ಗೃಹ ವ್ಯವಹಾರಗಳ ಸಚಿವಾಲಯ

ಸರ್ದಾರ್ ಪಟೇಲ್ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸುವ ಕೊನೆಯ ದಿನಾಂಕ 2020ರ ಜೂ.30ರವರೆಗೆ ವಿಸ್ತರಣೆ

Posted On: 04 MAY 2020 10:00AM by PIB Bengaluru

ಸರ್ದಾರ್ ಪಟೇಲ್ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಸಲ್ಲಿಸುವ ಕೊನೆಯ ದಿನಾಂಕ 2020 ಜೂ.30ರವರೆಗೆ ವಿಸ್ತರಣೆ

 

ಭಾರತ ದೇಶದಲ್ಲಿ ಏಕ್ಯತೆ ಮತ್ತು ಸಮಗ್ರತೆಗೆ ಉತ್ತೇಜಿಸಲು ಕೊಡುಗೆ ನೀಡಿದವರನ್ನು ಗುರುತಿಸಲು ಭಾರತ ಸರ್ಕಾರ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಹೆಸರಿನಲ್ಲಿ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ಸರ್ದಾರ್ ಪಟೇಲ್ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಬಲಿಷ್ಠ ಮತ್ತು ಸದೃಢ ಭಾರತದ ಮೌಲ್ಯಗಳನ್ನು ಪುನರ್ ಪ್ರತಿಪಾದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಮತ್ತು ಸ್ಪೂರ್ತಿದಾಯಕ ಹಾಗೂ ಗಮನಾರ್ಹ ಕೊಡುಗೆ ನೀಡಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಅಥವಾ ಸಂಘಗಳನ್ನು ಗುರ್ತಿಸುವುದು ಪ್ರಶಸ್ತಿ ಉದ್ದೇಶವಾಗಿದೆ.

ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು/ಶಿಫಾರಸುಗಳನ್ನು ಕೋರಿ 2019 ಸೆಪ್ಟಂಬರ್ 20ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಶಸ್ತಿಯ ವಿವರಗಳು ವೆಬ್ ಸೈಟ್ www.nationalunityawards.mha.gov.in ನಲ್ಲಿ ಲಭ್ಯವಿವೆ.

ಮೇಲೆ ತಿಳಿಸಲಾದ ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ನಾಮ ನಿರ್ದೇಶನಗಳನ್ನು ಆಹ್ವಾನಿಸುವ ಕೊನೆಯ ದಿನಾಂಕವನ್ನು 2020 ಜೂ.30ರವರೆಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

***



(Release ID: 1620863) Visitor Counter : 214