PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 03 MAY 2020 6:24PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ, ಒಟ್ಟು 10,632 ಮಂದಿ ಗುಣಮುಖರಾಗಿದ್ದು, ಕಳೆದ 24 ಗಂಟೆಗಳಲ್ಲಿ 682 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ನಮ್ಮ ಒಟ್ಟು ಚೇತರಿಕೆಯ ಪ್ರಮಾಣ ಶೇ. 26.59ಕ್ಕೇರಿದೆ. ಇದುವರೆಗಿನ ದೃಢಪಟ್ಟ ಒಟ್ಟು ಪ್ರಕರಣಗಳು 39,980. ಭಾರತದಲ್ಲಿ ನಿನ್ನೆಯಿಂದ 2,644 ಕೋವಿಡ್-19 ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. ಕೋವಿಡ್-19 ಹರಡುವಿಕೆಯ ಸರಪಳಿಯನ್ನು ಮುರಿಯಲು ಲಾಕ್ ಡೌನ್ ಪರಿಣಾಮಕಾರಿ ಕ್ರಮವೆಂದು ತಿಳಿದು ಲಾಕ್ ಡೌನ್ 3.0 ಅನ್ನು ಎಲ್ಲರೂ ಪಾಲಿಸಬೇಕೆಂದು ಡಾ. ಹರ್ಷವರ್ಧನ್ ಜನತೆಯನ್ನು ಒತ್ತಾಯಿಸಿದ್ದಾರೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ಬಹಿಷ್ಕರಿಸಬಾರದು ಮತ್ತು ಕೋವಿಡ್-19 ವಿರುದ್ಧದ ಯುದ್ಧದಲ್ಲಿ ಜಯಗಳಿಸಿದ ರೋಗಿಗಳನ್ನು ಕಳಂಕದಿಂದ ನೋಡಬಾರದು ಎಂದೂ ಅವರು ಜನರನ್ನು ಕೋರಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620727

ಭಾರತದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸು ವಲಯ, ರಚನಾತ್ಮಕ ಮತ್ತು ಕಲ್ಯಾಣ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿಯವರಿಂದ ಸಭೆ

ಪ್ರಸ್ತುತ ಸನ್ನಿವೇಶದಲ್ಲಿ ಬೆಳವಣಿಗೆ ಮತ್ತು ಜನರ ಕಲ್ಯಾಣವನ್ನು ಉತ್ತೇಜಿಸಲು ಹಣಕಾಸು ಕ್ಷೇತ್ರದಲ್ಲಿ ಕ್ರಮಗಳು ಮತ್ತು ರಚನಾತ್ಮಕ ಸುಧಾರಣೆಗಳ ಕಾರ್ಯತಂತ್ರಗಳನ್ನು ಚರ್ಚಿಸಲು ಪ್ರಧಾನಿಯವರು ಸಭೆ ನಡೆಸಿದರು. ಹಣಕಾಸು ಸಚಿವರು ಮತ್ತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿಯವರು ಎಂಎಸ್ಎಂಇ ಮತ್ತು ರೈತರನ್ನು ಬೆಂಬಲಿಸುವ, ಹಣದ ಹರಿವನ್ನು ಹೆಚ್ಚಿಸುವ ಮತ್ತು ಸಾಲದ ಹರಿವನ್ನು ಬಲಪಡಿಸುವ ಕಾರ್ಯತಂತ್ರಗಳು ಮತ್ತು ಕ್ರಮಗಳನ್ನು ಕುರಿತು ಚರ್ಚಿಸಿದರು. ಕೋವಿಡ್-19 ಹಿನ್ನೆಲೆಯಲ್ಲಿ ಹಣಕಾಸಿನ ಸ್ಥಿರತೆಯನ್ನು ಖಾತ್ರಿಪಡಿಸುವ ಮಾರ್ಗಗಳು ಮತ್ತು ವಿಧಾನಗಳು ಮತ್ತು ಪರಿಣಾಮಗಳಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ವ್ಯವಹಾರಗಳಿಗೆ ಅನುವು ಮಾಡಿಕೊಡುವ ಕ್ರಮಗಳ ಬಗ್ಗೆಯೂ ಪ್ರಧಾನಿಯವರು ಚರ್ಚಿಸಿದರು. ಕಾರ್ಮಿಕರ ಮತ್ತು ಜನಸಾಮಾನ್ಯರ ಕಲ್ಯಾಣದ ವಿಷಯದ ಬಗ್ಗೆ ಒತ್ತು ನೀಡಿದ ಪ್ರಧಾನಿಯವರು, ಕೋವಿಡ್-19ರಿಂದ ಉಂಟಾಗಿರುವ ಅಡೆತಡೆಗಳಿಂದಾಗಿ ತೊಂದರೆಗಳನ್ನು ನಿವಾರಿಸಲು ವ್ಯವಹಾರಗಳಿಗೆ ಸಹಾಯ ಮಾಡುವ ಮೂಲಕ ಲಾಭದಾಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವನ್ನು ತಿಳಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620719

ರೈಲ್ವೆಯು  ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಿದ ಪ್ರಯಾಣಿಕರನ್ನು ಮಾತ್ರ ಸ್ವೀಕರಿಸುತ್ತದೆ

ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಇತರ ಜನರಿಗಾಗಿ ಕೆಲವು ವಿಶೇಷ ರೈಲುಗಳನ್ನು ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಮಾತ್ರ ಓಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ಎಲ್ಲಾ ಇತರ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ರೈಲ್ವೆಯು ರಾಜ್ಯ ಸರ್ಕಾರಗಳು ತರುವ ಮತ್ತು ವ್ಯವಸ್ಥೆ ಮಾಡಿದ ಪ್ರಯಾಣಿಕರನ್ನು ಮಾತ್ರ ಸ್ವೀಕರಿಸುತ್ತಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620730

ಕೋವಿಡ್-19 ನಿರ್ವಹಣೆಯನ್ನು ಪರಿಶೀಲಿಸಲು ಡಾ. ಹರ್ಷವರ್ಧನ್ ಅವರು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದರು

ಕೋವಿಡ್-19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯ ಆರೈಕೆದಾರರು ಮತ್ತು ಇತರ ಆರೋಗ್ಯ ಸಿಬ್ಬಂದಿಯು ತೋರಿಸುತ್ತಿರುವ  ಸ್ಥಿತಿಸ್ಥಾಪಕತ್ವ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಗಾಗಿ ಡಾ. ಹರ್ಷವರ್ಧನ್ ಅವರನ್ನು ಶ್ಲಾಘಿಸಿದ್ದಾರೆ. “ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣವು ಹೆಚ್ಚಾಗುತ್ತಲೇ ಇದೆ. ರೋಗಿಗಳಲ್ಲಿ ಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿದ್ದು, ಅವರ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 10,000 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಇತರ ಆಸ್ಪತ್ರೆಗಳಲ್ಲಿನ ಬಹುಪಾಲು ರೋಗಿಗಳು ಸಹ ಚೇತರಿಕೆಯ ಹಾದಿಯಲ್ಲಿದ್ದಾರೆ. ಇದು ಭಾರತದ ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಒದಗಿಸುವ ಆರೈಕೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಅವರ ಯಶಸ್ಸಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ” ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620635

ಭಾರತದಿಂದ ಕೊರೊನಾ ಯೋಧರಿಗೆ ಗೌರವ ಸಲ್ಲಿಕೆ

ಕೊರೊನಾ ಯೋಧರ ಸಹಾಯದಿಂದ ಭಾರತವು ಕೊರೊನಾ ವೈರಸ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ. ಅಂತರರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿ ಸಿಬ್ಬಂದಿ ಮತ್ತು ಸಾಮಗ್ರಿಗಳ ಸಂಚಾರವನ್ನು ಬೆಂಬಲಿಸುವ ಮೂಲಕ ಕೊರೊನಾ ನಿಗ್ರಹದ ರಾಷ್ಟ್ರೀಯ ಪ್ರಯತ್ನಕ್ಕೆ ಐಎಎಫ್ ಕೊಡುಗೆ ನೀಡುತ್ತಿದೆ. ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ವೈದ್ಯರು, ಪ್ಯಾರಾ-ಮೆಡಿಕ್ಸ್ ಮತ್ತು ಉಪಕರಣಗಳು ಸೇರಿದಂತೆ 600 ಟನ್ಗಿಂತಲೂ ಹೆಚ್ಚು ವೈದ್ಯಕೀಯ ಸಾಮಗ್ರಿ ಮತ್ತು ಹೆಚ್ಚಿನ ಸಂಖ್ಯೆಯ ಜನರನ್ನು ವಿಮಾನದಲ್ಲಿ ಸಾಗಿಸಲಾಗಿದೆ. ಭಾರತದ ಎಲ್ಲಾ ಕೊರೊನಾ ಯೋಧರಿಗೆ ಕೃತಜ್ಞತೆಯ ಸಂಕೇತವಾಗಿ ಐಎಎಫ್ ಮತ್ತು ಸೋದರ ಸಂಸ್ಥೆಗಳೊಂದಿಗೆ ಭಾರತದ ಕೆಚ್ಚೆದೆಯ ಯೋಧರಿಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲು ಯೋಜಿಸುತ್ತಿದೆ. ಕೊರೊನಾ ವೈರಾಣು ಸಾಂಕ್ರಾಮಿಕದ ಸಂಕಷ್ಟದ ಕಾಲದಲ್ಲಿ ದಣಿವರಿಯದೆ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ಕೆಚ್ಚೆದೆಯ ಕೋವಿಡ್ ಯೋಧರಿಗೆ ಭಾರತೀಯ ವಾಯುಪಡೆಯ ವಿಮಾನಗಳು ಯೋಜಿತ ಹಾರಾಟದ ಮೂಲಕ ಗೌರವ ಸಲ್ಲಿಸಲಿವೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620757

ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಅಪ್ರತಿಮ ಕೊಡುಗೆ ಮತ್ತು ತ್ಯಾಗಕ್ಕಾಗಿ ಕೊರೊನಾ ಯೋಧರಿಗೆ ಕೇಂದ್ರ ಗೃಹ ಸಚಿವರಿಂದ ಗೌರವ ಸಲ್ಲಿಕೆ

 “ಭಾರತ ತನ್ನ ವೀರ ಕೊರೊನಾ ಯೋಧರಿಗೆ ನಮಿಸುತ್ತದೆ. ಮೋದಿ ಸರ್ಕಾರ ಮತ್ತು ಇಡೀ ದೇಶ ನಿಮ್ಮ ಜೊತೆಯಲ್ಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಮೂಲಕ ನಾವು ರಾಷ್ಟ್ರವನ್ನು ಕೊರೊನಾದಿಂದ ಮುಕ್ತಗೊಳಿಸಬೇಕು ಮತ್ತು ಆರೋಗ್ಯಕರ, ಸಮೃದ್ಧ ಮತ್ತು ಸದೃಢ ಭಾರತವನ್ನು ಕಟ್ಟುವ ಮೂಲಕ ಜಗತ್ತಿಗೆ ಒಂದು ಮಾದರಿಯಾಗಬೇಕು. ಜೈ ಹಿಂದ್! ”  ಎಂದು ಶ್ರೀ ಅಮಿತ್ ಶಾ ಟ್ವೀಟ್  ಮಾಡಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620591

ಮಾನವ ಸಂಪನ್ಮೂಲ ಸಚಿವರಿಂದ 9 ಮತ್ತು 10 ನೇ ತರಗತಿಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ

ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿನೋದ ಭರಿತ, ಆಸಕ್ತಿದಾಯಕ ರೀತಿಯಲ್ಲಿ ಶಿಕ್ಷಣವನ್ನು ನೀಡಲು ಲಭ್ಯವಿರುವ ವಿವಿಧ ತಾಂತ್ರಿಕ ಪರಿಕರಗಳು ಮತ್ತು ಸಾಮಾಜಿಕ ಮಾಧ್ಯಮ ಪರಿಕರಗಳ ಬಳಕೆಯ ಕುರಿತು ಕ್ಯಾಲೆಂಡರ್ ಶಿಕ್ಷಕರಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ, ಇದನ್ನು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಮನೆಯಲ್ಲಿಯೂ ಸಹ ಬಳಸಬಹುದಾಗಿದೆ. ಮೊಬೈಲ್, ರೇಡಿಯೋ, ಟೆಲಿವಿಷನ್, ಎಸ್ಎಂಎಸ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮಗಳ ಪ್ರವೇಶದ ವಿವಿಧ ಹಂತಗಳನ್ನು ಇದು ಗಣನೆಗೆ ತೆಗೆದುಕೊಂಡಿದೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620749

ಭಾರತದ ಲೋಕಪಾಲದ ನ್ಯಾಯಾಂಗ ಸದಸ್ಯ, ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿಯವರು ಕೋವಿಡ್-19 ನಿಂದಾಗಿ ನಿಧನರಾಗಿದ್ದಾರೆ

ಭಾರತದ ಲೋಕಪಾಲದ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ಅವರು, ಮೇ 2, 2020 ಶನಿವಾರ ರಾತ್ರಿ ಸುಮಾರು 8: 45 ಕ್ಕೆ ನವದೆಹಲಿಯ ಏಮ್ಸ್ ನಲ್ಲಿ ನಿಧನರಾದರು. ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಮತ್ತು ಉಸಿರಾಟದ ತೊಂದರೆಗಳ ನಂತರ 2020   ಏಪ್ರಿಲ್ 2 ರಂದು ಏಮ್ಸ್ ಗೆ ದಾಖಲಾಗಿದ್ದರು.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620721

ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಜನೌಷಧಿ ಕೇಂದ್ರಗಳು 2020 ಏಪ್ರಿಲ್ನಲ್ಲಿ 52 ಕೋಟಿ ರೂಪಾಯಿಗಳ ಮಾರಾಟದ ವಹಿವಾಟು ನಡೆಸಿವೆ

ಕೋವಿಡ್-19 ಲಾಕ್ಡೌನ್ನಿಂದಾಗಿ ಖರೀದಿ ಮತ್ತು ಲಾಜಿಸ್ಟಿಕ್ಸ್ನಲ್ಲಿನ ಸಮಸ್ಯೆಗಳ ನಡುವೆಯೂ, ಪ್ರಧಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು PMBJAK- 2020 ಏಪ್ರಿಲ್ ತಿಂಗಳಲ್ಲಿ 52 ಕೋಟಿ ರೂಪಾಯಿಗಳ ಮಾರಾಟದ ವಹಿವಾಟು ನಡೆಸಿವೆ. ಇದು ಮಾರ್ಚ್ 2020 ರಲ್ಲಿ 42 ಕೋಟಿ ರೂಪಾಯಿಗಳಾಗಿತ್ತು. 2019 ಏಪ್ರಿಲ್ನಲ್ಲಿ ಇದು 17 ಕೋಟಿ ರೂಪಾಯಿಗಳಾಗಿತ್ತು.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620586

ಎಲ್ಲಾ ಪಾಲುದಾರರು ಬಿಕ್ಕಟ್ಟನ್ನು ಎದುರಿಸಲು ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಬೇಕು: ಶ್ರೀ ನಿತಿನ್ ಗಡ್ಕರಿ

ಕೋವಿಡ್-19 ಸಾಂಕ್ರಾಮಿಕದ ನಿಗ್ರಹಕ್ಕೆಅಗತ್ಯವಾದ ತಡೆಗಟ್ಟುವ ಕ್ರಮಗಳನ್ನು ಕೈಗಾರಿಕೆಗಳು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ನಿತಿನ್ ಗಡ್ಕರಿ ಉದ್ಯಮಕ್ಕೆ ಕರೆ ನೀಡಿದ್ದಾರೆ. ಅವರು ವೈಯಕ್ತಿಕ ರಕ್ಷಣಾ ಸಾಧನಗಳು (ಮುಖಗವಸುಗಳು, ಸ್ಯಾನಿಟೈಜರ್ ಇತ್ಯಾದಿ) ಬಳಕೆಗೆ ಒತ್ತು ನೀಡುವಂತೆ ಮತ್ತು ವ್ಯವಹಾರ ಕಾರ್ಯಾಚರಣೆಯ ಸಮಯದಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದರು. ವಿದೇಶಿ ಆಮದನ್ನು ದೇಶೀಯ ಉತ್ಪಾದನೆಯೊಂದಿಗೆ ಬದಲಿಸಲು ರಫ್ತು ವರ್ಧನೆ ಮತ್ತು ಆಮದು ಪರ್ಯಾಯದತ್ತ ಗಮನ ಹರಿಸಬೇಕಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620609

ಖಾಲಿ ಟ್ರಕ್ಗಳು ಸೇರಿದಂತೆ ಸರಕು ಸಾಗಣೆಯ ಚಾಲಕರು ಮತ್ತು ಸಾರಿಗೆ ಸಂಸ್ಥೆಗಳ ದೂರುಗಳು / ಸಮಸ್ಯೆಗಳನ್ನು ಪರಿಹರಿಸಲು ಗೃಹ ಸಚಿವಾಲಯದ ನಿಯಂತ್ರಣ ಕೊಠಡಿಯ ಬಳಕೆ

ಲಾಕ್ಡೌನ್ ಸಮಯದಲ್ಲಿ ದೇಶಾದ್ಯಂತ ಅಂತರರಾಜ್ಯ ಸಂಚಾರಕ್ಕೆ ಖಾಲಿ ಟ್ರಕ್ಗಳು ಸೇರಿದಂತೆ ಸರಕು ಸಾಗಣೆಯಲ್ಲಿನ ಚಾಲಕರು / ಸಾಗಣೆದಾರರ ದೂರುಗಳು / ಸಮಸ್ಯೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು, ಕೇಂದ್ರ ಸರ್ಕಾರ ಗೃಹ ಸಚಿವಾಲಯದ ನಿಯಂತ್ರಣ ಕೊಠಡಿಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳನ್ನು ಸಹ ಉದ್ದೇಶಕ್ಕಾಗಿ ನಿಯೋಜಿಸಲಾಗುತ್ತಿದೆ. ನೆರವಿಗಾಗಿ MHA ಸಹಾಯವಾಣಿ ಸಂಖ್ಯೆ 1930 ಮತ್ತು NHAI ಸಹಾಯವಾಣಿ ಸಂಖ್ಯೆ 1033 ಅನ್ನು ಬಳಸಬಹುದು.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620752

ಲೈಫ್ಲೈನ್ ಉಡಾನ್ ಅಡಿಯಲ್ಲಿ 430 ವಿಮಾನಗಳ ಕಾರ್ಯನಿರ್ವಹಣೆ

ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು ಲೈಫ್ಲೈನ್ ಉಡಾನ್ ಅಡಿಯಲ್ಲಿ 430 ವಿಮಾನಗಳನ್ನು ಕಾರ್ಯಾಚರಿಸುತ್ತಿವೆ. ಪೈಕಿ 252 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಇಲ್ಲಿಯವರೆಗೆ ಸಾಗಿಸಿರುವ ಸರಕು ಸುಮಾರು 795.86 ಟನ್. ಇಲ್ಲಿಯವರೆಗೆ ಲೈಫ್ಲೈನ್ ಉಡಾನ್ ವಿಮಾನಗಳು ಕ್ರಮಿಸಿರುವ ವೈಮಾನಿಕ ದೂರ 4,21,790 ಕಿ.ಮೀ. ಪವನ್ ಹನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶದಲ್ಲಿ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. ಪವನ್ ಹನ್ಸ್ 2 ಮೇ 2020 ರವರೆಗೆ 7,729 ಕಿ.ಮೀ ದೂರವನ್ನು ಕ್ರಮಿಸಿ 2.27 ಟನ್ ಸರಕುಗಳನ್ನು ಸಾಗಿಸಿದೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620768

ಕೋವಿಡ್ ನಂತರದಲ್ಲಿ ಬಿದಿರಿನ ಸಂಪನ್ಮೂಲಗಳ ಬೆಂಬಲದೊಂದಿಗೆ ಭಾರತವು ತನ್ನ ಆರ್ಥಿಕತೆಯನ್ನು ವೃದ್ಧಿಸಲು ಒಂದು ಅವಕಾಶವನ್ನು ಪಡೆದಿದೆ: ಡಾ.ಜಿತೇಂದ್ರ ಸಿಂಗ್

ಭಾರತದಲ್ಲಿ ಕೋವಿಡ್ ನಂತರದ ಆರ್ಥಿಕತೆಗೆ ಬಿದಿರು ಬಹುಮುಖ್ಯವಾಗಿದೆ ಮತ್ತು ಭಾರತವು ತನ್ನ ಬಿದಿರಿನ ಸಂಪನ್ಮೂಲಗಳ ಬೆಂಬಲದೊಂದಿಗೆ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಅವಕಾಶವನ್ನು ಪಡೆದಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620762

ಕೋವಿಡ್-19 ಸೃಷ್ಟಿಸಿರುವ ಸನ್ನಿವೇಶದ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗದವರನ್ನು ಬೆಂಬಲಿಸಲು ಕಿರು ಅರಣ್ಯ ಉತ್ಪನ್ನಗಳ ಖರೀದಿಯನ್ನು ವೇಗಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ತಿಳಿಸಿದೆ

ಕೋವಿಡ್ 19 ಸೃಷ್ಟಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮತ್ತು ಈಗ ಕಿರು ಅರಣ್ಯ ಉತ್ಪಾದನೆಗಳ ಸಂಗ್ರಹದ ಸಮಯವಾಗಿರುವುದರಿಂದ, ಬುಡಕಟ್ಟು ಜನಾಂಗದವರನ್ನು ಬೆಂಬಲಿಸಲು ಕಿರು ಅರಣ್ಯ ಉತ್ಪಾದನೆಗಳ ಖರೀದಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID=1620612

ಇಪಿಎಫ್ ನೌಕರರರಿಂದ ಪಿಎಂ -ಕೇರ್ಸ್ ನಿಧಿಗೆ 2.5 ಕೋಟಿ ರೂ

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620637

ಭವಿಷ್ಯದಲ್ಲಿ ನದಿಗಳ ನಿರ್ವಹಣೆಕುರಿತು ಎನ್ಎಂಸಿಜಿ ಮತ್ತು ಎನ್ಐಯುಎಗಳಿಂದ IDEAthon ಆಯೋಜನೆ

ಕೋವಿಡ್ -19 ಬಿಕ್ಕಟ್ಟು ಭವಿಷ್ಯದಲ್ಲಿ ನದಿ ನಿರ್ವಹಣಾ ಕಾರ್ಯತಂತ್ರಗಳನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಅನ್ವೇಷಿಸಲು ಜಲ ಶಕ್ತಿ ಸಚಿವಾಲಯ ಮತ್ತು ರಾಷ್ಟ್ರೀಯ ನಗರ ವ್ಯವಹಾರಗಳ ಸಚಿವಾಲಯದ ನೇತೃತ್ವದ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾಭವಿಷ್ಯದಲ್ಲಿ ನದಿ ನಿರ್ವಹಣೆಕುರಿತು IDEAthon ಆಯೋಜಿಸಿದೆ. ಕೋವಿಡ್-19 ಬಿಕ್ಕಟ್ಟು ಜಗತ್ತಿನಾದ್ಯಂತದ ಹೆಚ್ಚಿನ ದೇಶಗಳಿಗೆ ಒಂದು ಸವಾಲಾಗಿದೆ, ಇದು ಹೆಚ್ಚಿನ ದೇಶಗಳಲ್ಲಿ ಲಾಕ್ಡೌನ್ಗೆ ಸಾಕ್ಷಿಯಾಗಿದೆ. ಬಿಕ್ಕಟ್ಟಿನ ಸುತ್ತಲೂ ಇರುವುದು ಆತಂಕ ಮತ್ತು ಕಾಳಜಿಯಾಗಿದೆ. ಆದರೆ ಬಿಕ್ಕಟ್ಟು ಕೆಲವು ಸಕಾರಾತ್ಮಕ ಬೆಳವಣಿಗೆಗಳನ್ನು ತಂದಿದೆ.

ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1620441

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: ಸಶಸ್ತ್ರ ಪಡೆಗಳು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಕೋವಿಡ್ 19 ಯೋಧರಿಗೆ ನಮನ ಮತ್ತು ಧನ್ಯವಾದಗಳನ್ನು ಸಲ್ಲಿಸಿದವು. ಉಳಿದಲ್ಲೇ ಉಳಿದಿದ್ದ ವಲಸೆ ಕಾರ್ಮಿಕರಿಗಾಗಿ ರೈಲ್ವೆ ಇಂದು ಕೇರಳದಿಂದ ಇನ್ನೂ ನಾಲ್ಕು ರೈಲುಗಳ ಕಾರ್ಯಾಚರಣೆ ಮಾಡುತ್ತಿದೆ. ರೈಲುಗಳು ತ್ರಿಶೂರ್, ಕಣ್ಣೂರು ಮತ್ತು ಎರ್ನಾಕುಲಂನಿಂದ ಹೊರಡಲಿವೆ. ಈಮಧ್ಯೆ, ಇನ್ನೂ ಐದು ಕೇರಳಿಗರು ಅಮೆರಿಕ ಮತ್ತು ಕೊಲ್ಲಿಯಲ್ಲಿ ಕೋವಿಡ್ 19 ಗೆ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ತನಕ ಒಟ್ಟು ಸೋಂಕು ದೃಢಪಟ್ಟ ಪ್ರಕರಣಗಳು: 499, ಸಕ್ರಿಯ ಪ್ರಕರಣಗಳು: 96, ಬಿಡುಗಡೆಯಾದವರು: 400, ಒಟ್ಟು ಸಾವುಗಳು: 4.
  • ತಮಿಳುನಾಡು: ಚೆನ್ನೈನ ಕೋವಿಡ್ ಆಸ್ಪತ್ರೆಗಳ ಮೇಲೆ ಸಶಸ್ತ್ರ ಪಡೆಗಳು ಹೂವಿನ ದಳಗಳನ್ನು ಸುರಿಸಿದವು. ಸೋಮವಾರದಿಂದ ರಾಜ್ಯ ಸರ್ಕಾರ ಎಲ್ಲಾ ವಲಯಗಳಲ್ಲಿ ಕಂಟೈನ್ಮೆಂಟ್ ಅಲ್ಲದ ಪ್ರದೇಶಗಳಲ್ಲಿನ ಲಾಕ್ಡೌನ್ ಅನ್ನು ಸಡಿಲಿಸಲಿದೆ; ಆರ್ಥಿಕ ಚಟುವಟಿಕೆ ಪುನರಾರಂಭವಾಗಲಿದೆ. ವಿಲ್ಲುಪುರಂನಲ್ಲಿ ಇಬ್ಬರು ಮಕ್ಕಳು ಸೇರಿದಂತೆ 25 ಜನರಲ್ಲಿ ಸೋಂಕು ದೃಢಪಟ್ಟಿದೆ. ಕ್ಯಾನ್ಸರ್ ರೋಗಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಬಳಿಕ, ಪುದುಚೇರಿಯ ಜಿಪ್ಮೆರ್ ನಲ್ಲಿ, 44 ಆರೋಗ್ಯ ಕಾರ್ಯಕರ್ತರನ್ನು ಪ್ರತ್ಯೇಕೀಕರಣದಲ್ಲಿಡಲಾಗಿದೆ. ನಿನ್ನೆ ತನಕ ತಮಿಳುನಾಡಿನಲ್ಲಿ ಒಟ್ಟು ಪ್ರಕರಣಗಳು: 2757, ಸಕ್ರಿಯ ಪ್ರಕರಣಗಳು: 1384, ಸಾವು: 29, ಬಿಡುಗಡೆ: 1341. ಚೆನ್ನೈನಲ್ಲಿ 1257 ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ
  • ಕರ್ನಾಟಕ: ಇಂದು ಮತ್ತೆ ಐದು ಪ್ರಕರಣ ದೃಢಪಟ್ಟಿದೆ. ಒಟ್ಟು ಪ್ರಕರಣ 606. ಕಲಬುರ್ಗಿ 3, ಬಾಗಲಕೋಟೆ 2. ಈವರೆಗೆ 25 ಸಾವು ಸಂಭವಿಸಿದ್ದು, 282 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯ ಸರ್ಕಾರ ದರ ಹೆಚ್ಚಳದ ಸಮಸ್ಯೆ ಬಳಿಕ ವಲಸೆ ಕಾರ್ಮಿಕರಿಗಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ
  • ಆಂಧ್ರಪ್ರದೇಶ: ಕೆಂಪು ವಲಯದಲ್ಲಿ ಪ್ರತಿ ಕುಟುಂಬದ ಒಬ್ಬ ವ್ಯಕ್ತಿಯ ಕೋವಿಡ್ 19 ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ, ಗುಂಟೂರು ವೈದ್ಯಕೀಯ ಕಾಲೇಜಿನ ಎಥಿಕ್ಸ್ ಸಮಿತಿ ಪ್ಲಾಸ್ಮಾ ಚಿಕಿತ್ಸೆಗೆ ಹಸಿರು ನಿಶಾನೆ ನೀಡಿದೆ. ಸಮಿತಿ ಐಸಿಎಂಆರ್ ಗೆ ಅದರ ಸ್ಪಂದನೆಗಾಗಿ ವರದಿ ಕಳುಹಿಸಲಿದೆ. ಕಳೆದ 24 ಗಂಟೆಗಳಲ್ಲಿ 58 ಹೊಸ ಪ್ರಕರಣಗಳು ವರದಿಯಾಗಿವೆ. 58 ಪೈಕಿ 30 ಕರ್ನೂಲ್ ಜಿಲ್ಲೆಯಲ್ಲಿ ವರದಿಯಾಗಿದೆ. ಒಟ್ಟು ದೃಢಪಟ್ಟ ಪ್ರಕರಣಗಳು 1583, ಸಕ್ರಿಯ ಪ್ರಕರಣಗಳು 1062, ಬಿಡುಗಡೆಯಾದವರು: 488, ಒಟ್ಟು ನಡೆಸಲಾದ ಪರೀಕ್ಷೆ 1,14,937. ಸೋಂಕು ದೃಢಪಟ್ಟ ಜಿಲ್ಲೆಗಳು: ಕರ್ನೂಲ್ (466), ಗುಂಟೂರ್ (319), ಕೃಷ್ಣ (266).
  • ತೆಲಂಗಾಣ: ಕೋವಿಡ್ ಮುಂಚೂಣಿ 'ಯೋಧರಿಗೆ' ರಕ್ಷಣಾ ಪಡೆಗಳ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸರ್ಕಾರಿ ಗಾಂಧಿ ಆಸ್ಪತ್ರೆಯ ಮೇಲೆ ಹೂವಿನ ದಳಗಳನ್ನು ಸುರಿಸಿತು. ಲಾಕ್ ಡೌನ್ ಆದಾಗಿನಿಂದ ಹೈದರಾಬಾದ್ ಗಾಳಿ ಮತ್ತು ನೀರಿನ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಆಗಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ. ಉತ್ತರ ಭಾರತದಿಂದ ವಲಸೆ ಬಂದವರು ಆಹಾರ ಮತ್ತು ಅಗತ್ಯ ವಸ್ತುಗಳಿಗಾಗಿ ಮೈಲುಗಟ್ಟಲೆ ನಡೆಯುತ್ತಿದ್ದಾರೆ. ನಿನ್ನೆವರೆಗೆ ಒಟ್ಟು ಸೋಂಕಿನ ಪ್ರಕರಣಗಳು 1061, ಸಕ್ರಿಯ ಪ್ರಕರಣಗಳು 533, ಚೇತರಿಸಿಕೊಂಡವರು 499, ಒಟ್ಟು ಸಾವು 29.
  • ಅರುಣಾಚಲ ಪ್ರದೇಶ: ಭಾರತೀಯ ವಾಯುಪಡೆ ನಹರ್ನುಗಲ್ ನಲ್ಲಿ ಕೆಳಮಟ್ಟದಲ್ಲೇ ವಿಮಾನ ಚಲಾಯಿಸಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ನಮನ ಸಲ್ಲಿಸಿದೆ.
  • ಅಸ್ಸಾಂ: ಕೊರೊನಾ ವೈರಾಣು ಸ್ಫೋಟ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು, ಅಸ್ಸಾಂ ಸರ್ಕಾರವು ರಾಜ್ಯದ ಆರ್ಥಿಕತೆಯ ಪುನರುಜ್ಜೀವನಕ್ಕಾಗಿ 8 ಸದಸ್ಯರ ಕಾರ್ಯಪಡೆ ರಚಿಸಿದೆ.
  • ಮಣಿಪುರ: ಎಫ್‌.ಸಿಐ 29000 ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಪಂಜಾಬ್ ಮತ್ತು ಹರಿಯಾಣದಿಂದ ಮಣಿಪುರಕ್ಕೆ ಸಾಗಿಸಿದೆ.
  • ಮಿಜೋರಾಂ: ಸರಬರಾಜು ಇಲಾಖೆ ಮತ್ತು ಐಓಸಿ ಮಮಿತ್ ಜಿಲ್ಲೆಯ ಗ್ರಾಮಗಳ 324 ಕುಟುಂಬಗಳಿಗೆ ಲಾಕ್ ಡೌನ್ ನಡುವೆಯೂ ಅನಿಲ ಸಿಲಿಂಡರ್ ಪೂರೈಸಿದೆ.
  • ನಾಗಾಲ್ಯಾಂಡ್: ಕೋವಿಡ್ 19 ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಎಲ್ಲರಿಗೂ ಮಾಸ್ಕ್ ಅಭಿಯಾನದಡಿ 2 ಲಕ್ಷ ಮಾಸ್ಕ್ ತಯಾರಿಸಲು ಮೊಕೋಕ್ಚುಂಗ್ ನಾಗರಿಕರು ಒಗ್ಗೂಡಿದ್ದಾರೆ.
  • ತ್ರಿಪುರಾ: ಕೋವಿಡ್ 19 ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ಯೋಧರಿಗೆ ನಮನ ಸಲ್ಲಿಸಲು ಭಾರತೀಯ ವಾಯುಪಡೆ ಭೂಮಿಗೆ ಸಮೀಪದಲ್ಲಿ ವಿಮಾನ ಹಾರಾಟ ಮಾಡಿದ್ದು ಮತ್ತು ಹೂದಳ ಚೆಲ್ಲಿದ್ದು ಅವಿಸ್ಮರಣೀಯ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
  • ಚಂಡೀಗಢ: ಕೇಂದ್ರಾಡಳಿತ ಪ್ರದೇಶದಲ್ಲಿ ಲಾಕ್ ಡೌನ್ ಅವಧಿಯನ್ನು ಎರಡು ವಾರ ಅಂದರೆ 2020 ಮೇ 17ರವರೆಗೆ ವಿಸ್ತರಿಸಲಾಗಿದೆ. ಕರ್ಫ್ಯೂವನ್ನು ಮೇ 3 ಮಧ್ಯರಾತ್ರಿಯಿಂದ ತೆರವು ಮಾಡಲಾಗುತ್ತಿದೆ. ನಗರದ ಕಂಟೈನ್ಮೆಂಟ್ ವಲಯವನ್ನು ಗುರುತಿಸಲಾದ ವಿಭಾಗಗಳಿಗೆ ಸೀಮಿತಗೊಳಿಸಿ ಆಡಳಿತ ಅಧಿಸೂಚನೆ ಹೊರಡಿಸಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ಶಿಷ್ಟಾಚಾರದ ರೀತ್ಯ ಎಲ್ಲ ಪ್ರಕರಣಗಳ ತಪಾಸಣೆ ಮತ್ತು ಪರೀಕ್ಷೆ ನಡೆಸಲಾಗುತ್ತಿದೆ.
  • ಪಂಜಾಬ್: ಪಂಜಾಬ್ ನಲ್ಲ ಹಸಿರು ಮತ್ತು ಕಿತ್ತಳೆ ವಲಯದ ಜಿಲ್ಲೆಗಳಾದ್ಯಂತ ಅಂಗಡಿಗಳು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ತೆರೆಯಲಿವೆ. ಆದರೆ ಕೆಂಪು ಮತ್ತು ಕಂಟೈನ್ಮೆಂಟ್ ವಲಯದಲ್ಲಿ ಯಾವುದೇ ವಿನಾಯಿತಿ ಇಲ್ಲ. ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರಕು ಸಾಗಣೆ ವಾಹನಗಳು ಮತ್ತು ಅವುಗಳ ಚಾಲಕರು/ಕಾರ್ಮಿಕರಿಂದ ಹೇಗೆ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
  • ಹರಿಯಾಣ: ಉಳಿದಲ್ಲೇ ಉಳಿದಿರುವ ಜನರು ಮತ್ತು ವಲಸೆ ಕಾರ್ಮಿಕರಿಗೆ ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡಲು (ಒಳಗೆ ಮತ್ತು ಹೊರಕ್ಕೆ ಎರಡೂ) ರಾಜ್ಯ ಸರ್ಕಾರ ತಮ್ಮ ತವರು ರಾಜ್ಯಕ್ಕೆ ಹೋಗಲು ಇಚ್ಛಿಸುವ ವಲಸೆ ಕಾರ್ಮಿಕರಿಗೆ ಆನ್ ಲೈನ್ ನೋಂದಣಿ ಮಾಡಲು https://edisha.gov.in/eForms/MigrantService ಅಂತರ್ಜಾಲ ಪುಟ ಆರಂಭಿಸಿದೆ. ಹರಿಯಾಣ ಸರ್ಕಾರ ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ, ಜಿಲ್ಲಾ ಪ್ರಾಥಮಿಕ ಶಿಕ್ಷಾಧಿಕಾರಿಗಳು, ಜಿಲ್ಲಾ ಯೋಜನಾ ಸಂಯೋಜಕರು, ವಿಭಾಗೀಯ ಶಿಕ್ಷಣಾಧಿಕಾರಿಗಳು, ವಿಭಾಗೀಯ ಪ್ರಾಥಮಿಕ ಶಿಕ್ಷಣಾಧಿಕಾರಿಗಳಿಗೆ ಕೋವಿಡ್ 19 ಅವಧಿಯಲ್ಲಿ ಪರಸ್ಪರ ವಿನಿಮಯದ ಮೂಲಕ ಪುಸ್ತಕ ವಿತರಣೆ ಕೈಗೊಂಡ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶಿಸಿದೆ. ಶಿಕ್ಷಣಾಧಿಕಾರಿಗಳಿಗೆ, ಶಾಲಾ ಮುಖ್ಯಸ್ಥರಿಗೆ/ಉಸ್ತುವಾರಿಗಳಿಗೆ ಮತ್ತು ಎಸ್.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರಿಗೆ ಸಂಬಂಧ ಹೊಸ ಮಾರ್ಗಸೂಚಿ ನೀಡಲಾಗಿದೆ.
  • ಹಿಮಾಚಲ ಪ್ರದೇಶ: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಕರ್ಫ್ಯೂ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಆದರೆ ಕರ್ಫ್ಯೂನಲ್ಲಿನ ಸಡಿಲತೆಯನ್ನು ಅಸ್ತಿತ್ವದಲ್ಲಿರುವ ನಾಲ್ಕು ಗಂಟೆಗಳಿಂದ 2020 ಮೇ 4 ರಿಂದ ಐದು ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು, ಹೊಸ ಮುಖ್ಯಮಂತ್ರಿ ನಗರ ಉದ್ಯೋಗ ಖಾತ್ರಿ ಯೋಜನೆಯಡಿ ನಗರ ಜನರಿಗೆ 120 ದಿನಗಳ ಆಶ್ವಾಸನೆ ನೀಡಲಾಗಿದೆ. ಇದಕ್ಕಾಗಿ, ಅಗತ್ಯವಿದ್ದರೆ, ಅವರ ಕೌಶಲ್ಯ ಉನ್ನತೀಕರಣಕ್ಕೆ ಸೂಕ್ತ ತರಬೇತಿ ನೀಡಲಾಗುವುದು.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಒಂದು ದಿನದಲ್ಲಿ ಒಟ್ಟು 790 ಪ್ರಕರಣಗಳು ದಾಖಲಾಗಿದ್ದು, ಸೋಂಕಿನ ಪ್ರಕರಣಗಳ ಸಂಖ್ಯೆ 12,296 ಕ್ಕೆ ತಲುಪಿದೆ. ಸಾವಿನ ಸಂಖ್ಯೆ 521 ದೇಶದಲ್ಲಿಯೇ ಅತಿ ಹೆಚ್ಚು. ಮುಂಬೈಗೆ ಸಂಬಂಧಿಸಿದ ಅಂಕಿ ಅಂಶಗಳು 322 ಸಾವು ಮತ್ತು 8,359 ರೋಗಿಗಳು. ಪರೀಕ್ಷೆ ನಡೆಸಿದ ನಂತರ ಸೋಂಕು ಇನ್ನೂ 27 ಜನರಲ್ಲಿ ದೃಢಪಟ್ಟಿದ್ದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಕರೋನ ವೈರಾಣು ಪ್ರಕರಣಗಳ ಸಂಖ್ಯೆ 360ಕ್ಕೆ ಏರಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಪೈಕಿ 324 ಪ್ರಕರಣಗಳಿಗೆ ಮಾಲೆಗಾಂವ್ ನಲ್ಲಿ ವರದಿಯಾಗಿದೆ. ಸಾವಿರಾರುಕೋವಿಡ್ -19 ಯೋಧರಗೌರವಾರ್ಥವಾಗಿ ಭಾರತೀಯ ವಾಯುಪಡೆಯ ಜೆಟ್ಗಳು ನಡೆಸಿದ ಅದ್ಭುತ ಫ್ಲೈ-ಪಾಸ್ಟ್ ಗೆ ಮುಂಬೈ ಸಾಕ್ಷಿಯಾಯಿತು. ಕರೋನವೈರಾಣು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಮುಂಚೂಣಿಯಲ್ಲಿರುವ ಲಕ್ಷಾಂತರಕರೋನಾ ಯೋಧರಬಗ್ಗೆ ಕೃತಜ್ಞತೆ ಸಲ್ಲಿಸುವ ಪ್ರದರ್ಶನವು ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿತ್ತು.
  • ಗುಜರಾತ್: ರಾಜ್ಯದಲ್ಲಿ 333 ಹೊಸ ಪ್ರಕರಣಗಳನ್ನು ವರದಿಯಾಗಿದ್ದು, ಒಟ್ಟು ಪ್ರಕರಣ 5,054 ಕ್ಕೆ ತಲುಪಿದೆ. 26 ಸಾವು ಸಂಭವಿಸಿದ್ದು, ಇದು ಇಲ್ಲಿಯವರೆಗೆ ಒಂದು ದಿನದಲ್ಲಿನ ಗರಿಷ್ಠವಾಗಿದೆ. ಹೊಸ 333 ಕೊರೊನಾವೈರಸ್ ದೃಢಪಟ್ಟ ಪ್ರಕರಣಗಳಲ್ಲಿ ಅಹಮದಾಬಾದ್ ನಲ್ಲಿ 250 ವರದಿ ಯಾಗಿದ್ದರೆ, ವಡೋದರಾ ಮತ್ತು ಸೂರತ್ ತಲಾ 17 ಪ್ರಕರಣಗಳನ್ನು ವರದಿ ಯಾಗಿದೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ 127 ಹೊಸ ಕರೋನ ವೈರಸ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 2,846 ಕ್ಕೆ ತಲುಪಿದೆ. ದಿನಾಂಕದವರೆಗೆ ಒಟ್ಟು ಸೋಂಕಿತರ ಪೈಕಿ 624 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 151 ಮಂದಿ ಸಾವಿಗೀಡಾಗಿದ್ದಾರೆ.
  • ರಾಜಾಸ್ಥಾನ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ರಾಜಸ್ಥಾನದಲ್ಲಿ 104 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜಸ್ಥಾನದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 2,770 ಕ್ಕೆ ಏರಿದೆ. ದಿನಾಂಕದವರೆಗೆ ಒಟ್ಟು ಸೋಂಕಿತರಲ್ಲಿ 1,121 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು 65 ಮಂದಿ ಸಾವನ್ನಪ್ಪಿದ್ದಾರೆ.
  • ಛತ್ತೀಸಗಢ: ಆರೋಗ್ಯ ಕಾರ್ಯಕರ್ತರ ರೀತಿಯಲ್ಲೇ ಪ್ರಧಾನಮಂತ್ರಿ ಕಲ್ಯಾಣ ಪ್ಯಾಕೇಜ್ ಅಡಿಯ ವಿಮಾ ಯೋಜನೆಯಲ್ಲಿ ಪೊಲೀಸರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನೌಕರರನ್ನು ಸೇರ್ಪಡೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

***



(Release ID: 1620735) Visitor Counter : 463