ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪೋರ್ಚುಗಲ್ ಪ್ರಧಾನಿ ಶ್ರೀ ಆಂಟೋನಿಯೊ ಕೋಸ್ಟಾ ನಡುವೆ ದೂರವಾಣಿ ಮಾತುಕತೆ

Posted On: 05 MAY 2020 7:02PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪೋರ್ಚುಗಲ್ ಪ್ರಧಾನಿ ಶ್ರೀ ಆಂಟೋನಿಯೊ ಕೋಸ್ಟಾ ನಡುವೆ ದೂರವಾಣಿ ಮಾತುಕತೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋರ್ಚುಗಲ್ ಪ್ರಧಾನಿ ಶ್ರೀ  ಆಂಟೋನಿಯೊ ಕೋಸ್ಟಾ ಅವರೊಡನೆ ದೂರವಾಣಿ ಮಾತುಕತೆ ನಡೆಸಿದರು.

ಪೋರ್ಚುಗಲ್ ಅಧ್ಯಕ್ಷ ಶ್ರೀ ಮಾರ್ಸೆಲೊ ರೆಬೆಲೊ ಡಿ ಸೂಸಾ ಅವರು ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದನ್ನು ಪ್ರಧಾನಿಯವರು ಸ್ಮರಿಸಿಕೊಂಡರು.

ಕೋವಿಡ್-19 ಸಾಂಕ್ರಾಮಿಕದ ಸ್ಥಿತಿ ಮತ್ತು ಅದರ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ನಿಯಂತ್ರಿಸಲು ಉಭಯ ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕಾಗಿ ಪ್ರಧಾನಿ ಕೋಸ್ಟಾ ಅವರನ್ನು ಪ್ರಧಾನಿ ಶ್ಲಾಘಿಸಿದರು.

ಸಕ್ರಿಯ ರಾಷ್ಟ್ರೀಯ ಕ್ರಮಗಳು ವೈರಸ್ ಹರಡುವಿಕೆಯ ನಿಗ್ರಹದಲ್ಲಿವೆ ಎಂದು ನಾಯಕರು ಗಮನಿಸಿದರು. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪರಸ್ಪರರಿಗೆ ನೆರವಾಗುವ ಬಗ್ಗೆ ಮತ್ತು ಕೋವಿಡ್-19 ವಿರುದ್ಧ ಹೋರಾಟದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಬಗ್ಗೆ ಪರಸ್ಪರರು ಸಹಕರಿಸಲು ಒಪ್ಪಿದರು.

***



(Release ID: 1621520) Visitor Counter : 163