ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

9 ನೇ ಮತ್ತು 10 ನೇ ತರಗತಿಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ

Posted On: 02 MAY 2020 6:39PM by PIB Bengaluru

ಕೇಂದ್ರ ಎಚ್.ಆರ್. ಡಿ ಸಚಿವರಿಂದ ಹೊಸದಿಲ್ಲಿಯಲ್ಲಿ 9 ನೇ ಮತ್ತು 10 ನೇ ತರಗತಿಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ

11 ನೇ ಮತ್ತು 12 ನೇ ತರಗತಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ವಿಷಯ ವ್ಯಾಪ್ತಿ ಸದ್ಯದಲ್ಲಿಯೇ ಬಿಡುಗಡೆ- ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

 

ಸೆಕೆಂಡರಿ ಹಂತದ ಅಂದರೆ.ixನೇ ಮತ್ತು Xನೇ ತರಗತಿಗಳ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ಅವರು ಹೊಸದಿಲ್ಲಿಯಲ್ಲಿಂದು ಬಿಡುಗಡೆ ಮಾಡಿದರು.

ಸಂದರ್ಭದಲ್ಲಿ ಮಾತನಾಡಿದ ಸಚಿವರು ಕ್ಯಾಲೆಂಡರ್ ಶಿಕ್ಷಕರಿಗೆ ವಿವಿಧ ತಾಂತ್ರಿಕ ಸಲಕರಣೆಗಳನ್ನು ಮತ್ತು ಸಾಮಾಜಿಕ ಮಾಧ್ಯಮ ಸಲಕರಣೆಗಳನ್ನು ಬಳಸಲು ಮಾರ್ಗದರ್ಶಿಗಳನ್ನು ಒದಗಿಸುತ್ತದೆ ಎಂದರು. ಶಿಕ್ಷಣವನ್ನು ವಿನೋದಭರಿತವಾಗಿ , ಆಸಕ್ತಿಕರ ರೀತಿಯಲ್ಲಿ ಒದಗಿಸಲು ,ಇದನ್ನು ಕಲಿಯುವವರು, ಪೋಷಕರು, ಮತ್ತು ಶಿಕ್ಷಕರು ಮನೆಯಲ್ಲಿರುವಾಗ ಬಳಸಲು ಇದರಿಂದ ಸಹಾಯವಾಗಲಿದೆ. ಮೊಬೈಲ್, ರೇಡಿಯೋ, ಟೆಲಿವಿಶನ್, ಎಸ್.ಎಂ.ಎಸ್. ಮತ್ತು ವಿವಿಧ ಸಾಮಾಜಿಕ ಮಾಧ್ಯಮಗಳ ವಿವಿಧ ಮಟ್ಟದ ಬಳಕೆಯನ್ನೂ ಇಲ್ಲಿ ಗಮನಕ್ಕೆ ತೆಗೆದುಕೊಳ್ಳಲಾಗಿದೆ.

ನಮ್ಮಲ್ಲಿ ಹಲವರ ಮೊಬೈಲ್ ಗಳಲ್ಲಿ ಅಂತರ್ಜಾಲ ಸೌಲಭ್ಯ ಇರದಿರಬಹುದು ಅಥವಾ ವಾಟ್ಸಾಪ್, ಫೇಸ್ ಬುಕ್, ಟ್ವಿಟರ್, ಗೂಗಲ್ ಇತ್ಯಾದಿ ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಸಾಧ್ಯವಾಗದೆ ಇರಬಹುದು ಎಂದ ಶ್ರೀ ಪೋಖ್ರಿಯಾಲ್ ಅವರು ಕ್ಯಾಲೆಂಡರ್ ಶಿಕ್ಷಕರಿಗೆ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಮೊಬೈಲ್ ಫೋನುಗಳಲ್ಲಿ ಎಸ್.ಎಂ.ಎಸ್. ಅಥವಾ ವಾಯಿಸ್ ಕಾಲ್ ಮೂಲಕ ಮಾರ್ಗದರ್ಶನ ಮಾಡಲು ಅವಕಾಶ ಒದಗಿಸುತ್ತದೆ ಎಂದರು. ಪ್ರಾಥಮಿಕ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕ್ಯಾಲೆಂಡರನ್ನು ಅನುಷ್ಟಾನ ಮಾಡಲು ಪೋಷಕರು ಸಹಾಯ ಮಾಡುವರೆಂದು ನಿರೀಕ್ಷಿಸಲಾಗಿದೆ.

ಹನ್ನೊಂದನೆ ಮತ್ತು ಹನ್ನೆರಡನೇ ತರಗತಿಗಳಿಗಾಗಿ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ ಮತ್ತು ವಿಷಯ ವ್ಯಾಪ್ತಿಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ವೇಳಾಪಟ್ಟಿಯು ದಿವ್ಯಾಂಗ ಮಕ್ಕಳು ( ವಿಶೇಷ ಅಗತ್ಯವುಳ್ಳ ಮಕ್ಕಳು ) ಸಹಿತ ಎಲ್ಲಾ ಮಕ್ಕಳ ಅಗತ್ಯವನ್ನು ಪೂರೈಸಲಿದೆ ಎಂದೂ ಹೇಳಿದ ಸಚಿವರು ಆಡಿಯೋ ಪುಸ್ತಕಗಳಿಗೆ ಕೊಂಡಿ, ರೇಡಿಯೋ ಕಾರ್ಯಕ್ರಮಗಳು, ವೀಡಿಯೋ ಕಾರ್ಯಕ್ರಮಗಳನ್ನೂ ಇದು ಒಳಗೊಂಡಿರುತ್ತದೆ ಎಂದೂ ತಿಳಿಸಿದರು.

ಕ್ಯಾಲೆಂಡರು, ಪಠ್ಯಪುಸ್ತಕಗಳು ಅಥವಾ ಪಠ್ಯಕ್ರಮದಿಂದ ಆಯ್ದ ವಿಷಯ/ ಅಧ್ಯಾಯಗಳಿಂದ ಎತ್ತಿಕೊಳ್ಳಲಾದ ಆಸಕ್ತಿಕರ ಮತ್ತು ಸವಾಲಿನ ಕಾರ್ಯ ಚಟುವಟಿಕೆಗಳನ್ನು ಒಳಗೊಂಡ ವಾರ-ವಾರು ಯೋಜನೆಯನ್ನು ಹೊಂದಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಪೋಖ್ರಿಯಾಲ್, ಬಹಳ ಪ್ರಮುಖವಾಗಿ ಇದು ಕಲಿಕಾ ಫಲಶ್ರುತಿಯೊಂದಿಗೆ ವಿಷಯವನ್ನು ಜೋಡಿಸಿಕೊಂಡಿರುತ್ತದೆ. ಕಲಿಕಾ ಫಲಶ್ರುತಿಯೊಂದಿಗೆ ವಿಷಯವಾರು ಜೋಡಣೆಯು ಮಕ್ಕಳ ಕಲಿಕಾ ಪ್ರಗತಿಯನ್ನು ಶಿಕ್ಷಕರು/ ಪೋಷಕರಿಗೆ ಮೌಲ್ಯಮಾಪನ ಮಾಡುವುದಕ್ಕಾಗಿ ಅನುಕೂಲ ಒದಗಿಸುವುದಕ್ಕಾಗಿದೆ ಮತ್ತು ಇದು ಪಠ್ಯಪುಸ್ತಕದಾಚೆಯೂ ಕಲಿಕೆಗೆ ಸಹಾಯ ಮಾಡುತ್ತದೆ. ಕ್ಯಾಲೆಂಡರ್ ನಲ್ಲಿ ನೀಡಲಾಗಿರುವ ಕಾರ್ಯಚಟುವಟಿಕೆಗಳು ಕಲಿಕಾ ಫಲಿತಾಂಶದ ಮೇಲೆ ಆದ್ಯ ಗಮನವಿಟ್ಟಿರುವುದು ಮಾತ್ರವಲ್ಲದೆ , ಮೂಲಕ ಮಕ್ಕಳು ಅವರ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಸುವ ಪಠ್ಯಪುಸ್ತಕಗಳನ್ನು ಒಳಗೊಂಡು ಯಾವುದೇ ಸಂಪನ್ಮೂಲಗಳಿಂದ ಸಾಧನೆ ಮಾಡಬಹುದಾಗಿದೆ.

ಕ್ಯಾಲೆಂಡರ್ ಪ್ರಯೋಗಾತ್ಮಕ ಕಲಿಕಾ ಚಟುವಟಿಕೆಗಳಾದ ಕಲಾ ಶಿಕ್ಷಣ , ದೈಹಿಕ ಕಸರತ್ತು , ಯೋಗ ಇತ್ಯಾದಿಗಳನ್ನು ಒಳಗೊಂಡಿದೆ ಎಂದೂ ಸಚಿವರು ತಿಳಿಸಿದರು. ಕ್ಯಾಲೆಂಡರು ತರಗತಿವಾರು ಮತ್ತು ವಿಷಯವಾರು ಕಾರ್ಯಚಟುವಟಿಕೆಗಳನ್ನು ಕೋಷ್ಟಕ ಮಾದರಿಯಲ್ಲಿ ಒದಗಿಸುತ್ತದೆ. ಹಿಂದಿ, ಇಂಗ್ಲೀಷ್, ಉರ್ದು, ಮತ್ತು ಸಂಸ್ಕೃತ ನಾಲ್ಕು ಭಾಷೆಗಳಲ್ಲಿ ಚಟುವಟಿಕೆಗಳನ್ನು ಇದು ಒಳಗೊಂಡಿದೆ. ಒತ್ತಡ ಕಡಿಮೆ ಮಾಡುವ ಮತ್ತು ಶಿಕ್ಷಕರಲ್ಲಿ , ವಿದ್ಯಾರ್ಥಿಗಳಲ್ಲಿ ಹಾಗು ಪೋಷಕರಲ್ಲಿ ಆತಂಕ ಕಡಿಮೆ ಮಾಡುವ ಕಾರ್ಯತಂತ್ರಗಳಿಗೆ ಇದರಲ್ಲಿ ಅವಕಾಶವಿದೆ. ಕ್ಯಾಲೆಂಡರು -ಪಾಠಶಾಲಾ, ಎನ್.ಆರ್...ಆರ್ ಮತ್ತು ಭಾರತ ಸರಕಾರದ ದೀಕ್ಷಾ ಪೋರ್ಟಲ್ ಗಳಲ್ಲಿ ಲಭ್ಯ ಇರುವ ಅಧ್ಯಾಯವಾರು -ಸಾಮಗ್ರಿಗಳ ಲಿಂಕ್ ಕೂಡಾ ಒಳಗೊಂಡಿದೆ.

ಕೊಡಲಾಗಿರುವ ಎಲ್ಲಾ ಚಟುವಟಿಕೆಗಳು ಸಲಹಾ ಸ್ವರೂಪದವು, ಕಡ್ಡಾಯವೆಂದು ಸೂಚಿಸಿದವುಗಳಲ್ಲ. ಅಥವಾ ಕಡ್ಡಾಯವಾದವಲ್ಲ. ಶಿಕ್ಷಕರು ಮತ್ತು ಪೋಷಕರು ಚಟುವಟಿಕೆಗಳನ್ನು ಹಿನ್ನೆಲೆಯೊಂದಿಗೆ ಸಂದರ್ಭಾನುಸಾರಗೊಳಿಸಬಹುದು ಮತ್ತು ವಿದ್ಯಾರ್ಥಿಗಳು ಯಾವುದರಲ್ಲಿ ಆಸಕ್ತಿ ತೋರಿಸುತ್ತಾರೋ ಅದನ್ನು ಮಾಡಬಹುದು.

ಎನ್.ಸಿ..ಆರ್.ಟಿ.ಯು ವಿದ್ಯಾರ್ಥಿಗಳ ಜೊತೆ , ಪೋಷಕರು ಮತ್ತು ಶಿಕ್ಷಕರ ಜೊತೆ ಟಿ.ವಿ. ವಾಹಿನಿ ಸ್ವಯಂಪ್ರಭಾ (ಕಿಶೋರ್ ಮಂಚ್) ಮೂಲಕ ನೇರ ಸಂವಾದ ಅಧಿವೇಶನಗಳನ್ನು ನಡೆಸುತ್ತಿದೆ. (ಇದು ಉಚಿತವಾಗಿ ಡಿ.ಟಿ.ಎಚ್. ಚಾನೆಲ್ 128, ಡಿಶ್ ಟಿ.ವಿ. ಚಾನೆಲ್ # 950, ಸನ್ ಡೈರೆಕ್ಟ್ #793 , ಜಿಯೋ ಟಿ.ವಿ., ಟಾಟಾ ಸ್ಕೈ #756, ಏರ್ಟೆಲ್ ವಾಹಿನಿ #440, ವೀಡಿಯೋಕಾನ್ ವಾಹಿನಿ # 477 ಗಳಲ್ಲಿ ಲಭ್ಯವಿದೆ. ) ಕಿಶೋರ್ ಮಂಚ್ ಆಪ್ (ಇದನ್ನು ಪ್ಲೆ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಬಹುದು) ಮತ್ತು ಯೂ ಟ್ಯೂಬ್ ಲೈವ್ (ಎನ್.ಸಿ..ಆರ್.ಟಿ. ಅಧಿಕೃತ ವಾಹಿನಿ.)ಗಳಲ್ಲಿ ಇದನ್ನು ನೋಡಬಹುದು. ಅಧಿವೇಶನಗಳನ್ನು ಪ್ರಾಥಮಿಕ ಶಾಲೆಗಳಿಗೆ ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ , ಅಪ್ಪರ್ ಪ್ರೈಮೆರಿಯವರಿಗೆ ತರಗತಿಗಳು ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಮತ್ತು ಸೆಕೆಂಡರಿ ತರಗತಿಗಳನ್ನು ಬೆಳಿಗ್ಗೆ 9.00 ಗಂಟೆಯಿಂದ 11.00 ಗಂಟೆಯವರೆಗೆ ಸೋಮವಾರದಿಂದ ಶನಿವಾರದವರೆಗೆ ದಿನನಿತ್ಯ ಪ್ರಸಾರ ಮಾಡಲಾಗುತ್ತದೆ. ವೀಕ್ಷಕರ ಜೊತೆ ಸಂವಾದ ಮಾತ್ರವಲ್ಲದೆ ವಿಷಯ ಬೋಧನೆ ಜೊತೆ ಕಾರ್ಯಚಟುವಟಿಕೆಗಳನ್ನೂ ನೇರ ಪ್ರಸಾರದಲ್ಲಿ ತೋರಿಸಲಾಗುತ್ತದೆ. ಎಸ್.ಸಿ..ಆರ್.ಟಿ.ಎಸ್./ಎಸ್... ಗಳು, ಶಿಕ್ಷಣ ನಿರ್ದೇಶನಾಲಯಗಳು , ಕೇಂದ್ರೀಯ ವಿದ್ಯಾಲಯ ಸಂಘಟನೆಗಳು , ನವೋದಯ ವಿದ್ಯಾಲಯ ಸಮಿತಿ, ಸಿ.ಬಿ.ಎಸ್.. , ರಾಜ್ಯ ಶಾಲಾ ಶಿಕ್ಷಣ ಮಂಡಳಿಗಳು ಇತ್ಯಾದಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿ ವೇಳಾಪಟ್ಟಿಯನ್ನು ಪ್ರಚುರಪಡಿಸಲಾಗಿದೆ.

ಇದು ನಮ್ಮ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಶಾಲಾ ಪ್ರಾಂಶುಪಾಲರಿಗೆ ಮತ್ತು ಪೋಷಕರಿಗೆ ಮನೆಯಲ್ಲಿ ಆನ್ ಲೈನ್ ಬೋಧನೆ-ಕಲಿಕೆ ಸಂಪನ್ಮೂಲಗಳನ್ನು ಬಳಸಿ ಕೋವಿಡ್ -19 ರೊಂದಿಗೆ ಧನಾತ್ಮಕವಾಗಿ ವ್ಯವಹರಿಸಲು ಸಶಕ್ತರನ್ನಾಗಿಸಿದೆ ಮತ್ತು ಅವರ ಕಲಿಕಾ ಫಲಿತಾಂಶಗಳನ್ನು ವೃದ್ದಿಸಲಿದೆ.

ಕೋವಿಡ್ -19 ಅವಧಿಯಲ್ಲಿ ಪೋಷಕರು ಮತ್ತು ಶಿಕ್ಷಕರ ಸಹಾಯದೊಂದಿಗೆ ಮನೆಯಲ್ಲಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಇದು ನೆರವಾಗಿದೆ. ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಾಥಮಿಕ ಮತ್ತು ಮೇಲ್ ಪ್ರಾಥಮಿಕ ಹಂತದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗಾಗಿ ಎಂ.ಎಚ್.ಆರ್.ಡಿ.ಮಾರ್ಗದರ್ಶನದಡಿಯಲ್ಲಿ ಎನ್.ಸಿ..ಆರ್.ಟಿ.ಯು ಅಭಿವೃದ್ದಿಪಡಿಸಿದೆ. ಪ್ರಾಥಮಿಕ ಹಂತ ( ತರಗತಿ 1 ರಿಂದ 5) ಮತ್ತು ಮೇಲ್ ಪ್ರಾಥಮಿಕ ತರಗತಿ ( ತರಗತಿ 6 ರಿಂದ 8) ಗಳಿಗಾಗಿ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಕೇಂದ್ರ ಎಚ್.ಆರ್.ಡಿ. ಸಚಿವರು 2020 ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಿದರು.

9 ನೇ ಮತ್ತು ಹತ್ತನೆ ತರಗತಿಯ ಇಂಗ್ಲೀಷ್ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ನೋಡಲು ಇಲ್ಲಿ ಕ್ಲಿಕ್ ಮಾಡಿ:

9 ನೇ ಮತ್ತು ಹತ್ತನೆ ತರಗತಿಯ ಹಿಂದಿ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ನೋಡಲು ಇಲ್ಲಿ ಕ್ಲಿಕ್ ಮಾಡಿ:

 

***

 



(Release ID: 1620749) Visitor Counter : 233