ಗೃಹ ವ್ಯವಹಾರಗಳ ಸಚಿವಾಲಯ

ಕೆಲವು ವರ್ಗಗಳನ್ನು ಹೊರತುಪಡಿಸಿ ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳು ಭಾರತದಿಂದ/ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಅಮಾನತು

Posted On: 05 MAY 2020 8:00PM by PIB Bengaluru

ಕೆಲವು ವರ್ಗಗಳನ್ನು ಹೊರತುಪಡಿಸಿ ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳು ಭಾರತದಿಂದಭಾರತಕ್ಕೆ ಅಂತರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಅಮಾನತು

 

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿ ಮುಂದುವರೆದಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು 17.04.2020 ರಂದು ರಾಜತಾಂತ್ರಿಕ, ಅಧಿಕೃತ, ವಿಶ್ವಸಂಸ್ಥೆ/ ಅಂತರರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಮತ್ತು ಯೋಜನೆ ವಿಭಾಗಗಳಿಗೆ ಹೊರತುಪಡಿಸಿ, ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳ ಅಮಾನತು ವಿಸ್ತರಣೆಯನ್ನು ಮೇ 3, 2020 ರವರೆಗೆ ವಿಸ್ತರಿಸಲು ನಿರ್ಧರಿಸಿತ್ತು (https://pib.gov.in/PressReleseDetail.aspx?PRID=1615500)

ವಿಷಯವನ್ನು ಮರುಪರಿಶೀಲಿಸಿದ ನಂತರ, ರಾಜತಾಂತ್ರಿಕ, ಅಧಿಕೃತ, ವಿಶ್ವಸಂಸ್ಥೆ/ ಅಂತರರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಮತ್ತು ಯೋಜನಾ ವಿಭಾಗಗಳಿಗೆ ಸೇರಿದವರನ್ನು ಹೊರತುಪಡಿಸಿ ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳ ಅಮಾನತನ್ನು ಭಾರತದಿಂದ/ಭಾರತಕ್ಕೆ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಮುಂದುವರೆಸಲು ನಿರ್ಧರಿಸಲಾಗಿದೆ.

ಅಧಿಕೃತ ಆದೇಶವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

***



(Release ID: 1621507) Visitor Counter : 140