ಪ್ರಧಾನ ಮಂತ್ರಿಯವರ ಕಛೇರಿ
ಕೊರೊನಾ ಲಸಿಕೆ ಅಭಿವೃದ್ಧಿ, ಔಷಧ ಅನ್ವೇಷಣೆ, ರೋಗ ನಿರ್ಣಯ ಮತ್ತು ಪರೀಕ್ಷೆ ಕುರಿತ ಕಾರ್ಯಪಡೆಯ ಸಭೆ ನಡೆಸಿದ ಪ್ರಧಾನಿ
Posted On:
05 MAY 2020 11:00PM by PIB Bengaluru
ಕೊರೊನಾ ಲಸಿಕೆ ಅಭಿವೃದ್ಧಿ, ಔಷಧ ಅನ್ವೇಷಣೆ, ರೋಗ ನಿರ್ಣಯ ಮತ್ತು ಪರೀಕ್ಷೆ ಕುರಿತ ಕಾರ್ಯಪಡೆಯ ಸಭೆ ನಡೆಸಿದ ಪ್ರಧಾನಿ
ಲಸಿಕೆ ಅಭಿವೃದ್ಧಿ, ಔಷಧ ಅನ್ವೇಷಣೆ, ರೋಗನಿರ್ಣಯ ಮತ್ತು ಪರೀಕ್ಷೆಯಲ್ಲಿ ಭಾರತದ ಪ್ರಯತ್ನಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಪ್ರಧಾನಿಯವರು ವಿವರವಾದ ಪರಾಮರ್ಶೆ ನಡೆಸಿದರು. ಭಾರತೀಯ ಲಸಿಕೆ ಕಂಪನಿಗಳು ಗುಣಮಟ್ಟ, ಉತ್ಪಾದನಾ ಸಾಮರ್ಥ್ಯ ಮತ್ತು ಜಾಗತಿಕ ಉಪಸ್ಥಿತಿಗೆ ಹೆಸರುವಾಸಿಯಾಗಿವೆ. ಇಂದು ಇನ್ನೂ ಮುಂದುವರೆದು, ಆರಂಭಿಕ ಹಂತದ ಲಸಿಕೆ ಅಭಿವೃದ್ಧಿ ಸಂಶೋಧನೆಯಲ್ಲಿ ಅವರು ಹೊಸತನವನ್ನು ಕಂಡುಕೊಂಡಿದ್ದಾರೆ. ಅಂತೆಯೇ, ಭಾರತೀಯ ಸಂಶೋಧಕರು ಮತ್ತು ಸ್ಟಾರ್ಟ್ ಅಪ್ ಗಳು ಸಹ ಈ ಪ್ರದೇಶದಲ್ಲಿ ಪ್ರವರ್ತಕರಾಗಿವೆ. 30 ಕ್ಕೂ ಹೆಚ್ಚು ಭಾರತೀಯ ಲಸಿಕೆಗಳು ಕೊರೊನಾ ಲಸಿಕೆ ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ, ಕೆಲವು ಪ್ರಾಯೋಗಿಕ ಹಂತಗಳಿಗೂ ಹೋಗಿವೆ.
ಹಾಗೆಯೇ, ಔಷಧಿ ಅಭಿವೃದ್ಧಿಯಲ್ಲಿ ಮೂರು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಮೊದಲನೆಯದಾಗಿ, ಅಸ್ತಿತ್ವದಲ್ಲಿರುವ ಔಷಧಿಗಳ ಮರು ಬಳಕೆ. ಈ ವಿಭಾಗದಲ್ಲಿ ಕನಿಷ್ಠ ನಾಲ್ಕು ಔಷಧಿಗಳು ಸಂಶ್ಲೇಷಣೆ ಮತ್ತು ಪರೀಕ್ಷೆಗೆ ಒಳಗಾಗುತ್ತಿವೆ. ಎರಡನೆಯದಾಗಿ, ಪ್ರಯೋಗಾಲಯ ಪರಿಶೀಲನೆಯೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟೇಶನಲ್ ಅನ್ನು ಜೋಡಿಸುವ ಮೂಲಕ ಹೊಸ ಔಷಧಗಳು ಮತ್ತು ಅಣುಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತದೆ. ಮೂರನೆಯದಾಗಿ, ಸಾಮಾನ್ಯ ವೈರಾಣು ವಿರೋಧ ಗುಣಲಕ್ಷಣಗಳಿಗಾಗಿ ಸಸ್ಯದ ಸಾರಗಳು ಮತ್ತು ಉತ್ಪನ್ನಗಳನ್ನು ಪರಿಶೀಲಿಸಲಾಗುತ್ತಿದೆ.
ರೋಗನಿರ್ಣಯ ಮತ್ತು ಪರೀಕ್ಷೆಯಲ್ಲಿ, ಹಲವಾರು ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್ ಅಪ್ ಗಳು ಆರ್ ಟಿ -ಪಿಸಿಆರ್ ವಿಧಾನ ಮತ್ತು ಆ್ಯಂಟಿಬಾಡಿ ಪತ್ತೆಗಾಗಿ ಹೊಸ ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಿವೆ. ಇದಲ್ಲದೆ, ದೇಶಾದ್ಯಂತದ ಪ್ರಯೋಗಾಲಯಗಳನ್ನು ಜೋಡಿಸುವ ಮೂಲಕ, ಈ ಎರಡೂ ರೀತಿಯ ಪರೀಕ್ಷೆಗಳ ಸಾಮರ್ಥ್ಯವನ್ನು ಅಗಾಧವಾಗಿ ಹೆಚ್ಚಿಸಲಾಗಿದೆ. ಪರೀಕ್ಷೆಗೆ ಕಾರಕಗಳನ್ನು ಆಮದು ಮಾಡಿಕೊಳ್ಳುವ ಸಮಸ್ಯೆಯನ್ನು ಭಾರತೀಯ ಸ್ಟಾರ್ಟ್ ಅಪ್ ಒಕ್ಕೂಟ ಮತ್ತು ಉದ್ಯಮವು ಪರಿಹರಿಸಿದೆ. ಪ್ರಸ್ತುತ ಇರುವ ಒತ್ತಡವು ಈ ಕ್ಷೇತ್ರದಲ್ಲಿ ದೃಢವಾದ ದೀರ್ಘಕಾಲೀನ ಉದ್ಯಮದ ಅಭಿವೃದ್ಧಿಗೆ ಭರವಸೆಯನ್ನು ಹೊಂದಿದೆ.
ಪ್ರಧಾನಮಂತ್ರಿಯವರ ಪರಿಶೀಲನೆಯು ಅಕಾಡೆಮಿಯಾ, ಕೈಗಾರಿಕೆ ಮತ್ತು ಸರ್ಕಾರದ ತ್ವರಿತ ಆದರೆ ಪರಿಣಾಮಕಾರಿ ನಿಯಂತ್ರಕ ಪ್ರಕ್ರಿಯೆಯೊಂದಿಗೆ ಸಂಯೋಜಿಸಲ್ಪಟ್ಟಿರುವ ಅಸಾಧಾರಣ ಸಹಯೋಗವನ್ನು ಗಮನಿಸಿತು, ಅಂತಹ ಸಮನ್ವಯ ಮತ್ತು ವೇಗವನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪ್ರಧಾನಿಯವರು ತಿಳಿಸಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾದದ್ದು ನಮ್ಮ ದಿನನಿತ್ಯದ ವೈಜ್ಞಾನಿಕ ಕಾರ್ಯಚಟುವಟಿಕೆಯ ಒಂದು ಭಾಗವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.
ಔಷಧ ಅನ್ವೇಷಣೆಯಲ್ಲಿ ಕಂಪ್ಯೂಟರ್ ವಿಜ್ಞಾನ, ರಸಾಯನಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದ ವೈಜ್ಞಾನಿಕ ಒಗ್ಗೂಡಿಸುವಿಕೆಯನ್ನು ಶ್ಲಾಘಿಸಿದ ಪ್ರಧಾನಿಯವರು, ಕಂಪ್ಯೂಟರ್ ವಿಜ್ಞಾನವನ್ನು ಪ್ರಯೋಗಾಲಯದಲ್ಲಿ ಸಂಶ್ಲೇಷಣೆ ಮತ್ತು ಪರೀಕ್ಷೆಗೆ ಜೋಡಿಸಿ ಈ ವಿಷಯದ ಬಗ್ಗೆ ಹ್ಯಾಕಥಾನ್ ನಡೆಸಬೇಕೆಂದು ಸೂಚಿಸಿದರು. ಹ್ಯಾಕಥಾನ್ನಲ್ಲಿ ಯಶಸ್ವಿಯಾದವರನ್ನು ಸ್ಟಾರ್ಟ್ ಅಪ್ಗಳು ಹೆಚ್ಚಿನ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ಭಾರತೀಯ ವಿಜ್ಞಾನಿಗಳು ಮೂಲ ವಿಜ್ಷಾನದಿಂದ ಅನ್ವಯಿಕ ವಿಜ್ಞಾನಗಳವರೆಗೆ ಉದ್ಯಮದೊಂದಿಗೆ ಒಗ್ಗೂಡಿರುವ ನಾವೀನ್ಯತೆ ಹಾಗೂ ಸ್ವಂತಿಕೆಯ ವಿಧಾನವು ಹೃದಯಸ್ಪರ್ಶಿಯಾಗಿದೆ ಎಂದು ಪ್ರಧಾನಿ ಹೇಳಿದರು. ಈ ರೀತಿಯ ಹೆಮ್ಮೆ, ಸ್ವಂತಿಕೆ ಮತ್ತು ಉದ್ದೇಶದ ಅರ್ಥವು ಮುಂದೆ ಸಾಗುವ ನಮ್ಮ ವಿಧಾನವಾಗಿರಬೇಕು. ಆಗ ಮಾತ್ರ ನಾವು ವಿಜ್ಞಾನದಲ್ಲಿ ಕೇವಲ ಹಿಂಬಾಲಕರಾಗದೇ ವಿಶ್ವದಲ್ಲೇ ಅತ್ಯುತ್ತಮರಾಗಲು ಸಾಧ್ಯ ಎಂದು ಪ್ರಧಾನಿ ತಿಳಿಸಿದರು.
***
(Release ID: 1621488)
Visitor Counter : 239
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu