾರತದಾದ್ಯಂತದ ಎಲ್ಲಾ ನೋಡಲ್ ಶಾಖೆಗಳಿಗೆ 764 ಕೋಟಿ ರೂ.ಗಳನ್ನುಕಳುಹಿಸಲು ಸಾಕಷ್ಟು ಶ್ರಮ ವಹಿಸಿವೆ. ನಿಗದಿಯಂತೆ ಪಿಂಚಣಿದಾರರ ಖಾತೆಗಳಿಗೆ ಪಿಂಚಣಿಯು ತಲುಪಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬ್ಯಾಂಕ್ ಶಾಖೆಗಳಿಗೆ ನಿರ್ದೇಶಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621161

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಎನ್ಸಿಸಿ ಕೊಡುಗೆಯನ್ನು ಪರಿಶೀಲಿಸಿದ ರಕ್ಷಣಾ ಸಚಿವರು

ಕೋವಿಡ್-19ರ ನಿಗ್ರಹದಲ್ಲಿ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ) ನೀಡಿದ ಕೊಡುಗೆಯನ್ನು ಶ್ರೀ ರಾಜನಾಥ್ ಸಿಂಗ್ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು. ದೇಶವು ಸವಾಲಿನ ಕಾಲವನ್ನು ದಾಟುತ್ತಿದೆ ಮತ್ತು COVID-19 ಅನ್ನು ನಿಗ್ರಹಿಸಲು ಪ್ರಧಾನಿ ಶ್ರೀನರೇಂದ್ರಮೋಡಿ ಅವರ ನೇತೃತ್ವದಲ್ಲಿ ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಮ್ಮ ಆರಂಭಿಕ ನುಡಿಗಳಲ್ಲಿ ರಕ್ಷಣಾ ಸಚಿವರು ಹೇಳಿದರು. ಎನ್‌ಸಿಸಿ ಕೆಡೆಟ್‌ಗಳು ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ನಿರ್ವಹಣೆ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಅಗತ್ಯ ಆಹಾರ ಸಾಮಗ್ರಿಗಳು, ಔಷಧಿಗಳ ಪೂರೈಕೆ, ಸಂಚಾರ ಕರ್ತವ್ಯಗಳಿಗೆ ಸಹಾಯ ಮಾಡುವುದು ಇತ್ಯಾದಿಗಳನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಕೆಲವು ಕೆಡೆಟ್‌ಗಳು ಸಾಮಾಜಿಕ ಮಾಧ್ಯಮಕ್ಕಾಗಿ ಶೈಕ್ಷಣಿಕ ವೀಡಿಯೊಗಳನ್ನು ಸಹ ತಯಾರಿಸಿದ್ದಾರೆ, ಇತರರು ಮುಖಗವಸುಗಳನ್ನು ತಯಾರಿಸಿ ಸ್ಥಳೀಯವಾಗಿ ವಿತರಿಸಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621188

ಡಾ. ಜಿತೇಂದ್ರ ಸಿಂಗ್ ಅವರು ಮಾರ್ಚ್ 30-ಮೇ 4, 2020 ಅವಧಿಯಲ್ಲಿ 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೆಶಗಳೊಂದಿಗೆ DARPG ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಪ್ರಗತಿ ವರದಿಯನ್ನು ಪರಿಶೀಲಿಸಿದರು

ಈ ಅವಧಿಯಲ್ಲಿ, DARPGನ ರಾಷ್ಟ್ರೀಯ ಕೋವಿಡ್-19 ಸಾರ್ವಜನಿಕ ಕುಂದುಕೊರತೆ ಮೇಲ್ವಿಚಾರಣೆಯು (https://darpg.gov.in) 52,327 ಪ್ರಕರಣಗಳ ವಿಲೇವಾರಿಯನ್ನು ಮಾಡಿದೆ, ಅದರಲ್ಲಿ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು 41,626 ಪ್ರಕರಣಗಳನ್ನು ಪರಿಹರಿಸಿವೆ. ಕೇಂದ್ರ ಸರ್ಕಾರದ ಕೋವಿಡ್-19 ಸಾರ್ವಜನಿಕ ಕುಂದುಕೊರತೆ ಪ್ರಕರಣಗಳ ಸರಾಸರಿ ಕುಂದುಕೊರತೆ ಪರಿಹಾರ ಅವಧಿಯು 1.45 ದಿನಗಳಾಗಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621201

ಏರ್ ಇಂಡಿಯಾ, ಅಲೈಯನ್ಸ್ ಏರ್, ..ಎಫ್ ಮತ್ತು ಖಾಸಗಿ ವಿಮಾನ ಸರಕು ವಾಹಕಗಳಿಂದ
ಲೈಫ್ಲೈನ್ ಉಡಾನ್ ಯೋಜನೆಯಡಿಯಲ್ಲಿ 443 ವಿಮಾನಗಳ ಕಾರ್ಯನಿರ್ವಹಣೆ

ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಿಮಾನ ಸರಕು ವಾಹಕಗಳು ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 443 ವಿಮಾನಗಳನ್ನು ನಿರ್ವಹಿಸಿವೆ. ಪೈಕಿ 265 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ಗಳು ನಿರ್ವಹಿಸಿವೆ. ಇಲ್ಲಿಯವರೆಗೆ ಸಾಗಿಸಿದ ಸರಕು ಸುಮಾರು 821.07 ಟನ್‌ಗಳಷ್ಟು ಮತ್ತು ಕ್ರಮಿಸಿದ ದೂರ 4,34,531 ಕಿ.ಮೀ ಆಗಿದೆ ಹಾಗೂ ಈಶಾನ್ಯ ರಾಜ್ಯಗಳ ಪ್ರದೇಶಗಳು, ದ್ವೀಪ ಪ್ರದೇಶಗಳು ಮತ್ತು ಗುಡ್ಡಗಾಡು ರಾಜ್ಯಗಳ ಮೇಲೆ ವಿಶೇಷ ಗಮನಹರಿಸಿ ಸರಕು ಸಾಗಾಟ ಮಾಡಲಾಗಿದೆ. ಕೋವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ‘ಲೈಫ್‌ಲೈನ್ ಉಡಾನ್’ ವಿಮಾನ ಸೇವೆಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಿರ್ವಹಿಸುತ್ತಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621105

ಆಮದು ಬದಲಿ ನೀತಿಯ ಕುರಿತು ಚಿಂತನೆ: ಶ್ರೀ ನಿತಿನ್ ಗಡ್ಕರಿ

ಕೋವಿಡ್-19 ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಹೊಸ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಮದು ಬದಲಿ ನೀತಿಯ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಎಂಎಸ್‌ಎಂಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾವೀನ್ಯತೆಗಳ ಮೂಲಕ ಗುಣಮಟ್ಟವನ್ನು ಸುಧಾರಿಸುವ ಮೂಲಕ ಮತ್ತು ವೆಚ್ಚವನ್ನು ಕಡಿತಗೊಳಿಸುವ ಮೂಲಕ ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸಲು ಅವರು ವಿವಿಧ ಪಾಲುದಾರರಿಗೆ ಕರೆ ನೀಡಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621215

ಕೇಂದ್ರ ಎಂಎಸ್ಎಂಇ ಸಚಿವಾಲಯವು ಕೃಷಿ ಎಂಎಸ್ಎಂಇ ನೀತಿಯ ಕುರಿತು ಚಂತನೆ ನಡೆಸಿದೆ: ಶ್ರೀ ನಿತಿನ್ ಗಡ್ಕರಿ

ದೇಶೀಯ ಉತ್ಪಾದನೆಯೊಂದಿಗೆ ವಿದೇಶಿ ಆಮದನ್ನು ಬದಲಿಸಲು ರಫ್ತು ವರ್ಧನೆ ಮತ್ತು ಆಮದು ಪರ್ಯಾಯದತ್ತ ಗಮನ ಹರಿಸಬೇಕಿದೆ ಎಂದು ಕೇಂದ್ರ ಸಚಿವರು ಪ್ರಸ್ತಾಪಿಸಿದ್ದಾರೆ. ಜ್ಞಾನವನ್ನು ಪರಿವರ್ತಿಸಲು ಉದ್ಯಮವು ನಾವೀನ್ಯತೆ, ಉದ್ಯಮಶೀಲತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನಾ ಕೌಶಲ್ಯ ಮತ್ತು ಅನುಭವಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು. ಚೀನಾದಿಂದ ಜಪಾನಿನ ಹೂಡಿಕೆಗಳನ್ನು ಹಿಂತೆಗೆದು ಬೇರೆಡೆಗೆ ಹೋಗಲು ಜಪಾನ್ ಸರ್ಕಾರ ತನ್ನ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಿರುವುದನ್ನು ಸಚಿವರು ನೆನಪಿಸಿಕೊಂಡರು. ಇದು ಭಾರತವು ಪಡೆದುಕೊಳ್ಳಬೇಕಾದ ಅವಕಾಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620966

ಕೋಲ್ಡ್ ಚೈನ್ ಯೋಜನೆಗಳ ಪ್ರವರ್ತಕರೊಂದಿಗೆ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ವಿಡಿಯೋ ಕಾನ್ಫರೆನ್ಸ್

ಅಸ್ತಿತ್ವದಲ್ಲಿರುವ ಆಹಾರ ಉತ್ಪನ್ನಗಳ ಪೂರೈಕೆ ಸರಪಳಿಗೆ ಗಂಭೀರ ಸವಾಲನ್ನು ಒಡ್ಡಿದೆ ಕೋವಿಡ್-19  ಬಿಕ್ಕಟ್ಟನ್ನು ನಿಭಾಯಿಸಲುಇಂಟಿಗ್ರೇಟೆಡ್ ಕೋಲ್ಡ್ ಚೈನ್ ನೆಟ್ವರ್ಕ್ ಸಾಮೂಹಿಕ ಸಾಮರ್ಥ್ಯವನ್ನು ಬಳಸುವ ಅಗತ್ಯವನ್ನು ಶ್ರೀಮತಿ ಹರ್ಸಿಮ್ರತ್ಕೌರ್ ಬಾದಲ್ ಒತ್ತಿಹೇಳಿದರು.

ಶೈತ್ಯೀಕರಿಸಿದ ತರಕಾರಿಗಳು ಮತ್ತು ಸಂಸ್ಕರಿಸಿದ ಡೈರಿ ಉತ್ಪನ್ನಗಳು ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಗಳಾದ ರೆಸ್ಟೋರೆಂಟ್ಗಳು, ಔತಣಕೂಟಗಳು, ಹೋಟೆಲ್ಗಳು ಇತ್ಯಾದಿಗಳಲ್ಲಿ ಲಾಕ್ಡೌನ್ ನಡುವೆ ಮಾರಾಟವಾಗದೇ ಉಳಿದಿರುವ ಬಗ್ಗೆ ಮತ್ತು ಉತ್ಪನ್ನಗಳನ್ನು ರಫ್ತು ಮಾಡಲು ಇರುವ ತೊಂದರೆಗಳ ಬಗ್ಗೆ ಅವರು ಚರ್ಚೆ ನಡೆಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621106

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಗಾಧ ವಿಜ್ಞಾನದ ಶಿಲ್ಪಿಯಾಗಿ ಹೇಗೆ ವೇಗವಾಗಿ ವಿಕಸನಗೊಳ್ಳುತ್ತಿದೆ ಎಂಬುದನ್ನು ಕೋವಿಡ್-19 ಬಿಕ್ಕಟ್ಟು ತೋರಿಸಿದೆ: ಪ್ರೊ. ಅಶುತೋಷ್ ಶರ್ಮಾ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1621139

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಚಂಡೀಗಢ: ಬಾಪುಧಾಮ್ ಕಾಲೋನಿ, ಸೆಕ್ಟರ್ 30-ಬಿ ಮತ್ತು ಇತರ ಕಂಟೈನ್ಮೆಂಟ್ ವಲಯಗಳತ್ತ ಗಮನ ಹರಿಸುವಂತೆ ಚಂಡೀಗಢ ಆಡಳಿತಾಧಿಕಾರಿ ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಪ್ರದೇಶದಲ್ಲಿ ಶಂಕಿತ ಪ್ರಕರಣಗಳ ತಪಾಸಣೆ ಮತ್ತು ಪರೀಕ್ಷಿಸಲು ವಿಶೇಷ ಅಭಿಯಾನ ಪ್ರಾರಂಭಿಸಲು ಆರೋಗ್ಯ ಸೇವೆಗಳ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಕ್ಷೇತ್ರ ಕಾರ್ಯಾಚರಣೆಗಳಿಗೆ ಹೋಗುವಾಗ ಸರಿಯಾದ ರಕ್ಷಣಾತ್ಮಕ ಗೇರುಗಳನ್ನು ಬಳಸುವಂತೆ ಅವರು ಸಿಬ್ಬಂದಿಗೆ ಸಲಹೆ ನೀಡಿದರು. ಸೋಂಕಿನ ಅಪಾಯ ಕಡಿಮೆ ಮಾಡಲು ಕ್ಷೇತ್ರ ಕಾರ್ಯಾಚರಣೆಗೆ ಹೋಗುವ ಮುನ್ನ ಸೂಕ್ತ ಸುರಕ್ಷತಾ ಸಾಧನ ಧರಿಸಲು ಸಿಬ್ಬಂದಿಗೆ ಸಲಹೆ ಮಾಡಿದ್ದಾರೆ.
 • ಪಂಜಾಬ್: ಕರೋನಾ ವೈರಸ್ ಹಿನ್ನೆಲೆಯಲ್ಲಿ ವೃದ್ಧರು ಮತ್ತು ಹಿರಿಯ ನಾಗರಿಕರ ವಿಶೇಷ ಆರೈಕೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ನೀಡಿದೆ. 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಮತ್ತು ದೀರ್ಘಕಾಲದ ಉಸಿರಾಟ, ಹೃದಯ, ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಸಾದ ನಾಗರಿಕರಲ್ಲಿ ಕರೋನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಅವರಿಗೆ ಸಲಹೆ ನೀಡಲಾಗುತ್ತಿದೆ. ಸಣ್ಣ, ಸೂಕ್ಷ್ಮ, ಗುಡಿಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳ ದುಃಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಕುಟುಂಬ ಅಥವಾ ನೆರೆಹೊರೆಯ ಕಾರ್ಮಿಕರನ್ನು ತೊಡಗಿಸಿಕೊಳ್ಳುವ ಮೂಲಕ ಇವುಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲು ಕೇಂದ್ರದ ಅನುಮತಿಯನ್ನು ಕೋರಿದ್ದಾರೆ.
 • ಹರಿಯಾಣ: ಆಯುಷ್ ಸಚಿವಾಲಯದ ಮಾರ್ಗಸೂಚಿಯ ಅನುಸರಣೆಯಲ್ಲಿ ಆಯುಷ್ ಇಲಾಖೆ, ಕೊರೊನಾ ಯೋಧರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಔಷದಗಳನ್ನು ವಿತರಣೆ ಮಾಡುತ್ತಿದೆ.
 • ಹಿಮಾಚಲ ಪ್ರದೇಶ: ಆರ್ಟ್ ಆಫ್ ಲಿವಿಂಗ್ ಉಚಿತ ವಿತರಣೆಗಾಗಿ ದಾನ ಮಾಡಿದ ಆಹಾರ ಮತ್ತು ಅಗತ್ಯ ಸರಕುಗಳನ್ನು ಒಳಗೊಂಡಿರುವ ಪರಿಹಾರ ಸಾಮಗ್ರಿಗಳನ್ನು ತುಂಬಿದ ಮೂರು ಟ್ರಕ್ಗಳಿಗೆ ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು. ಲೋಕೋಪಕಾರಿ ಕಾರ್ಯವು ಇತರ ಸಂಸ್ಥೆಗಳಿಗೆ ಮುಂದೆ ಬರಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.
 • ಕೇರಳ: ವಲಸಿಗರಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಬದಲಾಗಿ ಮನೆ ಕ್ಯಾರೆಂಟೈನ್ಗೆ ಅನುಮತಿಸಲು ಕೇಂದ್ರದ ಕ್ವಾರಂಟೈನ್ ನಿಯಮ ಸಡಿಲಿಸುವಂತೆ ಮನವಿ ಮಾಡುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಕೊಲ್ಲಿಯಲ್ಲಿ ಸಿಲುಕಿರುವ ಕೇರಳಿಗರನ್ನು ಹೊತ್ತ ಮೊದಲ ವಿಮಾನ ಮೇ 7 ರಂದು ಕೇರಳ ತಲುಪಲಿದೆ. ಕೇರಳವೊಂದಕ್ಕೆ 15 ವಿಮಾನ ಸೇವೆಗಳು ಇರಲಿವೆ. ನೆರೆಯ ರಾಜ್ಯಗಳಿಂದ ಹಿಂದಿರುಗುತ್ತಿರುವ ಮಲಯಾಳಿಗಳ ಭಾರಿ ಜನಸ್ತೋಮ ರಾಜ್ಯದ ಆರು ಪ್ರವೇಶ ಕೇಂದ್ರಗಳಲ್ಲಿ ಕಾಣಿಸುತ್ತಿದೆ. ಮಧ್ಯೆ, ಕೇರಳ ಹೈಕೋರ್ಟ್ ನೌಕರರ ವೇತನ ಮುಂದೂಡಿಕೆ ಕುರಿತ ರಾಜ್ಯ ಸರ್ಕಾರದ ಹೊಸ ಸುಗ್ರೀವಾಜ್ಞೆಗೆ ತಡೆಯೊಡ್ಡಲು ನಿರಾಕರಿಸಿದೆ. ಒಟ್ಟು ದೃಢಪಟ್ಟ ಪ್ರಕರಣಗಳು: 499, ಸಕ್ರಿಯ ಪ್ರಕರಣಗಳು: 34, ಬಿಡುಗಡೆ: 465, ಒಟ್ಟು ಸಾವು: 4.
 • ತಮಿಳುನಾಡು: ಅಮ್ಮಾ ಕ್ಯಾಂಟೀನ್, ಆವಿನ್ ಹಾಲು ಘಟಕದ ಕೆಲಸಗಾರರಲ್ಲಿ ಸೋಂಕು ದೃಢಪಟ್ಟಿದೆ. ಚೆನ್ನೈನಲ್ಲಿ, ಸೋಮವಾರ ಲಾಕ್ ಡೌನ್ ಭಾಗಶಃ ಸಡಿಲಗೊಂಡ ನಂತರ ನೂರಾರು ಜನರು ಒಮ್ಮೆಲೆ ರಸ್ತೆಗಳಿದರು. ಚೆನ್ನೈ ಆಸ್ಪತ್ರೆಗಳ ಹಾಸಿಗೆಗಳು ತುಂಬಿದ್ದು, ರೋಗ ಲಕ್ಷಣ ರಹಿತ ಮತ್ತು ಸ್ಥಿರ ರೋಗಿಗಳನ್ನು ಖಾಸಗಿ ಕಾಲೇಜುಗಳು ಮತ್ತು ಚೆನ್ನೈ ವ್ಯಾಪಾರ ಕೇಂದ್ರಗಳಲ್ಲಿ ಸ್ಥಾಪಿಸಲಾದ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗಿದೆ. ಕೊಯಾಂಬೆಡು ಮಾರುಕಟ್ಟೆಯಲ್ಲಿ ರಾಜ್ಯದ 600 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 3550, ಸಕ್ರಿಯ ಪ್ರಕರಣಗಳು: 2107, ಸಾವುಗಳು: 31.
 • ಕರ್ನಾಟಕ: ಇಂದು 8 ಹೊಸ ಪ್ರಕರಣಗಳು ದೃಢಪಟ್ಟಿವೆ: ಬೆಂಗಳೂರು 3, ಬಾಗಲಕೋಟೆ 2 ಮತ್ತು ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಂದು. 62 / ಎಫ್ ಇಂದು ವಿಜಯಪುರದಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು 659, ಸಾವುಗಳು: 28, ಬಿಡುಗಡೆಯಾದವರು: 324
 • ಆಂಧ್ರಪ್ರದೇಶ: ರಾಜ್ಯವು ಮದ್ಯದ ಬೆಲೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಿದೆ; ವ್ಯವಹಾರದ ಸಮಯವನ್ನು ಕಡಿಮೆ ಮಾಡಿದೆ; ಹಿಂದಿನ ಬೆಲೆಗಳನ್ನು 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಎಲ್ಲಾ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ರಾಜ್ಯವು ಉಪ-ರಿಜಿಸ್ಟ್ರಾರ್ ಕಚೇರಿಗಳನ್ನು ಪುನಃ ತೆರೆಯುತ್ತಿದೆ; ಜನರ ದಟ್ಟಣೆಯನ್ನು ತಪ್ಪಿಸಲು ಟೋಕನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 67 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ (ಅವರಲ್ಲಿ 14 ಮಂದಿ ಗುಜರಾತ್ ನಲ್ಲಿ ಸಿಲುಕಿದ್ದು ಮರಳಿದವರಾಗಿದ್ದಾರೆ), 65 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಕಳೆದ 24 ಗಂಟೆಗಳಲ್ಲಿ ಒಂದು ಸಾವು ವರದಿಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1717 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು: 1094, ಗುಣಮುಖರಾದವರು: 589, ಸಾವುಗಳು: 34. ಸೋಂಕಿತ ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳು: ಕರ್ನೂಲ್ (516), ಗುಂಟೂರು (351), ಕೃಷ್ಣ (286).
 • ತೆಲಂಗಾಣ: ದೇಶಾದ್ಯಂತ ಮೂರನೇ ಹಂತದ ಲಾಕ್ಡೌನ್ ಸೋಮವಾರ ಪ್ರಾರಂಭವಾದ ನಂತರ ಕಂಟೈನ್ಮೆಂಟ್ ವಲಯಗಳ ಅಡಿಯಲ್ಲಿರುವ ಪ್ರದೇಶಗಳನ್ನು ಕಡಿಮೆ ಮಾಡಿದ್ದು ರಾಜ್ಯವು ಸಾಕಷ್ಟು ಸಡಿಲಿಕೆ ಪಡೆದಿದೆ. 1,200 ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಬಿಹಾರದ ಖಾಗೇರಿಯಾಕ್ಕೆ ಕರೆದೊಯ್ಯುವ ಶ್ರಮಿಕ್ ವಿಶೇಷ ರೈಲು ಇಂದು ಬೆಳಗ್ಗೆ 3.05 ಕ್ಕೆ ಹೈದರಾಬಾದ್ ಘಟ್ಕೇಸರ್ ನಿಂದ ಹೊರಟಿತು. ನಗರದಿಂದ ಕಾರ್ಮಿಕರನ್ನು ಹೊತ್ತು ಹೊರಟ 2 ನೇ ವಿಶೇಷ ರೈಲು ಇದಾಗಿದೆ. ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳು 1085, ಸಕ್ರಿಯ ಪ್ರಕರಣಗಳು: 471, ಮರುಪಡೆಯಲಾಗಿದೆ: 585, ಸಾವುಗಳು: 29.
 • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸೋಮವಾರ ದಾಖಲೆಯ 1,567 ಪ್ರಕರಣಗಳು ವರದಿಯಾಗಿದ್ದು, ಕೋವಿಡ್-19 ಪ್ರಕರಣಗಳ ಸಂಖ್ಯೆ 14,541 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇದು ಕಳೆದ ವಾರದಲ್ಲಿ ಪ್ರಕರಣಗಳ ಬ್ಯಾಕ್ಲಾಗ್ ಅನ್ನು ತೆರವುಗೊಳಿಸಿದ ಪರಿಣಾಮವಾಗಿದೆ ಎಂದು ಹೇಳಿದೆ. ಸೋಮವಾರ 35 ಸಾವುಗಳು ದಾಖಲಾಗಿದ್ದು, ರಾಜ್ಯದ ಸಾವಿನ ಸಂಖ್ಯೆ 583 ಕ್ಕೆ ಏರಿದೆ. ರಾಜ್ಯ ಪ್ರಾಧಿಕಾರಗಳ ರೀತ್ಯ ಮುಂಬೈನಲ್ಲಿ 9310 ಪ್ರಕರಣ ದಾಖಲಾಗಿದೆ ಮತ್ತು 361 ಜನರು ಸಾವಿಗೀಡಾಗಿದ್ದಾರೆ. ಏಷ್ಯಾದ ಅತಿ ದೊಡ್ಡ ಕೊಳಗೇರಿ ಧಾರಾವಿಯೊಂದರಲ್ಲೇ 42 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟುಪ್ರಕರಣಗಳ ಸಂಖ್ಯೆ 632ಕ್ಕೆ ಏರಿಸಿದೆ. ಧಾರಾವಿಯಲ್ಲಿ 20 ಜನರು ಸಾವಿಗೀಡಾಗಿದ್ದಾರೆ. ಕೋವಿಡ್ 19 ದಾಳಿಯಿಂದಾಗಿ, ಮಹಾರಾಷ್ಟ್ರ ಸರ್ಕಾರವು ಮಾರ್ಚ್ 2021 ರವರೆಗೆ ಎಲ್ಲಾ ಹೊಸ ಬಂಡವಾಳ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಹೊಸ ಖರೀದಿ ಮತ್ತು ಹೊಸ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆಗಾಗಿ ಟೆಂಡರ್ಗಳನ್ನು ತಡೆಹಿಡಿಯಲು ಸರ್ಕಾರ ಇಲಾಖೆಗಳಿಗೆ ಆದೇಶಿಸಿದೆ. ಮುಂದಿನ ಆದೇಶದವರೆಗೆ ಇದು ಎಲ್ಲಾ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ.
 • ಗುಜರಾತ್: ಗುಜರಾತ್ನಲ್ಲಿ 376 ಕೋವಿಡ್ 19 ಪ್ರಕರಣಗಳು ಸೇರ್ಪಡೆಯಾಗಿದ್ದು, 29 ಸಾವು ಸಂಭವಿಸಿರುವ ಕಾರಣ ಸೋಂಕಿನ ಏರಿಕೆ ಸಂಖ್ಯೆ ಮುಂದುವರಿದಿದೆ. ರಾಜ್ಯದ ಕ್ರೋಡೀಕೃತ ಅಂಕಿ ಅಂಶಗಳ ರೀತ್ಯ 5,804 ಪ್ರಕರಣಗಳು ದೃಢವಾಗಿದ್ದು 319 ಸಾವು ಸಂಭವಿಸಿದೆ. ಆದರೆ ಸೋಮವಾರ ಬಿಡುಗಡೆಯಾದ 153 ರೋಗಿಗಳು ಸೇರಿ ಚೇತರಿಕೆಯ ಸಂಖ್ಯೆ 1,195 ಆಗಿದೆ.
 • ರಾಜಸ್ಥಾನ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮೇ 5 ರಂದು ಬೆಳಗ್ಗೆ 8:00 ವೇಳೆಗೆ 175 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಇದು ರಾಜಸ್ಥಾನದಲ್ಲಿ ಒಟ್ಟು ವರದಿಯಾದ ಕೊರೊನಾವೈರಸ್ ಪ್ರಕರಣಗಳನ್ನು 3,061 ಕ್ಕೆ ಏರಿಸಿದೆ. ಸೋಂಕಿಗೆ ಒಳಗಾದ ಒಟ್ಟು ಜನರಲ್ಲಿ, 1,394 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 77 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಮದ್ಯದ ಅಂಗಡಿಗಳ ಮುಂದೆ ಅವ್ಯವಸ್ಥೆ ಆದ ಹಿನ್ನೆಲೆಯಲ್ಲಿ ಕೂಪನ್ ನೀಡುವಂತೆ ಅಬಕಾರಿ ಇಲಾಖೆ ಮಳಿಗೆ ಮಾಲಿಕರಿಗೆ ಸೂಚಿಸಿದೆ. ನಿಗದಿತ ಸಮಯಕ್ಕೆ ಅನುಗುಣವಾಗಿ ಅಂಗಡಿಗಳಲ್ಲಿ ಮತ್ತು ಸಾಮಾಜಿಕ ದೂರವನ್ನು ಖಚಿತಪಡಿಸಿಕೊಂಡು ಖರೀದಿ ಮಾಡಬಹುದಾಗಿದೆ.
 • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 2,952 ಕ್ಕೆ ಏರಿದೆ. 165 ಸಾವು ಈವರೆಗೆ ಸಂಭವಿಸಿದೆ. 798 ಜನರು ಚೇತರಿಸಿಕೊಂಡಿದ್ದಾರೆ. ಇಂದೋರ್ ಅತ್ಯಂತ ಪೀಡಿತ ನಗರವಾಗಿದ್ದು, ರಾಜಧಾನಿ ಭೋಪಾಲ್ ನಂತರದ ಸ್ಥಾನದಲ್ಲಿದೆ. ಮರಣ ಪ್ರಮಾಣ ತೀವ್ರವಾಗಿ ಏರಿಕೆಯಾಗಿರುವುದರಿಂದ ಉಜ್ಜಯಿನಿ ಹೊಸ ಹಾಟ್ಸ್ಪಾಟ್ಆಗಿ ಹೊರಹೊಮ್ಮಿದೆ.
 • ಅರುಣಾಚಲ ಪ್ರದೇಶ: ಉಳಿದಲ್ಲೇ ಉಳಿದಿದ್ದ ಜನರು ತಮ್ಮ ಮನೆಗಳಿಗೆ ಮರಳಲು ಅನುಕೂಲವಾಗುವಂತೆ ನೇಮಕಗೊಂಡ ನೋಡಲ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ; ಕೋವಿಡ್ 19 ಗೆ ಸಂಬಂಧಿಸಿದ ಯಾವುದೇ ನವೀಕರಣ ಮತ್ತು ಸಹಾಯಕ್ಕಾಗಿ ವೆಬ್ಸೈಟ್ ಅನ್ನು covid19.itanagarsmartcity.in/index.php. ನೆರವಾಗಲಿದೆ.
 • ಅಸ್ಸಾಂ: ಗುವಾಹಟಿಯ ಸಾರುಸಜೈ ಕ್ರೀಡಾಂಗಣದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 124 ಕೋಟಾ ವಿದ್ಯಾರ್ಥಿಗಳ ಮೊದಲ ತಂಡವನ್ನು ಪರೀಕ್ಷೆಯಲ್ಲಿ ಕೋವಿಡ್ 19 ಸೋಂಕಿಲ್ಲ ಎಂದು ದೃಢಪಟ್ಟ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾಸ್ ಶರ್ಮಾ ಟ್ವೀಟ್ ಮಾಡಿದ್ದಾರೆ.
 • ಮಣಿಪುರ: ರಾಜ್ಯದಲ್ಲಿ ಆಹಾರ ಧಾನ್ಯಗಳ ಸ್ವಾವಲಂಬನೆಯ ಖಾತ್ರಿಗಾಗಿ ಕೃಷಿ ಮತ್ತು ತೋಟಗಾರಿಕೆ ಕಾರ್ಯ ಪಡೆಗಳ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ವಹಿಸಿದ್ದರು. ಮಣಿಪುರ ಸರ್ಕಾರ ಹೆಚ್ಚಿನ ಜನರಿಗೆ ತರಬೇತಿ ನೀಡಿ ಮತ್ತು ಅಗತ್ಯ ಸಲಕರಣೆ ದಾಸ್ತಾನು ಮಾಡಿ ಕೋವಿಡ್ 19 ಪರೀಕ್ಷೆ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ.
 • ಮಿಜೋರಾಂ: ಲಾಂಗತ್ ಲಾಯ್ ಜಿಲ್ಲೆಯ 173 ನಿವಾಸಿಗಳು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಣಿಪುರ ರಾಜ್ಯಗಳಿಂದ ಮರಳಿದ್ದು, ಅವರುಗಳನ್ನು ನಿಗದಿತ ಕ್ವಾರಂಟೈನ್ ಸೌಲಭ್ಯದಲ್ಲಿಡಲಾಗಿದೆ.
 • ನಾಗಾಲ್ಯಾಂಡ್: ಕೊಹೀಮಾ ಮತ್ತು ದಿಮಾಪುರದ ನಾಗರಿಕ ಸಚಿವಾಲಯ ಮತ್ತು ನಿರ್ದೇಶನಾಲಯಗಳ ಉಪ ಕಾರ್ಯದರ್ಶಿ / ನಿರ್ದೇಶಕ ಮಟ್ಟದ ಅಧಿಕಾರಿಗಳು ಮತ್ತು ಮೇಲ್ಪಟ್ಟವರು ಹಾಗೂ ಜಿಲ್ಲೆಗಳಲ್ಲಿ ಎಚ್.ಓಓಎಸ್ ಗಳು ಮತ್ತು ತಕ್ಷಣದ ಕಿರಿಯ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ, ನಾಗಾಲ್ಯಾಂಡ್ ರಾಜ್ಯದೊಳಗಿನ ಜನರ ಅಂತರ-ಜಿಲ್ಲಾ ಸಂಚಾರಕ್ಕೆ ಪರಿಷ್ಕೃತ ಮಾರ್ಗಸೂಚಿಗಳು ಅವಕಾಶ ಮಾಡಿಕೊಡುತ್ತವೆ, ನಿಗದಿತ ಮಾನದಂಡಗಳ ಅಡಿಯಲ್ಲಿ ಟ್ಯಾಕ್ಸಿಗಳು ಮತ್ತು ರಿಕ್ಷಾಗಳನ್ನು ಓಡಿಸಲಾಗುವುದು. ಪ್ರಯಾಣಿಕರ ಬಸ್ಗಳ ನಿಷೇಧ ಮುಂದುವರೆಯಲಿದೆ.
 • ತ್ರಿಪುರಾ: ಸರ್ಕಾರ ಹೊಸ ಪೋರ್ಟಲ್ ಆರಂಭಿಸಿದೆ. ರಾಜ್ಯದಲ್ಲಿ ಸಿಲುಕಿರುವ ಮತ್ತು ಹಿಂತಿರುಗಲು ಬಯಸುವ ಇತರ ರಾಜ್ಯಗಳ ನಾಗರಿಕರು covid19.tripura.gov.in ನಲ್ಲಿ ನೋಂದಾಯಿಸಿಕೊಳ್ಳಬಹುದು.

 

ಪಿ ಐ ಬಿ ವಾಸ್ತವ ಪರೀಶೀಲನೆ

***(Release ID: 1621544) Visitor Counter : 37