ರಕ್ಷಣಾ ಸಚಿವಾಲಯ

ಸಶಸ್ತ್ರ ಪಡೆಗಳಿಂದ “ ಕೊರೊನಾ ವಾರಿಯರ್ಸ್ ಗಳಿಗೆ ಸಶಸ್ತ್ರ ಪಡೆಗಳ ಗೌರವ” ಕ್ರಮಕ್ಕೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಶ್ಲಾಘನೆ

Posted On: 03 MAY 2020 7:33PM by PIB Bengaluru

ಸಶಸ್ತ್ರ ಪಡೆಗಳಿಂದ ಕೊರೊನಾ ವಾರಿಯರ್ಸ್ ಗಳಿಗೆ ಸಶಸ್ತ್ರ ಪಡೆಗಳ ಗೌರವಕ್ರಮಕ್ಕೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಶ್ಲಾಘನೆ

 

ವೈರಸ್ ಪ್ರಸರಣವನ್ನು ತಡೆಯಲು ನಿರಂತರ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ತೋರಿಸಲು ಸಶಸ್ತ್ರ ಪಡೆಗಳು ಇಂದು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಭೂಮಿ, ಜಲ ಮತ್ತು ವಾಯು ಕ್ಷೇತ್ರಗಳಲ್ಲಿ ನಡೆಸಿರುವ ಹಲವಾರು ಕಾರ್ಯಚಟುವಟಿಕೆಗಳಿಗಾಗಿ ಸಶಸ್ತ್ರ ಪಡೆಗಳ ಪ್ರಯತ್ನವನ್ನು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಶ್ಲಾಘಿಸಿದ್ದಾರೆ.

ಸಶಸ್ತ್ರ ಪಡೆಗಳು ಇಂದು ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಕೃತಜ್ಞತೆ ಸಲ್ಲಿಸಲು ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿವೆ. ಮುಂಚೂಣಿ ವಾರಿಯರ್ಸ್ ಗಳು ಕೋವಿಡ್ -19 ವಿರುದ್ದ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿರುವ ಎಲ್ಲರ ನೈತಿಕ ಶಕ್ತಿಯನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಮೂಲಕ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದ್ದಾರೆಎಂದರು.

ವಾಯು ಪಥ ಸಂಚಲನ ಕುರಿತಂತೆ ಮತ್ತು ..ಎಫ್., ನೌಕಾದಳ ಹಾಗು ಕೋಸ್ಟ್ ಗಾರ್ಡ್ ಗಳ ಹೆಲಿಕಾಪ್ಟರುಗಳು ಆಸ್ಪತ್ರೆಗಳ ಮೇಲೆ ಪುಷ್ಪ ವೃಷ್ಟಿ ಮಾಡುವ ಕುರಿತು ಪ್ರಸ್ತಾಪಿಸಿದ ಅವರು ಕೋವಿಡ್ 19 ತಂದಿಟ್ಟಿರುವ ಸವಾಲುಗಳನ್ನು ಎದುರಿಸುವಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಒಗ್ಗೂಡಿ ನಡೆಸಿದ ಹೋರಾಟ ಮತ್ತು ರಾಷ್ಟ್ರೀಯ ನಿರ್ಧಾರಕ್ಕೆ ಅವರು ವಂದನೆ ಸಲ್ಲಿಸಿದ್ದಾರೆ ಎಂದರು.

ವೈದ್ಯಕೀಯ ವೃತ್ತಿಪರರು , ಪೊಲೀಸರು ಮತ್ತು ಇತರ ಮುಂಚೂಣಿ ಹೋರಾಟಗಾರರಿಗೆ ತಮ್ಮ ಗೌರವ ಸಲ್ಲಿಸಲು ಸಶಸ್ತ್ರ ಪಡೆಗಳು ಹಲವಾರು ಪ್ರದರ್ಶನಗಳ ಮೂಲಕ ವಿಶೇಷ ಉಪಕ್ರಮಗಳನ್ನು ಕೈಗೊಂಡಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ರಾಜನಾಥ ಸಿಂಗ್ ಸವಾಲಿನ ಸಮಯದಲ್ಲಿ ಇಡೀ ದೇಶ ಒಗ್ಗೂಡಿ ನಿಂತಿದೆ ಎಂದರು.

ವೈದ್ಯರು, ದಾದಿಯರು, ನೈರ್ಮಲ್ಯ ಕೆಲಸಗಾರರು, ಪೊಲೀಸ್ ಸಿಬ್ಬಂದಿಗಳು, ಮಾಧ್ಯಮಗಳು, ಮತ್ತು ಇತರ ಹಲವಾರು ಮಂದಿ ಆವಶ್ಯಕ ಸೇವೆಗಳ ನಿರ್ವಹಣೆಯಲ್ಲಿ ತೊಡಗಿಕೊಂಡವರು ಮತ್ತು ಪೂರೈಕೆಯಲ್ಲಿ ನಿರತರಾದವರು ಸಹಿತ ಕೊರೊನಾ ವಾರಿಯರ್ಸ್ ಗಳಿಂದ ಕೋವಿಡ್ -19 ಹರಡದಂತೆ ತಡೆಯುವ ರಾಷ್ಟ್ರೀಯ ಪ್ರಯತ್ನಕ್ಕೆ ಕಾಣಿಕೆ ಸಂದಿದೆ. ವಾರಿಯರ್ ಗಳು ತಮ್ಮ ಜೀವವನ್ನು ಪಣವಾಗಿಟ್ಟುಕೊಂಡು ದಿನನಿತ್ಯ ಮೂಲ ಸೌಕರ್ಯಗಳಾದ ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಖಾತ್ರಿಪಡಿಸಿದ್ದಾರೆ. ಬೀದಿಗಳನ್ನು ಸ್ವಚ್ಚವಾಗಿಟ್ಟಿದ್ದಾರೆ, ಮೂಲ ಆಹಾರ ಸಾಮಗ್ರಿಗಳು ಲಭ್ಯವಾಗುವಂತೆ ಮಾಡಿದ್ದಾರೆ, ಚಿಕಿತ್ಸೆ ಸಿಗದೆ ಯಾವ ರೋಗಿಯೂ ವಾಪಸಾಗಿಲ್ಲ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗಿದೆ ಮತ್ತು ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತಂದು ಅವರ ಆರೈಕೆ ಮಾಡಲಾಗಿದೆ.

ಸಶಸ್ತ್ರ ಪಡೆಗಳು ಇಂದು ಭಾರತದ ಕೊರೊನಾ ವಾರಿಯರ್ಸ್ ಗಳಿಗೆ ವಿಶಿಷ್ಟ ಮಿಲಿಟರಿ ಮಾದರಿಯಲ್ಲಿ ಗೌರವ ಸಲ್ಲಿಸಿದವು. ಶ್ರೀನಗರದಿಂದ ತಿರುವನಂತಪುರದವರೆಗೆ ಮತ್ತು ಧೀಬ್ರೂಘರ್ ನಿಂದ ಕಛ್ ವರೆಗೆ ಸೇನೆಯು ಪೊಲೀಸ್ ಸ್ಮಾರಕಗಳಲ್ಲಿ ಪುಷ್ಪ ಗುಚ್ಚ ಇರಿಸಿದ್ದಲ್ಲದೆ, ಆರೋಗ್ಯ ವೃತ್ತಿಪರರು ಮತ್ತು ತುರ್ತು ಸೇವಾ ಪೂರೈಕೆದಾರರನ್ನು ಗೌರವಿಸುವಂತಹ ವಿವಿಧ ಕಾರ್ಯಚಟುವಟಿಕೆಗಳನ್ನು ನಡೆಸಿತು. ದೇಶಾದ್ಯಂತ ಎಲ್ಲಾ ರಾಜ್ಯಗಳ ನೂರಾರು ನಗರಗಳಲ್ಲಿ ಸ್ಥಳೀಯ ಸೇನಾ ಪಡೆಗಳಿಂದ ಆಸ್ಪತ್ರೆಗಳಿಗೆ ಭೇಟಿ ಕಾರ್ಯಕ್ರಮ ನಡೆಸಲಾಯಿತು. ದೇಶಭಕ್ತಿಯ ಸಂಗೀತ ನುಡಿಸುತ್ತಿದ್ದ ಮಿಲಿಟರಿ ಬ್ಯಾಂಡುಗಳೊಂದಿಗೆ ಸೇನಾ ತಂಡಗಳು ಸಣ್ಣ ಮತ್ತು ದೊಡ್ಡ ಸಂಖ್ಯೆಯಲ್ಲಿ ಕೊರೊನಾ ವಿರುದ್ದದ ಯುದ್ದದಲ್ಲಿ ಮುಂಚೂಣಿ ಹೋರಾಟಗಾರರಾಗಿ ದುಡಿಯುತ್ತಿರುವವರಿಗೆ ಗೌರವ ಸಲ್ಲಿಸಿದವು.

ದಿಲ್ಲಿ, ಕೋಲ್ಕೊತ್ತಾ, ಚೆನ್ನೈ, ಬೆಂಗಳೂರು, ಭೋಪಾಲ್, ಆಗ್ರಾ, ಅಮೃತ್ ಸರ, ಬೆಳಗಾವಿ, ರಾಣಿಖೇಟ್, ಪಿತೋರ್ ಘರ್ ಸಹಿತ ಇತರ ಮಹಾನಗರಗಳಲ್ಲಿ , ಸಣ್ಣ ಮತ್ತು ದೊಡ್ಡ ಪಟ್ಟಣಗಳಲ್ಲಿ ಭೂಸೇನೆ, ನೌಕಾದಳ ಮತ್ತು ಭಾರತೀಯ ವಾಯು ಪಡೆ (..ಎಫ್.) ಮತ್ತು ಕೋಸ್ಟ್ ಗಾರ್ಡ್ ಗಳು (.ಸಿ.ಜಿ.) ಆಸ್ಪತ್ರೆಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸುವುದು ಕಂಡು ಬಂದಿತು. ಸ್ಥಳೀಯ ಪೊಲೀಸ್ ಸ್ಮಾರಕದಲ್ಲಿ ಪುಷ್ಪ ಗುಚ್ಚ ಇಡುವ ಮೂಲಕ ಕಾರ್ಯ ಚಟುವಟಿಕೆಗಳು ಆರಂಭಗೊಂಡವು, ಸಮವಸ್ತ್ರದಲ್ಲಿರುವ ತಮ್ಮ ಸಹೋದರರನ್ನು ಇನ್ನಷ್ಟು ನಿಕಟಗೊಳಿಸುವ ಅಭೂತಪೂರ್ವ ಕಾರ್ಯಕ್ರಮ ಇದಾಗಿತ್ತು. ಇಡೀ ದೇಶ ಮತ್ತು ಎಲ್ಲಾ ದೇಶವಾಸಿಗಳು ಶ್ರೀಮಂತ ಗೌರವವನ್ನು ಅನುಭವಿಸಿದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಶಸ್ತ್ರ ಪಡೆಗಳಿಗೆ ತಮ್ಮ ಶುಭಾಶಯಗಳನ್ನು ಮತ್ತು ಪ್ರೀತಿಯನ್ನು ಭರಪೂರ ತೋರ್ಪಡಿಸಿದರು.

ಸಶಸ್ತ್ರ ಪಡೆಗಳು ಯುದ್ದ ವಿಮಾನಗಳಿಂದ ಮತ್ತು ಭಾರತೀಯ ವಾಯು ಪಡೆಯ (..ಎಫ್.) ಸಾರಿಗೆ ವಿಮಾನಗಳಿಂದ ದೇಶಾದ್ಯಂತ ವೈಮಾನಿಕ ಪಥ ಸಂಚಲನ ಸಹಿತ ಇತರ ಹಲವಾರು ಕಾರ್ಯಕ್ರಮಗಳನ್ನು ದೇಶಾದ್ಯಂತ ಸಂಘಟಿಸಿದ್ದವು. ..ಎಫ್., ಭಾರತೀಯ ನೌಕಾದಳ ಮತ್ತು ಕೋಸ್ಟ್ ಗಾರ್ಡ್ (.ಸಿ.ಜಿ.) ಹೆಲಿಕಾಪ್ಟರುಗಳು ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಪುಷ್ಪ ವೃಷ್ಟಿ ಮಾಡಿದವು. ಸೇನೆ ಮತ್ತು ..ಎಫ್. ಬ್ಯಾಂಡುಗಳು ಕೋವಿಡ್ -19 ಆಸ್ಪತ್ರೆಗಳಿಗೆ ಭೇಟಿ ನೀಡಿ ಕೊರೊನಾ ವಾರಿಯರ್ಸ್ ಗಳಿಗೆ ಕೃತಜ್ಞತೆಯ ದ್ಯೋತಕವಾಗಿ ಸಂಗೀತ ನುಡಿಸಿದವು.

ಯುದ್ದ ವಿಮಾನಗಳು ಸುಕೋಯ್ -30, ಎಂ.ಕೆ.., ಮಿಗ್-29 ಮತ್ತು ಜಾಗ್ವಾರ್ ಗಳು ರಾಜಪಥದಲ್ಲಿ ವೈಮಾನಿಕ ಪಥ ಸಂಚಲನ ನಡೆಸಿದವು ಮತ್ತು ಜನತೆಗೆ ತಮ್ಮ ಮೇಲ್ಚಾವಣಿಯಿಂದ ಕಾಣುವಂತೆ ದಿಲ್ಲಿಯಲ್ಲಿ ಸುತ್ತು ಹಾರಾಟ ನಡೆಸಿದವು. ಇದರ ಜೊತೆಗೆ ಸಿ-130 ಜೆ ಹೆರ್ಕುಲಸ್ ಸಾರಿಗೆ ವಿಮಾನವು ಎನ್.ಸಿ.ಆರ್. ವಲಯದಲ್ಲಿ ಹಾರಾಟ ನಡೆಸಿತು.

ನೌಕಾದಳ ಮತ್ತು .ಸಿ.ಜಿ. ನೌಕೆಗಳು ಆಯ್ದ ಸ್ಥಳಗಳಲ್ಲಿ ಸಾಗರ ದಡದಲ್ಲಿ ರಚನೆಗಳನ್ನು ನಿರ್ಮಿಸಿದವು. ದೇಶದ ಇಡೀಯ ಕರಾವಳಿ ತೀರವನ್ನು ಒಳಗೊಂಡಂತೆ, ದೂರ ಪ್ರದೇಶಗಳು ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಮಿನಿಕೋಯ್ ದ್ವೀಪಗಳು ಸಹಿತ ಇಂದು ರಾತ್ರಿ 25 ಸ್ಥಳಗಳಲ್ಲಿ ನೌಕೆಗಳನ್ನು ವಿದ್ಯುದ್ದೀಪಾಲಂಕಾರಗೊಳಿಸಲಾಗುತ್ತಿದೆ.

***(Release ID: 1620861) Visitor Counter : 253