ಜವಳಿ ಸಚಿವಾಲಯ

ಮಹಾರಾಷ್ಟ್ರದಲ್ಲಿ 34 ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ಮುಂದುವರಿದಿದೆ:  ಲಾಕ್ ಡೌನ್ ಸಮಯದಲ್ಲಿ ಒಟ್ಟು 36,500 ಕ್ವಿಂಟಾಲ್ ಅಂದರೆ  6900 ಮೂಟೆಗಳಷ್ಟು ಹತ್ತಿ ಖರೀದಿ

Posted On: 04 MAY 2020 12:59PM by PIB Bengaluru

ಮಹಾರಾಷ್ಟ್ರದಲ್ಲಿ 34 ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ಮುಂದುವರಿದಿದೆ:  ಲಾಕ್ ಡೌನ್ ಸಮಯದಲ್ಲಿ ಒಟ್ಟು 36,500 ಕ್ವಿಂಟಾಲ್ ಅಂದರೆ  6900 ಮೂಟೆಗಳಷ್ಟು ಹತ್ತಿ ಖರೀದಿ

ಮಹಾರಾಷ್ಟ್ರದಲ್ಲಿ ಉತ್ಪಾದಿಸಿದ ಒಟ್ಟು ಹತ್ತಿಯ ಸುಮಾರು 77.40 % ರಷ್ಟು ಈಗಾಗಲೇ ಮಾರುಕಟ್ಟೆಗೆ ಬಂದಿದೆ ಮತ್ತು ಮಾರ್ಚ್ 25, 2020 ರವರೆಗೆ ಮಾರಾಟ ಮಾಡಲಾಗಿದೆ; ಹತ್ತಿ ಬೆಳೆಯುವ ರೈತರಿಂದ ಭಾರತೀಯ ಹತ್ತಿ ಮಂಡಳಿ (ಸಿಸಿಐ) ರೂ 4995 ಕೋಟಿ ಬೆಲೆಯ  91.90 ಲಕ್ಷ ಕ್ವಿಂಟಾಲ್ ಅಂದರೆ  to 18.66 ಲಕ್ಷ ಮೂಟೆಗಳ ಖರೀದಿ

ಹತ್ತಿ ಖರೀದಿ ಮಾಡಿದ ರೈತರಿಗೆ ಬಾಕಿ ಇರುವ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ; ಒಟ್ಟು ಖರೀದಿಸಿದ ಮೌಲ್ಯದಲ್ಲಿ ಈಗಾಗಲೇ ರೂ. 4987 ಕೋಟಿ ಮೊತ್ತ ರೈತರಿಗೆ ತಲುಪಿದೆ

ಮಹಾರಾಷ್ಟ್ರದಲ್ಲಿ ಎಪಿಎಂಸಿಯಲ್ಲಿ ಹತ್ತಿ ಮಾರಾಟಕ್ಕೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು

 

ಭಾರತೀಯ ಹತ್ತಿ ಮಂಡಳಿ (ಸಿಸಿಐ) ಮತ್ತು ಅದರ ಎಜೆಂಟ್ ಮಹಾರಾಷ್ಟ್ರ ರಾಜ್ಯ ಹತ್ತಿ ಬೆಳೆಗಾರರ ಮಾರುಕಟ್ಟೆ ಫೆಡರೇಶನ್ ನಿಯಮಿತ ಸನ್ನದ್ಧವಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಭಾರತ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಕಾರ್ಯಚಟುವಟಿಕೆಗೆ ಸಿದ್ಧವಾಗಿದೆ ಎಂದು ರೈತರಿಗೆ ಜವಳಿ ಖಾತೆ ಸಚಿವಾಲಯ ಭರವಸೆ ನೀಡಿದೆ.

ಅಕ್ಟೋಬರ್ 2019 ರಿಂದ ಮಹಾರಾಷ್ಟ್ರದಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ಪ್ರಗತಿಯಲ್ಲಿದೆ. 25 ಮಾರ್ಚ್ 2020 ರವರೆಗೆ ಭಾರತೀಯ ಹತ್ತಿ ಮಂಡಳಿ (ಸಿಸಿಐ) ರೂ 4995 ಕೋಟಿ ಬೆಲೆಯ 91.90 ಲಕ್ಷ ಕ್ವಿಂಟಾಲ್ ಅಂದರೆ 18.66 ಮೂಟೆಯಷ್ಟು ಹತ್ತಿಯನ್ನು ಮಹಾರಾಷ್ಟ್ರದಲ್ಲಿ 83 ಕೇಂದ್ರಗಳಿಂದ ಖರೀದಿಸಿದೆ.  

ಮಹಾರಾಷ್ಟ್ರದಲ್ಲಿ  ಬೆಳೆಯಲಾದ ಒಟ್ಟು ಹತ್ತಿಯ ಸುಮಾರು 77.40 % ರಷ್ಟು 25 ಮಾರ್ಚ್ 2020 ರವರೆಗೆ ಮಾರುಕಟ್ಟೆ ತಲುಪಿದೆ ಮತ್ತು ಸಿಸಿಐ ಹಾಗೂ ಖಾಸಗಿ ಖರೀದಿದಾರರಿಗೆ ಮಾರಲಾಗಿದೆ. ಇದೇ ವೇಳೆ ಲಾಕ್ ಡೌನ್ ಸಮಯದಲ್ಲಿ 22.60 % ಹತ್ತಿ ಮಾರುಕಟ್ಟೆಗೆ ಬರುವುದು ಬಾಕಿ ಇತ್ತು. ಈ ಬಾಕಿ ಇರುವ ಹತ್ತಿಯಲ್ಲಿ ಸುಮಾರು ರೂ 2100 ಕೋಟಿ  ಬೆಳೆಬಾಳುವ 40 ರಿಂದ 50 %  ರಷ್ಟು ಹತ್ತಿ ಬಹುಶಃ ಎಫ್ ಎ ಕ್ಯು ಗುಣಮಟ್ಟದ್ದಾಗಿದೆ ಮತ್ತು ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯಾಪಾರಿಗಳು ಉತ್ತಮ ಬೆಲೆ ನೀಡದ ಕಾರಣ ಬೆಳೆಗಾರರು ಎಂ ಎಸ್ ಪಿ ದರವನ್ನು ಪಡೆಯಲು ಇಚ್ಛಿಸಬಹುದಾಗಿದೆ.

ಎಂ ಎಸ್ ಪಿ ಕಾರ್ಯಾಚರಣೆ ಮುಂದುವರಿದಿವೆ ಮತ್ತು ಪ್ರಸ್ತುತ 34 ಕೇಂದ್ರಗಳಲ್ಲಿ ಸಿಸಿಐ ಗಳ ಖರೀದಿ ಕೆಲಸ ಮುಂದುವರಿದಿದೆ ಹಾಗೂ ಲಾಕ್ ಡೌನ್ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸುಮಾರು 36,500 ಕ್ವಿಂಟಾಲ್ ಅಂದರೆ 6900 ಮೂಟೆಗಳಷ್ಟು ಹತ್ತಿಯನ್ನು ಖರೀದಿಸಲಾಗಿದೆ.

ರಾಜ್ಯ ಎಪಿಎಂಸಿಗಳಿಂದ ಈ ಸಂಗ್ರಹಣೆ ನಿಯಂತ್ರಿಸಲಾಗುತ್ತಿದೆ ಮತ್ತು ಜಿಲ್ಲಾಡಳಿತ ಗುರುತಿಸಿದಂತೆ 37 ಕೇಂದ್ರಗಳು ಕೆಂಪು ವಲಯಗಳ ಅಡಿಯಲ್ಲಿ ಬರುತ್ತವೆ. ಇದರಲ್ಲಿ 3 ಮೇ 2020 ರ ನಂತರ ಸಂಗ್ರಣೆ ನಡೆಯುವ ನಿರೀಕ್ಷೆಯಿದೆ. ಉಳಿದ 22 ಕೇಂದ್ರಗಳಲ್ಲಿ ಹತ್ತಿಯನ್ನು ತರಲು ರೈತರಿಗೆ ಪಾಸ್/ ಟೋಕನ್ ಒದಗಿಸಲು ಸಿಸಿಐ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದೆ ಹಾಗೂ ಎಪಿಎಂಸಿಗಳಲ್ಲಿ ರೈತರು ಮತ್ತು ಹತ್ತಿ ಖರೀದಿಯ ಸ್ಥಿತಿಯ ಕುರಿತು ದೈನಂದಿನ ವರದಿಯಾಧರಿಸಿ ಜವಳಿ ಸಚಿವಾಲಯ ಈ ವಿಷಯದ ಬಗ್ಗೆ ಸತತ ಮೇಲ್ವಿಚಾರಣೆ ನಡೆಸುತ್ತಿದೆ. ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳೊಂದಿಗೆ ಸಿಸಿಐ ಅಗತ್ಯ ಸಮನ್ವಯ ಸಾಧಿಸಿ ಉದ್ಬವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಗಾಗ್ಗೆ ಸಮಾವೇಶಗಳನ್ನು ನಡೆಸುತ್ತಿದೆ. ರೈತರು ಹತ್ತಿ ಮಾರಾಟ ಮಾಡುವಲ್ಲಿ ಉಂಟಾದ ತೊಂದರೆಗಳನ್ನು ತಪ್ಪಿಸಲು ಮತ್ತು ಎಪಿಎಂಸಿ ಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಜವಳಿ ಸಚಿವಾಲಯ ಮಹಾರಾಷ್ಟ್ರ ಸರ್ಕಾರಕ್ಕೆ ಸಲಹೆ ನೀಡಿದೆ.               

ಖರೀದಿ ಮಾಡಿದ ಹತ್ತಿಯ ಬಾಕಿ ಇರುವ ಹಣವನ್ನು ರೈತರಿಗೆ ಪಾವತಿ ಮಾಡಲು ಸಿಸಿಐ ಕ್ರಮಗಳನ್ನು ಕೈಗೊಂಡಿದೆ. ಒಟ್ಟು ಖರೀದಿ ಮೌಲ್ಯ ರೂ 4995 ಕೋಟಿಯಲ್ಲಿ ಈಗಾಗಲೇ ರೂ 4987 ಕೋಟಿ ಮೊತ್ತ ರೈತರನ್ನು ತಲುಪಿದೆ.

***


(Release ID: 1620986) Visitor Counter : 315